ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನ ಮಾಲೀಕರು ಪರದಾಟ – Kannada News | Karnataka Vehicle Owners Face Crisis as Emission Certificates Fail to Update on VAHAN 4 System

ಬೆಂಗಳೂರು, ಡಿಸೆಂಬರ್​ 23: ರಾಜ್ಯದಲ್ಲಿ ವಾಹನಗಳ ಮಾಲೀಕರು ಪ್ರಸ್ತುತ ಸಾರಿಗೆ ಇಲಾಖೆಯ ವಾಹನ್-4 ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಪರಿವಾಹನ್ ಪೋರ್ಟಲ್‌ನಲ್ಲಿ ವಾಹನಗಳ ಎಮಿಷನ್ ಸರ್ಟಿಫಿಕೇಟ್‌ಗಳು ನವೀಕರಣಗೊಳ್ಳದಿರುವುದು ಪ್ರಮುಖ ಸಮಸ್ಯೆಯಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್‌ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಅವರು ಧ್ವನಿ ಎತ್ತಿದ್ದು, ಇದು ಹಲವು ತಿಂಗಳಿಂದ ವಾಹನ ಮಾಲೀಕರಿಗೆ ತಲೆನೋವಾಗಿದೆ ಎಂದಿದ್ದಾರೆ. ಈಗಾಗಲೇ ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳು, ಸಚಿವರು ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ…

Read More

ಊಟ ಮಾಡುವಾಗ, ಮಾಡಿದ ನಂತರದ ಈ ಕೆಲವು ತಪ್ಪುಗಳು ಗಂಭೀರ ಸಮಸ್ಯೆಯನ್ನು ಉಂಟುಮಾಡಬಹುದು – Kannada News | Stop These 3 Dinner Mistakes to Prevent Disease

ಊಟ ಮಾಡುವಾಗ ಮಾಡಿದ ನಂತರ ಮಾಡುವ ತಪ್ಪುಗಳು ಬೆಳಗಿನ ಉಪಾಹಾರ ಎಷ್ಟು ಮುಖ್ಯವೋ, ರಾತ್ರಿ ಸೇವನೆ ಮಾಡುವಂತಹ ಆಹಾರವೂ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೌದು, ರಾತ್ರಿ ಊಟ (Dinner) ಮಾಡುವಾಗ ಮತ್ತು ಮಾಡಿದ ನಂತರ ಮಾಡುವ ತಪ್ಪುಗಳಿಂದಲೇ ಸಕ್ಕರೆ ಮಟ್ಟ, ಬಿಪಿ, ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಆ ತಪ್ಪುಗಳು ಯಾವವು, ಇದರಿಂದ ದೇಹಕ್ಕಾಗುವ ತೊಂದರೆಗಳು ಯಾವವು, ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿ ಬದಲಾವಣೆ ಮಾಡಿಕೊಳ್ಳಬಹುದು…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 24ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ಈ ದಿನ ಒಂದಲ್ಲ ಒಂದು ಕಾರ್ಯದಲ್ಲಿ ನಿರತರಾಗಿ ಇರುತ್ತೀರಿ ಹಾಗೂ ಅವುಗಳು ಫಲದಾಯಕವಾಗಿಯೂ ಇರುತ್ತವೆ. ಏನಾದರೊಂದು ಕಾರಣಕ್ಕೆ ಬಾಕಿ ಉಳಿದು ಹೋದ ಕೆಲಸಗಳನ್ನು ಮುಗಿಸಲು ಅವಕಾಶ ಸಿಗುತ್ತದೆ. ನೀವು ಈಗಾಗಲೇ ಸಾಲ ನೀಡಿದ್ದಲ್ಲಿ ಅದರ ಹಣ ವಸೂಲಿ ಮಾಡುವುದಕ್ಕೆ ಅಥವಾ ಮುಖ್ಯವಾದ ವ್ಯವಹಾರ ಒಪ್ಪಂದ ಪೂರ್ಣ ಮಾಡಿಕೊಳ್ಳುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯ ಗುರುತಿಸಲಾಗುತ್ತದೆ. ಹೆಚ್ಚಿನ ಜವಾಬ್ದಾರಿಗಳನ್ನು ಸಹ…

Read More

ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು: ಸಚಿವ ಪ್ರಿಯಾಂಕ್ ಖರ್ಗೆ – Kannada News | Kharge Counters Mohan Bhagwat on RSS Claims, Addresses Central Governments Impact on MNREGA

ಬೆಂಗಳೂರು, ಡಿ.23: ಕರ್ನಾಟಕ ಭವನದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುರಿತು ಸಮಾಲೋಚನಾ ಸಭೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ, ಈ ಸಭೆಯಲ್ಲಿ ಅರ್ಥಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಮತ್ತು ಕಾನೂನು ತಜ್ಞರೊಂದಿಗೆ ಈ ಯೋಜನೆಗೆ ಸಂಬಂಧಿಸಿದಂತೆ ಭವಿಷ್ಯದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು ಎಂದು ಹೇಳಿದರು. ಕೇಂದ್ರ ಸರ್ಕಾರವು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಾಶ ಮಾಡಿದೆ ಎಂದು ಖರ್ಗೆ ಆರೋಪಿಸಿದರು. ಈ ಯೋಜನೆಯು ಉದ್ಯೋಗ ಮತ್ತು ಜೀವನೋಪಾಯದ ಭರವಸೆಯನ್ನು ಕಸಿದುಕೊಂಡಿದೆ, ಪಂಚಾಯತ್‌ಗಳ ಅಧಿಕಾರವನ್ನು ಮೊಟಕುಗೊಳಿಸಿದೆ ಮತ್ತು ರಾಜ್ಯಕ್ಕೆ ಧನಸಹಾಯವನ್ನು…

Read More

ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿಯನ್ನು ಕೊಚ್ಚಿಕೊಂದ 24 ಗಂಟೆಯಲ್ಲೇ ಹಂತಕರು ಅರೆಸ್ಟ್​

ಹುಬ್ಬಳ್ಳಿ, ಡಿಸೆಂಬರ್​ 23: ಹುಬ್ಬಳ್ಳಿ ಮರ್ಯಾದೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು 24 ಗಂಟೆಗಳ ಒಳಗಾಗಿ ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ನಿನ್ನೆ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಫಕೀರಗೌಡ ಪಾಟೀಲ್, ಬಸನಗೌಡ ಪಾಟೀಲ್ ಮತ್ತು ಗುರಸಿದ್ದಗೌಡ ಪಾಟೀಲ್ ಎಂಬ ಮೂವರು ಇನಾಂ ವೀರಪುರ ಗ್ರಾಮದವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಮೃತ ಯುವತಿಯ ತಂದೆಯೂ ಒಬ್ಬರಾಗಿದ್ದಾರೆ. ಮೃತ ಯುವತಿಯ ಪತಿ ವಿವೇಕಾನಂದ ಅವರು ಸುಮಾರು 20 ಜನರ ವಿರುದ್ಧ ದೂರು ನೀಡಿದ್ದಾನೆ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು…

Read More

ಡಿ. 30ರಂದು ಕಸ್ಟಮ್ಸ್ ಇಲಾಖೆಯಿಂದ ಹರಾಜು: ಅತ್ಯಂತ ಕಡಿಮೆ ಬೆಲೆಗೆ ಸಿಗಲಿವೆ ಈ ವಸ್ತುಗಳು – Kannada News | Bengaluru Customs Online Auction via MSTC: Get Electronic Items, Vehicles, Furniture at Low Prices

ಬೆಂಗಳೂರು, ಡಿಸೆಂಬರ್​​ 23: ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ಅಡಿಯಲ್ಲಿ ಕಾರ್ಯನಿರ್ವಹಿಸುವ ಬೆಂಗಳೂರು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿರುವ ದೇಶಕ್ಕೆ ಅಕ್ರಮವಾಗಿ ಸಾಗಾಟ ಮಾಡಿದ ವಸ್ತುಗಳ ಹರಾಜು ಪ್ರಕ್ರಿಯೆ ಡಿಸೆಂಬರ್​​ 30ರಂದು ನಡೆಯಲಿದೆ. ಎಕ್ಸ್​​ ಖಾತೆಯಲ್ಲಿ ಕಸ್ಟಮ್ಸ್ ಇಲಾಖೆ ನೀಡಿರುವ ಮಾಹಿತಿಯಂತೆ, ಈ ಹರಾಜಿನಲ್ಲಿ ಮೊಬೈಲ್ ಫೋನ್‌ಗಳು, ಕಂಪ್ಯೂಟರ್‌ಗಳು, ಐಪ್ಯಾಡ್‌ಗಳು ಹಾಗೂ ಟಿವಿಗಳಂತಹ ಉತ್ಪನ್ನಗಳು ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಬಹಳ ಕಡಿಮೆ ದರದಲ್ಲಿ ಲಭ್ಯವಾಗಲಿವೆ. ವಸ್ತುಗಳ ಖರೀದಿ ಹೇಗೆ? “Auction of Electronics Goods…

Read More

ICC Rankings: ನಂಬರ್ 1 ಕಿರೀಟ ಕಳೆದುಕೊಂಡ ಸ್ಮೃತಿ, ಇತಿಹಾಸ ಸೃಷ್ಟಿಸಿದ ದೀಪ್ತಿ ಶರ್ಮಾ – Kannada News | ICC Women’s Rankings: Deepti Sharma Rises, Smriti Mandhana Drops

ಐಸಿಸಿ ಬಿಡುಗಡೆ ಮಾಡಿರುವ ಮಹಿಳಾ ಕ್ರಿಕೆಟ್​ನ ಟಿ20 ಶ್ರೇಯಾಂಕದಲ್ಲಿ ಭಾರತದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ನಂಬರ್ ಒನ್ ಬೌಲರ್ ಎನಿಸಿಕೊಂಡಿದ್ದಾರೆ. ಏತನ್ಮಧ್ಯೆ, ಸ್ಮೃತಿ ಮಂಧಾನಗೆ ಹಿನ್ನಡೆಯಾಗಿದ್ದು, ಬ್ಯಾಟರ್​ಗಳ ಏಕದಿನ ಶ್ರೇಯಾಂಕದಲ್ಲಿ ತಮ್ಮ ನಂಬರ್ ಒನ್ ಸ್ಥಾನವನ್ನು ಕಳೆದುಕೊಂಡಿದ್ದಾರೆ. Source link

Read More

Horoscope Today 24 December : ಇಂದು ಈ ರಾಶಿಯವರಿಂದ ಭವಿಷ್ಯ ನೀರೀಕ್ಷೆಗೆ ಪ್ರೋತ್ಸಾಹ, ಅಧಿಕ ಅವಲಂಬನೆ – Kannada News | Horoscope Today in Kannada on 24 December Wednesday; Dina Bhavishya Tithi Panchanga Details here

ಮೇಷ ರಾಶಿ : ಆಸ್ತಿ ಸಂಬಂಧಿತ ಕನಸು ಫಲಿಸುವುದು. ತಪ್ಪಿಲ್ಲದ ಕಡೆ ಭಯ ಬೇಡ. ಸರ್ಕಾರಿ ಉದ್ಯೋಗದಲ್ಲಿ ಪ್ರಾರ್ಥನೆ ಫಲಿಸುವ ಸೂಚನೆ. ಭೂಮಿಗೆ ಸಂಬಂಧಿಸಿದ ವಿಚಾರಗಳನ್ನು ಇತ್ಯರ್ಥ ಮಾಡಿಕೊಳ್ಳುವುದು ಉಚಿತ. ಉನ್ನತ ವಿದ್ಯಾಭ್ಯಾಸದ ಪ್ರಯುಕ್ತ ಹೊರಗಡೆ ಇರಲಿರುವಿರಿ. ನಿಮ್ಮ ಕಾರ್ಯವು ಆಗಬೇಕಾದರೆ ಓಡಾಟ ಅನಿವಾರ್ಯವಾಗಲಿದೆ. ಅನಾರೋಗ್ಯದ ನಡುವೆಯೂ ಉತ್ಸಾಹದಿಂದ ಇರುವಿರಿ. ಶತ್ರುಗಳ ಮುಖಾಮುಖಿ ಭೇಟಿಯ ಸಂದರ್ಭವು ಬರುವುದು. ನೀವು ಇಂದು ಯಾವ ವಿಚಾರವನ್ನು ಮಾತನಾಡುವುದಿದ್ದರೂ ಎಚ್ಚರವಿರಲಿ. ಕೃಷಿಯಲ್ಲಿ ಪ್ರಕೃತಿ ಅನುಕೂಲ. ಮಾರಾಟದಲ್ಲಿ ನಂಬಿಕೆಯ ಗ್ರಾಹಕರು. ದಾಂಪತ್ಯದಲ್ಲಿ ಪರಸ್ಪರ…

Read More

ಬಾಂಗ್ಲಾದೇಶ ಮಾರ್ಗದ ಮೂಲಕ ಭಾರತಕ್ಕೆ ಉಗ್ರರನ್ನು ನುಸುಳಿಸಲು ಪಾಕಿಸ್ತಾನ ಪ್ಲಾನ್ – Kannada News | Pakistan plan to infiltrate terrorism in India through Bangladesh route Indian agencies on alert

ನವದೆಹಲಿ, ಡಿಸೆಂಬರ್ 23: ಬಾಂಗ್ಲಾದೇಶದಲ್ಲಿ ಯುವ ನಾಯಕರ ಹತ್ಯೆಯ ನಂತರ ಹೆಚ್ಚುತ್ತಿರುವ ಹಿಂಸಾಚಾರದ ನಡುವೆ ಪಾಕಿಸ್ತಾನ (Pakistan) ಈ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದೆ. ಬಾಂಗ್ಲಾದೇಶದ ಮಾರ್ಗವಾಗಿ ಪಾಕಿಸ್ತಾನದ ಭಯೋತ್ಪಾದನಾ ಗುಂಪುಗಳು ಭಾರತದ ಒಳಗೆ ನುಗ್ಗಲು ಪ್ರಯತ್ನಿಸುತ್ತಿವೆ ಎಂಬ ಗುಪ್ತಚರ ಮಾಹಿತಿ ಲಭ್ಯವಾಗುತ್ತಿದ್ದಂತೆ ಭಾರತದ ಭದ್ರತಾ ಸಂಸ್ಥೆಗಳು ಜಾಗರೂಕವಾಗಿವೆ. ಢಾಕಾದಲ್ಲಿ ಹೆಚ್ಚಾದ ಅಶಾಂತಿಯ ನಡುವೆ ಬಾಂಗ್ಲಾದೇಶ ಕಾರಿಡಾರ್ ಮೂಲಕ ಭಾರತಕ್ಕೆ ಭಯೋತ್ಪಾದಕರನ್ನು ನುಸುಳಿಸಲು ಐಎಸ್ಐ ಯೋಜಿಸುತ್ತಿದೆ ಎಂದು ಗುಪ್ತಚರ ವರದಿಗಳು ತಿಳಿಸಿವೆ. ಮೂಲಗಳ ಪ್ರಕಾರ, ಅಸ್ಸಾಂ, ತ್ರಿಪುರ…

Read More

ಮಗುವಿಗೆ ಜನ್ಮ ನೀಡಿದ 10ನೇ ಕ್ಲಾಸ್ ವಿದ್ಯಾರ್ಥಿನಿ: ಶಾಲಾ ಬಸ್ ಡ್ರೈವರ್​ನಿಂದಲೇ​​​ ನೀಚ ಕೃತ್ಯ – Kannada News | SSLC Student gives birth to baby in Hassan, police book case On School Bus Driver

ಹಾಸನ, (ಡಿಸೆಂಬರ್ 23): 10ನೇ ತರಗತಿ ವಿದ್ಯಾರ್ಥಿನಿ (SSLC Student)  ಮಗುವಿಗೆ ಜನ್ಮ ನೀಡಿರುವ ಆಘಾತಕಾರಿ ಘಟನೆ ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ (Channarayapatna) ತಾಲ್ಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ಅದೇ ಶಾಲೆಯ ಬಸ್ ಚಾಲಕ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದ್ದು, ಸದ್ಯ ಶಾಲೆ ಬಸ್ ಚಾಲಕ ತಲೆಮರಿಸಿಕೊಂಡಿದ್ದಾನೆ. ನಿತ್ಯ ಬಸ್​​ನಲ್ಲಿರುವ ವಿದ್ಯಾರ್ಥಿನಿಗೆ ಚಾಕೋಲೆಟ್​ ನೀಡಿ ಪುಸಲಾಯಿಸಿ ಆಕೆಯನ್ನು ಲೈಂಗಿಕವಾಗಿ ಬಳಿಸಿಕೊಂಡಿದ್ದಾನೆ. ಪರಿಣಾಮ ಇದೀಗ ವಿದ್ಯಾರ್ಥಿನಿ…

Read More