ಬರೀ ನೀರು ಮಾತ್ರವಲ್ಲ, ಕೋಳಿ ಮಾಂಸವನ್ನು ತೊಳೆಯಲು ಈ ಕ್ರಮವನ್ನು ಅನುಸರಿಸಲೇಬೇಕು – Kannada News | You must follow this procedure to washing raw chicken

ಮಾಂಸ ಪ್ರಿಯರಿಗೆ ಚಿಕನ್‌ (chicken) ಅಂದ್ರೆ ಎಲ್ಲಿಲ್ಲದ ಪ್ರೀತಿ. ಅದಕ್ಕಾಗಿ ವಾರಕ್ಕೆ ಒಂದು ಬಾರಿಯಾದರೂ ತಪ್ಪದೆ ಕೋಳಿ ಪದಾರ್ಥ ಮಾಡುತ್ತಾರೆ. ಹಲವರು ಈ ಕೋಳಿ ಮಾಂಸದಿಂದ ಬಗೆಬಗೆಯ ಭಕ್ಷ್ಯಗಳನ್ನು ತಯಾರು ಮಾಡುತ್ತಾರೆ, ಆದರೆ 99% ಜನರಿಗೆ ಕೋಳಿ ಮಾಂಸವನ್ನು ಕ್ಲೀನ್‌ ಮಾಡುವ ಸರಿಯಾದ ವಿಧಾನ ಗೊತ್ತೇ ಇಲ್ವಂತೆ. ಸಾಮಾನ್ಯವಾಗಿ ಹೆಚ್ಚಿನವರು ಮನೆಗೆ ತಂದ ಕೋಳಿ ಮಾಂಸವನ್ನು ಎರಡರಿಂದ ಮೂರು ಬಾರಿ ಬರೀ ನೀರಿನಿಂದ ಕ್ಲೀನ್‌ ಮಾಡುತ್ತಾರೆ. ಆದರೆ ಇದು ಸರಿಯಾದ ಕ್ರಮ ಅಲ್ವಂತೆ. ಹಾಗಿದ್ರೆ ಕೋಳಿ ಮಾಂಸವನ್ನು ತೊಳೆಯುವ ಸರಿಯಾದ ವಿಧಾನ ಯಾವುದು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಚಿಕನ್‌ ಕ್ಲೀನ್‌ ಮಾಡುವ ಸರಿಯಾದ ವಿಧಾನ:

ಬರೀ ನೀರಿನಿಂದ ಮಾತ್ರವಲ್ಲ ಕೋಳಿ ಮಾಂಸವನ್ನು ನಿಂಬೆ ನೀರಿನಿಂದ ಕ್ಲೀನ್‌ ಮಾಡಬೇಕಂತೆ. ಒಂದು ಲೀಟರ್ ಉಗುರು ಬೆಚ್ಚಗಿನ ನೀರಿಗೆ ಎರಡರಿಂದ ಮೂರು ಟೀ ಚಮಚ ನಿಂಬೆ ರಸವನ್ನು ಸೇರಿಸಿ ಅದಕ್ಕೆ ಒಮ್ಮೆ ತೊಳೆದಿಟ್ಟ ಕೋಳಿ ಮಾಂಸವನ್ನು ಹಾಕಿ 5 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತಾಜಾ ನೀರಿನಲ್ಲಿ ತೊಳೆಯಿರಿ. ಹಸಿ ಕೋಳಿಯಲ್ಲಿ ಸೂಕ್ಷ್ಮ ಜೀವಿಗಳು ಹೆಚ್ಚು. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಸೂಕ್ಷ್ಮ ಜೀವಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಅಲ್ಲದೆ ನಿಂಬೆಯಲ್ಲಿರುವ ನೈಸರ್ಗಿಕ ಆಮ್ಲಗಳು ಕೆಟ್ಟ ವಾಸನೆಯನ್ನು ತೊಡೆದುಹಾಕಲು ಮತ್ತು ಕೋಳಿಯನ್ನು ತಾಜಾವಾಗಿ ಕಾಣುವಂತೆ ಮಾಡಲು ಸಹಾಯ ಮಾಡುತ್ತದೆ.

ಇದಲ್ಲದೆ ಉಪ್ಪು ನೀರು ಸಹ ಕೋಳಿ ಮಾಂಸದಿಂದ ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಒಂದು ಲೀಟರ್ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಎರಡು ಟೀ ಚಮಚ ಉಪ್ಪು ಸೇರಿಸಿ. ಇದಕ್ಕೆ ಅರಶಿನವನ್ನೂ ಸೇರಿಸಬಹುದು. ನಂತರ, ಮಾಂಸವನ್ನು ಅದರಲ್ಲಿ ನೆನೆಸಿ.  ಉಪ್ಪಿನ ದ್ರಾವಣದಿಂದ ತೊಳೆದ ನಂತರ, ಕೋಳಿ ಮಾಂಸವನ್ನು ಶುದ್ಧ ನೀರಿನಿಂದ ತೊಳೆಯಿರಿ.

ಇದನ್ನೂ ಓದಿ: ಉಪ್ಪು ಹೆಚ್ಚಾಗಿ ಅಡುಗೆ ಕೆಟ್ಟು ಹೋದ್ರೆ, ರುಚಿ ಸರಿದೂಗಿಸಲು ಸರಳ ಸಲಹೆಯನ್ನು ಪಾಲಿಸಿ

ನಿಂಬೆಹಣ್ಣಿನ ನೀರಿನಿಂದ ಚಿಕನ್ ತೊಳೆಯುವುದು ಏಕೆ ಉತ್ತಮ? 

ನಿಂಬೆಹಣ್ಣಿನ ಹುಳಿ ಮತ್ತು ಸುವಾಸನೆಯು ಹಸಿ ಕೋಳಿಯ ಕೆಟ್ಟ ವಾಸನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಆದ್ದರಿಂದ, ನೀವು ಕೋಳಿಯನ್ನು ಸ್ವಚ್ಛಗೊಳಿಸಲು ನಿಂಬೆಯನ್ನು ಬಳಸಬಹುದು. ಹೆಚ್ಚುವರಿಯಾಗಿ, ನಿಂಬೆಹಣ್ಣಿನ ನೀರಿನಿಂದ ಕೋಳಿ ಮಾಂಸವನ್ನು ತೊಳೆಯುವುದರಿಂದ ಅದರ ರುಚಿ ಹೆಚ್ಚಾಗುತ್ತದೆ. ಇದು ಕೋಳಿ ಮಾಂಸಕ್ಕೆ ಸೌಮ್ಯವಾದ, ತಾಜಾ ಪರಿಮಳವನ್ನು ನೀಡುತ್ತದೆ. ಅದಕ್ಕಾಗಿಯೇ ವೃತ್ತಿಪರ ಚೆಫ್‌ಗಳು ಮ್ಯಾರಿನೇಟ್ ಮಾಡುವ ಮೊದಲು ಕೋಳಿ ಮಾಂಸವನ್ನು ನಿಂಬೆ ಅಥವಾ ವಿನೆಗರ್ ನೊಂದಿಗೆ ತೊಳೆಯಲು ಶಿಫಾರಸು ಮಾಡುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿಷ್ಯ ಆಯ್ತು ಗುರುವಿನ ಜೊತೆ ಸಿನಿಮಾಕ್ಕೆ ಕೈ ಹಾಕಿದ ರಾಮ್ ಚರಣ್ – Kannada News | Ram Charan acting in Sukumar’s next movie after Peddi

‘ಆರ್​​ಆರ್​ಆರ್’ (RRR) ಸಿನಿಮಾದ ಬಳಿಕ ರಾಮ್ ಚರಣ್ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಆ ಎರಡೂ ಸಿನಿಮಾಗಳು ಅಟ್ಟರ್ ಫ್ಲಾಪ್ ಆಗಿವೆ. ‘ಆರ್​​ಆರ್​​ಆರ್’ ಬಳಿಕ ಬಿಡುಗಡೆ ಆದ ‘ಆಚಾರ್ಯ’ ಸಿನಿಮಾ ಹೀನಾಯ ಸೋಲು ಕಂಡಿತು. ಅದಾದ ಬಳಿಕ ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಬಿಡುಗಡೆ ಆಗಿ ಆ ಸಿನಿಮಾ ಸಹ ಸೋತಿತು. ಇದೀಗ ‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ಬ್ಯುಸಿಯಾಗಿದ್ದಾರೆ. ‘ಪೆದ್ದಿ’ ಬಳಿಕ ಹೊಸದೊಂದು ಸಿನಿಮಾನಲ್ಲಿ ನಟಿಸಲು ರಾಮ್ ಚರಣ್ ಒಪ್ಪಿಕೊಂಡಿದ್ದಾರೆ.

‘ಪೆದ್ದಿ’ ಸಿನಿಮಾವನ್ನು ಬುಚ್ಚಿಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಬಳಿಕ ಬುಚ್ಚಿಬಾಬು ಸನಾ ಅವರ ಗುರುಗಳ ಸಿನಿಮಾನಲ್ಲಿ ರಾಮ್ ಚರಣ್ ನಟಿಸಲಿದ್ದಾರೆ. ಅಂದಹಾಗೆ ಬುಚ್ಚಿಬಾಬು ಸನಾ ಅವರ ಗುರುಗಳು ಮತ್ಯಾರು ಅಲ್ಲ, ‘ಪುಷ್ಪ’ ಸಿನಿಮಾದ ನಿರ್ದೇಶಕ ಸುಕುಮಾರ್. ರಾಮ್ ಚರಣ್ ಅವರು ಸುಕುಮಾರ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾನಲ್ಲಿ ನಟನೆ ಮಾಡಲಿದ್ದಾರೆ.

ಸುಕುಮಾರ್ ಅವರೊಟ್ಟಿಗೆ ಈಗಾಗಲೇ ಒಂದು ಬ್ಲಾಕ್ ಬಸ್ಟರ್ ಸಿನಿಮಾವನ್ನು ರಾಮ್ ಚರಣ್ ನೀಡಿದ್ದಾರೆ. ಅದುವೇ ‘ರಂಗಸ್ಥಲಂ’. ಈ ಸಿನಿಮಾ ರಾಮ್ ಚರಣ್ ವೃತ್ತಿ ಜೀವನದ ಅಪರೂಪದ ಸಿನಿಮಾ ಆಗಿದೆ. ಸಿನಿಮಾನಲ್ಲಿ ಕಿವುಡನ ಪಾತ್ರದಲ್ಲಿ ರಾಮ್ ಚರಣ್ ನಟಿಸಿದ್ದರು, ಕಿವುಡ, ಹಳ್ಳಿಯ ದಡ್ಡ ವ್ಯಕ್ತಿಯ ಪಾತ್ರದಲ್ಲಿ ರಾಮ್ ಚರಣ್ ಮಿಂಚಿದ್ದರು. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಮತ್ತೊಮ್ಮೆ ಸುಕುಮಾರ್ ಮತ್ತು ರಾಮ್ ಚರಣ್ ಒಂದಾಗುತ್ತಿದ್ದು, ಮತ್ತೊಂದು ಬ್ಲಾಕ್ ಬಸ್ಟರ್ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.

ಇದನ್ನೂ ಓದಿ:ರಾಮ್ ಚರಣ್​ನ ಯಶ್ ಎಂದು ಕರೆದ ಕ್ಯಾಮೆರಾ ಮೆನ್; ಮುಂದೇನಾಯ್ತು?

ಅಸಲಿಗೆ ಸುಕುಮಾರ್ ಅವರು ‘ಪುಷ್ಪ 2’ ಬಳಿಕ ವಿಜಯ್ ದೇವರಕೊಂಡಗೆ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅಲ್ಲು ಅರ್ಜುನ್, ಆ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿತ್ತು. ಆದರೆ ಅದೆಲ್ಲ ಸುಳ್ಳಾಗಿದೆ. ಸುಕುಮಾರ್ ಅವರು ರಾಮ್ ಚರಣ್​​ಗಾಗಿ ಸಿನಿಮಾ ಮಾಡುತ್ತಿದ್ದು, ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಲಿದ್ದಾರೆ.

ರಾಮ್ ಚರಣ್ ಪ್ರಸ್ತುತ ‘ಪೆದ್ದಿ’ ಸಿನಿಮಾನಲ್ಲಿ ನಟಿಸುತ್ತಿದ್ದು, ಸಿನಿಮಾನಲ್ಲಿ ಅವರು ಹಳ್ಳಿಯ ಕ್ರಿಕೆಟ್ ಆಟಗಾರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ನಾಯಕಿಯಾಗಿ ಜಾನ್ಹವಿ ಕಪೂರ್ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ವೃದ್ಧಿ ಸಿನಿಮಾಸ್ ಬಂಡವಾಳ ಹೂಡಿದ್ದು, ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜನವರಿಯಲ್ಲಿ ಹೊಸ ವರ್ಷಾಚರಣೆಯಿಂದ ಗಣರಾಜ್ಯೋತ್ಸವವರೆಗೂ 16 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ – Kannada News | RBI calendar, 2026 January has many holidays, including new year celebrations, republic day etc

ನವದೆಹಲಿ, ಡಿಸೆಂಬರ್ 30: ಹೊಸ ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ ಕೆಲ ಹಬ್ಬ, ಹರಿದಿನಗಳು, ವಿಶೇಷ ದಿನಗಳಿವೆ. ಹೊಸ ವರ್ಷಾಚರಣೆ, ವಿವೇಕಾನಂದ ಜಯಂತಿ, ಮಕರ ಸಂಕ್ರಾಂತಿ, ಗಣರಾಜ್ಯೋತ್ಸವ ಹೀಗೆ ಸಾಲು ಸಾಲು ರಜೆಗಳಿವೆ. ತಮಿಳುನಾಡಿನಲ್ಲಿ ಜನವರಿ 15ರಿಂದ 18ರವರೆಗೆ ಸತತ ನಾಲ್ಕು ದಿನಗಳು ಬ್ಯಾಂಕ್ ಬಂದ್ ಆಗಿರುತ್ತದೆ. ಆರ್​ಬಿಐ (RBI) ಪ್ರಕಟಿಸಿದ ರಜಾ ದಿನಗಳ ಕ್ಯಾಲಂಡರ್​ನಲ್ಲಿ ವಿವಿಧ ಪ್ರಾದೇಶೀಕ ರಜೆಗಳನ್ನೂ ಒಳಗೊಳ್ಳಲಾಗಿದೆ. ಮಕರ ಸಂಕ್ರಾಂತಿಗೆ ದಕ್ಷಿಣದ ರಾಜ್ಯಗಳಲ್ಲಿ ರಜೆ ಇದ್ದರೆ ಉತ್ತರ ಭಾರತದಲ್ಲಿ ಬ್ಯಾಂಕ್​ಗಳು ತೆರೆದಿರುತ್ತವೆ.

ಜನವರಿಯಲ್ಲಿ ಇರುವ 16 ದಿನಗಳ ರಜೆಯಲ್ಲಿ ಆರು ಶನಿವಾರ ಮತ್ತು ಭಾನುವಾರದ ರಜೆಗಳೂ ಒಳಗೊಂಡಿವೆ. ಜನವರಿ 26ರಂದು ಗಣರಾಜ್ಯೋತ್ಸವ ಅಂಗವಾಗಿ ಸಾರ್ವತ್ರಿಕ ರಜೆ ಇರುತ್ತದೆ. ಉಳಿದ ರಜೆಗಳು ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತವೆ.

2026ರ ಜನವರಿ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳಿವು

  • ಜನವರಿ 1, ಗುರುವಾರ: ಹೊಸ ವರ್ಷಾಚರಣೆ (ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ರಜೆ)
  • ಜನವರಿ 2, ಶುಕ್ರವಾರ: ಹೊಸ ವರ್ಷಾಚರಣೆ, ಮನ್ನಂ ಜಯಂತಿ (ಕೇರಳ ಹಾಗೂ ಮಿಝೋರಾಮ್ ರಾಜ್ಯಗಳಲ್ಲಿ ರಜೆ)
  • ಜನವರಿ 3, ಶನಿವಾರ: ಹಜ್ರತ್ ಅಲಿ ಜಯಂತಿ (ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಮತ್ತು ಮಿಝೋರಾಮ್ ರಾಜ್ಯಗಳಲ್ಲಿ ರಜೆ)
  • ಜನವರಿ 4: ಭಾನುವಾರದ ರಜೆ
  • ಜನವರಿ 10: ಎರಡನೇ ಶನಿವಾರದ ರಜೆ
  • ಜನವರಿ 11: ಭಾನುವಾರದ ರಜೆ
  • ಜನವರಿ 12, ಸೋಮವಾರ: ಸ್ವಾಮಿ ವಿವೇಕಾನಂದ ಜಯಂತಿ (ಉತ್ತರಪ್ರದೇಶದಲ್ಲಿ ರಜೆ)
  • ಜನವರಿ 14, ಬುಧವಾರ: ಮಕರ ಸಂಕ್ರಾಂತಿ / ಬಿಹು ಮಾಘ (ಗುಜರಾತ್, ಒಡಿಶಾ, ಅಸ್ಸಾಂ, ಅರುಣಾಚಲ ರಾಜ್ಯಗಳಲ್ಲಿ ರಜೆ)
  • ಜನವರಿ 15, ಗುರುವಾರ: ಮಕರ ಸಂಕ್ರಾಂತಿ, ಉತ್ತರಾಯಣ ಪುಣ್ಯಕಾಲ, ಪೊಂಗಲ್, ಮಾಘೆ ಸಂಕ್ರಾಂತಿ (ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ, ಸಿಕ್ಕಿಂ ರಾಜ್ಯಗಳಲ್ಲಿ ರಜೆ)
  • ಜನವರಿ 16, ಶುಕ್ರವಾರ: ತಿರುವಳ್ಳುವರ್ ದಿನ (ತಮಿಳುನಾಡಿನಲ್ಲಿ ರಜೆ)
  • ಜನವರಿ 17, ಶನಿವಾರ: ಉಳವರ್ ತಿರುನಾಳ್ (ತಮಿಳುನಾಡಿನಲ್ಲಿ ರಜೆ)
  • ಜನವರಿ 18: ಭಾನುವಾರದ ರಜೆ
  • ಜನವರಿ 23, ಶುಕ್ರವಾರ: ನೇತಾಜಿ ಸುಭಾಷ್ ಚಂದ್ರ ಬೋಸ್, ಸರಸ್ವತಿ ಪೂಜೆ, ವೀರ ಸುರೇಂದ್ರಸಾಯಿ ಜಯಂತಿ (ತ್ರಿಪುರ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ರಜೆ)
  • ಜನವರಿ 24: ನಾಲ್ಕನೇ ಶನಿವಾರದ ರಜೆ
  • ಜನವರಿ 25: ಭಾನುವಾರದ ರಜೆ
  • ಜನವರಿ 26, ಸೋಮವಾರ: ಗಣರಾಜ್ಯೋತ್ಸವ (ಎಲ್ಲೆಡೆ ರಜೆ)

ಇದನ್ನೂ ಓದಿ: ಆಸ್ತಿ ಮಾರಿ ಬಂದ 94 ಲಕ್ಷ ರೂನಲ್ಲಿ 38 ಲಕ್ಷ ರೂ ಕ್ಯಾಷ್; ಅಘೋಷಿತ ಆದಾಯವೆಂದು ಟ್ಯಾಕ್ಸ್ ನೋಟೀಸ್; ಕೇಸ್ ಗೆದ್ದ ಮಹಿಳೆ

ಕರ್ನಾಟಕದಲ್ಲಿ 2026 ಜನವರಿಯಲ್ಲಿ ಬ್ಯಾಂಕ್ ರಜೆಗಳು

ಕರ್ನಾಟಕದಲ್ಲಿ ಜನವರಿಯಲ್ಲಿ ಬ್ಯಾಂಕುಗಳಿಗೆ ರಜೆ ಇರುವುದು ಎಂಟು ದಿನಗಳು ಮಾತ್ರ. ಇದರಲ್ಲಿ ಎರಡು ಶನಿವಾರ ಮತ್ತು ನಾಲ್ಕು ಭಾನುವಾರದ ರಜೆಗಳಿವೆ. ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವಕ್ಕೆ ರಜೆ ಇರುತ್ತದೆ. ಉಳಿದಂತೆ ಆ ತಿಂಗಳು 23 ದಿನಗಳು ಬ್ಯಾಂಕುಗಳು ಬಾಗಿಲು ತೆರೆದಿರುತ್ತವೆ. ಈ ಎಂಟು ರಜಾ ದಿನಗಳ ಪಟ್ಟಿ ಇಲ್ಲಿದೆ:

  • ಜನವರಿ 4: ಭಾನುವಾರದ ರಜೆ
  • ಜನವರಿ 10: ಎರಡನೇ ಶನಿವಾರದ ರಜೆ
  • ಜನವರಿ 11: ಭಾನುವಾರದ ರಜೆ
  • ಜನವರಿ 15, ಗುರುವಾರ: ಮಕರ ಸಂಕ್ರಾಂತಿ
  • ಜನವರಿ 18: ಭಾನುವಾರದ ರಜೆ
  • ಜನವರಿ 24: ನಾಲ್ಕನೇ ಶನಿವಾರದ ರಜೆ
  • ಜನವರಿ 25: ಭಾನುವಾರದ ರಜೆ
  • ಜನವರಿ 26, ಸೋಮವಾರ: ಗಣರಾಜ್ಯೋತ್ಸವ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಮಗುವಿನಲ್ಲಿ ಹಸಿವು ಕಡಿಮೆಯಾಗುವುದಕ್ಕೆ ನೀವು ಹೇಳಿಕೊಟ್ಟ ಈ ಅಭ್ಯಾಸವೇ ಕಾರಣ! – Kannada News | How Much Coffee Is Too Much for Children?

ಮಕ್ಕಳು ಕಾಫಿ ಕುಡಿಯುವ ಅಭ್ಯಾಸದಿಂದ ಉಂಟಾಗುವ ಅಡ್ಡಪರಿಣಾಮಗಳು

ಬೆಳಿಗ್ಗೆ ಎದ್ದ ಕೂಡಲೇ ಅಥವಾ ಸಂಜೆ ಸಮಯದಲ್ಲಿ ಚಹಾ ಅಥವಾ ಕಾಫಿ (Coffee) ಕುಡಿಯುವ ಅಭ್ಯಾಸ ಹಲವರಿಗಿರುತ್ತದೆ. ಈ ಅಭ್ಯಾಸ ಅಷ್ಟಾಗಿ ಆರೋಗ್ಯಕರವಲ್ಲ ಎಂದು ತಿಳಿದಿದ್ದರೂ ಸಹ ಅದನ್ನು ಬಿಡಲು ಮನಸ್ಸು ಒಪ್ಪುವುದಿಲ್ಲ. ಅದರಲ್ಲಿಯೂ ಕೆಲವು ಮನೆಗಳಲ್ಲಿ ದೊಡ್ಡವರು ಚಹಾ ಅಥವಾ ಕಾಫಿ ಕುಡಿಯುವುದಲ್ಲದೆ ಮಕ್ಕಳಿಗೂ ಕುಡಿಯಲು ಕೊಡುತ್ತಾರೆ. ಆದರೆ ಇದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ, ಇಂತಹ ಅಭ್ಯಾಸ ತುಂಬಾ ಹಾನಿಕಾರಕ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದರಲ್ಲಿಯೂ ಕಾಫಿ ಸೇವನೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ ಮಕ್ಕಳು ಯಾಕೆ ಕಾಫಿ ಸೇವನೆ ಮಾಡಬಾರದು, ಒಂದು ಕಪ್ ಕಾಫಿ ಮಕ್ಕಳಲ್ಲಿ ಏನೆಲ್ಲಾ ಬದಲಾವಣೆ ಮಾಡುತ್ತೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಬ್ಬಿಣದ ಕೊರತೆಯಾಗುತ್ತೆ:

ಮಕ್ಕಳು ಬೆಳವಣಿಗೆಯ ಹಂತದಲ್ಲಿರುವಾಗ ಅವರಿಗೆ ಪ್ರತಿನಿತ್ಯ ತರಕಾರಿ, ಸೊಪ್ಪು ಮತ್ತು ಮೊಟ್ಟೆಗಳಂತಹ ಪೋಷಕಾಂಶಗಳಿಂದ ಭರಿತವಾಗಿರುವ ಆಹಾರವನ್ನು ನೀಡಬೇಕು. ಅದರ ಬದಲಾಗಿ ಒಂದು ಕಪ್ ಚಹಾ ಅಥವಾ ಕಾಫಿ ಕೊಟ್ಟರೆ ಪೋಷಕಾಂಶಗಳು ಸರಿಯಾಗಿ ದೇಹವನ್ನು ತಲುಪುವುದಿಲ್ಲ. ಈ ಪಾನೀಯಗಳಲ್ಲಿರುವ ಕೆಲವು ರಾಸಾಯನಿಕಗಳು ಆಹಾರದಲ್ಲಿರುವ ಕಬ್ಬಿಣದ ಅಂಶ ರಕ್ತ ಹೀರಿಕೊಳ್ಳುವುದನ್ನು ತಡೆಯುತ್ತವೆ. ಪರಿಣಾಮವಾಗಿ, ಮಕ್ಕಳು ಎಷ್ಟೇ ತಿಂದರೂ ಅವರು ತೆಳ್ಳಗಿರುತ್ತಾರೆ ಅಥವಾ ರಕ್ತಹೀನತೆಯ ಸಮಸ್ಯೆ ಕಾಡುತ್ತದೆ.

ಇದನ್ನೂ ಓದಿ: ಟೀಯನ್ನು ಪದೇ ಪದೇ ಬಿಸಿ ಮಾಡಿ ಕುಡಿಯುವ ಒಂದು ಸಣ್ಣ ಅಭ್ಯಾಸ ಆರೋಗ್ಯದ ಮೇಲೆ ಬಹುದೊಡ್ಡ ಪರಿಣಾಮ ಬೀರಬಹುದು ಎಚ್ಚರ!

ಕೆಫೀನ್ ಮೆದುಳಿಗೆ ಅಪಾಯಕಾರಿ:

ಕೆಲಸಗಳಲ್ಲಿ ನಿರತರಾಗಿರುವ ವಯಸ್ಕರು ಮೈಂಡ್ ಫ್ರೆಶ್ ಆಗಲು ಅಥವಾ ನಿದ್ದೆಯಿಂದ ಮುಕ್ತಿ ಪಡೆಯಲು ಕಾಫಿ ಅಥವಾ ಚಹಾ ಕುಡಿಯುತ್ತಾರೆ. ಆದರೆ ಮಕ್ಕಳಿಗೆ, ಕಾಫಿ ಮತ್ತು ಚಹಾದಲ್ಲಿರುವ ಕೆಫೀನ್ ನರಮಂಡಲವನ್ನು ಅತಿಯಾಗಿ ಪ್ರಚೋದಿಸುತ್ತದೆ. ಇದು ಅವರಲ್ಲಿ ಆತಂಕ ಉಂಟುಮಾಡುತ್ತದೆ. ಅಷ್ಟೇ ಅಲ್ಲ ಅಧ್ಯಯನದ ಮೇಲೆ ಕೇಂದ್ರೀಕರಿಸಲು ಅಥವಾ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ಕೆಫೀನ್ ಅವರ ನಿದ್ರೆಗೂ ಅಡ್ಡಿಪಡಿಸುತ್ತದೆ. ನಡವಳಿಕೆಯಲ್ಲಿ ಬದಲಾವಣೆಗಳಿಗೆ ಕಾರಣವಾಗಿ ಪದೇ ಪದೇ ಕೋಪಗೊಳ್ಳುವಂತೆ ಮಾಡುತ್ತದೆ.

ಹಸಿವು ಕಡಿಮೆಯಾಗುತ್ತೆ

ಮಕ್ಕಳು ಸರಿಯಾಗಿ ತಿನ್ನುವುದಿಲ್ಲ ಎಂಬುದು ಹಲವು ಪೋಷಕರ ಚಿಂತೆಯಾಗಿರುತ್ತೆ. ಇದಕ್ಕೆ ಮುಖ್ಯ ಕಾರಣವೆಂದರೆ ಅವರು ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುವುದು. ಇದು ಹಸಿವನ್ನು ಉತ್ತೇಜಿಸುವ ಹಾರ್ಮೋನುಗಳನ್ನು ನಿಗ್ರಹಿಸುತ್ತದೆ. ಹೆಚ್ಚುವರಿಯಾಗಿ, ಇದು ಕರುಳಿನಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಮತ್ತು ಎದೆಯುರಿ, ಮಲಬದ್ಧತೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಮಕ್ಕಳಿಗೆ ಹಸಿವಿಲ್ಲದಿದ್ದರೆ, ಅವರು ತಿನ್ನುವುದಿಲ್ಲ, ತಿನ್ನದಿದ್ದರೆ, ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.

ಸಕ್ಕರೆ ಮಕ್ಕಳಿಗೆ ಹಾನಿಕಾರಕ

ಮಕ್ಕಳು ಇಷ್ಟ ಪಟ್ಟು ಕುಡಿಯುವ ಚಹಾ, ಕಾಫಿಯಲ್ಲಿ ಸಕ್ಕರೆ ಇರುತ್ತದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಮಕ್ಕಳಿಗೆ ಹಾನಿಯಾಗಬಹುದು. ಅಷ್ಟೇ ಅಲ್ಲ ಹಲ್ಲು ಹುಳುಕಿಗೆ ಬೊಜ್ಜಿಗೆ ಕಾರಣವಾಗಬಹುದು. ಹಾಗಾಗಿ ಹತ್ತು ವರ್ಷದೊಳಗಿನ ಮಕ್ಕಳಿಗೆ, ಹಾಲು, ಗಂಜಿ ಅಥವಾ ಹಣ್ಣಿನ ರಸವನ್ನು ನೀಡುವುದು ಹೆಚ್ಚು ಉತ್ತಮ. ಅಲ್ಲದೆ ಅತಿಯಾದ ಸಕ್ಕರೆ ಸೇವನೆಯು ಮಕ್ಕಳನ್ನು ಹೈಪರ್ಆಕ್ಟಿವ್ ಆಗಿ ಮಾಡಬಹುದು ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಹಾಗಾಗಿ ಮಕ್ಕಳಿಗೆ ಚಹಾ, ಕಾಫಿ ಕೊಡುವ ಮುನ್ನ ಎಚ್ಚರವಹಿಸಿ. ಆರೋಗ್ಯಕ್ಕಿಂತ ಯಾವುದು ದೊಡ್ಡದಲ್ಲ ಎಂಬುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮ ಸರ್ಕಾರದ ಆಡಳಿತದಲ್ಲಿ ಕೈ ಹಾಕುವುದು ಬೇಡ: ಕೇರಳ ಸರ್ಕಾರಕ್ಕೆ ಡಿಕೆ ಶಿವಕುಮಾರ್ ಎಚ್ಚರಿಕೆ​ – Kannada News | Dont Interfere in Karnataka Government Administration: DK Shivakumar sparks Kerala Government

ಬೆಂಗಳೂರು, ಡಿಸೆಂಬರ್​ 30: ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆಗಳು ನೆಲಸಮ ವಿಚಾರವಾಗಿ ಕೇರಳ ಸರ್ಕಾರ ಕಿಡಿಕಾರಿತ್ತು. ಈ ವಿಚಾರವಾಗಿ ಇದೀಗ ಡಿಸಿಎಂ ಡಿಕೆ ಶಿವಕುಮಾರ್​ ಕೇರಳ ಸರ್ಕಾರಕ್ಕೆ ಮತ್ತೊಮ್ಮೆ ಟಾಂಗ್​ ನೀಡಿದ್ದಾರೆ. ಕೇರಳ ಸರ್ಕಾರ ನಮ್ಮ ಸರ್ಕಾರದ ಆಡಳಿತದಲ್ಲಿ ಕೈ ಹಾಕುವುದು ಬೇಡ ಎಂದು ಹೇಳಿದ್ದಾರೆ. ತಮ್ಮ ಈ ಹಿಂದಿನ ಹೇಳಿಕೆಯನ್ನು ರಾಜೀವ್ ಚಂದ್ರಶೇಖರ್ ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಫ್ಲೈ ಓವರ್‌ ಮೇಲೆ ಖಾಸಗಿ ಬಸ್​​ಗಳ ನಡುವೆ ರೇಸ್​​: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ – Kannada News | Rash Driving by Tourist Bus Drivers on Electronic City Flyover: Video Goes Viral

ಆನೇಕಲ್​​, ಡಿಸೆಂಬರ್​ 30: ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್‌ನಲ್ಲಿ ಟೂರಿಸ್ಟ್ ಬಸ್ ಚಾಲಕರು ಅಜಾಗರೂಕ ಚಾಲನೆ ಮಾಡಿರುವುದು ಬೆಳಕಿಗೆ ಬಂದಿದೆ. ನಾ ಮುಂದು ತಾ ಮುಂದು ಎಂಬಂತೆ ಬಸ್ಸುಗಳನ್ನು ಚಾಲನೆ ಮಾಡುತ್ತಾ, ಪ್ರಯಾಣಿಕರ ಜೀವದ ಜೊತೆ ಹುಚ್ಚಾಟ ನಡೆಸಿರುವ ವಿಡಿಯೋ ವೈರಲ್​​ ಆಗಿದೆ. ಘಟನೆಯಲ್ಲಿ ಬಸ್​​ಗಳು ಪರಸ್ಪರ ಟಚ್​​ ಆಗಿದ್ದು, ಸ್ವಲ್ಪ ಯಾಮಾರಿದರೂ ಬಸ್ಸುಗಳು ಫ್ಲೈ ಓವರ್‌ನಿಂದ ಕೆಳಗೆ ಬೀಳುವ ಸಾಧ್ಯತೆ ಹೆಚ್ಚಿತ್ತು ಎನ್ನಲಾಗಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಇತ್ತೀಚೆಗೆ ಸರಣಿ ಬಸ್ ದುರಂತಗಳು ಸಂಭವಿಸಿ ಸಾವು-ನೋವುಗಳು ಸಂಭವಿಸುತ್ತಿದ್ದರೂ ಚಾಲಕರ ನಿರ್ಲಕ್ಷ್ಯ ಕಡಿಮೆ ಆಗಿಲ್ಲ ಎಂಬುದಕ್ಕೆ ಈ ಘಟನೆ ಮತ್ತೊಂದು ಸ್ಪಷ್ಟ ನಿದರ್ಶನ ಎಂಬಂತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ದೇವಿ ದೇವಾಲಯದ ಮುಂದೆ ಅಮಾನವೀಯ ಘಟನೆ: ಮುಳ್ಳಿನ ಪೊದೆಯಲ್ಲಿ ಒದ್ದಾಡಿದ ಒಂದು ದಿನದ ಹೆಣ್ಣು ಮಗು – Kannada News | Huligemma Temple Shock: Newborn Girl Child Abandoned in Koppal

ಕೊಪ್ಪಳ, ಡಿ.30: ಹೆಣ್ಣು ಮಕ್ಕಳು ಬೇಡ (Koppal Baby Abandoned) ಎನ್ನುವ ಕ್ರೂರ ಮನಸ್ಥಿತಿ ಇನ್ನೂ ಹೋಗಿಲ್ಲ. ಹೆಣ್ಣು ಮಗು ಎಂಬ ಕಾರಣಕ್ಕೆ ಬೀದಿಯಲ್ಲಿ ಬಿಟ್ಟು ಹೋಗುವ ಘಟನೆಗಳು ಇಂದಿಗೂ ಕಂಡು ಬರುತ್ತಿದೆ ಎಂಬುದು ಅಚ್ಚರಿಯ ವಿಚಾರ, ಸಮಾಜ ಬದಲಾದರೂ, ಮನುಷ್ಯನ ಮನಸ್ಥಿತಿ ಬದಲಾಗುತ್ತಿಲ್ಲ. ಇದೀಗ ಕೊಪ್ಪಳದ ತಾಲೂಕಿನ ಐತಿಹಾಸಿಕ ಹುಲಗೆಮ್ಮ ದೇವಸ್ಥಾನದಲ್ಲೂ ಇಂತಹ ಅಮಾನವೀಯ ಘಟನೆಯೊಂದು ನಡೆದಿದೆ. ಈ ದೇವಸ್ಥಾನಕ್ಕೆ ಲಕ್ಷ ಲಕ್ಷ ಭಕ್ತರು ರಾಜ್ಯದಿಂದ ಹಾಗೂ ಹೊರರಾಜ್ಯದಿಂದಲೂ ಬಂದು ದೇವಿಯ ದರ್ಶನ ಪಡೆಯುತ್ತಾರೆ. ಇಂತಹ ಶ್ರದ್ಧಾ ಕೇಂದ್ರದಲ್ಲಿ ಈ ಘಟನೆ ನಡೆದಿರುವುದು, ಮನುಷ್ಯ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ದೇವಾಲಯದ ಪಕ್ಕದಲ್ಲಿರುವ ಮುಳ್ಳಿನ ಪೊದೆಯಲ್ಲಿ ನವಜಾತ ಶಿಶುವನ್ನು ಎಸೆದು ಹೋಗಿದ್ದಾರೆ.

ಹೆಣ್ಣು ಮಗು ಎಂಬ ಕಾರಣಕ್ಕೆ ದೇವಾಲಯದ ಪಕ್ಕದಲ್ಲಿ ಮಗುವನ್ನು ಎಸೆದು ಹೋಗಿದ್ದಾರೆ ಎಂದು ಅಲ್ಲಿನ ಜನ ಹೇಳಿದ್ದಾರೆ. ಈ ಮಗು ಜನಿಸಿ ಒಂದು ದಿನ ಆಗಿರಬಹುದು ಎಂದು ಹೇಳಲಾಗಿದೆ. ಮಗು ಅಳುತ್ತಿರುವುದು ಕೇಳಿ ದೇವಸ್ಥಾನದ ಹೋಮ್ ಗಾರ್ಡ್​​ಗಳು ಸ್ಥಳಕ್ಕೆ ಬಂದು ನೋಡಿದ್ದಾರೆ. ತಕ್ಷಣ ಮಗುವನ್ನು ಎತ್ತಿಕೊಂಡು ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ಅಮ್ಮನ ಎದೆಹಾಲು ಇಲ್ಲದೆ ಹಸಿವಿನಿಂದ ಮಗು ಒದ್ದಾಡಿದೆ. ತಕ್ಷಣ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ. ಇನ್ನು ಈ ಮಗುವಿನ ಪೋಷಕರು ಯಾರು ಎಂಬ ಕಾರ್ಯಚರಣೆ ನಡೆಯುತ್ತಿದೆ. ಮದುವೆಗೂ ಮುನ್ನವೇ ಗರ್ಭಿಣಿಯಾಗಿ, ಮಗುವನ್ನು ಪಡೆದಿರುವ ಕಾರಣಕ್ಕೆ ಮಗುವನ್ನು ಎಸೆದು ಹೋಗಿದ್ದಾರೆ ಎಂದು ಶಂಕಿಸಲಾಗಿದೆ.

ದೇವಸ್ಥಾನದ ಪಕ್ಕದಲ್ಲಿರುವ ಮುಳ್ಳಿನ ಪೊದೆಯಲ್ಲಿ ಎಸೆದು ಹೋಗಿರುವ ಕಾರಣ, ಮಗುವಿನ ಮೇಲೆ ಹುಳುಗಳು ಮೆತ್ತಿಕೊಂಡು ನೋವಿನಿಂದ ಮಗು ಕೂಗುತ್ತಿತ್ತು. ಇದನ್ನು ಗಮನಿಸಿದ ಹುಲಗೆಮ್ಮ ದೇವಸ್ಥಾನದಲ್ಲಿ ಕೆಲಸ ಮಾಡತಿದ್ದ,ಹೋಮ್ ಗಾರ್ಡ್ ಗಳು ಮಗುವಿನ ರಕ್ಷಣೆ ಮಾಡಿ, ಹುಲಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿದ್ದಾರೆ. ಇದೀಗ ಮಗು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿದೆ. ಮಗುವ ಆರೋಗ್ಯವಾಗಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ

ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಸುಮಾರು 2 ಕೆಜಿ 400 ಗ್ರಾಂ ಇದೆ. ಹುಲಗಿಯಲ್ಲಿ ಕೆಲಸ ಮಾಡತಿದ್ದ ಹೋಮ್ ಗಾರ್ಡ್ ಗಳಾದ ಶಿವಕುಮಾರ್ ಹಾಗೂ ಮಾರುತಿ ಅವರ ಸಮಯ ಪ್ರಜ್ಜೆಯಿಂದ ನವಜಾತ ಶಿಶು ಬದುಕಿದೆ. ಮಗುವಿಗೆ ಮುಳ್ಳು ಚುಚ್ಚಿಕೊಂಡಿದ್ದು, ಹಾಗೂ ಹುಳುಗಳು ಕಚ್ಚಿರುವುದರಿಂದ ನಂಜಾಗಿರುವ ಸಾಧ್ಯತೆಗಳು ಇದೆ ಎಂದು ವೈದ್ಯ ಗೀರಿಶ್ ಹೇಳಿದ್ದಾರೆ. ಮಕ್ಕಳಾ ರಕ್ಷಣಾ ಘಟಕದ ಅಧಿಕಾರಿಗಳು ಆಸ್ಪತ್ರೆಗೆ ಧಾವಿಸಿದ್ದು, ಮಗುವಿನ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಮಗುವಿನ ಪೋಷಕರ ಬಗ್ಗೆಯೂ ಕಾರ್ಯಚರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಮಗುವಿನ ಪೋಷಕರ ಸಿಕ್ಕಿಲ್ಲ ಎಂದರೆ ಮಗುವನ್ನು ದತ್ತು ನೀಡುವ ಪ್ರತಿಕ್ರಿಯೆ ನಡೆಸುತ್ತೇವೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಆಲ್ಫಾ’ ಸಿನಿಮಾದ ‘ರಾವ ರಾವ’ ಕಲರ್​ಫುಲ್ ಹಾಡಿಗೆ ಅನೂಪ್ ಸೀಳಿನ್ ಸಂಗೀತ – Kannada News | Hemanth Kumar starrer Alpha Men Love Vengeance movie Rawa Rawa Song released

ನಿರ್ದೇಶಕ ವಿಜಯ್ ಅವರು ಈ ಮೊದಲು ‘ಗೀತಾ’ ಮತ್ತು ‘ಹೊಯ್ಸಳ’ ಸಿನಿಮಾಗಳನ್ನು ಮಾಡಿದ್ದರು. ಈಗ ಅವರು ‘ಆಲ್ಫಾ’ (Alpha) ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಆಲ್ಫಾ – ಮೆನ್ ಲವ್ ವೆಂಜೆನ್ಸ್’ (Alpha Men Love Vengeance) ಎಂಬುದು ಈ ಸಿನಿಮಾದ ಪೂರ್ತಿ ಟೈಟಲ್. ಈ ಸಿನಿಮಾದಿಂದ ಈಗೊಂದು ಹೊಸ ಹಾಡು ಬಿಡುಗಡೆ ಆಗಿದೆ. ‘ರಾವ ರಾವ’ ಎಂಬ ಈ ಹಾಡನ್ನು ಅದ್ದೂರಿಯಾಗಿ ಚಿತ್ರಿಸಲಾಗಿದೆ. ತುಂಬ ಕಲರ್​​ಫುಲ್ ಆಗಿ ಈ ಹಾಡು ಮೂಡಿಬಂದಿದೆ. ಹಾಡಿನ ಬಿಡುಗಡೆ ಬಳಿಕ ‘ಆಲ್ಫಾ’ ಸಿನಿಮಾ ಮೇಲಿನ ಕೌತುಕ ಹೆಚ್ಚಿದೆ.

‘ಆಲ್ಫಾ’ ಸಿನಿಮಾದಲ್ಲಿ ನಾಯಕನಾಗಿ ಹೇಮಂತ್‌ ಕುಮಾರ್ ಅವರು ರಗಡ್ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಈ ಸಿನಿಮಾದ ಮೊದಲ ಹಾಡು ‘ರಾವ ರಾವ..’ ಬಿಡುಗಡೆ ಆಗಿ ಜನಮೆಚ್ಚುಗೆ ಪಡೆಯುತ್ತಿದೆ. ಈ ಹಾಡಿಗೆ ಅನೂಪ್ ಸೀಳಿನ್ ಅವರು ಸಂಗೀತ ನೀಡಿದ್ದಾರೆ. ನಾಗಾರ್ಜುನ ಶರ್ಮಾ ಅವರು ಸಾಹಿತ್ಯ ಬರೆದಿದ್ದಾರೆ. ಅನೂರಾಗ ಕುಲಕರ್ಣಿ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ.

 ‘ರಾವ ರಾವ’ ಹಾಡು:

ಈ ಮೊದಲು ‘ಆಲ್ಫಾ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿ ಗಮನ ಸೆಳೆದಿತ್ತು. ಇದು ಆ್ಯಕ್ಷನ್ ಜೊತೆಗೆ ಅಪ್ಪ-ಮಗನ ಭಾವನಾತ್ಮಕ ಕಥೆ ಹೊಂದಿರುವ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಈ ಸಿನಿಮಾ ಮೂಲಕ ಹೇಮಂತ್ ಕುಮಾರ್ ಅವರು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಹಾಡಿನಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.

ಸಿನಿಮಾ ಬಗ್ಗೆ ನಿರ್ದೇಶಕ ವಿಜಯ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಆ್ಯಕ್ಷನ್ ಮತ್ತು ಕ್ರೈಂನ ಭಯಾನಕತೆ ಎಷ್ಟಿರುತ್ತದೆ ಎಂಬುದು ಸಿನಿಮಾದ ಪೋಸ್ಟರ್​ನಲ್ಲಿ ಕಾಣಿಸಿಕೊಂಡಿದೆ. ಸಿನಿಮಾದಲ್ಲಿ 3 ಪಾತ್ರಗಳು ಪ್ರಮುಖವಾಗಿ ಬರಲಿವೆ’ ಎಂದು ಅವರು ಹೇಳಿದ್ದಾರೆ. ಆನಂದ್ ಕುಮಾರ್ ಅವರು ನಿರ್ಮಾಪಕರಾಗಿ ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಇದನ್ನೂ ಓದಿ: ‘ಆಲ್ಫಾ’ ಸಿನಿಮಾ ಫಸ್ಟ್ ಲುಕ್; ಹೀರೋ ಆದ ಹೇಮಂತ್ ಕುಮಾರ್

ನಟ ಹೇಮಂತ್ ಕುಮಾರ್ ಅವರು ‘ಆಲ್ಫಾ’ ಸಿನಿಮಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಬಂದಿದ್ದಾರೆ. ರಾಘು ಶಿವಮೊಗ್ಗ ಬಳಿ ಅವರು ನಟನೆಯ ತಯಾರಿ ನಡೆಸಿದ್ದಾರೆ. ಅರ್ಜುನ್ ಜೊತೆ ಸಾಹಸ ಅಭ್ಯಾಸ ಮಾಡಿದ್ದಾರೆ. ಅಲ್ಲದೇ, ಡ್ಯಾನ್ಸ್ ಮತ್ತು ಮಾರ್ಷಲ್ ಆರ್ಟ್ ಕಲಿತು ಹೀರೋ ಆಗಲು ಬೇಕಾದ ಪೂರ್ತಿ ತಯಾರಿ ಮಾಡಿಕೊಂಡು ಎಂಟ್ರಿ ನೀಡಿದ್ದಾರೆ. ಕಾರ್ತಿಕ್ ಛಾಯಾಗ್ರಹಣ ಮಾಡಿರುವ ಈ ಸಿನಿಮಾಗೆ ಮಾಸ್ತಿ ಅವರು ಸಂಭಾಷಣೆ ಬರೆದಿದ್ದಾರೆ. ನಾಯಕಿ ಯಾರು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪುಟಿನ್ ನಿವಾಸದ ಮೇಲಿನ ಉಕ್ರೇನ್ ದಾಳಿಗೆ ಪ್ರಧಾನಿ ಮೋದಿ ಖಂಡನೆ – Kannada News | PM Narendra Modi condemns Ukraine attack on Russia President Putin residence

ನವದೆಹಲಿ, ಡಿಸೆಂಬರ್ 30: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿವಾಸದ ಮೇಲೆ ಉಕ್ರೇನ್ ದಾಳಿ ಮಾಡಿದೆ ಎಂಬ ವರದಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಎರಡೂ ದೇಶಗಳು ರಾಜತಾಂತ್ರಿಕ ಪ್ರಯತ್ನಗಳತ್ತ ಗಮನಹರಿಸುವಂತೆ ಅವರು ಒತ್ತಾಯಿಸಿದ್ದಾರೆ.

“ರಷ್ಯಾದ ಅಧ್ಯಕ್ಷರ ನಿವಾಸದ ಮೇಲೆ ದಾಳಿ ನಡೆದಿದೆ ಎಂಬ ವರದಿಗಳಿಂದ ತೀವ್ರ ಕಳವಳಗೊಂಡಿದ್ದೇನೆ. ಎರಡೂ ದೇಶಗಳ ನಡುವೆ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಮತ್ತು ಶಾಂತಿಯನ್ನು ಸಾಧಿಸಲು ಮಾಡಲಾಗಿರುವ ರಾಜತಾಂತ್ರಿಕ ಪ್ರಯತ್ನಗಳು ಇಂತಹ ದಾಳಿಗಳಿಂದ ವ್ಯರ್ಥವಾಗುತ್ತವೆ. ಆದಷ್ಟೂ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನಗಳ ಮೇಲೆ ಗಮನಹರಿಸಲು ನಾವು ಎರಡೂ ದೇಶಗಳಿಗೆ ಮನವಿ ಮಾಡುತ್ತೇವೆ” ಎಂದು ಪ್ರಧಾನಿ ಮೋದಿ ಎಕ್ಸ್​​ನ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಫೆಬ್ರವರಿ 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಪ್ರಧಾನಿ ಮೋದಿ ಎರಡೂ ದೇಶಗಳ ನಡುವೆ ಸಂವಾದ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡುತ್ತಿದ್ದಾರೆ.

ಇದನ್ನೂ ಓದಿ: ಝೆಲೆನ್ಸ್ಕಿ- ಟ್ರಂಪ್ ಶಾಂತಿ ಮಾತುಕತೆಗೂ ಮುನ್ನ ಉಕ್ರೇನ್ ಮೇಲೆ ರಷ್ಯಾ ದಾಳಿ

ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ನಿನ್ನೆ ಮಾಸ್ಕೋ ಮತ್ತು ಸೇಂಟ್ ಪೀಟರ್ಸ್ಬರ್ಗ್ ನಡುವಿನ ಪುಟಿನ್ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂದು ಆರೋಪಿಸಿದ್ದರು. ಅವರ ಪ್ರಕಾರ, ನವ್ಗೊರೊಡ್ ಪ್ರದೇಶದಲ್ಲಿ ಪುಟಿನ್ ಅವರ ಅಧಿಕೃತ ನಿವಾಸದಲ್ಲಿ 91 ಡ್ರೋನ್‌ಗಳನ್ನು ತಡೆಹಿಡಿದು ಹೊಡೆದುರುಳಿಸಲಾಯಿತು. ಈ ಘಟನೆಯಿಂದ ಯಾವುದೇ ಹಾನಿ ಅಥವಾ ಸಾವುನೋವುಗಳು ಸಂಭವಿಸಿಲ್ಲ. ಆದರೆ, ಉಕ್ರೇನ್​ನ ಈ ದಾಳಿಯಿಂದಾಗಿ ರಷ್ಯಾ ಶಾಂತಿ ಮಾತುಕತೆಗೆ ಒಪ್ಪಬೇಕೇ ಬೇಡವೇ ಎಂಬುದನ್ನು ಮರುಪರಿಶೀಲಿಸಲಾಗುವುದು” ಎಂದು ಲಾವ್ರೊವ್ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿ – Kannada News | Air India Passenger Urinates on Co passenger Flight Safety Concerns Rise

ನವದೆಹಲಿ, ಡಿಸೆಂಬರ್ 30: ದೆಹಲಿಯಿಂದ ಬ್ಯಾಂಕಾಕ್​ಹೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನದಲ್ಲಿ ಮಾನಮತ್ತ ಪ್ರಯಾಣಿಕನೊಬ್ಬ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿರುವ ಘಟನೆ ನಡೆದಿದೆ. ಇದು ವಿಮಾನಯಾನ ಸುರಕ್ಷತೆ ಮತ್ತು ಪ್ರಯಾಣಿಕರ ನಡವಳಿಕೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ .

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಕುಡುಕ ಪ್ರಯಾಣಿಕನೊಬ್ಬ ವಿಮಾನ ಕ್ಯಾಬಿನ್ ಒಳಗೆ ಮೂತ್ರ ವಿಸರ್ಜಿಸುತ್ತಿರುವುದನ್ನು ತೋರಿಸುತ್ತದೆ, ಅವರು ಬಿಸಿನೆಸ್ ಕ್ಲಾಸ್ ಕ್ಯಾಬಿನ್‌ನಲ್ಲಿ ಪ್ರಯಾಣಿಸುತ್ತಿದ್ದರು. ಸಹ ಪ್ರಯಾಣಿಕರಲ್ಲಿ ಒಬ್ಬರಾದ ಶಿವಮ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಇಡೀ ಘಟನೆಯನ್ನು ವಿವರಿಸಿದ್ದಾರೆ, ಕುಡಿದ ಅಮಲಿನಲ್ಲಿದ್ದ ಪ್ರಯಾಣಿಕ ಇತರ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಲು ಪ್ರಾರಂಭಿಸಿದ್ದ.

ಆದರೆ ಆತನ ಮೇಲೆ ಯಾವುದೇ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ಪ್ರಯಾಣಿಕರು ಪ್ರಶ್ನೆ ಮಾಡುತ್ತಿದ್ದಾರೆ. ವಿಮಾನದಲ್ಲಿರುವ ಪ್ರಯಾಣಿಕರನ್ನು ರಕ್ಷಿಸಲು ಯಾವುದೇ ಕಾನೂನು ಅಥವಾ ಸುರಕ್ಷತಾ ಪ್ರೋಟೋಕಾಲ್ ಇಲ್ಲವೇ, ಬಿಸಿನೆಸ್ ಕ್ಲಾಸ್​ನಲ್ಲಿ ಹೋಗುವ ನಮಗೆ ಯಾರಾದರೂ ಉಚಿತ ಪಾಸ್ ಕೊಡುತ್ತಿದ್ದಾರಾ, ಒಂದು-ಮಾರ್ಗ ಟಿಕೆಟ್‌ಗಾಗಿ ಸುಮಾರು $1,000 ( 80,000 ರೂ.) ಖರ್ಚು ಮಾಡಿ, ಇಂಥಾ ಘಟನೆಗಳನ್ನು ನೋಡುವುದು ನಿಜಕ್ಕೂ ವಿಪರ್ಯಾಸ ಎಂದು ಬರೆದಿದ್ದಾರೆ.

ಮತ್ತಷ್ಟು ಓದಿ: ಏರ್ ಇಂಡಿಯಾ ಅಪಘಾತ, ತಪ್ಪು ವರದಿ ಕೊಟ್ಟು ಮೃತ ಪೈಲಟ್ ಮೇಲೆ ಆರೋಪ ಹೊರಿಸ್ಬೇಡಿ, ಮೃತರ ಸಂಬಂಧಿಕರ ಮಾತು

ಅದೃಷ್ಟವಶಾತ್ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಯಾವುದೇ ಮಹಿಳಾ ಪ್ರಯಾಣಿಕರು ಇರಲಿಲ್ಲ, ಒಬ್ಬ ಮಹಿಳೆ ಒಂಟಿಯಾಗಿ ಪ್ರಯಾಣಿಸುತ್ತಿದ್ದರೆ ಮತ್ತು ಈ ರೀತಿಯ ಅನುಭವವಾದರೆ ಮತ್ತೆಂದು ಒಬ್ಬಂಟಿಯಾಗಿ ಬರಲು ಹಿಂಜರಿಯುತ್ತಾಳೆ.

ಏರ್ ಇಂಡಿಯಾ ವಿಮಾನದಲ್ಲಿ ಈ ರೀತಿ ನಡೆದಿರುವುದು ಇದೇ ಮೊದಲಲ್ಲ, ನವೆಂಬರ್ 2022 ರಲ್ಲಿ ನ್ಯೂಯಾರ್ಕ್ ನಿಂದ ದೆಹಲಿಗೆ ಹೋಗುವ ಏರ್ ಇಂಡಿಯಾ ವಿಮಾನದಲ್ಲಿ, ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕರೊಬ್ಬರು ಬಿಸಿನೆಸ್ ಕ್ಲಾಸ್ ನಲ್ಲಿ ಹಿರಿಯ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು.

ವಿಮಾನದ ವಿಡಿಯೋ

ಆ ಸಂದರ್ಭದಲ್ಲಿ, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಆ ಪ್ರಯಾಣಿಕನಿಗೆ 30 ದಿನಗಳವರೆಗೆ ಹಾರಾಟ ನಿಷೇಧಿಸಿತು, ಶಿಕ್ಷೆಯು ಅಸಮರ್ಪಕ ಎಂದು ಜನರು ಕರೆಯಲಾಗಿತ್ತು. ವಿಮಾನಗಳಲ್ಲಿ ಮದ್ಯಪಾನವನ್ನು ನಿಷೇಧಿಸಬೇಕು ಎನ್ನುವ ಒತ್ತಾಯ ಕೇಳಿಬಂದಿತ್ತು.ಘಟನೆಯ ಬಗ್ಗೆ ಏರ್ ಇಂಡಿಯಾ ಇಲ್ಲಿಯವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version