ಮತ್ತೆ ಮ್ಯಾಜಿಕ್ ಮಾಡುತ್ತಾ ‘ಲವ್ ಮಾಕ್ಟೆಲ್ 3’? ಬಿಡುಗಡೆ ಯಾವಾಗ? – Kannada News | Darling Krishna starrer Love Mocktail 3 movie release date announced

ಕೋವಿಡ್ ಸಮಯದಲ್ಲಿ ಒಟಿಟಿಯಲ್ಲಿ ದೊಡ್ಡ ಹಿಟ್ ಆಗಿತ್ತು ‘ಲವ್ ಮಾಕ್ಟೆಲ್’ (Love Mocktail) ಸಿನಿಮಾ. ಡಾರ್ಲಿಂಗ್ ಕೃಷ್ಣಗೆ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ದೊಡ್ಡ ಗೆಲುವು ತಂದುಕೊಟ್ಟ ಸಿನಿಮಾ. ಹಾಸ್ಯ, ಭಾವುಕತೆ, ಗೆಳೆತನ, ಒಳ್ಳೆಯ ಸಂಗೀತ ಎಲ್ಲವುಗಳ ಮಿಶ್ರಣವಾಗಿದ್ದ ‘ಲವ್ ಮಾಕ್ಟೆಲ್’ ಅನ್ನು ಸಿನಿಮಾ ಸರಣಿಯಾಗಿ ಮುಂದುವರೆಸಿದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್, 2022 ರಲ್ಲಿ ‘ಲವ್ ಮಾಕ್ಟೆಲ್ 2’ ಸಿನಿಮಾ ನಿರ್ಮಿಸಿದರು. ಆ ಸಿನಿಮಾ ಸಹ ಹಿಟ್ ಆಯ್ತು. ಇದೀಗ ಇದೇ ಜೋಡಿ ‘ಲವ್ ಮಾಕ್ಟೆಲ್ 3’ ಸಿನಿಮಾ ಮಾಡಿದ್ದು, ಸಿನಿಮಾದ ಬಿಡುಡಗೆ ದಿನಾಂಕ ಘೋಷಣೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ‘ಲವ್ ಮಾಕ್ಟೆಲ್ 3’ ಸಿನಿಮಾ ಮೋಷನ್ ಪೋಸ್ಟರ್ ಲಾಂಚ್ ಮಾಡಿದ್ದರು ಡಾರ್ಲಿಂಗ್ ಕೃಷ್ಣ. ಇದೀಗ ಹೊಸ ವರ್ಷದ ಉಡುಗೊರೆ ಎಂಬಂತೆ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಡಾಲಿಂಗ್ ಕೃಷ್ಣ ಘೋಷಿಸಿದ್ದಾರೆ. ಏಪ್ರಿಲ್ 10 ರಂದು ‘ಲವ್ ಮಾಕ್ಟೆಲ್ 3’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

2020 ಯಲ್ಲಿ ಬಿಡುಗಡೆ ಆಗಿದ್ದ ಮೊದಲ ‘ಲವ್ ಮಾಕ್ಟೆಲ್’ ಸಿನಿಮಾ ನವಿರು ಪ್ರೆಮಕತೆ, ಭರಪೂರ ಹಾಸ್ಯ, ನಾಸ್ಟೆಲಿಜಿಯಾ ಸೀನುಗಳಿಂದಾಗಿ ಪ್ರೇಕ್ಷಕರ ಮನ ಗೆದ್ದಿತ್ತು. ಸಿನಿಮಾದ ಅಂತ್ಯ ಸಖತ್ ಭಾವುಕವಾಗಿಯೂ ಇತ್ತು. 2022 ರಲ್ಲಿ ಬಂದ ‘ಲವ್ ಮಾಕ್ಟೇಲ್ 2’ ಸಿನಿಮಾ ಪ್ರೇಮವನ್ನು ಕಳೆದುಕೊಂಡವನೊಬ್ಬ ಮತ್ತೆ ಪ್ರೀತಿಯನ್ನು ಅರಸುವ ಆ ಹಾದಿಯಲ್ಲಿ ಎದುರಾಗುವ ಯುವತಿಯರು ಮತ್ತು ಅವರೊಟ್ಟಿಗಿನ ತಮಾಷೆಯಿಂದಾಗಿ ಗಮನ ಸೆಳೆದಿತ್ತು. ಜೊತೆಗೆ ಸಿನಿಮಾನಲ್ಲಿ ಭಾವುಕ ಅಂಶಗಳು ಸಾಕಷ್ಟಿದ್ದವು. ಇದೀಗ ತೆರೆಗಾಣಲು ಸಜ್ಜಾಗಿರುವ ‘ಲವ್ ಮಾಕ್ಟೇಲ್ 3’ ಈ ಹಿಂದಿನ ಎರಡು ಆವೃತ್ತಿಗಳಿಗಿಂತಲೂ ಭಿನ್ನವಾಗಿರಲಿದೆ ಎಂಬ ವಿಚಾರವನ್ನು ಡಾರ್ಲಿಂಗ್ ಕೃಷ್ಣ ಹಂಚಿಕೊಂಡಿದ್ದಾರೆ. ಕತೆ, ನಿರೂಪಣೆ ಸೇರಿದಂತೆ ಎಲ್ಲದರಲ್ಲಿಯೂ ‘ಲವ್ ಮಾಕ್ಟೇಲ್ 3’ ಹೊಸ ಅನುಭೂತಿ ಕೊಡಲಿದೆ ಎಂಬ ಭರವಸೆ ಕೃಷ್ಣ ಅವರದ್ದು.

ಇದನ್ನೂ ಓದಿ:ಈ ಬಾರಿ ನಾನು ಡಾರ್ಲಿಂಗ್ ಕೃಷ್ಣನ ಬಿಟ್ಟು ಹೋಗಲ್ಲ: ಅಮೃತಾ ಅಯ್ಯಂಗಾರ್

‘ಲವ್ ಮಾಕ್ಟೆಲ್ 3’ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರುಗಳು ಬಂಡವಾಳ ಹೂಡಿದ್ದು, ಸಿನಿಮಾವನ್ನು ಕೃಷ್ಣ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲ ಈ ಸಿನಿಮಾಕ್ಕಿದೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ, ಮುಂತಾದವರು ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್​​ನಲ್ಲಿ ತೊಡಗಿಸಿಕೊಂಡಿದ್ದು, ಸಿನಿಮಾದ ಬಿಡುಗಡೆಯನ್ನು ಏಪ್ರಿಲ್ 10ರಂದು ಮಾಡಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಾಕತ್ತಿದ್ರೆ ಬಂದು ಹಿಡಿ ಎಂದು ಟ್ರಂಪ್​ಗೆ ಸವಾಲೆಸೆದಿದ್ದ ವೆನಿಜುವೆಲಾ ಅಧ್ಯಕ್ಷ; ಸದ್ದಿಲ್ಲದೆ ಬಂಧಿಸಿ ಕರೆದೊಯ್ದ ಅಮೆರಿಕ ಸೇನೆ – Kannada News | Venezuela president challenged Trump to arrest him, ended up caught in military operation

ವಾಷಿಂಗ್ಟನ್, ಜನವರಿ 4: ವೆನಿಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊ (Nicolas Maduro) ಅವರನ್ನು ಅಮೆರಿಕದ ಯೋಧರು ಬಂಧಿಸಿ ಕರೆದೊಯ್ದ ಬೆನ್ನಲ್ಲೇ ವೈಟ್​ಹೌಸ್​ನಿಂದ ವಿಡಿಯೋವೊಂದು ಬಿಡುಗಡೆ ಆಗಿದೆ. ಅದರಲ್ಲಿ ಮಡುರೊ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೇಡಿ (coward) ಎಂದು ಕರೆಯುತ್ತಿರುವುದು, ಸವಾಲು ಎಸೆಯುತ್ತಿರುವುದು ಕೇಳಿಬಂದಿದೆ. ಅಮೆರಿಕದ ಈ ಅಧ್ಯಕ್ಷರೊಂದಿಗೆ ಈ ರೀತಿ ಆಟ ಆಡಿದರೆ ಇದೇ ಶಾಸ್ತಿಯಾಗುತ್ತದೆ ಎಂದು ಈ ವಿಡಿಯೋದಲ್ಲಿ ಮೆಸೇಜ್ ಕೊಡಲಾಗಿದೆ.

ವೆನಿಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊ ತಮ್ಮ ಮಿಲಿಟರಿ ನೆಲೆಯಲ್ಲಿರುವ ಮನೆಯಲ್ಲಿ ಇದ್ದಾಗ ಮುಂಜಾವಿನಲ್ಲಿ ಅಮೆರಿಕದ ಸೈನಿಕರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಹೈ ಸೆಕ್ಯೂರಿಟಿ ವ್ಯವಸ್ಥೆ ಇದ್ದರೂ ಅಮೆರಿಕನ್ ಸೈನಿಕರು ಮನೆಗೆ ನುಗ್ಗಿ ವೆನಿಜುವೆಲಾ ಅಧ್ಯಕ್ಷ ಮಡುರೊ ಮತ್ತವರ ಪತ್ನಿ ಫ್ಲೋರೆಸ್ ಅವರನ್ನು ಹಿಡಿದು, ಕರೆದೊಯ್ದಿದ್ದಾರೆ.

ಇದನ್ನೂ ಓದಿ: ವೆನೆಜುವೆಲಾ ಅಧ್ಯಕ್ಷ ಮಡುರೊ, ಅವರ ಪತ್ನಿಯನ್ನು ಸೆರೆಹಿಡಿದಿದ್ದೇವೆ; ದಾಳಿಯ ಬಳಿಕ ಟ್ರಂಪ್ ಘೋಷಣೆ

ವರ್ಷದ ಹಿಂದೆ ಟ್ರಂಪ್​ಗೆ ಸವಾಲು ಹಾಕಿದ್ದ ಮಡುರೊ

‘ಬಂದು ನನ್ನ ಹಿಡಿ. ಮಿರಾಫ್ಲೋರೆಸ್​ನಲ್ಲಿ ನಾನು ಕಾಯುತ್ತಿರುತ್ತೇನೆ. ತಡ ಮಾಡವೋ ಹೇಡಿ’ ಎಂದು ಆಗಸ್ಟ್ ತಿಂಗಳಲ್ಲಿ ನಿಕೋಲಾಸ್ ಮಡುರೊ ಭಾಷಣವೊಂದರಲ್ಲಿ ಹೇಳಿದ್ದರು. ಮಡುರೊ ಬಂಧನ ಸಾಧ್ಯವಾಗುವಂತಹ ಸುಳಿವನ್ನು ನೀಡಿದವರಿಗೆ ಬಹುಮಾನದ ಮೊತ್ತವನ್ನು ಅಮೆರಿಕ ಸರ್ಕಾರ ಹೆಚ್ಚಿಸಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ನಿಕೋಲಾಸ್ ಈ ಸವಾಲು ಹಾಕಿದ್ದರು.

ಇದೀಗ ಅಮೆರಿಕ ಅಧ್ಯಕ್ಷರ ಗೃಹ ಕಚೇರಿಯಾದ ವೈಟ್​ಹೌಸ್, ವೆನಿಜುವೆಲಾ ಅಧ್ಯಕ್ಷರನ್ನು ಅಪಹಾಸ್ಯ ಮಾಡುವ ವಿಡಿಯೋ ಬಿಡುಗಡೆ ಮಾಡಿದೆ. ಅಮೆರಿಕಕ್ಕೆ ಮಡುರೊ ಸವಾಲು ಎಸೆಯುತ್ತಿರುವ ದೃಶ್ಯದ ಜೊತೆಗೆ, ಅವರನ್ನು ಅಮೆರಿಕನ್ ಸೈನಿಕರು ಹಿಡಿಯುತ್ತಿರುವ ದೃಶ್ಯ ಇವೆಲ್ಲವೂ ಆ ವಿಡಿಯೋದಲ್ಲಿದೆ. ‘ಮಡುರೊ ಅವಕಾಶ ಉಳಿಸಿಕೊಳ್ಳಲಿಲ್ಲ’ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್​ಸೆಟ್ ಹೇಳಿರುವ ದೃಶ್ಯವೂ ಆ ವಿಡಿಯೋದಲ್ಲಿದೆ.

ಇದನ್ನೂ ಓದಿ: ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟರಾ ಟ್ರಂಪ್? ವೆನೆಜುವೆಲಾ ಮೇಲಿನ ಅಮೆರಿಕ ದಾಳಿ ಕುರಿತ ಕುತೂಹಲಕಾರಿ ಸಂಗತಿ ಇಲ್ಲಿದೆ

ಮಾದಕ ವಸ್ತು ಸರಬರಾಜು, ಅಕ್ರಮ ಶಸ್ತ್ರಾಸ್ತ್ರ ಇತ್ಯಾದಿ ವಿವಿಧ ಆರೋಪಗಳನ್ನು ವೆನಿಜುವೆಲಾ ಅಧ್ಯಕ್ಷರ ಮೇಲೆ ಅಮೆರಿಕ ಹಾಕಿದೆ. ಅಮೆರಿಕಕ್ಕೆ ವೆನಿಜುವೆಲಾ ಮೂಲಕ ಕೊಕೇನ್ ಇತ್ಯಾದಿ ಸಾಕಷ್ಟು ಮಾದಕ ವಸ್ತುಗಳು ಸರಬರಾಜು ಆಗುತ್ತಿವೆ. ಅಮೆರಿಕವು ತನ್ನ ನೆರೆ ದೇಶದ ಮೇಲೆ ಆಕ್ರಮಣ ಮಾಡಲು ಇದ್ದ ಕಾರಣಗಳಲ್ಲಿ ಇದೂ ಒಂದು.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

BEL Recruitment 2026: ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ನೇಮಕಾತಿ; ಎಂಜಿನಿಯರಿಂಗ್ ಪದವೀಧರರು ಅರ್ಹರು – Kannada News | BEL Trainee Engineer Recruitment 2026: Apply for 119 Engineering Vacancies

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ತರಬೇತಿ ಎಂಜಿನಿಯರ್‌ಗಳಿಗೆ ಸುವರ್ಣ ಅವಕಾಶವನ್ನು ಘೋಷಿಸಿದೆ. BEL ಒಟ್ಟು 119 ಹುದ್ದೆಗಳಿಗೆ ನೇಮಕಾತಿಯನ್ನು ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BEL ನ ಅಧಿಕೃತ ವೆಬ್‌ಸೈಟ್ bel-india.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅನೇಕ ಎಂಜಿನಿಯರಿಂಗ್ ಪದವೀಧರರು BEL ನಲ್ಲಿ ಉದ್ಯೋಗ ಪಡೆಯುವ ಕನಸು ಕಾಣುತ್ತಾರೆ. ಇದು ಅರ್ಹ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ. BEL ಹೊರಡಿಸಿದ ಅಧಿಸೂಚನೆಯ ಪ್ರಕಾರ, ಅರ್ಜಿ ಪ್ರಕ್ರಿಯೆಯು ಜನವರಿ 9 ರಂದು ಮುಕ್ತಾಯಗೊಳ್ಳುತ್ತದೆ,ಲಿಖಿತ ಪರೀಕ್ಷೆಯು ಜನವರಿ 11 ರಂದು ನಡೆಯಲಿದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ, ವಿಶ್ವವಿದ್ಯಾಲಯ ಅಥವಾ ಕಾಲೇಜಿನಿಂದ ಬಿಇ/ಬಿ.ಟೆಕ್/ಬಿ.ಎಸ್ಸಿ ಎಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು. ವಿವಿಧ ಎಂಜಿನಿಯರಿಂಗ್ ವಿಭಾಗಗಳಿಗೆ ಈ ನೇಮಕಾತಿಯನ್ನು ನಡೆಸಲಾಗುತ್ತಿದೆ. ವಯೋಮಿತಿಗೆ ಸಂಬಂಧಿಸಿದಂತೆ, ಸಾಮಾನ್ಯ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ಜನವರಿ 1, 2026 ರಂತೆ ಗರಿಷ್ಠ ವಯಸ್ಸು 28 ವರ್ಷಗಳು. ಸರ್ಕಾರಿ ನಿಯಮಗಳ ಪ್ರಕಾರ ಕಾಯ್ದಿರಿಸಿದ ವರ್ಗಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು.

ಆಯ್ಕೆ ಹೇಗೆ ಮಾಡಲಾಗುತ್ತದೆ?

2026 ರ ಬಿಇಎಲ್ ಟ್ರೈನಿ ಎಂಜಿನಿಯರ್ ನೇಮಕಾತಿ ಆಯ್ಕೆ ಪ್ರಕ್ರಿಯೆಯು ಕೇವಲ ಲಿಖಿತ ಪರೀಕ್ಷೆಯನ್ನು ಆಧರಿಸಿರುತ್ತದೆ. ಈ ಪರೀಕ್ಷೆಯನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಘಾಜಿಯಾಬಾದ್ (ಉತ್ತರ ಪ್ರದೇಶ) ನಲ್ಲಿ ನಡೆಸಲಾಗುತ್ತದೆ. ಅರ್ಜಿ ನಮೂನೆಯಲ್ಲಿ ಒದಗಿಸಲಾದ ಮಾಹಿತಿಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಪರೀಕ್ಷಿಸಿ ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ, ಅರ್ಜಿ ಸಲ್ಲಿಸುವಾಗ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡುವುದು ಬಹಳ ಮುಖ್ಯ. ಲಿಖಿತ ಪರೀಕ್ಷೆಯು 100 ಅಂಕಗಳಾಗಿದ್ದು, ನಕಾರಾತ್ಮಕ ಅಂಕಗಳು ಅನ್ವಯವಾಗುತ್ತವೆ. ಪ್ರತಿ ತಪ್ಪು ಉತ್ತರಕ್ಕೆ ¼ ಅಂಕವನ್ನು ಕಡಿತಗೊಳಿಸಲಾಗುತ್ತದೆ. ಕನಿಷ್ಠ ಅರ್ಹತಾ ಅಂಕಗಳು ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ-ಎನ್‌ಸಿಎಲ್ ವಿಭಾಗಗಳಿಗೆ 35 ಪ್ರತಿಶತ ಮತ್ತು ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಬಿಡಿ ವಿಭಾಗಗಳಿಗೆ 30 ಪ್ರತಿಶತ.

ಇದನ್ನೂ ಓದಿ: ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ; ಪಿಯುಸಿ ಪಾಸಾಗಿದ್ರೆ ಕೂಡಲೇ ಅರ್ಜಿ ಸಲ್ಲಿಸಿ

ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಮರೆಯದಿರಿ:

ಈ ನೇಮಕಾತಿಗೆ ಅರ್ಜಿ ಶುಲ್ಕ 150 ರೂ + 18% GST. ಶುಲ್ಕವನ್ನು SBI ಕಲೆಕ್ಟ್ (ಆನ್‌ಲೈನ್) ಮೂಲಕ ಪಾವತಿಸಬೇಕು. ಆದಾಗ್ಯೂ, SC, ST ಮತ್ತು PwBD ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸುವುದರಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿರುತ್ತಾರೆ. ಶುಲ್ಕವನ್ನು ಪಾವತಿಸುವಾಗ, ಅಭ್ಯರ್ಥಿಗಳು SBI ಕಲೆಕ್ಟ್‌ನಲ್ಲಿ ನಮೂದಿಸಲಾದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವು ಅರ್ಜಿ ನಮೂನೆಯಲ್ಲಿ ಒದಗಿಸಲಾದ ಅದೇ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸಕ್ಕೆ ಹೊಂದಿಕೆಯಾಗುವುದು ಅಗತ್ಯ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CUET UG 2026: CUET UG ನೋಂದಣಿ ಪ್ರಾರಂಭ; ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಲ್ಲಿ ತಿಳಿಯಿರಿ – Kannada News | CUET UG 2026 Application Open: NTA Registration Dates, Eligibility and Fees

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) 2026ರ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ-ಪದವಿಪೂರ್ವ (CUET-UG) ಕ್ಕೆ ಜನವರಿ 3ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು NTA ಯ ಅಧಿಕೃತ ವೆಬ್‌ಸೈಟ್ cuet.nta.nic.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. CUET UG ನೋಂದಾಯಿಸಲು ಕೊನೆಯ ದಿನಾಂಕ ಜನವರಿ 30, ಮತ್ತು ಅಭ್ಯರ್ಥಿಗಳು ಜನವರಿ 31 ರವರೆಗೆ ಪರೀಕ್ಷಾ ಶುಲ್ಕವನ್ನು ಪಾವತಿಸಬಹುದು. ಅರ್ಜಿ ನಮೂನೆಯಲ್ಲಿ ತಿದ್ದುಪಡಿಗಳನ್ನು ಮಾಡಲು ತಿದ್ದುಪಡಿ ವಿಂಡೋ ಫೆಬ್ರವರಿ 2 ರಿಂದ ಫೆಬ್ರವರಿ 4ರವರೆಗೆ ತೆರೆದಿರುತ್ತದೆ. ಈ ಸಮಯದಲ್ಲಿ, ಅಭ್ಯರ್ಥಿಗಳು ತಮ್ಮ ಅರ್ಜಿಗಳಿಗೆ ಅಗತ್ಯ ತಿದ್ದುಪಡಿಗಳನ್ನು ಮಾಡಲು ಸಾಧ್ಯವಾಗುತ್ತದೆ.

CUET UG ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ರಾಜ್ಯ ಅಥವಾ ಕೇಂದ್ರ ಮಂಡಳಿಯಿಂದ 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಮಧ್ಯಂತರ ಅಥವಾ ಎರಡು ವರ್ಷಗಳ ಪೂರ್ವ-ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರು. ಹೈಯರ್ ಸೆಕೆಂಡರಿ ಪ್ರಮಾಣಪತ್ರ (ವೃತ್ತಿಪರ) ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹ ಅರ್ಹರು ಮತ್ತು CUET-UG ಗೆ ಅರ್ಜಿ ಸಲ್ಲಿಸಬಹುದು.

AICTE ಅಥವಾ ರಾಜ್ಯ ಮಂಡಳಿಯಿಂದ ಮಾನ್ಯತೆ ಪಡೆದ ಕನಿಷ್ಠ ಮೂರು ವರ್ಷಗಳ ಅವಧಿಯ ಡಿಪ್ಲೊಮಾ ಹೊಂದಿರುವವರು, NIOS ಸೀನಿಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಕನಿಷ್ಠ ಐದು ವಿಷಯಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮತ್ತು NDA ಯ ಜಂಟಿ ಸೇವೆಗಳ ವಿಭಾಗದ ಎರಡು ವರ್ಷಗಳ ಕೋರ್ಸ್‌ನ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹ CUET UGಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ; ಪಿಯುಸಿ ಪಾಸಾಗಿದ್ರೆ ಕೂಡಲೇ ಅರ್ಜಿ ಸಲ್ಲಿಸಿ

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ, ಮೂರು ವಿಷಯಗಳಿಗೆ 1,000 ರೂ. ಅರ್ಜಿ ಶುಲ್ಕ. ಪ್ರತಿ ಹೆಚ್ಚುವರಿ ವಿಷಯಕ್ಕೆ 400 ವಿಧಿಸಲಾಗುತ್ತದೆ. ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗಗಳಿಗೆ,900ರೂ. ಮತ್ತು ಹೆಚ್ಚುವರಿ ವಿಷಯಕ್ಕೆ 375 ರೂ. ಶುಲ್ಕ. ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ/ಪಿಡಬ್ಲ್ಯೂಬಿಡಿ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ, ಮೂರು ವಿಷಯಗಳಿಗೆ 800 ಮತ್ತು ಹೆಚ್ಚುವರಿ ವಿಷಯಕ್ಕೆ 350 ರೂ. ಶುಲ್ಕ.

ಅರ್ಜಿ ಸಲ್ಲಿಸುವುದು ಹೇಗೆ?

  • ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಮೊದಲು cuet.nta.nic.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
  • ಮುಖಪುಟದಲ್ಲಿ ಲಭ್ಯವಿರುವ CUET UG 2026 ಅರ್ಜಿ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಹೊಸ ಪುಟದಲ್ಲಿ ನೋಂದಾಯಿಸಿದ ನಂತರ, ಲಾಗಿನ್ ಆಗಿ.
  • ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಶುಲ್ಕವನ್ನು ಪಾವತಿಸಿ.
  • ಫಾರ್ಮ್ ಅನ್ನು ಸಲ್ಲಿಸಿದ ನಂತರ, ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿ ಮತ್ತು ಅದರ ಮುದ್ರಣವನ್ನು ಸುರಕ್ಷಿತವಾಗಿರಿಸಿ.

ಸಹಾಯವಾಣಿ ಸಂಖ್ಯೆ ಬಿಡುಗಡೆ:

ಯಾವುದೇ ಅಭ್ಯರ್ಥಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆಗಳು ಎದುರಾದರೆ, ಅವರು ಸಹಾಯವಾಣಿ ಸಂಖ್ಯೆ 011-40759000 ಅನ್ನು ಸಂಪರ್ಕಿಸಬಹುದು ಅಥವಾ cuet-ug@nta.ac.in ಗೆ ಇಮೇಲ್ ಮಾಡಬಹುದು. ಅಭ್ಯರ್ಥಿಗಳು ಇತ್ತೀಚಿನ ಪರೀಕ್ಷಾ ನವೀಕರಣಗಳಿಗಾಗಿ nta.ac.in ಮತ್ತು cuet.nta.nic.in ವೆಬ್‌ಸೈಟ್‌ಗಳನ್ನು ನಿಯಮಿತವಾಗಿ ಪರಿಶೀಲಿಸಲು ಸೂಚಿಸಲಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೀತಿಸಿ ಮದ್ವೆ: ಹಸುಗೂಸು ಸೇರಿ 3 ಹೆಣ್ಮಕ್ಕಳನ್ನ ಪತ್ನಿ ಕೈಗಿಟ್ಟು ಪತಿ ಪರಾರಿ – Kannada News | A Man leaving His Wife Over three Baby girls at Bengaluru

ಬೆಂಗಳೂರು, (ಜನವರಿ 04): ಮೂರೂ ಹೆಣ್ಣು ಮಕ್ಕಳು (Children) ಎಂದು ಪತ್ನಿಗೆ ಕೈಕೊಟ್ಟು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದ್ದು, ಈ ಸಂಬಂಧ ಈಶಾನ್ಯ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರೀಶ್, ಪತ್ನಿಗೆ ಕೈಕೊಟ್ಟು ಪರಾರಿಯಾದ ವ್ಯಕ್ತಿ. ಹರೀಶ್ ಮೂಲತಃ ರಾಜಸ್ಥಾನದವನಾಗಿದ್ದು, ಬೆಂಗಳೂರಿನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಮಾಡುತ್ತಿದ್ದಾನೆ. ಈತ ವರಲಕ್ಷ್ಮೀ ಎಂಬ ಸ್ಟಾಫ್ ನರ್ಸ್​ನ ಪ್ರೀತಿಸಿ ಮದುವೆ ಆಗಿದ್ದ. ಬಳಿಕ ಕುಟುಂಬಸ್ಥರನ್ನು ಒಪ್ಪಿಸಿ ಮದುವೆಯಾಗಿದ್ದ. ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಈ ಜೋಡಿಗೆ ಹುಟ್ಟಿದ ಮೂವರು ಮಕ್ಕಳು ಕೂಡ ಹೆಣ್ಣು. ಇದರಿಂದ ಹರೀಶ್ ವರಲಕ್ಷ್ಮೀಗೆ ಕೈಕೊಟ್ಟು ನಾಪತ್ತೆಯಾಗಿದ್ದಾನೆ.

ಇದು ಹರೀಶ್​ನ ಅಸಮಾಧಾನಕ್ಕೆ ಕಾರಣವಾಗಿದೆ. ಮೊದಲ ಇಬ್ಬರು ಮಕ್ಕಳು ಹೆಣ್ಣು ಎಂದು ಗೊತ್ತಾದಾಗ ಮೂರನೇಯ ಬಾರಿಗೆ ಗಂಡು ಹುಟ್ಟಬಹುದು ಎಂಬ ಆಸೆಯಲ್ಲಿದ್ದ. ಇದೀಗ ಹರೀಶ್ ಪತ್ನಿ ವಿಜಯಲಕ್ಷ್ಮೀ, ಕಳೆದ ಒಂದೂವರೆ ತಿಂಗಳ ಹಿಂದೆ ಹಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದೀಗ ಒಂದೂವರೆ ತಿಂಗಳ ಹಸಗೂಸು ಹಾಗೂ ಇಬ್ಬರು ಮಕ್ಕಳನ್ನ ಪತ್ನಿಯ ಮಡಿಲಿಗೆ ಹಾಕಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಬೆಂಗಳೂರು, (ಪ್ರೀತಿಸಿದ ಹುಡುಗನ ವಶೀಕರಣ ಮಾಡುವುದಾಗಿ ನಂಬಿಸಿ ಯುವತಿಗೆ ಲಕ್ಷ ಲಕ್ಷ ವಂಚನೆ!

ಪತಿ ಕೈಕೊಟ್ಟ ಬೆನ್ನಲ್ಲೇ ಪತ್ನಿ ವರಲಕ್ಷ್ಮೀ ಆತನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಮೂವರು ಹೆಣ್ಮಕ್ಕಳು ಎಂದು ನಮ್ಮನ್ನು ಬಿಟ್ಟು ಹೋಗಿ ಮತ್ತೊಂದು ಮಹಿಳೆ ಜೊತೆ ವಾಸವಿದ್ದಾನೆ. ಈಗ ನನಗೆ ಮೂವರು ಮಕ್ಕಳನ್ನು ಸಾಕೋದಕ್ಕೆ ಆಗುತ್ತಿಲ್ಲ. ಮಕ್ಕಳ ಶಾಲಾ ಫೀಸ್, ಮನೆ ಬಾಡಿಗೆ ಕಟ್ಟಲೂ ಕೂಡ ಆಗುತ್ತಿಲ್ಲ. ಇದೀಗ ಹುಟ್ಟಿರುವ ಹಸುಗೂಸನ್ನ ಆರೈಕೆ ಮಾಡೋದೇ ಕಷ್ಟವಾಗಿದೆ ಎಂದು ಆರೋಪಿಸಿ ಒಂದು ತಿಂಗಳ ಹಿಂದೆಯೇ ಈಶಾನ್ಯ ವಿಭಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಆದ್ರೆ ಪೊಲೀಸರು, ಹರೀಶನನ್ನು ಕರೆಸಿಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾಳೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತೈಲಸಮೃದ್ಧ ವೆನಿಜುವೆಲಾ ಮೇಲೆ ಅಮೆರಿಕ ದಾಳಿ; ಭಾರತಕ್ಕೆ ಎಷ್ಟು ನಷ್ಟ? – Kannada News | Venezuela crisis, Know the impact on India and its economy

ನವದೆಹಲಿ, ಜನವರಿ 4: ಅಪಾರ ತೈಲ ಸಂಪತ್ತಿರುವ ವೆನಿಜುವೆಲಾ (Venezuela) ಮೇಲೆ ಅಮೆರಿಕ ದಾಳಿ ಮಾಡಿ ಅಲ್ಲಿನ ಅಧ್ಯಕ್ಷರು ಹಾಗೂ ಪತ್ನಿಯನ್ನು ಬಂಧಿಸಲಾಗಿದೆ. ಆ ದೇಶದಲ್ಲಿ ಮುಂದಿನ ದಿನಗಳಲ್ಲಿ ಆಡಳಿತ ಹೇಗೆ ಇರುತ್ತೋ, ಯಾರ ನಾಯಕತ್ವ ಇರಲಿದೆ ಎಂಬುದು ಗೊತ್ತಿಲ್ಲ. ಇದೇ ವೇಳೆ ಹಲವು ದಶಕಗಳಿಂದ ಆ ದೇಶದ ಜೊತೆ ಭಾರತದ ವ್ಯಾಪಾರ ಸಂಬಂಧ ಇದೆ. ಹೀಗಾಗಿ, ವೆನಿಜುವೆಲಾ ಬಿಕ್ಕಟ್ಟು ಭಾರತದ ಮೇಲೆ ಎಷ್ಟು ಪರಿಣಾಮ ಬೀರಬಹುದು ಎನ್ನುವ ಪ್ರಶ್ನೆ ಸಹಜ.

ಜಾಗತಿಕ ಚಿಂತನಾ ವೇದಿಕೆಯಾದ ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (ಜಿಟಿಆರ್​ಐ) ಪ್ರಕಾರ, ವೆನಿಜುವೆಲಾ ಬಿಕ್ಕಟ್ಟಿನಿಂದ ಭಾರತದ ಮೇಲೆ ಹೆಚ್ಚಿನ ಪರಿಣಾಮವಾಗದು. ಹಾಗೇಕೆಂದು ಅದು ವಿಶ್ಲೇಷಣೆ ಕೂಡ ಮಾಡಿದೆ. ಹಿಂದಿನ ಎರಡು ದಶಕಗಳಲ್ಲಿ (2000ರ ನಂತರ) ವೆನಿಜುವೆಲಾದ ಕಚ್ಚಾ ತೈಲವನ್ನು ಭಾರತ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿತ್ತು. ಆದರೆ, 2019ರಲ್ಲಿ ಆ ದೇಶದ ಮೇಲೆ ಅಮೆರಿಕ ನಿಷೇಧ ಹಾಕಿದ ಬಳಿಕ ಭಾರತವು ಅಲ್ಲಿಂದ ತೈಲ ಖರೀದಿ ನಿಲ್ಲಿಸಿದು. ಇತರ ವಾಣಿಜ್ಯ ವಹಿವಾಟಿಗೂ ಸ್ವಲ್ಪ ಕತ್ತರಿ ಹಾಕಿತು.

ಇದನ್ನೂ ಓದಿ: ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟರಾ ಟ್ರಂಪ್? ವೆನೆಜುವೆಲಾ ಮೇಲಿನ ಅಮೆರಿಕ ದಾಳಿ ಕುರಿತ ಕುತೂಹಲಕಾರಿ ಸಂಗತಿ ಇಲ್ಲಿದೆ

2024-25ರಲ್ಲಿ ವೆನಿಜುವೆಲಾದಿಂದ ಭಾರತ ಎಲ್ಲಾ ಸರಕುಗಳನ್ನು ಸೇರಿ ಮಾಡಿಕೊಂಡ ಆಮದು ಒಟ್ಟು 364.5 ಮಿಲಿಯನ್ ಡಾಲರ್. ಇದರಲ್ಲಿ ಕಚ್ಛಾ ತೈಲವೇ 255.3 ಮಿಲಿಯನ್ ಡಾಲರ್ ಇದೆ. ಹಿಂದಿನ ವರ್ಷದಲ್ಲಿ (2023-24) 1.4 ಬಿಲಿಯನ್ ಡಾಲರ್​ನಷ್ಟು ಕಚ್ಚಾ ತೈಲವನ್ನು ವೆನಿಜುವೆಲಾದಿಂದ ಭಾರತ ಆಮದು ಮಾಡಿಕೊಂಡಿತ್ತು. ಅದಕ್ಕೆ ಮರುವರ್ಷ ಭಾರತದ ಆಮದು ಗಣನೀಯವಾಗಿ ತಗ್ಗಿದೆ.

ಇನ್ನು, ವೆನಿಜುವೆಲಾಗೆ ಭಾರತದ ರಫ್ತು ಕೂಡ ಹೆಚ್ಚೇನಿಲ್ಲ. 95.3 ಮಿಲಿಯನ್ ಡಾಲರ್​ನಷ್ಟು ಮಾತ್ರವೇ ಭಾರತ ರಫ್ತು ಮಾಡಿರುವುದು. ಇದರಲ್ಲಿ 41.4 ಮಿಲಿಯನ್ ಡಾಲರ್​ನಷ್ಟು ರಫ್ತು ಫಾರ್ಮಾ ಉತ್ಪನ್ನಗಳದ್ದೇ ಇದೆ ಎಂದು ಜಿಟಿಆರ್​ಐನ ವರದಿ ಹೇಳುತ್ತದೆ.

ಇದನ್ನೂ ಓದಿ: UPI transactions: 2025ರಲ್ಲಿ 22,830 ಕೋಟಿ ಯುಪಿಐ ಟ್ರಾನ್ಸಾಕ್ಷನ್; ಡಿಸೆಂಬರ್​ನಲ್ಲಿ 2,160 ಕೋಟಿ ವಹಿವಾಟು

ವೆನಿಜುವೆಲಾ ಜೊತೆ ರಫ್ತಾಗಲೀ ಆಮದಾಗಲೀ ಭಾರತ ವ್ಯಾಪಾರ ಪ್ರಮಾಣ ಕಡಿಮೆಯೇ. ಹೀಗಾಗಿ, ವೆನಿಜುವೆಲಾದಲ್ಲಿ ಮುಂದಿನ ಪರಿಸ್ಥಿತಿ ಏನೇ ಆದರೂ ಭಾರತದ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರುವುದಿಲ್ಲ.

ವೆನಿಜುವೆಲಾದಲ್ಲಿ ಭಾರೀ ಪ್ರಮಾಣದಲ್ಲಿ ತೈಲ ಸಂಪತ್ತು ಇದೆ. ವಿಶ್ವದ ತೈಲ ಸಂಗ್ರಹದಲ್ಲಿ ಶೇ. 18ರಷ್ಟು ತೈಲವು ವೆನಿಜುವೆಲಾದಲ್ಲೇ ಇದೆ. ಸೌದಿ ಅರೇಬಿಯಾದಲ್ಲಿರುವುದಕ್ಕಿಂತಲೂ ಹೆಚ್ಚಿನ ತೈಲವು ವೆನಿಜುವೆಲಾದಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

T20 World Cup: ಭಾರತದ ನೆಲದಲ್ಲಿ ಆಡುವುದಿಲ್ಲ ಎಂದ ಬಾಂಗ್ಲಾ; ತಕ್ಕ ಪ್ರತ್ಯುತ್ತರ ನೀಡಿದ ಬಿಸಿಸಿಐ – Kannada News | 2026 T20 World Cup: Bangladesh Refuses India Matches Amidst IPL Row

2026 ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಫೆಬ್ರವರಿ 7 ರಂದು ಭಾರತ ಮತ್ತು ಶ್ರೀಲಂಕಾದಲ್ಲಿ ಆರಂಭವಾಗಲಿದೆ. ಈ ವಿಶ್ವಕಪ್‌ಗೆ ಬಹುತೇಕ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಪಂದ್ಯಾವಳಿಗಾಗಿ ಎಲ್ಲಾ 20 ತಂಡಗಳನ್ನು ಅಂತಿಮಗೊಳಿಸಲಾಗಿದೆ ಮತ್ತು ಎಲ್ಲಾ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಟಿಕೆಟ್ ಮಾರಾಟವೂ ಪ್ರಾರಂಭವಾಗಿದೆ. ಆದಾಗ್ಯೂ, ಪಂದ್ಯಾವಳಿ ಪ್ರಾರಂಭವಾಗುವ ಸುಮಾರು ಒಂದು ವಾರಕ್ಕೂ ಮೊದಲು, ಐಸಿಸಿಗೆ ಹೊಸ ತಲೆನೋವು ಶುರುವಾಗಿದೆ. ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶ ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸದಿರಲು ನಿರ್ಧರಿಸಿದೆ. ಹಾಗೆಯೇ ಬಾಂಗ್ಲಾ ತಂಡದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ (ICC) ಇಮೇಲ್ ಮಾಡಿದೆ. ಆದರೆ ಬಾಂಗ್ಲಾದೇಶದ ಈ ಬೆದರಿಕೆಗೆ ತಕ್ಕ ಪ್ರತ್ಯುತ್ತರ ನೀಡಿರುವ ಬಿಸಿಸಿಐ (BCCI), ಈಗ ಟಿ20 ವಿಶ್ವಕಪ್ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದಿದೆ.

ಭಾರತದ ನೆಲದಲ್ಲಿ ಆಡುವುದಿಲ್ಲ

ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್​ರನ್ನು ಐಪಿಎಲ್​ನಿಂದ ಹೊರಗಿಟ್ಟಿರುವುದರಿಂದ ಕೆರಳಿರುವ ಬಾಂಗ್ಲಾ ಕ್ರಿಕೆಟ್ ಮಂಡಳಿ, ಭಾರತಕ್ಕೆ ತನ್ನ ತಂಡವನ್ನು ಕಳುಹಿಸದಿರಲು ನಿರ್ಧರಿಸಿದೆ. ವಾಸ್ತವವಾಗಿ ಬಾಂಗ್ಲಾ ತಂಡವನ್ನು ಭಾರತಕ್ಕೆ ಕಳುಹಿಸುವುದರ ಬಗ್ಗೆ ಚರ್ಚಿಸಲು 17 ಬಿಸಿಬಿ ನಿರ್ದೇಶಕರು ಸಭೆ ಸೇರಿದ್ದರು. ಈ ಸಭೆಯಲ್ಲಿ ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಹೊಸ ನಿರ್ಧಾರ ತೆಗೆದುಕೊಂಡಿದ್ದು, ಬಾಂಗ್ಲಾದೇಶ ತನ್ನ ಯಾವುದೇ ವಿಶ್ವಕಪ್ ಪಂದ್ಯಗಳನ್ನು ಭಾರತದ ನೆಲದಲ್ಲಿ ಆಡದಿರಲು ನಿರ್ಧರಿಸಲಾಗಿದೆ. ಹಾಗೆಯೇ ಭದ್ರತಾ ಕಾರಣಗಳಿಂದಾಗಿ, ಟಿ20 ವಿಶ್ವಕಪ್‌ಗಾಗಿ ತಂಡವನ್ನು ಭಾರತಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಬಿ, ಐಸಿಸಿಗೆ ಮೇಲ್ ಮಾಡಿದೆ.

ವ್ಯವಸ್ಥಾಪನಾ ದೃಷ್ಟಿಯಿಂದ ಅಸಾಧ್ಯ

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಕಳುಹಿಸಿರುವ ಈಮೇಲ್​ಗೆ ಇದುವರೆಗೆ ಐಸಿಸಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದಾಗ್ಯೂ ಬಾಂಗ್ಲಾದೇಶ ತಂಡದ ಪಂದ್ಯಗಳನ್ನು ಸ್ಥಳಾಂತರಿಸುವ ಕಲ್ಪನೆಯನ್ನು ಬಿಸಿಸಿಐ ತಳ್ಳಿಹಾಕಿದ್ದು, ವೇಳಾಪಟ್ಟಿಯನ್ನು ಈಗ ಬದಲಿಸುವುದು ವ್ಯವಸ್ಥಾಪನಾ ದೃಷ್ಟಿಯಿಂದ ಅಸಾಧ್ಯ ಎಂದಿದೆ. ಹೀಗಾಗಿ ಬಿಸಿಸಿಐ ಹಾಗೂ ಬಿಸಿಬಿ ನಡುವಿನ ಈ ಪ್ರತಿಷ್ಠೆಯ ಹೋರಾಟದಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಬಾಂಗ್ಲಾದೇಶ ವಿಶ್ವಕಪ್ ವೇಳಾಪಟ್ಟಿ

  • ಬಾಂಗ್ಲಾದೇಶ vs ವೆಸ್ಟ್ ಇಂಡೀಸ್: ಫೆಬ್ರವರಿ 7, ಕೋಲ್ಕತ್ತಾ
  • ಬಾಂಗ್ಲಾದೇಶ vs ಇಟಲಿ: ಫೆಬ್ರವರಿ 9, ಕೋಲ್ಕತ್ತಾ
  • ಬಾಂಗ್ಲಾದೇಶ vs ಇಂಗ್ಲೆಂಡ್: ಫೆಬ್ರವರಿ 14, ಕೋಲ್ಕತ್ತಾ
  • ಬಾಂಗ್ಲಾದೇಶ vs ನೇಪಾಳ: ಫೆಬ್ರವರಿ 17, ಮುಂಬೈ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುದುರೆಯಾ? ಹೆಗ್ಗಣವಾ? ಹೊಸ ಸಿನಿಮಾ ಘೋಷಿಸಿದ ಡಾಲಿ ಧನಂಜಯ್ – Kannada News | Daali Dhananjay announce new movie but as producer

ಮದುವೆ ಆದ ಬಳಿಕ ಡಾಲಿ ಧನಂಜಯ್ (Daali Dhananjay) ಕಾಣೆ ಆಗಿದ್ದಾರೆ ಎಂಬುದು ಅಭಿಮಾನಿಗಳ ದೂರು. ಅಸಲಿಗೆ ಡಾಲಿ ಧನಂಜಯ್ ನಾಯಕನಾಗಿ ನಟಿಸಿದ ಕನ್ನಡ ಸಿನಿಮಾ ಒಂದು ಬಿಡುಗಡೆ ಆಗಿ ಎರಡು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಪ್ರಸ್ತುತ ಡಾಲಿ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಅವುಗಳ ಬಿಡುಗಡೆ ದಿನಾಂಕ ಖಾತ್ರಿ ಆಗಿಲ್ಲ. ಇದೆಲ್ಲದರ ನಡುವೆ ಡಾಲಿ ಧನಂಜಯ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆದರೆ ನಾಯಕನಾಗಿ ಅಲ್ಲ ಬದಲಿಗೆ ನಿರ್ಮಾಪಕನಾಗಿ.

ಡಾಲಿ ಧನಂಜಯ್ ಅವರು ‘ಡಾಲಿ ಪಿಕ್ಚರ್ಸ್’ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದು ಭಿನ್ನ ಕತೆಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬರುತ್ತಿದ್ದಾರೆ. ಡಾಲಿಯ ನಿರ್ಮಾಣ ಸಂಸ್ಥೆಯ ವಿಶೇಷತೆಯೆಂದರೆ ಮಾಸ್, ಮಸಾಲ, ಕಮರ್ಶಿಯಲ್ ಸಿನಿಮಾಗಳ ಬದಲಿಗೆ ಕತೆ ಹೊಂದಿರುವ, ಸಾಮಾನ್ಯ ಪ್ರೇಕ್ಷಕನಿಗೆ ಕನೆಕ್ಟ್ ಆಗುವ ಸಿನಿಮಾಗಳನ್ನಷ್ಟೆ ಅವರು ನಿರ್ಮಿಸುತ್ತಾ ಬರುತ್ತಿದ್ದಾರೆ. ಅದರಲ್ಲೂ ಪ್ರತಿಭಾವಂತ ಹೊಸ ನಿರ್ದೇಶಕರುಗಳಿಗೆ, ನಟರುಗಳಿಗೆ ಅವಕಾಶ ಕೊಡುತ್ತಾ ಬರುತ್ತಿದ್ದಾರೆ. ಇದೀಗ ಡಾಲಿ ಪಿಕ್ಚರ್ಸ್ ಕಡೆಯಿಂದ ಹೊಸ ಸಿನಿಮಾ ಘೋಷಿಸಿದ್ದಾರೆ ನಿರ್ಮಾಪಕ ಡಾಲಿ.

ಡಾಲಿ ಧನಂಜಯ್ ಅವರ ಆಪ್ತ ಮಿತ್ರರಲ್ಲಿ ಒಬ್ಬರಾಗಿರು ಮೈಸೂರು ಪೂರ್ಣ ನಾಯಕನಾಗಿ ನಟಿಸಿರುವ ‘ಹೆಗ್ಗಣ ಮುದ್ದು’ ಹೆಸರಿನ ಸಿನಿಮಾವನ್ನು ಘೋಷಿಸಲಾಗಿದ್ದು, ಸಿನಿಮಾದ ಬಿಡುಗಡೆ ಆದಷ್ಟು ಶೀಘ್ರವೇ ಆಗಲಿದೆ ಎಂದಿದ್ದಾರೆ. ಸಿನಿಮಾನಲ್ಲಿ ಮೈಸೂರು ಪೂರ್ಣ ಜೊತೆಗೆ ನಾಯಕಿಯಾಗಿ ಖ್ಯಾತ ಕಲಾವಿದ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ನಟಿಸುತ್ತಿದ್ದಾರೆ. ಈ ಹಿಂದೆ ಶಿವರಾಜ್ ಕುಮಾರ್ ನಟನೆಯ ‘ವೇದ’ ಸಿನಿಮಾನಲ್ಲಿ ನಟಿಸಿ ಅದಿತಿ ಸಾಗರ್ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:ನಾನು ಡಾಲಿ ಧನಂಜಯ್ ಅಭಿಮಾನಿ ಎಂದ ಸಿದ್ಧಾರ್ಥ್, ಕೊಟ್ಟರು ಕಾರಣ

‘ಹೆತ್ತವರಿಗೆ ಹೆಗ್ಗಣ ಮುದ್ದು’ ಗಾದೆಯಿಂದ ಸ್ಪೂರ್ತಿ ಪಡೆದು ಸಿನಿಮಾದ ಹೆಸರನ್ನು ಇರಿಸಲಾಗಿದೆ. ವ್ಯಕ್ತಿ ಕುದುರೆಯೋ ಅಥವಾ ಹೆಗ್ಗಣವೊ ಎಂಬ ಜಿಜ್ಞಾಸೆ ಸಿನಿಮಾದ ಕತೆಯಲ್ಲಿ ಇದೆ. ಸಿನಿಮಾವನ್ನು ಅವಿನಾಶ್ ಬಳೆಕ್ಕಳ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊಟ್ಟ ಮೊದಲ ನಿರ್ದೇಶನದ ಸಿನಿಮಾ ಆಗಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು ಸಿನಿಮಾದ ಬಿಡುಗಡೆ ಆದಷ್ಟು ಶೀಘ್ರವಾಗಿ ಆಗಲಿದೆ. ಅಂದಹಾಗೆ ಇದು ಡಾಲಿ ನಿರ್ಮಾಣ ಮಾಡುತ್ತಿರುವ ಆರನೇ ಸಿನಿಮಾ ಇದಾಗಿದೆ.

ತಮ್ಮ ನಿರ್ಮಾಣದ ಸಿನಿಮಾಗಳಲ್ಲಿ ಡಾಲಿ ಧನಂಜಯ್ ಅತಿಥಿ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ‘ಹೆಗ್ಗಣ ಮುದ್ದು’ ಸಿನಿಮಾನಲ್ಲಿಯೂ ಡಾಲಿ ನಟಿಸುವ ಸಾಧ್ಯತೆ ಇದೆ. ಇನ್ನು ಡಾಲಿ ಧನಂಜಯ್ ಪ್ರಸ್ತುತ ‘ಜಿಂಗೊ’, ‘ಹಲಗಲಿ’, ‘ಅಣ್ಣ ಫ್ರಂ ಮೆಕ್ಸಿಕೊ’, ‘666 ಆಪರೇಷನ್ ಡ್ರೀಮ್ ಥಿಯೇಟರ್’, ‘ಉತ್ತರಕಾಂಡ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಳ್ಳಾರಿ ಗಲಭೆ: ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಪತ್ನಿ, ಗನ್​​ಮ್ಯಾನ್​​ಗಳ ಬಗ್ಗೆ ಜನಾರ್ದನ ರೆಡ್ಡಿ ಏನಂದ್ರು ನೋಡಿ – Kannada News | Bellary violence: Gali Janardhan reddy Talks about Congress MLA Bharath Reddy And His Wife Gunman

ಬಳ್ಳಾರಿ, (ಜನವರಿ 04): ಬ್ಯಾನರ್​ ಕಟ್ಟು ಸಂಬಂಧ ಜನವರಿ 1ರಂದು ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ಸಂಘರ್ಷದಲ್ಲಿ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದು, ಇದೀಗ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಬಳ್ಳಾರಿ ಘರ್ಷಣೆ ಬಗ್ಗೆ ಕಾಂಗ್ರೆಸ್, ಬಿಜೆಪಿ ಆರೋಪ ಪ್ರತ್ಯಾರೋಪ ಭುಗಿಲೆದ್ದಿದೆ. ಈ ಸಂಬಂಧ ಶಾಸಕ ಗಾಲಿ ಜನಾರ್ದನ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 11.30ಕ್ಕೆ ಎಎಸ್ಪಿ ರವಿಕುಮಾರ್ ಜೊತೆ ನಾನು ಪೋನ್ ನಲ್ಲಿ ಮಾತಾಡಿದೆ‌‌. ನಾಲ್ಕು ಮಂದಿ ಗನ್ ಮ್ಯಾನ್ ಗಳ ಪೈಕಿ ಅದರಲ್ಲಿ ಗುರುಚರಣ್‌ ಅವರ ಗುಂಡು ಹಾರಿಸಿದ್ದು ಕನ್ಪರ್ಮ್ ಆಗಿದೆ. ಕಾರ್ಯಕ್ರಮ ಸಿದ್ಧತೆಗಾಗಿ ಭರತ್ ರೆಡ್ಡಿ ಶ್ರೀಮತಿ ಅವರು ಓಡಾಡಿಕೊಂಡು ಇದೋದಕ್ಕೆ ಭರತ್ ರೆಡ್ಡಿ ಜತೆಗೂ ಇವರನ್ನ ಇಟ್ಕೊಂಡಿದ್ದರು. ಸೋಷಿಯಲ್ ಮೀಡಿಯಾದ ವೀಡಿಯೋದಿಂದ ನೋಡಿದ್ದೀನಿ. ಭರತ್ ರೆಡ್ಡಿ ಅವರೇ ತಮ್ಮ‌ ಪ್ಯಾಮಿಲಿ ಭದ್ರತೆಗಾಗಿ ಖಾಸಗಿ ಗನ್ ಮ್ಯಾನ್ ಗಳನ್ನ ಇಟ್ಕೊಂಡಿದ್ದಾರೆ. ಭರತ್‌ರೆಡ್ಡಿ ಗನ್ ಮ್ಯಾನ್‌ ಗಳನ್ನ‌ ಸತೀಶ್ ರೆಡ್ಡಿ ಅವರು ಇಟ್ಕೊಂಡಿದ್ರು. ಹಾಗಾಗಿ ಭರತ್ ರೆಡ್ಡಿ ಅವರನ್ನ ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

T20 World Cup: ಭಾರತಕ್ಕೆ ಬರಲ್ಲ ಎನ್ನುತ್ತಲೇ ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಬಾಂಗ್ಲಾ – Kannada News | Bangladesh T20 World Cup Squad Out: Mustafizur Controversy Escalates India Ties

ಮುಸ್ತಾಫಿಜುರ್ ರೆಹಮಾನ್ (Mustafizur Rahman) ಅವರನ್ನು ಐಪಿಎಲ್‌ನಿಂದ (IPL) ಹೊರಹಾಕಿದ ಬಳಿಕ ಹುಟ್ಟಿಕೊಂಡಿರುವ ವಿವಾದ ಇದೀಗ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಮತ್ತಷ್ಟು ಬಿರುಕು ಮೂಡಿಸಿದೆ. ಮುಸ್ತಾಫಿಜುರ್​ರನ್ನು ಐಪಿಎಲ್‌ನಿಂದ ಹೊರಹಾಕಿರುವುದಕ್ಕೆ ಕೆರಳಿರುವ ಬಾಂಗ್ಲಾ ಕ್ರಿಕೆಟ್ ಮಂಡಳಿ, ಭಾರತಕ್ಕೆ ಟಿ20 ವಿಶ್ವಕಪ್ ಆಡಲು ಬರುವುದಿಲ್ಲ ಎನ್ನುತ್ತಿದೆ. ಇದರ ಜೊತೆಗೆ ಐಪಿಎಲ್ ಪಂದ್ಯಾವಳಿಯನ್ನು ಬಾಂಗ್ಲಾದೇಶದಲ್ಲಿ ಬ್ಯಾನ್ ಮಾಡಲಾಗುತ್ತಿದೆ ಎಂಬ ವರದಿಯೂ ಹರಿದಾಡುತ್ತಿದೆ. ಇದೆಲ್ಲ ವಿವಾದಗಳ ನಡುವೆ ಭಾರತ ಹಾಗೂ ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರು 2026 ರ ಟಿ20 ವಿಶ್ವಕಪ್‌ಗಾಗಿ (T20 World Cup) ಬಾಂಗ್ಲಾದೇಶ ತಂಡ ಪ್ರಕಟಗೊಂಡಿದೆ. ಲಿಟ್ಟನ್ ದಾಸ್ ನಾಯಕತ್ವದ 15 ಆಟಗಾರರ ತಂಡವನ್ನು ಬಾಂಗ್ಲಾ ಕ್ರಿಕೆಟ್ ಮಂಡಳಿ ಘೋಷಿಸಿದೆ. ಬಾಂಗ್ಲಾ ತಂಡದಲ್ಲಿರುವ 15 ಆಟಗಾರರಲ್ಲಿ ಐಪಿಎಲ್​ನಿಂದ ಹೊರಬಿದ್ದ ಎಡಗೈ ವೇಗಿ ಮುಸ್ತಾಫಿಜುರ್ ರೆಹಮಾನ್ ಕೂಡ ಸೇರಿದ್ದಾರೆ.

ವಿವಾದದ ನಡುವೆ ಬಾಂಗ್ಲಾ ತಂಡ ಪ್ರಕಟ

ಮೇಲೆ ಹೇಳಿದಂತೆ ಐಪಿಎಲ್ 2026 ರಿಂದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಹೊರಗಿಟ್ಟಿರುವುದು ಕೋಲಾಹಲ ಸೃಷ್ಟಿಸಿದೆ. ಮುಸ್ತಾಫಿಜುರ್ ಅವರನ್ನು ಹೊರಗಿಟ್ಟಿದ್ದರಿಂದ ಬಾಂಗ್ಲಾದೇಶ ಕ್ರೀಡಾ ಸಚಿವಾಲಯವು ಅಸಮಾಧಾನಗೊಂಡಿದ್ದು, ಬಿಸಿಸಿಐನ ಈ ನಿರ್ಧಾರ ಬಾಂಗ್ಲಾದೇಶ ಕ್ರಿಕೆಟ್ ಮತ್ತು ಅದರ ಆಟಗಾರರಿಗೆ ಮಾಡಿದ ಅವಮಾನವೆಂದು ಆರೋಪಿಸಿದೆ. ಬಾಂಗ್ಲಾದೇಶ ಕ್ರೀಡಾ ಸಚಿವಾಲಯದ ಸೂಚನೆಗಳನ್ನು ಅನುಸರಿಸಿ, ಬಿಸಿಬಿ ಮುಸ್ತಾಫಿಜುರ್ ಅವರನ್ನು ಹೊರಗಿಟ್ಟಿರುವ ಬಗ್ಗೆ ಸ್ಪಷ್ಟೀಕರಣವನ್ನು ಕೋರಿ ಬಿಸಿಸಿಐಗೆ ಇಮೇಲ್ ಮಾಡಿದೆ.

ಇದಲ್ಲದೆ, 2026 ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡ ಆಡಲಿರುವ ಪಂದ್ಯಗಳ ಸ್ಥಳವನ್ನು ಬದಲಾಯಿಸುವಂತೆ ಕೋರಿ ಐಸಿಸಿಗೆ ಇಮೇಲ್ ಕೂಡ ಮಾಡಿದೆ. ಬಿಸಿಬಿ ತನ್ನ ಆಟಗಾರರ ಸುರಕ್ಷತೆಯನ್ನು ಪರಿಗಣಿಸಿ ಭಾರತದ ಬದಲು ಶ್ರೀಲಂಕಾದಲ್ಲಿ ಪಂದ್ಯಗಳನ್ನು ನಡೆಸಬೇಕೆಂದು ಒತ್ತಾಯಿಸುತ್ತಿದೆ ಎಂತಲೂ ವರದಿಯಾಗಿದೆ.

ಬಾಂಗ್ಲಾದೇಶದ ಪಂದ್ಯಗಳ ವೇಳಾಪಟ್ಟಿ

ವೇಳಾಪಟ್ಟಿಯ ಪ್ರಕಾರ, ಬಾಂಗ್ಲಾದೇಶ ಫೆಬ್ರವರಿ 7 ರಂದು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ನಂತರ ಫೆಬ್ರವರಿ 9 ರಂದು ಇಟಲಿ ವಿರುದ್ಧ ಆಡಲಿದೆ. ಫೆಬ್ರವರಿ 14 ರಂದು ಬಾಂಗ್ಲಾದೇಶ ಇಂಗ್ಲೆಂಡ್ ವಿರುದ್ಧ ನಿರ್ಣಾಯಕ ಪಂದ್ಯವನ್ನು ಆಡಲಿದೆ. ಎಲ್ಲಾ ಮೂರು ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿವೆ. ಇದಲ್ಲದೆ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನೇಪಾಳ ವಿರುದ್ಧ ತನ್ನ ಅಂತಿಮ ಗುಂಪು ಹಂತದ ಪಂದ್ಯವನ್ನು ಆಡಲಿದೆ.

IPL 2026: ಮುಸ್ತಾಫಿಜುರ್ ರೆಹಮಾನ್ ಐಪಿಎಲ್​ನಿಂದ ನಿಷೇಧ? ಸ್ಪಷ್ಟನೆ ನೀಡಿದ ಬಿಸಿಸಿಐ

2026 ರ ಟಿ20 ವಿಶ್ವಕಪ್‌ಗಾಗಿ ಬಾಂಗ್ಲಾದೇಶ ತಂಡ: ಲಿಟನ್ ದಾಸ್ (ನಾಯಕ), ಮೊಹಮ್ಮದ್ ಸೈಫ್ ಹಸನ್ (ಉಪನಾಯಕ), ತಂಜಿದ್ ಹಸನ್, ಮೊಹಮ್ಮದ್ ಪರ್ವೇಜ್ ಹೊಸೈನ್ ಎಮಾನ್, ತೌಹಿದ್ ಹೃದಯೋಯ್, ಶಮೀಮ್ ಹೊಸೈನ್, ಕಾಜಿ ನೂರುಲ್ ಹಸನ್ ಸೋಹನ್, ಮಹೇದಿ ಹಸನ್, ರಿಶಾದ್ ಹೊಸೈನ್, ನಸುಮ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ತಂಝೀಮ್ ಹಸನ್ ಸಾಕಿಬ್, ತಸ್ಕಿನ್ ಅಹ್ಮದ್, ಮೊಹಮ್ಮದ್ ಶೈಫುದ್ದೀನ್, ಶೋರಿಫುಲ್ ಇಸ್ಲಾಂ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version