ಹೇರ್ ಟ್ರಾನ್ಸ್‌ಪ್ಲಾಂಟ್ ಹೆಸರಲ್ಲಿ ಮೋಸ! ವಿಗ್ ಹಾಕಿ ಪಂಗನಾಮ ಹಾಕಿದ್ದ ಸ್ಟುಡಿಯೋಗೆ ಗ್ರಾಹಕ ಕೋರ್ಟ್ ದಂಡ
ಬೆಂಗಳೂರು, ಮಾರ್ಚ್ 27: ಹೇರ್ ಟ್ರಾನ್ಸ್ಪ್ಲಾಂಟ್ಗೆಂದು (Hair Transplant) ಬಂದ ವ್ಯಕ್ತಿಗೆ ವಿಗ್ ಹಾಕಿ ಕಳಿಸಿದ್ದ ಸ್ಟೂಡಿಯೋ ವಿರುದ್ಧ ಗ್ರಾಹಕ ಆಯೋಗದಲ್ಲಿ ದೂರು ಸಲ್ಲಿಸಲಾಗಿದ್ದು, ಸಂಸ್ಥೆಗೆ ಕೋರ್ಟ್ ಬಿಸಿ ಮುಟ್ಟಿಸಿದೆ. ವಿಚಾರಣೆ ವೇಳೆ ಸಂಸ್ಥೆ ಹಾಜರಾಗದಿದ್ದರಿಂದ ಅತೃಪ್ತ ಗ್ರಾಹಕನ ಆರೋಪಗಳಿಗೆ ಸಮ್ಮತಿಸಿದಂತಾಗಿದ್ದು, ಆತ ಪಾವತಿಸಿದ ಹಣದೊಂದಿಗೆ ಬಡ್ಡಿಯನ್ನೂ ಸೇರಿಸಿ ಹಿಂದಿರುಗಿಸುವಂತೆ ಆದೇಶಿಸಿದೆ. ಹೇರ್ ಟ್ರಾನ್ಸ್‌ಪ್ಲಾಂಟ್ ಬದಲು ವಿಗ್ ಬೆಂಗಳೂರಿನ ನಿವಾಸಿಯಾದ 54 ವರ್ಷದ ವ್ಯಕ್ತಿಯೊಬ್ಬರು ಹೇರ್ ಟ್ರಾನ್ಸ್ಪ್ಲಾಂಟ್ಗೆಂದು 2024ರ ಆಗಸ್ಟ್ 10ರಂದು ಲವೆಲ್ ರೋಡ್‌ನಲ್ಲಿರುವ ಮ್ಯಾಕ್ಸ್ ಹೇರ್…