Headlines

ವೆಲ್​ಕಮ್ ಟು ರೋಮ್, ಮೈ ಫ್ರೆಂಡ್, ರೋಮ್​ಗೆ ಬಂದಿಳಿದ ಪ್ರಧಾನಿ ಮೋದಿಯನ್ನು ಸ್ವಾಗತಿಸಿ, ಸೆಲ್ಫಿ ಹಂಚಿಕೊಂಡ ಜಾರ್ಜಿಯಾ ಮೆಲೋನಿ – Kannada News | Giorgia Meloni Welcomes Narendra Modi During Visit to Rome

ರೋಮ್, ಮೇ 20: ಭಾರತ ಮತ್ತು ಇಟಲಿ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಹೊಸ ಇತಿಹಾಸ ಬರೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಜಾಗತಿಕ ಪ್ರವಾಸದ ಕೊನೆಯ ಹಾಗೂ ಅಂತ್ಯಂತ ಮಹತ್ವದ ಹಂತ ಇಟಲಿಯಲ್ಲಿ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂಜೆ ಇಟಲಿಯ ರಾಜಧಾನಿ ರೋಮ್‌ಗೆ ಆಗಮಿಸುವ ಮೂಲಕ ತಮ್ಮ ಐದು ರಾಷ್ಟ್ರಗಳ ಸುದೀರ್ಘ ಯುರೋಪಿಯನ್ ಪ್ರವಾಸದ ಕೊನೆಯ ಮತ್ತು ಅತ್ಯಂತ ಪ್ರಮುಖ ಘಟ್ಟವನ್ನು ತಲುಪಿದ್ದಾರೆ. ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ…

Read More

2026-27ರಲ್ಲಿ ಭಾರತದ ಜಿಡಿಪಿ ಶೇ. 7.1ರಷ್ಟು ವೃದ್ಧಿ: ಎಸ್ ಅಂಡ್ ಪಿ ಗ್ಲೋಬಲ್ ಏಜೆನ್ಸಿ ಅಂದಾಜು

ನವದೆಹಲಿ, ಮಾರ್ಚ್ 25: ಅಂತರರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಏಜೆನ್ಸಿಯಾದ ಎಸ್ ಅಂಡ್ ಪಿ ಗ್ಲೋಬಲ್ ಸಂಸ್ಥೆ (S&P Global) ಭಾರತದ ಆರ್ಥಿಕ ಬೆಳವಣಿಗೆಯ ಹಾದಿ ಬಗ್ಗೆ ಸಕಾರಾತ್ಮಕವಾಗಿದೆ. 2026-27ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.1ರಷ್ಟು ಬೆಳೆಯಬಹುದು ಎಂದು ಈ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಅಂದಾಜು ಮಾಡಿದೆ. ಕಳೆದ ಬಾರಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ಅದು ಭಾರತದ ಜಿಡಿಪಿ (Indian Economy) ಶೇ. 6.7ರಷ್ಟು ಹೆಚ್ಚಬಹುದು ಎಂದು ಹೇಳಿತ್ತು. ಈಗ ತನ್ನ ಅಭಿಪ್ರಾಯ ಬದಲಿಸಿರುವ ಅದು ಬೆಳವಣಿಗೆಯ…

Read More

ವಿವಾದಾತ್ಮಕ ಹೇಳಿಕೆ… ಧೋನಿ ಕ್ಷಮೆಯಾಚಿಸಿದ ಯುವರಾಜ್ ಸಿಂಗ್

ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಟಗಾರ, ಎರಡು ಬಾರಿ ವಿಶ್ವಕಪ್ ವಿಜೇತ ಯುವರಾಜ್ ಸಿಂಗ್ ಅವರು ಭಾರತೀಯ ಕ್ರಿಕೆಟ್‌ನ ದಿಗ್ಗಜ ನಾಯಕರಾದ ಎಂ.ಎಸ್. ಧೋನಿ ಮತ್ತು ಕಪಿಲ್ ದೇವ್ ಅವರಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಮ್ಮ ತಂದೆ ಯೋಗರಾಜ್ ಸಿಂಗ್ ಅವರು ನೀಡುತ್ತಿರುವ ಸರಣಿ ವಿವಾದಾತ್ಮಕ ಹೇಳಿಕೆಗಳಿಗಾಗಿ ಕ್ಷಮಾಪಣೆ ಕೇಳಿದ್ದಾರೆ. ಕ್ಷಮೆಯಾಚನೆಗೆ ಕಾರಣವೇನು? ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಕಳೆದ ಹಲವು ವರ್ಷಗಳಿಂದ ಎಂ.ಎಸ್. ಧೋನಿ ಮತ್ತು ಕಪಿಲ್…

Read More

ಕನಸಿನ ಮನೆ ಕಾಗದಕ್ಕಷ್ಟೇ ಸೀಮಿತವಾಯ್ತು, 34ನೇ ಫ್ಲೋರ್​ನಲ್ಲಿ ಫ್ಲಾಟ್ ಖರೀದಿಸಿದ ವ್ಯಕ್ತಿಗೆ ಎದುರಾಯ್ತು ಸಂಕಷ್ಟ, ಕಟ್ಟದಲ್ಲಿದ್ದಿದ್ದೇ 32 ಮಹಡಿಗಳು – Kannada News

ಕಟ್ಟಡ-ಸಾಂದರ್ಭಿಕ ಚಿತ್ರImage Credit source: South China Morning Post ಶಾಂಕ್ಸಿ, ಜೂನ್ 09: ಚೀನಾ(China)ದ ಶಾಂಕ್ಸಿ ಪ್ರಾಂತ್ಯದ ಕ್ಸಿಯಾನ್ ನಗರದ ಶೆನ್ ಎಂಬ ವ್ಯಕ್ತಿಯ ಕಥೆ ಇದು. ಒಂದು ದಶಕದ ಹಿಂದೆ, ಮಧ್ಯಮ ವರ್ಗದ ಪ್ರತಿಯೊಬ್ಬ ಸಾಮಾನ್ಯನಂತೆ ತನಗೂ ಒಂದು ಸ್ವಂತ ಮನೆ ಇರಬೇಕು ಎಂಬ ಕನಸು ಕಂಡಿದ್ದ ಶೆನ್, ಇಂದು ಆ ಮನೆಯೂ ಇಲ್ಲದೆ, ಕಷ್ಟಪಟ್ಟು ದುಡಿದ ಹಣವೂ ಸಿಗದೆ ಅಸಹಾಯಕರಾಗಿ ನಿಂತಿದ್ದಾರೆ. ರಿಯಲ್ ಎಸ್ಟೇಟ್‌ನ ಹಪಾಹಪಿತನ ಮತ್ತು ಕಾನೂನುಬಾಹಿರ ಹಗರಣಗಳು ಹೇಗೆ ಒಬ್ಬ…

Read More

ಬೆಂಗಳೂರು ವಿಮಾನ ನಿಲ್ದಾಣದಿಂದ 60 ದಶಲಕ್ಷ ಗುಲಾಬಿ ರಫ್ತು: ಹೂವಿನ ರಫ್ತಿನಲ್ಲಿ ದಾಖಲೆ – Kannada News | Bengaluru Airport Leads India in Flower Export: KIA’s Cold Chain Ensures Fresh Roses

ಬೆಂಗಳೂರು, ಫೆ.17: ಪ್ರೇಮಿಗಳ ದಿನದ ಅಂಗವಾಗಿ ಜಾಗತಿಕವಾಗಿ ಭಾರಿ ಬೇಡಿಕೆಯನ್ನು ಪೂರೈಸುವಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಯಶಸ್ವಿಯಾಗಿದೆ. ಈ ಬಾರಿ ದಾಖಲೆಯ 60 ದಶಲಕ್ಷಕ್ಕೂ ಹೆಚ್ಚು ಗುಲಾಬಿ ಹೂವುಗಳನ್ನು ಜಗತ್ತಿನಾದ್ಯಂತ ಸಾಗಿಸುವ ಮೂಲಕ ಬೆಂಗಳೂರು ತನ್ನ ರಫ್ತು ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೂವುಗಳ ಒಟ್ಟು ತೂಕದಲ್ಲಿ ಶೇ. 64 ರಷ್ಟು ಮತ್ತು ಹೂವುಗಳ ಸಂಖ್ಯೆಯಲ್ಲಿ ಶೇ. 38 ರಷ್ಟು ಬಹುದೊಡ್ಡ ಮಟ್ಟದ ಬೆಳವಣಿಗೆ ಕಂಡುಬಂದಿದೆ. ಒಟ್ಟು 2,700 ಮೆಟ್ರಿಕ್ ಟನ್‌ಗಿಂತಲೂ…

Read More

ಕೊಪ್ಪಳ: ಇಬ್ಬರು ಪುತ್ರಿಯರ ಜೊತೆ ಕೆರೆಗೆ ಹಾರಿ ತಾಯಿಯೂ ಆತ್ಮಹತ್ಯೆ

ಕೊಪ್ಪಳ, ಮಾರ್ಚ್​​ 12: ಕೌಟುಂಬಿಕ ಕಲಹ ಹಿನ್ನೆಲೆ ಇಬ್ಬರು ಪುತ್ರಿಯರ ಜೊತೆ ಕೆರೆಗೆ ಹಾರಿ ತಾಯಿಯೂ ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಾರನಾಳ ಗ್ರಾಮದಲ್ಲಿ ನಡೆದಿದೆ. ಹುಲಿಗೆವ್ವ(9), ವಿಜಯಮ್ಮ(8) ಜೊತೆ ತಾಯಿ ಬಾಳವ್ವ(35) ಆತ್ಮಹತ್ಯೆ ಮಾಡಿಕೊಂಡವರು. ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಯುವಕ ಮನೆಯಲ್ಲಿ ನೇಣಿಗೆ ಶರಣು ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನ್​​ಗೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ…

Read More

ಮೊದಲಿಗೆ ವರ್ಕ್ ಫ್ರಂ ಹೋಮ್, ನಂತರ ಬೆಳ್ಳಂಬೆಳಗ್ಗೆ ಇಮೇಲ್ ಶಾಕ್; ಮೆಟಾದಲ್ಲಿ 8,000 ಮಂದಿಗೆ ಕೆಲಸದಿಂದ ಕೊಕ್ – Kannada News | Meta Layoffs: 8,000 Employees Sacked by Email as AI Reshapes Workforce

ನವದೆಹಲಿ, ಮೇ 20: ಫೇಸ್​ಬುಕ್, ವಾಟ್ಸಾಪ್, ಇನ್ಸ್​ಟಾಗ್ರಾಮ್ ಆ್ಯಪ್​ಗಳ ಮಾತೃಸಂಸ್ಥೆಯಾದ ಮೆಟಾದ (Meta) ಶೇ. 10ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ವರದಿ ಪ್ರಕಾರ ಸುಮಾರು 8,000 ಉದ್ಯೋಗಿಗಳನ್ನು ಮೆಟಾ ಲೇ ಆಫ್ ಮಾಡಿದೆ. ಎಚ್​ಆರ್ ಚೇಂಬರ್​ಗೆ ಕರೆದು ಒಬ್ಬೊಬ್ಬರಿಗೂ ಪಿಂಕ್ ಸ್ಲಿಪ್ ಕೊಡುವ ಬದಲು ಮೆಟಾ ಬೇರೆಯದೇ ತಂತ್ರ ಅನುಸರಿಸಿದೆ. ಎಲ್ಲಾ ಉದ್ಯೋಗಿಗಳಿಗೂ ವರ್ಕ್ ಫ್ರಂ ಹೋಮ್ ಕೊಟ್ಟು, ನಂತರ 8,000 ಮಂದಿಗೆ ಇಮೇಲ್ ಮೂಲಕವೇ ಲೇ ಆಫ್ ಮಾಡಿದೆ. ಬೆಳಗ್ಗೆ 4 ಗಂಟೆಗೆ ಲೇ ಆಫ್…

Read More

ಅಮ್ಮ-ಅಪ್ಪ ಸ್ವಾರಿ, ನಿಮ್ಮ ಕಣ್ಮುಂದೆ ಸಾಯೋಕೆ ಆಗಲ್ಲ: ಪತ್ರ ಬರೆದಿಟ್ಟು ಸಹೋದರಿಯರು ನಾಪತ್ತೆ – Kannada News | Shocking incident In Mandya, two sisters went missing from their home after leaving a letter

ಮಂಡ್ಯ, (ಮೇ 19): ತಾಯಿ ಬೈದಿದ್ದಕ್ಕೆ ಅಪ್ರಾಪ್ತ ಸಹೋದರಿಯರು (Sisters) ಭಾವುಕವಾಗಿ ಪತ್ರ ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ. ರಾಮಚಂದ್ರ ಮಕ್ಕಳಾದ ಸುಜಾತಾ(16), ರುಕ್ಮಿಣಿ(14) ಮನೆಬಿಟ್ಟು ಹೋಗಿರುವ ಸಹೋದರಿಯರು. ಯಾವುದೋ ವಿಷಯಕ್ಕೆ ಮನೆತಲ್ಲಿ ತಾಯಿ ಬೈದಿದ್ದಾರೆ. ಇದರಿಂದ ಮನನೊಂದು ಸಹೋದರಿಯರು, ಮನೆಬಿಟ್ಟು ಹೋಗಿದ್ದಾರೆ.ಹೋಗುವ ಮುನ್ನ ಭಾವುಕ ಪತ್ರವೊಂದು ಬರೆದಿಟ್ಟಿದ್ದಾರೆ. ಅಮ್ಮ-ಅಪ್ಪ ಸ್ವಾರಿ. ನಿಮ್ಮ ಕಣ್ಣು ಮುಂದೆ ಸಾಯುವುದಕ್ಕೆ ಆಗಲ್ಲ. ಹೀಗಾಗಿ ನಾವು ದೂರ ಹೋಗಿ ಸತ್ತಿದ್ದೇವೆ ಎಂದು…

Read More

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ‘ಧುರಂಧರ್’ ನಟ ಆರ್. ಮಾಧವನ್: ವಿಡಿಯೋ ನೋಡಿ.. – Kannada News | Dhurandhar actor R Madhavan receives Padma Shri Award from President Droupadi Murmu

ನವದೆಹಲಿ: ಖ್ಯಾತ ನಟ ಆರ್‌. ಮಾಧವನ್ (R. Madhavan) ಅವರಿಗೆ ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮಶ್ರೀ’ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಧವನ್‌ಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ವಿಶೇಷ ಕ್ಷಣಕ್ಕೆ ಮಾಧವನ್ ಅವರ ಪತ್ನಿ ಸರಿತಾ ಹಾಗೂ ಪುತ್ರ ವೇದಾಂತ್ ಸಾಕ್ಷಿಯಾದರು. ಮಾಧವನ್ ಅವರು ಪ್ರಶಸ್ತಿ ಸ್ವೀಕರಿಸಲು ವೇದಿಕೆಯತ್ತ ಹೆಜ್ಜೆ ಹಾಕುತ್ತಿದ್ದಂತೆ, ಪ್ರೇಕ್ಷಕರ ಸಾಲಿನಲ್ಲಿದ್ದ ಪತ್ನಿ ಸರಿತಾ ಮತ್ತು ಮಗ…

Read More

‘ಸೆರಗು ಸರಿದಿದ್ದಕ್ಕೆ’ ನೋರಾ ಕ್ಷಮೆ: ಜೊತೆಗೊಂದು ಮಹತ್ವದ ನಿರ್ಧಾರ – Kannada News | Nora Fatehi apologises to National Commission for Women over KD Movie song controversy

‘ಕೆಡಿ’ (KD) ಸಿನಿಮಾದ ‘ಸರ್ಸೆ ಸೆರಗು’ ಹಾಡು ಉತ್ತರ ಭಾರತದಲ್ಲಿ ಭಾರಿ ವಿವಾದ ಹುಟ್ಟು ಹಾಕಿತ್ತು. ‘ಸರ್ಕೆ ಚುನರಿ’ ಹೆಸರಿನಲ್ಲಿ ಹಿಂದಿಯಲ್ಲಿ ಬಿಡುಗಡೆ ಆಗಿದ್ದ ಈ ಹಾಡಿನ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು. ಹಾಡಿನಲ್ಲಿ ಕುಣಿದಿದ್ದ ನಟಿ ನೋರಾ ಫತೇಹಿ, ನಿರ್ದೇಶಕ ಪ್ರೇಮ್ ಇನ್ನಿತರೆ ವ್ಯಕ್ತಿಗಳ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ದೂರು ದಾಖಲಿಸಿಕೊಂಡಿತ್ತು. ಪ್ರೇಮ್ ಸೇರಿದಂತೆ ಇನ್ನಿತರರು ಕ್ಷಮೆ ಕೇಳಿ ವಿವಾದಕ್ಕೆ ಅಂತ್ಯ ಹಾಡಿದ್ದರು. ಆದರೆ ನೋರಾ, ವಿಚಾರಣೆಯನ್ನು ಮುಂದೂಡುತ್ತಾ ಬಂದಿದ್ದರು. ಆದರೆ ಇಂದು ಗುರುವಾರ…

Read More