Headlines

ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ: ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಕನಸು ನುಚ್ಚುನೂರು – Kannada News | Bengaluru BMTC bus accident: Engineering student death

ಬಿಎಂಟಿಸಿ ಬಸ್ ಅಪಘಾತImage Credit source: tv9 kannada ಬೆಂಗಳೂರು, ಏಪ್ರಿಲ್​ 25: ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್‌ಗೆ (BMTC Bus) ಮತ್ತೊಂದು ಬಲಿಯಾಗಿದೆ (death). ನಗರದ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಇಂದು ನಡೆದ ಭೀಕರ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಬಿಎಂಟಿಸಿ ಬಸ್ ಚಕ್ರದಡಿ ಸಿಲುಕಿ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ಶಿರೀಷಾ(21) ಮೃತ ಇಂಜಿನಿಯರಿಂಗ್‌ ವಿದ್ಯಾರ್ಥಿನಿ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದಿದ್ದೇನು? ಶಿರೀಷಾ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಉತ್ತರಹಳ್ಳಿ ಮುಖ್ಯರಸ್ತೆಯ…

Read More

Video: ಮೊದಲ ಬಾರಿಗೆ ಕ್ಯಾಬ್ ಬುಕ್ ಮಾಡಿದ ತಾಯಿ, ಗೆದ್ದಂತೆ ಸಂಭ್ರಮಿಸಿದ ಮಗಳು – Kannada News | Mother learns to book a cab under daughter’s guidance

ಹೆತ್ತವರು (parents) ತಮ್ಮ ಮಕ್ಕಳಿಗೆ ಜೀವನ ಅನುಭವಗಳನ್ನು ಹೇಳಿ ಕೊಡುತ್ತಾರೆ. ಮಕ್ಕಳ ಯಶಸ್ಸು, ಸಾಧನೆಯನ್ನು ಕಂಡು ಖುಷಿ ಪಡುತ್ತಾರೆ. ಆದರೆ ಈ ಮಕ್ಕಳು ಕೂಡ ತಮ್ಮ ತಾಯಿ ತಂದೆಗೆ ಸ್ಮಾರ್ಟ್ ಫೋನ್ ಹಾಗೂ ಕಂಪ್ಯೂಟರ್ ಬಳಕೆ ಹೇಗೆ ಮಾಡುವುದೆಂದು ಹೇಳಿ ಕೊಡುವುದನ್ನು ನೋಡಬಹುದು. ಇದೀಗ ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಮಹಿಳೆಯೊಬ್ಬಳು ತನ್ನ ಮಗಳ ಸಹಾಯದಿಂದ ಕ್ಯಾಬ್ ಬುಕ್ ಮಾಡುವುದು ಹೇಗೆಂದು ಕಲಿಯುತ್ತಿದ್ದಾಳೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು , ಈ ದೃಶ್ಯ ನೆಟ್ಟಿಗರ ಹೃದಯ…

Read More

IPL 2026: ಆರ್​ಸಿಬಿಗೆ ಬಂತು ಆನೆ ಬಲ; ಬೆಂಗಳೂರಿಗೆ ಬಂದ ಜೋಶ್ ಹೇಜಲ್​ವುಡ್

2026 ರ ಐಪಿಎಲ್​ನ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಪ್ರಕಟಿಸಿದೆ. ಅದರಂತೆ ಲೀಗ್​ನ ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ನಡುವೆ ನಡೆಯಲಿದೆ. ಈ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಮಾರ್ಚ್​ 28 ರಂದು ನಡೆಯುವ ಈ ಪಂದ್ಯಕ್ಕೆ ಉಭಯ ತಂಡಗಳು ಸಿದ್ಧವಾಗಿದ್ದು, ಇದರ ನಡುವೆ ಆರ್​ಸಿಬಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಎಲ್ಲರಿಗೂ ತಿಳಿದಿರುವಂತೆ 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಬಾರಿಗೆ ಟ್ರೋಫಿ ಎತ್ತಿಹಿಡಿಯಲು…

Read More

LPG ಸಿಲಿಂಡರ್​​ಗಳ ಕೊರತೆ: ಪ್ರಧಾನಿ ನರೇಂದ್ರ ಮೋದಿಗೆ ಬೆಂಗಳೂರು ಹೋಟೆಲ್​​ ಅಸೋಸಿಯೇಷನ್​​ ಪತ್ರ

ಬೆಂಗಳೂರು, ಮಾರ್ಚ್​​ 19: ರಾಜ್ಯದಲ್ಲಿ ಕಮರ್ಷಿಯಲ್​​ ಸಿಲಿಂಡರ್​​ಗಳ ಅಭಾವದಿಂದಾಗಿ ಹೋಟೆಲ್​​ ಉದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, ಹಲವು ರೆಸ್ಟೋರೆಂಟ್​​ಗಳು ಈಗಾಗಲೇ ಬಂದ್​​ ಆಗಿವೆ. ಪರಿಣಾಮ ಅದನ್ನೇ ನಂಬಿಕೊಂಡಿದ್ದ ಲಕ್ಷಾಂತರ ಕಾರ್ಮಿಕರು ಮತ್ತು ಕುಟುಂಬ ಬೀದಿಗೆ ಬಿದ್ದಿದೆ. ಹೀಗಾಗಿ ಸಿಲಿಂಡರ್​​ಗಳ ಪೂರೈಕೆಗೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅದಾಗಲೇ ಹೈಕೋರ್ಟ್​​ಗೆ ರಿಟ್​​ ಅರ್ಜಿ ಸಲ್ಲಿಸಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಅಸೋಸಿಯೇಷನ್ ಪತ್ರ ಬರೆದಿದ್ದು, ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಸ್ಥಗಿತದಿಂದ ಉದ್ಭವಿಸಿರುವ ಸಮಸ್ಯೆ ಬಗ್ಗೆ…

Read More

ಕಾಗೆಯ ವಿಗ್ರಹ ಹಾಗೂ ಮಿಸ್ಟರಿ; ಒಟಿಟಿಯಲ್ಲಿರೋ ಈ ಥ್ರಿಲ್ಲರ್ ಸಿನಿಮಾನ ಮಿಸ್ ಮಾಡಬೇಡಿ – Kannada News | Sambhavam Adhyayam Onnu Review: A Crow Idol Mystery Thriller on OTT

ಅದೊಂದು ದಟ್ಟಾರಣ್ಯ. ಕಾಡಿನ ಮಧ್ಯದಲ್ಲಿ ಒಂದು ದೇವಸ್ಥಾನ. ದೇವಸ್ಥಾನ ಎಂದಾಕ್ಷಣ ಅದು ಶಿವನದ್ದೋ ಅಥವಾ ಗಣೇಶನದ್ದೋ ಅಲ್ಲ. ಅದು ಕಾಗೆಯದ್ದು. ಕಾಗೆಯ ದೊಡ್ಡ ವಿಗ್ರಹ ಅಲ್ಲಿ ಸ್ಥಾಪನೆ ಆಗಿದೆ. ಅದಕ್ಕೊಂದು ಕರಾಳ ಇತಿಹಾಸ ಇದೆ. ಅಷ್ಟೇ ಅಲ್ಲ, ಆ ಕಾಡಿನಲ್ಲೂ ಒಂದು ಮಾಂತ್ರಿಕತೆ ಇದೆ. ಸಿನಿಮಾ ಉದ್ದಕ್ಕೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇದೆ. ಇದು ಕೆಲವರಿಗೆ ಇಷ್ಟ ಆಗಬಹುದು, ಇನ್ನೂ ಕೆಲವರು ಇದನ್ನು ಇಷ್ಟಪಡದೇ ಇರಬಹುದು. ಆ ಸಿನಿಮಾ ಹೆಸರು ‘ಸಂಭವಮ್ ಆಧ್ಯಾಯಮ್ ಒನ್ನು’.  ಜಿಯೋ ಹಾಟ್​​ಸ್ಟಾರ್​​ನಲ್ಲಿ…

Read More

ಸಿಲಿಕಾನ್ ಸಿಟಿಯಲ್ಲಿ ಮನೆಗಳ ಮುಳುಗಡೆಗೆ ರಸ್ತೆಗಳೇ ಕಂಟಕ: ಮಿಲ್ಲಿಂಗ್ ಮಾಡದೆ ಡಾಂಬರು ಹಾಕಿ ಮನೆಗಳಿಗಿಂತ ರಸ್ತೆ ಎತ್ತರಿಸುತ್ತಿರುವ ಜಿಬಿಎ – Kannada News | Bangalore’s Road Woes: Unscientific Resurfacing and Missing Milling Cause Home Flooding

ಬೆಂಗಳೂರು, ಜೂ.22: ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯ ಮಳೆ ಬಂದರೂ ಹಳೆಯ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಜಲಾವೃತವಾಗಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇಂಜಿನಿಯರ್‌ಗಳ ಬೇಜವಾಬ್ದಾರಿತನವೇ ನೇರ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರಸ್ತೆಗಳಿಗೆ ಮರುಡಾಂಬರೀಕರಣ (Resurfacing) ಮಾಡುವ ಮುನ್ನ ಹಳೆಯ ಡಾಂಬರನ್ನು ಕೆರೆದು ತೆಗೆಯುವ ‘ಮಿಲ್ಲಿಂಗ್’ (Milling) ನಿಯಮವನ್ನು ಗಾಳಿಗೆ ತೂರಿ, ಹಳೆಯ ರಸ್ತೆಯ ಮೇಲೆಯೇ ಪದರ ಪದರವಾಗಿ ಹೊಸ ಡಾಂಬರು ಹಾಕುತ್ತಿರುವುದರಿಂದ ರಸ್ತೆಗಳ ಎತ್ತರ ಹೆಚ್ಚಾಗುತ್ತಿದ್ದು, ಮನೆಗಳು ತಗ್ಗು ಪ್ರದೇಶಕ್ಕೆ ತಳ್ಳಲ್ಪಡುತ್ತಿವೆ ಎಂಬ…

Read More

IPL 2026: ಐಪಿಎಲ್‌ನಲ್ಲಿ ಮೊದಲ ಡಬಲ್ ಹೆಡರ್; ಯಾವ 4 ತಂಡಗಳ ನಡುವೆ ಪಂದ್ಯ?

ಮಾರ್ಚ್​ 28 ರಂದು ಆರಂಭವಾದ 2026 ರ ಐಪಿಎಲ್‌ನಲ್ಲಿ (IPL 2026) ಇದುವರೆಗೆ 6 ಪಂದ್ಯಗಳು ನಡೆದಿವೆ. 7ನೇ ಪಂದ್ಯ ಇಂದು, ಸಿಎಸ್​ಕೆ ಹಾಗೂ ಪಂಜಾಬ್ (CSK vs PBKS) ನಡುವೆ ನಡೆಯಲಿದೆ. ಅಂದಹಾಗೆ ಈ ಆವೃತ್ತಿಯಲ್ಲಿ ಐಪಿಎಲ್‌ನಲ್ಲಿ 12 ಡಬಲ್ ಹೆಡರ್ (Double Header) ಪಂದ್ಯಗಳು ನಡೆಯಲಿವೆ. ಅಂದರೆ ಒಂದೇ ದಿನ ಎರಡು ಪಂದ್ಯಗಳು ನಡೆಯಲಿವೆ. ಅದರಲ್ಲಿ ಮೊದಲ ಡಬಲ್ ಹೆಡರ್ ಪಂದ್ಯ ಏಪ್ರಿಲ್ 4 ರಂದು ನಡೆಯಲಿದೆ. ದಿನದ ಮೊದಲ ಪಂದ್ಯ ಮಧ್ಯಾಹ್ನ 3:30ಕ್ಕೆ…

Read More

ಚಳಿಗಾಲದಲ್ಲಿ ಬೆಂಕಿ ಕಾಯಿಸುವಾಗ ಈ ತಪ್ಪನ್ನು ಮಾಡಲೇಬೇಡಿ! ಉಪಯೋಗಕ್ಕಿಂತ ಅಪಾಯಕಾರಿಯಾಗಬಹುದು ಎಚ್ಚರ – Kannada News | Winter Fire Safety: Protect Yourself

ಪ್ರಸ್ತುತ, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ತೀವ್ರ ಚಳಿ (Winter) ಇದ್ದು ಈ ವಾತಾವರಣದಲ್ಲಿ ದೇಹವನ್ನು ರಕ್ಷಿಸಿಕೊಳ್ಳಲು, ಜನರು ವಿವಿಧ ರೀತಿಯ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಸಹಜ. ಅವುಗಳಲ್ಲಿ ಬೆಂಕಿ ಕಾಯಿಸುವುದು ಕೂಡ ಒಂದು. ಇದು ಹಳ್ಳಿ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಸಣ್ಣ ಸಣ್ಣ ಮನೆಗಳಲ್ಲಿ, ಜನರು ಬೆಚ್ಚಗಿರಲು ಜೊತೆಗೆ ತೀವ್ರ ಚಳಿಯಿಂದ ಮುಕ್ತಿ ಪಡೆಯಲು ಅಗ್ಗಿಷ್ಟಿಕೆ (Brazier) ಅಥವಾ ಅಂಗೀತಿಯ ಬಳಕೆ ಮಾಡುತ್ತಾರೆ. ಆದರೆ ಶೀತದಿಂದ ಬೆಚ್ಚಗಿರಲು ಬಳಸುವ ಅಗ್ಗಿಷ್ಟಿಕೆ ಅಥವಾ ಮನೆಗಳಲ್ಲಿ ಸೌದೆ ಒಲೆಗಳನ್ನು…

Read More

ಜಗದ್ಗುರುಗಳ ಸಮ್ಮುಖದಲ್ಲಿ ಸ್ವಾಮೀಜಿ-ಭಕ್ತರ ಸಂಧಾನ: ಏನಿದು ಕುಂದಗೋಳ ಮಠದ ವಿವಾದ? – Kannada News | Kundgol Panchagrah Hiremath Property Dispute Resolved: Swamiji Agrees Not to Sell Land

ಹುಬ್ಬಳ್ಳಿ, ಮೇ 08: ಧಾರವಾಡ (dharwad) ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿರುವ ಪಂಚಗ್ರಹ ಹಿರೇಮಠ (Panchagrah Hiremath) ಐತಿಹಾಸಿಕ ಹಿನ್ನೆಲೆಯುಳ್ಳ ದೊಡ್ಡ ಮಠ. ಆದರೆ ಇದೇ ಮಠದ ಆಸ್ತಿ ವಿಚಾರ ಸ್ವಾಮೀಜಿ ಮತ್ತು ಭಕ್ತರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು. ಮಠದ ಆಸ್ತಿಯನ್ನು ಸೈಟ್ ಮಾಡಿ ಮಾರಾಟ ಮಾಡಲು ಮುಂದಾದ ಸ್ವಾಮೀಜಿ ನಡೆಗೆ ಭಕ್ತರು ಅಸಮಾಧಾನ ಹೊರಹಾಕಿದ್ದರು. ಕಳೆದ ಒಂದು ತಿಂಗಳಿಂದ ನಡೆದಿದ್ದ ಮುಸುಕಿನ ಗುದ್ದಾಟಕ್ಕೆ ಇಂದು ಪಂಚಪೀಠದ ಸ್ವಾಮೀಜಿಗಳು ಭಕ್ತರ ಸಭೆ ನಡೆಸಿ ಸಮಸ್ಯೆಗೆ ತೆರೆ ಎಳೆಯುವ…

Read More

ಲೆಬನಾನ್ ಮೇಲಿನ ಇಸ್ರೇಲ್ ದಾಳಿ ಖಂಡಿಸಿ ಮತ್ತೆ ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್ – Kannada News | Iran Closes Strait Of Hormuz Again Over Israel’s attack In Lebanon

ಟೆಹ್ರಾನ್, ಜೂನ್ 20: ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಸರಣಿ ವೈಮಾನಿಕ ದಾಳಿಗಳನ್ನು ವಿರೋಧಿಸಿ ಇರಾನ್ ಮಿಲಿಟರಿ ಜಾಗತಿಕ ಮಟ್ಟದ ಪ್ರಮುಖ ತೈಲ ಸಾರಿಗೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮತ್ತೊಮ್ಮೆ ಸಂಪೂರ್ಣವಾಗಿ ಮುಚ್ಚಿದೆ. ಇತ್ತೀಚೆಗೆ ಮಾಡಿಕೊಳ್ಳಲಾಗಿದ್ದ ಶಾಂತಿ ಒಪ್ಪಂದದ ನಿಯಮಗಳನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಕೂಡ ಇರಾನ್ ಆರೋಪ ಮಾಡಿದೆ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಸಂಘಟನೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸುತ್ತಿರುವ ತೀವ್ರ ದಾಳಿಗಳ ಹಿಂದೆ ಅಮೆರಿಕದ ಕುಮ್ಮಕ್ಕಿದೆ ಎಂದು ಇರಾನ್ ಆಕ್ರೋಶ ವ್ಯಕ್ತಪಡಿಸಿದೆ. ಪ್ರಾದೇಶಿಕ…

Read More