Video: ಅಮೆರಿಕದ ಉತ್ತರ ಕೆರೊಲಿನಾದಲ್ಲಿ ವಿಮಾನ ಪತನ, ನಾಸ್ಕರ್ ಚಾಲಕನ ಇಡೀ ಕುಟುಂಬವೇ ಬೆಂಕಿಯಲ್ಲಿ ಬೆಂದು ಹೋಯ್ತು – Kannada News | Former NASCAR Driver Greg Biffle Dies With Family in North Carolina Plane Crash

ಕೆರೊಲಿನಾ, ಡಿಸೆಂಬರ್ 19: ಅಮೆರಿಕದ ಉತ್ತರ ಕರೆಲಿನಾದಲ್ಲಿ ಗುರುವಾರ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಏಳು ಜನರು ಸಾವನ್ನಪ್ಪಿದ್ದಾರೆ.ಈ ಅಪಘಾತದಲ್ಲಿ ನಿವೃತ್ತ NASCAR ಚಾಲಕ ಗ್ರೆಗ್ ಬಿಫಲ್, ಅವರ ಪತ್ನಿ ಮತ್ತು ಅವರ ಇಬ್ಬರು ಮಕ್ಕಳು ಸೇರಿದ್ದಾರೆ. ಸೆಸ್ನಾ C550 ವಿಮಾನವು ಬೆಳಗ್ಗೆ 10 ಗಂಟೆ ಸುಮಾರಿಗೆ ಸ್ಟೇಟ್ಸ್‌ವಿಲ್ಲೆ ಪ್ರಾದೇಶಿಕ ವಿಮಾನ ನಿಲ್ದಾಣದಿಂದ ಹೊರಟಿತು. ವಿಮಾನವು ಫ್ಲೋರಿಡಾಕ್ಕೆ ತೆರಳುತ್ತಿತ್ತು, ಆದರೆ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ಪೈಲಟ್ ವಿಮಾನ ನಿಲ್ದಾಣಕ್ಕೆ ಹಿಂದಿರುಗಿಸಲು ಪ್ರಯತ್ನಿಸಿದ್ದಾರೆ. ಗ್ರೆಗ್ ಬಿಫಲ್ ಅವರಿಗೆ 55 ವರ್ಷ ವಯಸ್ಸಾಗಿತ್ತು.

ನಂತರ ವಿಮಾನ ನೆಲಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಷಾರ್ಲೆಟ್‌ನಿಂದ ಉತ್ತರಕ್ಕೆ ಸುಮಾರು 72 ಕಿಲೋಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ತಕ್ಷಣ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಉತ್ತರ ಕೆರೊಲಿನಾ ರಾಜ್ಯ ಹೆದ್ದಾರಿ ಗಸ್ತು ವರದಿ ಮಾಡಿದೆ. ಅಪಘಾತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.ಗ್ರೆಗ್ ಬಿಫಲ್ ಅವರ ಪತ್ನಿ ಕ್ರಿಸ್ಟಿನಾ, ಐದು ವರ್ಷದ ಮಗ ರೈಡರ್ ಮತ್ತು 14 ವರ್ಷದ ಮಗಳು ಎಮ್ಮಾ ಅವರೊಂದಿಗೆ ವಿಮಾನದಲ್ಲಿದ್ದರು.ಡೆನ್ನಿಸ್ ಡಟ್ಟನ್, ಅವರ ಮಗ ಜ್ಯಾಕ್ ಮತ್ತು ಕ್ರೇಗ್ ವ್ಯಾಡ್ಸ್‌ವರ್ತ್ ಕೂಡ ವಿಮಾನದಲ್ಲಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚಿಕ್ಕಬಳ್ಳಾಪುರದಲ್ಲಿ KSRTC ಬಸ್​​ಗೆ ನುಗ್ಗಿ ಬ್ಯಾಗ್​​ ಕದ್ದು ಎಸ್ಕೇಪ್​: ಕಳುವಾಗಿದ್ದು ಅರ್ಧಕೋಟಿ ಹಣ! – Kannada News | Chikkaballapur Bus Robbery: Rupees 55 Lakh Belonging to Businessman Stolen

ಚಿಕ್ಕಬಳ್ಳಾಪುರ, ಡಿಸೆಂಬರ್​​ 19: ಬೆಂಗಳೂರಲ್ಲಿ ಎಟಿಂಗೆ ಹಣ ಸಾಗಿಸುತ್ತಿದ್ದ ವಾಹನವನ್ನು ಹಾಡಹಗಲೇ ತಡೆದು ಕೋಟ್ಯಾಂತರ ರೂಪಾಯಿ ದರೋಡೆ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಬಳಿ ಕೆಎಸ್​​ಆರ್​ಟಿಸಿ ಬಸ್​ನಲ್ಲಿ ಸಾಗಿಸುತ್ತಿದ್ದ 55 ಲಕ್ಷ ನಗದನ್ನು ಕದ್ದು ಕಳ್ಳರು ಎಸ್ಕೇಪ್​​ ಆಗಿದ್ದಾರೆ. ಕಳುವಾದ ಹಣ ಉದ್ಯಮಿಯೋರ್ವರಿಗೆ ಸೇರಿದ್ದು ಎನ್ನಲಾಗಿದೆ.

ಬೆಂಗಳೂರಿನಿಂದ ಹೈದರಾಬಾದ್​ಗೆ ಹೊರಟಿದ್ದ ಕೆಎಸ್​​ಆರ್​ಟಿಸಿ ಬಸ್ ಅನ್ನು ನಿನ್ನೆ ರಾತ್ರಿ ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಬಳಿ ಪ್ರಯಾಣಿಕರ ಊಟಕ್ಕೆಂದು ಕೆಎ 57 ಎಫ್​-3911 ಸಂಖ್ಯೆಯ ಬಸ್​​ ನಿಲ್ಲಿಸಲಾಗಿತ್ತು. ಊಟಕ್ಕೆಂದು ಕೆಳಗೆ ಇಳಿದು ಬರೋವಷ್ಟರಲ್ಲಿ ಸೀಟ್​​ನಲ್ಲಿ ಇಟ್ಟಿದ್ದ ಹಣದ ಬ್ಯಾಗ್​​ ನಾಪತ್ತೆಯಾಗಿದೆ. ಕಳುವಾದ ಹಣ ಹೈದರಾಬಾದ್ ಮೂಲದ ಉದ್ಯಮಿ ಕೆ.ವೆಂಕಟೇಶ್ವರ ರಾವ್​ಗೆ ಸೇರಿದ್ದು, ಬೆಂಗಳೂರಿನಲ್ಲಿದ್ದ ಮನೆ ಮಾರಾಟದಿಂದ ಬಂದಿದ್ದ ನಗದನ್ನು ಅವರು ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ:

ಕ್ಷಣಮಾತ್ರದಲ್ಲಿ ಹಣಕದ್ದು ಎಸ್ಕೇಪ್​​

ಟಾಟಾ ಇಂಡಿಕಾ ಕಾರಿನಲ್ಲಿ ಬಂದಿದ್ದ ವ್ಯಕ್ತಿ ಹಣ ದೋಚಿದ್ದಾನೆ ಎಂದು ಬಸ್​ನಲ್ಲಿದ್ದ ಇತರ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಕಾರಿನಿಂದ ಇಳಿದು ನೇರವಾಗಿ ಬಸ್​ನೊಳಗೆ ನುಗ್ಗಿದ್ದ ವ್ಯಕ್ತಿ ಸೀಟ್ ನಂ.4ರಲ್ಲಿದ್ದ ಬ್ಯಾಗ್ ತೆಗೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಪೆರೇಸಂದ್ರ ಠಾಣೆಗೆ ಉದ್ಯಮಿ ಕೆ.ವೆಂಕಟೇಶ್ವರ ರಾವ್ ದೂರು ನೀಡಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:59 am, Fri, 19 December 25

Source link

ಎರಡನೇ ಚಳಿಗಾಲದ ಅನುಭವ ಕೇಳಿದ ಭಟ್ರು; ನಾಚಿ ನೀರಾದ ಸೋನಲ್

ಸೋನಲ್ ಮೊಂತೆರೋ ಹಾಗೂ ತರುಣ್ ಸುಧೀರ್ ದಾಂಪತ್ಯಕ್ಕೆ ವರ್ಷವೇ ಕಳೆದಿದೆ. ವಿವಾಹದ ಬಳಿಕ ಅವರಿಗೆ ಸಿಗುತ್ತಿರುವ ಎರಡನೇ ಚಳಿಗಾಲ ಇದಾಗಿದೆ. ‘ಲ್ಯಾಂಡ್ ಲಾರ್ಡ್’ ಸಿನಿಮಾದ ‘ನಿಂಗವ್ವ ನಿಂಗವ್ವ’ ಹಾಡು ರಿಲೀಸ್ ಸಮಾರಂಭಕ್ಕೆ ಅವರು ಅತಿಥಿಯಾಗಿ ಬಂದಿದ್ದರು. ತರುಣ್ ಸುಧೀರ್ ಕೂಡ ಜೊತೆಯಲ್ಲಿ ಇದ್ದರು. ಈ ವೇಳೆ ಎರಡನೇ ಚಳಿಗಾಲ ಅನುಭವವನ್ನು ಯೋಗರಾಜ್ ಭಟ್ ಕೇಳಿದರು ಮತ್ತು ಸೋನಲ್ ಇದಕ್ಕೆ ನಾಚಿ ನೀರಾದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ವಿಪಕ್ಷ ನಾಯಕ ಉಸ್ಮಾನ್ ಹಾದಿ ಹತ್ಯೆ, ಮತ್ತೆ ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ – Kannada News | Widespread Protests Sweep Bangladesh Following Osman Hadi’s Death

ಢಾಕಾ, ಡಿಸೆಂಬರ್ 19: ವಿಪಕ್ಷ ನಾಯಕ ಉಸ್ಮಾನ್ ಹಾದಿ ಹತ್ಯೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಚುನಾವಣಾ ಪ್ರಚಾರ ವೇಳೆ ಅವಾಮಿ ಲೀಗ್ ಪಕ್ಷದ ಉಸ್ಮಾನ್ ಹಾದಿ ಮೇಲೆ ಫೈರಿಂಗ್ ನಡೆದಿತ್ತು. ಸಿಂಗಾಪುರದಲ್ಲಿ ಚಿಕಿತ್ಸೆ ಫಲಿಸದೆ ಉಸ್ಮಾನ್ ಹಾದಿ ಸಾವನ್ನಪ್ಪಿದ್ದಾರೆ.ಉಸ್ಮಾನ್ ಹತ್ಯೆಯಿಂದ ಆಕ್ರೋಶಗೊಂಡು ನಿನ್ನೆ ರಾತ್ರಿ ದಾಳಿ ನಡೆಸಲಾಗಿದೆ. ಪ್ರೋಥೋಮ್ ಅಲೋ ಪತ್ರಿಕೆಯ ಕಟ್ಟಡದ ಮೇಲೆ ದಾಳಿ ನಡೆದಿದೆ. ಬಾಂಗ್ಲಾದ ಹಲವೆಡೆ ಬೆಂಕಿ ಹಚ್ಚಿ ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊಹಮ್ಮದ್ ಯೂನುಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಳೆದ ವರ್ಷವಷ್ಟೇ ಪ್ರಧಾನಿ ಶೇಖ್ ಹಸೀನಾರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಅದಾದ ಬಳಿಕ ಹಸೀನಾ ಅಲ್ಲಿಂದ ಪಲಾಯನ ಮಾಡಿ ಭಾರತಕ್ಕೆ ಬಂದಿದ್ದರು. ಮೊಹಮ್ಮದ್ ಯೂನಸ್ ಮಧ್ಯಂತರ ಸರ್ಕಾರವನ್ನು ರಚಿಸಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಲನ್ ಪಾತ್ರ ಮಾಡಿದರೂ ಜನರು ಒಪ್ಪಿಕೊಂಡರು; ಖುಷಿ ಹೊರಹಾಕಿದ ರುಕ್ಮಿಣಿ ವಸಂತ್ – Kannada News | Rukmini Vasanth on Kantara: Chapter 1 Villain Role & Fan Love Bold Career Move

ನಟಿ ರುಕ್ಮಿಣಿ ವಸಂತ್ (Rukmini Vasanth) ಅವರನ್ನು ಜನರು ಒಪ್ಪಿಕೊಂಡಿದ್ದಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ನೆಗೆಟಿವ್ ಪಾತ್ರ ಮಾಡಿದ್ದರು. ಈ ಪಾತ್ರ ಗಮನ ಸೆಳೆದಿದೆ. ಈ ಸಿನಿಮಾ ಬಳಿಕವೂ ಅವರನ್ನು ಯಾರೂ ಹೇಟ್ ಮಾಡಿಲ್ಲ. ಇದಕ್ಕೆ ಅವರು ಸಂತಸ ಹೊರಹಾಕಿದರು. ಬಾಲಿವುಡ್​​ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ನಟಿಯರು ಕ್ಯೂಟ್ ಕ್ಯೂಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ಫ್ಯಾನ್ಸ್ ಕೋರಿಕೆ. ಆದರೆ, ಹಾಗೆ ಕಾಣಿಸಿಕೊಂಡಿಲ್ಲ ಎಂದಾಗ ಕೆಲವೊಮ್ಮೆ ಫ್ಯಾನ್ಸ್​ಗೆ ಬೇಸರ ಆಗೋದನ್ನು ನೀವ ಕಾಣಬಹುದು. ಅದರಲ್ಲೂ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡರೆ ಫ್ಯಾನ್ಸ್ ಸಹಿಸುವುದೇ ಇಲ್ಲ. ಆದರೆ, ರುಕ್ಮಿಣಿ ವಿಷಯದಲ್ಲಿ ಆ ರೀತಿ ಆಗಿಲ್ಲ. ಈ ವಿಷಯದಲ್ಲಿ ಅವರಿಗೆ ಖುಷಿ ಇದೆ. ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹಾಲಿವುಡ್ ರಿಪೋರ್ಟರ್ ರೌಂಡ್​​ಟೇಬಲ್​​ನಲ್ಲಿ ಕನ್ನಡತಿ ರುಕ್ಮಿಣಿ ವಸಂತ್

‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದೆ. ಈ ರೀತಿಯ ಪಾತ್ರ ಪ್ರಯೋಗವನ್ನು ವೃತ್ತಿಜೀವನದ ಆರಂಭದಲ್ಲಿ ಮಾಡುವುದು ಅಪಾಯಕಾರಿ. ಜನರು ನಾನು ನೆಗೆಟಿವ್ ಪಾತ್ರ ಮಾಡಿದರೂ ನನ್ನನ್ನು ಪ್ರೀತಿಸಿದ್ದಾರೆ. ಅವರು ದ್ವೇಷಿಸಲಿಲ್ಲ. ನನ್ನ ಪಾತ್ರ ವಿಲನ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ’ ಎಂದು ರುಕ್ಮಿಣಿ ಖುಷಿಯಿಂದ ಹೇಳಿಕೊಂಡಿದ್ದಾರೆ.

ರುಕ್ಮಿಣಿ ವಸಂತ್ ಅವರು ತಮ್ಮ ವೃತ್ತಿ ಜೀವನದ ಉದ್ದಕ್ಕೂ ನಿರ್ವಹಿಸಿ ಪಾತ್ರಗಳಲ್ಲಿ ಒಂದು ಪ್ಯಾಟರ್ನ್ ಇದೆ. ಅವರು ಯಾವುದೇ ಸಿನಿಮಾ ಮಾಡಿದರೂ ಕಥಾ ನಾಯಕ ಅವರಿಗೆ ಸಿಗೋದಿಲ್ಲ. ಈ ಹಿಂದಿನ ಹಲವು ಸಿನಿಮಾಗಳಲ್ಲಿ ಅವರು ನಡೆದಿವೆ. ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲೂ ಹಾಗೆಯೇ ಆಗಿದೆ. ಇದರಲ್ಲಿ ಕಥಾ ನಾಯಕನೇ ರುಕ್ಮಿಣಿಯನ್ನು ಸಾಯಿಸುತ್ತಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ? – Kannada News | Daily Devotional: The Consequences of Daytime Sleep

ಬೆಂಗಳೂರು, ಡಿಸೆಂಬರ್ 19: ನಿದ್ರೆಯು ಮಾನವ ದೇಹಕ್ಕೆ ಅತ್ಯಗತ್ಯ. ಇದು ಆಯುಷ್ಯ ವೃದ್ಧಿಗೂ ಸಹ ಸಹಕಾರಿ. ಆದರೆ, ರಾತ್ರಿಯ ನಿದ್ರೆ ಮತ್ತು ಮಧ್ಯಾಹ್ನದ ನಿದ್ರೆಯ ನಡುವೆ ವ್ಯತ್ಯಾಸವಿದೆ. ಜ್ಯೋತಿಷ್ಯ ಮತ್ತು ಧರ್ಮಶಾಸ್ತ್ರಗಳ ಪ್ರಕಾರ, ಮಧ್ಯಾಹ್ನದ ಹೊತ್ತು ನಿದ್ರಿಸುವುದು ಕೆಲವೊಮ್ಮೆ ಶುಭವಲ್ಲ. ವೃದ್ಧರು, ರೋಗಿಗಳು, ಮಕ್ಕಳು ಮತ್ತು ಮಕ್ಕಳನ್ನು ಹಡೆದ ತಾಯಂದಿರಿಗೆ ಮಧ್ಯಾಹ್ನದ ನಿದ್ರೆ ಅನ್ವಯಿಸುವುದಿಲ್ಲ. ಇನ್ನುಳಿದಂತೆ, ದೇಹಪುಷ್ಟಿಯಿಂದ ಕರ್ಮನಿರತರಾಗಿರುವ ವ್ಯಕ್ತಿಗಳಿಗೆ, ಮಧ್ಯಾಹ್ನದ ನಿದ್ರೆ ಅಶುಭ ಫಲಿತಾಂಶಗಳನ್ನು ನೀಡುತ್ತದೆ.

ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ಗಂಟೆಯ ಸಮಯದಲ್ಲಿ ನಿದ್ರಿಸುವುದರಿಂದ ನವಗ್ರಹ ದೋಷಗಳು, ಗ್ರಹಕಾಟ, ನಕಾರಾತ್ಮಕ ಶಕ್ತಿಗಳ ಆವಾಹನೆ, ದೈವಬಲ ಕುಗ್ಗುವಿಕೆ ಮತ್ತು ಮೆದುಳಿನ ಜಾಗರೂಕತೆ ಕಡಿಮೆಯಾಗುವ ಸಾಧ್ಯತೆ ಇದೆ. ಕಚೇರಿಗಳಲ್ಲಿ ಕುರ್ಚಿಯ ಮೇಲೆ ನಿದ್ರಿಸುವುದು ಮಹಾದೋಷವೆಂದು ಪರಿಗಣಿಸಲಾಗುತ್ತದೆ. ನಿದ್ರೆಗೆ ಜಾರುವ ಸಂಭವ ಬಂದಾಗ, ಸ್ವಲ್ಪ ಓಡಾಡಿ, ಮುಖ ತೊಳೆದು ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಮಧ್ಯಾಹ್ನದ ನಿದ್ರೆ ಶುಭವಲ್ಲ ಎಂಬುದು ಶಾಸ್ತ್ರಗಳ ನಂಬಿಕೆಯಾಗಿದೆ ಎಂದು ಗುರೂಜಿ ಹೇಳಿದ್ದಾರೆ.

Source link

Video: ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ – Kannada News | Wedding Turns Chaotic as Fire Engulfs Thane Banquet Hall

ಮುಂಬೈ, ಡಿಸೆಂಬರ್ 19: ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಥಾಣೆಯ ಘೋಡ್‌ಬಂದರ್ ಪ್ರದೇಶದ ಮದುವೆ ಮಂಟಪದಲ್ಲಿ ಗುರುವಾರ ನಡೆದ ಸಮಾರಂಭದ ವೇಳೆ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಮಾಹಿತಿ ತಿಳಿದು, ಹಲವು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ದೌಡಾಯಿಸಿದ್ದವು.  ಅಗ್ನಿ ಶಾಮಕ ಸಿಬ್ಬಂದಿ, ಬೆಂಕಿಯನ್ನು ನಂದಿಸಲು ತೀವ್ರ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು.

ಬೆಂಕಿಯ ತೀವ್ರತೆ ಹೆಚ್ಚಾಗುವ ಮೊದಲೇ ವಧು, ವರ ಮತ್ತು ಅತಿಥಿಗಳು ಸೇರಿದಂತೆ ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು. ಪ್ರಾಥಮಿಕ ವರದಿಗಳು ಯಾವುದೇ ಜೀವಹಾನಿ ಅಥವಾ ಗಾಯಗಳಾಗಿಲ್ಲ ಎಂದು ದೃಢಪಡಿಸಿವೆ. ಇದರಿಂದಾಗಿ ಸಂಭಾವ್ಯ ದುರಂತ ತಪ್ಪಿದೆ. ಶಾರ್ಟ್​ ಸರ್ಕ್ಯೂಟ್​ನಿಂದ ಬೆಮಕಿ ಹೊತ್ತಿಕೊಂಡಿರಬಹುದು ಎನ್ನಲಾಗಿದೆ. ಇತ್ತೀಚೆಗೆ ಗೋವಾದ ನೈಟ್​ಕ್ಲಬ್​ನಲ್ಲಿ ನಡೆದ ಅಗ್ನಿ ದುರಂತದಲ್ಲಿ 25 ಮಂದಿ ಪ್ರಾಣ ಕಳೆದುಕೊಂಡಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅರ್ಧ ಲಕ್ಷಕ್ಕೆ ಕುಸಿದ ‘ಡೆವಿಲ್’ ಕಲೆಕ್ಷನ್; ಕೈ ಹಿಡಿಯಬೇಕಿದೆ ಅಭಿಮಾನಿಗಳು – Kannada News | The Devil Movie Collection Day 8 Seen deep Dip: Can Fans Save Darshan’s Film

‘ಡೆವಿಲ್’ ಸಿನಿಮಾ ಕಲೆಕ್ಷನ್ (Devil Movie Collection) ದಿನ ಕಳೆದಂತೆ ಕುಸಿತ ಕಾಣುತ್ತಿದೆ. ಅಭಿಮಾನಿಗಳು ತಾವು ಸಿನಿಮಾನ ಗೆಲ್ಲಿಸೋದಾಗಿ ಹೇಳಿದ್ದರು. ಚಿತ್ರ ಒಳ್ಳೆಯ ಗಳಿಕೆ ಕೂಡ ಮಾಡಿದೆ. ಆದರೆ, ಸಿನಿಮಾದ ಬಜೆಟ್ ಹೆಚ್ಚಿರುವುದರಿಂದ ಗಳಿಕೆ ಏನಕ್ಕೂ ಸಾಲುತ್ತಿಲ್ಲ. ಹಿಗೆಯೇ ಮುಂದುವರಿದರೆ ನಿರ್ಮಾಪಕರು ಕಷ್ಟ ಅನುಭವಿಸಬೇಕಾಗಿ ಬರಬಹುದು. ಇನ್ನು, ಗುರುವಾರ (ಡಿಸೆಂಬರ್ 18) ಸಿನಿಮಾದ ಗಳಿಕೆ ತೀವ್ರವಾಗಿ ಕುಸಿತ ಕಂಡಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಅಭಿಮಾನಿಗಳು ಕೈ ಹಿಡಿಯಬೇಕಾದ ಅನಿವಾರ್ಯತೆ ಇದೆ.

‘ಡೆವಿಲ್’ ಸಿನಿಮಾ ರಿಲೀಸ್ ಆಗಿ 8 ದಿನಗಳು ಪೂರ್ಣಗೊಂಡಿವೆ. ಮೊದಲ ದಿನ ಸಿನಿಮಾ ಅದ್ಭುತ ಕಲೆಕ್ಷನ್ ಮಾಡಿತು. ಆದರೆ, ದಿನ ಕಳೆದಂತೆ ಚಿತ್ರದ ಕಲೆಕ್ಷನ್ ಕುಗ್ಗುತ್ತಾ ಇದೆ. sacnilk ವರದಿ ಪ್ರಕಾರ ಈ ಚಿತ್ರ ಕಲೆಕ್ಷನ್ ಮಾಡಿರುವುದು 25 ಕೋಟಿ ರೂಪಾಯಿ. ಗುರುವಾದ ಕಲೆಕ್ಷನ್ ಕೇವಲ 53 ಲಕ್ಷ ರೂಪಾಯಿ. ಶನಿವಾರ ಹಾಗೂ ಭಾನುವಾರ ಸಿನಿಮಾ ಪಾಲಿಗೆ ತುಂಬಾನೇ ಮುಖ್ಯವಾಗಲಿದೆ.

ದರ್ಶನ್ ಅವರು ಜೈಲಿನಲ್ಲಿ ಇರುವಾಗಲೇ ‘ಡೆವಿಲ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದ ಪ್ರಚಾರದ ಜವಾಬ್ದಾರಿಯನ್ನು ಅಭಿಮಾನಿಗಳು ಹೊತ್ತುಕೊಂಡಿದ್ದರು. ಆದರೆ, ಸಿನಿಮಾಗೆ ಅಂದುಕೊಂಡ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ. ವಿಮರ್ಶಕರಿಂದ ಹಾಗೂ ಸಿನಿಮಾ ಪ್ರಿಯರಿಂದ ‘ಡೆವಿಲ್​’ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಈಗ ಅವರೇ ಕೈ ಹಿಡಿದು ಚಿತ್ರವನ್ನು ನಡೆಸಬೇಕಿದೆ.

ಇದನ್ನೂ ಓದಿ: ಬುಧವಾರ ಕೋಟಿಯಿಂದ ಲಕ್ಷಕ್ಕೆ ಕುಸಿದ ‘ಡೆವಿಲ್’ ಸಿನಿಮಾ ಕಲೆಕ್ಷನ್; ವಾರದ ಗಳಿಕೆ ಎಷ್ಟು?

ಈ ಶನಿವಾರ ಹಾಗೂ ಭಾನುವಾರ ಒಳ್ಳೆಯ ಕಲೆಕ್ಷನ್ ಆದರೆ ಮಾತ್ರ ಸಿನಿಮಾ ಚೇತರಿಸಿಕೊಳ್ಳಲಿದೆ. ಮುಂದಿನವಾರ ‘ಮಾರ್ಕ್’ ಹಾಗೂ ‘45’ ಸಿನಿಮಾಗಳು ಬರಲಿವೆ. ಎರಡೂ ಕನ್ನಡದ ಸಿನಿಮಾಗಳೇ. ಹೀಗಾಗಿ, ಹಲವು ಚಿತ್ರಮಂದಿರಗಳಲ್ಲಿ ಈ ಎರಡು ಸಿನಿಮಾಗಳು ರಾರಾಜಿಸಲಿವೆ. ಇದರಿಂದ ‘ಡೆವಿಲ್’ ಚಿತ್ರಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ‘ಡೆವಿಲ್’ ಚಿತ್ರಕ್ಕೆ ಪ್ರಕಾಶ್ ವೀರ್ ನಿರ್ದೇಶನ ಇದೆ. ಈ ಸಿನಿಮಾಗೆ ರಚನಾ ರೈ ನಾಯಕಿ. ದರ್ಶನ್ ಅವರದ್ದು ದ್ವಿಪಾತ್ರ. ಅಚ್ಯುತ್ ಕುಮಾರ್ ಪಾತ್ರಕ್ಕೂ ಪ್ರಾಮುಖ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today 19 December: ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2025ರ ಡಿಸೆಂಬರ್ 19, ಶುಕ್ರವಾರದ ಮಹತ್ವವನ್ನು ವಿವರಿಸಿದ್ದಾರೆ. ಈ ದಿನವು ವಿಶ್ವಾ ವಸುನಾಮ ಸಂವತ್ಸರ, ಮಾರ್ಗಶಿರ ಮಾಸ, ಕೃಷ್ಣಪಕ್ಷದ ಅಮಾವಾಸ್ಯಾ ತಿಥಿಯನ್ನು ಒಳಗೊಂಡಿದೆ. ಜೇಷ್ಠ ನಕ್ಷತ್ರದಲ್ಲಿ ಚಂದ್ರನು ಸಂಚರಿಸುತ್ತಾನೆ.

ಡಾ. ಗುರೂಜಿ ತಿಳಿಸಿದಂತೆ, ಇಂದು ಸಂಪೂರ್ಣ ಮಹಾ ಅಮಾವಾಸ್ಯೆಯಾಗಿದ್ದು, ಇದರ ಪ್ರಭಾವವು ಮರುದಿನದವರೆಗೂ ಇರುತ್ತದೆ. ಶುಕ್ರವಾರದಂದು ಅಮಾವಾಸ್ಯೆ ಬಂದಿರುವುದು ಮಹಾಲಕ್ಷ್ಮಿ ಮತ್ತು ಶಕ್ತಿ ದೇವತೆಗಳ ಪೂಜೆಗೆ ಅತ್ಯಂತ ಶುಭಪ್ರದವಾಗಿದೆ. ಲಕ್ಷ್ಮಿ ದರ್ಶನ ಮತ್ತು ಕುಂಕುಮಾರ್ಚನೆಗೆ ಇದು ವಿಶೇಷ ದಿನ. ಇದನ್ನು ಎಳ್ಳಮಾವಾಸ್ಯೆ ಎಂದೂ ಕರೆಯಲಾಗುತ್ತಿದ್ದು, ತುಂಗಾ ಸ್ನಾನಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಸೂರ್ಯ ಧನುಸ್ ರಾಶಿಯಲ್ಲೂ, ಚಂದ್ರ ವೃಶ್ಚಿಕ ರಾಶಿಯಲ್ಲೂ ಸಂಚಾರ ಮಾಡುತ್ತಾನೆ. ಇಂದು ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಶುಭ ಹಾರೈಕೆಗಳನ್ನು ಸಲ್ಲಿಸಲಾಗಿದೆ ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.

Source link

ಜಾಗದ ವಿಚಾರಕ್ಕೆ ನಡೀತು ಬರ್ಬರ ಕೊಲೆ: ತೋಟದಲ್ಲೇ ಹರಿದ ನೆತ್ತರು – Kannada News | Tumakuru Land Dispute, Brutal Murder Shakes Kallambella Village

ತುಮಕೂರು, ಡಿಸೆಂಬರ್​​ 19: ಜಾಗದ ವಿಚಾರವಗಿ ರಿಯಲ್ ಎಸ್ಟೇಟ್ ಉದ್ಯಮಿ ಯುವಕನೋರ್ವನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ನಡೆದಿದೆ. ಮಚ್ಚಿನಿಂದ ಕೊಚ್ಚಿ ಮಧುವನ್(25) ಕೊಲೆ ಮಾಡಲಾಗಿದ್ದು, ಪ್ರಕರಣ ಸಂಬಂಧ ರಿಯಲ್ ಎಸ್ಟೇಟ್ ಉದ್ಯಮಿ ಮಹೇಶ್ ಮತ್ತು ಶಫಿವುಲ್ಲಾರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

2015ರಲ್ಲಿ ಮಧುಸೂದನ್​​ ಅವರ ತಂದೆ ನಾರಾಯಣಸ್ವಾಮಿ ತುಮಕೂರಿನ ಅಮಾನಿಕೆರೆ ಬಳಿಯ 3 ಕೋಟಿ ರೂ. ಮೌಲ್ಯದ 2.2 ಎಕರೆ ಜಮೀನು ಮಾರಾಟಕ್ಕೆ ಚಿಂತನೆ ನಡೆಸಿದ್ದರು. ನಾರಾಯಣಸ್ವಾಮಿ ಅವರಿಗೆ ಆ ಜಮೀನು ತಮ್ಮ ತಾಯಿಯಿಂದ ಬಂದಿದ್ದು, ಇದನ್ನು ಉದ್ಯಮಿ ಮಹೇಶ್​ಗೆ​ ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಜಮೀನಿನ ದಾಖಲೆಗಳು ಸರಿಯಾಗಿ ಇಲ್ಲದ ಕಾರಣ ಅದನ್ನು ಸರಿಪಡಿಸಲು 3 ವರ್ಷಗಳ ಕಾಲ ಸಮಯ ತೆಗೆದುಕೊಂಡಿದ್ದರು. 2018ರಲ್ಲಿ ಸಮಸ್ಯೆ ಬಗೆಹರಿದ ಬಳಿಕ ಈ ವಿಚಾರಕ್ಕೆ ಮಗ ಮಧುಸೂಧನ್​​ ಎಂಟ್ರಿಯಾಗಿತ್ತು. ಜಮೀನು ಮಾರಾಟ ಮಾಡಲು ಅವರು ಒಪ್ಪದ ಕಾರಣ ಕಳೆದ 7 ವರ್ಷಗಳಿಂದ ಜಮೀನು ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಹುಡುಗಿಯರ ಮೊಬೈಲ್​ ನಂಬರ್​​ ಕೇಳಿದ್ದಕ್ಕೆ ಫೈಟ್​​; ಪೊಲೀಸ್​​ ಠಾಣೆ ಮೆಟ್ಟಿಲೇರಿದ ಪಬ್​​ ಗಲಾಟೆ

ಮಚ್ಚಿನಿಂದ ಕೊಚ್ಚಿ ಕೊಲೆ

ಇದೇ ಜಮೀನು ಸಂಬಂಧಿತ ವಿಚಾರ ಸಂಬಂಧ ಮಾತನಾಡಿಸಲು ಮಹೇಶ್​​ ತೋಟಕ್ಕೆ ಬಂದಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ನಡೆದ ಜಗಳ ವಿಕೋಪಕ್ಕೆ ಹೋಗಿದೆ. ಅಲ್ಲೇ ಇದ್ದ ಮಚ್ಚಿನಿಂದ ಕೊಚ್ಚಿ ಮಧುಸೂದನ್​​ ಅವರ ಹತ್ಯೆ ಮಾಡಲಾಗಿದೆ. ಪ್ರಕರಣ ಸಂಬಂಧ ರಿಯಲ್ ಎಸ್ಟೇಟ್ ಉದ್ಯಮಿ ಮಹೇಶ್ ಹಾಗೂ ಶಫಿವುಲ್ಲಾ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version