ಕಳ್ಳಮಾರ್ಗದಲ್ಲಿ ರಷ್ಯಾಗೆ ಕರೆಸಿಕೊಂಡು ದಿವ್ಯಾಂಗನನ್ನು ಯುದ್ಧ ಭೂಮಿಯಲ್ಲಿ ಬಿಟ್ಟ ಇವರೆಂಥಾ ಜನ – Kannada News | Disabled Indian Dies in Russia War, Trafficked, Forced to Fight and Tragic End

ಮನ್​ದೀಪ್ ಹುಟ್ಟಿನಿಂದಲೇ ಅಂಗವಿಕಲ, ಏನಾದರೂ ಸಾಧಿಸಬೇಕೆಂಬ ಛಲವೇನೋ ಇತ್ತು ಆದರೆ ಸಾಮರ್ಥ್ಯವಿರಲಿಲ್ಲ. ಇವರು ಮೂಲತಃ ಪಂಜಾಬಿನವರು. ಯಾವುದೇ ಮಾನದಂಡಗಳನ್ನು ಗಮನಿಸಿದರೂ ಮಿಲಿಟರಿ(Military) ಸೇವೆಗಂತೂ ಅನರ್ಹರಾಗಿದ್ದರು. ಆದರೆ ಅವರ ಜೀವ ಹೋಗಿದ್ದು ಯುದ್ಧಭೂಮಿಯಲ್ಲೇ. ಕನಸಿನಲ್ಲೂ ಊಹಿಸದ ಘಟನೆಯೊಂದು ಅವರ ಜೀವನದಲ್ಲಿ ನಡೆದೇ ಬಿಟ್ಟಿತ್ತು. ಆ ಕುರಿತು ಮಾಹಿತಿ ಇಲ್ಲಿದೆ.

ಡಿಸೆಂಬರ್​ 2023ರಲ್ಲಿ ಯಾರೋ ಒಬ್ಬರು ನೀನು ದಿವ್ಯಾಂಗನಾದರೆ ಏನಂತೆ ಯುರೋಪ್​ನಲ್ಲಿ ಒಳ್ಳೆಯ ಕೆಲಸ ಕೊಡಿಸುತ್ತೇನೆ ಬಾ ಎಂದು ಕರೆದುಕೊಂಡು ಹೋಗಿ ಯುದ್ಧ ಭೂಮಿಯಲ್ಲಿ ಬಿಟ್ಟೇ ಬಿಟ್ಟರು. ಯುದ್ಧ ಹಾಗಿರಲಿ ಸರಿಯಾಗಿ ನಡೆಯಲೂ ಆಗದ ವ್ಯಕ್ತಿ ಶತ್ರುಗಳಿಂದ ತನ್ನನ್ನು ರಕ್ಷಿಸಿಕೊಳ್ಳುವುದಾದರೂ ಹೇಗೆ?
ಮನ್ದೀಪ್ ಅವರನ್ನು ಟ್ರಾವೆಲ್ ಏಜೆಂಟರು ವಂಚಿಸಿದ್ದರು, ಅರ್ಮೇನಿಯಾದ ಮೂಲಕ ಕರೆದೊಯ್ಯಲಾಯಿತು.

ದಿವ್ಯಾಂಗನಾದರೂ ಷ್ಯಾದ ಸೈನ್ಯಕ್ಕೆ ಬಲವಂತವಾಗಿ ಸೇರಿಸಿಕೊಳ್ಳಲಾಯಿತು ಎಂದು ಆರೋಪಿಸಲಾಗಿದೆ. ವಿದೇಶದಿಂದ ಬಂದ ಅವರು, ಎಂದಿಗೂ ಹೋರಾಡಲು ಯೋಗ್ಯವಲ್ಲದ ಯುದ್ಧದಿಂದ ರಕ್ಷಿಸುವಂತೆ ಮನವಿ ಮಾಡಿ ಹತಾಶ ವೀಡಿಯೊ ಸಂದೇಶಗಳನ್ನು ಕಳುಹಿಸಿದರು.

ಮತ್ತಷ್ಟು ಓದಿ: SSB Interview Guide: ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಲು SSB ಸಂದರ್ಶನ ಏಕೆ ಅತ್ಯಗತ್ಯ? ಸಂಪೂರ್ಣ ಮಾಹಿತಿ ಇಲ್ಲಿದೆ

ಸಹಾಯಕ್ಕಾಗಿ ಬೇಡುತ್ತಾ ವೀಡಿಯೊಗಳನ್ನು ಕಳುಹಿಸುತ್ತಲೇ ಇದ್ದರು ಎಂದು ಮಂದೀಪ್ ಸಹೋದರ ಜಗದೀಪ್ ಕುಮಾರ್ ತಿಳಿಸಿದ್ದಾರೆ. ತನ್ನನ್ನು ಸೈನ್ಯಕ್ಕೆ ಸೇರಲು ಬಲವಂತಪಡಿಸಲಾಗಿದೆ ಎಂದು ಅವನು ಹೇಳಿದ್ದರು, ಅವರಿಗೆ ಭಯವಾಗಿತ್ತು. ಮನೆಗೆ ಬರಲು ಬಯಸಿದ್ದರು ಎಂದು ಹೇಳಿದ್ದಾರೆ.
ಮನ್​ದೀಪ್ ಕೊನೆಯ ಬಾರಿಗೆ ತನ್ನ ಕುಟುಂಬದೊಂದಿಗೆ ಮಾತನಾಡಿದ್ದು ಮಾರ್ಚ್ 2024 ರಲ್ಲಿ. ಅದಾದ ನಂತರ, ಏನೂ ಇರಲಿಲ್ಲ  ಯಾವುದೇ ಕರೆಗಳಿಲ್ಲ, ಸಂದೇಶಗಳಿಲ್ಲ,ಮಾತುಗಳಿಲ್ಲ.

ಭಯ, ಅನಿಶ್ಚಿತತೆ ಮತ್ತು ಕಾಯುವಿಕೆ ಮಾತ್ರ ಇತ್ತು. ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ರಷ್ಯಾದ ಸೈನ್ಯಕ್ಕೆ ಕಳ್ಳಸಾಗಣೆ ಮಾಡಲಾದ ನೇಮಕಾತಿಗಳಲ್ಲಿ ಮನ್​ದೀಪ್ ಕೂಡ ಒಬ್ಬರಾಗಿದ್ದರು.

ತಿಂಗಳುಗಳ ಕಾಲ, ಕುಟುಂಬವು ಸ್ಥಳೀಯ ಅಧಿಕಾರಿಗಳು, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸೇರಿದಂತೆ ಮನ್​ದೀಪ್ ಅವರನ್ನು ಪತ್ತೆಹಚ್ಚಲು ಅಥವಾ ಅವರನ್ನು ಮರಳಿ ಕರೆತರಲು ಸಹಾಯವನ್ನು ಕೋರಿ ಮನವಿ ಸಲ್ಲಿಸಲಾಯಿತು ಆದರೆ ಆ ಮನವಿ ಕೂಡ ಮೌನವಾಗಿಯೇ ಇತ್ತು.

2025 ರ ಅಂತ್ಯದ ವೇಳೆಗೆ, ಜಗದೀಪ್ ತನ್ನ ತಂದೆಯೊಂದಿಗೆ, ಕಾಣೆಯಾದ ತನ್ನ ಸಹೋದರನನ್ನು ಹುಡುಕಲು ತನ್ನ ಸ್ವಂತ ಜವಾಬ್ದಾರಿಯ ಮೇಲೆ ರಷ್ಯಾಕ್ಕೆ ಹೋದರು. ಅವನು ರಷ್ಯಾದ ಸೈನ್ಯದ ಸದಸ್ಯರನ್ನು ಪತ್ತೆಹಚ್ಚಿದರು ಮತ್ತು ಮನ್​ದೀಪ್ ಗುರುತಿಸಲು ಡಿಸೆಂಬರ್‌ನಲ್ಲಿ ತನ್ನ ಡಿಎನ್‌ಎ ಮಾದರಿಯನ್ನು ಸಲ್ಲಿಸಿದರು.

ಏಳು ದಿನಗಳ ನಂತರ, ಹೊಸ ವರ್ಷ ಬರುತ್ತಿದ್ದಂತೆ, ಕೊನೆಗೂ ರಷ್ಯಾದಿಂದ ಕರೆ ಬಂದೇ ಬಿಟ್ಟಿತ್ತು, ತನ್ನ ಸಹೋದರನೆ ಇರಬೇಕು ಎಂದು ಯೋಚಿಸಿದಾಗ, ತನ್ನ ಸಹೋದರ ಬದುಕಿಲ್ಲ ಎನ್ನುವ ಸತ್ಯ ಬರಸಿಡಿಲಂತೆ ಬಡಿದಿತ್ತು. ಜಗದೀಪ್ ಅವರು ಫೆಬ್ರವರಿ 2025 ರಲ್ಲಿ ಏಮ್ಸ್‌ನಲ್ಲಿ ತಮ್ಮ ಡಿಎನ್‌ಎ ಮಾದರಿಯನ್ನು ಸಲ್ಲಿಸಿದ್ದರು, ಈ ಪ್ರಕ್ರಿಯೆಯನ್ನು ವಿದೇಶಾಂಗ ಸಚಿವಾಲಯವು ಸುಗಮಗೊಳಿಸಿತು.

ತನ್ನ ಶೋಧದ ಸಮಯದಲ್ಲಿ ಪಂಜಾಬ್ ಸರ್ಕಾರವಾಗಲಿ ಅಥವಾ ಕೇಂದ್ರವಾಗಲಿ ಯಾವುದೇ ಅರ್ಥಪೂರ್ಣ ಸಹಾಯವನ್ನು ನೀಡಲಿಲ್ಲ ಎಂದು ಅವರ ಸಹೋದರ ಹೇಳಿದ್ದಾರೆ. ರಷ್ಯಾ ಪ್ರವಾಸದ ವೆಚ್ಚವನ್ನು ಕಾಂಗ್ರೆಸ್ ಸಂಸದ ರಾಜಾ ವಾರಿಂಗ್ ಅವರು ಭರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ರಷ್ಯಾದ ಕಮಾಂಡರ್ ಒಬ್ಬರು ಹಂಚಿಕೊಂಡ ಚಿತ್ರಗಳಲ್ಲಿ ಮನ್​ದೀಪ್ ದೇಹ ಕೊಳೆತ ಸ್ಥಿತಿಯಲ್ಲಿತ್ತು.

ಮನ್​ದೀಪ್ ಪಾರ್ಥಿವ ಶರೀರವನ್ನು ಅಂತಿಮವಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು., ಇದು ಕಾಯುವಿಕೆಯನ್ನು ಕೊನೆಗೊಳಿಸಿದೆ, ಆದರೆ ನೋವನ್ನು ಕೊನೆಗೊಳಿಸಿಲ್ಲ ಎಂದು ಮನ್​ದೀಪ್ ಅವರ ಸಹೋದರ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

6 ವರ್ಷಗಳ ಬಳಿಕ ಶತಕ ಬಾರಿಸಿದ ಡೇವಿಡ್ ವಾರ್ನರ್… ಆದರೆ – Kannada News | David warner hit T20 Century after 6 years

ಬರೋಬ್ಬರಿ 6 ವರ್ಷಗಳ ಬಳಿಕ ಡೇವಿಡ್ ವಾರ್ನರ್ ಬ್ಯಾಟ್​ನಿಂದ ಟಿ20 ಶತಕ ಮೂಡಿಬಂದಿದೆ. ಈ ಶತಕದ ಹೊರತಾಗಿಯೂ ಸಿಡ್ನಿ ಥಂಡರ್ ತಂಡವು ಪಂದ್ಯವನ್ನು ಸೋತಿದೆ. ಸಿಡ್ನಿ ಶೋಗ್ರೌಂಡ್ ಸ್ಟೇಡಿಯಂನಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್​ನ 21ನೇ ಪಂದ್ಯದಲ್ಲಿ ಹೊಬಾರ್ಟ್ ಹರಿಕೇನ್ಸ್ ಹಾಗೂ ಸಿಡ್ನಿ ಥಂಡರ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಹೊಬಾರ್ಟ್ ತಂಡದ ನಾಯಕ ನಾಥನ್ ಎಲ್ಲಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಪರ ಡೇವಿಡ್ ವಾರ್ನರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ವಾರ್ನರ್ 65 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 11 ಫೋರ್​ಗಳೊಂದಿಗೆ ಅಜೇಯ 130 ರನ್ ಬಾರಿಸಿದರು.

ಈ ಶತಕದ ನೆರವಿನೊಂದಿಗೆ ಸಿಡ್ನಿ ಥಂಡರ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 205 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಹೊಬಾರ್ಟ್ ಹರಿಕೇನ್ಸ್ ಪರ ಆರಂಭಿಕ ದಾಂಡಿಗ ಟಿಮ್ ವಾರ್ಡ್ 49 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 90 ರನ್ ಬಾರಿಸಿದರು.

ಈ ಮೂಲಕ 17.5 ಓವರ್​ಗಳಲ್ಲಿ 207 ರನ್​ಗಳಿಸುವ ಮೂಲಕ ಹೊಬಾರ್ಟ್ ಹರಿಕೇನ್ಸ್ ತಂಡವು 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಹೊಬಾರ್ಟ್ ತಂಡದ ಈ ಗೆಲುವಿನೊಂದಿಗೆ ಡೇವಿಡ್ ವಾರ್ನರ್ 6 ವರ್ಷಗಳ ಬಳಿಕ ಬಾರಿಸಿದ ಶತಕ ವ್ಯರ್ಥವಾಗಿದೆ. ಇದಕ್ಕೂ ಮುನ್ನ ಡೇವಿಡ್ ವಾರ್ನರ್ ಟಿ20 ಸೆಂಚುರಿ ಸಿಡಿಸಿದ್ದು 2019 ರಲ್ಲಿ. ಅದು ಕೂಡ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ. ಇದೀಗ ಬರೋಬ್ಬರಿ ಆರು ವರ್ಷಗಳ ಬಳಿಕ ಬಿಗ್ ಬ್ಯಾಷ್ ಲೀಗ್​ನಲ್ಲಿ ಸೆಂಚುರಿ ಸಿಡಿಸಿ ಗಮನ ಸೆಳೆದಿದ್ದಾರೆ.

 

Source link

ಬಿಗ್ ಬಾಸ್ ಕನ್ನಡ: ಸುದೀಪ್ ಎದುರಲ್ಲೂ ಕಾವ್ಯಾನ ಬಿಟ್ಟು ಕೊಡಲಿಲ್ಲ ಗಿಲ್ಲಿ ನಟ – Kannada News | Gilli Nata fevours Kavya Shaiva in front of Kichcha Sudeep in BBK 12 Latest Episode

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಈಗ ಉಳಿದಿರುವುದು ಕೆಲವೇ ದಿನಗಳು ಮಾತ್ರ. ಯಾರು ಫಿನಾಲೆಗೆ ಹೋಗುತ್ತಾರೆ? ಯಾರು ಟ್ರೋಫಿ ಗೆಲ್ಲುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಹೆಚ್ಚುತ್ತಿದೆ. ಈ ಸೀಸನ್​​ನಲ್ಲಿ ಗಿಲ್ಲಿ ನಟ ಅವರು ಹೆಚ್ಚು ಹೈಲೈಟ್ ಆಗುತ್ತಿದ್ದಾರೆ. ಅವರ ಜೊತೆ ಇರುವ ಕಾರಣಕ್ಕೆ ಕಾವ್ಯಾ ಶೈವ (Kavya Shaiva) ಕೂಡ ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದಾರೆ. ಕಾವ್ಯಾ ಅವರನ್ನು ಗಿಲ್ಲಿ ಪ್ರತಿ ಹಂತದಲ್ಲೂ ಸೇವ್ ಮಾಡುತ್ತಿದ್ದಾರೆ ಎಂಬುದು ಅನೇಕರ ಅಭಿಪ್ರಾಯ. ಅಚ್ಚರಿ ಎಂದರೆ ಕಿಚ್ಚ ಸುದೀಪ್ ಅವರ ಎದುರಿನಲ್ಲಿ ಕೂಡ ಗಿಲ್ಲಿ ನಟ (Gilli Nata) ಅವರು ಕಾವ್ಯಾನ ಬಿಟ್ಟುಕೊಡಲಿಲ್ಲ.

ಕಳೆದ ವಾರ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಕ್ಯಾಪ್ಟನ್ ಗಿಲ್ಲಿ ನಟ ಅವರು ಪ್ರಮುಖ ಪಾತ್ರ ವಹಿಸಿದ್ದರು. ಬಿಗ್ ಬಾಸ್ ಮನೆಯ ಸದಸ್ಯರ ವಾದವನ್ನು ಆಲಿಸಿ, ಯಾರನ್ನು ನಾಮಿನೇಟ್ ಮಾಡಬೇಕು ಎಂಬ ಅಧಿಕಾರ ಗಿಲ್ಲಿಗೆ ನೀಡಲಾಗಿತ್ತು. ಕಾವ್ಯಾ ವಿರುದ್ಧ ಇನ್ನುಳಿದವರು ನೀಡಿದ ಕಾರಣವನ್ನು ಗಿಲ್ಲಿ ನಟ ಒಪ್ಪಿಕೊಳ್ಳಲೇ ಇಲ್ಲ. ಆ ಮೂಲಕ ಕ್ಯಾವಾನ ಅವರು ನಾಮಿನೇಷನ್​ನಿಂದ ಹೊರಗೆ ಇಟ್ಟಿದ್ದರು.

ಇದು ಪಕ್ಷಪಾತ ಎಂದು ಅನೇಕರು ಆರೋಪ ಮಾಡಿದ್ದರು. ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಕೂಡ ಈ ಬಗ್ಗೆ ಪ್ರಶ್ನೆ ಮಾಡಿದರು. ಆಗಲೂ ಗಿಲ್ಲಿ ನಡೆ ಹಾಗೆಯೇ ಇತ್ತು. ಕಾವ್ಯಾನ ನಾಮಿನೇಟ್ ಮಾಡಲು ಕೆಲವು ಸೂಕ್ತ ಕಾರಣ ನೀಡುವಂತೆ ಗಿಲ್ಲಿಗೆ ಕಿಚ್ಚ ಸುದೀಪ್ ಅವರು ಹೇಳಿದರು. ಆಗ ಗಿಲ್ಲಿ ನಟ ಅವರು ಯಾವುದೇ ಕಾರಣಗಳನ್ನು ನೀಡದೇ ಸೈಲೆಂಟ್ ಆಗಿದ್ದರು.

ಈ ಸಂದರ್ಭದಲ್ಲಿ ಕೂಡ ಗಿಲ್ಲಿ ನಟ ಅವರು ಕಾವ್ಯಾ ಪರವಾಗಿಯೇ ವರ್ತಿಸಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಗಿಲ್ಲಿಗೆ ಕಾವ್ಯಾ ವಿರುದ್ಧ ಹೇಳಲು ಕಾರಣಗಳು ಇಲ್ಲವೇ ಇಲ್ಲ ಎಂದು ಒಪ್ಪಲು ಸಾಧ್ಯವಿಲ್ಲ. ಯಾಕೆಂದರೆ ಈ ಮೊದಲು ಕಾವ್ಯಾ ಅವರು ಪೋಷಕರ ಜೊತೆ ಸೇರಿ ಬಿಗ್ ಬಾಸ್ ಮನೆಯ ನಿಯಮ ಉಲ್ಲಂಘನೆ ಮಾಡಿದ್ದನ್ನೇ ಇತರರು ಕಾರಣವಾಗಿ ನೀಡಬಹುದಿತ್ತು ಎಂದು ಗಿಲ್ಲಿ ಒಬ್ಬರೇ ಊಹಿಸಿದ್ದರು. ಅದನ್ನು ಹೊರತು ಪಡಿಸಿ ಬೇರೆ ಕಾರಣ ನೀಡಿ ಎಂದು ಸುದೀಪ್ ಹೇಳಿದಾಗ ಗಿಲ್ಲಿ ಮೌನಕ್ಕೆ ಜಾರಿದರು. ಒಂದು ವೇಳೆ ಅವರು ಬೇರೆ ಕಾರಣಗಳನ್ನು ನೀಡಿದ್ದರೆ ಇನ್ನುಳಿದ ಸ್ಪರ್ಧಿಗಳಿಗೆ ಕಾವ್ಯಾರನ್ನು ಮುಂದಿನ ಬಾರಿ ನಾಮಿನೇಟ್ ಮಾಡಲು ಸ್ವತಃ ಗಿಲ್ಲಿಯೇ ಸಹಾಯ ಮಾಡಿಕೊಟ್ಟಂತೆ ಆಗಿರುತ್ತಿತ್ತು. ಹಾಗಾಗಿ ಈ ಬಾರಿ ಸುದೀಪ್ ಎದುರು ಗಿಲ್ಲಿ ಮೌನವಾಗಿ ಇದ್ದಿದ್ದು ಕೂಡ ಒಂದು ಬಗೆಯ ತಂತ್ರಗಾರಿಕೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.

ಇದನ್ನೂ ಓದಿ: ಬಿಗ್​​ಬಾಸ್: ಗಿಲ್ಲಿಯ ಗುಟ್ಟು ರಟ್ಟು ಮಾಡಿದ ಸುದೀಪ್

ಅದೇನೇ ಇರಲಿ, ಒಟ್ಟಿನಲ್ಲಿ ಗಿಲ್ಲಿ ನಟ ಅವರು ಕ್ಯಾಪ್ಟನ್ ಆಗಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟವನ್ನು ತೋರಿಸಿದ್ದಾರೆ. ಕೆಲವರಿಗೆ ಅವರ ವರ್ತನೆ ಇಷ್ಟ ಆಗಿಲ್ಲ. ಆದರೆ ಅವರು ಎಂದಿನಂತೆ ತಮ್ಮ ಕಾಮಿಡಿ ಮೂಲಕವೇ ಪ್ರೇಕ್ಷಕರು ನಗಿಸುತ್ತಿದ್ದಾರೆ. ಕಳೆದ ವಾರ ಧ್ರುವಂತ್ ಅವರು ಕಳಪೆ ಪಟ್ಟ ಪಡೆದು ಜೈಲು ಸೇರಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಬೆಂಗಳೂರಿನ ಈ ಪ್ರದೇಶಗಳಲ್ಲಿ ಹೆಚ್ಚಿದೆ ಕಳಪೆ ಏರ್ ಕ್ವಾಲಿಟಿ! – Kannada News | Bangalore Air Pollution Crisis: Bengaluru and surrounding places face severe Air pollution

ಬೆಂಗಳೂರಿನ ಈ ಪ್ರದೇಶಗಳಲ್ಲಿ ಹೆಚ್ಚಿದೆ ಕಳಪೆ ಏರ್ ಕ್ವಾಲಿಟಿ!

ಬೆಂಗಳೂರು, ಜನವರಿ 04: ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ (Bengaluru Air Quality) ಇಂದಿನ ಗಾಳಿಯ ಗುಣಮಟ್ಟ 164 ಇದ್ದು, ನಗರದ ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿದೆ. ಇಂದೂ PM2.5 74 ಇದ್ದರೆ, PM10 101 ಇದೆ. ಕಳೆದ ಕೆಲ ದಿನಕ್ಕೆ ಹೋಲಿಸಿದರೆ ಇಂದಿನ ಏರ್ ಕ್ವಾಲಿಟಿ ಸುಧಾರಿಸಿದೆ ಎನಿಸಿದರೂ WHO ಪ್ರಕಾರ ಈ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ

ಕಳಪೆ ಗುಣಮಟ್ಟವಿರುವ ಬೆಂಗಳೂರಿನ ಪ್ರದೇಶಗಳು

ಇತ್ತೀಚಿನ ವರದಿಗಳ ಪ್ರಕಾರ, ಕಲ್ಯಾಣ ನಗರದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕವು (AQI) ಆಗಾಗ್ಗೆ 170 ದಾಟುತ್ತಿದ್ದು, ಇದು ನಗರದಲ್ಲೇ ಅತ್ಯಂತ ಕಳಪೆ ಮಟ್ಟದ ಗಾಳಿ ಇರುವ ಪ್ರದೇಶಗಳಲ್ಲಿ ಒಂದಾಗಿದೆ. ವಾಹನ ದಟ್ಟಣೆಗೆ ಕುಖ್ಯಾತಿ ಪಡೆದಿರುವ ಸಿಲ್ಕ್ ಬೋರ್ಡ್ ಜಂಕ್ಷನ್, ನೈಟ್ರೋಜನ್ ಡೈಆಕ್ಸೈಡ್ (NO2) ಮತ್ತು ಧೂಳಿನ ಕಣಗಳ ಅತಿ ದೊಡ್ಡ ಕೇಂದ್ರವಾಗಿದೆ. ವೈಟ್‌ಫೀಲ್ಡ್ ಮತ್ತು ಐಟಿಪಿಎಲ್​ನಲ್ಲಿ ನಿರಂತರ ನಿರ್ಮಾಣ ಕಾಮಗಾರಿಗಳು ಮತ್ತು ಟ್ರಾಫಿಕ್ ಸಮಸ್ಯೆಗಳು ಗಾಳಿಯ ಗುಣಮಟ್ಟವನ್ನು ‘ಅನಾರೋಗ್ಯಕರ’ (Unhealthy) ಮಟ್ಟಕ್ಕೆ ತಳ್ಳಿವೆ. ಕೈಗಾರಿಕಾ ಹೊರಸೂಸುವಿಕೆಯಿಂದಾಗಿ ಜಿಗಣಿಯಲ್ಲಿ ಕೆಲವೊಮ್ಮೆ AQI ಮಟ್ಟ 187 ಕ್ಕೂ ಹೆಚ್ಚು ದಾಖಲಾಗಿದೆ. ಹೆಬ್ಬಾಳ ಮತ್ತು ಮೆಖ್ರಿ ಸರ್ಕಲ್, ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಗಳಲ್ಲಿನ ನಿರಂತರ ವಾಹನ ಸಂಚಾರವು ಗಾಳಿಯನ್ನು ಹೆಚ್ಚು ಕಲುಷಿತಗೊಳಿಸಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –164
  • ಮಂಗಳೂರು-164
  • ಮೈಸೂರು – 134
  • ಬೆಳಗಾವಿ – 160
  • ಕಲಬುರ್ಗಿ – 127
  • ಶಿವಮೊಗ್ಗ – 170
  • ಬಳ್ಳಾರಿ – 200
  • ಹುಬ್ಬಳ್ಳಿ- 104
  • ಉಡುಪಿ –160
  • ವಿಜಯಪುರ –97

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆಟವಾಡಲು ಮಕ್ಕಳ ಕೈಗೆ ಮೊಬೈಲ್ ಕೊಟ್ಟು, ಕೆರೆಗೆ ಹಾರಿದ ಮಹಿಳೆ – Kannada News | Tragedy in Telangana: Mother Leaves Children Playing, Later Found Dead

ತೆಲಂಗಾಣ, ಜನವರಿ 04: ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ(Suicide) ಮಾಡಿಕೊಳ್ಳುವ ಪರಿಪಾಠ ಮಿತಿ ಮೀರಿದೆ. ಮುದ್ದಿನಂಥಾ ಇಬ್ಬರು ಮಕ್ಕಳನ್ನು ಬಿಟ್ಟು ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ವಸಂತಾ(29) ಮೃತ ಮಹಿಳೆ. ಏಳು ವರ್ಷ ಹಾಗೂ ಮೂರೂವರೆ ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಪೊಲೀಸರು ಹೇಳುವ ಪ್ರಕಾರ, ವಸಂತಾ ತನ್ನ ಪತಿ ಲಕ್ಷ್ಮಣ್ ಅವರನ್ನು ನಾಲ್ಕು ವರ್ಷಗಳ ಹಿಂದೆ ಕಳೆದುಕೊಂಡಿದ್ದರು.

ಅಂದಿನಿಂದ ತನ್ನ ತಾಯಿ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದರು. ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುವ ಮೂಲಕ ಅವರು ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದರು.

ಶುಕ್ರವಾರ ಸಂಜೆ, ಅವರು ತನ್ನ ಮಕ್ಕಳನ್ನು ಟ್ಯಾಂಕ್ ಬಂಡ್‌ಗೆ ಕರೆತಂದು, ಆಟವಾಡಲು ಮೊಬೈಲ್ ಫೋನ್ ನೀಡಿ, ನಂತರ ಹುಸೇನ್ ಸಾಗರ್ ಸರೋವರಕ್ಕೆ ಹಾರಿದ್ದಾರೆ. ಸ್ಥಳದಲ್ಲಿದ್ದ ಕೆಲವರು ಘಟನೆಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.

ಮತ್ತಷ್ಟು ಓದಿ: ಕಲಬುರಗಿ: ಬಿಜೆಪಿ ಕಾರ್ಯಕರ್ತನ ಮನೆಯಲ್ಲೇ ಪಕ್ಷದ ಕಾರ್ಯಕರ್ತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅವರ ದೇಹವನ್ನು ನೀರಿನಿಂದ ಹೊರತೆಗೆದರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು.
ಮಕ್ಕಳ ಬಳಿ ಇದ್ದ ಮೊಬೈಲ್ ಫೋನ್ ಬಳಸಿ ಪೊಲೀಸರು ಮಹಿಳೆಯನ್ನು ಗುರುತಿಸಿ ಆಕೆಯ ಕುಟುಂಬಕ್ಕೆ ಮಾಹಿತಿ ನೀಡುವಲ್ಲಿ ಯಶಸ್ವಿಯಾದರು. ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಘಟನೆ
ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನ ಕೊಂದು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಹಾಗಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ನವೀನ್ ಕುಮಾರ್ (35) ಎನ್ನುವಾತ ತನ್ನ ಪತ್ನಿ ವತ್ಸಲಳನ್ನು(30) ಕೊಂದು ಬಳಿ ತಾನು ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದರಿಂದ ತಂದೆ-ತಾಯಿಯನ್ನು ಕಳೆದುಕೊಂಡ 7 ವರ್ಷದ ಹೆಣ್ಣು ಮಗು ಅನಾಥವಾಗಿದೆ. ನವೀನ್ ಹಾಗೂ ವತ್ಸಲ ಕಳೆದ 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ 7 ವರ್ಷದ ಹೆಣ್ಣುಮಗು ಇದೆ.

ಸಣ್ಣಪುಟ್ಟ ವಿಚಾರಕ್ಕೆ ಪತಿ, ಪತ್ನಿ ಜಗಳವಾಡುತ್ತಿದ್ದರು. ಕಳೆದ ವಾರ ದಂಪತಿ ಗಲಾಟೆ ಮಾಡಿಕೊಂಡು ಮಹಿಳಾ ಠಾಣೆ ಮೆಟ್ಟಿಲೇರಿದ್ದರು. ಇಂದು (ಡಿಸೆಂಬರ್ 15) ಗಲಾಟೆ ವಿಕೋಪಕ್ಕೆ ತಿರುಗಿದ್ದು, ನವೀನ್​​, ವಾತ್ಸಲಳನ್ನು ಕತ್ತುಹಿಸುಕಿ ಕೊಂದಿದ್ದಾನೆ. ಬಳಿಕ ನವೀನ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೆಂಡತಿಯನ್ನು ಮಂಚದ ಮೇಲೆಯೇ ಕೊಂದು ಬಳಿಕ ಮೇಲೆ ಇದ್ದ ಫ್ಯಾನ್​​ಗೆ ನೇಣುಬಿಗಿದುಕೊಂಡು ಆತ್ಯೆಹತ್ಯೆ ಮಾಡಿಕೊಂಡಿದ್ದು, ನವೀನ್ ಮೃತದೇಹ ಪತ್ನಿ ವಾತ್ಸಲ ಮೃತದೇಹದ ಮೇಲೆ ನೇತಾಡುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ಇನ್ನು ಗಂಡ ಹೆಂಡತಿ ಜಗಳದಲ್ಲಿ ಪುಟ್ಟ ಮಗು ಮಾತ್ರ ಅನಾಥವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಾಸಕ ಲಕ್ಷ್ಮಣ ಸವದಿ ಪುತ್ರನಿಂದ ಹಲ್ಲೆ ಆರೋಪ: ಡಿಸಿಸಿ ಬ್ಯಾಂಕ್ ನೌಕರರ ಪ್ರತಿಭಟನೆ – Kannada News | Chidanand Savadi Allegedly Attacks DCC Bank Worker, Protests Erupt in Athani

ಬೆಳಗಾವಿ, ಜನವರಿ 04: ಶಾಸಕ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ವಿರುದ್ಧ ಡಿಸಿಸಿ ಬ್ಯಾಂಕ್ ನೌಕರರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಈ ಘಟನೆಯನ್ನು ಖಂಡಿಸಿ, ಸವದಿ ಪುತ್ರನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಡಿಸಿಸಿ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣೆ ಎದುರು ಮತ್ತು ಡಿಸಿಸಿ ಬ್ಯಾಂಕ್ ಮುಂಭಾಗ ಎರಡೂ ಕಡೆ ಧರಣಿ ನಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಮತ್ತೊಂದೆಡೆ ಶಾಸಕ ಲಕ್ಷ್ಮಣ ಸವದಿ ಅವರ ನಿವಾಸದ ಬಳಿ  ಅಭಿಮಾನಿಗಳು ಜಮಾಯಿಸಿದ್ದಾರೆ. ಯಾವುದೇ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಈ ವೇಳೆ ಲಕ್ಷ್ಮಣ ಸವದಿ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಟೀಮ್ ಇಂಡಿಯಾದಿಂದ ಮೂವರು ಆಟಗಾರರು ಔಟ್

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಇಂದು ಶುಷ್ಕ ವಾತಾವರಣ, ಬೆಂಗಳೂರಿನಲ್ಲಿ ಮಂಜು – Kannada News | Bengaluru temperature: Dry weather all over karnataka

ರಾಜ್ಯದಲ್ಲಿ ಇಂದು ಶುಷ್ಕ ವಾತಾವರಣ

ಬೆಂಗಳೂರು, ಜನವರಿ 04: ಕಳೆದ ಎರಡು ದಿನಗಳಿಂದ ದಕ್ಷಿಣ ಒಳನಾಡಿನ ಪ್ರದೇಶದಲ್ಲಿ ತುಂತುರು (Weather Forecast) ಮಳೆಯಾಗುತ್ತಿದ್ದು, ಇಂದು ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅರೊಂದಿಗೆ ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿಯೂ ಶುಷ್ಕ ವಾತಾವರಣ ಇರಲಿದ್ದು, ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಒಣಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಮಂಜು

ಬೆಂಗಳೂರಿನಲ್ಲಿ ಇಂದು ಮಂಜು ಕವಿದ ವಾತಾವರಣವಿದ್ದು, ತಾಪಮಾನ ಕನಿಷ್ಠ 16°C ಇದ್ದು, ಗರಿಷ್ಠ 28°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತದಲ್ಲಿ 30 ದಿನಕ್ಕೆ ‘ಧುರಂಧರ್’ ಕಲೆಕ್ಷನ್ 759 ಕೋಟಿ ರೂ; ವಿಶ್ವಾದ್ಯಂತ 1167 ಕೋಟಿ – Kannada News | Dhurandhar Box Office Collection: Ranveer Singh movie beats Shah Rukh Khan starrer Jawan

ಗಲ್ಲಾಪೆಟ್ಟಿಗೆಯಲ್ಲಿ ಅನೇಕ ಹೊಸ ದಾಖಲೆಗಳನ್ನು ಬರೆದಿರುವ ‘ಧುರಂಧರ್’ (Dhurandhar) ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದಾರೆ. ಆದಿತ್ಯ ಧಾರ್ ನಿರ್ದೇಶನ ಮಾಡಿರುವ ಈ ಸಿನಿಮಾದಿಂದ ನಟ ರಣವೀರ್ ಸಿಂಗ್ (Ranveer Singh) ಅವರಿಗೆ ಬಹುದೊಡ್ಡ ಗೆಲುವು ಸಿಕ್ಕಿದೆ. ಬಿಡುಗಡೆಯಾಗಿ 30 ದಿನ ಕಳೆದರೂ ಸಹ ‘ಧುರಂಧರ್’ ಕ್ರೇಜ್ ಕಡಿಮೆ ಆಗಿಲ್ಲ. 20ನೇ ದಿನ ಕೂಡ ಈ ಸಿನಿಮಾ 10 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ (Box Office Collection) ಮಾಡಿದೆ. ಈವರೆಗೂ ಭಾರತದ ಮಾರುಕಟ್ಟೆಯಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್ 759 ಕೋಟಿ ರೂಪಾಯಿ ಆಗಿದೆ. ವಿಶಾದ್ಯಂತ 1167 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

ಇನ್ನು ಕೆಲವೇ ದಿನಗಳಲ್ಲಿ ‘ಧುರಂಧರ್’ ಸಿನಿಮಾದ ಕಲೆಕ್ಷನ್ ಭಾರತದಲ್ಲಿ 800 ಕೋಟಿ ರೂಪಾಯಿ ಮೀರಲಿದೆ. ವಿಶ್ವಾದ್ಯಂತ 1200 ಕೋಟಿ ಆಗಲಿದೆ. ಆ ಮೂಲಕ ಹೊಸ ದಾಖಲೆಯನ್ನು ಈ ಸಿನಿಮಾ ಸೃಷ್ಟಿ ಮಾಡಲಿದೆ. ನೈಜ ಘಟನೆಗಳನ್ನು ಆಧರಿಸಿ ನಿರ್ಮಾಣ ಆಗಿರುವ ಈ ಸಿನಿಮಾಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಪ್ರತಿ ದಿನ ಬಹುಕೋಟಿ ರೂಪಾಯಿ ಆದಾಯ ಹರಿದುಬರುತ್ತಿದೆ.

ರಣವೀರ್ ಸಿಂಗ್, ಅರ್ಜುನ್ ರಾಮ್​​ಪಾಲ್, ಸಾರಾ ಅರ್ಜುನ್, ಸಂಜಯ್ ದತ್, ಅಕ್ಷಯ್ ಖನ್ನಾ ಮುಂತಾದವರು ‘ಧುರಂಧರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಿಂದಾಗಿ ಎಲ್ಲ ಕಲಾವಿದರ ಬೇಡಿಕೆ ಹೆಚ್ಚಾಗಿದೆ. ಇಷ್ಟು ದೊಡ್ಡ ಗೆಲುವು ಸಿಕ್ಕಿದ್ದರಿಂದ ಎಲ್ಲ ನಟ-ನಟಿಯರಿಗೆ ದೊಡ್ಡ ದೊಡ್ಡ ಆಫರ್​​ಗಳು ಬರಲು ಆರಂಭ ಆಗಿದೆ. ಎಲ್ಲ ಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳು ‘ಧುರಂಧರ್’ ಬಗ್ಗೆಯೇ ಚರ್ಚೆ ಮಾಡುತ್ತಿದ್ದಾರೆ.

ಚೀನಾ ಮಾರುಕಟ್ಟೆಯನ್ನು ಹೊರತುಪಡಿಸಿ, ವಿಶ್ವಾದ್ಯಂತ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿ ಶಾರುಖ್ ಖಾನ್ ನಟನೆಯ ‘ಜವಾನ್’ ಚಿತ್ರಕ್ಕಿತ್ತು. ಈಗ ಆ ದಾಖಲೆಯು ‘ಧುರಂಧರ್’ ಸಿನಿಮಾದ ಪಾಲಾಗಿದೆ. 2023ರಲ್ಲಿ ಬಿಡುಗಡೆ ಆದ ‘ಜವಾನ್’ ಸಿನಿಮಾ ವಿಶ್ವಾದ್ಯಂತ 1600 ಕೋಟಿ ರೂಪಾಯಿ ಗಳಿಸಿತ್ತು. ‘ಧುರಂಧರ್’ ಸಿನಿಮಾ ಈಗಾಗಲೇ 1167 ಕೋಟಿ ರೂಪಾಯಿ ದಾಟಿದೆ.

ಇದನ್ನೂ ಓದಿ: ಮುಂಬೈನಲ್ಲಿ ‘ಧುರಂಧರ್’ ಬಗ್ಗೆ ಮನಸಾರೆ ಮಾತಾಡಿದ ಶಿವರಾಜ್​ಕುಮಾರ್

ನಟ ಅಕ್ಷಯ್ ಖನ್ನಾ ಅವರು ‘ಧುರಂಧರ್’ ಸಿನಿಮಾದಿಂದ ಸೂಪರ್ ಸ್ಟಾರ್ ಆಗಿದ್ದಾರೆ. ಅವರು ವಿಲನ್ ಪಾತ್ರ ಮಾಡಿದ್ದರೂ ಕೂಡ ಮಿಂಚುತ್ತಿದ್ದಾರೆ. ನಟಿ ಸಾರಾ ಅರ್ಜುನ್ ಅವರು ಕೂಡ ಸಖತ್ ಜನಪ್ರಿಯತೆ ಪಡೆದಿದ್ದಾರೆ. ನಿರ್ದೇಶಕ ಆದಿತ್ಯ ಧಾರ್ ಅವರ ಬೇಡಿಕೆ ಡಬಲ್ ಆಗಿದೆ. ‘ಧುರಂಧರ್’ ಸಿನಿಮಾ ಒಟಿಟಿಗೆ ಬರಲಿ ಎಂದು ಕೂಡ ಪ್ರೇಕ್ಷಕರು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಮೂರು ಬರ್ನರ್ ಇರೋ ಸ್ಟವ್ ಬಳಸಿದರೆ ಎಚ್ಚರ!

ಬೆಂಗಳೂರು, ಜನವರಿ 04: ಇಂದಿನ ದಿನಗಳಲ್ಲಿ ನಾವು ಬಳಸುವ ಗ್ಯಾಸ್ ಸ್ಟವ್‌ಗಳಲ್ಲಿ ಎರಡು, ಮೂರು, ನಾಲ್ಕು ಅಥವಾ ಐದು ಬರ್ನರ್‌ಗಳಿರುತ್ತವೆ. ಆದರೆ, ಮೂರು ಬರ್ನರ್‌ಗಳಿರುವ ಸ್ಟವ್ ಅನ್ನು ಮನೆಯಲ್ಲಿ ಬಳಸುವುದರಿಂದ ಶುಭವಲ್ಲ ಎಂದು ಹೇಳಲಾಗುತ್ತದೆ. ಅಂತಹ ಸ್ಟವ್ ಕುಟುಂಬದಲ್ಲಿ ಜಗಳ, ಕಲಹ, ಅನಾರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಅಂದರೆ ಹಣಕಾಸಿನ ಹರಿವು ಕಡಿಮೆಯಾಗಿ ಉಳಿತಾಯ ಕಷ್ಟವಾಗುತ್ತದೆ. ವಾಸ್ತು ಪ್ರಕಾರ, ಎರಡು ಅಥವಾ ನಾಲ್ಕು ಬರ್ನರ್‌ಗಳಿರುವ ಗ್ಯಾಸ್ ಸ್ಟವ್ ಮನೆಗೆ ಅತ್ಯಂತ ಶುಭಕರ. ಎರಡು ಬರ್ನರ್‌ಗಳು ಮಹಾಶುಭ ಎಂದು ಪರಿಗಣಿಸಲಾಗುತ್ತದೆ. ಹೋಟೆಲ್‌ಗಳಂತಹ ವಾಣಿಜ್ಯ ಸ್ಥಳಗಳಲ್ಲಿ ಐದು ಅಥವಾ ಆರು ಬರ್ನರ್‌ಗಳನ್ನು ಬಳಸಬಹುದು, ಆದರೆ ಮನೆಗಳಿಗೆ ಮೂರು ಬರ್ನರ್‌ಗಳನ್ನು ಸೂಕ್ತವಲ್ಲ. ಈ ಎಲ್ಲಾ ಅಂಶಗಳು ನಂಬಿಕೆಯ ಆಧಾರದಲ್ಲಿವೆ ಎಂದು ನೆನಪಿಡಿ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

Source link

Exit mobile version