Video: ಏಕಾಏಕಿ ಮಾಲಕಿಯ ಮೇಲೆ ಸಾಕು ಬೆಕ್ಕು ದಾಳಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಮನೆಯಲ್ಲೇ ಮುದ್ದಾಗಿ ಬೆಳೆದ ಸಾಕು ಬೆಕ್ಕೊಂದು ತನ್ನ ಮಾಲೀಕಿಯ ಮೇಲೆ ಅನಿರೀಕ್ಷಿತವಾಗಿ ಭೀಕರ ದಾಳಿ ನಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಬೆಕ್ಕು ಮಹಿಳೆಯ ಕೈಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಬಲವಾಗಿ ಕಚ್ಚಿ ಗಾಯಗೊಳಿಸಿದ್ದು, ದಾಳಿಯ ತೀವ್ರತೆಗೆ ಕೊಠಡಿಯ ನೆಲದ ಮೇಲೆ ರಕ್ತ ಚೆಲ್ಲಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲ ನಿಮಿಷಗಳ ಕಾಲ ಬೆಕ್ಕಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟ ಮಹಿಳೆ, ಕೊನೆಯಲ್ಲಿ ಹೇಗೋ ಕೊಠಡಿಯಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಕ್ಷಾಂತರ ವೀಕ್ಷಣೆ ಪಡೆದಿರುವ ಈ…