ನಿಮ್ಮ ಜೊತೆ ಕೆಲಸ ಮಾಡುವಾಸೆ: ರಿಷಬ್ ಎದುರು ಬೇಡಿಕೆ ಇಟ್ಟ ವಿಜಯ್

ನಿಮ್ಮ ಜೊತೆ ಕೆಲಸ ಮಾಡುವಾಸೆ: ರಿಷಬ್ ಎದುರು ಬೇಡಿಕೆ ಇಟ್ಟ ವಿಜಯ್

ವಿಜಯ್ ಸೇತುಪತಿ (Vijay Sethupathi) ತಮಿಳಿನ ಸ್ಟಾರ್ ನಟ, ತಮಿಳು ಮಾತ್ರವೇ ಅಲ್ಲದೆ ತೆಲುಗು, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಪೋಷಕ ನಟ, ನಾಯಕ ನಟ, ವಿಲನ್ ಅವರು ಮಾಡದ ಪಾತ್ರಗಳಿಲ್ಲ. ಭಾರತದ ಅತ್ಯುತ್ತಮ ನಟರಲ್ಲಿ ವಿಜಯ್ ಸೇತುಪತಿ ಸಹ ಒಬ್ಬರು. ಇತ್ತೀಚೆಗೆ ವೇದಿಕೆಯೊಂದರಲ್ಲಿ ರಿಷಬ್ ಶೆಟ್ಟಿ ಅವರನ್ನು ಭೇಟಿಯಾದ ವಿಜಯ್ ಸೇತುಪತಿ, ಎಲ್ಲರೆದುರು, ‘ನನಗೆ ನಿಮ್ಮ ಜೊತೆ ನಟಿಸುವ ಆಸೆಯಿದೆ’ ಎಂದಿದ್ದಾರೆ. ವಿಜಯ್ ಅವರ ಬೇಡಿಕೆಗೆ ರಿಷಬ್ ಶೆಟ್ಟಿ ಸಹ ಧನಾತ್ಮಕವಾಗಿ ಸ್ಪಂದಿಸಿದ್ದಾರೆ.

ಗಲಾಟ ಗ್ಲೋರಿಯಸ್ ಐಕಾನ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ವಿಜಯ್ ಅವರಿಗೆ ಪ್ರಶಸ್ತಿಗೆ ನೀಡಲಾಯ್ತು. ಈ ವೇಳೆ ವೇದಿಕೆ ಮೇಲೆ ರಿಷಬ್ ಶೆಟ್ಟಿ ಸಹ ಹಾಜರಿದ್ದರು, ಮೊದಲು ಮಾತನಾಡಿದ ವಿಜಯ್ ಸೇತುಪತಿ, ‘ನಾನು ಕಾಂತಾರ ಸಿನಿಮಾ ನೋಡಿ ರಿಷಬ್ ಅವರಿಗೆ ಕರೆ ಮಾಡಿದೆ, ನನಗೆ ಆ ಸಿನಿಮಾ ಬಹಳ ಇಷ್ಟವಾಯ್ತು. ಆ ಸಿನಿಮಾ ಒಂದು ರೀತಿ ಜೀವ ತುಂಬಿದಂತಿತ್ತು. ಆ ಜೀವನವನ್ನು ನೋಡಿ, ಅನುಭವಿಸಿದವರಿಗೆ ಮಾತ್ರವೇ ಅಂಥಹಾ ಸಿನಿಮಾ ಮಾಡಲು ಸಾಧ್ಯ. ಅವರನ್ನು ಬಿಟ್ಟು ಇನ್ಯಾರೂ ಸಹ ಮಾಡಲು ಸಾಧ್ಯವಿಲ್ಲ ಎನಿಸುವಂತೆ ಆ ಸಿನಿಮಾನಲ್ಲಿ ಅವರು ನಟಿಸಿದ್ದಾರೆ. ನಾನು ಕರೆ ಮಾಡಿದಾಗ ಪರಿಚಯ ಮಾಡಿಕೊಂಡೆ, ಆದರೆ ಅವರು ಸರ್, ನೀವು ನನಗೆ ಚೆನ್ನಾಗಿ ಗೊತ್ತು, ಎಂದಾಗ ನನಗೆ ಖುಷಿ ಆಯ್ತು’ ಎಂದಿದ್ದಾರೆ.

ಮುಂದುವರೆದು ಮಾತನಾಡಿ, ‘ನಾನು ಸಹ ನಿಮ್ಮ ರೀತಿಯಲ್ಲೇ 2004 ರಲ್ಲಿ ನಟನಾ ವೃತ್ತಿ ಆರಂಭಿಸಿದೆ. ನೀವು ಸಿನಿಮಾದ ಎಲ್ಲ ವಿಭಾಗಗಳನ್ನೂ ಕಲಿತು, ಎಲ್ಲದರಲ್ಲೂ ಯಶಸ್ವಿ ಆಗಿದ್ದೀರಿ, ನಿಮ್ಮಿಂದ ಪ್ರಶಸ್ತಿ ಪಡೆದಿದ್ದು ಸಂತೋಷ’ ಎಂದರು. ಬಳಿಕ ‘ನನಗೆ ನಿಮ್ಮೊಂದಿಗೆ ಕೆಲಸ ಮಾಡುವ ಆಸೆ ಇದೆ. ವೇದಿಕೆ ಮೇಲಿದ್ದೇವೆ ಎಂದು ಈ ಮಾತು ಹೇಳುತ್ತಿಲ್ಲ, ಖಂಡಿತ ನಿಮ್ಮೊಂದಿಗೆ ನಟಿಸುವ ಆಸೆ ಇದೆ’ ಎಂದರು.

ಇದನ್ನೂ ಓದಿ:ಮಣಿರತ್ನಂ ಹೊಸ ಚಿತ್ರದಲ್ಲಿ ಸಾಯಿ ಪಲ್ಲವಿ, ವಿಜಯ್ ಸೇತುಪತಿ ಜೋಡಿ

ಬಳಿಕ ಮಾತನಾಡಿದ ರಿಷಬ್ ಶೆಟ್ಟಿ, ‘ಸರ್ (ವಿಜಯ್ ಸೇತುಪತಿ) ಅವರ ಟೀಂನ ಕಾರ್ತಿಕ್ ಸುಬ್ಬರಾಜು, ಬಾಬಿ ಇನ್ನೂ ಹಲವರು ಮೊದಲಿನಿಂದಲೂ ನನಗೆ ಪರಿಚಯ, ಬೆಂಗಳೂರಿನಲ್ಲಿ ಹಲವು ಬಾರಿ ಅವರನ್ನು ಭೇಟಿ ಮಾಡಿದ್ದೆ. ಕಾಂತಾರ’ ಸಿನಿಮಾ ನೋಡಿ ವಿಜಯ್ ಸೇತುಪತಿ ಅವರು ನನಗೆ ಕರೆ ಮಾಡಿ ಇಂಗ್ಲೀಷ್​​ನಲ್ಲಿ ಮಾತನಾಡಿದರು. ಆದರೆ ನಾನು ತಮಿಳಿನಲ್ಲಿ ಉತ್ತರಿಸಿದೆ. ಆ ಬಳಿಕ ನಮ್ಮ ಮಾತು ತಮಿಳಿನಲ್ಲಿಯೇ ಮುಂದುವರೆಯಿತು. ನಾನು ಅವರ ಸಿನಿಮಾಗಳು, ಸಂದರ್ಶನಗಳನ್ನೆಲ್ಲ ಕೇಳಿದ್ದೇನೆ. ವಡಿವೇಲು ಕಾಮಿಡಿ ಡೈಲಾಗ್ ಇದೆಯಲ್ಲ, ‘ವೈ ಬ್ಲಡ್, ಸೇಮ್ ಬ್ಲಡ್’ ಅದೇ ರೀತಿ’ ಎಂದರು.

‘ವಿಜಯ್ ಸೇತುಪತಿ ಅವರ ‘ವಿಕ್ರಂ ವೇದ’, ‘ಪಿಜ್ಜಾ’, ‘ನಾನುಮ್ ರೌಡಿ ದಾ’ ಸಿನಿಮಾಗಳು ನನಗೆ ಬಹಳ ಇಷ್ಟವಾದ ಸಿನಿಮಾಗಳು’ ಎಂದರು. ಬಳಿಕ ವಿಜಯ್ ಸೇತುಪತಿ ಅವರು, ರಿಷಬ್ ಶೆಟ್ಟಿ ಅವರಿಗೆ ಕತ್ತಿಯೊಂದನ್ನು ನೀಡಿ ಗೌರವಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

PSL 2026: ಪಾಕಿಸ್ತಾನ ಸೂಪರ್ ಲೀಗ್ ತೊರೆದ 8 ವಿದೇಶಿ ಆಟಗಾರರು

2026 ರ ಐಪಿಎಲ್ (PSL 2026) ಇದೇ ಮಾರ್ಚ್​ 28 ರಿಂದ ಆರಂಭವಾಗುತ್ತಿದೆ. ಬಿಸಿಸಿಐ (BCCI) ಕೂಡ ಇದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇತ್ತ ಐಪಿಎಲ್​ಗೆ ಟಕ್ಕರ್ ಕೊಡುವ ಸಲುವಾಗಿ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್ ಲೀಗ್ (PSL 2026) ಕೂಡ ಆರಂಭವಾಗುತ್ತಿದೆ. ಅದು ಕೂಡ ಐಪಿಎಲ್ ಆರಂಭವಾಗುವುದಕ್ಕಿಂತ ಎರಡು ದಿನ ಮೊದಲು. ಅಂದರೆ ಐಪಿಎಲ್ ಮಾರ್ಚ್​ 28 ರಿಂದ ಆರಂಭವಾದರೆ, ಪಿಎಸ್​ಎಲ್​ ಮಾರ್ಚ್​ 26 ರಿಂದ ಆರಂಭವಾಗುತ್ತಿದೆ. ಆದಾಗ್ಯೂ ಲೀಗ್ ಆರಂಭಕ್ಕೂ ಮುನ್ನವೇ ಪಿಎಸ್ಎಲ್​​ಗೆ ವಿದೇಶಿ ಆಟಗಾರರ ಅಲಭ್ಯತೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿಂದೆ ಕೆಲವು ಆಟಗಾರರು ಐಪಿಎಲ್‌ನಲ್ಲಿ ಆಡುವ ಸಲುವಾಗಿ ಪಿಎಸ್‌ಎಲ್ ತೊರೆದಿದ್ದರು. ಇದೀಗ ಇನ್ನು ಕೆಲವು ಆಟಗಾರರು ನಾನಾ ಕಾರಣಗಳನ್ನು ನೀಡಿ ಲೀಗ್​ನಿಂದ ಹಿಂದೆ ಸರಿದಿದ್ದಾರೆ. ಇಲ್ಲಿಯವರೆಗೆ ಎಂಟು ವಿದೇಶಿ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್​ನ 11 ನೇ ಸೀಸನ್​ನಿಂದ ಹೊರಬಂದಿದ್ದಾರೆ ಎಂದು ವರದಿಯಾಗಿದೆ.

ಪಿಎಸ್​ಎಲ್​ಗೆ ಕೈಕೊಟ್ಟ ವಿದೇಶಿ ಆಟಗಾರರು

ಪಾಕಿಸ್ತಾನದೊಂದಿಗಿನ ಗಡಿ ಸಂಘರ್ಷದಿಂದಾಗಿ, ಅಫ್ಘಾನಿಸ್ತಾನವು ಈಗಾಗಲೇ ತನ್ನ ಆಟಗಾರರನ್ನು ಪಿಎಸ್‌ಎಲ್‌ನಲ್ಲಿ ಭಾಗವಹಿಸುವುದನ್ನು ನಿಷೇಧಿಸಿದೆ. ಭಾಗವಹಿಸುತ್ತಿದ್ದ ಇತರ ದೇಶಗಳ ಆಟಗಾರರು ಸಹ ಹಿಂದೆ ಸರಿಯುವ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಚಿಂತೆ ಹೆಚ್ಚಿಸಿದ್ದಾರೆ. ವಿದೇಶಿ ಆಟಗಾರರು ಲೀಗ್ ಆರಂಭಕ್ಕೂ ಮುನ್ನವೇ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಪಿಸಿಬಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಪಿಸಿಬಿ ಅಂತಹ ಆಟಗಾರರ ವಿರುದ್ಧ ಕಾನೂನು ಕ್ರಮದ ಬೆದರಿಕೆಯನ್ನು ಹಾಕುತ್ತಿದೆ. ಆದಾಗ್ಯೂ ಆಟಗಾರರು ಪಿಸಿಬಿಯ ಎಚ್ಚರಿಕೆಯನ್ನು ಧಿಕ್ಕರಿಸುತ್ತಿದ್ದಾರೆ.

ಪಿಎಸ್‌ಎಲ್ ತೊರೆದ 8 ವಿದೇಶಿ ಆಟಗಾರರು

ಪಿಎಸ್‌ಎಲ್‌ 2026 ರಿಂದ ಇಲ್ಲಿಯವರೆಗೆ ಎಂಟು ವಿದೇಶಿ ಆಟಗಾರರು ಹಿಂದೆ ಸರಿದಿದ್ದಾರೆ. ಇತ್ತಿಚಿಗೆ ಆಸ್ಟ್ರೇಲಿಯಾದ ಜ್ಯಾಕ್ ಫ್ರೇಸರ್ ಮೆಕ್‌ಗುರ್ಕ್ ಕೂಡ ಈ ಲೀಗ್​ಗೆ ಅಲಭ್ಯರಾಗಿದ್ದಾರೆ. ರಾವಲ್ಪಿಂಡಿ ಫ್ರಾಂಚೈಸಿ ಪರ ಮೆಕ್‌ಗುರ್ಕ್ ಆಡಬೇಕಿತ್ತು. ಅವರ ಜೊತೆಗೆ ಕ್ವೆಟ್ಟಾ ಗ್ಲಾಡಿಯೇಟರ್ಸ್‌ ತಂಡದ ಪರ ಆಡಬೇಕಿದ್ದ ಆಸ್ಟ್ರೇಲಿಯಾದ ಸ್ಪೆನ್ಸರ್ ಜಾನ್ಸನ್ ಕೂಡ ಪಿಎಸ್‌ಎಲ್​ನಿಂದ ಹೊರಗುಳಿದಿದ್ದಾರೆ. ಹಾಗೆಯೇ ಕರಾಚಿ ಕಿಂಗ್ಸ್‌ ತಂಡದ ಪರ ಆಡಬೇಕಿದ್ದ ವೆಸ್ಟ್ ಇಂಡೀಸ್ ಆಟಗಾರರಾದ ಜಾನ್ಸನ್ ಚಾರ್ಲ್ಸ್ ಮತ್ತು ಲಾಹೋರ್ ಖಲಂದರ್ಸ್‌ ಪರ ಆಡಬೇಕಿದ್ದ ಗುಟ್ಟಕೇಶ್ ಮೋತಿ ಅವರನ್ನು PSL 2026 ನಿಂದ ತೆಗೆದುಹಾಕಲಾಗಿದೆ.

ಹೈದರಾಬಾದ್ ಕಿಂಗ್ಸ್‌ಮೆನ್ ತಂಡದಲ್ಲಿದ್ದ ದಕ್ಷಿಣ ಆಫ್ರಿಕಾದ ಓಟ್ನೀಲ್ ಬಾರ್ಟ್‌ಮನ್ ಕೂಡ ಪಿಎಸ್‌ಎಲ್‌ನ 11 ನೇ ಸೀಸನ್‌ನಿಂದ ಹಿಂದೆ ಸರಿದಿದ್ದಾರೆ. ಪೇಶಾವರ್ ಝಲ್ಮಿ ತಂಡದಲ್ಲಿದ್ದ ಇಂಗ್ಲೆಂಡ್‌ನ ಟೈಮಲ್ ಮಿಲ್ಸ್ ಕೂಡ ಪಿಎಸ್‌ಎಲ್ 2026 ಗೆ ವಿದಾಯ ಹೇಳಿದ್ದಾರೆ. ಇಸ್ಲಾಮಾಬಾದ್ ಯುನೈಟೆಡ್ ತಂಡದಲ್ಲಿದ್ದ ಜಿಂಬಾಬ್ವೆಯ ಬ್ಲೆಸಿಂಗ್ ಮುಜರಬಾನಿ ಕೂಡ ಪಾಕಿಸ್ತಾನದ ಟಿ20 ಲೀಗ್‌ನಲ್ಲಿ ಆಡಲು ನಿರಾಕರಿಸಿದ್ದಾರೆ. ಪೇಶಾವರ್ ಝಲ್ಮಿ ತಂಡದಲ್ಲಿದ್ದ ಅಫ್ಘಾನಿಸ್ತಾನದ ರಹಮಾನಲ್ಲಾ ಗುರ್ಬಾಜ್ ಕೂಡ ಪಿಎಸ್‌ಎಲ್ 2026 ರಿಂದ ಹಿಂದೆ ಸರಿದಿದ್ದಾರೆ.

ಪಿಎಸ್ಎಲ್ ತೊರೆಯಲು ಕಾರಣವೇನು?

ಪಾಕಿಸ್ತಾನ ಸೂಪರ್ ಲೀಗ್ ತೊರೆಯುವ ಈ ಆಟಗಾರರ ನಿರ್ಧಾರದ ಹಿಂದಿನ ಕಾರಣಗಳು ವೈಯಕ್ತಿಕ ಅಥವಾ ಐಪಿಎಲ್ ಸಂಬಂಧಿತವಾಗಿವೆ. ಪಿಎಸ್ಎಲ್ ತೊರೆದ ವಿದೇಶಿ ಆಟಗಾರರಲ್ಲಿ, ಕೆಲವರು ಈಗಾಗಲೇ ಐಪಿಎಲ್ 2026 ರಲ್ಲಿ ಆಡಲು ಆಹ್ವಾನಗಳನ್ನು ಸ್ವೀಕರಿಸಿದ್ದಾರೆ. ಇತರರು ಕೂಡ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಉಳಿದ ಆಟಗಾರರು ವೈಯಕ್ತಿಕ ಕಾರಣಗಳಿಂದ ಪಿಎಸ್ಎಲ್ ತೊರೆಯಲು ನಿರ್ಧರಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರದ ಮುಖ್ಯಸ್ಥರಾಗಿ ಸುದೀರ್ಘ ಸೇವೆ ಸಲ್ಲಿಸಿದ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಧಾನಿ ಮೋದಿ

ನವದದೆಹಲಿ, ಮಾರ್ಚ್​ 22: ಪ್ರಧಾನಿ ನರೇಂದ್ರ ಮೋದಿ(Narendra Modi) ಭಾರತೀಯ ರಾಜಕೀಯ ಇತಿಹಾಸದಲ್ಲಿ ಅಭೂತಪೂರ್ವ ಮೈಲಿಗಲ್ಲು ಸಾಧಿಸಿದ್ದಾರೆ. ಅವರು ಭಾರತದಲ್ಲಿ ಸರ್ಕಾರದ ಮುಖ್ಯಸ್ಥರಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಅವರು ಈ ಐತಿಹಾಸಿಕ ಸಾಧನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿಯನ್ನು ಹಂಚಿಕೊಂಡು ಪ್ರಧಾನಿಯನ್ನು ಅಭಿನಂದಿಸಿದ್ದಾರೆ.

ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಅವರ 8930 ದಿನಗಳ ಅಧಿಕಾರಾವಧಿಯನ್ನು ಪ್ರಧಾನಿ ಮೋದಿ ಮೀರಿಸಿದ್ದಾರೆ. ಸರ್ಕಾರದ ಮುಖ್ಯಸ್ಥರಾಗಿ ಸಾರ್ವಜನಿಕ ಹುದ್ದೆಯಲ್ಲಿ 8,931 ದಿನಗಳನ್ನು ಪೂರೈಸುವ ಮೂಲಕ ಪ್ರಧಾನಿ ಮೋದಿ ಈ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ. ದೇಶಕ್ಕಾಗಿ ಅವರ ಅಚಲ ಸಮರ್ಪಣೆ ಮತ್ತು ರಾಷ್ಟ್ರ ಮೊದಲು ನೀತಿಯ ಫಲಿತಾಂಶ ಇದು ಎಂದು ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ.

ರಕ್ಷಣಾ ಸಚಿವರು ತಮ್ಮ ಸಂದೇಶದಲ್ಲಿ ಪ್ರಧಾನಿಯವರ ಇದುವೆರೆಗಿನ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ, ಪ್ರಧಾನಿ ಮೋದಿಯವರ ಜೀವನವು ದೇಶ ಮತ್ತು ಅದರ ಜನರ ಮೇಲಿನ ಸಂಪೂರ್ಣ ಸಮರ್ಪಣೆಗೆ ಒಂದು ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಪ್ರಧಾನಿ ಮೋದಿ ಮಾತುಕತೆ

ಗುಜರಾತ್ ಮುಖ್ಯಮಂತ್ರಿಯಾಗಿ ಅವರ ಅಧಿಕಾರಾವಧಿ ಪ್ರಾರಂಭವಾಯಿತು. ಅಲ್ಲಿ ಅವರು ಅಭಿವೃದ್ಧಿಗೆ ಹೊಸ ಮಾನದಂಡವನ್ನು ಸ್ಥಾಪಿಸಿದ್ದರು. ಮುಖ್ಯಮಂತ್ರಿಯಿಂದ ಪ್ರಧಾನಿವರೆಗಿನ ಅವರ ಪ್ರಯಾಣವು ನಿರಂತರ ಸೇವೆ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಅವರ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ರಾಜನಾಥ್ ಸಿಂಗ್ ಪೋಸ್ಟ್​

ಪ್ರಧಾನಿಯವರ ಕಾರ್ಯಶೈಲಿಯನ್ನು ಶ್ಲಾಘಿಸಿದ ರಾಜನಾಥ್ ಸಿಂಗ್, ಈ ಸಾಧನೆ ಕೇವಲ ಅಂಕಿ-ಅಂಶಗಳಿಗೆ ಸೀಮಿತವಾಗಿಲ್ಲ, ಆಡಳಿತದಲ್ಲಿ ಅವರ ಸಮಗ್ರತೆ ಮತ್ತು ಪ್ರತಿಯೊಬ್ಬ ನಾಗರಿಕರಿಗಾಗಿ ಅವರ ಅವಿಶ್ರಾಂತ ಪ್ರಯತ್ನಗಳ ಪ್ರತಿಬಿಂಬವಾಗಿದೆ. ಈ ಸಾಧನೆಗಾಗಿ ಅಭಿನಂದನೆಗಳು, ಅವರ ನಾಯಕತ್ವವು ಸಮಗ್ರತೆ ಮತ್ತು ಸೇವಾ ಮನೋಭಾವದಿಂದ ತುಂಬಿದೆ ಎಂದು ಬರೆದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್

ನಟ ಅನಿರುದ್ಧ ಜತ್ಕರ್ (Aniruddha Jatkar) ಅವರು ಕಿರುತೆರೆ ಮತ್ತು ಸಿನಿಮಾಗಳಲ್ಲಿ ಹೆಸರು ಮಾಡಿದ್ದಾರೆ. ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿರುವ ಅವರು ಸಾಮಾಜಿಕ ಕಳಕಳಿ ಕೂಡ ಹೊಂದಿದ್ದಾರೆ. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಬಗ್ಗೆ ಜನರಲ್ಲಿ ಅವರು ಜಾಗೃತಿ ಮೂಡಿಸುತ್ತಾರೆ. ಇತ್ತೀಚೆಗೆ ಅವರು ಬೆಂಗಳೂರಿನಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ (Cleanliness Drive) ಭಾಗಿಯಾದರು. ಆ ಸಂದರ್ಭದ ವಿಡಿಯೋ ಇಲ್ಲಿದೆ. ವಿಧಾನ ಸೌಧದ ಮುಂಭಾಗ ಸ್ವಚ್ಛ ಮಾಡುವ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ. ಅನಿರುದ್ಧ ಜತ್ಕರ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಗರದ ಯಾವುದೇ ಭಾಗದಲ್ಲಿ ಕಸದ ರಾಶಿ ಕಂಡರೂ ಕೂಡ ಅದರ ವಿಡಿಯೋ ಪೋಸ್ಟ್ ಮಾಡಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರುವ ಕೆಲಸವನ್ನು ಅನಿರುದ್ಧ್ ಅವರು ಮಾಡುತ್ತಾರೆ. ಅವರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನ ಬರ್ಬರ ಕೊಲೆ; ಹತ್ಯೆಯಾದವನ ಮೇಲಿವೆ 10ಕ್ಕೂ ಹೆಚ್ಚು ಕೇಸ್​ಗಳು!

ಬೆಂಗಳೂರು, ಮಾರ್ಚ್​ 22: ನಗರದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ  (Murder) ಮಾಡಲಾಗಿದೆ. ಇಂದು (ಮಾ.22)ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ಟಿ.ಸಿ.ಪಾಳ್ಯ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಿರಣ್ (25) ಎಂಬ ಯುವಕನನ್ನು ದುಷ್ಕರ್ಮಿಗಳು ತಲೆ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಳೆಯ ದ್ವೇಷಕ್ಕೆ ನಡೀತಾ ಕೊಲೆ?

ಕುಡಿದು ಗಲಾಟೆ ಮಾಡಿದ ಪ್ರಕರಣಗಳು ಸೇರಿದಂತೆ ಕೊಲೆಯಾದ ಕಿರಣ್ ವಿರುದ್ಧ ಕೆ.ಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು ಎಂಬ ಮಾಹಿತಿಯನ್ನು ಪೊಲೀಸರು ಬಿಚ್ಚಿಟ್ಟಿದ್ದು, ಹಳೆಯ ದ್ವೇಷವೇ ಕೊಲೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಯ ಮುನ್ನರಾತ್ರಿ ಕೂಡ ಕಿರಣ್ ಕುಡಿದು ಗಲಾಟೆ ಮಾಡಿದ್ದು, ತಡರಾತ್ರಿವರೆಗೆ ವಾಗ್ವಾದ ನಡೆದ ಬಳಿಕ ಮುಂಜಾನೆ ಈ ದಾಳಿ ನಡೆದಿರುವ ಸಾಧ್ಯತೆಯಿದೆ ಎಂದು ಪೊಲಿಸರು ಹೇಳಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧ ಕಾರ್ಯ ಕೈಗೊಂಡಿದ್ದು, ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಸ್ಥಳೀಯ ನಿವಾಸಿ ಗೋಪಾಲ್ ಮಾತನಾಡಿ, ಕಿರಣ್ ತನ್ನ ತಾಯಿಯೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಆಟೋ ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ತಿಳಿಸಿದ್ದಾರೆ. ಒಟ್ಟಾರೆ, ಈ ಕೊಲೆ ಪ್ರಕರಣ ನಗರದಲ್ಲಿ ಆತಂಕ ಮೂಡಿಸಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಚುರುಕುಗೊಂಡಿದ್ದಾರೆ.

ಇದನ್ನೂ ಓದಿ ಮೂಡಬಿದ್ರೆ ಇನ್ಸ್​ಪೆಕ್ಟರ್ ಕಾಮಕಾಂಡ ಪ್ರಕರಣ: ಸಂತ್ರಸ್ತೆಗೆ ಜೀವ ಬೆದರಿಕೆ ಹಾಕಿಸಿದ್ರಾ ಸಂದೇಶ್​​​​​?

ಮೊಸಳೆ ದಾಳಿಗೆ ಮೀನುಗಾರ ಬಲಿ

ಯಾದಗಿರಿ ಜಿಲ್ಲೆಯ ಜೋಳದಡಗಿ ಗ್ರಾಮದ ಬಳಿ ಭೀಮಾ ನದಿಯಲ್ಲಿ ಮೀನುಗಾರ ನಾಗರಾಜ್ (28) ದುರ್ಮರಣಕ್ಕೀಡಾದ ಘಟನೆ ನಡೆದಿದೆ. ನಸುಕಿನ ಜಾವ ಮೀನು ಹಿಡಿಯಲು ತೆರಳಿದ್ದ ನಾಗರಾಜ್, ಬೆಂಡ್ ಮೇಲೆ ಕುಳಿತು ಬಲೆ ಹಾಕುತ್ತಿದ್ದಾಗ ಬೃಹತ್ ಮೊಸಳೆ ದಾಳಿ ಮಾಡಲು ಮುಂದಾಗಿ ಬೆಂಡ್ ಕೆಡವಿದೆ. ನದಿಗೆ ಬಿದ್ದ ಆತ ಈಜಾಡಿ ಪಾರಾಗಲು ಯತ್ನಿಸಿದರೂ ಕಾಲಿಗೆ ಮೀನಿನ ಬಲೆ ಸಿಲುಕಿಕೊಂಡು ಹೊರಬರಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಸ್ಥಳೀಯ ಮೀನುಗಾರರು ಕೂಗಿದ ಪರಿಣಾಮ ಮೊಸಳೆ ಪರಾರಿಯಾಗಿದ್ದು, ಬಳಿಕ ಮೃತದೇಹವನ್ನು ಹೊರತೆಗೆಯಲಾಗಿದೆ. ಪ್ರಕರಣ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Optical Illusion: ಜಸ್ಟ್‌ 10 ಸೆಕೆಂಡುಗಳಲ್ಲಿ ಹೂವುಗಳ ನಡುವೆ ಇರುವ ಗಂಟೆಯನ್ನು ಕಂಡು ಹಿಡಿಯಬಲ್ಲಿರಾ

ಆಪ್ಟಿಕಲ್‌ ಇಲ್ಯೂಷನ್‌ (optical illusion) ಹಾಗೂ ಬ್ರೈನ್ ಟೀಸರ್ ನಂತಹ ಒಗಟಿನ ಚಿತ್ರಗಳೇ ಹಾಗೆ. ಕ್ಷಣಾರ್ಧದಲ್ಲಿ ಈ ಒಗಟು ಬಿಡಿಸಿ ಉತ್ತರ ಕಂಡುಕೊಳ್ಳಲು ಅಸಾಧ್ಯ. ಹೆಚ್ಚಿನವರು ಇಂತಹ ಒಗಟಿನ ಆಟಗಳನ್ನು ಬಿಡಿಸಲು ಹೋಗಿ ಕೈ ಚೆಲ್ಲಿ ಕುಳಿತುಕೊಳ್ಳುತ್ತಾರೆ. ಆದರೆ ಈ ಟ್ರಿಕ್ಕಿ ಚಿತ್ರಗಳು ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಯೋಚನಾ ಸಾಮರ್ಥ್ಯ ಪರೀಕ್ಷಿಸಲು ಸಹಾಯ ಮಾಡುತ್ತವೆ. ಈ ಉದ್ಯಾನವನದಲ್ಲಿ ಹೂವುಗಳ ನಡುವೆ ಗಂಟೆಯೊಂದಿದೆ. ನೀವು ಒಗಟು ಬಿಡಿಸೋದ್ರಲ್ಲಿ ಪಂಟಾರಾಗಿದ್ರೆ ಕೇವಲ ಹತ್ತು ಒಳಗೆ ಈ ವಸ್ತುವನ್ನು ಪತ್ತೆ ಹಚ್ಚಿ ನೋಡೋಣ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು ನೋಡುವುದಕ್ಕೆ ಕಲರ್ ಫುಲ್ ಆಗಿದ್ದು, ತುಂಬಾನೇ ಟ್ರಿಕ್ಕಿಯಾಗಿದೆ. ಉದ್ಯಾನವನ ನೋಟವನ್ನು ತೋರಿಸುತ್ತದೆ. ಉದ್ಯಾನವನದಲ್ಲಿ ವರ್ಣರಂಜಿತ ಹೂವುಗಳಿವೆ. ಆದರೆ ಹೂವುಗಳ ಮಧ್ಯದಲ್ಲಿ ಒಂದು ಗಂಟೆಯೂ ಇದೆ. ಈ ಫೋಟೋದಲ್ಲಿರುವ ಸವಾಲು ಗಂಟೆ ಎಲ್ಲಿದೆ ಎಂದು ಪತ್ತೆ ಹಚ್ಚುವುದು. 10 ಸೆಕೆಂಡುಗಳ ಒಳಗೆ ಗಂಟೆಯನ್ನು ಕಂಡುಹಿಡಿಯಲು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಶಕ್ತಿಗೆ ಹ್ಯಾಟ್ಸ್ ಆಫ್ ಹೇಳುತ್ತೇವೆ.

ಇದನ್ನೂ ಓದಿ:ಹದ್ದಿನ ಕಣ್ಣು ನಿಮ್ಮದಾಗಿದ್ರೆ ಮರಳಿನ ರಾಶಿಯಲ್ಲಿ ಅಡಗಿ ಕುಳಿತಿರುವ ಹಾವನ್ನು ಕಂಡು ಹಿಡಿಯುವಿರಾ

ಗಂಟೆ ನಿಮ್ಮ ಕಣ್ಣಿಗೆ ಕಾಣಿಸಿತೇ?

ಎಷ್ಟೇ ಹುಡುಕಿದರೂ ಚಿತ್ರದಲ್ಲಿ ಮರೆ ಮಾಡಲಾಗಿರುವ ಗಂಟೆಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ತಲೆ ಕೆಡಿಸಿಕೊಳ್ಳಬೇಡಿ. ಹೂವುಗಳ ನಡುವೆ ಇರುವ ಈ ಗಂಟೆಯನ್ನು ಹುಡುಕಲು ನೀವು ಈ ಚಿತ್ರವನ್ನು ವಿಭಾಗಗಳಾಗಿ ವಿಂಗಡಿಸುವುದು ಉತ್ತಮ. ಇಷ್ಟು ಮಾಡಿದ ಮೇಲೆ ಈ ವಸ್ತುವನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದಾದರೆ ನಾವೇ ಈ ಕೆಳಗಿನ ಚಿತ್ರದಲ್ಲಿ ಗಂಟೆಯನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಮೂಡಬಿದ್ರೆ ಇನ್ಸ್​ಪೆಕ್ಟರ್ ಕಾಮಕಾಂಡ ಪ್ರಕರಣ: ಸಂತ್ರಸ್ತೆಗೆ ಜೀವ ಬೆದರಿಕೆ ಹಾಕಿಸಿದ್ರಾ ಸಂದೇಶ್​​​​​?

ಮಂಗಳೂರು, ಮಾರ್ಚ್​​ 22: ಮೂಡಬಿದ್ರೆ ಇನ್ಸ್​ಪೆಕ್ಟರ್​​​ ಸಂದೇಶ್​​ ಕಾಮಕಾಂಡ ಪ್ರಕರಣ ಸಂಬಂಧ ಬೆಳ್ತಂಗಡಿ ತಾಲೂಕಿನ ವೇಣೂರು ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದ ಸಂತ್ರಸ್ತ ಶಿಕ್ಷಕಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಪ್ರಕರಣ ಬಯಲಾಗುತ್ತಲೇ ಸಂತ್ರಸ್ತೆಗೆ ಮಾ.19ರಂದು ಸ್ಮಿತಾ ಮತ್ತು ಸುನೀತಾ ಲೋಬೋ ಎಂಬುವವರ ಮೂಲಕ ಇನ್ಸ್​ಪೆಕ್ಟರ್​​​ ಸಂದೇಶ್​​ ಬೆದರಿಕೆ ಹಾಕಿರೋದಾಗಿ ದೂರಲಾಗಿದೆ. ಇಬ್ಬರು ಮಹಿಳೆಯರನ್ನ ಸಂತ್ರಸ್ತೆ ಮನೆಗೆ ಕಳಿಸಿ ಇಲ್ಲಿಯವರೆಗೂ ನಡೆದ ವಿಚಾರಗಳ ಬಗ್ಗೆ ಬಾಯಿ ಬಿಡಬಾರದು. ಬಾಯಿ ಬಿಟ್ಟರೆ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿದೆ. ಜೀವಂತವಾಗಿ ಬಿಡುವುದಿಲ್ಲ ಎಂದೂ ತಿಳಿಸಿರೋದಾಗಿ ಆರೋಪಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ವೇಣೂರು ಠಾಣೆಯಲ್ಲಿ ಸಂದೇಶ್​​ ವಿರುದ್ಧ ಸಂತ್ರಸ್ತೆ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಅತ್ಯಾಚಾರ ಆರೋಪದಡಿ ಎಫ್​ಐಆರ್​ ದಾಖಲಾಗಿದ್ದು, 2018 ರಿಂದ 2023ರವರೆಗೆ ಶಿಕ್ಷಕಿ ಮನೆಗೆ ಹೋಗಿ ಬೆದರಿಸಿ ಅತ್ಯಾಚಾರ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. 2020ರಲ್ಲಿ ಸಂದೇಶ್​​​ ಬೆಳ್ತಂಗಡಿ ಸರ್ಕಲ್ ವ್ಯಾಪ್ತಿಯಲ್ಲಿರುವ ವೇಣೂರು ಪೊಲೀಸ್ ಠಾಣೆ ಸರ್ಕಲ್ ಇನ್ಸ್​ಪೆಕ್ಟರ್​​​ ಆಗಿದ್ದರು. ಹೀಗಾಗಿ ವೇಣೂರು ಠಾಣಾ ವ್ಯಾಪ್ತಿಯಲ್ಲೇ ಅತ್ಯಾಚಾರ ಆರೋಪದಡಿ ಸೆಕ್ಷನ್ 376(2)(a)(1), 376(2)(n), 384, 506ರಡಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಮೂಡಬಿದ್ರೆ ಇನ್ಸ್​ಪೆಕ್ಟರ್​ ಸಂದೇಶ್​​ಗೆ ಬಿಗ್​​ ಶಾಕ್​​; ಅತ್ಯಾಚಾರ ಪ್ರಕರಣ ದಾಖಲು

ಮತ್ತೊಂದೆಡೆ ಬಗೆದಷ್ಟೂ ಸಂದೇಶ್​​ ಕಾಮಕಾಂಡ ಬಯಲಾಗುತ್ತಿದ್ದು, ಉಂಡು ಹೋದ ಕೊಂಡು ಹೋದ ಎಂಬ ಮಾತಿಗೆ ಪ್ರಕರಣ ಹೇಳಿ ಮಾಡಿಸಿದಂತೆ ಭಾಸವಾಗುತ್ತಿದೆ. ಅತ್ಯಾಚಾರ ಸಂತ್ರಸ್ತೆ ಶಿಕ್ಷಕಿ ಬಳಿ ಇನ್ಸ್​​ಪೆಕ್ಟರ್​​ 16 ಲಕ್ಷ ರೂಪಾಯಿ ಹಣವನ್ನೂ ಲಪಟಾಯಿಸಿದ್ದ ಎನ್ನಲಾಗಿದ್ದು, 13 ಲಕ್ಷ ನಗದು ಮತ್ತು 3,62,000 ರೂಪಾಯಿ ಹಣವನ್ನು ಬ್ಯಾಂಕಿಗೆ ವರ್ಗಾವಣೆ ಮಾಡಲಾಗಿತ್ತು. ಈ ಬಗ್ಗೆ ವೇಣೂರು ಠಾಣೆಗೆ ಸಂತ್ರಸ್ತೆ ದಾಖಲೆಗಳನ್ನೂ ನೀಡಿದ್ದಾಳೆ ಎನ್ನಲಾಗಿದೆ. ಸಂದೇಶ್ ವಿರುದ್ಧ ಇಬ್ಬರು ಮಹಿಳೆಯರು ಮಾಡಿದ್ದ ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ಪೊಲೀಸ್ ವರದಿ ಹೇಳಿದ್ದರೂ ಈಗ ಕೇಳಿಬಂದಿರುವ ಆರೋಪಗಳು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಾಗಲಕೋಟೆ ಉಪ ಚುನಾವಣೆ: ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ

ಬಾಗಲಕೋಟೆ, ಮಾರ್ಚ್​​ 22: ಹೆಚ್​​.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್​​ ಅಭ್ಯರ್ಥಿಯಾಗಿ ಮೇಟಿ ಅವರ ದ್ವಿತೀಯ ಪುತ್ರ ಉಮೇಶ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಆ ಬೆನ್ನಲ್ಲೇ ಉಮೇಶ್ ಮೇಟಿ ಅವರು ತಮ್ಮ ತಂದೆಯ ಮೇಲಿನ ಅನುಕಂಪ ಮತ್ತು ಅವರ ಮೇಲಿನ ಪ್ರೀತಿಗೆ ಮತದಾರರು ಸ್ಪಂದಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೆಚ್.ವೈ. ಮೇಟಿ ಅವರು ಮಾಡಿರುವ ಅನೇಕ ಜನಪರ ಕೆಲಸಗಳು, ವಿಶೇಷವಾಗಿ ವೈದ್ಯಕೀಯ ಕಾಲೇಜು ಸ್ಥಾಪನೆಯಂತಹ ಐತಿಹಾಸಿಕ ಕಾರ್ಯಗಳನ್ನು ಸ್ಮರಿಸಿದ ಅವರು ತಂದೆ ನೆನೆದು ಭಾವುಕರಾದ ಪ್ರಸಂಗವೂ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ

ಶಿಮ್ಲಾ, ಮಾರ್ಚ್​ 22: ಹಿಮಾಚಲ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಭೂಕುಸಿತ ಉಂಟಾಗಿದೆ. ಮಂಡಿ ಜಿಲ್ಲೆಯ ಕೋಟ್ಲಿ ಹಳ್ಳಿಯಲ್ಲಿ ಭೂಕುಸಿತ ಉಂಟಾಗಿದೆ. ಬಂಡೆ, ಮಣ್ಣು ಎಲ್ಲವೂ ರಸ್ತೆಗೆ ಅಡ್ಡವಾಗಿ ಬಿದ್ದಿವೆ. ಎರಡು ದಿನಗಳ ಹಿಂದಷ್ಟೇ ಕುಲ್ಲುವಿನ ಪಾರ್ವತಿ ಕಣಿವೆಯಲ್ಲಿ, ಘಾಟಿಗಢದಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದ್ದರಿಂದ ಮಣಿಕರಣ್-ಬರ್ಶೈನಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಜಚ್ನಿಯಲ್ಲಿ ಮಣ್ಣು ಕುಸಿತ ಸಂಭವಿಸಿ ಭುಂತರ್-ಮಣಿಕರಣ್ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸಂಪರ್ಕ ರಸ್ತೆಯ ಎರಡೂ ಬದಿಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಇದೀಗ ಕೋಟ್ಲಿಯಲ್ಲೂ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ನಾನು ಮೋದಿಯ ಹೆಮ್ಮೆಯ ಅಂಧಭಕ್ತೆ’: ‘ಧುರಂಧರ್ 2’ ನೋಡಿ ಹೇಳಿಕೆ ನೀಡಿದ ನಟಿ ರೇಣು ದೇಸಾಯಿ

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ (Dhurandhar 2) ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಜೊತೆಗೆ ಸೆಲೆಬ್ರಿಟಿಗಳ ಮೆಚ್ಚುಗೆಯನ್ನೂ ಗಳಿಸುತ್ತಿದೆ. ಪವನ್ ಕಲ್ಯಾಣ್ ಮಾಜಿ ಪತ್ನಿ, ನಟಿ ರೇಣು ದೇಸಾಯಿ (Renu Desai) ಅವರು ಈ ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಮಗಿರುವ ಅಭಿಮಾನವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ‘ನಾನು ಮೋದಿಜಿಯ ಹೆಮ್ಮೆಯ ಅಂಧಭಕ್ತೆ’ ಎಂದು ಅವರು ಹೇಳಿದ್ದಾರೆ. ಅವರ ಈ ಮಾತಿನ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.

ರೇಣು ದೇಸಾಯಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಿನಿಮಾ ಆರಂಭದಲ್ಲಿ ಬರುವ ಭಗವದ್ಗೀತೆಯ ಶ್ಲೋಕವನ್ನು (ಅಧ್ಯಾಯ 2, ಶ್ಲೋಕ 47) ಹಂಚಿಕೊಂಡಿದ್ದಾರೆ. ಅದರ ಜೊತೆಗೆ, ‘ನಮ್ಮ ಸಶಸ್ತ್ರ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳ ಬಗ್ಗೆ ನಿಮಗೆ ಕಿಂಚಿತ್ತಾದರೂ ಗೌರವವಿದ್ದರೆ, ಈ ಸಿನಿಮಾ ನೋಡಿ. ಅವರ ಕಾರಣದಿಂದಲೇ ನಾವು ಮನೆಯಲ್ಲಿ ಶಾಂತಿಯಿಂದ ನಿದ್ದೆ ಮಾಡುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

‘ಧುರಂಧರ್ 2’ ಸಿನಿಮಾದ ಒಂದು ದೃಶ್ಯದಲ್ಲಿ ಭೂಗತ ಲೋಕದ ಡಾನ್ ದಾವೂದ್ ಇಬ್ರಾಹಿಂ (ಬಡೇ ಸಾಹಬ್ ಪಾತ್ರ), ‘ಈ ಚಾಯ್‌ವಾಲಾ ಭಾರತದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ನಮ್ಮವರಲ್ಲಿ ಭಯ ಹೆಚ್ಚಾಗಿದೆ’ ಎಂದು ಹೇಳುವ ಸಂಭಾಷಣೆಯಿದೆ. ಈ ದೃಶ್ಯದ ವಿಡಿಯೋವನ್ನು ಹಂಚಿಕೊಂಡಿರುವ ರೇಣು ದೇಸಾಯಿ, ‘ಬಿಜೆಪಿ ಮತ್ತು ನಮ್ಮ ಅದ್ಭುತ ಪ್ರಧಾನಿ ಮೋದಿಜಿಯ ಹೆಮ್ಮೆಯ ಅಂಧಭಕ್ತೆ ನಾನು’ ಎಂದು ಬರೆದುಕೊಳ್ಳುವ ಮೂಲಕ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಈ ಸಿನಿಮಾದ ಬಗ್ಗೆ ಪ್ರೇಕ್ಷಕರ ವಲಯದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಅನೇಕರು ಈ ಸಿನಿಮಾವನ್ನು ಒಂದು ಪ್ರೊಪಗಾಂಡ ಎಂದು ಕರೆದಿದ್ದಾರೆ. ಸಾಕಷ್ಟು ನೆಗೆಟಿವ್ ವಿಮರ್ಶೆಗಳು ಬರುತ್ತಿವೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಕೂಡ ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅದರ ನಡುವೆಯೂ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

ಇದನ್ನೂ ಓದಿ: ‘ಧುರಂಧರ್ 2’ ಪ್ರೊಪಗಾಂಡ ಸಿನಿಮಾ ಎಂದವರಿಗೆ ತಿರುಗೇಟು ನೀಡಿದ ಅನುಪಮ್ ಖೇರ್

2025ರ ಸೂಪರ್ ಹಿಟ್ ‘ಧುರಂಧರ್’ ಚಿತ್ರದ ಸೀಕ್ವೆಲ್ ಆಗಿರುವ ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿರ್ದೇಶಕ ಆದಿತ್ಯ ಧರ್ ಅವರು ಈ ಸಿನಿಮಾದಿಂದ ಜನಪ್ರಿಯತೆ ಹೆಚ್ಚಿಕೊಂಡಿದ್ದಾರೆ. ಈಗಾಗಲೇ ಭಾರತದಲ್ಲಿ ಈ ಸಿನಿಮಾದ ಕಲೆಕ್ಷನ್ 300 ಕೋಟಿ ರೂಪಾಯಿ ಮೀರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version