Horoscope Today 04 January: ಇಂದು ಈ ರಾಶಿಯವರ ಆರ್ಥಿಕ ಕಾರ್ಯಗಳಲ್ಲಿ ಜಯ – Kannada News | Daily Horoscope for January 3rd​​ 2025: Dr. Basavaraj Gurujis Predictions for Zodiac Signs

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಜನವರಿ 4, 2026, ಭಾನುವಾರ, ವಿಶ್ವಾಸನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯಮಾಸ, ಹೇಮಂತ ಋತು, ಶುಕ್ಲ ಪಕ್ಷ, ಕೃಷ್ಣ ಪಕ್ಷ, ಪಾಡ್ಯ, ಪುನರ್ವಸು ನಕ್ಷತ್ರ, ಐಂದ್ರ ಯೋಗ, ಕೌಲವಕರಣ ಇರಲಿದೆ. ರಾಹುಕಾಲ ಸಂಜೆ 4:41 ರಿಂದ 6:07 ರವರೆಗೆ ಇರುತ್ತದೆ. ಹಾಗೆಯೇ, ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲ ಬೆಳಗ್ಗೆ 10:59 ರಿಂದ 12:24 ರವರೆಗೆ ಇರಲಿದೆ. ಇಂದು ರವಿ ಧನು ರಾಶಿಯಲ್ಲಿ ಮತ್ತು ಚಂದ್ರ ಕಟಕ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ. ವಿಶ್ವ ಬ್ರೈಲ್ ದಿನದ ಆಚರಣೆಯ ಕುರಿತು ಸಹ ಮಾಹಿತಿ ನೀಡಲಾಗಿದೆ.

ಮೇಷ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭಫಲ ಇರಲಿದ್ದು, ಕೆಲಸ ಕಾರ್ಯಗಳಲ್ಲಿ ಉತ್ಸುಕತೆ, ಸ್ನೇಹಿತರು ಮತ್ತು ಮೇಲಧಿಕಾರಿಗಳ ಬೆಂಬಲ ಇರಲಿದೆ. ವ್ಯಾಪಾರಸ್ಥರು, ರೈತರು, ಸರ್ಕಾರಿ ನೌಕರರಿಗೆ ಉತ್ತಮ ದಿನವಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಹೂಡಿಕೆಯಿಂದ ಲಾಭವಾಗಲಿದೆ. ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲ ಇರಲಿದ್ದು, ಪ್ರಯತ್ನಗಳಲ್ಲಿ ಸಫಲತೆ ಮತ್ತು ಆರ್ಥಿಕವಾಗಿ ಉತ್ತಮ ಆದಾಯ ಇರಲಿದೆ. ಆತ್ಮವಿಶ್ವಾಸ ಗಟ್ಟಿಯಾಗಿರಲಿದ್ದು, ಪಾಲುದಾರಿಕೆಯಿಂದ ಮತ್ತು ಹೊಸ ವ್ಯಾಪಾರಗಳಿಂದ ಲಾಭವಾಗಲಿದೆ. ಮಹಿಳೆಯರಿಗೆ ಹಳೆ ಬಾಕಿ ವಸೂಲಾಗುವ ಸಾಧ್ಯತೆಯಿದೆ. ಅನಗತ್ಯ ವಾದವಿವಾದಗಳಿಂದ ದೂರವಿರಲು ಸಲಹೆ ನೀಡಲಾಗಿದೆ ಎಂದು ಡಾ. ಬಸವರಾಜ ಗುರೂಜಿ ಹಾರೈಸಿದ್ದಾರೆ.

Source link

Horoscope Today 04 January: ಇಂದು ಈ ರಾಶಿಯವರು ಪ್ರೇಮಿಗೆ ಸಮಯ ಕೊಡುವರು – Kannada News | Horoscope Today in Kannada on 04 January Sunday; Dina Bhavishya Tithi Panchanga Details here

ಮೇಷ ರಾಶಿ :

ವಿಭಿನ್ನ ಯೋಚನೆಗಳಿಗೆ ಮಾನ್ಯತೆ ಸಿಗುತ್ತದೆ. ಸ್ನೇಹಿತರ ಸಹಕಾರದಿಂದ ಕೆಲಸ ಸುಲಭ. ಹಣಕಾಸಿನಲ್ಲಿ ಸುಧಾರಣೆ. ತಾಂತ್ರಿಕ ಅಥವಾ ಹೊಸ ಯೋಜನೆಗೆ ಅನುಕೂಲಕರ ದಿನ. ಹಿರಿಯರನ್ನು ಅನಾದರ ಮಾಡಿದಂತೆ ಅನ್ನಿಸಬಹುದು. ಖಾಸಗಿ ಸಂಸ್ಥೆಯಲ್ಲಿ ಇರುವವರಿಗೆ ವೇತನವು ಹೆಚ್ಚಾಗಬಹುದು. ಬೆನ್ನುತಟ್ಟಿಸಿಕೊಳ್ಳಯವುದೂ ಒಂದು‌ ಕಲೆ. ನೀವು ವರ್ಗಾವಣೆಗೆ ಒತ್ತಡವನ್ನು ತರುವಿರಿ. ಮಕ್ಕಳ ಆರೋಗ್ಯಕ್ಕೆ ಖರ್ಚು ಮಾಡಬೇಕಾದೀತು. ಅಂತರಂಗದ ಧ್ವನಿ ಬಲವಾಗಿರುತ್ತದೆ. ಭಾವನಾತ್ಮಕ ನಿರ್ಧಾರಗಳಲ್ಲಿ ಸ್ಪಷ್ಟತೆ ಅಗತ್ಯ. ಉದ್ಯೋಗದಲ್ಲಿ ನಿಧಾನ ಪ್ರಗತಿ. ಹಣಕಾಸಿನಲ್ಲಿ ಮಿತ ವ್ಯಯ ಒಳಿತು. ಧ್ಯಾನ ಅಥವಾ ಪ್ರಾರ್ಥನೆ ಮನಸ್ಸಿಗೆ ಶಾಂತಿ ನೀಡುತ್ತದೆ ಪ್ರಸಿದ್ಧ ಸಂಸ್ಥೆಗೆ ಹೂಡಿಕೆ ಮಾಡಲಿದ್ದೀರಿ. ಯಾರ ಜೊತೆಗಾದರೂ ವಿವಾದವಾಗುವ ಸಾಧ್ಯತೆ ಇದೆ. ಇಂದು ಚರಾಸ್ತಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ. ಅಪಮಾನದಿಂದ ದ್ವೇಷವುಂಟಾಗಬಹುದು.

ವೃಷಭ ರಾಶಿ:

ಹೊಣೆಗಾರಿಕೆ ಹೆಚ್ಚುವ ದಿನ. ಶ್ರಮಕ್ಕೆ ತಕ್ಕ ಗೌರವ ಸಿಗುವ ಸೂಚನೆ. ಉದ್ಯೋಗದಲ್ಲಿ ಹಿರಿಯರಿಂದ ಬೆಂಬಲ. ಹಣಕಾಸಿನಲ್ಲಿ ನಿಧಾನವಾದರೂ ಭದ್ರತೆ. ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳಿದ್ದರೂ ಬೇರೆ ಕಾರ್ಯದ ಒತ್ತಡದಿಂದ ಸಾಧ್ಯವಾಗದು. ನಿಮ್ಮ ಬದುಕಿನ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಿಕೊಳ್ಳಬೇಕಾಗಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು. ಸಹೋದ್ಯೋಗಿಗಳಿಗೆ ಸಹಕರಿಸುವ ಮನಸ್ಸಾಗುವುದು. ಮೋಜಿನ ಕಾರಣಕ್ಕೆ ಸುತ್ತಾಟ ಮಾಡುವಿರಿ. ಆರೋಗ್ಯದಲ್ಲಿ ದೈಹಿಕ ಆಯಾಸ. ಸಮಯಪಾಲನೆ ಮಾಡಿದರೆ ಎಲ್ಲ ಕೆಲಸ ಸರಾಗವಾಗಿ ಮುಗಿಯುತ್ತವೆ. ಆಸೆಯಿಂದ ಕಳೆದುಕೊಳ್ಳುವುದು ಹೆಚ್ಚಾಗಬಹುದು. ಬೇಡವೆಂದರೂ ಬೇಡದ ವಿಚಾರಗಳು ತಲೆಯಲ್ಲಿ ಗಿರಿಕಿಯಾಗಬಹುದು.

ಮಿಥುನ ರಾಶಿ:

ಹೊಸ ಗುರಿಗಳ ಬಗ್ಗೆ ಚಿಂತನೆ. ವಿದ್ಯಾಭ್ಯಾಸ ಅಥವಾ ತರಬೇತಿಗೆ ಒಳ್ಳೆಯ ದಿನ. ದೂರ ಪ್ರಯಾಣ ಅಥವಾ ವಿದೇಶ ಸಂಪರ್ಕ ಸಾಧ್ಯ. ಹಣಕಾಸಿನಲ್ಲಿ ನಿರೀಕ್ಷಿತ ಲಾಭ. ಅಲ್ಪ ಆದಾಯದಲ್ಲಿ ತೃಪ್ತಿ ಹೊಂದಬೇಕಾದೀತು. ಹೆಚ್ಚಿನ ಆದಾಯದಿಂದ ದುರಭ್ಯಾಸವು ಹೆಚ್ಚಾಗಬಹುದು. ಶಿಕ್ಷಕರು ವೇತನವನ್ನು ಹೆಚ್ಚಿಸಿಕೊಳ್ಳುವರು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಉತ್ತಮ. ನಿಮ್ಮ ಮಕ್ಕಳ ವರ್ತನೆಯಿಂದ ಬೇಸರ ಆಗುವುದು. ಬೇರೆಯವರಿಂದ ದೂರನ್ನೂ ಕೇಳಬೇಕಾದೀತು. ಆತುರದಿಂದ ಮಾಡಿದ ಮಾತು ಸಂಬಂಧಕ್ಕೆ ಧಕ್ಕೆ ತರಬಹುದು. ಸಂಯಮದಿಂದ ನಡೆದುಕೊಂಡರೆ ದಿನ ಫಲಪ್ರದ. ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆಯಿದೆ. ಲಲಿತಕಲೆಗಳಲ್ಲಿ ನಿಮ್ಮ ಛಾಪು ಮೂಡಿಸುವ ಪ್ರಯತ್ನ ಇರುವುದು. ಕೆಲವನ್ನು ನೀವು ಅನುಭವಿಸುವುದು ಅನಿವಾರ್ಯ.

ಕರ್ಕಾಟಕ ರಾಶಿ:

ಗುಪ್ತ ಚಿಂತನೆಗಳು ಹೆಚ್ಚಾಗುತ್ತವೆ. ಎಲ್ಲವನ್ನೂ ಎಲ್ಲರೊಂದಿಗೆ ಹಂಚಿಕೊಳ್ಳಬೇಡಿ. ಕೆಲಸದಲ್ಲಿ ಒತ್ತಡ ಇದ್ದರೂ ಫಲ ಸಿಗುತ್ತದೆ. ಶತ್ರುಗಳಿಂದ ಎಚ್ಚರ. ಹಣಕಾಸಿನಲ್ಲಿ ನಿಧಾನ ಪ್ರಗತಿ. ಅಪರಿಚಿತರ ಮೂಲಕ ನಿಮ್ಮ ಹಣವನ್ನು ಕಳೆದುಕೊಳ್ಳಲಿದ್ದೀರಿ. ಒಪ್ಪಿಕೊಂಡ ಕೆಲಸದಲ್ಲಿ ಯಶಸ್ಸು ಸಾಧಿಸುವುದು ಆಗದು.‌ ಇಂದು ಬಹಳ ವಾಗ್ವಾದದ ಅನಂತರ ಸಂಗಾತಿಯ ಬೆಂಬಲವು ನಿಮ್ಮ‌‌ ಕಾರ್ಯಗಳಿಗೆ ಸಿಗಲಿದೆ. ಅಗತ್ಯವಿದ್ದಾಗ ಮಾತ್ರ ಸಾಲದ ಬಗ್ಗೆ ಆಲೋಚಿಸಿ. ಸರ್ಕಾರಿ ಉದ್ಯೋಗದವರು ವರ್ಗಾವಣೆಯಿಂದ ದೂರವಿರಬೇಕಾಗಬಹುದು. ಗೃಹ ನಿರ್ಮಾಣದ ಕಾರ್ಯವನ್ನು ಕೆಲವು ದಿನ ಮುಂದೂಡುವುದು ಉತ್ತಮ. ನಿಮ್ಮ ಮನೆಯಲ್ಲಿ ಮಂಗಳ ಕಾರ್ಯಕ್ಕೆ ತಯಾರಿ ಆಗಬಹುದು. ಹಳೆಯ ರೋಗಗಳು ಮರುಕಳಿಸದಂತೆ ಎಚ್ಚರಿಕೆ ಬೇಕಾದೀತು. ನೆರಮನೆಯವರ ಜೊತೆ ವಾದ ಮಾಡಬೇಕಾದೀತು. ಎಲ್ಲವನ್ನೂ ಬೇರೆಯವರ ದೃಷ್ಟಿಯಲ್ಲಿ ನೋಡುವುದು ಸರಿಯಾಗದು.

ಸಿಂಹ ರಾಶಿ:

ಯೋಜಿತ ಕಾರ್ಯಗಳು ಫಲ ನೀಡುತ್ತವೆ. ಲೆಕ್ಕಾಚಾರದಲ್ಲಿ ತಪ್ಪು ಮಾಡದಿರಿ. ಉದ್ಯೋಗದಲ್ಲಿ ಪ್ರಶಂಸೆ ಸಿಗುವ ಸಾಧ್ಯತೆ. ಆರೋಗ್ಯದಲ್ಲಿ ಹೊಟ್ಟೆ ಸಂಬಂಧಿತ ತೊಂದರೆ. ಮೇಲಿಂದ‌ ಮೇಲೆ‌ ಬರುತ್ತಿರುವ ಆರೋಗ್ಯದ ತೊಂದರೆಯು ನಿಮಗೆ ಅಸತಂಕವನ್ನು ಉಂಟುಮಾಡಬಹುದು. ನಿಮ್ಮ ಕಾರ್ಯದಲ್ಲಿ ತಾಳ್ಮೆಯು ಅಗತ್ಯವಾಗಿ ಬೇಕಾಗುವುದು. ಶತ್ರುವನ್ನು ಉಪಾಯದಿಂದ ಗೆಲ್ಲುವ ತಂತ್ರ ಬಳಸಿ. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು. ಮೌನ ಮತ್ತು ಸಹನೆ ನಿಮ್ಮ ಶಕ್ತಿಯಾಗಲಿದೆ. ಸಂಜೆ ವೇಳೆಗೆ ಮನಃಶಾಂತಿ. ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯು ಆಗಮನದಿಂದ ಸಂತೋಷವು ಇರಲಿದೆ. ರಾಜಕೀಯ ನೇತಾರರ ಸಹವಾಸವನ್ನು ಹೇಗೋ ಸಂಪಾದಿಸುವಿರಿ. ಜೊತೆಗಾರರಲ್ಲಿ ಭಾವೈಕ್ಯತೆಯನ್ನು ಸಾಧಿಸಲು ಪ್ರಯತ್ನಿಸುವರು.

ಕನ್ಯಾ ರಾಶಿ:

ಸಂಬಂಧಗಳಲ್ಲಿ ಸಮತೋಲನ ಅಗತ್ಯ. ವಿವಾದ ಮಾತಿನ ಮೂಲಕವೇ ಬಗೆಹರಿಯುತ್ತದೆ. ಉದ್ಯೋಗದಲ್ಲಿ ಸಹಕಾರ ಸಿಗುತ್ತದೆ. ಹಣಕಾಸಿನಲ್ಲಿ ಸ್ಥಿರತೆ. ಕಲಾತ್ಮಕ ಅಥವಾ ಸೃಜನಾತ್ಮಕ ಕೆಲಸಗಳಿಗೆ ಉತ್ತಮ ದಿನ. ವಿದ್ಯಾಭ್ಯಾಸವು ಪೂರ್ಣ ಸಮಾಧಾನ ಕೊಡದು. ಕೆಲವನ್ನು ನೀವು ಬುದ್ಧಿಪೂರ್ವಕವಾಗಿ ಮಾಡುವಿರಿ. ಮನೋವಿಕಾರವನ್ನು ಕಡಿಮೆ‌ ಮಾಡಿಕೊಳ್ಳಿ. ಕುಟುಂಬದಲ್ಲಿ ನಡೆಯುವ ಕಾರ್ಯಗಳಿಗೆ ನಿಮ್ಮಿಂದ ಹೆಚ್ಚಿನ ಹಣ ಖರ್ಚು ಮಾಡುವ ಸನ್ನಿವೇಶವು ಬರಬಹುದು. ಹೂಡಿಕೆಯಲ್ಲಿ ಉತ್ಸಾಹವಿರುವ ನೀವು ವಿವೇಚನೆಯಿಂದ ಮುಂದುವರಿಯುವಿರಿ. ನಿರ್ಧಾರ ತೆಗೆದುಕೊಳ್ಳುವಾಗ ಮನಸ್ಸಿನ ಜೊತೆಗೆ ಬುದ್ಧಿಯನ್ನೂ ಬಳಸಿ. ಕುಟುಂಬ ಜೊತೆ ಸಮಯ ಕಳೆಯಲು ಆಗದು. ನಿಮಗೆ ಕಾಣಿಸಿದ್ದನ್ನು ಮಾತ್ರ ನಂಬುವಿರಿ. ಯಾರ ಮೇಲೋ ಅವಲಂಬಿತರಾಗಿ ಇರುವುದು ನಿಮಗೆ ಇಷ್ಟವಾಗದು.

ತುಲಾ ರಾಶಿ:

ಗೌರವ ಮತ್ತು ಪ್ರಭಾವ ಹೆಚ್ಚುವ ದಿನ. ನಾಯಕತ್ವ ಗುಣಗಳು ಹೊರಹೊಮ್ಮುತ್ತವೆ. ಆದರೆ ಅಹಂಕಾರದಿಂದ ದೂರವಿರುವುದು ಅಗತ್ಯ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಆಸ್ತಿಯ ದಾಖಲೆಗಳು ಕಾಣದೇ ಆತಂಕ ಉಂಟಾಗಬಹುದು. ಮಿತಿಯಲ್ಲಿ ನಿಮ್ಮ ಮಾತು ಇರಬೇಕಾಗುವುದು. ಸತ್ಯವನ್ನು ಮರೆಮಾಚಲು ತಂತ್ರವನ್ನು ಹೆಣೆಯಬಹುದು. ನಿಮ್ಮ ಜಾಣ್ಮೆಯಿಂದ ಆದಾಯವನ್ನು ಅಧಿಕ ಮಾಡಿಕೊಳ್ಳುವಿರಿ. ನಿಮ್ಮ ಅಸಹಾಯಕತೆಯನ್ನು ಮನೆಯವರ ಮುಂದೆ ಹೇಳಿಕೊಳ್ಳುವಿರಿ. ಹಣಕಾಸು ಸರಾಸರಿ. ಸಂಗಾತಿಯ ಮಾತು ಗಮನಿಸಿದರೆ ಸಂಬಂಧ ಬಲವಾಗುತ್ತದೆ. ಸಂಜೆ ವೇಳೆಗೆ ಯಶಸ್ಸಿನ ಅನುಭವ. ಆಕರ್ಷಕವಾಗಿ‌ ನೀವು ಇಂದು ಕಾಣಲಿದ್ದೀರಿ. ಮನೆಯ ನಿರ್ಮಣಾದ ಕನಸನ್ನು ಕಾಣುವಿರಿ.‌ ಸಣ್ಣ ಲೆಕ್ಕಾಚಾರವೇ ನಿಮ್ಮ ಉಳಿತಾಯದ ಮೂಲವಾಗಿದೆ.

ವೃಶ್ಚಿಕ ರಾಶಿ:

ಭಾವನಾತ್ಮಕ ಒತ್ತಡ ಹೆಚ್ಚಾಗಬಹುದು. ಹಳೆಯ ಘಟನೆಗಳು ನೆನಪಿಗೆ ಬರುತ್ತವೆ. ಕೆಲಸದಲ್ಲಿ ಗಮನ ತಪ್ಪದಂತೆ ನೋಡಿಕೊಳ್ಳಿ. ಹಣಕಾಸಿನಲ್ಲಿ ಅಪ್ರತ್ಯಾಶಿತ ಖರ್ಚು. ಉದ್ಯೋಗದ ಕಾರಣಕ್ಕೆ ಪ್ರವಾಸ ಮಾಡಬೇಕಾಗಬಹುದು. ವಿದೇಶದ ಸಂಪರ್ಕವು ವ್ಯಾಪಾರಕ್ಕಾಗಿ ಇರಲಿದೆ. ಅಪಮಾನವನ್ನು ಸಹಿಸಲಾಗದೇ ಎದುರಿಸಲೂ ಆಗದೇ ಹತಾಶೆಗೊಳ್ಳುವಿರಿ. ದುಃಖವನ್ನು ಆಪ್ತರ ಬಳಿ ಮಾತ್ರ ಹಂಚಿಕೊಳ್ಳಿ. ಶ್ರಮಪಟ್ಟು ಆರಂಭಿಸಿದ ಕಾರ್ಯಗಳು ಪಿತೂರಿಯಿಂದ ಅರ್ಧಕ್ಕೆ ಸ್ಥಗಿತವಾಗಬಹುದು. ತಾಳ್ಮೆ ಮತ್ತು ಮೌನವೇ ಇಂದು ನಿಮ್ಮ ರಕ್ಷಣೆ. ತಾಯಿಯ ಆಶೀರ್ವಾದದಿಂದ ಆತ್ಮಸ್ಥೈರ್ಯ ದೊರೆಯುತ್ತದೆ. ಸಂಗಾತಿಯ ಆಯ್ಕೆಯಲ್ಲಿ ಗೊಂದಲ ಇರುವುದು. ಅಲ್ಲಿಯೇ ಬಗೆಹರಿಸಿಕೊಳ್ಳಿ. ದೊಡ್ಡ ಮಾಡಿಕೊಳ್ಳುವುದು ಬೇಡ. ದೂರದಲ್ಲಿ ಎಲ್ಲೋ ನೆಮ್ಮದಿಯ ತಾಣ ಕಾಣಿಸುವುದು.

ಧನು ರಾಶಿ:

ಇಂದು ಸಂವಹನವೇ ನಿಮ್ಮ ಶಕ್ತಿ. ಹೊಸ ಸಂಪರ್ಕಗಳು ಭವಿಷ್ಯಕ್ಕೆ ಉಪಯೋಗವಾಗುತ್ತವೆ. ಕೆಲಸದಲ್ಲಿ ಬುದ್ಧಿವಂತಿಕೆಯ ಅಗತ್ಯ. ಆತುರದ ನಿರ್ಧಾರ ತಪ್ಪಿಸಿ. ನೂತನ ವೃತ್ತಿಪರರಿಗೆ ಉತ್ಸಾಹವು ಅಧಿಕವಾಗಿ ಇರಲಿದೆ. ಲೆಕ್ಕಾಚಾರದ ವಿಚಾರದಲ್ಲಿ ನಿಮಗೆ ಅಚ್ಚರಿ ಇರುವುದು. ಸತ್ಯವನ್ನು ನೋವಾಗದಂತೆ ತಿಳಿಸಿ. ಉಪಕಾರದ ವಿಚಾರದಲ್ಲಿ ನೀವು ಹಿಂದಿರುವಿರಿ. ವೃತ್ತಿಯು ಬೇಸರ ತರಿಸಬಹುದು. ಇಂದು ಸರ್ಕಾರಿ ನೌಕರರು ಅಧಿಕ‌ ಕಾರ್ಯಗಳ‌ ಕಡೆ ಗಮನ ಹರಿಸಬೇಕಾದೀತು. ಅಧಿಕಾರಿಗಳಿಂದ ಆರ್ಥಿಕತೆಯ ಪರಿಶೀಲನೆ ನಡೆಯುವುದು. ಸಹೋದರರಿಂದ ಸಹಾಯ ಸಿಗುತ್ತದೆ. ಪ್ರಯಾಣ ಸೂಚನೆ ಇದೆ. ರಾತ್ರಿ ವೇಳೆಗೆ ಒಳ್ಳೆಯ ಸುದ್ದಿ ಕೇಳುವ ಸಾಧ್ಯತೆ. ವಾಹನ ಚಲಾವಣೆಯಲ್ಲಿ ನಿಯಂತ್ರಣ ತಪ್ಪಬಹುದು. ಧಾರ್ಮಿಕವಾದ ಚಿಂತನೆಯನ್ನು ನಡೆಸಬಹುದು. ಬಂಧುಗಳ ಎದುರು ಸ್ವಾಭಿಮಾನವನ್ನು ಇಟ್ಟುಕೊಳ್ಳುವಿರಿ.

ಮಕರ ರಾಶಿ:

ಕುಟುಂಬದ ವಿಚಾರಗಳು ಪ್ರಮುಖವಾಗುತ್ತವೆ. ಆಸ್ತಿ ಅಥವಾ ಹಣಕ್ಕೆ ಸಂಬಂಧಿಸಿದ ಚರ್ಚೆ ನಡೆಯಬಹುದು. ಶಾಂತವಾಗಿ ಮಾತನಾಡಿದರೆ ಸಮಸ್ಯೆ ಪರಿಹಾರ. ಉದ್ಯೋಗದಲ್ಲಿ ಸ್ಥಿರತೆ. ಅಧ್ಯಾತ್ಮದ ವಿಚಾರದಲ್ಲಿ ಆಸಕ್ತಿಯು ಹೆಚ್ಚಾಗುವುದು. ಸುಮ್ಮನೇ ದೇಹಾಯಾಸವನ್ನು ಮಾಡಿಕೊಳ್ಳುವಿರಿ. ನೆರೆಯವರ ಜೊತೆ ಕಲಹವು ಬೇಡ. ನಂಬಿಕೆಯನ್ನು ಕಳೆದುಕೊಳ್ಳಬೇಕಾಗುವುದು. ನಿಮ್ಮಲ್ಲಿ ಎಷ್ಟೇ ಆತ್ಮವಿಶ್ವಾಸವಿದ್ದರೂ ಕೆಲಸಗಳ ಒತ್ತಡದಲ್ಲಿ ಗೊಂದಲದಲ್ಲಿ ಸಿಕ್ಕಿಕೊಳ್ಳುವಿರಿ. ಕುಟುಂಬ ಸದಸ್ಯರ ಮೇಲೆ ವಿನಾಕಾರಣ ಸಿಟ್ಟಾಗುವಿರಿ. ಅತಿಯಾದ ಹಠದಿಂದ ನಷ್ಟ ಸಂಭವ. ಆಹಾರ ಕ್ರಮದಲ್ಲಿ ನಿಯಮ ಪಾಲಿಸಿ. ದೈವಭಕ್ತಿ ಮನೋಬಲ ಹೆಚ್ಚಿಸುತ್ತದೆ. ಸ್ವಂತ ಕೆಲಸಕ್ಕೆ ನೀವು ಸಮಯವನ್ನು ಕೊಡುವಿರಿ. ಮಾತಿನಿಂದ ಹತ್ತಿರದವರನ್ನು ದೂರಮಾಡಿಕೊಳ್ಳುವಿರಿ. ಕಾರ್ಯವನ್ನು ಹಾಳುಮಾಡಲು ನಿಮ್ಮ ಗಮನವನ್ನು ಬೇರೆ ಕಡೆ ಸೆಳೆಯಬಹುದು.

ಕುಂಭ ರಾಶಿ:

ಇಂದು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೈಗೊಂಡ ಕೆಲಸದಲ್ಲಿ ವಿಳಂಬವಾದರೂ ಅಂತಿಮವಾಗಿ ಜಯ ನಿಮ್ಮದೇ. ಅಧಿಕಾರಿಗಳೊಂದಿಗೆ ಮಾತಿನಲ್ಲಿ ಎಚ್ಚರ ಅಗತ್ಯ. ಹಣಕಾಸಿನಲ್ಲಿ ಮಿತ ವ್ಯಯ ಉತ್ತಮ. ಕೆಲವೊಮ್ಮೆ ನಿಮ್ಮ ಸ್ವಭಾವವು ನಾಟಕೀಯದಂತೆ ತೋರುವುದು. ಕಲ್ಪನೆಯಲ್ಲಿ ಓಡಾಡುವುದನ್ನು ಕಡಿಮೆ ಮಾಡಿ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಇಲ್ಲದೆ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳಲಿದ್ದೀರಿ. ಭೂಮಿಯ ವ್ಯವಹಾರದಲ್ಲಿ ನೀವು ಜಯಶಾಲಿಯಾಗುವಿರಿ. ಒಬ್ಬರ ಬಳಿಯೇ ಎಲ್ಲವನ್ನೂ ಹೇಳಿಕೊಳ್ಳಿ. ಆರೋಗ್ಯದಲ್ಲಿ ತಲೆನೋವು ಅಥವಾ ದಣಿವು ಕಾಣಬಹುದು. ಸಂಜೆ ವೇಳೆಗೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಸ್ನೇಹಿತರ ಕಾರಣಕ್ಕೆ ತೊಂದರೆಯಲ್ಲಿ ಸಿಕ್ಕಿಬೀಳುವಿರಿ. ನಿಮ್ಮ ಬಗೆಗಿನ ಊಹಾಪೋಹಗಳಿಗೆ ಬೆಲೆಯನ್ನು ಕೊಡುವ ಅಗತ್ಯವಿಲ್ಲ.

ಮೀನ ರಾಶಿ:

ಅತಿಯಾದ ಪ್ರಯೋಗ ತಪ್ಪಿಸಿ. ಸಂಜೆ ವೇಳೆಗೆ ಸಂತೋಷದ ಕ್ಷಣಗಳು. ಸ್ತ್ರೀಯರ ಜೊತೆ ವೈರವನ್ನು ಕಟ್ಟಿಕೊಳ್ಳಬೇಕಾದೀತು. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವುದು ಕಷ್ಟವಾಗಬಹುದು. ಆದಾಯದ ಮೂಲದಿಂದ ನಿಮಗೆ ನೆಮ್ಮದಿ ಸಿಗುವುದು. ಧಾರ್ಮಿಕ ಮುಖಂಡರ ಭೇಟಿಯಾಗುವುದು.‌ ದೂರಪ್ರಯಾಣವನ್ನು ಇಂದು ಇಷ್ಟಪಡುವಿರಿ. ಶತ್ರುಗಳ ಅನ್ಯಾಯಕ್ಕೆ ಸಾಕ್ಷಿಯು ಸಿಗಬಹುದು. ನಿಮ್ಮ ಮನೋಬಲವು ಹೆಚ್ಚಾಗಿ ಉತ್ಸಾಹದಿಂದ ಇರುವಿರಿ. ದಿನಾಂತ್ಯದಲ್ಲಿ ತೃಪ್ತಿಯ ಅನುಭವ. ಏನಾದರೂ ಕೃಷಿಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಿರಿ. ಅತಿಯಾದ ಓಡಾಟವನ್ನು ನಿಲ್ಲಿಸಿ. ನೀವು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಗುರಿಯನ್ನು ಸಾಧಿಸುವಿರಿ.

ಜನವರಿ 04,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಶ್ರವಣಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ಪೂರ್ಣಿಮಾ ನಿತ್ಯನಕ್ಷತ್ರ : ಆರ್ದ್ರಾ ಯೋಗ : ಆಯುಷ್ಮಾನ್, ಕರಣ : ಬವ, ಸೂರ್ಯೋದಯ – 06 – 51 am, ಸೂರ್ಯಾಸ್ತ – 06 – 07 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16-43 – 18:08, ಯಮಗಂಡ ಕಾಲ 12:29 – 13:54, ಗುಳಿಕ ಕಾಲ 17:19 – 16:43

-ಲೋಹಿತ ಹೆಬ್ಬಾರ್-8762924271 (what’s app only)

Source link

ಪಕ್ಷಪಾತ ಆರೋಪ: ಸುದೀಪ್ ಪ್ರಶ್ನೆಗೆ ಗಿಲ್ಲಿ ಬಳಿ ಉತ್ತರವೇ ಇಲ್ಲ – Kannada News | Bigg Boss: Sudeep exposes Gilli’s partiality in Bigg Boss house

ಬಿಗ್​​ಬಾಸ್ (Bigg Boss) ಮನೆಯಲ್ಲಿ ಗಿಲ್ಲಿ ಈಗಾಗಲೇ ಫಿನಾಲೆ ಸ್ಪರ್ಧಿ ಎನಿಸಿಕೊಂಡಿದ್ದಾರೆ. ತಾವು ಗೆಲ್ಲುವ ಅಭ್ಯರ್ಥಿ ಎಂಬುದು ಸ್ವತಃ ಗಿಲ್ಲಿಗೆ ಗೊತ್ತಿದೆ. ಈ ವಿಷಯವನ್ನು ಮನೆಯಲ್ಲಿ ಹಲವು ಬಾರಿ ಹೇಳಿಕೊಂಡಿದ್ದಾರೆ. ತಾವೇ ಕಪ್ ಗೆಲ್ಲುವುದು, ತಾವೇ ಫಿನಾಲೆಗೆ ಹೋಗುವುದು ಎಂದು ಸಹ ಹೇಳಿದ್ದಾರೆ. ಆದರೆ ಇದೀಗ ಗಿಲ್ಲಿ, ತಮ್ಮ ಜೊತೆಗೆ ಕಾವ್ಯಾರನ್ನೂ ಸಹ ಫಿನಾಲೆಗೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ಈ ಪ್ರಯತ್ನ, ಬಿಗ್​​ಬಾಸ್ ನಿಯಮಗಳಿಗೆ ವ್ಯತಿರಿಕ್ತವಾಗಿರುವುದಲ್ಲದೆ, ಇತರೆ ಆಟಗಾರರಿಗೆ ಬೇಕೆಂದೇ ಮಾಡುತ್ತಿರುವ ಅನ್ಯಾಯದಂತೆ ಕಾಣುತ್ತಿದೆ.

ಎಲ್ಲರಿಗೂ ಗೊತ್ತಿರುವಂತೆ ಗಿಲ್ಲಿಗೆ ಕಾವ್ಯಾ ಜೊತೆಗೆ ಬಹಳ ಆಪ್ತ ಗೆಳೆತನ ಇದೆ. ಗಿಲ್ಲಿ, ಸದಾ ಕಾವ್ಯಾ ಪರ ನಿಲ್ಲುತ್ತಾರೆ. ಕಳೆದ ವಾರ ನಡೆದ ಟಾಸ್ಕ್ ಒಂದರಲ್ಲಿ ಸಹ ಕಾವ್ಯಾ, ಟಾಸ್ಕ್​​ನಲ್ಲಿ ಸೋತಿರುವುದು ಸ್ಪಷ್ಟವಾಗಿ ಕಾಣುತ್ತಿದ್ದರೂ ಸಹ ಗಿಲ್ಲಿ, ಕಾವ್ಯಾ ಗೆದ್ದಿದ್ದಾಳೆ ಎಂದು ವಾದಿಸಿದ್ದರು. ಇನ್ನು ನಾಮಿನೇಷನ್​​ನಲ್ಲಂತೂ ಗಿಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಸ್ಪಷ್ಟವಾಗಿ, ಬಹಿರಂಗವಾಗಿ ಪಕ್ಷಪಾತ ಮಾಡಿದರು. ಕಾವ್ಯಾರನ್ನು ನಾಮಿನೇಷನ್​​ ಇಂದ ಉಳಿಸಲು ಇತರರನ್ನು ನಾಮಿನೇಟ್ ಮಾಡಿದರು.

ನಾಮಿನೇಷನ್ ಪ್ರಕ್ರಿಯೆ ತುಸು ಭಿನ್ನವಾಗಿತ್ತು. ಕ್ಯಾಪ್ಟನ್ ಆಗಿದ್ದ ಗಿಲ್ಲಿ, ಯಾರೇ ಇಬ್ಬರಲ್ಲಿ ಒಬ್ಬರನ್ನು ನಾಮಿನೇಟ್ ಮಾಡಬೇಕಿತ್ತು. ಸ್ಪರ್ಧಿಗಳಲ್ಲಿ ಹಲವರು ಕಾವ್ಯಾರನ್ನು ಇನ್ನೊಬ್ಬರೊಟ್ಟಿಗೆ ನಿಲ್ಲಿಸಿದಾಗ ಗಿಲ್ಲಿ ಸಹಜವಾಗಿಯೇ ಕಾವ್ಯಾ ಬಿಟ್ಟು ಇನ್ನೊಬ್ಬರನ್ನು ನಾಮಿನೇಟ್ ಮಾಡುತ್ತಿದ್ದರು. ಅಲ್ಲಿಗೆ ಕಾವ್ಯಾರನ್ನು ನಾಮಿನೇಟ್ ಮಾಡಬಾರದು ಎಂಬುದು ಗಿಲ್ಲಿಯ ಉದ್ದೇಶ ಎಂಬುದು ಸ್ಪಷ್ಟವಾಯ್ತು. ಆದರೆ ಸುದೀಪ್ ಎದುರು ಮಾತನಾಡಿದ ಗಿಲ್ಲಿ, ಕಾವ್ಯಾರನ್ನು ನಾಮಿನೇಟ್ ಮಾಡಲು ಸೂಕ್ತ ಕಾರಣವನ್ನು ಮನೆ ಮಂದಿ ನೀಡಲಿಲ್ಲ ಎಂದರು.

ಇದನ್ನೂ ಓದಿ:ಬಿಗ್​​ಬಾಸ್: ಗಿಲ್ಲಿಯ ಗುಟ್ಟು ರಟ್ಟು ಮಾಡಿದ ಸುದೀಪ್

ಪಕ್ಷಪಾತ ಮಾಡಿದ್ದು ಸ್ಪಷ್ಟವಾಗಿ ಕಾಣುತ್ತಿದ್ದರೂ, ಗಿಲ್ಲಿ, ಅದನ್ನು ಸಮರ್ಥನೆ ಮಾಡಿಕೊಳ್ಳಲು ಮಾಡಿದ ಪ್ರಯತ್ನ ಸುದೀಪ್ ಅವರಿಗೆ ಹಿಡಿಸಲಿಲ್ಲ. ಹಾಗಾಗಿ ಗಿಲ್ಲಿಗೆ ಒಂದು ಟಾಸ್ಕ್ ನೀಡಿದರು. ಹಾಗಿದ್ದರೆ ಕಾವ್ಯಾರನ್ನು ನಾಮಿನೇಟ್ ಮಾಡಲು ನೀನೇ ಕನಿಷ್ಟ ಎರಡು ಕಾರಣ ಕೊಡು ನೋಡೋಣ ಎಂದರು. ಆದರೆ ಗಿಲ್ಲಿಗೆ ಅಲ್ಲಿ ಮಾತೇ ಹೊರಳಲಿಲ್ಲ. ಕಾವ್ಯಾರನ್ನು ನಾಮಿನೇಟ್ ಮಾಡಲು ಕೇವಲ ಒಂದು ಕಾರಣವನ್ನೂ ಸಹ ಗಿಲ್ಲಿಗೆ ನೀಡಲಾಗಲಿಲ್ಲ.

ಆಗ ಮಾತನಾಡಿದ ಸುದೀಪ್, ‘ಮನೆಯವರೆಲ್ಲ ಹೇಳುತ್ತಿದ್ದಾರೆ ನೀವು ಪಕ್ಷಪಾತ ಮಾಡಿದ್ದೀರಿ ಎಂದು. ಅವರು ಹೇಳಿದ್ದು ಸುಳ್ಳು ಮಾಡಲು ನಿಮಗೆ ಅವಕಾಶ ಕೊಟ್ಟಿದ್ದೆ, ಕಾವ್ಯಾರನ್ನು ನಾಮಿನೇಟ್ ಮಾಡಲು ಸೂಕ್ತ ಕಾರಣವನ್ನು ನೀವು ಕೊಟ್ಟಿದ್ದಿದ್ದರೆ ನೀವು ಕಾವ್ಯಾರನ್ನು ಅನ್ಯ ಉದ್ದೇಶದಿಂದ ನಾಮಿನೇಟ್ ಮಾಡಲಿಲ್ಲ ಎಂದು ಒಪ್ಪಿಕೊಳ್ಳಬಹುದಿತ್ತು ಎಂದರು. ಅಸಲಿಗೆ, ಗಿಲ್ಲಿ ಪಕ್ಷಪಾತ ಮಾಡಿಲ್ಲ ಎಂಬುದನ್ನು ಸ್ವತಃ ಕಾವ್ಯಾ ಸಹ ಒಪ್ಪಿಕೊಳ್ಳಲಿಲ್ಲ. ಅಲ್ಲದೆ, ಸುದೀಪ್ ಅವರು, ‘ಗಿಲ್ಲಿ ನೀವು ಕಾವ್ಯಾಗೆ ಬೆಂಬಲಿಸುತ್ತಿದ್ದೀನಿ, ಸಹಾಯ ಮಾಡುತ್ತಿದ್ದೀನಿ ಎಂದುಕೊಳ್ಳುತ್ತಿದ್ದೀರಿ, ಆದರೆ ಅವರು ಮುಳುಗಲು ಸಹ ನೀವೇ ಕಾರಣ ಆಗಲಿದ್ದೀರಿ’ ಎಂದರು.

ಆದರೆ ಸುದೀಪ್​ ಬೇಸರ ವ್ಯಕ್ತಪಡಿಸಿದ್ದು, ಇಡೀ ಮನೆಯ ಸದಸ್ಯರು ನಾಮಿನೇಷನ್ ಅನ್ನು ಲಘುವಾಗಿ ಪರಿಗಣಿಸಿರುವ ರೀತಿಗೆ. ಫಿನಾಲೆ ವಾರಕ್ಕೆ ಹತ್ತಿರದಲ್ಲಿರುವಾಗಲೂ ಸಹ ಮನೆ ಮಂದಿ ನಾಮಿನೇಷನ್ ಅನ್ನು ಸಿಲ್ಲಿಯಾಗಿ ಪರಿಗಣಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ಈ ವಾರ ಅಶ್ವಿನಿ, ಸ್ಪಂದನಾ, ಧ್ರುವಂತ್ ಇನ್ನೂ ಕೆಲವರು ನಾಮಿನೇಟ್ ಆಗಿದ್ದಾರೆ. ನಾಳೆ ಯಾರು ಮನೆಯಿಂದ ಹೊರ ಹೋಗುತ್ತಾರೋ ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:13 pm, Sat, 3 January 26

Source link

‘ನನ್ನ ಮಗ ಆತ್ಮಹತ್ಯೆಗೆ ಯತ್ನಿಸಿಲ್ಲ’: ಎಸ್ಪಿ ಪವನ್ ನೆಜ್ಜೂರ್ ತಂದೆ ಸ್ಪಷ್ಟನೆ – Kannada News | Pavan Nejjur Suspension: Father Denies Suicide Rumors After Ballari Riots

ತುಮಕೂರು, ಜನವರಿ 03: ಬಳ್ಳಾರಿಯ ಬ್ಯಾನರ್ ಗಲಾಟೆಗೆ ಪ್ರಕರಣಕ್ಕೆ (Bellari violence case) ಸಂಬಂಧಿಸಿದಂತೆ ಗಲಾಟೆ ನಿಭಾಯಿಸುವಲ್ಲಿ ವಿಫಲವಾಗಿದ್ದಾರೆ ಅಂತಾ ಬಳ್ಳಾರಿಗೆ ನೇಮಕವಾಗಿದ್ದ ಎಸ್​ಪಿ ಪವನ್ ನೆಜ್ಜೂರ್ (SP Pavan Nejjuru) ಅವರನ್ನ ಸಸ್ಪೆಂಡ್ ಮಾಡಲಾಗಿತ್ತು. ಆ ಬೆನ್ನಲ್ಲೇ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತು. ಸದ್ಯ ಈ ಬಗ್ಗೆ ಖುದ್ಧು ಎಸ್​ಪಿ ಪವನ್ ನೆಜ್ಜೂರ್ ಅವರ ತಂದೆ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನನ್ನ ಪುತ್ರ ಆತ್ಮಹತ್ಯೆಯ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದಾರೆ.

ಪವನ್ ನೆಜ್ಜೂರ್ ತಂದೆಯಿಂದ ಫೇಸ್ ಬುಕ್​ ಪೋಸ್ಟ್​​

ಬಳ್ಳಾರಿ ಗಲಾಟೆ ಹಿನ್ನಲೆ ಎಸ್ಪಿ ಅಮಾನತ್ತು ಹಿನ್ನಲೆ ಪವನ್ ನೆಜ್ಜೂರ್ ಅವರ ತಂದೆ ಉದಯ್ ಶಂಕರ್ ನೆಜ್ಜೂರ್​​ ಈ ಬಗ್ಗೆ ಫೇಸ್ ಬುಕ್​ನಲ್ಲಿ ಸುದೀರ್ಘ ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದಾರೆ. ನನ್ನ ಮಗ 2016ನೇ ಸಾಲಿನ ಕರ್ನಾಟಕ ಕೇಡರ್​​ ಐಪಿಎಸ್ ಅಧಿಕಾರಿ. ಅವರ ತಂದೆಯಾಗಿ ಕೆಲ ವಿಷಯಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.

ಇದನ್ನೂ ಓದಿ: ಬಳ್ಳಾರಿ ಗಲಭೆಗೆ ಎಸ್ಪಿ ತಲೆದಂಡ: ಅಧಿಕಾರ ಸ್ವೀಕರಿಸಿದ ಒಂದೇ ದಿನಕ್ಕೆ ಪವನ್ ನೆಜ್ಜೂರು ಸಸ್ಪೆಂಡ್!

ಐಪಿಎಸ್ ಅಧಿಕಾರಿಯಾಗಿರುವ ನನ್ನ ಪುತ್ರ ಪವನ್​ ನೇಜ್ಜೂರು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಶಿಸ್ತು, ಕಾರ್ಯಕ್ಷಮತೆ ಹಾಗೂ ಕಾನೂನು ಪಾಲನೆಗೆ ಬದ್ಧನಾಗಿ ಕೆಲಸ ಮಾಡುತ್ತಿದ್ದಾನೆ ಎಂಬ ಹೆಮ್ಮೆ ನಮಗಿದೆ. ಆದರೆ ಬಳ್ಳಾರಿಯಲ್ಲಿ ನಡೆದ ಗಲಭೆಯ ಘಟನೆ ನಂತರ ನನ್ನ ಪುತ್ರನ ಬಗ್ಗೆ ಸುಳ್ಳು ವದಂತಿಗಳನ್ನು ಹರಡಿಸುತ್ತಿರುವುದು ಬೇಸರ ಮೂಡಿಸಿದೆ.

ಉದಯ್ ಶಂಕರ್ ನೆಜ್ಜೂರ್ ಫೇಸ್ ಬುಕ್​ ಪೋಸ್ಟ್


ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಗಲಭೆ ಪ್ರಕರಣದ ಸಂದರ್ಭದಲ್ಲಿ ನನ್ನ ಪುತ್ರ ಪವನ್​ ನೆಜ್ಜೂರು ತಮ್ಮ ಜವಾಬ್ದಾರಿಯನ್ನು ಮರೆತಿಲ್ಲ ಎಂಬುವುದನ್ನು ಸ್ಪಷ್ಪಡಿಸುತ್ತದೆ. ಜನವರಿ 1ರಂದು ಅಧಿಕಾರ ಸ್ವೀಕರಿಸಿ, ಸಂಪ್ರದಾಯದಂತೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಸುಮಾರು ಒಂದು ದಶಕ ಕಾಲ ಸೇವೆ ಸಲ್ಲಿಸಿದ್ದ ಲೋಕಾಯುಕ್ತ ಪೋಲೀಸರಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸ್ವೀಕರಿಸಿ, ನಂತರ ನಡೆದ ಈ ಅಹಿತಕರ ಘಟನೆಯ ಸ್ಥಳಕ್ಕೆ ತಕ್ಷಣವೇ ಧಾವಿಸಿ ಪರಿಸ್ಥಿತಿ ನಿಭಾಯಿಸಿದ್ದು, ಅಲ್ಲಿರುವ ಎಲ್ಲರಿಗೂ ಗೊತ್ತು. ಶಿಸ್ತಿನ ಸಿಪಾಯಿ, ದಕ್ಷ ಅಧಿಕಾರಿ ಆಗಿರುವ ನನ್ನ ಮಗ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ನಡೆದ ಗಲಭೆಯ ಘಟನೆ ಅನಿರೀಕ್ಷಿತ. ಆದಾಗ್ಯೂ ಕಾನೂನು ಸುವ್ಯವಸ್ಥೆಯ ಪಾಲನೆಗೆ ಸಂಪೂರ್ಣವಾಗಿ ಶ್ರಮಿಸಿ ಬೆಳಗಿನ ಜಾವವೂ ಮೃತರ ಅಂತ್ಯಕ್ರಿಯೆ ಸಂದರ್ಭ ಬಂದೋಬಸ್ತ್ ವ್ಯವಸ್ಥೆ ಮಾಡಿಯೂ ಅಮಾನತಿಗೆ ಒಳಪಟ್ಟಿದ್ದು, ಆತನಿಗೆ ಸಹಜವಾಗಿ ಬೇಸರ ಮೂಡಿಸಿ ಆಘಾತಕ್ಕೆ ಒಳಗಾಗಿದ್ದು ಹೌದೇ ಹೊರತು, ಯಾವುದೇ ಕಾರಣಕ್ಕೂ ನನ್ನ ಪುತ್ರ ಆತ್ಮಹತ್ಯೆಯ ಪ್ರಯತ್ನ ಮಾಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಗಲಭೆ: ಶಾಸಕ ಭರತ್ ರೆಡ್ಡಿ ಸೇರಿ ಹಲವರ ವಿರುದ್ಧ ಎಫ್​​​ಐಆರ್

ಈ ವಿಷಯವಾಗಿ ಕಪೋಲಕಲ್ಪಿತ ವಿಷಯಗಳು ಚರ್ಚೆ ಆಗುತ್ತಿರುವುದು ನಮಗೆ ಬೇಸರ ಹಾಗೂ ಮಗನ ಮರ್ಯಾದೆ, ಭವಿಷ್ಯದ ಬಗ್ಗೆ ಅತ್ಯಂತ ಆತಂಕ ಮೂಡಿಸಿದೆ. ಒಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ನನ್ನ ಪುತ್ರ ಪವನ್ ನೆಜ್ಜೂರ್ ಆಘಾತಕ್ಕೆ ಒಳಗಾಗಿದ್ದಾನೆ. ಅಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ. ಅದೂ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ, ಅಲ್ಲದೆ ದಕ್ಷತೆಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸದಾಗಲೂ ಅನುಭವಿಸಬೇಕಾದ ಅಮಾನತಿನ ಶಿಕ್ಷೆ ಆತನನ್ನು ಚಿಂತೆಗೀಡು ಮಾಡಿದೆ ಎಂದು ಹೇಳಿದ್ದಾರೆ.

ಅದೇನಿದ್ದರೂ ನನ್ನ ಪುತ್ರ ಐಪಿಎಸ್ ಅಧಿಕಾರಿ ಪವನ್ ನೆಜ್ಜೂರ್ ಒಬ್ಬ ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ಆದೇಶವನ್ನು ಶಿರಸಾ ಪಾಲಿಸಿದ್ದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ನನ್ನ ಪುತ್ರನ ಬಗ್ಗೆ ಅನಗತ್ಯ ಹಾಗೂ ಸುಳ್ಳು ವದಂತಿಗಳನ್ನು ಹರಡಿಸದಂತೆ ಮತ್ತು ಆಘಾತಕ್ಕೆ ಒಳಗಾಗಿರುವ ಪವನ್ ನೆಜ್ಜೂರು ಅವರಿಗೆ ಕೊಂಚ ವಿಶ್ರಾಂತಿಯ ಅಗತ್ಯ ಇದೆ ಎಂಬುವುದನ್ನು ತಮ್ಮೆಲ್ಲರ ಗಮನಕ್ಕೆ ತರಬಯಸುತ್ತಾ, ಓರ್ವ ದಕ್ಷ ಅಧಿಕಾರಿಯ ತಂದೆಯಾಗಿ ನಿಮ್ಮೆಲ್ಲರಲ್ಲಿ ಮನವಿಸುವುದರ ಜೊತೆಗೆ ನನ್ನ ಪುತ್ರನ ಅಮಾನತು ಕುರಿತು ಸರ್ಕಾರ ಮರುಪರಿಶೀಲನೆ ನಡೆಸುವಂತೆ ವಿನಮ್ರವಾಗಿ ಕೋರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಗ್​​ಬಾಸ್: ಗಿಲ್ಲಿಯ ಗುಟ್ಟು ರಟ್ಟು ಮಾಡಿದ ಸುದೀಪ್ – Kannada News | Bigg Boss Kannada: Gilli inspired by Hanumanthu and Drone Prathap

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ 98 ದಿನಗಳು ಪೂರ್ಣವಾಗಿವೆ. ಪ್ರಸ್ತುತ ಬಿಗ್​​ಬಾಸ್ ಮನೆಯಲ್ಲಿ ಉಳಿದಿರುವ ಜನರೂ ಕಡಿಮೆ. ಉಳಿದಿರುವವರಲ್ಲಿ ಗಿಲ್ಲಿ ಈ ಬಾರಿಯ ವಿಜೇತ ಎನ್ನಲಾಗುತ್ತಿದೆ. ಪಕ್ಕಾ ಫಿನಾಲೆಗೆ ಬರುವ ಸ್ಪರ್ಧಿ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಗಿಲ್ಲಿ ಅದು ಹೇಗೆ ಇಷ್ಟು ಚೆನ್ನಾಗಿ ಆಡುತ್ತಿದ್ದಾರೆ. ಅದಕ್ಕಾಗಿ ಏನಾದರೂ ವಿಶೇಷ ತಯಾರಿ ಮಾಡಿಕೊಂಡು ಬಂದಿದ್ದಾರಾ? ಈ ಗುಟ್ಟನ್ನು ರಟ್ಟು ಮಾಡಿದ್ದಾರೆ ಸುದೀಪ್.

ಕಳೆದ ವಾರ ಗಿಲ್ಲಿ ಮನೆಯ ಕ್ಯಾಪ್ಟನ್ ಆಗಿದ್ದರು. ಈ ವೇಳೆ ಮನೆಯಲ್ಲಿ ಸಾಕಷ್ಟು ವಿಷಯಗಳು ನಡೆದವು. ಇದೀಗ ವೀಕೆಂಡ್ ಎಪಿಸೋಡ್​​ನಲ್ಲಿ ಸುದೀಪ್ ಈ ಬಗ್ಗೆ ಚರ್ಚೆ ನಡೆಸಿದರು. ಆ ವೇಳೆ ಮನೆಯ ಯಾವೊಬ್ಬ ಸದಸ್ಯರೂ ಸಹ ಗಿಲ್ಲಿಯ ಕ್ಯಾಪ್ಟೆನ್ಸಿ ಹಾಗೂ ಉಸ್ತುವಾರಿ ಚೆನ್ನಾಗಿತ್ತು ಎನ್ನಲಿಲ್ಲ. ಆದರೆ ಅದೇ ಮಂದಿ, ಗಿಲ್ಲಿ ತಪ್ಪು ಮಾಡಿದಾಗ ಆತನನ್ನು ನೇರವಾಗಿ ಪ್ರಶ್ನೆ ಸಹ ಮಾಡಿರಲಿಲ್ಲ.

ಕ್ಯಾಪ್ಟೆನ್ಸಿ ಚರ್ಚೆ, ಇತರೆ ಸದಸ್ಯರು ಕ್ಯಾಪ್ಟನ್​​ಗಳಾಗಿದ್ದಾಗ ಗಿಲ್ಲಿಯ ವರ್ತನೆ, ಗಿಲ್ಲಿ ಕ್ಯಾಪ್ಟನ್ ಆಗಿದ್ದಾಗ ಅವರ ವರ್ತನೆ ಎರಡರ ವ್ಯತ್ಯಾಸದ ಬಗ್ಗೆ ಎಲ್ಲ ಮಾತನಾಡಿದ ಸುದೀಪ್, ಗಿಲ್ಲಿಗೆ ಪ್ರಶ್ನೆಯೊಂದು ಕೇಳಿದರು. ‘ಎಷ್ಟು ಬಿಗ್​​ಬಾಸ್ ಸೀಸನ್ ನೋಡಿಕೊಂಡು ಬಂದಿದ್ದೀರಿ’ ಎಂದು. ಅದಕ್ಕೆ ಗಿಲ್ಲಿ, ‘ನಾನು ಪ್ರತಿಯೊಂದು ಸೀಸನ್ನಿನ ಪ್ರತಿಯೊಂದು ಎಪಿಸೋಡ್ ನೋಡಿದ್ದೀನಿ’ ಎಂದರು. ನಿಮಗೆ ಇಷ್ಟವಾದ ಸೀಸನ್ ಯಾವುದು? ಎಂಬ ಪ್ರಶ್ನೆಗೆ, ‘ಹನುಮಂತು, ಮತ್ತು ಡ್ರೋನ್ ಪ್ರತಾಪ್’ ಇದ್ದ ಸೀಸನ್ ಎಂದರು ಗಿಲ್ಲಿ.

ಇದನ್ನೂ ಓದಿ:ಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ: ಗಿಲ್ಲಿಯ ಬಿಗ್​ಬಾಸ್ ರ್ಯಾಪ್ ಸಾಂಗ್

ಅಲ್ಲಿಗೆ ಸುದೀಪ್ ಹೇಳಿದರು. ‘ಗಿಲ್ಲಿ, ಸ್ವಲ್ಪ ಹನುಮಂತು, ಸ್ವಲ್ಪ ಪ್ರತಾಪ್ ಅವರ ವ್ಯಕ್ತಿತ್ವವನ್ನು, ಆಟದ ರೀತಿಯಲ್ಲಿ ಇಲ್ಲಿ ತೋರಿಸುತ್ತಿದ್ದಾರೆ ಅದು ತಪ್ಪೇನಲ್ಲ. ಗಿಲ್ಲಿ ಹಾಕುತ್ತಿರುವುದು ಬನಿಯನ್ನೇ ಆಗಿರಬಹುದು ಆದರೆ ಬದುಕುತ್ತಿರುವುದು ರಾಜನ ರೀತಿ’ ಎಂದರು. ಆ ಮೂಲಕ ಗಿಲ್ಲಿ, ಹನುಮಂತು ರೀತಿ, ಬಡವನ ಕಾರ್ಡ್ ಮತ್ತು ಪ್ರತಾಪ್ ರೀತಿ ಇನ್ನೋಸೆಂಟ್ ಕಾರ್ಡ್ ಅನ್ನು ಬೆರೆಸಿ ಆಟ ಆಡುತ್ತಿದ್ದಾರೆ. ಇತರೆ ಸ್ಪರ್ಧಿಗಳನ್ನು ಬಳಸಿ ಕಂಟೆಂಟ್ ತೆಗೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ಹೇಳಿದರು. ಸುದೀಪ್ ಮಾತನ್ನು ಮನೆಯ ಇತರೆ ಸದಸ್ಯರು ಸಹ ಒಪ್ಪಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎಸ್​ಯುವಿಯಲ್ಲಿ ರಾಶಿಗಟ್ಟಲೆ ಶಾಲಾ ಮಕ್ಕಳನ್ನು ತುಂಬಿದ ವಿಡಿಯೋ ವೈರಲ್ – Kannada News | Viral Video Shows School children Risking Lives In Overcrowded Vehicle In Kushinagar

ಖುಷಿನಗರ, ಜನವರಿ 3: ಉತ್ತರ ಪ್ರದೇಶದ ಖುಷಿನಗರ ಜಿಲ್ಲೆಯ ಪದ್ರೌನಾದಲ್ಲಿ ಶಾಲಾ ಮಕ್ಕಳನ್ನು ಅಪಾಯಕಾರಿಯಾಗಿ ಶಾಲಾ ವ್ಯಾನ್​​ನಲ್ಲಿ ತುಂಬಿರುವ ವಿಡಿಯೋವೊಂದು ವೈರಲ್ (Viral Video) ಆಗಿದೆ. ಎಸ್​ಯುವಿಯಲ್ಲಿ ಕೆಲವರು ಹಿಂಭಾಗದಿಂದ ನಿಂತಿರುವುದನ್ನು ಅಥವಾ ನೇತಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಮಕ್ಕಳ ಸುರಕ್ಷತೆ, ಶಾಲಾ ಸಾರಿಗೆ ಸೌಲಭ್ಯಗಳ ಕೊರತೆ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯದ ಬಗ್ಗೆ ಈ ವಿಡಿಯೋ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs NZ: 5 ಪಂದ್ಯಗಳಲ್ಲಿ 4 ಶತಕ ಸಿಡಿಸಿರುವ ಕನ್ನಡಿಗನಿಗೆ ಮತ್ತೆ ಅನ್ಯಾಯ – Kannada News | Devdutt Padikkal’s ODI Snub: Stellar Form Ignored by Team India?

ಕೆಎಲ್ ರಾಹುಲ್ (KL Rahul) ಬಳಿಕ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುವ ಸೂಚನೆ ನೀಡಿರುವ ಕರ್ನಾಟಕದ ಬ್ಯಾಟ್ಸ್‌ಮನ್ ಎಂದರೇ ಅದು ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ (Devdutt Padikkal). ಪಡಿಕ್ಕಲ್ ಇದುವರೆಗೆ ಟೀಂ ಇಂಡಿಯಾ ಪರ 2 ಟೆಸ್ಟ್ ಹಾಗೂ 2 ಟಿ20 ಪಂದ್ಯಗಳನ್ನಾಡಿದ್ದಾರೆ. ಆದರೆ ಇತರೆ ಆಟಗಾರರಿಗೆ ಹೋಲಿಸಿಕೊಂಡರೆ ಪಡಿಕ್ಕಲ್​ಗೆ ಭಾರತ ತಂಡದಲ್ಲಿ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ. ರಾಹುಲ್​ರಂತೆ ಏಕದಿನ ಮಾದರಿಗೆ ಹೇಳಿ ಮಾಡಿಸಿದ ಕೌಶಲ್ಯ ಹೊಂದಿರುವ ಪಡಿಕ್ಕಲ್​ಗೆ ಭಾರತ ಏಕದಿನ ತಂಡದಲ್ಲಿ ಆಡುವ ಅವಕಾಶ ಇದುವರೆಗೂ ಸಿಕ್ಕಿಲ್ಲ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಪಡಿಕ್ಕಲ್ ಆಯ್ಕೆಯ ಬಗ್ಗೆ ಮಾಜಿ ಕ್ರಿಕೆಟಿಗರು ಕೂಡ ಭವಿಷ್ಯ ನುಡಿದಿದ್ದರು. ಆದರೆ ಕಿವೀಸ್ ವಿರುದ್ಧದ ಸರಣಿಗೂ ಅವರನ್ನು ಕಡೆಗಣಿಸಲಾಗಿದೆ.

ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ

ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಇದುವರೆಗೆ 38 ಪಂದ್ಯಗಳನ್ನಾಡಿರುವ ಪಡಿಕ್ಕಲ್ ಬರೋಬ್ಬರಿ 13 ಶತಕ ಹಾಗೂ 12 ಅರ್ಧಶತಕಗಳ ಸಹಿತ 2500 ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಇದರ ಜೊತೆಗೆ ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ರನ್​ಗಳ ಶಿಖರ ಕಟ್ಟಿರುವ ಪಡಿಕ್ಕಲ್ ಈ ಟೂರ್ನಿಯಲ್ಲಿ ಅತ್ಯಧಿಕ ರನ್ ಕಲೆಹಾಕಿರುವ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

5 ಪಂದ್ಯಗಳಲ್ಲಿ 4 ಶತಕ

ಮಾತ್ರವಲ್ಲದೆ ಈ ಟೂರ್ನಿಯಲ್ಲಿ ಇದುವರೆಗೆ ನಡೆದಿರುವ ಐದು ಪಂದ್ಯಗಳಲ್ಲಿ ಪಡಿಕ್ಕಲ್ 4 ಶತಕಗಳನ್ನು ಬಾರಿಸಿ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದ್ದಾರೆ. ಜಾರ್ಖಂಡ್ ವಿರುದ್ಧದ ಟೂರ್ನಿಯ ಮೊದಲ ಪಂದ್ಯದಲ್ಲಿ 147 ರನ್​ಗಳ ಇನ್ನಿಂಗ್ಸ್ ಆಡಿದ್ದ ಪಡಿಕ್ಕಲ್ ತಂಡದ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಆ ಬಳಿಕ ನಡೆದ ಕೇರಳ ವಿರುದ್ಧದ ಪಂದ್ಯದಲ್ಲಿ 124 ರನ್ ಹಾಗೂ ಪಾಂಡಿಚೇರಿ ವಿರುದ್ಧದ ಪಂದ್ಯದಲ್ಲಿ 113 ರನ್ ಮತ್ತು ಈಗ ತ್ರಿಪುರ ವಿರುದ್ಧದ ಪಂದ್ಯದಲ್ಲಿ 108 ರನ್​ ಬಾರಿಸುವ ಮೂಲಕ ಪಡಿಕ್ಕಲ್ ತಂಡವನ್ನು ಅಜೇಯ ಓಟದತ್ತ ಮುನ್ನಡೆಸಿದ್ದಾರೆ. ಹೀಗಾಗಿ ಕಿವೀಸ್ ವಿರುದ್ಧದ ಸರಣಿಗೆ ಪಡಿಕ್ಕಲ್ ಅವರನ್ನು ಆಯ್ಕೆಗೆ ಪರಿಗಣಿಸಬೇಕೆಂಬ ಕೂಗು ಜೋರಾಗಿತ್ತು. ಆದರೆ ಬಿಸಿಸಿಐ ಮಾತ್ರ ಕನ್ನಡಿಗನ ಪ್ರದರ್ಶನಕ್ಕೆ ಯಾವುದೇ ಮನ್ನಣೆ ನೀಡಿಲ್ಲ.

ದೇಶಿ ಟೂರ್ನಿಯಲ್ಲಿ ದೇವದತ್ ಪಡಿಕ್ಕಲ್ ಅಬ್ಬರ; ಭಾರತ ತಂಡಕ್ಕೆ ಆಯ್ಕೆ ಯಾವಾಗ?

ದೇವದತ್ ಆಯ್ಕೆ ಸಾಧ್ಯವಿಲ್ಲ ಏಕೆ?

ಭವಿಷ್ಯದಲ್ಲಿ ದೇವದತ್ ಪಡಿಕ್ಕಲ್ ಭಾರತ ಏಕದಿನ ತಂಡದಲ್ಲಿ ಖಾಯಂ ಸ್ಥಾನ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸಧ್ಯಕ್ಕೆ ಪಡಿಕ್ಕಲ್ ಏಕದಿನ ತಂಡದಲ್ಲಿ ಅವಕಾಶ ಸಿಗುವುದು ಅನುಮಾನವಾಗಿದೆ. ಏಕೆಂದರೆ 2027 ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಹೀಗಾಗಿ ಈ ವಿಶ್ವಕಪ್​ಗೆ ವರ್ಷಗಳ ಹಿಂದೆಯೇ ಬಿಸಿಸಿಐ ತನ್ನ ತಯಾರಿಯನ್ನು ಆರಂಭಿಸಿದ್ದು, ಯಾವ ಆಟಗಾರನನ್ನು ಯಾವ ಸ್ಥಾನದಲ್ಲಿ ಆಡಿಸಬೇಕು ಎಂಬುದನ್ನು ಈಗಾಗಲೇ ನಿರ್ಧರಿಸಿದೆ. ಅಲ್ಲದೆ 2027 ರ ವಿಶ್ವಕಪ್‌ಗೆ ಯಾವ ತಂಡವನ್ನು ಕಣಕ್ಕಿಳಿಸಬೇಕು ಎಂಬುದನ್ನು ಬಿಸಿಸಿಐ ಸಿದ್ಧಪಡಿಸಿ ಆಗಿದೆ. ಹೀಗಾಗಿ ದೇಶಿ ಟೂರ್ನಿಯಲ್ಲಿ ಮಿಂಚುತ್ತಿರುವ ಪಡಿಕ್ಕಲ್​ಗೆ ಇನ್ನೊಂದು ವರ್ಷ ಏಕದಿನ ತಂಡದಲ್ಲಿ ಅವಕಾಶ ಸಿಗುವುದು ಕಷ್ಟ. ಆದರೆ ಏಕದಿನ ವಿಶ್ವಕಪ್ ಮುಗಿದ ಬಳಿಕ ಕೊಹ್ಲಿ, ರೋಹಿತ್ ಸೇರಿದಂತೆ ಕೆಲವು ಆಟಗಾರರು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಲಿದ್ದು, ಆ ಬಳಿಕವಷ್ಟೇ ಪಡಿಕ್ಕಲ್​ರಂತೆಯೇ ಇನ್ನು ಕೆಲವು ಆಟಗಾರರು ಏಕದಿನ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಗಿಲು ನಿವಾಸಿಗಳ ಪಟ್ಟಿ ಸಿದ್ಧ: ಲೇಔಟ್​ಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ – Kannada News | Kogilu Layout Row: Kogilu residents List handover to GBA; BJP fact finding committee visits layout

ಬೆಂಗಳೂರು, ಜನವರಿ 03: ಕೋಗಿಲು (Kogilu Layout) ಅಕ್ರಮ ಒತ್ತುವರಿ ಜಟಾಪಟಿ ರಾಜಕಾರಣದಲ್ಲಿ ಮಾತಿನ ಸಮರವನ್ನೇ ಸೃಷ್ಟಿಸಿದೆ. ಮನೆ ಕೊಡ್ತೀವಿ ಎಂದಿರುವ ಸರ್ಕಾರದ ನಡೆಯನ್ನ ಪ್ರಶ್ನಿಸಿ ಬಿಜೆಪಿ (bjp) ಸಮರ ಸಾರಿದೆ. ರಾಜ್ಯ ಸರ್ಕಾರದ ನಿರ್ಧಾರವೇ ಅಕ್ರಮ ಅಂತ ಆರೋಪಿಸ್ತಿದೆ. ಕೋಗಿಲು ಲೇಔಟ್‌ ತೆರವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದ್ದು, ಇದರ ನಡುವೆ ಕಂದಾಯ ಇಲಾಖೆ ಸಂತ್ರಸ್ತರ ಪಟ್ಟಿ ರೆಡಿ ಮಾಡಿದೆ.

ಕೋಗಿಲು ಲೇಔಟ್‌ನಲ್ಲಿ ಮನೆ ಕಳೆದುಕೊಂಡ ಅರ್ಹ ಫಲಾನುಭವಿಗಳ ಸಂಪೂರ್ಣ ಮಾಹಿತಿ ಇವತ್ತು GBA ಕೈ ಸೇರಿದೆ. ಕಂದಾಯ ಇಲಾಖೆ ಹಾಗೂ ಉತ್ತರ ನಗರ ಪಾಲಿಕೆ ಅಧಿಕಾರಿಗಳು ನಡೆಸಿದ ಸರ್ವೆಯ ಅಂತಿಮ ವರದಿ ಈಗ ಅಧಿಕಾರಿಗಳ ಟೇಬಲ್ ಮೇಲಿದೆ.

ವರದಿಯಲ್ಲಿ ಇರೋದೇನು?

ಹೊಸ ಫಕೀರ್ ಲೇಔಟ್ ಮತ್ತು ವಾಸೀಂ ಲೇಔಟ್ ನಿರಾಶ್ರಿತರ ಬಗ್ಗೆ ಮಾಹಿತಿಯನ್ನ ಕಲೆಹಾಕಲಾಗಿದೆ. ಕಂದಾಯ ಇಲಾಖೆ ಮತ್ತು ಉತ್ತರ ನಗರ ಪಾಲಿಕೆಯಿಂದ ವರದಿ ಸಿದ್ಧಪಡಿಸಲಾಗಿದೆ. ಒಟ್ಟು 167 ಮನೆಗಳನ್ನು ಗುರುತಿಸಿ ಜಿಬಿಎಗೆ ವರದಿ ಸಲ್ಲಿಕೆ ಮಾಡಲಾಗಿದೆ. ಈ ಮಾಹಿತಿ ಅನುಸಾರ, 167 ಮನೆಗಳ ತೆರವು ಹಿನ್ನೆಲೆ 188 ಕುಟುಂಬಗಳು ನಿರಾಶ್ರಿತವಾಗಿವೆ. 188 ಕುಟುಂಬಗಳ 1,007 ಸದಸ್ಯರು ಅಧಿಕೃತ ನಿರಾಶ್ರಿತರು ಅಂತಾ ಹೇಳಲಾಗಿದೆ. 188 ಕುಟುಂಬಗಳ ಮುಖ್ಯಸ್ಥರು, 425 ಜನ ವಯಸ್ಕರು, 304 ಮಕ್ಕಳು, 156 ಮುಸ್ಲಿಂ ಕುಟುಂಬಗಳು, 31 ಹಿಂದೂ, 1 ಕ್ರಿಶ್ಚಿಯನ್ ಕುಟುಂಬ ನಿರಾಶ್ರಿತವಾಗಿದೆ ಅಂತಾ ವರದಿಯಲ್ಲಿ ಹೇಳಲಾಗಿದೆಯಂತೆ.

ಆಯುಕ್ತ ಎಂ ಮಹೇಶ್ವರ ರಾವ್ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ GBA ಮುಖ್ಯ ಆಯುಕ್ತ ಎಂ ಮಹೇಶ್ವರ ರಾವ್ ಮಾತನಾಡಿ, ಮತ್ತೊಂದು ಸುತ್ತಿನ ಪರಿಶೀಲನೆ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ.

ರಾಜೀವ್ ಗಾಂಧಿ ವಸತಿ ನಿಗಮದ ಕಚೇರಿಗೆ ಕಮಲಪಡೆ ಭೇಟಿ

ಈ ಮಧ್ಯೆ ಇವತ್ತು ವಿಪಕ್ಷ ನಾಯಕ ಆರ್​. ಅಶೋಕ್​ ರಾಜೀವ್ ಗಾಂಧಿ ವಸತಿ ‌ನಿಗಮದ ಕಚೇರಿಗೆ ಭೇಟಿ ನೀಡಿದರು. ಕೆ.ಜಿ.ರಸ್ತೆಯ ಕಾವೇರಿ ಭವನದ ಕಚೇರಿಗೆ ಬಂದು ಎಂ.ಡಿ ಪರಶುರಾಮ್ ಬಳಿ ಮಾಹಿತಿ ಪಡೆದರು. ಕೋಗಿಲು ಅಕ್ರಮ ವಾಸಿಗಳಿಗೆ ಯಾವ ಮಾನದಂಡ ಅನುಸರಿಸಲಾಗುತ್ತಿದೆ ಅಂತಾ ಪ್ರಶ್ನಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಕಾನೂನು ಗಾಳಿಗೆ ತೂರಿದರೆ ಹುಷಾರ್ ಅಂತಾ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ಮಾತಾಡಿದ ರಾಜೀವ್ ಗಾಂಧಿ ವಸತಿ ನಿಗಮದ MD ಪರಶುರಾಮ್, ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡ ಕಳುಹಿಸಿಕೊಡುವ ಜನರಿಗೆ ಮಾತ್ರ ನಾವು ಮನೆ ಕೊಡೋಕೆ ಸಾಧ್ಯ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಕೋಗಿಲು ಲೇಔಟ್:​ ಒತ್ತುವರಿ ಮಾಡಿಕೊಂಡಿದ್ದವರಲ್ಲಿ ಮುಸ್ಲಿಂ ಕುಟುಂಗಳೇ ಹೆಚ್ಚು, ಜಿಬಿಎ ಕೈಸೇರಿತು ಅಂತಿಮ ವರದಿ

ಮತ್ತೊಂದು ಕಡೆ ಕೋಗಿಲು ಲೇಔಟ್​ಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ ಕೊಟ್ಟಿತ್ತು. ಈ ವೇಳೆ ಕೆಲವರ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಿದರು, ಆಗ ಮಹಿಳೆಯೊಬ್ಬರು ಡಿ.ಜೆ‌. ಹಳ್ಳಿ ವಿಳಾಸದ ಆಧಾರ್ ಕಾರ್ಡ್ ತೋರಿಸಿದರು. ಬಿಜೆಪಿ ನಿಯೋಗ ಮರುಪ್ರಶ್ನೆ ಕೇಳಿದರೆ, ನಾವು ಇಲ್ಲಿ 5 ವರ್ಷದಿಂದ ಇದ್ದೀವಿ ಅಂತಾ ಇಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ.

‘ಮನೆಗೆ ಮಾರಿ, ಊರಿಗೆ ಉಪಕಾರಿ’: ಪ್ರಹ್ಲಾದ್ ಜೋಶಿ

ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮನೆಗೆ ಮಾರಿ, ಅತಿಕ್ರಮಣಕಾರರಿಗೆ ಉಪಕಾರಿ. ಬೆಂಗಳೂರಿನಲ್ಲಿ ಬಾಂಗ್ಲಾ ಅಕ್ರಮ ನುಸುಳುಕೋರರು ಇದ್ದಾರೆ. ಎಸ್​ಐಆರ್​ಗೂ ವಿರೋಧ ಮಾಡಲು ಇದೇ ಕಾರಣ. ನಕಲಿ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ. ನಾಳೆ ಕುಮಾರಕೃಪಾದಲ್ಲಿ ಟೆಂಟ್ ಹಾಕಿದ್ರೆ ಏನ್ ಮಾಡೋದು. ಹಿಂದೆ ದೆಹಲಿಯಿಂದ ಕಾಂಗ್ರೆಸ್​ ಹೈಕಮಾಂಡ್ ನಡೆಯುತ್ತಿತ್ತು. ಈಗ ಕಾಂಗ್ರೆಸ್​ ಹೈಕಮಾಂಡ್ ಕೇರಳದಿಂದ ನಡೆಯುತ್ತಿದೆ. ಅಲ್ಲಿ ಹಲವು ವರ್ಷಗಳಿಂದ ಇದ್ದರು ಎಂಬುದಕ್ಕೆ ದಾಖಲೆ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಮತ್ತೊಂದ್ಕಡೆ ಎಲ್ಲರಿಗೂ ಒಂದೇ ನ್ಯಾಯ ಕೊಡಿ ಎಂದು ಎಸ್.ಆರ್. ವಿಶ್ವನಾಥ್ ಕೂಡ ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಎರಡು ತಿಂಗಳಿಂದ ಬೀದಿಗೆ ಬಿದ್ದಿರುವ ಕುಟುಂಬಗಳು; ಕೋಗಿಲು ಲೇಔಟ್‌ಗೆ ತಕ್ಷಣ ಪರಿಹಾರ, KG ಹಳ್ಳಿಗೆ ಅನ್ಯಾಯವೇ?

ಕೋಗಿಲು ನಿರಾಶ್ರಿತರಿಗೆ ಕೊಡಬೇಕು ಅಂತಿರೋ 1 BHK ಫ್ಲಾಟ್ ಮೌಲ್ಯ 13.2 ಲಕ್ಷ ರೂಪಾಯಿ ನಿಗದಿಯಾಗಿದೆ. ಆದರೆ ಸರ್ಕಾರ 11 ಲಕ್ಷಕ್ಕೆ ಫ್ಲಾಟ್ ಗಳನ್ನ ನೀಡುವ ಸಾಧ್ಯತೆಯಿದೆ ಅಂತಾ ಹೇಳಲಾಗುತ್ತಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:25 pm, Sat, 3 January 26

Source link

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ದಿಬ್ಬದ ಮಣ್ಣು ಅಗೆದಾಗ ನಡೆಯಿತು ಅಚ್ಚರಿ! – Kannada News | Mystery Unfolds in Andhra Pradesh’s kadapa as Golds Idols found After following Boys Dream

ಕಡಪ, ಜನವರಿ 3: ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಕೊನರಾಜುಪಲ್ಲಿಯಲ್ಲಿ ಒಬ್ಬ ಹುಡುಗನ ಕನಸಿನಲ್ಲಿ ದೇವರು ಕಾಣಿಸಿಕೊಂಡಿದ್ದಾರೆ. ದೇವರು ಆ ಹುಡುಗನಿಗೆ ತಾನು ಹಳ್ಳಿಯ ಹೊರವಲಯದಲ್ಲಿರುವ ಬೆಟ್ಟದ ಕೆಳಗೆ ಇರುವ ದಿಬ್ಬದಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ. ಈ ವಿಷಯವನ್ನು ಮರುದಿನ ಆ ಹುಡುಗ ತನ್ನ ಗ್ರಾಮಸ್ಥರಿಗೆ ಹೇಳಿದ್ದಾನೆ. ಇದು ದೇವರ ಸಂದೇಶವೆಂದು ಆತನ ಮಾತು ನಂಬಿದ ಇಡೀ ಹಳ್ಳಿಯವರು ದಿಬ್ಬವನ್ನು ಅಗೆಯಲು ಹೋದರು. ಆಗ ಅಲ್ಲಿ 3 ಪಂಚಲೋಹದ ವಿಗ್ರಹಗಳು ಪತ್ತೆಯಾದವು. ನರಸಿಂಹ ಸ್ವಾಮಿ, ಹನುಮಾನ್ ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳು ಅಲ್ಲಿ ಕಂಡುಬಂದವು. ಅಲ್ಲಿ ಇನ್ನೂ ಎರಡು ವಿಗ್ರಹಗಳು ಇವೆ ಎಂದು ದೇವರು ಹೇಳಿದ್ದಾರೆ ಎಂದು ಆ ಹುಡುಗ ಹೇಳಿದ್ದಾನೆ. ಅದನ್ನು ಇನ್ನೂ ಪತ್ತೆಹಚ್ಚಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಿಮ್ಮ ತಮ್ಮ ಮಾತನಾಡಿದ್ದು ಸರಿಯಲ್ಲ, ನಿಮ್ಮನ್ನು ಹೊರಗೆ ಏಕೆ ಕಳಿಸಿಲ್ಲ?’; ಕಾವ್ಯಾಗೆ ಸುದೀಪ್ ಪ್ರಶ್ನೆ – Kannada News | Kavya Shaiva And Her Brother Karthik did Wrong Says Kichcha Sudeep

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಫ್ಯಾಮಿಲಿ ವೀಕ್​​ನಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದವು. ಅದರಲ್ಲಿ ಕಾವ್ಯಾ ಕುಟುಂಬ ಹಾಗೂ ಅವರ ಸಹೋದರ ಕಾರ್ತಿಕ್ ಮಾಡಿದ ಎಡವಟ್ಟು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಕಾವ್ಯಾಗೆ ಹೊರಗಿನ ವಿಷಯಗಳನ್ನು ಹೇಳಿದ್ದರು ಅವರ ಸಹೋದರ. ಈ ಕಾರಣಕ್ಕೆ ಅವರ ಕುಟುಂಬದವರನ್ನು ಹೊರಕ್ಕೆ ಕಳುಹಿಸಲಾಯಿತು. ಅವರ ಕುಟುಂಬ ಮಾತನಾಡಿದ್ದು ಸರಿ ಅಲ್ಲ ಎಂದು ಬಿಗ್ ಬಾಸ್ ಅಭಿಪ್ರಾಯಪಟ್ಟರು. ಸುದೀಪ್ ಕೂಡ ಹೀಗೆಯೇ ಅಂದರು.

ಕಳೆದ ವಾರ ಸುದೀಪ್ ಅವರು ‘ಮಾರ್ಕ್​’ ಸಿನಿಮಾದ ರಿಲೀಸ್ ಕಾರಣಕ್ಕೆ ಬರಲೇ ಇಲ್ಲ. ಅವರು ಈ ವಾರ ಆ ವಿಷಯವನ್ನು ಚರ್ಚೆ ಮಾಡಿದರು. ಅವರು ಕಾವ್ಯಾಗೆ ಪ್ರಶ್ನೆ ಮಾಡಿದರು. ‘ನಿಮ್ಮನ್ನು ಹೊರಗೆ ಏಕೆ ಕಳುಹಿಸಿಲ್ಲ ಎಂಬುದೇ ನನ್ನ ಪ್ರಶ್ನೆ’ ಎಂದಿದ್ದಾರೆ ಸುದೀಪ್.

‘ಬಿಗ್ ಬಾಸ್ ಅನೇಕ ಬಾರಿ ವಾರ್ನ್ ಮಾಡುತ್ತಾ ಇದ್ದರು. ನಂತರ ಕಾಲ್ ತೆಗೆದುಕೊಂಡರು. ನೀವು ನಿಯಮ ಮೀರಿದ್ದಿರಿ. ಅದು ಸರಿ ಅಲ್ಲ. ನಿಮ್ಮ ತಮ್ಮ ಮಾತನಾಡಿದ್ದು ಸರಿ ಅಲ್ಲ. ನೀವು ಸೀಸನ್ ಇಡೀ ಬ್ಯಾಲೆನ್ಸ್ಡ್​ ಆಗಿ ಮಾತನಾಡುತ್ತಾ ಬಂದವರು.ಈಗ ಹೀಗೆ ಮಾಡಿದ್ದು ಎಷ್ಟು ಸರಿ’ ಎಂದು ಸುದೀಪ್ ಕೇಳಿದರು.

‘ಯಾರೂ ಮಾತನಾಡಕೂಡದು ಎಂದು ಕುಟುಂಬದವರಿಗೆ ಹೇಳಿ ಕಳಿಸಿದ್ದೆವು. ಎಲ್ಲ ಕುಟುಂಬದವರೂ ಹಿಂಟ್ ಕೊಡೋದಾಗಿದ್ರೆ ಈ ಸೀಸನ್ ಎಲ್ಲಿ ಹೋಗುತ್ತೆ? ನಿಮ್ಮನ್ನು ಹೊರಗೆ ಕರೆದಿಲ್ಲ. ಅದೇ ನನಗೆ ಆಶ್ಚರ್ಯ ಆಗಿದ್ದು. ಈ ಸೀಸನ್ ಬಿಗ್ ಬಾಸ್ ಅಷ್ಟು ಗಂಭೀರವಾಗಿ ಹೋಗಿಲ್ಲ. ಪ್ರೀತಿಯಿಂದ ಬೈಕೋತಾ ಇದೀರಾ, ಹೊಡ್ಕೋತಾ ಇದ್ರಿ. ಇದಕ್ಕೆ ಬಿಗ್ ಬಾಸ್ ಮಧ್ಯ ಪ್ರವೇಶಿಸಿಲ್ಲ’ ಎಂದರು ಸುದೀಪ್.

ಇದನ್ನೂ ಓದಿ: ಕ್ಯಾಪ್ಟನ್ಸಿ ನಂಗೇ ಕೊಡಿ ಎಂದು ಬಿಗ್ ಬಾಸ್ ಬಳಿ ಹಠ ಹಿಡಿದ ಅಶ್ವಿನಿ; ಇದೆಂಥಾ ಲಾಜಿಕ್?

‘ಹಿಂಟ್ ಕೊಟ್ಟು ಹೋದಮೇಲೆ ಅದನ್ನು ಮರಳಿ ಪಡೆಯೋಕೆ ಆಗಲ್ಲ. ನಿಮ್ಮ ಮನಸ್ಸಿನ ಒಳಗೆ ಹೋಗಿ ಅಳಿಸೋಕೆ ಆಗಲ್ಲ. ಡ್ಯಾಮೇಜ್ ಮಾಡಿಯಾಗಿದೆ’ ಎಂದು ಸುದೀಪ್ ಬೇಸರ ಹೊರಹಾಕಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version