Headlines

ಮದುವೆ ಮುಗಿಸಿ ಹಿಂದಿರುವಾಗ ಪತಿ ಹಣೆಗೆ ಗನ್ ಇಟ್ಟು ನವ ವಧುವನ್ನು ಅಪಹರಿಸಿದ ಮಾಜಿ ಪ್ರೇಮಿ – Kannada News | Odisha: Ex Lover Abducts New Bride at Gunpoint After Wedding Ceremony

ಒಡಿಶಾ, ಫೆಬ್ರವರಿ 23: ಮದುವೆ ಮುಗಿಸಿಕೊಂಡು ಪತಿಯೊಂದಿಗೆ ಮನೆಗೆ ತೆರಳುತ್ತಿದ್ದ ನವ ವಧುವನ್ನು ಮಾಜಿ ಪ್ರೇಮಿ ಅಪಹರಿಸಿರುವ ಘಟನೆ ಒಡಿಶಾದ ಬೋಲಂಗೀರ್ ಜಿಲ್ಲೆಯಲ್ಲಿ ನಡೆದಿದೆ. ದಂಪತಿ ಇದ್ದ ಕಾರಿಗೆ ಮೂವರು ಅಡ್ಡ ಬಂದು, ಇಬ್ಬರನ್ನೂ ಕಾರಿಂದ ಇಳಿಸಿ ಆಕೆಯ ಪತಿಯ ಹಣೆಗೆ ಗನ್ ಇಟ್ಟು ಆಕೆಯನ್ನು ಅಪಹರಣ(Kidnap) ಮಾಡಿದ್ದಾನೆ. ಬೋಲಂಗಿರ್ ಜಿಲ್ಲೆಯ ನಿವಾಸಿ ಹರಿಬಂಧು ಪಟೇಲ್ ಎಂಬ ವರ ಮದುವೆಗಾಗಿ ಕಾಂತಮಲ್‌ಗೆ ಹೋಗಿದ್ದ, ಮದುವೆಯ ವಿಧಿವಿಧಾನಗಳು ಮುಗಿದ ನಂತರ, ವಧು-ವರರು ಕುಟುಂಬ ಸದಸ್ಯರೊಂದಿಗೆ ಮನೆಗೆ ಹಿಂತಿರುಗುತ್ತಿದ್ದಾಗ, ತರ್ಭಾ…

Read More

ರಾತ್ರಿ ಮಲಗುವ ಮುನ್ನ ನೀರು ಕುಡಿಯುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಮಿಸ್ ಮಾಡ್ದೆ ಸ್ಟೋರಿ ಓದಿ – Kannada News | Water Before Bed: Good or Bad for Your Sleep?

ನಮ್ಮ ದೇಹಕ್ಕೆ ನೀರು (Water) ಎಷ್ಟು ಮುಖ್ಯ ಎಂಬುದು ತಿಳಿದಿರುವ ವಿಷಯ. ದೇಹದ ಶೇಕಡಾ 60 ರಿಂದ 70 ರಷ್ಟು ಭಾಗ ನೀರಿನಿಂದ ಕೂಡಿದೆ. ಅದಕ್ಕಾಗಿಯೇ ವೈದ್ಯರು ಪ್ರತಿದಿನ ಕನಿಷ್ಠ 8 ಗ್ಲಾಸ್ ನೀರು ಕುಡಿಯಲು ಶಿಫಾರಸು ಮಾಡುತ್ತಾರೆ. ಆದರೆ ಮಲಗುವ ಮುನ್ನ ನೀರು ಕುಡಿಯುವ ವಿಷಯಕ್ಕೆ ಬಂದರೆ ಇದೆ ಅಭಿಪ್ರಾಯಗಳು ಭಿನ್ನವಾಗಿರುತ್ತವೆ. ಹೌದು, ಈ ಅಭ್ಯಾಸ ಬಹಳ ಪ್ರಯೋಜನಗಳನ್ನು ಹೊಂದಿದ್ದರೂ ಕೂಡ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ನಿದ್ರೆಗೆ ಅಡ್ಡಿಯಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ…

Read More

ಕದನ ವಿರಾಮ ಅಂತ್ಯವೆಂದು ಘೋಷಿಸಿದ ಟ್ರಂಪ್; ಇರಾನ್ ಮೇಲೆ ಅಮೆರಿಕದಿಂದ ಭೀಕರ ವೈಮಾನಿಕ ದಾಳಿ – Kannada News | Donald Trump says ceasefire is over after launching fresh Airstrikes on Iran

ಅಂಕಾರಾ, ಜುಲೈ 8: ಪಶ್ಚಿಮ ಏಷ್ಯಾದಲ್ಲಿ ಮತ್ತೊಮ್ಮೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಇದು ಜಗತ್ತಿನಾದ್ಯಂತ ಮತ್ತೊಮ್ಮೆ ಆತಂಕವನ್ನು ಸೃಷ್ಟಿಸಿದೆ. ಪರಸ್ಪರ ಭೀಕರ ರಾಕೆಟ್ ಮತ್ತು ಕ್ಷಿಪಣಿ ದಾಳಿಗಳ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು (ಜುಲೈ 8) ಇರಾನ್ ಜೊತೆಗಿನ ಮಧ್ಯಂತರ ಕದನ ವಿರಾಮ (Ceasefire) ಅಧಿಕೃತವಾಗಿ ‘ಅಂತ್ಯಗೊಂಡಿದೆ’ ಎಂದು ಘೋಷಿಸಿದ್ದಾರೆ. ಇರಾನ್ ನಾಯಕರನ್ನು ವಿಕೃತರು ಎಂದು ಕರೆದಿರುವ ಟ್ರಂಪ್, ‘ಅವರೊಂದಿಗೆ ವ್ಯವಹರಿಸುವುದು ಬರೀ ಸಮಯ ವ್ಯರ್ಥ’ ಎಂದು ಆಕ್ರೋಶ ಹೊರಹಾಕಿದ್ದಾರೆ. ಆದರೂ…

Read More

ಭಯದಿಂದ ಪ್ರಧಾನಿ ಮೋದಿ ಸದನಕ್ಕೆ ಗೈರು; ಕಾಂಗ್ರೆಸ್ ಮಹಿಳಾ ಸಂಸದರಿಂದ ಲೋಕಸಭಾ ಸ್ಪೀಕರ್‌ಗೆ ಪತ್ರ – Kannada News | PM Modi Skipped session Out Of Fear Congress Women MPs Write To Lok Sabha Speaker Om Birla

ನವದೆಹಲಿ, ಫೆಬ್ರವರಿ 9: ಕಾಂಗ್ರೆಸ್ ಪಕ್ಷದ ಮಹಿಳಾ ಸಂಸದೀಯ ಸದಸ್ಯರ ಗುಂಪೊಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಪ್ರಧಾನಿ ನರೇಂದ್ರ ಮೋದಿ (PM Modi) ಹೆದರಿಕೆಯಿಂದ ಸದನಕ್ಕೆ ಬರುತ್ತಿಲ್ಲವೇ ವಿನಃ ನಾವು ಹಾಕಿದ ಬೆದರಿಕೆಯ ಒತ್ತಡದಿಂದಲ್ಲ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಮಯದಲ್ಲಿ ಪ್ರಧಾನಿ ಗೈರುಹಾಜರಾಗಿರುವುದಕ್ಕೆ ಭದ್ರತಾ ಕಾಳಜಿ ಕಾರಣವಲ್ಲ, ಭಯವೇ ಇದಕ್ಕೆ ಕಾರಣ ಎಂದು ಟೀಕಿಸಿದ್ದಾರೆ. ವಿರೋಧ ಪಕ್ಷದ ಮಹಿಳಾ ಸದಸ್ಯರ ವಿರುದ್ಧ ಸ್ಪೀಕರ್ ಅವರ ಹೇಳಿಕೆಗಳು ಸುಳ್ಳು,…

Read More

T20 World Cup 2026: ಪಾಕಿಸ್ತಾನ ವಿರುದ್ಧದ ವಿಶ್ವಕಪ್‌ ಪಂದ್ಯಕ್ಕೆ ಭಾರತದ ಬಲಿಷ್ಠ ಪ್ಲೇಯಿಂಗ್ 11 – Kannada News | IND W vs PAK W T20 World Cup 2026: India’s Predicted Playing XI for Opener

2026 ರ ಮಹಿಳಾ ಟಿ20 ವಿಶ್ವಕಪ್‌ನ ಆರನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಈ ಪಂದ್ಯ ಈ ಪಂದ್ಯಾವಳಿಯಲ್ಲಿ ಉಭಯ ತಂಡಗಳ ಮೊದಲ ಪಂದ್ಯವಾಗಿದೆ. ಹೀಗಾಗಿ ಎರಡು ತಂಡಗಳು ಗೆಲುವಿನೊಂದಿಗೆ ಟೂರ್ನಿ ಆರಂಭಿಸುವ ಇರಾದೆಯಲ್ಲಿವೆ. ಅದರಲ್ಲೂ ಪಾಕಿಸ್ತಾನದ ವಿರುದ್ಧ ಟಿ20 ಮಾದರಿಯಲ್ಲಿ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲುವ ಮೂಲಕ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಲು ನೋಡುತ್ತಿದೆ. ಹೀಗಾಗಿ ಪಾಕ್ ವಿರುದ್ಧ ಬಲಿಷ್ಠ ತಂಡವನ್ನು ಕಟ್ಟಿಕೊಂಡು ಕಣಕ್ಕಿಳಿಯುತ್ತಿದೆ. ಹಾಗಿದ್ದರೆ…

Read More

ನಿರ್ದೇಶಕನ ಅತಿಆಸೆಗೆ ನಿಂತೋಯ್ತು ‘ಕೈದಿ 2’? ಬೇಸರದ ಉತ್ತರ ಕೊಟ್ಟ ಕಾರ್ತಿ – Kannada News | Kaithi 2 Delay: Lokesh Kanagaraj’s Rs 75 Cr Fee and Karthi’s Disappointment Revealed

2019ರಲ್ಲಿ ತಮಿಳಿನಲ್ಲಿ ಬಂದ ‘ಕೈದಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಕಾರ್ತಿ ನಟಿಸಿದ್ದರು. ಡಿಲ್ಲಿ ಪಾತ್ರ ಮೆಚ್ಚುಗೆ ಪಡೆಯಿತು. ಡ್ರಗ್ಸ್ ಕಥೆಯನ್ನು ಆಧರಿಸಿ ಸಿನಿಮಾ ಸಿದ್ಧಗೊಂಡಿತ್ತು. ಈ ಚಿತ್ರವನ್ನು ಜನರು ಹಾಡಿ ಹೊಗಳಿದರು. ಈ ಚಿತ್ರ ನಿರ್ದೇಶನ ಮಾಡಿದ್ದು ಲೋಕೇಶ್​ ಕನಗರಾಜ್ (Lokesh Kanagaraj) ಅವರು. ಇದಕ್ಕೆ ಸೀಕ್ವೆಲ್ ಮಾಡುವ ಬಗ್ಗೆ ಆಗಲೇ ಘೋಷಣೆ ಮಾಡಿದ್ದರು. ಆದರೆ, ಈ ಚಿತ್ರ ರಿಲೀಸ್ ಆಗಿ ಏಳು ವರ್ಷಗಳು ಕಳೆದು ಹೋಗಿವೆ. ಆದಾಗ್ಯೂ ಪಾರ್ಟ್ 2 ಬಗ್ಗೆ…

Read More

ಬೆಂಗಳೂರು: ಮುಂಗಾರು ಮಳೆಯ ಅಬ್ಬರಕ್ಕೆ ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ – Kannada News | Bengaluru Rain Update: Heavy Monsoon Rains Lash City; Electronic City and Silk Board Roads Waterlogged

ಬೆಂಗಳೂರು, ಜೂನ್ 13: ಬೆಂಗಳೂರಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಶುಕ್ರವಾರ ತಡರಾತ್ರಿ ಸುರಿದ ಭಾರಿ ಮಳೆಗೆ ನಗರದ ಹಲವೆಡೆ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದೆ. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ಸಂಕಷ್ಟ ಎದುರಿಸುವಂತಾಯಿತು. ನಗರದ ಪ್ರಮುಖ ಭಾಗಗಳಾದ ಶಾಂತಿನಗರ, ಕಂಟೋನ್ಮೆಂಟ್, ವಸಂತನಗರ, ಸದಾಶಿವನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ, ಮತ್ತಿಕೆರೆ, ದೊಮ್ಮಲೂರು, ಇಂದಿರಾನಗರ, ಹೆಬ್ಬಾಳ, ಕುಮಾರಸ್ವಾಮಿ ಲೇಔಟ್ ಹಾಗೂ ಉತ್ತರಹಳ್ಳಿ ಸೇರಿದಂತೆ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಮಳೆಯ ಅಬ್ಬರಕ್ಕೆ ತಗ್ಗು…

Read More

ರೆಟ್ರೋ ಲುಕ್, ಎಲೆಕ್ಟ್ರಿಕ್ ಪವರ್: ಹೊಸ ಅವತಾರದಲ್ಲಿ ಮಾರುತಿ 800 ‘ಇವಿ’ ಬಂದರೆ ಹೇಗಿರುತ್ತೆ? – Kannada News | Maruti 800 EV Concept: Rishav Kumar’s Digital Render Blends Past and Future

ಭಾರತೀಯ ಆಟೋಮೊಬೈಲ್ ಇತಿಹಾಸದಲ್ಲಿ ‘ಮಾರುತಿ 800’ ಎಂಬುದು ಕೇವಲ ಒಂದು ಕಾರಲ್ಲ, ಅದು ಕೋಟ್ಯಾಂತರ ಕುಟುಂಬಗಳ ಕನಸು. 1983ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಈ ಪುಟ್ಟ ಕಾರು, ಅಗ್ಗದ ಬೆಲೆ ಮತ್ತು ಅದ್ಭುತ ಕಾರ್ಯಕ್ಷಮತೆಯಿಂದ ದೇಶವನ್ನೇ ಅಚ್ಚರಿಗೊಳಿಸಿತು. ಈಗ ಇದೇ ಲೆಜೆಂಡರಿ ಕಾರನ್ನು ಎಲೆಕ್ಟ್ರಿಕ್ ಕಾಲಕ್ಕೆ ತಕ್ಕಂತೆ ಆಧುನಿಕವಾಗಿ ಮರುಕಲ್ಪಿಸಿರುವ (Digital Render) ಚಿತ್ರಗಳು ವಾಹನ ಪ್ರಿಯರ ಗಮನ ಸೆಳೆಯುತ್ತಿವೆ. ಡಿಜಿಟಲ್ ಕಲಾವಿದ ರಿಷವ್ ಕುಮಾರ್ (Rishav Kumar) ಎಂಬುವವರು ಈ ಹೊಸ ಮಾರುತಿ 800 ಎಲೆಕ್ಟ್ರಿಕ್…

Read More

ನ್ಯೂಸ್ ಪೇಪರ್​​ಗಳಲ್ಲಿ ಕಟ್ಟಿಕೊಟ್ಟ ತಿಂಡಿ ತಿನ್ನುತ್ತೀರಾ? ನಿಮ್ಮ ಇಷ್ಟದ ಆಹಾರ ವಿಷವಾದೀತು ಎಚ್ಚರ! – Kannada News

ನವದೆಹಲಿ, ಜೂನ್ 10: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಆಹಾರ ಪದಾರ್ಥಗಳನ್ನು ಅದರಲ್ಲೂ ವಿಶೇಷವಾಗಿ ಕರಿದ ತಿಂಡಿಗಳನ್ನು ದಿನಪತ್ರಿಕೆಗಳಲ್ಲಿ ಸುತ್ತಿ ಕೊಡುವುದರ ವಿರುದ್ಧ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಿದೆ. ನಮ್ಮ ನೆಚ್ಚಿನ ಸ್ಟ್ರೀಟ್ ಫುಡ್‌ಗಳಾದ ಬೋಂಡಾ, ಬಜ್ಜಿ, ವಡೆ, ಪಕೋಡ, ಸಮೋಸಾಗಳನ್ನು ಪೇಪರ್​​ಗಳಲ್ಲಿ ಹಾಕಿಕೊಂಡು ತಿನ್ನುವುದರಿಂದ ಅದು ನಮ್ಮ ಆರೋಗ್ಯಕ್ಕೆ ಹೇಗೆ ಮಾರಕವಾಗಬಹುದು ಎಂಬ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಆ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ. ನಮ್ಮ ದೇಶದಲ್ಲಿ ಹೋಟೆಲ್‌ಗಳು, ಬೇಕರಿಗಳು ಮತ್ತು ಬೀದಿಬದಿಯ…

Read More

ಮೆನೋಪಾಸ್ ಎಂದರೇನು? ಈ ಹಂತದ ನಂತರ ಮಹಿಳೆಯರು ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು? – Kannada News | Menopause Care Guide: Protecting Bone, Heart And Mental Health

ಮೆನೋಪಾಸ್ (Menopause) ಎನ್ನುವುದು ಮಹಿಳೆಯರಲ್ಲಿ ಮಾಸಿಕ ಋತುಚಕ್ರ ಶಾಶ್ವತವಾಗಿ ನಿಲ್ಲುವ ಸಹಜ ಜೈವಿಕ ಪ್ರಕ್ರಿಯೆಯಾಗಿದೆ. ಸಾಮಾನ್ಯವಾಗಿ 45 ರಿಂದ 55 ವರ್ಷಗಳ ನಡುವೆ ಇದು ಸಂಭವಿಸುತ್ತದೆ. ಸತತ 12 ತಿಂಗಳುಗಳ ಕಾಲ ಮುಟ್ಟು ಕಾಣಿಸಿಕೊಳ್ಳದಿದ್ದರೆ ಆಕೆ ಮೆನೋಪಾಸ್‌ ತಲುಪಿದ್ದಾಳೆ ಎಂದು ಪರಿಗಣಿಸಬಹುದು. ಈ ಹಂತದ ನಂತರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಮೆನೋಪಾಸ್ ನಂತರ ಮಹಿಳೆಯ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತವೆ ಮತ್ತು ಯಾವ ರೀತಿ ಜೀವನಶೈಲಿಯಲ್ಲಿ…

Read More