ಯಶ್ ದಯಾಳ್ ಈ ಬಾರಿ ಆರ್ಸಿಬಿ ತಂಡದಲ್ಲಿ ಇರುವುದಿಲ್ಲ ಎಂದು ಆರ್ಸಿಬಿ ನಿರ್ದೇಶಕ ಮೋ ಬೋಬಾಟ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರಿಗೆ ಏನು ಸಹಕಾರ ನೀಡಬೇಕು ಅದನ್ನು ಆರ್ಸಿಬಿ ಮಾಡುತ್ತಿದೆ. ಜೋಶ್ ಹ್ಯಾಜಲ್‌ವುಡ್ ಮುಂದಿನ ದಿನಗಳಲ್ಲಿ ತಂಡಕ್ಕೆ ಸೇರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ನವದೆಹಲಿ, ಮಾರ್ಚ್ 24: ನಾವು ಇರಾನ್, ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಮಾತನಾಡಿ, ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಈ ಪ್ರದೇಶದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವುದು ನಮ್ಮ ಗುರಿಯಾಗಿದೆ. ಹಾರ್ಮುಜ್ ಜಲಸಂಧಿಯನ್ನು ತೆರೆಯಲು ನಾವು ಕರೆ ನೀಡಿದ್ದೇವೆ.
ಅಲ್ಲಿನ ದಾಳಿಗಳು ಸ್ವೀಕಾರಾರ್ಹವಲ್ಲ. ನಾಗರಿಕರು, ನಾಗರಿಕ ಮೂಲಸೌಕರ್ಯ ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಭಾರತ ವಿರೋಧಿಸುತ್ತದೆ. ಹಡಗುಗಳ ಚಲನೆಯನ್ನು ಖಚಿತಪಡಿಸಿಕೊಳ್ಳಲು ಭಾರತ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತವು ಮುಂದಿನ ಏಕೈಕ ಮಾರ್ಗವಾಗಿ ಸಂವಾದವನ್ನು ಸೂಚಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಯುದ್ಧದ ಕಾರಣದಿಂದಾಗಿ, ವಿಶೇಷವಾಗಿ ಈ ಪ್ರದೇಶದ ಮೂಲಕ ಹೆಚ್ಚಿನ ಪ್ರಮಾಣದ ಕಚ್ಚಾ ತೈಲ ಮತ್ತು ರಸಗೊಬ್ಬರ ಸಾಗಣೆ ಸವಾಲಿನದ್ದಾಗಿದೆ. ನಮ್ಮ ಸರ್ಕಾರವು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ ನೀಡಿದೆ. ಈ ಸರಕುಗಳು ಎಲ್ಲಿದ್ದರೂ ಭಾರತವನ್ನು ಸುಲಭವಾಗಿ ತಲುಪುವಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ.
ಕಳೆದ ಕೆಲವು ದಿನಗಳಲ್ಲಿ, ಕಚ್ಚಾ ತೈಲ ಮತ್ತು ಎಲ್‌ಪಿಜಿಯನ್ನು ಸಾಗಿಸುವ ಹಡಗುಗಳು ಪ್ರಪಂಚದಾದ್ಯಂತದ ಅನೇಕ ದೇಶಗಳಿಂದ ಭಾರತಕ್ಕೆ ಬಂದಿವೆ. ಮುಂದಿನ ದಿನಗಳಲ್ಲಿ ಈ ಪ್ರಯತ್ನಗಳು ಮುಂದುವರರೆಯಲಿವೆ.
ಈ ಬಿಕ್ಕಟ್ಟಿನ ಸಂದರ್ಭದಲ್ಲಿ, ಗಲ್ಫ್ ದೇಶಗಳಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಯುದ್ಧದ ನಂತರ, 375,000 ಭಾರತೀಯರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. 1,000 ಕ್ಕೂ ಹೆಚ್ಚು ಭಾರತೀಯರು ಇರಾನ್‌ನಿಂದ ಮರಳಿದ್ದಾರೆ. ಅವರಲ್ಲಿ 700 ಕ್ಕೂ ಹೆಚ್ಚು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಇದ್ದಾರೆ.
ದಾಳಿಯಿಂದಾಗಿ ಕೆಲವು ಭಾರತೀಯರು ಸಾವನ್ನಪ್ಪಿದ್ದಾರೆ ಮತ್ತು ಇತರರು ಕಾಣೆಯಾಗಿದ್ದಾರೆ ಎಂಬುದು ತೀವ್ರ ದುಃಖಕರವಾಗಿದೆ. ಗಾಯಗೊಂಡವರಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ.
ಹಾರ್ಮುಜ್ ಜಲಸಂಧಿಯನ್ನು ತೆರೆಯುವ ಬಗ್ಗೆಯೂ ನಾವು ಚರ್ಚಿಸಿದ್ದೇವೆ, ಈ ಅಡಚಣೆ ಸ್ವೀಕಾರಾರ್ಹವಲ್ಲ. ನಾಗರಿಕರು, ನಾಗರಿಕ ಸ್ಥಾಪನೆಗಳು ಮತ್ತು ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಯನ್ನು ಭಾರತ ವಿರೋಧಿಸಿದೆ. ಸುರಕ್ಷಿತ ಸಂಚಾರಕ್ಕಾಗಿ ಭಾರತ ನಿರಂತರವಾಗಿ ಶ್ರಮಿಸುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಮಾತುಕತೆಯನ್ನು ಒಂದು ಮಾರ್ಗವಾಗಿ ಭಾರತ ಸೂಚಿಸಿದೆ. ಎಲ್ಲಾ ಪಕ್ಷಗಳು ಶಾಂತಿಯುತ ಪರಿಹಾರವನ್ನು ಪಡೆಯಲು ಪ್ರೋತ್ಸಾಹಿಸುವುದು ಭಾರತದ ನಿರಂತರ ಪ್ರಯತ್ನವಾಗಿದೆ.
ಭಾರತದ ಒಗ್ಗಟ್ಟಿನ ಧ್ವನಿ ಜಗತ್ತನ್ನು ತಲುಪಲಿ: ಪ್ರಧಾನಿ ಮೋದಿ
ಹಾರ್ಮುಜ್‌ನಲ್ಲಿ ಹಲವಾರು ಭಾರತೀಯ ಹಡಗುಗಳು ಸಿಲುಕಿಕೊಂಡಿವೆ ಮತ್ತು ಅವರಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಸಿಬ್ಬಂದಿ ಇದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ, ಶಾಂತಿ ಮತ್ತು ಸಂವಾದಕ್ಕಾಗಿ ಭಾರತದ ಮೇಲ್ಮನೆಯ ಒಗ್ಗಟ್ಟಿನ ಧ್ವನಿ ಪ್ರಪಂಚದೊಂದಿಗೆ ಪ್ರತಿಧ್ವನಿಸುವುದು ಅತ್ಯಗತ್ಯ. ಸಂಘರ್ಷ ಪ್ರಾರಂಭವಾದಾಗಿನಿಂದ, ನಾನು ಪಶ್ಚಿಮ ಏಷ್ಯಾದ ಹೆಚ್ಚಿನ ದೇಶಗಳ ಮುಖ್ಯಸ್ಥರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಿದ್ದೇನೆ.
ಈ ಯುದ್ಧ ನಮ್ಮ ವ್ಯಾಪಾರ ಮಾರ್ಗಗಳ ಮೇಲೆ ಪರಿಣಾಮ ಬೀರುತ್ತಿದೆ: ಮೋದಿ
ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಅವರು, ಈ ಯುದ್ಧವು ನಮ್ಮ ವ್ಯಾಪಾರ ಮಾರ್ಗಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಪೆಟ್ರೋಲ್, ಡೀಸೆಲ್, ಅನಿಲ ಮತ್ತು ರಸಗೊಬ್ಬರಗಳಂತಹ ಅಗತ್ಯ ವಸ್ತುಗಳ ನಿಯಮಿತ ಪೂರೈಕೆಯಲ್ಲಿ ಅಡಚಣೆ ಉಂಟಾಗುತ್ತಿದೆ. ಸುಮಾರು 10 ಮಿಲಿಯನ್ ಭಾರತೀಯರು ಗಲ್ಫ್ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇದು ಭಾರತಕ್ಕೆ ಪ್ರಮುಖ ಕಳವಳವಾಗಿದೆ.
ದಾವಣಗೆರೆ, ಮಾ,24: ಹರಿಹರದ ಹನಗವಾಡಿ ಸಮೀಪವಿರುವ ಪಂಚಮಸಾಲಿ ಗುರುಪೀಠದಲ್ಲಿ ಆಡಳಿತ ಮಂಡಳಿ ಮತ್ತು ಭಕ್ತರ ನಡುವಿನ ಸಂಘರ್ಷ ತಾರಕಕ್ಕೇರಿದೆ. 2008ರಿಂದ ಮಠದಲ್ಲಿ ನಡೆದಿರುವ ಪ್ರತಿಯೊಂದು ಪೈಸೆಗೂ ಲೆಕ್ಕ ನೀಡುವಂತೆ ಆಗ್ರಹಿಸಿ ಭಕ್ತರು ‘ಲೆಕ್ಕ ಕೊಡಿ’ ಅಭಿಯಾನವನ್ನು ತೀವ್ರಗೊಳಿಸಿದ್ದಾರೆ.ಮಾರ್ಚ್ 10ರಂದು ನಡೆದ ಧರ್ಮದರ್ಶಿಗಳ ಸಭೆಯಲ್ಲಿ ಲೆಕ್ಕ ಕೇಳುವ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಗದ್ದಲ ಉಂಟಾಗಿದೆ. ಈ ವೇಳೆ ಮಠದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಡಿವಿಆರ್ (DVR) ಅನ್ನು ಕಿತ್ತುಕೊಂಡು ಹೋಗಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಠದ ಆಡಳಿತಾಧಿಕಾರಿ ಡಾ. ರಾಜಕುಮಾರ ಹಾಗೂ ಧರ್ಮದರ್ಶಿ ಮಂಡಳಿಯ ಪ್ರಧಾನ ಧರ್ಮದರ್ಶಿ ಬಿಸಿ ಉಮಾಪತಿ, ಕಾರ್ಯದರ್ಶಿ ಜ್ಯೋತಿ ಪ್ರಕಾಶ, ಧರ್ಮದರ್ಶಿ ಚಂದ್ರಶೇಖರ ಪೂಜಾರ ನಡುವೆ ನೇರ ಸಂಘರ್ಷ ಏರ್ಪಟ್ಟಿದೆ. ಸುಡು ಬಿಸಿಲನ್ನೂ ಲೆಕ್ಕಿಸದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ನೂರಾರು ಭಕ್ತರು ಮಠದ ಆವರಣದಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ನಿಗದಿಯಾಗಿದ್ದ ಸಭೆಗೆ ಟ್ರಸ್ಟಿಗಳು ಬಾರದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಅವ್ಯವಹಾರದಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಅವರ ಪಾತ್ರವಿಲ್ಲ. ಸ್ವಾಮೀಜಿಗಳೇ ಸ್ವತಃ ಲೆಕ್ಕ ಕೇಳುತ್ತಿರುವುದರಿಂದ ಟ್ರಸ್ಟಿಗಳಿಗೆ ಅವರು ಬೇಡವಾಗಿದ್ದಾರೆ ಎಂದು ಪ್ರತಿಭಟನಾ ನಿರತ ಮುಖಂಡರು ಆರೋಪಿಸಿದ್ದಾರೆ. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ರಾಣೆಬೆನ್ನೂರು ಮಾಜಿ ಶಾಸಕ ಅರುಣ ಕುಮಾರ ಪೂಜಾರಿ, ಗಡಿನಾಡು ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹಾಗೂ ಹರಿಹರದ ಮುಖಂಡ ಪರಮೇಶ್ವರ ಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ.
ಮುಂಬೈ, ಮಾರ್ಚ್ 24: ಬಾಲಕಿಯೊಬ್ಬಳು ರೇಬಿಸ್(Rabies)ನಿಂದ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಭಯದಿಂದಾಗಿ ಲಸಿಕೆ ಪಡೆಯಲು ಭಯಪಟ್ಟಿದ್ದೇ ಆಕೆಯ ಸಾವಿಗೆ ಕಾರಣವಾಗಿದೆ. 4ನೇ ತರಗತಿ ವಿದ್ಯಾರ್ಥಿನಿ ಕಶಿಶ್ ಸಹಾನಿ ಎಂಬ ಬಾಲಕಿ ಸುಮಾರು ಆರು ತಿಂಗಳ ಹಿಂದೆ ತನ್ನ ಅಜ್ಜನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೀಗಿ ನಾಯಿ ಆಕೆಯನ್ನು ಪರಚಿತ್ತು.
ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ರೇಬಿಸ್ ಚುಚ್ಚುಮದ್ದನ್ನು ಪಡೆಯಲು ಆಕೆ ಹೆದರಿದ್ದಳು. ಆಕೆ ಕೆಲವೇ ದಿನಗಳಲ್ಲಿ ಚೇತರಿಸಿಕೊಂಡಿದ್ದಳು. ಆದ್ದರಿಂದ ಆಕೆಯ ಕುಟುಂಬ ಕೂಡಾ ಹೆಚ್ಚು ಬಲವಂತ ಮಾಡಿರಲಿಲ್ಲ.
ಆದರೆ ಕೆಲವು ದಿನಗಳ ಹಿಂದೆ ಕಶಿಶ್ ಆರೋಗ್ಯ ಹದಗೆಟ್ಟಿತ್ತು, ಊಟ ಮಾಡುವುದನ್ನು, ಕುಡಿಯುವುದನ್ನು ಕೂಡ ಬಿಟ್ಟಿದ್ದಳು, ಕಣ್ಣುಗಳು ಕೆಂಪಾಗಿದ್ದವು. ಆಕೆಯ ಸ್ಥಿತಿ ಗಂಭೀರವಾಗುತ್ತಿದ್ದಂತೆ, ಆಕೆಯ ಕುಟುಂಬವು ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಕಸ್ತೂರಬಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಸೋಮವಾರ(ಮಾರ್ಚ್ 23)ರಂದು ಆಕೆ ಕೊನೆಯುಸಿರೆಳೆದಿದ್ದಾಳೆ.
ಆಕೆಯ ಸಾವಿನ ಬಳಿಕ ಪುರಸಭೆಯು ಅವರ ಕುಟುಂಬ ಸದಸ್ಯರು ಮತ್ತು ಅವರೊಂದಿಗೆ ಸಂಪರ್ಕಕ್ಕೆ ಬಂದ ನೆರೆಹೊರೆಯವರ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ನಾಯಿ ಅಥವಾ ಬೆಕ್ಕುಗಳಿಂದ ಕಚ್ಚುವಿಕೆ ಅಥವಾ ಸಣ್ಣ ಗೀರುಗಳನ್ನು ಸಹ ಜನರು ನಿರ್ಲಕ್ಷಿಸಬಾರದು ಮತ್ತು ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ಹೇಳಿದ್ದಾರೆ.
ಬ್ರಿಟನ್ ಮಾಜಿ ಪ್ರಧಾನಮಂತ್ರಿ ರಿಶಿ ಸುನಾಕ್ ಪತ್ನಿ , ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅಚ್ಚು ಕಟ್ಟಾಗಿ ಕನ್ನಡ ಮಾತನಾಡಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅವರ ಈ ಸ್ಪಷ್ಟ ಕನ್ನಡಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ನಿಖಿಲ್ ಕಾಮತ್ ಪಾಡ್ಕಾಸ್ಟ್ನಲ್ಲಿ ಕನ್ನಡದಲ್ಲಿಯೇ ಮಾತನಾಡಿದ ಅಕ್ಷತಾ, ರಿಶಿ ಕಾಲೆಳೆದು ಮಸ್ತಿ ಮಾಡಿದ್ದಾರೆ. ರಿಶಿ ಬಗ್ಗೆ ಏನಾದ್ರೂ ಹೇಳಬಹುದಲ್ಲಾ? ಅರ್ಥ ಆಗಲ್ಲ ಅಲ್ವಾ? ಎಂದು ನಿಖಿಲ್ ಕಿಚಾಯಿಸಿದ್ದಕ್ಕೆ ‘ಗೊತ್ತಾಗಲ್ಲ ಅವರಿಗೆ’ ಎಂದ ಅಕ್ಷತಾ ಮೂರ್ತಿ ರಿಯಾಕ್ಷನ್ ಸಖತ್ ವೈರಲ್ ಆಗಿದೆ.
ಬೆಂಗಳೂರು, ಮಾರ್ಚ್ 24: ಚಿನ್ನದ ದರದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದ್ದು, ಮಾರ್ಚ್ 24 ರಂದು 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ 270 ರಷ್ಟು ಕಡಿಮೆಯಾಗಿದೆ. ಪ್ರಸ್ತುತ, 1 ಗ್ರಾಂ 22 ಕ್ಯಾರಟ್ ಚಿನ್ನದ ದರ 12,865 ರೂ. ಆಗಿದೆ. ಈ ಕುಸಿತದಿಂದಾಗಿ ಚಿನ್ನ ಖರೀದಿದಾರರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದಂತೆಯೇ ಬೆಂಗಳೂರು, ಹಾಸನ, ಬೆಳಗಾವಿ ಸೇರಿದಂತೆ ಕರ್ನಾಟಕದ ವಿವಿಧೆಡೆ ಗ್ರಾಹಕರು, ವಿಶೇಷವಾಗಿ ಮಹಿಳೆಯರು ಚಿನ್ನ ಖರೀದಿಗೆ ಮುಗಿಬೀಳುತ್ತಿದ್ದಾರೆ.
ಬೆಲೆ ಇಳಿಕೆಯಾಗಿದ್ದಕ್ಕೆ ಹಲವು ಮಹಿಳಾ ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ, ಮಧ್ಯಮ ವರ್ಗದ ಜನರಿಗೆ ಇದು ಚಿನ್ನ ಖರೀದಿಸುವ ಉತ್ತಮ ಅವಕಾಶವೆಂದು ಅಭಿಪ್ರಾಯಪಟ್ಟಿದ್ದಾರೆ. ಈ ಬೆಲೆ ಕುಸಿತಕ್ಕೆ ಜಾಗತಿಕ ಆರ್ಥಿಕ ಕಾರಣಗಳಿವೆ ಎಂದು ಅರ್ಥಶಾಸ್ತ್ರಜ್ಞ ಡಾ. ಎಸ್.ಆರ್. ಕೇಶವ್ ವಿಶ್ಲೇಷಿಸಿದ್ದಾರೆ. ಯುಎಸ್ ಡಾಲರ್ ಬಲವರ್ಧನೆ, ಅಮೆರಿಕಾದ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಕಡಿಮೆ ಮಾಡದಿರುವ ನಿರ್ಧಾರ ಮತ್ತು ಗೋಲ್ಡ್ ಪೇಪರ್‌ಗಳಲ್ಲಿ ಹೂಡಿಕೆ ಮಾಡಿದವರು ಲಾಭ ಗಳಿಸಿ ವಿಥ್ ಡ್ರಾ ಮಾಡುತ್ತಿರುವುದು ಪ್ರಮುಖ ಕಾರಣಗಳಾಗಿವೆ. ಮುಂದಿನ ನಾಲ್ಕೈದು ದಿನಗಳಲ್ಲಿ ಈ ಕುಸಿತದ ಬಗ್ಗೆ ಮತ್ತಷ್ಟು ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಮಾರ್ಚ್ 28ರಿಂದ ಐಪಿಎಲ್ ಆರಂಭ ಆಗುತ್ತಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಆರ್ಸಿಬಿ ತಂಡ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಈ ಪಂದ್ಯ ನಡೆಯಲಿದೆ. ಕ್ರಿಕೆಟ್ ಆರಂಭಕ್ಕೂ ಕೆಲವೇ ದಿನ ಮೊದಲು ಬಿಸಿಸಿಐ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇದು ಈ ಬಾರಿಯ ಸೀಸನ್ ಮೇಲೆ ಸಾಕಷ್ಟು ಪ್ರಭಾವ ಬೀರುವ ಸಾಧ್ಯತೆ ಇದೆ.
ತಂಡಗಳು ತಮ್ಮ ಪಂದ್ಯದ ದಿನಗಳಲ್ಲಿ ಪ್ರ್ಯಾಕ್ಟಿಸ್ ಸೆಷನ್ ನಡೆಸಲು ಅನುಮತಿಸಲಾಗುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಪಂದ್ಯಕ್ಕಾಗಿ ಪಿಚ್ ರಕ್ಷಣೆ ಮಾಡೋದು ಇದರ ಪ್ರಮುಖ ಉದ್ದೇಶ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ, ಬಿಸಿಸಿಐ ಅಭ್ಯಾಸ ಪ್ರದೇಶದಲ್ಲಿ ಎರಡು ನೆಟ್‌ಗಳನ್ನು ನಿರ್ಮಾಣ ಮಾಡಲಿದೆ. ಎರಡು ತಂಡಗಳು ಒಂದೇ ಸ್ಥಳದಲ್ಲಿ ಏಕಕಾಲದಲ್ಲಿ ಅಭ್ಯಾಸ ಮಾಡುತ್ತಿದ್ದರೆ, ಎರಡೂ ತಂಡಕ್ಕೆ ತಲಾ ಎರಡು ಪಿಚ್ಗಳನ್ನು ನೀಡಲಾಗುವುದು.
ತಂಡಗಳು ತಮ್ಮ ಎದುರಾಳಿ ತಂಡಗಳಿಗೆ ಮೀಸಲಿಟ್ಟ ಜಾಗವನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅವು ಖಾಲಿ ಇದ್ದರೂ ಸಹ ಅದನ್ನು ಬಳಸುವಂತಿಲ್ಲ. ನ್ಯಾಯ ಕಾಪಾಡಿಕೊಳ್ಳುವುದು ಇದರ ಮುಖ್ಯ ಉದ್ದೇಶ. ಪಂದ್ಯದ ದಿನಗಳಲ್ಲಿ ತಂಡಗಳು ತಮ್ಮ ಆಟಗಾರರಿಗೆ ಫಿಟ್‌ನೆಸ್ ಪರೀಕ್ಷೆಗಳನ್ನು ನಡೆಸಲು ಅನುಮತಿ ಇಲ್ಲ.
ಐಪಿಎಲ್ ಸಮಯದಲ್ಲಿ ಆಟಗಾರರ ಕುಟುಂಬದವರ ಇರುವಿಕೆ ಬಗ್ಗೆಯೂ ಕೆಲವು ಮಾರ್ಗಸೂಚಿ ಹೊರಡಿಸಿದೆ. ತಂಡಗಳು ತಂಡದ ಬಸ್ ಮೂಲಕ ಮಾತ್ರ ಮೈದಾನಕ್ಕೆ ಪ್ರಯಾಣಿಸಲು ಅವಕಾಶ ಇದೆ. ಕುಟುಂಬದವರು, ಸ್ನೇಹಿತರು ತರಬೇತಿ ಅವಧಿಯಲ್ಲಿ ಆಟದ ಮೈದಾನಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ನಿಗದಿಪಡಿಸಿದ ಜಾಗದಲ್ಲಿ ನಿಂತು ಅಭ್ಯಾಸವನ್ನು ವೀಕ್ಷಿಸಬಹುದು. ಆಟಗಾರರು ಡ್ರೆಸ್-ಕೋಡ್ ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.
ನವದೆಹಲಿ, ಮಾರ್ಚ್ 14: ಟಿವಿ9 ನೆಟ್ವರ್ಕ್ ಆಯೋಜಿಸಿದ ನಾಲ್ಕನೇ ಆವೃತ್ತಿಯ ಡಬ್ಲ್ಯುಐಟಿಟಿ ಶೃಂಗಸಭೆಯಲ್ಲಿ (ವಾಟ್ ಇಂಡಿಯಾ ಥಿಂಕ್ಸ್ ಟುಡೇ ಸಮಿಟ್ 2026) ಉದ್ಯಮ ವಲಯದ ಪರಿಣಿತರು ಇಂದಿನ ಸ್ಟಾರ್ಟಪ್ ಲೋಕದ ಬಗ್ಗೆ ವಿಚಾರ ವಿನಿಮಯ ಮಾಡಿದರು. ಯಾವುದೇ ಕಂಪನಿ ಅಥವಾ ಸ್ಟಾರ್ಟಪ್ಗೆ ಮೌಲ್ಯವೇ ಪ್ರಧಾನವಾಗಿರುತ್ತದೆ. ಮೌಲ್ಯದ ಮೇಲೆ ಗಮನ ಕೊಟ್ಟರೆ ಮೌಲ್ಯಮಾಪನ ತನ್ನಂತಾನೆ ಉತ್ತಮವಾಗಿರುತ್ತದ. ಇದು ಡಬ್ಲ್ಯುಐಟಿಟಿ ಸಮಿಟ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಾಲ್ವರು ಪರಿಣಿತರು ಒಮ್ಮತವಾಗಿ ವ್ಯಕ್ತಪಡಿಸಿದ ಅಭಿಪ್ರಾಯವಾಗಿತ್ತು.
ಮೌಲ್ಯ ಮತ್ತು ಮೌಲ್ಯಮಾಪನ (Valuation) ವಿಚಾರ ಕುರಿತು ನಡೆದ ಡಿಬೇಟ್ನಲ್ಲಿ ಟಿಐಇ (TiE) ಎಕ್ಸಿಕ್ಯೂಟಿವ್ ಡೈರೆಕ್ಟರ್ ಉಪಾಸನಾ ಶರ್ಮಾ, ಗ್ಯಾಬಿಟ್ ಸಹ-ಸಂಸ್ಥಾಪಕಿ ಅರ್ಪಣಾ ಶಾಹಿ, ಸ್ಕೈ ಏರ್ ಮೊಬಿಲಿಟಿ ಸಂಸ್ಥಾಪಕ ಅಂಕಿತ್ ಕುಮಾರ್ ಮತ್ತು ಫಂಡಮೆಂಟಂ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ನ ಸಹ-ಸಂಸ್ಥಾಪಕ ಆಶೀಶ್ ಕುಮಾರ್ ಅವರು ಪಾಲ್ಗೊಂಡು ಚರ್ಚೆ ನಡೆಸಿದರು.
ಹೊಸ ಬ್ಯುಸಿನೆಸ್ ಅಥವಾ ಸ್ಟಾರ್ಟಪ್ ಮಾಡಬೇಕೆನ್ನುವವರು ಅನಿಶ್ಚಿತ ಪರಿಸ್ಥಿತಿ ಸಂಭಾಳಿಸುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ ಉಪಾಸನಾ ಶರ್ಮಾ. ಯುದ್ಧ ಇರಲಿ, ಇಲ್ಲದೇ ಇರಲಿ, ಅನಿಶ್ಚಿತತೆ ಎನ್ನುವುದು ಇದ್ದೇ ಇರುತ್ತದೆ. ಯಾವುದೇ ಕ್ಷೇತ್ರದಲ್ಲೂ ಹೊಸ ಬ್ಯುಸಿನೆಸ್ ಮಾಡುವವರು ಇದನ್ನು ಎದುರಿಸಬೇಕಾಗುತ್ತದೆ ಎಂಬುದು ಅವರ ಅನಿಸಿಕೆ.
ಸುಸ್ಥಿರತೆಯ ಪ್ರಶ್ನೆ
ಜಾಗತಿಕ ಲಾಜಿಸ್ಟಿಕ್ಸ್ ಇಕೋಸಿಸ್ಟಂಗಳು ಸ್ಟಾರ್ಟಪ್ಗಲಿಗೆ ಸ್ಥಳೀಯವಾಗಿ ಅನುಕೂಲವಾಗಬಲ್ಲುವು. ಇದರಿಂದ ದೇಶಕ್ಕೂ ಅನುಕೂಲವಾಗುತ್ತದೆ ಎಂದು ಸ್ಕೈ ಏರ್ ಮೊಬಿಲಿಟಿ ಸಿಇಒ ಅಂಕಿತ್ ಕುಮಾರ್ ಅಭಿಪ್ರಾಯಪಟ್ಟರು. ಪ್ಯಾನಲ್ ಡಿಸ್ಕಶನ್ನಲ್ಲಿ ಮುಂದುವರಿದು ಮಾತನಾಡಿದ ಅವರು, ಭಾರತದಲ್ಲಿ ಒಂದು ಉತ್ಪನ್ನ ನಿರ್ಮಿಸಲು ಇರುವ ಸಾಧಕ ಮತ್ತು ಬಾಧಕಗಳನ್ನು ವಿವರಿಸಿದರು.
‘ಭಾರತದಲ್ಲಿ ಮೂರು ವರ್ಷದಲ್ಲಿ ಒಂದು ಉತ್ಪನ್ನ ಕಟ್ಟಲು ಆಗುವುದಿಲ್ಲ. ಅದು 10 ವರ್ಷದ ಪ್ರಕ್ರಿಯೆ. ಜನರು ಮತ್ತು ಪರಿಸರದ ಮೇಲೆ ಪೂರಕ ಪರಿಣಾಮ ಬೀರುವಂಥದ್ದನ್ನು ರಚಿಸುವುದು ಬಹಳ ಮೌಲ್ಯಯುತವೆನಿಸುತ್ತದೆ’ ಎಂದರು.
ಹೂಡಿಕೆದಾರರಿಗೆ ಲಾಭವಾಗಬೇಕಾದರೆ ಮೌಲ್ಯ ಇರಬೇಕು…
ಒಬ್ಬ ಹೂಡಿಕೆದಾರ ದೀರ್ಘಕಾಲದ ಆಸ್ತಿಯಲ್ಲಿ ಹೂಡಿಕೆ ಮಾಡಿದಾಗ, ಅದರ ಮೌಲ್ಯ ಮತ್ತು ಮೌಲ್ಯಮಾಪನವು ಸಾಮ್ಯವಾಗಿದ್ದರೆ ಮಾತ್ರ ಹಣ ಮಾಡಲು ಸಾಧ್ಯ. ಸ್ಟಾರ್ಟಪ್ಗಳು ಆರಂಭವಾಗಿ ಮೊದಲ ಕೆಲ ವರ್ಷ ಸಾಮರ್ಥ್ಯ ನಿರ್ಮಾಣಕ್ಕೆ ಒತ್ತು ಕೊಡುತ್ತವೆ. ನಂತರ ಬೆಳವಣಿಗೆಯನ್ನು ಗಮನಿಸಬಹುದು ಎಂದು ಫಂಡಮೆಂಟಮ್ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ ಕಂಪನಿಯ ಸಹ-ಸಂಸ್ಥಾಪಕ ಆಶೀಶ್ ಕುಮಾರ್ ತಿಳಿಸಿದರು.
ಬ್ರೈನ್ ಸ್ಟ್ರೋಕ್ ಪ್ರಕರಣಗಳು ಇಂದಿನ ಕಾಲದಲ್ಲಿ ವೇಗವಾಗಿ ಹೆಚ್ಚುತ್ತಿದ್ದು, ಇದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಬ್ರೈನ್ ಸ್ಟ್ರೋಕ್ ಅಂದರೆ ಮೆದುಳಿಗೆ ಹೋಗುವ ರಕ್ತದ ಸರಬರಾಜು ಅಕಸ್ಮಾತ್ ಕಡಿಮೆಯಾಗುವುದು ಅಥವಾ ರಕ್ತನಾಳ ಸ್ಫೋಟಗೊಂಡು ಒಳಗೆ ರಕ್ತಸ್ರಾವವಾಗುವುದು. ಇದರಿಂದ ಮೆದುಳಿನ ಸೆಲ್‌ಗಳು ಹಾನಿಗೊಳಗಾಗುತ್ತವೆ. ಈ ರೀತಿ ಆಗುವುದಕ್ಕೆ ಹಲವು ಕಾರಣಗಳಿವೆ. ಹೈ ಬ್ಲಡ್ ಪ್ರೆಶರ್, ಡಯಾಬಿಟೀಸ್, ಹೈ ಕೊಲೆಸ್ಟ್ರಾಲ್, ಧೂಮಪಾನ, ಅತಿಯಾದ ತೂಕ ಮತ್ತು ಕೆಟ್ಟ ಜೀವನಶೈಲಿಯ ಪರಿಣಾಮ ಬಹಳ ಮುಖ್ಯವಾದವು. ಇದಲ್ಲದೆ, ಹೆಚ್ಚು ಒತ್ತಡ, ಶಾರೀರಿಕ ಚಟುವಟಿಕೆಗಳ ಕೊರತೆ ಮತ್ತು ಸರಿಯಲ್ಲದ ಆಹಾರ ಪದ್ಧತಿಗಳು ಕೂಡ ಬ್ರೈನ್ ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತವೆ.
ಇನ್ನು ಈ ರೋಗಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ವಯಸ್ಸಿನವರಲ್ಲೂ ಇದು ಕಾಣಿಸಿಕೊಳ್ಳಬುದು. ಆದರೆ 50 ವರ್ಷ ಮೇಲ್ಪಟ್ಟವರು, ಹೃದಯ ರೋಗಿಗಳು, ಡಯಾಬಿಟೀಸ್ ಮತ್ತು ಹೈ ಬಿಪಿ ಇರುವವರಿಗೆ ಹೆಚ್ಚಿನ ಅಪಾಯ ಇದ್ದು, ಇತ್ತೀಚಿಗೆ ಯುವಕರಲ್ಲಿಯೂ ಇದರ ಪ್ರಮಾಣ ಹೆಚ್ಚುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ.
ಮಾತನಾಡಲು ತೊಂದರೆ, ಪದಗಳನ್ನು ಸರಿಯಾಗಿ ಉಚ್ಚರಿಸಲಾಗದಿರುವುದು
ಇತರರ ಮಾತು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು
ಅಕಸ್ಮಾತ್ ತೀವ್ರ ತಲೆನೋವು
ತಲೆ ಸುತ್ತುವುದು
ಕಣ್ಣುಗಳಿಗೆ ಮಂಕಾಗುವಿಕೆ ಅಥವಾ ಡಬಲ್ ದೃಷ್ಟಿ ಕಾಣುವುದು
ಸಮತೋಲನ ಕಳೆದುಕೊಳ್ಳುವುದು, ನಡೆಯಲು ಕಷ್ಟವಾಗುವುದು
ಕೈ ಅಥವಾ ಕಾಲು ಎತ್ತಲು ದುರ್ಬಲತೆ ಅನುಭವ
ಬ್ರೈನ್ ಸ್ಟ್ರೋಕ್ ಲಕ್ಷಣಗಳು ಕಂಡುಬಂದ ತಕ್ಷಣವೇ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಪ್ರತಿಯೊಂದು ನಿಮಿಷವೂ ಬಹಳ ಅಮೂಲ್ಯ. ರೋಗಿಯನ್ನು ಆರಾಮದಾಯಕವಾಗಿ ಮಲಗಿಸಿ, ತಲೆಯನ್ನು ಸ್ವಲ್ಪ ಎತ್ತರದಲ್ಲಿಡಿ. ರೋಗಿಯನ್ನು ಶಾಂತವಾಗಿರಿಸಲು ಪ್ರಯತ್ನಿಸಿ. ಏನನ್ನೂ ತಿನ್ನಲು ಅಥವಾ ಕುಡಿಯಲು ಕೊಡಬೇಡಿ. ಉಸಿರಾಟ, ನಾಡಿ ಮತ್ತು ಪ್ರಜ್ಞೆಯ ಸ್ಥಿತಿಯನ್ನು ಗಮನದಲ್ಲಿಡಿ. ತಕ್ಷಣವೇ ರೋಗಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಿರಿ ಎಂಬುದು ವೈದ್ಯರ ಸಲಹೆ.
ಬ್ರೈನ್ ಸ್ಟ್ರೋಕ್ ತಡೆಗಟ್ಟುವುದು ಹೇಗೆ?
ನಿಯಮಿತವಾಗಿ ವ್ಯಾಯಾಮ ಮಾಡಿ
ತೂಕ ನಿಯಂತ್ರಣದಲ್ಲಿಡಿ
ಹಣ್ಣು, ತರಕಾರಿ, ಸಂಪೂರ್ಣ ಧಾನ್ಯಗಳುಳ್ಳ ಸಮತೋಲನ ಆಹಾರ ಸೇವಿಸಿ
ಉಪ್ಪು ಮತ್ತು ಎಣ್ಣೆಯ ಸೇವನೆ ಕಡಿಮೆ ಮಾಡಿ
ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ
ಹೈ ಬಿಪಿ, ಡಯಾಬಿಟೀಸ್ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇರಲು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಿ.
ಇನ್ನು ಚಿಕಿತ್ಸೆ ಸ್ಟ್ರೋಕ್‌ನ ಪ್ರಕಾರಕ್ಕೆ ಅವಲಂಬಿತವಾಗಿರುತ್ತದೆ. ವೈದ್ಯರು ಔಷಧಿ, ಫಿಜಿಯೋಥೆರಪಿ ಅಥವಾ ಅಗತ್ಯವಿದ್ದರೆ ಶಸ್ತ್ರಚಿಕಿತ್ಸೆ ಸಲಹೆ ಮಾಡಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕಿದರೆ, ಮೆದುಳಿನ ಹಾನಿ ಕಡಿಮೆ ಆಗಿ ಚೇತರಿಕೆಯ ಸಾಧ್ಯತೆ ಹೆಚ್ಚು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ.
‘ಧುರಂಧರ್ 2’ (Dhurandhar 2) ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಾ ಸಾಗಿದೆ. 2025 ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾದ ಸೀಕ್ವೆಲ್ ‘ಧುರಂಧರ್ 2’ ಆಗಿದೆ. ಮೊದಲ ಭಾಗಕ್ಕಿಂತಲೂ ಹೆಚ್ಚಿನ ಕಲೆಕ್ಷನ್ ಅನ್ನು ‘ಧುರಂಧರ್ 2’ ಮಾಡುವುದು ಖಾತ್ರಿ ಎನ್ನಲಾಗುತ್ತಿದೆ. ಕೋವಿಡ್ ಬಳಿಕ ಸೀಕ್ವೆಲ್ಗಳ ಅಬ್ಬರ ಜೋರಾಗಿದೆ. ಸಾಮಾನ್ಯ ಸಿನಿಮಾಗಳನ್ನು ಸಹ ಸೀಕ್ವೆಲ್ ಅಥವಾ ಫ್ರಾಂಚೈಸ್ ಸಿನಿಮಾ (ಸರಣಿ) ಮಾಡಲಾಗುತ್ತಿದೆ. ಹಾಲಿವುಡ್ನಲ್ಲಂತೂ ಈ ಸಿನಿಮಾ ಪ್ರಾಂಚೈಸ್ ಬಹಳ ಜನಪ್ರಿಯ. ಇದೀಗ ‘ಧುರಂಧರ್’ ಅನ್ನು ಸಹ ಸಿನಿಮಾ ಸರಣಿ ಮಾಡುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.
‘ಧುರಂಧರ್ 3’ ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಅದು ಮಾತ್ರವೇ ಅಲ್ಲದೆ, ‘ಧುರಂಧರ್’ ಸಿನಿಮಾ ಸರಣಿ ಹಾಗೆಯೇ ಮುಂದುವರೆಯಲಿದೆ ಎನ್ನಲಾಗುತ್ತಿದೆ. ಇದೀಗ ಸಿನಿಮಾ ತಂಡದ ಪ್ರಮುಖ ಸದಸ್ಯರೊಬ್ಬರು ಈ ಬಗ್ಗೆ ಮಾತನಾಡಿದ್ದು, ‘ಧುರಂಧರ್ 3’ ಬರಲಿದೆಯೇ? ಹಾಗೂ ‘ಧುರಂಧರ್’ ಒಂದು ಪ್ರಾಂಚೈಸ್ ಸಿನಿಮಾ ಸರಣಿಯಾಗಿ ಮುಂದುವರೆಯಲಿದೆಯೇ ಎಂಬ ಬಗ್ಗೆ ಮಾತನಾಡಿದ್ದಾರೆ.
‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಕ್ಕೆ ಕಾಸ್ಟಿಂಗ್ ನಿರ್ದೇಶಕರಾಗಿ ಕೆಲಸ ಮಾಡಿರುವ ಮುಖೇಶ್ ಚಾಬ್ರಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿ, ‘ಧುರಂಧರ್ 3’ ಸಿನಿಮಾ ಬರುವುದಿಲ್ಲ ಎಂದು ಖಾತ್ರಿ ಪಡಿಸಿದ್ದಾರೆ. ‘ಈ ಬಗ್ಗೆ ಸ್ಪಷ್ಟನೆ ನೀಡಲೇಬೇಕಾಗಿದೆ. ಅಂತಹದ್ದೇನೂ (ಧುರಂಧರ್ 3) ನಡೆಯುತ್ತಿಲ್ಲ. ಇವೆಲ್ಲಾ ಕೇವಲ ವದಂತಿಗಳು’ ಎಂದು ಸ್ಪಷ್ಟಪಡಿಸಿದ್ದಾರೆ. ‘ಒಂದು ವೇಳೆ ಅಧಿಕೃತ ಮಾಹಿತಿ ಇದ್ದರೆ ತಾವೇ ಅದನ್ನು ಸಾಮಾಜಿಕ ಜಾಲತಾಣ ದಲ್ಲಿ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ನಿರ್ದೇಶಕ ಆದಿತ್ಯ ಧರ್ ಸಹ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ‘”ಧುರಂಧರ್ ಭಾಗ 1 ಮತ್ತು 2 ರ ಮೂಲಕ ನಾನು ಹೇಳಬೇಕಾದ ಕಥೆಯನ್ನು ಎಂಟು ಗಂಟೆಗಳ ಕಾಲಾವಧಿಯಲ್ಲಿ ಸಂಪೂರ್ಣವಾಗಿ ಹೇಳಿದ್ದೇನೆ. ಕೇವಲ ಹಣದ ಲಾಭಕ್ಕಾಗಿ ಕಥೆಯನ್ನು ಎಳೆಯಲು ನಾನು ಇಷ್ಟಪಡುವುದಿಲ್ಲ’ ಎಂದಿದ್ದಾರೆ. ಆ ಮೂಲಕ ತಾವು ‘ಧುರಂಧರ್ 3’ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಸ್ಟಿಂಗ್ ನಿರ್ದೇಶಕ ಮುಖೇಶ್, ರಣ್ವೀರ್ ಸಿಂಗ್ ಬಗ್ಗೆ ಸಹ ಮಾತನಾಡಿದ್ದು, ‘ಅವರೊಬ್ಬ ಅದ್ಭತ ನಟ, ಸಿನಿಮಾಕ್ಕಾಗಿ ಬಹಳ ಕಷ್ಟ ಪಡುತ್ತಾರೆ. ರಣ್ವೀರ್ ಅವರ ಆರಂಭದ ದಿನಗಳಲ್ಲಿ ನಾನು ಅವರ ಸ್ಕ್ರೀನ್ ಟೆಸ್ಟ್ಗಳನ್ನು ಸಹ ಮಾಡಿದ್ದೆ. ಅವರ ನಟನೆಯ ‘ಲುಟೇರಾ’ ಸಿನಿಮಾನಲ್ಲಿ ಅವರೊಟ್ಟಿಗೆ ಕೆಲಸ ಮಾಡಿದ್ದೆ, ಬಳಿಕ ‘83’ ಸಿನಿಮಾನಲ್ಲಿಯೂ ಕೆಲಸ ಮಾಡಿದ್ದೆ. ನಮ್ಮದು ಬಹಳ ಹಳೆಯ ಸ್ನೇಹ’ ಎಂದು ಹೇಳಿಕೋಂಡಿದ್ದಾರೆ.