ಮಾಡಿದ್ದುಣ್ಣೋ ಮಾರಾಯ; ದರೋಡೆಗೆ ಬಂದ ಕಳ್ಳನ ಅವಸ್ಥೆ ನೋಡಿ! – Kannada News | Viral video thief found hanging from exhaust fan hole in Kota

ಜೈಪುರ, ಜನವರಿ 7: ರಾಜಸ್ಥಾನದ (Rajasthan) ಕೋಟಾದಲ್ಲಿ ದಂಪತಿಗಳು ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು. ಅವರು ಅಲ್ಲಿಂದ ಹಿಂದಿರುಗುವಾಗ ಒಂದು ವಿಚಿತ್ರ ಸಂಭವಿಸಿತ್ತು. ಒಬ್ಬ ಕಳ್ಳ ಎಕ್ಸಾಸ್ಟ್ ಫ್ಯಾನ್ ರಂಧ್ರದ ಮೂಲಕ ಅವರ ಮನೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ. ಆದರೆ ಅದರಿಂದ ಹೊರಬರಲಾಗದೆ ಆತ ಗೋಡೆಯಲ್ಲೇ ಸಿಕ್ಕಿಹಾಕಿಕೊಂಡ. ಅಷ್ಟರಲ್ಲಿ ಮನೆಗೆ ಬಂದ ದಂಪತಿಗೆ ಗೋಡೆಯಲ್ಲಿ ಕಳ್ಳನ ಅರ್ಧ ದೇಹ ಕಂಡು ಶಾಕ್ ಆಯಿತು. ಕೊನೆಗೆ ಅವರೇ ಆ ಕಳ್ಳನನ್ನು ಎಳೆದು ಕೆಳಕ್ಕೆ ತಂದು ಕಾಪಾಡಿದರು. ಇದರಿಂದ ಕಳ್ಳ ತಾನು ಬೀಸಿದ ಬಲೆಗೆ ತಾನೇ ಬಿದ್ದಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಿಂಗ್ ಕೊಹ್ಲಿಯನ್ನು ಮುತ್ತಿದ ಫ್ಯಾನ್ಸ್, ಹೊರಬರಲಾಗದೆ ಒದ್ದಾಡಿದ ವಿರಾಟ್; ವಿಡಿಯೋ ವೈರಲ್ – Kannada News | Viral: Virat Kohli Faces Fan Chaos at Vadodara Airport Ahead of India NZ Series

ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಜನವರಿ 11 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗುತ್ತಿದೆ. ಈ ಸರಣಿಗಾಗಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಬುಧವಾರ ಸಂಜೆ ವಡೋದರಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಆದರೆ ಕೊಹ್ಲಿ ಅವರ ಆಗಮನದ ಬಗ್ಗೆ ತಿಳಿದಿದ್ದ ಸಾವಿರಾರು ಅಭಿಮಾನಿಗಳು ವಿಮಾನ ನಿಲ್ದಾಣಕ್ಕೆ ಜಮಾಯಿಸಿದ್ದು ವಿರಾಟ್ ಹೊರಬಂದ ತಕ್ಷಣ ‘ಕೊಹ್ಲಿ.. ಕೊಹ್ಲಿ..’ ಎಂಬ ಘೋಷಣೆಗಳೊಂದಿಗೆ ಅವರನ್ನು ಸುತ್ತುವರೆದಿದ್ದಾರೆ. ಇದರಿಂದಾಗಿ ಕೊಹ್ಲಿ ಆ ಜನಜಂಗುಳಿಯನ್ನು ದಾಟಿ ತಮ್ಮ ಕಾರಿಗೆ ಹತ್ತಲು ಸಾಕಷ್ಟು ಹರಸಾಹಸ ಪಡಬೇಕಾಯಿತು.

ವಿಮಾನ ನಿಲ್ದಾಣದಿಂದ ಹೊರಬಂದ ವಿರಾಟ್ ಕೊಹ್ಲಿ ತಮ್ಮ ಕಾರಿನ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಅಭಿಮಾನಿಗಳು ಸೆಲ್ಫಿಗಾಗಿ ಮುತ್ತಿದ್ದರು. ಇದರಿಂದಾಗಿ ಭದ್ರತಾ ಸಿಬ್ಬಂದಿಗಳು ಕೊಹ್ಲಿಯನ್ನು ಸುರಕ್ಷಿತವಾಗಿ ಕಾರಿನ ಬಳಿ ಕರೆದೊಯ್ಯಲು ಶ್ರಮಿಸಬೇಕಾಯಿತು. ಒಂದು ಹಂತದಲ್ಲಿ, ಜನಸಂದಣಿಯನ್ನು ನಿಯಂತ್ರಿಸುವುದು ಕಷ್ಟಕರವಾಯಿತು, ಇದರಿಂದ ವಿರಾಟ್ ಕೂಡ ಸ್ವಲ್ಪ ಕಸಿವಿಸಿಗೊಂಡರು. ಆದಾಗ್ಯೂ, ಅವರು ತಾಳ್ಮೆಯಿಂದ ಮುಗುಳ್ನಕ್ಕು, ಕೆಲವು ಅಭಿಮಾನಿಗಳೊಂದಿಗೆ ಫೋಟೋಗಳಿಗೆ ಪೋಸ್ ನೀಡಿ ಕಾರಿನಲ್ಲಿ ಹೊರಟುಹೋದರು. ಪ್ರಸ್ತುತ, ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಣ್ಣ ತಂಗಿ ಪ್ರೀತಿ ಪ್ರೇಮ ಲಿವಿಂಗ್ ರಿಲೇಶಷನ್ ಶಿಪ್ ತನಕ: ಆಮೇಲೇನಾಯ್ತು? – Kannada News | A Young Woman Suspected death Who Love Affair with Cousin Brother In Chikkaballapur

ಚಿಕ್ಕಬಳ್ಳಾಪುರ, (ಜನವರಿ 07): ಅಣ್ಣ ತಂಗಿ ಸಂಬಂಧ ಪ್ರೀತಿಗೆ ತಿರುಗಿ ಲಿವಿಂಗ್ ರಿಲೇಶಷನ್ ಶಿಪ್​​ ತನಕ ಹೋಗಿದ್ದು, ಇದೀಗ ಅಣ್ಣ ತಂಗಿ ಲವ್ವಿಡವ್ವಿ ಸಾವಿನಲ್ಲಿ ಅಂತ್ಯವಾಗಿದೆ. ಹೌದು.. ವ್ಯಕ್ತಿಯೋರ್ವನಿಗೆ ಮದುವೆಯಾಗಿದ್ದು, ಮಗು ಸಹ ಇದೆ. ಆದರೂ ಆತ ತನ್ನ ದೊಡ್ಡಪ್ಪನ ಮಗಳು ಅಂದರೆ ತಂಗಿಯನ್ನೇ ಲವ್ ಮಾಡಿದ್ದಾನೆ. ಬಳಿಕ ಇಬ್ಬರ ಪ್ರೀತಿ ಅನೈತಿಕ ಸಂಬಂಧಕ್ಕೆ ತಿರುಗಿದ್ದು, ಬಳಿಕ ಬೇರೆ ಮನೆ ಮಾಡಿಕೊಂಡು ಸಂಸಾರ ನಡೆಸಿದ್ದಾರೆ. ಆದ್ರೆ, ಇದೀಗ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ನಡೆದಿದ್ದು, ರಾಮಲಕ್ಷ್ಮೀ ಸಾವಿನ ಸುತ್ತ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನು ರಾಮಲಕ್ಷ್ಮೀ ಜತೆ ಸಂಬಂಧ ಹೊಂದಿದ್ದ ಅಣ್ಣ ಕೃಷ್ಣ ಸಹ ನಾಪತ್ತೆಯಾಗಿದ್ದಾನೆ. ರಾಮಲಕ್ಷ್ಮೀ ಅಂತ ಹೇಳಿಕೊಂಡು ಚಿಕ್ಕಪ್ಪನ ಮಗನ ಜೊತೆ ರೂಮ್​ ಮಾಡಿಕೊಂಡಿದ್ದಳು. ಇದೀಗ ಏಕಾಏಕಿ ಲಕ್ಷ್ಮೀ ಶವವಾಗಿ ಪತ್ತೆಯಾಗಿದ್ದು. ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಇದನ್ನೂ ಓದಿ: ಪತ್ನಿ ಮಗ ಇದ್ರೂ ತಂಗಿ ಜತೆ ಅಣ್ಣ ಸಂಸಾರ: ಅಣ್ಣ-ತಂಗಿ ಲವ್ವಿಡವ್ವಿ ಸಾವಿನಲ್ಲಿ ಅಂತ್ಯ!

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಊಟಿ ಬಳಿ 120 ಅಡಿ ಆಳಕ್ಕೆ ಬಿದ್ದ ಮಿನಿಬಸ್; 32 ಜನರಿಗೆ ಗಾಯ – Kannada News | Mini bus travelling from Ooty fell into a 120 foot gorge near Manalada

ಊಟಿ, ಜನವರಿ 7: ತಮಿಳುನಾಡಿನ ಊಟಿ ಬಳಿ 120 ಅಡಿ ಕಂದಕಕ್ಕೆ ಮಿನಿ ಬಸ್ ಬಿದ್ದು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ (Accident) 32 ಜನರು ಗಾಯಗೊಂಡಿದ್ದಾರೆ. ಅವರಲ್ಲಿ 3 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಕ್ರಿಯ ತನಿಖೆ ನಡೆಸುತ್ತಿದ್ದಾರೆ.

ನೀಲಗಿರಿ ಜಿಲ್ಲೆಯ ಉಡಗೈನ ಕಲ್ಲಕೊರೈ ಹಾಡ ಬಳಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ 120 ಅಡಿ ಆಳಕ್ಕೆ ಉರುಳಿ ಬಿದ್ದು ಅಪಘಾತ ಸಂಭವಿಸಿದೆ. ಅಪಘಾತಕ್ಕೀಡಾದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಸಂಭವಿಸಿದ ಭೀಕರ ಅಪಘಾತದ ವಿಡಿಯೋ ಇಲ್ಲಿದೆ

ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಊಟಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದರು. ಪ್ರಸ್ತುತ ಅವರಿಗೆ ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ 3 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಕಿವೀಸ್ ವಿರುದ್ಧ ಕಣಕ್ಕಿಳಿಯಲು ಶ್ರೇಯಸ್ ಅಯ್ಯರ್​ಗೆ ಗ್ರೀನ್ ಸಿಗ್ನಲ್ ನೀಡಿದ ಬಿಸಿಸಿಐ

Source link

WPL 2026: ಇನ್ನೇರಡು ದಿನಗಳಲ್ಲಿ ಡಬ್ಲ್ಯುಪಿಎಲ್ ಆರಂಭ; ಇಲ್ಲಿದೆ ಪೂರ್ಣ ವೇಳಾಪಟ್ಟಿ – Kannada News | Women’s Premier League 2026: Schedule, Teams, Live Stream and Full Details

ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) ನಾಲ್ಕನೇ ಸೀಸನ್ ಆರಂಭಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಐಪಿಎಲ್​ನಂತೆಯೇ (IPL) ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆಗಳಿಸಿರುವ ಈ ಮಹಿಳಾ ಟಿ20 ಲೀಗ್​ ಜನವರಿ 9, 2026 ರಂದು ಪ್ರಾರಂಭವಾಗಲಿದೆ. ಮೊದಲ ಮೂರು ಆವೃತ್ತಿಗಳು ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಯಶಸ್ವಿಯಾಗಿದ್ದವು. ಇದೀಗ ನಾಲ್ಕನೇ ಸೀಸನ್ ಕೂಡ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ಭಾರತ ಮಹಿಳಾ ಪಡೆ ಏಕದಿನ ವಿಶ್ವಕಪ್ ಗೆದ್ದ ಬಳಿಕ ಮಹಿಳಾ ತಂಡಕ್ಕೂ ಪುರುಷ ತಂಡದಷ್ಟೇ ಮನ್ನಣೆ ಸಿಗುತ್ತಿದೆ. ಹೀಗಾಗಿ ಈ ನಾಲ್ಕನೇ ಸೀಸನ್ ಮತ್ತೊಂದು ದಾಖಲೆ ಬರೆಯಲಿದೆ ಎಂಬುದು ಬಿಸಿಸಿಐ (BCCI) ಲೆಕ್ಕಾಚಾರವಾಗಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣ ಹಾಗೂ ವಡೋದರಾದ ಬಿಸಿಎ ಕ್ರೀಡಾಂಗಣ ಈ ಪಂದ್ಯಗಳಿಗೆ ಆತಿಥ್ಯ ನೀಡಲಿವೆ.

28 ದಿನ, 22 ಪಂದ್ಯಗಳು

ಈ ಆವೃತ್ತಿಯಲ್ಲೂ ಎಂದಿನಂತೆ ಐದು ತಂಡಗಳು ಕಣಕ್ಕಿಳಿಯುತ್ತಿದ್ದು, 28 ದಿನಗಳ ಕಾಲ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಒಟ್ಟು 22 ಪಂದ್ಯಗಳಳು ನಡೆಯಲಿವೆ. ಎಲಿಮಿನೇಟರ್ ಪಂದ್ಯ ಫೆಬ್ರವರಿ 3 ರಂದು ವಡೋದರಾದಲ್ಲಿ ನಡೆದರೆ, ಫೈನಲ್ ಪಂದ್ಯ ಫೆಬ್ರವರಿ 5 ರಂದು ನಡೆಯಲಿದೆ. ಈ 22 ಪಂದ್ಯಗಳು ಎರಡು ಸ್ಥಳಗಳಲ್ಲಿ ನಡೆಯಲಿದ್ದು,

5 ತಂಡಗಳು ಹೀಗಿವೆ

  1. ಮುಂಬೈ ಇಂಡಿಯನ್ಸ್
  2. ರಾಯಲ್ ಚಾಲೆಂಜರ್ಸ್ ಬೆಂಗಳೂರು
  3. ದೆಹಲಿ ಕ್ಯಾಪಿಟಲ್ಸ್
  4. ಯುಪಿ ವಾರಿಯರ್ಸ್
  5. ಗುಜರಾತ್ ಜೈಂಟ್ಸ್

ಈ ಲೀಗ್​ನ ಸ್ವರೂಪ ಹೇಗಿರಲಿದೆ?

ಎಂದಿನಂತೆ ಐದು ತಂಡಗಳಲ್ಲಿ ಪ್ರತಿಯೊಂದೂ ತಂಡವು ಪರಸ್ಪರ ಎರಡು ಪಂದ್ಯಗಳನ್ನು ಆಡುತ್ತವೆ. ಅಂದರೆ ಪ್ರತಿ ತಂಡವು ಪಂದ್ಯಾವಳಿಯಲ್ಲಿ ಎಂಟು ಪಂದ್ಯಗಳನ್ನು ಆಡುತ್ತದೆ. ಲೀಗ್ ಹಂತ ಮುಗಿದ ನಂತರ, ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವು ನೇರವಾಗಿ ಫೈನಲ್‌ಗೆ ಮುನ್ನಡೆದರೆ, 2 ನೇ ಮತ್ತು 3 ನೇ ಸ್ಥಾನದಲ್ಲಿರುವ ತಂಡಗಳು ಎಲಿಮಿನೇಟರ್‌ನಲ್ಲಿ ಆಡುತ್ತವೆ. ಇಲ್ಲಿ ಗೆದ್ದ ತಂಡವು ಫೈನಲ್‌ಗೆ ಅರ್ಹತೆ ಪಡೆಯುತ್ತದೆ.

ಎಷ್ಟು ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ?

ಈ ಬಾರಿ ಎರಡು ಡಬಲ್ ಹೆಡರ್‌ ಪಂದ್ಯಗಳು ಅಂದರೆ ಒಂದೇ ದಿನದಲ್ಲಿ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಡಬಲ್ ಹೆಡರ್ ಜನವರಿ 10 ರಂದು ನಡೆದರೆ, ಎರಡನೇ ಜನವರಿ 17 ರಂದು ಎರಡನೇ ಡಬಲ್ ಹೆಡರ್ ನಡೆಯಲಿದೆ.

ನೇರ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬಹುದು?

ಅಭಿಮಾನಿಗಳು ಈ ಲೀಗ್​ನ ಪಂದ್ಯಗಳ ನೇರ ಪ್ರಸಾರವನ್ನು ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಮತ್ತು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.

WPL 2026 ರ ಪೂರ್ಣ ವೇಳಾಪಟ್ಟಿ

ದಿನಾಂಕ ಮುಖಾಮುಖಿ ಸ್ಥಳ
09-01-2026 ಮುಂಬೈ ಇಂಡಿಯನ್ಸ್ vs ಆರ್​ಸಿಬಿ ನವಿ ಮುಂಬೈ
10-01-2026 ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
10-01-2026 ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್ ನವಿ ಮುಂಬೈ
11-01-2026 ದೆಹಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
12-01-2026 ಆರ್​ಸಿಬಿ vs ಯುಪಿ ವಾರಿಯರ್ಸ್ ನವಿ ಮುಂಬೈ
13-01-2026 ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
14-01-2026 ಯುಪಿ ವಾರಿಯರ್ಸ್ vs ದೆಹಲಿ ಕ್ಯಾಪಿಟಲ್ಸ್ ನವಿ ಮುಂಬೈ
15-01-2026 ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್ ನವಿ ಮುಂಬೈ
16-01-2026 ಆರ್​ಸಿಬಿ vs ಗುಜರಾತ್ ಜೈಂಟ್ಸ್ ನವಿ ಮುಂಬೈ
17-01-2026 ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್ ನವಿ ಮುಂಬೈ
17-01-2026 ದೆಹಲಿ ಕ್ಯಾಪಿಟಲ್ಸ್ vs ಆರ್​ಸಿಬಿ ನವಿ ಮುಂಬೈ
19-01-2026 ಗುಜರಾತ್ ಜೈಂಟ್ಸ್ vs ಆರ್​ಸಿಬಿ ವಡೋದರಾ
20-01-2026 ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ ವಡೋದರಾ
22-01-2026 ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್ ವಡೋದರಾ
24-01-2026 ಆರ್​ಸಿಬಿ vs ದೆಹಲಿ ಕ್ಯಾಪಿಟಲ್ಸ್ ವಡೋದರಾ
26-01-2026 ಆರ್​ಸಿಬಿ vs ಮುಂಬೈ ಇಂಡಿಯನ್ಸ್ ವಡೋದರಾ
27-01-2026 ಗುಜರಾತ್ ಜೈಂಟ್ಸ್ vs ದೆಹಲಿ ಕ್ಯಾಪಿಟಲ್ಸ್ ವಡೋದರಾ
29-01-2026 ಯುಪಿ ವಾರಿಯರ್ಸ್ vs ಆರ್​ಸಿಬಿ ವಡೋದರಾ
30-01-2026 ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ ವಡೋದರಾ
01-02-2026 ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್ ವಡೋದರಾ
03-02-2026 ಎಲಿಮಿನೇಟರ್ ವಡೋದರಾ
05-02-2026 ಫೈನಲ್ ವಡೋದರಾ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗನಿಗೆ ವಿಹಾನ್ ಕೌಶಲ್ ಎಂದು ಹೆಸರಿಟ್ಟ ಕತ್ರಿನಾ ಕೈಫ್, ವಿಕ್ಕಿ ಕೌಶಲ್ – Kannada News | Vicky Kaushal and Katrina Kaif name their son Vihaan Kaushal

ಬಾಲಿವುಡ್​​ನ ಸ್ಟಾರ್ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ (Vicky Kaushal) ಅವರು ಅಭಿಮಾನಿಗಳಿಗೆ ಒಂದು ಸ್ಪೆಷಲ್ ನ್ಯೂಸ್ ನೀಡಿದ್ದಾರೆ. ತಮ್ಮ ಪುತ್ರನಿಗೆ ಅವರೀಗ ನಾಮಕರಣ ಮಾಡಿದ್ದಾರೆ. 2025ರ ನವೆಂಬರ್ 7ರಂದು ಕತ್ರಿನಾ ಕೈಫ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಈಗ ವಿಹಾನ್ ಕೌಶಲ್ (Vihaan Kaushal) ಎಂದು ಹೆಸರು ಇಡಲಾಗಿದೆ. ಒಂದು ವಿಶೇಷವಾದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ (Katrina Kaif) ಅವರು ಈ ವಿಷಯ ತಿಳಿಸಿದ್ದಾರೆ. ಅಭಿಮಾನಿಗಳು, ಆಪ್ತರು ಈ ದಂಪತಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ಪುಟ್ಟ ಮಗುವಿನ ಕೈಯನ್ನು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ಅಂಗೈಯಲ್ಲಿ ಇರಿಸಿಕೊಂಡಿದ್ದಾರೆ. ಈ ಫೋಟೋದ ಜೊತೆ ‘ನಮ್ಮ ಬೆಳಕಿನ ಕಿರಣ. ವಿಹಾನ್ ಕೌಶಲ್’ ಎಂದು ಕ್ಯಾಪ್ಷನ್ ನೀಡುವ ಮೂಲಕ ಮಗುವಿನ ಹೆಸರು ಏನು ಎಂಬುದನ್ನು ಈ ದಂಪತಿ ತಿಳಿಸಿದ್ದಾರೆ. ಫ್ಯಾನ್ಸ್ ಪೇಜ್​​ಗಳಲ್ಲಿ ಈ ಫೋಟೋ ವೈರಲ್ ಆಗುತ್ತಿದೆ.

‘ಪ್ರಾರ್ಥನೆಗಳು ಫಲಿಸಿವೆ. ಬದುಕು ಸುಂದರವಾಗಿದೆ. ನಮ್ಮ ಬದುಕು ಬದಲಾಗಿದೆ. ಪದಗಳನ್ನು ಮೀರಿದ ಕೃತಜ್ಞತೆಗಳು’ ಎಂದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಖುಷಿ ಹಂಚಿಕೊಂಡಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಈ ಪೋಸ್ಟ್​ಗೆ ಕಮೆಂಟ್ ಮಾಡಿದ್ದಾರೆ. ಪರಿಣೀತಿ ಚೋಪ್ರಾ, ಭೂಮಿ ಪೆಡ್ನೇಕರ್, ಸಿದ್ಧಾಂತ್ ಚತುರ್ವೇದಿ, ರಿಚಾ ಚಡ್ಡಾ ಮುಂತಾದವರು ಕಮೆಂಟ್ ಮಾಡಿದ್ದಾರೆ.

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರು ಪರಸ್ಪರ ಪ್ರೀತಿಸಿ ಮದುವೆ ಆದರು. 2021ರಲ್ಲಿ ಅವರ ವಿವಾಹ ನೆರವೇರಿತ್ತು. ಇಬ್ಬರ ನಡುವೆ ವಯಸ್ಸಿನ ಅಂತರ ಇದೆ. ವಿಕ್ಕಿ ಕೌಶಲ್ ಅವರಿಗಿಂತ ಕತ್ರಿನಾ ಕೈಫ್ 5 ವರ್ಷ ದೊಡ್ಡವರು. ಈಗ ವಿಕ್ಕಿ ಕೌಶಲ್ ಅವರಿಗೆ 37 ವರ್ಷ ವಯಸ್ಸು. ಕತ್ರಿನಾ ಕೈಫ್ ಅವರಿಗೆ 42 ವರ್ಷ ವಯಸ್ಸು. ಮದುವೆ ಬಳಿಕ ಚಿತ್ರರಂಗದಲ್ಲಿ ಕತ್ರಿನಾ ಅವರು ಹೆಚ್ಚು ಆ್ಯಕ್ಟೀವ್ ಆಗಿಲ್ಲ.

ಇದನ್ನೂ ಓದಿ: ಕತ್ರಿನಾ ಕೈಫ್ ರೀತಿ ಕಾಣುವ ನಟಿ ಝರೀನ್ ಖಾನ್​ಗೆ 9 ವರ್ಷ ಕಿರಿಯವನ ಮೇಲೆ ಲವ್

ಚಿತ್ರರಂಗದಲ್ಲಿ ವಿಕ್ಕಿ ಕೌಶಲ್ ಅವರಿಗೆ ಸಖತ್ ಬೇಡಿಕೆ ಇದೆ. ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’, ‘ಛಾವ’ ಮುಂತಾದ ಸಿನಿಮಾಗಳ ಮೂಲಕ ಅವರು ಸೂಪರ್ ಸ್ಟಾರ್ ಪಟ್ಟ ಪಡೆದುಕೊಂಡಿದ್ದಾರೆ. ಪ್ರಸ್ತುತ ‘ಲವ್ ಆ್ಯಂಡ್ ವಾರ್’ ಸಿನಿಮಾದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ‘ಛಾವ’ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬಳಿಕ ಅವರ ಡಿಮ್ಯಾಂಡ್ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:25 pm, Wed, 7 January 26

Source link

Luxembourg: ಕೇವಲ 6 ಲಕ್ಷ ಜನರಿರುವ ಈ ಪುಟ್ಟ ದೇಶ ಭಾರತಕ್ಕೆ ಏಕೆ ಬಹಳ ಮುಖ್ಯ? – Kannada News | Minister S Jaishankar Calls Luxembourg Key Partner for India Why this small country is so Important

ನವದೆಹಲಿ, ಜನವರಿ 7: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಯುರೋಪಿಯನ್ ದೇಶವಾದ ಲಕ್ಸೆಂಬರ್ಗ್‌ಗೆ ಭೇಟಿ ನೀಡಿದ್ದಾರೆ. ತಮ್ಮ ಭೇಟಿಯ ಸಮಯದಲ್ಲಿ ಅವರು ಭಾರತವು ಲಕ್ಸೆಂಬರ್ಗ್ (Luxembourg) ಅನ್ನು ಬಹಳ ಮುಖ್ಯವಾದ ಪಾಲುದಾರ ಎಂದು ಪರಿಗಣಿಸುತ್ತದೆ ಎಂದಿದ್ದಾರೆ. ಎರಡೂ ದೇಶಗಳು ಫಿನ್‌ಟೆಕ್, ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸಬಹುದು ಎಂದು ಅವರು ಹೇಳಿದ್ದಾರೆ. ಹಾಗಾದರೆ, ಭಾರತಕ್ಕೆ ಲಕ್ಸೆಂಬರ್ಗ್ ಯಾಕೆ ಬಹಳ ಮುಖ್ಯ?

ಹಣಕಾಸು, ಹೂಡಿಕೆ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಸೇರಿದಂತೆ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಕುರಿತು ಜೈಶಂಕರ್ ಅವರು ಲಕ್ಸೆಂಬರ್ಗ್ ಪ್ರಧಾನಿ ಲುಕ್ ಫ್ರೀಡೆನ್ ಅವರೊಂದಿಗೆ ಮಾತುಕತೆ ನಡೆಸಿದರು. ಅವರು ಲಕ್ಸೆಂಬರ್ಗ್‌ನ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಕ್ಸೇವಿಯರ್ ಬೆಟ್ಟೆಲ್ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದರು.

ಇದನ್ನೂ ಓದಿ: ಪಾಕಿಸ್ತಾನ ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು; ವಿಶ್ವಸಂಸ್ಥೆಯಲ್ಲಿ ಪಾಕ್ ಮಾನ ಹರಾಜು ಹಾಕಿದ ಸಚಿವ ಜೈಶಂಕರ್

ಲಕ್ಸೆಂಬರ್ಗ್​​ನ ಜನಸಂಖ್ಯೆ ಕೇವಲ 6 ಲಕ್ಷ. ಆದರೂ ಇದು ಬಹಳ ಪ್ರಭಾವಿಯಾದ ದೇಶ. ಭಾರತ ಮತ್ತು ಲಕ್ಸೆಂಬರ್ಗ್ ಬಹಳ ಹಿಂದಿನಿಂದಲೂ ನಿಕಟ ಮಿತ್ರರಾಷ್ಟ್ರಗಳಾಗಿವೆ. ಎರಡರ ನಡುವಿನ ರಾಜತಾಂತ್ರಿಕ ಸಂಬಂಧಗಳು 1948ರಲ್ಲಿ ಪ್ರಾರಂಭವಾದವು. ಲಕ್ಸೆಂಬರ್ಗ್ ಮತ್ತು ಭಾರತ ಬಲವಾದ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಹೊಂದಿವೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಉನ್ನತ ಮಟ್ಟದ ಸಭೆಗಳ ಸಂಖ್ಯೆಯು ಈ ಐತಿಹಾಸಿಕ ದ್ವಿಪಕ್ಷೀಯ ಸಂಬಂಧಗಳ ಸ್ನೇಹವನ್ನು ಪ್ರತಿಬಿಂಬಿಸುತ್ತದೆ. ಹಲವಾರು ದಶಕಗಳಿಂದ ಲಕ್ಸೆಂಬರ್ಗ್ ಮತ್ತು ಭಾರತವು ವಿವಿಧ ವೇದಿಕೆಗಳಲ್ಲಿ ಪಾಲುದಾರರಾಗಿ ಕೆಲಸ ಮಾಡಿವೆ.

6,00,000 ಜನಸಂಖ್ಯೆಯನ್ನು ಹೊಂದಿರುವ ಲಕ್ಸೆಂಬರ್ಗ್ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಮೇಕ್ ಇನ್ ಇಂಡಿಯಾ ಉಪಕ್ರಮದಲ್ಲಿ ಕೆಲಸ ಮಾಡುತ್ತಿರುವ ಹಲವಾರು ಕಂಪನಿಗಳನ್ನು ಹೊಂದಿದೆ. ಹಾಗೇ, ಭಾರತೀಯ ಮಾರುಕಟ್ಟೆಯಲ್ಲಿ ಬಹಳ ಸಕ್ರಿಯವಾಗಿದೆ. ಹಲವಾರು ಲಕ್ಸೆಂಬರ್ಗ್ ಎನ್‌ಜಿಒಗಳು ಭಾರತದಲ್ಲಿ ಸ್ಥಳೀಯ ಪಾಲುದಾರರೊಂದಿಗೆ ಪಾಲುದಾರಿಕೆಯನ್ನು ಹೊಂದಿವೆ, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಕಾರ್ಯ ಕ್ಷೇತ್ರಗಳಲ್ಲಿ ಅವರೊಂದಿಗೆ ಕೆಲಸ ಮಾಡುತ್ತಿವೆ. ಲಕ್ಸೆಂಬರ್ಗ್ ಪ್ರತಿ ವರ್ಷ ಭಾರತದಾದ್ಯಂತ ಹಲವಾರು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸುತ್ತದೆ. ಲಕ್ಸೆಂಬರ್ಗ್ ಚಲನಚಿತ್ರ ನಿರ್ಮಾಣಗಳು ಅಥವಾ ಸಹ-ನಿರ್ಮಾಣಗಳನ್ನು ಕೂಡ ಮಾಡುತ್ತದೆ.

ಇದನ್ನೂ ಓದಿ: ಕೆಟ್ಟ ನೆರೆಹೊರೆಯವರಿಂದ ಭಾರತಕ್ಕೆ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕಿದೆ; ಭಯೋತ್ಪಾದನೆ ವಿರುದ್ಧ ಜೈಶಂಕರ್ ಎಚ್ಚರಿಕೆ

ಲಕ್ಸೆಂಬರ್ಗ್ 2002ರಲ್ಲಿ ನವದೆಹಲಿಯಲ್ಲಿ ತನ್ನ ರಾಯಭಾರ ಕಚೇರಿಯನ್ನು ತೆರೆಯಿತು. 170ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ಲಕ್ಸೆಂಬರ್ಗ್ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲ್ಪಟ್ಟಿವೆ. ಗ್ರ್ಯಾಂಡ್ ಡ್ಯೂಕ್ ಜೀನ್ 1983ರಲ್ಲಿ ಭಾರತಕ್ಕೆ ಭೇಟಿ ನೀಡಿದ ಮೊದಲ ಲಕ್ಸೆಂಬರ್ಗ್ ರಾಷ್ಟ್ರದ ಮುಖ್ಯಸ್ಥ. ಅಂದಿನಿಂದ, ಹಲವಾರು ಲಕ್ಸೆಂಬರ್ಗ್ ವ್ಯಾಪಾರ ಮತ್ತು ವಿದೇಶಾಂಗ ವ್ಯವಹಾರಗಳ ಮಂತ್ರಿಗಳು ಭಾರತಕ್ಕೆ ಭೇಟಿ ನೀಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ನಿಮಗೂ ಪದೇ ಪದೇ ತಲೆ ನೋವಿನ ಜೊತೆಗೆ ಕಣ್ಣು ನೋವು ಬರುತ್ತಾ? ಇದಕ್ಕೆ ಕಾರಣ ಏನ್ ಗೊತ್ತಾ? – Kannada News | Forehead & Eye Pain: When to See a Doctor

ಇತ್ತೀಚಿನ ದಿನಗಳಲ್ಲಿ, ಜೀವನಶೈಲಿಯಲ್ಲಿ ಮಾಡಿಕೊಂಡಿರುವ ಬದಲಾವಣೆ, ಸ್ಕ್ರೀನ್ ಸಮಯದ ಹೆಚ್ಚಳ ಮತ್ತು ಒತ್ತಡದಿಂದಾಗಿ, ಅನೇಕರಲ್ಲಿ ಕಣ್ಣು ಮತ್ತು ತಲೆ ನೋವು (Headache) ಹೆಚ್ಚಾಗಿ ಕಂಡುಬರುತ್ತಿದೆ. ಕೆಲವೊಮ್ಮೆ ಈ ನೋವು ಸೌಮ್ಯವಾಗಿರಬಹುದು ಇನ್ನು ಕೆಲವೊಮ್ಮೆ ತುಂಬಾ ತೀವ್ರವಾಗಿರಬಹುದು. ಈ ರೀತಿಯ ಸಮಸ್ಯೆಗಳು ದೈನಂದಿನ ಕೆಲಸ ಮಾಡಲು ತುಂಬಾ ಕಷ್ಟ ಉಂಟುಮಾಡುತ್ತದೆ. ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಈ ಸಮಸ್ಯೆ ಆರಂಭವಾಗುತ್ತದೆ ಮತ್ತೊಂದಿಷ್ಟು ಜನರಲ್ಲಿ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಅನ್ನು ದೀರ್ಘಕಾಲ ಬಳಸಿದ ನಂತರ ಈ ರೀತಿಯಾಗುತ್ತದೆ. ಆದರೆ ಇದನ್ನು ಸಾಮಾನ್ಯ ಆಯಾಸ ಎಂದು ಭಾವಿಸಿ ನಿರ್ಲಕ್ಷಿಸುವವರೇ ಹೆಚ್ಚು. ಕಣ್ಣು ಮತ್ತು ಹಣೆಯ ಭಾಗದಲ್ಲಿ ನೋವು ಕಂಡುಬರುವುದು ವಿವಿಧ ಕಾಯಿಲೆಗಳಿಗೆ ಸಂಬಂಧಿಸಿರಬಹುದು ಜೊತೆಗೆ ಅವುಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸುವುದು ಕೂಡ ಮುಖ್ಯವಾಗುತ್ತದೆ.

ಕಣ್ಣು ಮತ್ತು ಹಣೆಯ ಭಾಗದಲ್ಲಿ ನೋವು ಕಂಡುಬರುವುದಕ್ಕೆ ಕಾರಣವೇನು?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಕಣ್ಣು ಮತ್ತು ಹಣೆಯ ಭಾಗದಲ್ಲಿ ಅಥವಾ ತಲೆ ನೋವು ಕಂಡುಬರುವುದಕ್ಕೆ ಸೈನಸ್ ಕೂಡ ಕಾರಣವಾಗಿರಬಹುದು. ಸೈನಸ್‌ಗಳಲ್ಲಿ ಉರಿಯೂತ ಅಥವಾ ಸೋಂಕು ಇದ್ದಾಗ ಹಣೆ, ಮೂಗಿನ ಮೂಲ ಮತ್ತು ಕಣ್ಣುಗಳ ಸುತ್ತಲೂ ಭಾರವಾದ ಭಾವನೆ ಮತ್ತು ನೋವು ಕಂಡುಬರಬಹುದು. ಅಷ್ಟೇ ಅಲ್ಲ, ಮೈಗ್ರೇನ್ ಕೂಡ ಒಂದು ಪ್ರಮುಖ ಕಾರಣವಾಗಿದ್ದು, ಇದು ತಲೆಯ ಒಂದು ಭಾಗದಲ್ಲಿ ತೀವ್ರವಾದ ನೋವು, ವಾಕರಿಕೆ, ವಾಂತಿಯನ್ನು ಉಂಟುಮಾಡಬಹುದು. ಇದಲ್ಲದೆ, ಕಣ್ಣುಗಳ ದೌರ್ಬಲ್ಯ, ಕನ್ನಡಕ ಪ್ರಿಸ್ಕ್ರಿಪ್ಷನ್ ಸರಿಯಾಗಿ ಇರದಿರುವುದು ಅಥವಾ ದೀರ್ಘಕಾಲೀನ ಸ್ಕ್ರೀನ್ ಬಳಕೆಯಿಂದ ಕಣ್ಣಿನ ಒತ್ತಡ ಕೂಡ ಈ ರೀತಿಯ ನೋವನ್ನು ಹೆಚ್ಚಿಸಬಹುದು. ಕೆಲವು ಸಂದರ್ಭಗಳಲ್ಲಿ, ಅಧಿಕ ರಕ್ತದೊತ್ತಡ, ನಿರ್ಜಲೀಕರಣ ಮತ್ತು ಅತಿಯಾದ ಒತ್ತಡವು ಕಣ್ಣು ಮತ್ತು ಹಣೆಯಲ್ಲಿ ನಿರಂತರ ನೋವನ್ನು ಉಂಟುಮಾಡಬಹುದು. ಅಷ್ಟೇ ಅಲ್ಲ, ನಿದ್ರೆಯ ಕೊರತೆಯು ಈ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಬಹುದು.

ಯಾರು ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು?

ಮೊಬೈಲ್ ಫೋನ್, ಲ್ಯಾಪ್‌ಟಾಪ್ ಅಥವಾ ದೀರ್ಘಕಾಲ ಟಿವಿ ನೋಡಿದ ನಂತರ ಈ ನೋವು ಹೆಚ್ಚಾಗುತ್ತದೆ. ಬೆಳಿಗ್ಗೆ, ಸೈನಸ್ ಸಮಸ್ಯೆಗಳಿರುವ ರೋಗಿಗಳು ಹೆಚ್ಚಿನ ನೋವನ್ನು ಅನುಭವಿಸಬಹುದು. ಒತ್ತಡ, ಸಾಕಷ್ಟು ನಿದ್ರೆ ಮಾಡದಿದ್ದಾಗ ಮತ್ತು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ನೋವು ಇನ್ನಷ್ಟು ಹೆಚ್ಚಾಗಬಹುದು. ಮಕ್ಕಳು, ವೃದ್ಧರು ಮತ್ತು ಈಗಾಗಲೇ ಮೈಗ್ರೇನ್ ಅಥವಾ ಕಣ್ಣಿಗೆ ಸಂಬಂಧಪಟ್ಟ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಇದು ಹೆಚ್ಚು ಅಪಾಯಕಾರಿ. ನೋವು, ಮಸುಕಾದ ದೃಷ್ಟಿ, ವಾಂತಿ, ಅಧಿಕ ಜ್ವರ ಅಥವಾ ಕಣ್ಣುಗಳಲ್ಲಿ ಊತ ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ: ಸಣ್ಣ ತಲೆನೋವು ಎಂದು ನಿರ್ಲಕ್ಷ್ಯ ಮಾಡಿದರೆ ದೃಷ್ಟಿ ಕಳೆದುಕೊಳ್ಳಬೇಕಾದೀತು ಎಚ್ಚರ!

ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬೇಕು?

  • ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
  • ಅತಿಯಾದ ಸ್ಕ್ರೀನ್‌ ಬಳಕೆಯನ್ನು ತಪ್ಪಿಸಿ ಮತ್ತು ನಿಮ್ಮ ಕಣ್ಣುಗಳಿಗೆ ಮಧ್ಯಂತರವಾಗಿ ವಿಶ್ರಾಂತಿ ನೀಡಿ.
  • ಸರಿಯಾದ ಕನ್ನಡಕವನ್ನು ಧರಿಸಿ ಮತ್ತು ನಿಮ್ಮ ಕಣ್ಣುಗಳನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ.
  • ಶೀತ, ಧೂಳು ಮತ್ತು ಮಾಲಿನ್ಯದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ; ನಿಮಗೆ ಸೈನಸ್ ಸಮಸ್ಯೆಗಳಿದ್ದರೆ ವಿಶೇಷ ಕಾಳಜಿ ವಹಿಸಿ.
  • ಒತ್ತಡವನ್ನು ಕಡಿಮೆ ಮಾಡಲು ಸರಿಯಾಗಿ ನಿದ್ರೆ ಮಾಡಿ. ಅದರ ಜೊತೆಗೆ ಯೋಗ ಅಥವಾ ಧ್ಯಾನವನ್ನು ಅಭ್ಯಾಸ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೂರು ಮಕ್ಕಳ ದತ್ತು ಪಡೆದಿದ್ದು ಏಕೆ? ಭಾವುಕ ವಿಷಯ ಹಂಚಿಕೊಂಡ ಶ್ರೀಲೀಲಾ – Kannada News | Sreeleela talks about adopting three children in young age

ಶ್ರೀಲೀಲಾ (Sreeleela), ಕನ್ನಡದ ನಟಿ ಆದರೆ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕನ್ನಡ ಸಿನಿಮಾಗಳ ಮೂಲಕ ನಟನೆ ಆರಂಭಿಸಿದ ಶ್ರೀಲೀಲಾ, ಬಳಿಕ ತೆಲುಗು ಚಿತ್ರರಂಗಕ್ಕೆ ಹೋಗಿ ಅಲ್ಲಿ ಟಾಪ್ ನಟಿಯಾಗಿ ಮೆರೆದರು. ಇದೀಗ ತಮಿಳು ಮತ್ತು ಬಾಲಿವುಡ್​​ಗೆ ಸಹ ಕಾಲಿಟ್ಟಿದ್ದು, ಬಾಲಿವುಡ್​​ನಲ್ಲಂತೂ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಸಾಲು-ಸಾಲು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅದ್ಭುತ ನಟಿ, ನೃತ್ಯಗಾರ್ತಿ ಆಗಿರುವ ಶ್ರೀಲೀಲಾ, ಮಾನವೀಯ ಹೃದಯವುಳ್ಳ ವ್ಯಕ್ತಿ ಸಹ. ಅದಕ್ಕೆ ಸಾಕ್ಷಿ, ಅವರು ದತ್ತು ಪಡೆದಿರುವ ಮೂವರು ಮಕ್ಕಳು.

ಶ್ರೀಲೀಲಾ ಕೆಲ ವರ್ಷಗಳ ಹಿಂದೆ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದರು. ಕೆಲ ತಿಂಗಳ ಹಿಂದೆ ಮತ್ತೊಬ್ಬ ಬಾಲಕಿಯನ್ನು ಸಹ ದತ್ತು ಪಡೆದರು. ಈ ಬಗ್ಗೆ ಹೆಚ್ಚಾಗಿ ಶ್ರೀಲೀಲಾ ಮಾತನಾಡಿಲ್ಲ. ಆದರೆ ಅವರ ನಟನೆಯ ತಮಿಳು ಸಿನಿಮಾ ‘ಪರಾಶಕ್ತಿ’ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಚಾರಕ್ಕಾಗಿ ನೀಡಿರುವ ಸಂದರ್ಶನವೊಂದರಲ್ಲಿ ತಾವು ಮಕ್ಕಳನ್ನು ದತ್ತು ಪಡೆದ ವಿಚಾರವನ್ನು ಹಂಚಿಕೊಂಡಿದ್ದಾರೆ.

ಶ್ರೀಲೀಲಾ ಹೇಳಿರುವಂತೆ ಅವರು ಮಕ್ಕಳನ್ನು ದತ್ತು ಪಡೆಯಲು ಒಂದು ಕನ್ನಡ ಸಿನಿಮಾ ಕಾರಣ. ‘ಆ ವಿಷಯ ಮಾತನಾಡಲು ಹೋದರೆ ನಾನು ಭಾವುಕಳಾಗಿಬಿಡುತ್ತೇನೆ. ನಾನು ಒಂದು ಸಿನಿಮಾ ಮಾಡಿದ್ದೆ. ನಾನು ಕನ್ನಡದ ಒಂದು ಸಿನಿಮಾ ಮಾಡಿದ್ದೆ. ಅದರ ನಿರ್ದೇಶಕರು ನನ್ನನ್ನು ಅನಾಥಾಶ್ರಮವೊಂದಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನಾನು ಮಕ್ಕಳೊಟ್ಟಿಗೆ ಬೆರೆತೆ, ಆಗಾಗ್ಗೆ ಫೋನ್ ಮೂಲಕ ಮಾತನಾಡುತ್ತಿದ್ದೆ. ಆ ನಂತರವೂ ನಾನು ಸಹ ಆಗಾಗ್ಗೆ ಅಲ್ಲಿಗೆ ಭೇಟಿ ನೀಡಿ ಅವರೊಟ್ಟಿಗೆ ಸಮಯ ಕಳೆಯುತ್ತಿದ್ದೆ’ ಎಂದಿದ್ದಾರೆ ನಟಿ.

ಇದನ್ನೂ ಓದಿ:ಮೊದಲ ತಮಿಳು ಸಿನಿಮಾ ಬಗ್ಗೆ ಶ್ರೀಲೀಲಾಗೆ ಭಾರಿ ನಿರೀಕ್ಷೆ

‘ಆಗಲೇ ನಾನು ಇಬ್ಬರು ಮಕ್ಕಳನ್ನು ದತ್ತು ಪಡೆದೆ. ಆದರೆ ಅದು ಗೌಪ್ಯವಾಗಿಯೇ ಇತ್ತು. ಬಳಿಕ ಆ ಸಂಸ್ಥೆಯವರು ಆ ಬಗ್ಗೆ ಬಹಿರಂಗಪಡಿಸಿದರು. ಅದರಿಂದ ಇನ್ನಷ್ಟು ಜನರಿಗೆ ದತ್ತು ಪಡೆಯಲು ಸ್ಪೂರ್ತಿ ಸಿಗುತ್ತದೆ ಎಂದು ಅವರು ಹೇಳಿದರು. ಅದರಂತೆ ನಾನೂ ಸಹ ಆ ಬಗ್ಗೆ ಮಾತನಾಡಿದೆ. ಬಳಿಕ 2025 ರ ಏಪ್ರಿಲ್​​ನಲ್ಲಿ ಅದೇ ಸಂಸ್ಥೆಯವರು ಕೇಳಿದರೆಂದು ಇನ್ನೊಂದು ಹೆಣ್ಣು ಮಗುವನ್ನು ದತ್ತು ಪಡೆದೆ’ ಎಂದಿದ್ದಾರೆ ನಟಿ.

ಶ್ರೀಲೀಲಾ ಅವರು ಗುರು, ಶೋಭಿತಾ ಎಂಬ ಮಕ್ಕಳನ್ನು 2022 ರಲ್ಲಿ ದತ್ತು ಪಡೆದರು. ಬಳಿಕ ಏಪ್ರಿಲ್ ತಿಂಗಳಲ್ಲಿ ಪುಟ್ಟ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ. ಶೋಭಿತಾ ಮತ್ತು ಗುರು ಅಂಗವಿಕಲ ಮಕ್ಕಳಾಗಿದ್ದಾರೆ. ಈ ಮೂವರು ಮಕ್ಕಳು ಶ್ರೀಲೀಲಾ ಜೊತೆಗೆ ಇರುವುದಿಲ್ಲ ಆದರೆ ಅವರ ವಿದ್ಯಾಭ್ಯಾಸ, ಊಟ-ವಸತಿ-ಉಡುಗೆಯ ಖರ್ಚುಗಳನ್ನು ಶ್ರೀಲೀಲಾ ನೋಡಿಕೊಳ್ಳುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version