ಹನಿಮೂನ್ ಮುಗಿಸಿ ಒಟ್ಟಿಗೆ ಕೆಲಸಕ್ಕೆ ಮರಳಿದ ವಿಜಯ್-ರಶ್ಮಿಕಾಗೆ ಭರ್ಜರಿ ಸ್ವಾಗತ
ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ ದಂಪತಿ ಕಳೆದ ತಿಂಗಳು ಬಲು ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಜೈಪುರದಲ್ಲಿ ನಡೆದ ಇವರ ಮದುವೆ ದೇಶದಾದ್ಯಂತ ಸುದ್ದಿ ಆಗಿತ್ತು, ರಶ್ಮಿಕಾ-ವಿಜಯ್ ಅವರ ಫೋಟೊಗಳು ಸಖತ್ ವೈರಲ್ ಆಗಿದ್ದವು. ಬಳಿಕ ಹೈದರಾಬಾದ್ನಲ್ಲಿ ಅದ್ಧೂರಿ ರಿಸೆಪ್ಷನ್ ಸಹ ನಡೆಯಿತು. ವಿವಾಹದ ಬಳಿಕ ಥಾಯ್ಲೆಂಡ್ಗೆ ಹನಿಮೂನ್ ಪ್ರವಾಸಕ್ಕೂ ಸಹ ಈ ಜೋಡಿ ಹೋಗಿ ಬಂತು. ಇದೀಗ ಮದುವೆಯಾಗಿ ತಿಂಗಳ ಬಳಿಕ ಇಬ್ಬರೂ ಕೆಲಸಕ್ಕೆ ಮರಳಿದ್ದಾರೆ. ರಶ್ಮಿಕಾ ಮತ್ತು ವಿಜಯ್ ಒಟ್ಟಿಗೆ ‘ರಣಬಲಿ’ ಸಿನಿಮಾನಲ್ಲಿ…