ಅಶ್ವಿನಿ ಗೌಡ ಎದುರು ಗಿಲ್ಲಿ ನಟ ಆ್ಯಟಿಟ್ಯೂಡ್: ವಿಡಿಯೋ ನೋಡಿ.. – Kannada News | Gilli Nata shows attitude in front of Ashwini Gowda in Bigg Boss Kannada Season 12

ಗಿಲ್ಲಿ ನಟ ಅವರು ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಅವರು ಕ್ಯಾಪ್ಟನ್ ಆಗಬೇಕು ಎಂಬುದು ಅಭಿಮಾನಿಗಳ ಬಯಕೆ ಆಗಿತ್ತು. ಅದರಂತೆ ನಡೆದಿದೆ. ಮೊದಲಿನಿಂದಲೂ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರ ನಡುವೆ ಟಫ್ ಪೈಪೋಟಿ ಇದೆ. 14ನೇ ವಾರದಲ್ಲಿ ಕೂಡ ಆ ಸ್ಪರ್ಧೆ ಮುಂದುವರಿದಿದೆ. ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ (Ashwini Gowda) ಅವರು ಪರಸ್ಪರ ಟಕ್ಕರ್ ಕೊಟ್ಟುಕೊಳ್ಳುತ್ತಿದ್ದಾರೆ. ಡಿಸೆಂಬರ್ 30ರ ಸಂಚಿಕೆಯಲ್ಲಿಯೂ ಅದೇ ರೀತಿ ಆಗಿದೆ. ರಾಜನ ಗೆಟಪ್ ಧರಿಸಿದ್ದ ಗಿಲ್ಲಿ ನಟ ಮಂಕಾಗಿದ್ದರು. ರಾಣಿಯಾಗಿ ಅಶ್ವಿನಿ ಗೌಡ ಅವರು ಪ್ರಚೋದಿಸುವ ಪ್ರಯತ್ನ ಮಾಡಿದರು. ‘ನಿನ್ನೆ ಇದ್ದ ಜೋಶ್ ಇಂದು ಕಾಣುತ್ತಿಲ್ಲ’ ಎಂದು ಕೆಣಕಿದರು. ಆಗ ಗಿಲ್ಲಿ ನಟ (Gilli Nata) ಅವರು ಆ್ಯಟಿಟ್ಯೂಡ್ ತೋರಿಸಿದ್ದಾರೆ. ಕಾದು ನೋಡುವ ತಂತ್ರವನ್ನು ಗಿಲ್ಲಿ ನಟ ಉಪಯೋಗಿಸಿದ್ದಾರೆ. ಡಿ.30ರ ಸಂಚಿಕೆಯ ಪ್ರೋಮೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಈ ಬಾರಿ ನಾನು ಡಾರ್ಲಿಂಗ್ ಕೃಷ್ಣನ ಬಿಟ್ಟು ಹೋಗಲ್ಲ: ಅಮೃತಾ ಅಯ್ಯಂಗಾರ್ – Kannada News | Amrutha Iyengar talks about her role in Father movie with Darling Krishna

‘ಫಾದರ್’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಅಮೃತಾ ಅಯ್ಯಂಗಾರ್ (Amrutha Iyengar) ಅವರು ನಟಿಸಿದ್ದಾರೆ. ಪ್ರಕಾಶ್ ರಾಜ್ ಕೂಡ ಪ್ರಮುಖ ಪಾತ್ರದಲ್ಲಿ ಇದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ನಡೆದಿದೆ. ಈ ವೇಳೆ ಅಮೃತಾ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಅಮೃತಾ ಅವರು ಈ ಸಿನಿಮಾ ಒಪ್ಪಿಕೊಳ್ಳಲು ಡಾರ್ಲಿಂಗ್ ಕೃಷ್ಣ (Darling Krishna) ಅವರು ಕಾರಣ. ಕೃಷ್ಣ ಅವರಿಗೆ ಕಥೆ ಇಷ್ಟ ಆಗಿದ್ದರಿಂದ ಅಮೃತಾಗೆ ಸಜೆಸ್ಟ್ ಮಾಡಿದ್ದರು. ಆ ಸಂಗತಿಯನ್ನು ಅಮೃತಾ ಅವರು ವೇದಿಕೆಯಲ್ಲಿ ನೆನಪು ಮಾಡಿಕೊಂಡರು. ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಕೈ ಕೊಟ್ಟು ಹೋಗುವ ಹುಡುಗಿಯ ಪಾತ್ರವನ್ನು ಅಮೃತಾ ಅಯ್ಯಂಗಾರ್ ಮಾಡಿದ್ದರು. ಆದರೆ ‘ಫಾದರ್’ (Father) ಸಿನಿಮಾದಲ್ಲಿ ಆ ರೀತಿ ಆಗಲ್ಲ ಎಂದು ಅಮೃತಾ ಹೇಳಿದ್ದಾರೆ. ‘ಬಿಟ್ಟು ಹೋಗುವ ಪಾತ್ರಗಳನ್ನು ಆದಷ್ಟು ಬ್ರೇಕ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರನ್ನು ನಾನು ಬಿಟ್ಟು ಹೋಗಲ್ಲ’ ಎಂದು ಅಮೃತಾ ಅಯ್ಯಂಗಾರ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

43 ಎಸೆತಗಳಲ್ಲಿ 68 ರನ್ ಚಚ್ಚಿದ ಹರ್ಮನ್‌ಪ್ರೀತ್ ಕೌರ್

ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಅದ್ಭುತ ಅರ್ಧಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ 175 ರನ್ ಕಲೆಹಾಕಿದೆ. ಟೀಂ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿದ ನಾಯಕಿ ಹರ್ಮನ್‌ಪ್ರೀತ್ 35 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ಅವರ ಟಿ20 ಅಂತರರಾಷ್ಟ್ರೀಯ ವೃತ್ತಿಜೀವನದ 15 ನೇ ಅರ್ಧಶತಕವಾಗಿದೆ. ಹಾಗೆಯೇ ಹರ್ಮನ್ ಮತ್ತು ಅಮನ್‌ಜೋತ್ ಕೌರ್ 37 ಎಸೆತಗಳಲ್ಲಿ 61 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡು ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಅಂತಿಮವಾಗಿ ನಾಯಕಿ ಹರ್ಮನ್‌ಪ್ರೀತ್ ಕೌರ್ 43 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 68 ರನ್ ಗಳಿಸಿದರು. ನಂತರ ಅರುಂಧತಿ ರೆಡ್ಡಿ ಅದ್ಭುತ ಬ್ಯಾಟಿಂಗ್ ಮಾಡಿ ಭಾರತವನ್ನು 170 ರನ್​ಗಳ ಗಡಿ ದಾಟಿಸಿದರು. ಅರುಂಧತಿ 11 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 27 ರನ್‌ಗಳೊಂದಿಗೆ ಅಜೇಯರಾಗಿ ಉಳಿದರೆ ಸ್ನೇಹ್ ರಾಣಾ ಆರು ಎಸೆತಗಳಲ್ಲಿ ಒಂದು ಬೌಂಡರಿ ಸೇರಿದಂತೆ ಎಂಟು ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

Source link

ಯುವಕನ ಹೊಟ್ಟೆಯೊಳಗಿತ್ತು ಕಬ್ಬಿಣದ ಸ್ಪ್ಯಾನರ್‌, 7 ಬ್ರಶ್; ಆಪರೇಷನ್ ಮಾಡಿದ ವೈದ್ಯರಿಗೇ ಶಾಕ್ – Kannada News | Iron spanners and 7 toothbrushes removed from mans stomach in rajasthan

ಜೈಪುರ, ಡಿಸೆಂಬರ್ 30: ರಾಜಸ್ಥಾನದ ಯುವಕನೊಬ್ಬ ಕೆಲವು ದಿನಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಹೀಗಾಗಿ, ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆಗ ವೈದ್ಯರು ಅವನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿದಾಗ ಆಘಾತಕ್ಕೊಳಗಾದರು. ಸಮಸ್ಯೆ ಏನೆಂದು ಕಂಡುಹಿಡಿಯಲು ವೈದ್ಯರು ಯುವಕನ ಹೊಟ್ಟೆಯನ್ನು ಸ್ಕ್ಯಾನ್ (Scanning) ಮಾಡಿದ ವೈದ್ಯರು ಶಾಕ್ ಆದರು. ಏಕೆಂದರೆ ಆತನ ಹೊಟ್ಟೆಯಲ್ಲಿ ಕಬ್ಬಿಣದ ಸ್ಪ್ಯಾನರ್‌ಗಳು ಮತ್ತು ಹಲ್ಲುಜ್ಜುವ ಬ್ರಶ್ ಸೇರಿದಂತೆ ಕೆಲವು ವಸ್ತುಗಳನ್ನು ಕಂಡು ಆಘಾತಕ್ಕೊಳಗಾದರು.

ತಕ್ಷಣವೇ ಆತನಿಗೆ ಆಪರೇಷನ್ ಮಾಡಲು ಸಿದ್ಧರಾದ ವೈದ್ಯರು ಆ ಯುವಕನ ಹೊಟ್ಟೆಯಿಂದ ಕಬ್ಬಿಣದ ಸ್ಪ್ಯಾನರ್‌ಗಳು ಮತ್ತು ಹಲ್ಲುಜ್ಜುವ ಬ್ರಷ್‌ಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಸುಮಾರು 2 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಯುವಕನ ಹೊಟ್ಟೆಯಿಂದ 2 ಕಬ್ಬಿಣದ ಸ್ಪ್ಯಾನರ್‌ಗಳು ಮತ್ತು 7 ಹಲ್ಲುಜ್ಜುವ ಬ್ರಷ್‌ಗಳನ್ನು ಹೊರತೆಗೆಯಲಾಯಿತು.

ಇದನ್ನೂ ಓದಿ: 3 ಕೋಟಿ ರೂ. ವಿಮೆ ಹಣ ಪಡೆಯಲು, ತಂದೆಗೆ ಹಾವು ಕಚ್ಚಿಸಿದ ಮಕ್ಕಳು

ಆ ಯುವಕ ಆಪರೇಷನ್ ಬಳಿಕ ಆರೋಗ್ಯವಾಗಿದ್ದಾನೆ. ಆ ಯುವಕ ಮಾನಸಿಕ ಅಸ್ವಸ್ಥನಾಗಿದ್ದರಿಂದ ಇಂತಹ ವಸ್ತುಗಳನ್ನು ನುಂಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಆದರೆ, ಆತ ಇಂತಹ ಅಪಾಯಕಾರಿ ವಸ್ತುಗಳನ್ನು ನುಂಗಲು ಖಚಿತ ಕಾರಣ ಇನ್ನೂ ಬಯಲಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೈಲಿಂದ ವೀರೇಂದ್ರ ಪಪ್ಪಿ ರಿಲೀಸ್​: ಹೂವಿನ‌ ಹಾರ ಹಾಕಿ ಅಭಿಮಾನಿಗಳಿಂದ ಭರ್ಜರಿ ಸ್ವಾಗತ – Kannada News | Veerendra Pappy Released From Jail, Receives Grand Welcome From Fans

ಬೆಂಗಳೂರು, ಡಿಸೆಂಬರ್​ 30: ಇ.ಡಿ ಪ್ರಕರಣದಲ್ಲಿ ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಇಂದು ಕೋರ್ಟ್​ನಿಂದ ಜಾಮೀನು ಹಿನ್ನೆಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಕೇಸ್​ನಲ್ಲಿ ಕಳೆದ 4 ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿ ಸೇರಿದ್ದರು. ಇದೀಗ ಬಿಡುಗಡೆಯಾಗಿರುವ ವೀರೇಂದ್ರಗೆ ಅಭಿಮಾನಿಗಳು ಪರ ಘೋಷಣೆ ಕೂಗಿ, ಹೂವಿನ‌ ಹಾರ ಹಾಕಿ ಬರಮಾಡಿಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Patanjali Shares: ದೊಡ್ಡ ದೊಡ್ಡ ಕಂಪನಿಗಳಿಗಿಂತ ಹೆಚ್ಚು ಲಾಭ ತಂದುಕೊಟ್ಟಿರುವ ಪತಂಜಲಿ ಫುಡ್ಸ್ ಷೇರು – Kannada News | Patanjali Foods share gives more returns than Nestle, HUL and other biggies in 5 years

ನವದೆಹಲಿ, ಡಿಸೆಂಬರ್ 30: ಪತಂಜಲಿ ಫುಡ್ಸ್ (Patanjali foods) ಷೇರುಬೆಲೆ ಇವತ್ತು ಎರಡಕ್ಕೂ ಹೆಚ್ಚು ರೂನಷ್ಟು ಏರಿದೆ. 544 ರೂಗೆ ಇದು ಏರಿದೆ. ಐದು ವರ್ಷದ ಹಿಂದೆ ಪತಂಜಲಿ ಫುಡ್ಸ್ ಸಂಸ್ಥೆಯು ಷೇರು ಮಾರುಕಟ್ಟೆಯನ್ನು ಪ್ರವೇಶಿಸಿದಾಗಿನಿಂದ, ಹೂಡಿಕೆದಾರರಿಗೆ 55% ಕ್ಕಿಂತ ಹೆಚ್ಚು ಲಾಭವನ್ನು ತಂದುಕೊಟ್ಟಿದೆ. ಕಳೆದ ಐದು ವರ್ಷದ ಅಂಕಿ ಅಂಶ ಇದು. ಹಿಂದೂಸ್ತಾನ್ ಯೂನಿಲಿವರ್, ನೆಸ್ಲೆ ಮತ್ತು ಡಾಬರ್ ಸೇರಿದಂತೆ ದೇಶದ ಪ್ರಮುಖ FMCG ಕಂಪನಿಗಳ ಷೇರುಗಳೂ ಸಹ ಪತಂಜಲಿ ರೀತಿಯಲ್ಲಿ ಲಾಭವನ್ನು ನೀಡಲು ಸಾಧ್ಯವಾಗಿಲ್ಲ. HUL ಮತ್ತು ಡಾಬರ್ ಇಂಡಿಯಾ ಷೇರುಗಳು ಕಳೆದ 5 ವರ್ಷದಲ್ಲಿ ಹೂಡಿಕೆದಾರರಿಗೆ ನಕಾರಾತ್ಮಕ ಆದಾಯ ನೀಡಿವೆ. ನೆಸ್ಲೆ ಇಂಡಿಯಾ ಐದು ವರ್ಷಗಳಲ್ಲಿ 38% ಕ್ಕಿಂತ ಹೆಚ್ಚು ಆದಾಯ ಕೊಟ್ಟಿದೆ. ಪತಂಜಲಿ ಷೇರುಗಳು ಇವೆಲ್ಲಕ್ಕಿಂತಲೂ ಹೆಚ್ಚಿನ ರಿಟರ್ನ್ ಕೊಟ್ಟಿದೆ. ಅದರ ಬ್ಯುಸಿನೆಸ್ ಕೂಡ ಗಮನಾರ್ಹವಾಗಿ ಹೆಚ್ಚಿದೆ. ಪತಂಜಲಿ ಫುಡ್ಸ್‌ನ ಷೇರುಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಲಾಭ ಕೊಡುವ ನಿರೀಕ್ಷೆ ಇದೆ.

ಪತಂಜಲಿಯ 5 ವರ್ಷಗಳ ಲಾಭ

ಕಳೆದ ಐದು ವರ್ಷಗಳಲ್ಲಿ, ಪತಂಜಲಿ ಫುಡ್ಸ್‌ನ ಷೇರುಗಳು ದೊಡ್ಡ ಕಂಪನಿಗಳಿಗೆ ಹೋಲಿಸಿದರೆ ಹೂಡಿಕೆದಾರರಿಗೆ ಗಣನೀಯ ಲಾಭ ನೀಡಿವೆ. ಎನ್​ಎಸ್​ಇ ದತ್ತಾಂಶದ ಪ್ರಕಾರ, ಪತಂಜಲಿ ಫುಡ್ಸ್‌ನ ಷೇರುಗಳು ಹೂಡಿಕೆದಾರರಿಗೆ ಸರಿಸುಮಾರು 57% ಲಾಭವನ್ನು ನೀಡಿವೆ. ಐದು ವರ್ಷಗಳ ಹಿಂದೆ, ಕಂಪನಿಯ ಷೇರುಬೆಲೆ ಸುಮಾರು ₹347 ಇತ್ತು. ಅದಾದ ಬಳಿಕ 197 ರೂಗಿಂತ ಹೆಚ್ಚು ವೃದ್ಧಿಸಿದೆ. ಸೋಮವಾರ ಟ್ರೇಡಿಂಗ್ ಅಂತ್ಯದಲ್ಲಿ ಅದರ ಬೆಲೆ 540 ರೂ ಇತ್ತು. ಸೋಮವಾರದ ವಹಿವಾಟಿನ ಒಂದು ಹಂತದಲ್ಲಿ ಬೆಲೆ 547 ರೂವರೆಗೆ ಬೆಲೆ ಹೋಗಿತ್ತು. ಕಳೆದ 52 ವಾರಗಳ ಕನಿಷ್ಠವಾದ 521 ರೂಗಿಂತ ಉತ್ತಮ ಬೆಲೆ ಹೊಂದಿದೆ. ಮುಂದಿನ ವರ್ಷ ಅದರ ಗರಿಷ್ಠ ಮಟ್ಟವಾದ 670 ರೂ ಅನ್ನು ದಾಟಿದರೂ ಅಚ್ಚರಿ ಇಲ್ಲ ಎಂಬುದು ತಜ್ಞರ ಅಂದಾಜು.

ಇದನ್ನೂ ಓದಿ: ಆಯುರ್ವೇದ ಬಳಸಿ, ದುಬಾರಿ ಚಿಕಿತ್ಸೆಗೆ ಮುಕ್ತಿ ಕೊಡಿ; ಕೈಗೆಟುಕುವ ಬೆಲೆಗೆ ಆನ್​ಲೈನ್​ನಲ್ಲೇ ಪತಂಜಲಿ ಔಷಧಗಳು

ಹಿಂದೂಸ್ತಾನ್ ಯೂನಿಲಿವರ್ ಷೇರು ಕುಸಿತ

ಮತ್ತೊಂದೆಡೆ, ದೇಶದ ಅತಿದೊಡ್ಡ FMCG ಕಂಪನಿಯಾದ ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ಕಳೆದ ಐದು ವರ್ಷಗಳಲ್ಲಿ ಕುಸಿತ ಕಂಡಿವೆ. ಕಳೆದ ಐದು ವರ್ಷಗಳಲ್ಲಿ ಈ ಕಂಪನಿಯ ಷೇರುಗಳು NSE ನಲ್ಲಿ 4% ಕ್ಕಿಂತ ಹೆಚ್ಚು ಕುಸಿದಿದೆ ಎಂದು ಡೇಟಾ ತೋರಿಸುತ್ತದೆ. ಎಚ್​ಯುಎಲ್​ನ ಷೇರುಗಳು ಕಳೆದ ಐದು ವರ್ಷಗಳಿಂದ ₹2,100 ರಿಂದ ₹2,200 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸುತ್ತಿವೆ. ಸೆಪ್ಟೆಂಬರ್ 2024 ರಲ್ಲಿ, ಕಂಪನಿಯ ಷೇರುಗಳು ₹2,900 ರ ಗಡಿಯನ್ನು ಮೀರಿದ್ದವಾದರೂ, ಅಂದಿನಿಂದ ಹಿನ್ನಡೆ ಕಾಣುತ್ತಲೇ ಇವೆ.

ಡಾಬರ್ ಷೇರುಗಳು ಸಹ ನಷ್ಟ ಕಂಡಿವೆ

ಮತ್ತೊಂದೆಡೆ, ಡಾಬರ್ ಷೇರು ಕೂಡ ಹೂಡಿಕೆದಾರರಿಗೆ ನಷ್ಟವನ್ನುಂಟುಮಾಡಿದೆ. ಕಳೆದ ಐದು ವರ್ಷಗಳಲ್ಲಿ ಕಂಪನಿಯ ಷೇರುಗಳು ಶೇಕಡಾ 8 ಕ್ಕಿಂತ ಹೆಚ್ಚು ಕುಸಿದಿವೆ. ಇದರ ಷೇರುಬೆಲೆ ಪ್ರಸ್ತುತ 8 ಪ್ರತಿಶತದಷ್ಟು ಕುಸಿದು 490.10 ರೂ.ಗಳಲ್ಲಿ ವಹಿವಾಟು ನಡೆಸುತ್ತಿದೆ. ಸೆಪ್ಟೆಂಬರ್ 2024 ರಲ್ಲಿ ಕಂಪನಿಯ ಷೇರುಬೆಲೆ 670 ರೂ ತಲುಪಿದ್ದರೂ, ಅಂದಿನಿಂದ ಹಿನ್ನಡೆ ಕಂಡಿದೆ. ಐದು ವರ್ಷಗಳ ಹಿಂದೆ, ಹಿಂದೂಸ್ತಾನ್ ಯುನಿಲಿವರ್​ನ ಷೇರುಬೆಲೆ ರೂ. 534 ಕ್ಕಿಂತ ಹೆಚ್ಚು ಇತ್ತು. ಅದಾದ ಬಳಿಕ 44 ರೂ ಕುಸಿದಿದೆ.

ಇದನ್ನೂ ಓದಿ: ಷೇರುಪೆಟೆಯಲ್ಲಿ ಪತಂಜಲಿ ಫುಡ್ಸ್; ಹೂಡಿಕೆದಾರರಿಗೆ 3,900 ಕೋಟಿ ರೂ ಗಳಿಕೆ

ನೆಸ್ಲೆ ಇಂಡಿಯಾದ ಷೇರುಬೆಲೆ ಹೆಚ್ಚಾದರೂ…

ಕಳೆದ ಐದು ವರ್ಷಗಳಲ್ಲಿ ನೆಸ್ಲೆ ಇಂಡಿಯಾದ ಹೂಡಿಕೆದಾರರಿಗೆ ಸಕಾರಾತ್ಮಕ ಲಾಭ ನೀಡಿದ್ದರೂ, ಅದು ಪತಂಜಲಿ ಷೇರಿಗಿಂತ ಕಡಿಮೆಯೇ. ಕಳೆದ ಐದು ವರ್ಷಗಳಲ್ಲಿ ನೆಸ್ಲೆ ತನ್ನ ಹೂಡಿಕೆದಾರರಿಗೆ 39% ಲಾಭವನ್ನು ಒದಗಿಸಿದೆ. ಪ್ರಸ್ತುತ, ಕಂಪನಿಯ ಷೇರು ₹1,283.70 ನಲ್ಲಿ ವಹಿವಾಟು ನಡೆಸುತ್ತಿದೆ. ಈ ಸಮಯದಲ್ಲಿ, ಕಂಪನಿಯ ಷೇರು ಸುಮಾರು ₹359 ರಷ್ಟು ಏರಿಕೆ ಕಂಡಿದೆ. ಸೆಪ್ಟೆಂಬರ್ 2024 ರ ಕೊನೆಯ ವಾರದಲ್ಲಿ, ಕಂಪನಿಯ ಷೇರು ಸುಮಾರು ₹1,400 ತಲುಪಿದೆ. ಇದೇ ವೇಳೆ ಪತಂಜಲಿ ಫುಡ್ಸ್ ಷೇರುಬೆಲೆ ಶೇ. 50ಕ್ಕಿಂತಲೂ ಹೆಚ್ಚಿನ ರಿಟರ್ನ್ ಅನ್ನು ಐದು ವರ್ಷದಲ್ಲಿ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

4,6,4,4.. ಕೊನೆಯ ಓವರ್​ನಲ್ಲಿ ಅಬ್ಬರಿಸಿದ ಆರ್​ಸಿಬಿ ಆಲ್‌ರೌಂಡರ್ – Kannada News | India Women vs SL T20I: Arundhati Reddy’s Explosive 27 and Harmanpreet Fifty Power 175

ತಿರುವನಂತಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್​ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ತಂಡದ ಪರ ನಾಯಕಿ ಹರ್ಮನ್ ಪ್ರೀತ್ ಕೌರ್ ಅದ್ಭುತ ಅರ್ಧಶತಕ ಬಾರಿಸಿದರೆ, 8ನೇ ಕ್ರಮಾಂಕದಲ್ಲಿ ಬಂದ ಅರುಂಧತಿ ರೆಡ್ಡಿ ಕೇವಲ 11 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 27 ರನ್ ಬಾರಿಸಿದರು.

ಅಮನ್‌ಜೋತ್ ಕೌರ್ ಔಟಾದ ಬಳಿಕ ಕ್ರೀಸ್​ಗೆ ಬಂದ ಅರುಂಧತಿ ರೆಡ್ಡಿ 19ನೇ ಓವರ್​ನಲ್ಲಿ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದರು. ಈ ಓವರ್​ನಲ್ಲಿ 5 ಎಸೆತಗಳನ್ನು ಎದುರಿಸಿದ ಅರುಂಧತಿ ಒಟ್ಟು 19 ರನ್​ಗಳನ್ನು ಕಲೆಹಾಕಿದರು. ಈ ಓವರ್​ನಲ್ಲಿ ಅವರು ಮೂರು ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ಬಾರಿಸಿ ತಂಡವನ್ನು 175 ರನ್​ಗಳಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು.

Source link

Video: ಯಾಣ ಕಡೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳ ಬಸ್​​​ ಪಲ್ಟಿ, 12 ವಿದ್ಯಾರ್ಥಿಗಳಿಗೆ ಗಾಯ – Kannada News | Uttara Kannada: Yana Bus Overturns, 12 Jain College Students Injured

ಕುಮಟಾ, ಡಿ. 30: ಕಾಲೇಜು ವಿದ್ಯಾರ್ಥಿಗಳಿದ್ದ ಬಸ್​​​ವೊಂದು ಪಲ್ಟಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯಾಣ ಬಳಿ ನಡೆದಿದೆ. ಶಿರಸಿಯಿಂದ ಯಾಣ ಕಡೆಗೆ ತೆರಳುತ್ತಿದ್ದಾಗ ಬಸ್​​​ ಪಲ್ಟಿಯಾಗಿದೆ. ದಾವಣಗೆರೆಯ ಜೈನ್​ ಪಿಯು ಕಾಲೇಜಿನ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ. ಈ ಬಸ್ಸಿನಲ್ಲಿ 20 ವಿದ್ಯಾರ್ಥಿನಿಯರು, 27 ವಿದ್ಯಾರ್ಥಿಗಳು, ಮೂವರು ಶಿಕ್ಷಕರಿದ್ದರು ಎಂದು ಹೇಳಲಾಗಿದೆ. 12 ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ. ಇದೀಗ ಅವರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಿ, ಚಿಕಿತ್ಸೆ ನೀಡಿಲಾಗುತ್ತಿದೆ. ಶಿರಸಿ ಮಾರಿಕಾಂಬಾ ದೇವಿಯ ದರ್ಶನ ಪಡೆದು ಯಾಣಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗಳ ಬಸ್​​ ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ಇದೀಗ ಈ ಬಗ್ಗೆ ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಸ್ ದುರಂತಗಳ ಮಧ್ಯೆ ಎಚ್ಚೆತ್ತುಕೊಳ್ಳದ ಮಾಲೀಕರು: ಸ್ಲೀಪರ್ ಕೋಚ್​​​ನಲ್ಲಿ ಗೂಡ್ಸ್ ಸಾಗಾಟ, ಬಸ್ ಸೀಜ್ – Kannada News | Devanahalli: RTO Seizes Private Buses for Illegal Goods Transport

ದೇವನಹಳ್ಳಿ, ಡಿಸೆಂಬರ್​ 30: ಇತ್ತೀಚೆಗೆ ಹಿರಿಯೂರು ಬಳಿ ಬಸ್ ದುರಂತ ಸಂಭವಿಸಿ ಅಮಾಯಕರು ಜೀವ ಕಳೆದುಕೊಂಡಿದ್ದು, ಸಾರಿಗೆ ಇಲಾಖೆ ಬಸ್​​ಗಳಲ್ಲಿ (Private Buses) ಗೂಡ್ಸ್ (Goods) ಹಾಕದಂತೆ ಎಚ್ಚರಿಕೆ ನೀಡಿತ್ತು. ಆದರೆ ಸಾರಿಗೆ ಇಲಾಖೆ ಎಚ್ಚರಿಕೆ ನಡುವೆಯೂ ಬಸ್ ಸಿಬ್ಬಂದಿ ಮತ್ತೆ ಅದೇ ತಮ್ಮ ಹಳೆ ಚಾಳಿ ಮುಂದುವರೆಸಿದ್ದು, ಬಸ್ ನಲ್ಲಿನ ಲಗೇಜ್ ಕಂಡು ಅಧಿಕಾರಿಗಳೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

ಟಾಪ್ ಟೂ ಬಾಟಂ ಗೂಡ್ಸ್ ತುಂಬಿಕೊಂಡು ಸಂಚಾರ: ಖಾಸಗಿ ಬಸ್ ಸೀಜ್

ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಾಲು ಸಾಲು ಬಸ್ ದುರಂತಗಳು ಸಂಭವಿಸುತ್ತಿದ್ದು, ಅಮಾಯಕರು ಸಜಿವ ದಹನವಾಗುತ್ತಿದ್ದಾರೆ. ಅಲ್ಲದೆ ಬಸ್ ದುರಂತಗಳಿಂದ ಎಚ್ಚೆತ್ತ ಸಾರಿಗೆ ಇಲಾಖೆ ಬಸ್​​ಗಳಲ್ಲಿ ಪ್ರಯಾಣಿಕರ ಲಗೇಜ್ ಹೊರತು ಪಡಿಸಿ, ಗೂಡ್ಸ್ ತುಂಬದಂತೆ ಎಚ್ಚರಿಕೆ ನೀಡಿತ್ತು. ಆದರೆ ಇಷ್ಟೆಲ್ಲಾ ಅವಾಂತರಗಳನ್ನ ಕಣ್ತುಂಬ ನೋಡಿದರೂ ಇಲಾಖೆ ಅಧಿಕೃತ ಆದೇಶ ಮಾಡಿದರು ನಮ್ಮನ್ಯಾರು ಕೇಳೋರು ಅನ್ನೋ ಧಿಮಾಕಿನಲ್ಲೇ ಇಂದು ಬೆಳಗ್ಗೆ ಹೈದರಾಬಾದ್​ನಿಂದ ಬೆಂಗಳೂರಿಗೆ ಬಂದ ಬಸ್​ವೊಂದು​ ಮೇಲೆ ಕೆಳಗೆ ಎಲ್ಲೆಡೆ ಲಗೇಜ್ ತುಂಬಿಕೊಂಡು ಬಂದಿತ್ತು. ಈ ರೀತಿ ಲಗೇಜ್ ಹಾಕುವವರಿಗೆ ಬುದ್ದಿ ಕಲಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಫೀಲ್ಡಿಗಿಳಿದಿದ್ದ ಆರ್​​ಟಿಓ ಸುದಿಂದ್ರ ಆ್ಯಂಡ್​ ಟೀಂ ಬಸ್ ಅನ್ನ ತಡೆದು ಪರಿಶೀಲನೆ ಮಾಡಿದರು. ಮೆಲ್ನೋಟಕ್ಕೆ ಟಾಪ್​​ನಲ್ಲಿ ಮಾತ್ರ ಲಗೇಜ್ ಹಾಕಿದ್ದಾರೆ ಅಂತ ಬಸ್ ತಡೆದ ಅಧಿಕಾರಿಗಳಿಗೆ ಬಸ್​ನ ಡಿಕ್ಕಿಯಲ್ಲಿ ಮೂಟೆಗಟ್ಟಲೇ ಲಗೇಜ್ ಕಂಡು ಒಂದು ಕ್ಷಣ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಮೆಟ್ರೋ ಹೊಸ ನಿಯಮಗಳು: ಪ್ರಯಾಣಿಕರೇ ಇನ್ಮುಂದೆ ರೀಲ್ಸ್ ನೋಡುವ ಮುನ್ನ ಎಚ್ಚರ

ಬಸ್​ನ ಮೇಲೆ ಮತ್ತು ಡಿಕ್ಕಿಯಲ್ಲಿ ಬಟ್ಟೆ ಮೂಟೆಗಳು ಮತ್ತು ಪೈಂಟ್ ಬಾಕ್ಸ್​ಗಳನ್ನ ತುಂಬಿಕೊಂಡು ಬಂದಿರುವುದು ಕಾಣಿಸುತ್ತಿದ್ದಂತೆ ಅಧಿಕಾರಿಗಳು ಬಸ್ ಅನ್ನ ಸೀಜ್ ಮಾಡಿದ್ದಾರೆ. ಅಲ್ಲದೆ ಸ್ಲೀಪರ್ ಕೋಚ್ ಬಸ್​ಗಳಿಗೆ ಟಾಪ್​​ ಇರಬಾರದು ಅನ್ನೂ ನಿಯಮವಿದ್ದರೂ ಟಾಪ್​ ಮೇಲೆಯೇ ರಾಜಾರೋಷವಾಗಿ ಲಗೇಜ್ ಹಾಕಿಕೊಂಡು ಬಂದಿದ್ದು, ಬಸ್ ಮಾಲೀಕನ ವಿರುದ್ದ ಅಧಿಕಾರಿಗಳು ಕೇಸ್ ಜಡಿದಿದ್ದಾರೆ.

15ಕ್ಕೂ ಹೆಚ್ಚು ಬಸ್​​ಗಳಿಗೆ ದಂಡ

ಇನ್ನು ಇದೇ ರೀತಿ ಬೆಂಗಳೂರಿನಿಂದ ಆಂಧ್ರಕ್ಕೆ ತೆರಳುತ್ತಿದ್ದ ಮತ್ತೊಂದು ಬಸ್ ಮೇಲೆ ಹೂಗಳನ್ನ ತುಂಬಿಕೊಂಡು ಹೋಗ್ತಿದ್ದು ಅದನ್ನ ಸಹ ಸೀಜ್ ಮಾಡಿದ್ದಾರೆ. ಇದೇ ರೀತಿ ಸಣ್ಣಪುಟ್ಟ ಓವರ್ ಲಗೇಜ್ ಹಾಕಿದ್ದ 15ಕ್ಕೂ ಹೆಚ್ಚು ಬಸ್​​ಗಳಿಗೆ ಆರ್​​ಟಿಓ ಅಧಿಕಾರಿಗಳು ದಂಡ ಹಾಕುವ ಮೂಲಕ ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ: ಫ್ಲೈ ಓವರ್‌ ಮೇಲೆ ಖಾಸಗಿ ಬಸ್​​ಗಳ ನಡುವೆ ರೇಸ್​​: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ

ದುರಂತಗಳು ಸಂಭವಿಸದ ಮೇಲೂ ಕೆಲ ಖಾಸಗಿ ಬಸ್ ಮಾಲೀಕರು ಮತ್ತು ಸಿಬ್ಬಂದಿ ಎಚ್ಚೆತ್ತುಕೊಳ್ಳದೆ ಹಣದ ಆಸೆಗೆ ಹಳೆ ಚಾಳಿ ಮುಂದುವರೆಸಿದ್ದಾರೆ. ಈ ರೀತಿ ಜನರ ಜೀವದ ಜೊತೆ ಚೆಲ್ಲಾಟವಾಡುವವರಿಗೆ ಸಾರಿಗೆ ಇಲಾಖೆ ಕೇವಲ ದಂಡ ಹಾಕುವುದು ಮಾತ್ರವಲ್ಲದೆ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಮೂಲಕ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೋಗಿಲು ಬಡಾವಣೆಯಲ್ಲಿ ಮನೆಗಳ ತೆರವಿಗೆ ಕೇರಳ, ಪಾಕ್​​ ಖ್ಯಾತೆ: ಕೇಂದ್ರ ಸಚಿವ ಸೋಮಣ್ಣ ಕಿಡಿ – Kannada News | Union Minister V.Somanna Slams Pakistan over Interference in Kogilu Demolition

ಕೇಂದ್ರ ಸಚಿವ ವಿ. ಸೋಮಣ್ಣ ಕಿಡಿ

ಬೆಂಗಳೂರು, ಡಿಸೆಂಬರ್​​ 30: ಯಲಹಂಕದ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ಕರ್ನಾಟಕ ಸರ್ಕಾರ ನೆಲಸಮಗೊಳಿಸಿದ ವಿಚಾರ ದೇಶಾದ್ಯಂತ ಚರ್ಚೆಯಲ್ಲಿದೆ. ನೆರೆ ರಾಜ್ಯ ಕೇರಳವಂತೂ ಈ ವಿಚಾರವಾಗಿ ಕರ್ನಾಟಕದ ವಿರುದ್ಧ ನಿಗಿ ನಿಗಿ ಕೆಂಡ ಕಾರಿದೆ. ಆದರೆ ಯಾವುದಕ್ಕೂ ಸಂಬಂಧವೇ ಇಲ್ಲದ ಪಾಪಿ ಪಾಕಿಸ್ತಾನವೂ ಈ ವಿಚಾರದಲ್ಲಿ ಮೂಗು ತೂರಿಸಿರೋದೀಗ ಭಾರಿ ಆಕ್ರೋಶಕ್ಕೆ ಕಾರಣವಾಗ್ತಿದೆ. ಈ ಬಗ್ಗೆ ಕೇಂದ್ರ ಸಚಿವ ವಿ. ಸೋಮಣ್ಣ ಕಿಡಿ ಕಾರಿದ್ದಾರೆ.

ಸೋಮಣ್ಣ ಆಕ್ರೋಶ

ವಿ. ಸೋಮಣ್ಣ ಅವರ ಎಕ್ಸ್​​ ಪೋಸ್ಟ್​​

ತಮ್ಮಲ್ಲೇ ಹುಳುಕಿಟ್ಟುಕೊಂಡಿರುವ ಕೇರಳ ಸರ್ಕಾರ ಮತ್ತು ಪಾಕಿಸ್ತಾನ, ಕರ್ನಾಟಕದ ವಿಚಾರದಲ್ಲಿ ಮೂಗುತೂರಿಸುತ್ತಿರುವುದು ನಾಚಿಕೆಗೇಡು. ಈ ನಡುವೆ ಕೇರಳ ಮತ್ತು ಪಾಕಿಸ್ತಾನ ಸರ್ಕಾರಗಳು ಕ್ಯಾತೆ ತೆಗೆದ ಕೂಡಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಓಲೈಕೆಗಾಗಿ ಸಮಜಾಯಿಷಿ ನೀಡುತ್ತಿರುವುದು ಅದಕ್ಕಿಂತಲೂ ವಿಪರ್ಯಾಸದ ಸಂಗತಿ. ಒತ್ತುವರಿ ಜಾಗದಲ್ಲಿದ್ದ ಮನೆಗಳನ್ನು ತೆರವು ಮಾಡಿದ್ದೇವೆ ಎಂದು ಸ್ಪಷ್ಟನೆ ಕೊಟ್ಟ ಮೇಲೆ, ಸಂತ್ರಸ್ತರಿಗೆ ಹೊಸವರ್ಷಕ್ಕೆ ಮನೆ ನಿರ್ಮಿಸಿಕೊಡುತ್ತೇವೆ ಎನ್ನುವ ಭರವಸೆ ನೀಡಿರುವುದರ ಹಿಂದಿನ ಹುನ್ನಾರವೇನು? ಅಷ್ಟಕ್ಕೂ ಅಕ್ರಮ ಬಡಾವಣೆಗಳನ್ನು ನಿರ್ಮಿಸಿಕೊಂಡವರನ್ನು ಸಂತ್ರಸ್ತರು ಎನ್ನುವುದಾದರೆ, ಉತ್ತರ ಕರ್ನಾಟಕ ಭಾಗದಲ್ಲಿ ಇಂದಿಗೂ ಅದೆಷ್ಟೋ ನಿರಾಶ್ರಿತರು, ಅಲೆಮಾರಿ ಕೂಲಿ ಕಾರ್ಮಿಕ ವರ್ಗದವರು ಸೂರಿಲ್ಲದೆ ಹೆಣಗಾಡುತ್ತಿರುವುದು ಈ ಜಾಣ ಕುರುಡು ಕಾಂಗ್ರೆಸ್ ಸರ್ಕಾರಕ್ಕೆ ಕಾಣಿಸುತ್ತಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಕೋಗಿಲು ಲೇಔಟ್​ನಲ್ಲಿ ಮನೆಗಳ ತೆರವು; ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು

‘ಸಿದ್ದರಾಮಯ್ಯಗೆ ಏನು ನೈತಿಕತೆಯಿದೆ?’

ಸಮರ್ಪಕವಾಗಿ ನೋಟಿಸ್ ನೀಡಿದ ನಂತರವೇ ಮನೆಗಳನ್ನು ನಾಶ ಮಾಡಿರುವ ಅಧಿಕಾರಿಗಳ ಮೇಲೆ ತಪ್ಪಿತಸ್ಥರು ಎನ್ನುವ ಹಣೆಪಟ್ಟಿ ಹೊರಿಸಿ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಹೇಳಿಕೆ ನೀಡುವ ಸಿಎಂ ಸಿದ್ದರಾಮಯ್ಯನವರಿಗೆ ಏನು ನೈತಿಕತೆಯಿದೆ? ಇಂತಹ ಮತೀಯ ರಾಜಕಾರಣಕ್ಕಿಳಿದು ಜನತೆಯಲ್ಲಿ ಕೋಮುದಳ್ಳುರಿಯನ್ನು ಹೆಚ್ಚಿಸುವುದೇ ಕಾಂಗ್ರೆಸ್‌ನ ಷಡ್ಯಂತ್ರ ಎನ್ನುವುದು ಜನತೆಗೆ ಅರ್ಥವಾಗಿದೆ ಎಂದು ಸೋಮಣ್ಣ ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:20 pm, Tue, 30 December 25

Source link

Exit mobile version