Video: ನನ್ನ ಜೀವನದ ತಪ್ಪು ನಿರ್ಧಾರ ಇದು; ಬಸವನಗುಡಿಯಿಂದ ಬೆಳ್ಳಂದೂರಿಗೆ ಸ್ಥಳಾಂತರಗೊಂಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ನಿವಾಸಿ

Video: ನನ್ನ ಜೀವನದ ತಪ್ಪು ನಿರ್ಧಾರ ಇದು; ಬಸವನಗುಡಿಯಿಂದ ಬೆಳ್ಳಂದೂರಿಗೆ ಸ್ಥಳಾಂತರಗೊಂಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ನಿವಾಸಿ

ಬೆಂಗಳೂರು, ಮಾರ್ಚ್‌ 22; ಉದ್ಯೋಗದ ನಿಮ್ಮಿತ್ತ ಅಥವಾ ವಯಸ್ಸಾದ ತಂದೆತಾಯಿಯನ್ನು ನೋಡಿಕೊಳ್ಳಬೇಕೆನ್ನುವ ಕಾರಣಕ್ಕೆ ಒಂದು ಊರಿನಿಂದ ಇನ್ನೊಂದು ಊರಿಗೆ ಸ್ಥಳಾಂತರಗೊಳ್ಳುತ್ತಾರೆ. ಕೆಲವೊಮ್ಮೆ ಹೊಸ ಊರು, ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಬಹುದು. ಆದರೆ ಇದೀಗ ಬೆಂಗಳೂರು (Bengaluru) ಜೀವನವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬ ಸ್ಥಳೀಯ ನಿವಾಸಿಯೊಬ್ಬರ ಹೃದಯಸ್ಪರ್ಶಿ ಪೋಸ್ಟ್
ಭಾರಿ ಚರ್ಚೆಗೆ ನಾಂದಿ ಹಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಸ್ಕ್ರೀನ್‌ಗ್ರಾಬ್ (screengrab) ಹೆಸರಿನ ರೆಡ್ಡಿಟ್ ಪೋಸ್ಟ್‌ನಲ್ಲಿ ಸ್ಥಳೀಯ ನಿವಾಸಿಯೊಬ್ಬರು ಬೆಂಗಳೂರಿನ ಸರಳ ಜೀವನವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕಳೆದ 5 ವರ್ಷಗಳಿಂದ ನಾನು ಬೆಳ್ಳಂದೂರು ಪ್ರದೇಶದಲ್ಲಿ ವಾಸಿಸುತ್ತಿದ್ದೇನೆ, ಬಸವನಗುಡಿ ಬಳಿ ವಾಸಿಸುತ್ತಿದ್ದ ನನಗೆ ಈ ಸ್ಥಳಾಂತರವು ಯೋಗ್ಯವಾಗಿಲ್ಲ ಎಂದೆನಿಸುತ್ತಿದೆ. ಕೇವಲ ಸಕಾರಾತ್ಮಕ ವಿಷಯವೆಂದರೆ ಕಡಿಮೆ ಸಮಯದಲ್ಲಿ ಆಫೀಸ್ ತಲುಪಬಹುದು ಎನ್ನುವುದಷ್ಟೇ. ಆದರೆ ವಾರಾಂತ್ಯ ಬಂದಾಗ ನಾನು ಬೇರೆ ರಾಜ್ಯದಲ್ಲಿ ವಾಸಿಸುತ್ತಿದ್ದೇನೆ ಎಂದು ಭಾಸವಾಗುತ್ತದೆ ಎಂದು ಹೇಳಿದ್ದಾರೆ.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

ಆ ರೀತಿಯ ಸ್ವಾಧೀನ ಭಾವನೆ ಅಸ್ತಿತ್ವದಲ್ಲಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅಪಾರ್ಟ್ಮೆಂಟ್ ಖರೀದಿಸಿರುವುದು ಇದುವರೆಗೆ ನಾನು ಮಾಡಿದ ದೊಡ್ಡ ತಪ್ಪು ಎಂದು ನಾನು ಭಾವಿಸುತ್ತೇನೆ, ಒಂದೇ ಒಂದು ಸ್ಥಳೀಯ ಉತ್ಸವ ಆಚರಣೆಯನ್ನು ನಾನು ನೋಡಿಲ್ಲ, ಇದು ನಾನು ಒಬ್ಬ ಕನ್ನಡಿಗನಾಗಿ, ನನ್ನ ಸಲಹೆಯೆಂದರೆ ಇಂತಹ ಪ್ರದೇಶಗಳಿಗೆ ಹೋಗಬೇಡಿ, ಹಳೆಯ ಬೆಂಗಳೂರಿನ ಪ್ರದೇಶಗಳಲ್ಲಿ ವಾಸಿಸುವುದು ಮತ್ತು ಪ್ರಯಾಣದಲ್ಲಿ ರಾಜಿ ಮಾಡಿಕೊಳ್ಳುವುದು ಉತ್ತಮ. ಆದರೆ ಇಲ್ಲಿನ ಸಾಮಾಜಿಕ ಜೀವನವು ಕೆಟ್ಟದಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ನನಗೆ 3BHK ಮನೆ ಹುಡುಕಿ ಕೊಡಿ, ಅರ್ಧ ತಿಂಗಳ ಬಾಡಿಗೆ ಕೊಡುತ್ತೇನೆ’: ಬೆಂಗಳೂರಿನಲ್ಲಿ ಮನೆ ಹುಡುಕಾಟದಿಂದ ಬೇಸತ್ತ ಯುವಕ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೀವು ವಾಸ್ತವ ಸ್ಥಿತಿಯನ್ನು ಅರಿತುಕೊಂಡು ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯ. ಹೆಚ್ಚಿ ಚಿಂತಿಸಿದರೆ ನೀವು ತಪ್ಪು ಮಾಡಿದ ಭಾವನೆ ಕಾಡುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಬಸವನಗುಡಿಯಿಂದ ಬೆಳ್ಳಂದೂರಿಗೆ ಪ್ರಯಾಣ ಮಾನಸಿಕ ಆರೋಗ್ಯದ ದೃಷ್ಟಿಯಿಂದ ದೊಡ್ಡ ಕುಸಿತವಾಗಿದೆ. ನನಗೆ ಆ ಸಂಘರ್ಷ ಅರ್ಥವಾಗುತ್ತದೆ. ಏಕೆಂದರೆ ಪ್ರಯಾಣದ ಸಮಯ ಮುಖ್ಯವಾಗಿದೆ. ಬಹುಶಃ ನೀವು ನಿಮ್ಮ ವಾರಾಂತ್ಯವನ್ನು ಗಾಂಧಿ ಬಜಾರ್, ಬುಗಲ್ ರಾಕ್ ಇತ್ಯಾದಿಗಳಲ್ಲಿ ಕಳೆಯಬಹುದು. ಈ ರೀತಿ ಮಾಡುವುದರಿಂದ ಕನಿಷ್ಠ ಬದುಕುತ್ತಿರುವಂತೆ ಅನಿಸಬಹುದು, ಸ್ವಲ್ಪ ಚೇತರಿಸಿಕೊಳ್ಳಬಹುದು ಎಂದು ಧೈರ್ಯ ತುಂಬಿದ್ದಾರೆ. ಮತ್ತೊಬ್ಬರು, ಬದುಕೆಂದರೆ ಹಾಗೆಯೇ, ಆಯ್ಕೆಗಳು ಎಡವುದು ಸಹಜ, ಆದರೆ ಒಪ್ಪಿಕೊಂಡು ಬದುಕುವುದು ಜಾಣತನ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Weekly Horoscope: ಈ ವಾರ ಈ ರಾಶಿಗೆ ಆಕಸ್ಮಿಕ ಧನಲಾಭ, ಹಳೆಯ ಬಾಕಿ ವಸೂಲಿಯಾಗಲಿದೆ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 23 ರಿಂದ ಮಾರ್ಚ್ 29 ರವರೆಗಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಸಿದ್ದಾರೆ. ಈ ವಾರ ಪರಾಭವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷದಿಂದ ಕೂಡಿದೆ. ಪಂಚಮಿಯಿಂದ ಏಕಾದಶಿಯವರೆಗೆ ತಿಥಿಗಳಿವೆ. ಈ ವಾರದಲ್ಲಿ ದೇವರ ದಾಸಿಮಯ್ಯ ಜಯಂತಿ, ದಾವಣಗೆರೆ ಜಾತ್ರಾ ಮಹೋತ್ಸವ, ಅಶೋಕ ಅಷ್ಟಮಿ, ಸ್ಕಂದ ದವನಾರ್ಪಣೆ, ಸಂತಾನ ಸಪ್ತಮಿ, ಶ್ರೀರಾಮ ನವಮಿ, ಸರ್ವತ್ರ ಏಕಾದಶಿ ಸೇರಿದಂತೆ ಹಲವು ಹಬ್ಬ ಹರಿದಿನಗಳು ಮತ್ತು ವಿಶೇಷ ಆಚರಣೆಗಳಿವೆ. ಗ್ರಹಗಳ ಗೋಚಾರದಲ್ಲಿ ರವಿ, ಶನಿ, ಶುಕ್ರ ಮೀನ ರಾಶಿಯಲ್ಲಿದ್ದು, ಶುಕ್ರ ಗ್ರಹ ಮಾರ್ಚ್ 26, 2026 ರಂದು ಮೇಷ ರಾಶಿಗೆ ಪ್ರವೇಶಿಸಲಿದೆ. ಗುರು ಮಿಥುನ ರಾಶಿಯಲ್ಲಿ, ಕೇತು ಸಿಂಹ ರಾಶಿಯಲ್ಲಿ, ಕುಜ, ಬುಧ, ರಾಹು ಕುಂಭ ರಾಶಿಯಲ್ಲಿ ಸಂಚಾರ ಮಾಡಲಿವೆ.

ಮೇಷ ರಾಶಿಯವರಿಗೆ ಆರ್ಥಿಕ ಅಭಿವೃದ್ಧಿ, ಉದ್ಯೋಗದಲ್ಲಿ ಅನುಕೂಲಕರ ವಾತಾವರಣ, ವ್ಯಾಪಾರದಲ್ಲಿ ಲಾಭ ಇರಲಿದೆ. ಹಳೆಯ ಬಾಕಿ ವಸೂಲಿ, ಉತ್ತಮ ಸ್ನೇಹಿತರ ಪರಿಚಯ, ವಾಹನ ಯೋಗ, ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ ದೊರೆಯಲಿದೆ. ಆರೋಗ್ಯದ ಬಗ್ಗೆ ಮಾತ್ರ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ವೃಷಭ ರಾಶಿಯವರಿಗೆ ಖರ್ಚು ಜಾಸ್ತಿಯಾಗಲಿದೆ, ಆದಾಯದಲ್ಲೂ ಏರಿಕೆ ಇರಲಿದೆ. ಉದ್ಯೋಗದಲ್ಲಿ ಸಣ್ಣಪುಟ್ಟ ಅಪಮಾನಗಳಿರಬಹುದು, ಪಾಲುದಾರಿಕೆಯಲ್ಲಿ ಜಾಗ್ರತೆ ಅಗತ್ಯ. ಮಿಥುನ ರಾಶಿಯವರಿಗೆ ಆಕಸ್ಮಿಕ ಧನಲಾಭ, ಹಳೆಯ ಬಾಕಿ ವಸೂಲಿ, ವಾಹನ ಯೋಗ, ಆತ್ಮವಿಶ್ವಾಸ ವೃದ್ಧಿ ಇರಲಿದೆ. ಕಟಕ ರಾಶಿಯವರಿಗೆ ಆರ್ಥಿಕ ಅಭಿವೃದ್ಧಿ, ನಷ್ಟಕ್ಕೆ ಪರಿಹಾರ, ಹೊಸ ವ್ಯಾಪಾರಕ್ಕೆ ಪ್ರಯತ್ನ, ಕುಟುಂಬದ ಸಹಕಾರ ದೊರೆಯಲಿದೆ. ಸಿಂಹ ರಾಶಿಯವರಿಗೆ ಆದಾಯದಲ್ಲಿ ಏರಿಕೆ, ಉದ್ಯೋಗದಲ್ಲಿ ಶುಭ, ಪೂರ್ವಿಕರ ಆಸ್ತಿಯಿಂದ ಲಾಭ, ಭೂಮಿ ಖರೀದಿ ಯೋಗ ಇರಲಿದೆ.

 

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಉಪ ಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ‘ಕೈ’ ಅಭ್ಯರ್ಥಿಗಳ ಹೆಸರು ಘೋಷಣೆ

ಬೆಂಗಳೂರು, ಮಾರ್ಚ್​​ 22: ಸಾಕಷ್ಟು ಲೆಕ್ಕಾಚಾರಗಳ ಬಳಿಕ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳಿಗೆ ಕಾಂಗ್ರೆಸ್​​ ಕೊನೆಗೂ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಬಾಗಲಕೋಟೆಯಿಂದ ಉಮೇಶ್ ಮೇಟಿ ಮತ್ತು ದಾವಣಗೆರೆ ದಕ್ಷಿಣದಿಂದ ಶಾಮನೂರು ಕುಟುಂಬದ ಸಮರ್ಥ್​​ ಅಭ್ಯರ್ಥಿಗಳಾಗಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಬಹಳ ಹೆಚ್ಚಿದ್ದು, ಟಿಕೆಟ್​​ಗಾಗಿ ತೀವ್ರ ಪೈಪೋಟಿ ನಡೆಯುತ್ತಿತ್ತು. ಈ ಹಿನ್ನೆಲೆ ಅಳೆದು ತೂಗಿ, ಕೆಲ ನಾಯಕರ ಮನವೊಲಿಸಿ ಕಾಂಗ್ರೆಸ್​​ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಆ ಮೂಲಕ ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ್ ಮತ್ತು ಕಾಂಗ್ರೆಸ್​​ನಿಂದ ಉಮೇಶ್ ಮೇಟಿ ನಡುವೆ ಸ್ಪರ್ಧೆ ಏರ್ಪಟ್ಟಿದ್ದರೆ ಇತ್ತ ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿಯ ಶ್ರೀನಿವಾಸ್ ಟಿ. ದಾಸಕರಿಯಪ್ಪ ವಿರುದ್ಧ ಸಚಿವ ಎಸ್​​.ಎಸ್​​. ಮಲ್ಲಿಕಾರ್ಜುನ್​​ ಅವರ ಪುತ್ರ ಸಮರ್ಥ್​​ ಅಖಾಡಕ್ಕಿಳಿದಿದ್ದಾರೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದ್ದಿದೆ)

 

 

Source link

Video: ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಕೋಲಿನಿಂದ ನಿರ್ದಯವಾಗಿ ಥಳಿಸಿದ ಹಾಸ್ಟೆಲ್ ವಾರ್ಡನ್

ಉಜ್ಜಯಿನಿ, ಮಾರ್ಚ್​ 22: ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಹಾಸ್ಟೆಲ್ ವಾರ್ಡನ್ ಕೋಲಿನಿಂದ ನಿರ್ದಯವಾಗಿ ಥಳಿಸಿರುವ ಘಟನೆ ಮಧ್ಯಪ್ರದೇಶ ಉಜ್ಜಯಿನಿಯಲ್ಲಿರುವ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನದ ಹಾಸ್ಟೆಲ್​​ನಲ್ಲಿ ನಡೆದಿದೆ. ಈ ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೇವಲ ಬೇರೆಯವರ ಹಾಸಿಗೆಯಲ್ಲಿ ಮಲಗಿದ್ದಕ್ಕೆ ಇಷ್ಟು ದೊಡ್ಡ ಶಿಕ್ಷೆ ಕೊಡುವ ಅಗತ್ಯವಿರಲಿಲ್ಲ, ಮುಂದೆ ಹೀಗೆ ಮಾಡಬಾರದು ಎಂದು ಬುದ್ಧಿ ಹೇಳಬಹುದಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಟಿಕೆಟ್ ದರ ಮಿತಿ ಕ್ರಮ ಹಿಂತೆಗೆತ, ಜೆಟ್ ಫುಯಲ್ ಬೆಲೆ ಹೆಚ್ಚಳ ಪರಿಣಾಮ ಏ. 1ರಿಂದ ವಿಮಾನ ಟಿಕೆಟ್ ದರ ಏರಿಕೆ?

ನವದೆಹಲಿ, ಮಾರ್ಚ್ 22: ಇರಾನ್ ಯುದ್ಧದ ಪರಿಣಾಮ ಹಲವಾರು ಕ್ಷೇತ್ರಗಳ ಮೇಲೆ ಆಗುತ್ತಿದೆ. ವಿಮಾನಯಾನ ಸೆಕ್ಟರ್ (Aviation Sector) ಮೇಲೂ ಪರಿಣಾಮವಾಗುತ್ತಿದೆ. ಮುಂಬರುವ ತಿಂಗಳಿಂದ ವಿಮಾನ ಪ್ರಯಾಣ ದುಬಾರಿಯಾಗಲಿದೆ. ವಿಮಾನಗಳಿಗೆ ಬಳಸುವ ಎಟಿಎಫ್ (ATF- Aviation Turbine Fuel) ಅಥವಾ ಜೆಟ್ ಫುಯೆಲ್​ಗಳ ಬೆಲೆ ಪ್ರತೀ ತಿಂಗಳ ಆರಂಭದಲ್ಲಿ ಪರಿಷ್ಕರಣೆ ಆಗುತ್ತದೆ. ಈ ಬಾರಿ, ಏಪ್ರಿಲ್ 1ರಂದು ಎಟಿಎಫ್ ಬೆಲೆ ಸಿಕ್ಕಾಪಟ್ಟೆ ಏರುವ ಸಾಧ್ಯತೆ ಇದೆ. ಇದು ಹೆಚ್ಚಿದರೆ ವಿಮಾನ ಪ್ರಯಾಣದ ಟಿಕೆಟ್ ದರ ಗಣನೀಯವಾಗಿ ಹೆಚ್ಚಬಹುದು.

ಸರ್ಕಾರದಿಂದ ಟಿಕೆಟ್ ದರ ಮಿತಿ ಕ್ರಮ ಹಿಂತೆಗೆತ

ದೇಶೀಯ ವಿಮಾನ ಹಾರಾಟದಲ್ಲಿ ಟಿಕೆಟ್ ದರಗಳಿಗೆ ಸರ್ಕಾರ ಮಿತಿ ಹಾಕಿತ್ತು. ಈ ಮಿತಿಗಿಂತ ಹೆಚ್ಚಿನ ದರ ವಿಧಿಸಬೇಕಿದ್ದರೆ ವಿಮಾನ ಕಂಪನಿಗಳು ಸರ್ಕಾರದ ಅನುಮತಿ ಕೇಳಬೇಕಿತ್ತು. ಮೊನ್ನೆ ಸರ್ಕಾರ ಈ ವಿಮಾನ ಪ್ರಯಾಣ ದರದ ಮಿತಿಯನ್ನು ಹಿಂಪಡೆದುಕೊಂಡಿದೆ. ಇದರೊಂದಿಗೆ ವಿಮಾನ ಸಂಸ್ಥೆಗಳು ಸರ್ಕಾರದ ಅನುಮೋದನೆ ಇಲ್ಲದೇ ಟಿಕೆಟ್ ದರ ಏರಿಸಲು ಸಾಧ್ಯ.

ಇದನ್ನೂ ಓದಿ: ಕೈಗಾರಿಕಾ ಡೀಸಲ್ ಬೆಲೆಯಲ್ಲಿ ಶೇ. 25ರಷ್ಟು ಏರಿಕೆ; ಯಾರ ಮೇಲಾಗಲಿದೆ ಇದರ ಪರಿಣಾಮ?

ಹೀಗಾಗಿ, ವಿಮಾನ ಪ್ರಯಾಣ ಸಂಸ್ಥೆಗಳು ಇಂಧನದ ಬೆಲೆಗೆ ಅನುಗುಣವಾಗಿ ಮುಕ್ತವಾಗಿ ಬೆಲೆ ಪರಿಷ್ಕರಣೆ ಮಾಡಬಹುದು. ಈ ಏಪ್ರಿಲ್​ನಲ್ಲಿ ಎಟಿಎಫ್ ಇಂಧನದ ಬೆಲೆ ಸಾಕಷ್ಟು ಹೆಚ್ಚುವುದರಿಂದ, ಟಿಕೆಟ್ ದರಗಳೂ ಸಹಜವಾಗಿ ಏರಿಕೆಯಾಗಬಹುದು.

ಇದೇ ವೇಳೆ, ಏರ್ ಇಂಡಿಯಾ, ಆಕಾಶ ಏರ್ ಸಂಸ್ಥೆಗಳು ಫುಯೆಲ್ ಸರ್ಚಾರ್ಜ್ ಅನ್ನು ಏರಿಸಿವೆ. ಇದು ಟಿಕೆಟ್ ಬುಕಿಂಗ್​ಗಳಲ್ಲಿ ಅನ್ವಯ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೋಟೆಲ್, ಮೊಬೈಲ್ ಶಾಪ್ ಸೇರಿ 12ಕ್ಕೂ ಅಧಿಕ ಅಂಗಡಿಗಳು ಬೆಂಕಿಗಾಹುತಿ!

ಬೆಳಗಾವಿ, ಮಾರ್ಚ್​ 22: ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ 12ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲಾಗಿವೆ. ಪ್ಯಾಟಿ ಓಣಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂದು ಶಂಕಿಸಲಾಗಿದೆ. ರಸಗೊಬ್ಬರ ಅಂಗಡಿ, ಹೊಟೆಲ್, ಫೋಟೋ ಸ್ಟೂಡಿಯೋ, ಐಸ್‌ಕ್ರೀಂ ಅಂಗಡಿಗಳು, ರೈತರ ನೀರಾವರಿ ಸಂಘದ ಕಚೇರಿ ಸೇರಿದಂತೆ ಹಲವು ವ್ಯಾಪಾರ ಮಳಿಗೆಗಳು ಬೆಂಕಿಗಾಹುತಿಯಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಯಾಗಿವೆ. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಘಟನೆ ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅವಳಿ ಸಹೋದರಿಯರನ್ನು ಮದುವೆಯಾಗಿದ್ದ ಅವಳಿ ಸಹೋದರರಲ್ಲಿ ಓರ್ವ ಆತ್ಮಹತ್ಯೆ

ಕಾಮರೆಡ್ಡಿ, ಮಾರ್ಚ್​ 22: ತೆಲಂಗಾಣದ ಕಾಮರೆಡ್ಡಿಯಲ್ಲಿ ದುರಂತವೊಂದು ಸಂಭವಿಸಿದೆ. ಇತ್ತೀಚೆಗಷ್ಟೇ ಅವಳಿ ಸಹೋದರಿಯರನ್ನು ಮದುವೆಯಾಗಿದ್ದ ಅವಳಿ ಸಹೋದರರಲ್ಲಿ ಓರ್ವ ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ನಡೆದಿದೆ. ಇತ್ತೀಚೆಗಷ್ಟೇ ನಾಲ್ವರು ಹಸೆಮಣೆ ಏರಿದ್ದರು, ಸಂಭ್ರದ ನಡುವೆ ಈ ದುರ್ಘಟನೆ ನಡೆದಿದೆ. ಮದುವೆಯಾದ ಒಂದು ತಿಂಗಳೊಳಗೆ ಈ ದುರಂತ ಸಂಭವಿಸಿದ್ದು, ಎರಡೂ ಕುಟುಂಬಗಳು ತೀವ್ರ ದುಃಖದಲ್ಲಿ ಮುಳುಗಿವೆ.

ಕಾಮರೆಡ್ಡಿ ಜಿಲ್ಲೆಯ ಮಾಚರೆಡ್ಡಿ ಮಂಡಲದ ಘನಪುರ ಗ್ರಾಮದ ವಿನಯ್ ಕುಮಾರ್ (31) ಮತ್ತು ವಿಜಯ್ ಕುಮಾರ್ ಅವಳಿ ಸಹೋದರರು ಕೀರ್ತಿ ಮತ್ತು ಕೀರ್ತನಾ ಅವರನ್ನು ವಿವಾಹವಾಗಿದ್ದರು. ವಿನಯ್ ಹೈದರಾಬಾದ್ ನಗರದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ತಿಂಗಳು ಫೆಬ್ರವರಿ 22 ರಂದು ವಿವಾಹವಾಗಿದ್ದರು.

ಯುಗಾದಿ ಹಬ್ಬದ ದಿನದಂದು ಮನೆಯಿಂದ ಹೊರಗೆ ಹೋಗಿದ್ದ ವಿನಯ್ ಕುಮಾರ್ ಹಿಂತಿರುಗಲಿಲ್ಲ. ಅವರ ಕುಟುಂಬ ಸದಸ್ಯರು ವ್ಯಾಪಕವಾಗಿ ಹುಡುಕಾಡಿದರೂ ಅವರು ಪತ್ತೆಯಾಗಲಿಲ್ಲ. ಸಿರಿಸಿಲ್ಲಾ ಜಿಲ್ಲೆಯ ಗಂಭೀರೋಪೇಟೆ ಮಂಡಲದ ನರ್ಮಲಾದ ಮನೇರು ಹೊಳೆಯಲ್ಲಿ ಸ್ಥಳೀಯರು ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತನಿಖೆ ನಡೆಸಿದಾಗ, ಅದು ವಿನಯ್ ಕುಮಾರ್ ಅವರ ಶವ ಎಂದು ಗುರುತಿಸಲಾಗಿದೆ.

ಮತ್ತಷ್ಟು ಓದಿ: ಪ್ಲೀಸ್ ಸಾಯಬೇಡಮ್ಮ; ರೈಲು ಹಳಿ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ತಾಯಿಯನ್ನು ಕಾಪಾಡಿದ 7 ವರ್ಷದ ಮಗಳು

ಪೊಲೀಸರು ಆರಂಭದಲ್ಲಿ ವಿನಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಂಬಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಅವರು ಇಷ್ಟೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣಗಳು ಸ್ಪಷ್ಟವಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ಆರಂಭಿಸಿದ್ದಾರೆ.

ತಮ್ಮ ಸಂತೋಷದ ಜೀವನದಲ್ಲಿ ಸಂಭವಿಸಿದ ದುರಂತದಿಂದ ಗ್ರಾಮಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಈ ಘಟನೆಯ ಹಿಂದಿನ ಕಾರಣಗಳೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿನಯ್ ಅವರ ಮೊಬೈಲ್ ಫೋನ್ ಡೇಟಾವನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ನಿರ್ಬಂಧದ ನಡುವೆಯೂ ಪೊಲೀಸರೊಂದಿಗೇ ಅಂಜನಾದ್ರಿ ಬೆಟ್ಟ ಏರಿದ ಪುನೀತ್ ಕೆರೆಹಳ್ಳಿ!

ಕೊಪ್ಪಳ, ಮಾರ್ಚ್​ 22: ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಕಾರ್ಯಕರ್ತ ಪುನೀತ್ ಕೆರಹಳ್ಳಿಗೆ (Puneeth Kerehalli) ಮಾರ್ಚ್ 21ರಿಂದ 23ರವರೆಗೆ ಜಿಲ್ಲೆಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದ್ದು, ಈ ನಡುವೆಯೂ ದರ್ಶನಕ್ಕೆ ಒತ್ತಾಯಿಸಿದ ಕೆರಹಳ್ಳಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿ, ನಂತರ ಅಧಿಕಾರಿಗಳೊಂದಿಗೇ ಅಂಜನಾದ್ರಿ ಬೆಟ್ಟ ಏರಿದ್ದಾರೆ.

ಈ ಹಿಂದೆ ಕೋಮು ವಿವಾದ ಎಬ್ಬಿಸಿದ್ದ ಕೆರೆಹಳ್ಳಿ!

ಕನಕಗಿರಿಯಲ್ಲಿ ಈ ಹಿಂದೆ ಪ್ರಮೋದ್ ಮುತಾಲಿಕ್ ಹಾಗೂ ಪುನೀತ್ ಕೆರಹಳ್ಳಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ಮತೀಯ ಭಾವನೆಗಳಿಗೆ ಪ್ರಚೋದನೆ ಉಂಟು ಮಾಡುವ ವಿವಾದಾತ್ಮಕ ಭಾಷಣ ಮಾಡಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಕೇಸ್ ಕೂಡ ದಾಖಾಗಿತ್ತು. ಹೀಗಾಗಿ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ನಡೆಯಲಿದ್ದ ಶಿವಾಜಿ ಜಯಂತೋತ್ಸವದಲ್ಲಿ ಭಾಗವಹಿಸಲು ಮುತಾಲಿಕ್ ಹಾಗೂ ಕೆರಹಳ್ಳಿ ಆಗಮಿಸುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಈ ಆದೇಶ ಹೊರಡಿಸಿದ್ದಾರೆ.

ಪೊಲೀಸರೊಂದಿಗಿನ ವಾಗ್ವಾದದ ವೀಡಿಯೋ ಇಲ್ಲಿದೆ 

ಇದನ್ನೂ ಓದಿ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಮುಂದಾದ ಪುನೀತ್​​​ ಕೆರೆಹಳ್ಳಿ ಮತ್ತೆ ಬಂಧನ

ನಿರ್ಬಂಧದ ನೋಟೀಸ್ ನಕಲಿ ಎಂದು ವಾದ

ಈ ನಡುವೆ ನಿರ್ಬಂಧದ ನಡುವೆಯೂ ಪುನೀತ್ ಕೆರಹಳ್ಳಿ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದು, ಅವರಿಗೆ ನೋಟಿಸ್ ನೀಡಲು ಮುಂದಾದ ಯಲಬುರ್ಗಾ ಪೊಲೀಸರೊಂದಿಗೆ ಅವರು ವಾಗ್ವಾದ ನಡೆಸಿದ್ದಾರೆ. ನೋಟಿಸ್ ನಕಲಿ, ಇದು ಕಲರ್ ಝರಾಕ್ಸ್ ಎಂದು ವಾದಿಸಿದ ಪುನೀತ್, ತಾವು ದರ್ಶನ ಮಾಡುವುದಾಗಿ ಒತ್ತಾಯಿಸಿದ್ದಾರೆ. ಪೊಲೀಸರು ನಿಯಮ ಪಾಲನೆಗೆ ಒತ್ತಾಯಿಸಿ ಸ್ಥಳ ತೊರೆಯುವಂತೆ ಸೂಚಿಸಿದ ನಂತರ ಕೆಲಕಾಲದ ವಾಗ್ವಾದ ನಡೆದಿದೆ. ಬಳಿಕ ಪೊಲೀಸರೊಂದಿಗೆ ಪುನೀತ್ ಅಂಜನಾದ್ರಿ ಬೆಟ್ಟ ಏರಿದ್ದಾರೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹೂ ಬೆಳೆಗಾರರ ಅನ್ನ ಕಸಿದ ಅಕಾಲಿಕ ಮಳೆ: ವರುಣನ ಅಬ್ಬರಕ್ಕೆ ಕೈ ಸುಟ್ಟುಕೊಂಡ ರೈತರು

ಗದಗ, ಮಾರ್ಚ್​​ 22: ಅಕಾಲಿಕವಾಗಿ ಸುರಿದ ಮಳೆಗೆ ಗದಗ ಜಿಲ್ಲೆಯ ಹೂ ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದಾರೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಉತ್ತಮ ಆದಾಯ ನಿರೀಕ್ಷಿಸಿದ್ದ ರೈತರಿಗೆ ಮಳೆಯಿಂದ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಲಕ್ಕುಂಡಿ, ಕಣವಿ, ಹೊಸೂರು, ದಂಬಳ, ಕಡಕೋಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆದ ಹೂಗಳು ಮಳೆಯಿಂದ ಹೆಚ್ಚು ಹಾನಿಗೊಳಗಾಗಿವೆ. ಈ ಪ್ರದೇಶಗಳಲ್ಲಿ ಬೆಳೆಯುವ ಹೂಗಳು ಧಾರವಾಡ, ಬೆಳಗಾವಿ ಸೇರಿದಂತೆ ವಿವಿಧ ಕಡೆ ಸಾಗಾಟವಾಗುತ್ತಿತ್ತು. ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಚಂಡು ಹೂ, ಸೇವಂತಿಗೆ ಹಾಗೂ ಮಲ್ಲಿಗೆ ಬೆಳೆದ ರೈತರು ಉತ್ತಮ ಲಾಭದ ನಿರೀಕ್ಷೆಯಲ್ಲಿ ಇದ್ದರು. ಆದರೆ ಮಳೆಯಿಂದ ತೇವಾಂಶಕ್ಕೆ ಹೂಗಳು ಕೊಳೆತು, ರೈತರ ಅನ್ನ ಕಸಿದಿದೆ.

ಕಪ್ಪತ್ತಗುಡ್ಡ ಪಾದಭಾಗದ ಗ್ರಾಮಗಳಲ್ಲಿ ವರ್ಷಪೂರ್ತಿ ಹೂ ಬೆಳೆಯುತ್ತಿದ್ದ ರೈತರು, ಕಳೆದ ದೀಪಾವಳಿಯಲ್ಲಿ ಉತ್ತಮ ಬೆಲೆ ದೊರೆತು ಲಾಭ ಪಡೆದಿದ್ದರು. ಹೀಗಾಗಿ ಯುಗಾದಿ ಮುನ್ನವೇ ಹಲವು ರೈತರು ಚಂಡು ಹೂ, ಸೇವಂತಿಗೆ ಮತ್ತು ಮಲ್ಲಿಗೆ ಬೆಳೆಸಿ, ಪಕ್ಕದ ಜಿಲ್ಲೆಗಳ ಖರೀದಿದಾರರಿಂದ ದೊಡ್ಡ ಆರ್ಡರ್‌ಗಳನ್ನೂ ಪಡೆದಿದ್ದರು. ಆದರೆ ನಾಲ್ಕು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಹೂಗಳು ಹಾಳಾಗಿವೆ. ಸಾಮಾನ್ಯವಾಗಿ ಕಿಲೋಗೆ 300 ರೂ.ಗೆ ಮಾರಾಟವಾಗುತ್ತಿದ್ದ ಮಲ್ಲಿಗೆ ಹೂ ಬೆಲೆ ಈಗ 150ಕ್ಕೆ ಇಳಿದಿದೆ. ಯುಗಾದಿ ಸಮಯದಲ್ಲಿ ಸಾಮಾನ್ಯವಾಗಿ ಇವುಗಳ ಬೆಲೆ 500–700 ರೂ.ವರೆಗೆ ಬೆಲೆ ಏರಿಕೆಯಾಗುತ್ತಿತ್ತು. ಆದರೆ ಈ ಬಾರಿ ಅಕಾಲಿಕ ಮಳೆಯಿಂದ ಬೆಲೆ ಭಾರೀ ಕುಸಿತ ಕಂಡಿದೆ. ಚಂಡು ಹೂ ಸಾಮಾನ್ಯವಾಗಿ ಕೆಜಿಗೆ 350 ರೂ. ಇದ್ದರೆ, ಈಗ ಅವನ್ನು ಕೆಜಿಗೆ 100ಕ್ಕೆ ಮಾರಬೇಕಾದ ಪರಿಸ್ಥಿತಿ ಬಂದಿದೆ.

ಇದನ್ನೂ ಓದಿ: ಮದುವೆ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ; ಸಹೋದರರಿಂದಲೇ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು

ಯುಗಾದಿ ಹಬ್ಬದ ವೇಳೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹೆಚ್ಚು ಬೇಡಿಕೆ ಇರುತ್ತಿತ್ತು. ಆದರೆ ಈ ಬಾರಿ ಹೂಗಳ ಗುಣಮಟ್ಟ ಕುಸಿದು, ಬೆಲೆ ಕೂಡ ತಳಮಟ್ಟಕ್ಕೆ ಇಳಿದಿದೆ. ಇದರಿಂದ ಭಾರೀ ನಷ್ಟ ಅನುಭವಿಸಿರೋದಾಗೀ ರೈತರು ಕೂಡ ಅಲವತ್ತುಕೊಂಡಿದ್ದಾರೆ. ಈ ನಡುವೆ ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಉಂಟಾದ ಬೆಳೆ ಹಾನಿಯನ್ನು ಅಂದಾಜಿಸಲು ತಕ್ಷಣ ಸಮೀಕ್ಷೆ ನಡೆಸುವಂತೆ ವಿರೋಧ ಪಕ್ಷ ಬಿಜೆಪಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಮ್ಮ ‘X’ ಪೋಸ್ಟ್‌ನಲ್ಲಿ, 10ಕ್ಕೂ ಹೆಚ್ಚು ಜಿಲ್ಲೆಗಳ 56,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಧಾರವಾಡ, ಹಾವೇರಿ, ಗದಗ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಜೋಳ, ಕಡಲೆ, ಗೋಧಿ, ಮೆಕ್ಕೆಜೋಳ ಬೆಳೆಗಳು ನೀರುಪಾಲಾಗಿವೆ. ಹಾಸನ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾವು, ಹಲಸು ಮತ್ತು ಕಲ್ಲಂಗಡಿ ಬೆಳೆಗಾರರೂ ಕೈ ಸುಟ್ಉಕೊಂಡಿದ್ದಾರೆ. ಹೀಗಾಗಿ ಆಲಿಕಲ್ಲು ಮಳೆಯಿಂದ ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಐಟಂ ಸಾಂಗ್ ಮಾಡಲು ಒಪ್ಪಿಕೊಂಡ ಮೃಣಾಲ್ ಠಾಕೂರ್; ಅಭಿಮಾನಿಗಳಿಗೆ ಹಬ್ಬ

ಚಿತ್ರರಂಗದಲ್ಲಿ ಕೆಲವು ನಟಿಯರಿಗೆ ಒಂದು ಕಾಲಘಟ್ಟದಲ್ಲಿ ಅದೃಷ್ಟ ಒಲಿದು ಬರುತ್ತದೆ. ಸದ್ಯ ನಟಿ ಮೃಣಾಲ್ ಠಾಕೂರ್ (Mrunal Thakur) ಅಂತಹದ್ದೇ ಒಂದು ಸುವರ್ಣ ಯುಗದಲ್ಲಿದ್ದಾರೆ. ಇದುವರೆಗೆ ಮಧ್ಯಮ ಬಜೆಟ್ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ ಈ ಸುಂದರಿ, ಇದೀಗ ಟಾಲಿವುಡ್‌ನ ಅತಿ ದೊಡ್ಡ ಸ್ಟಾರ್‌ ನಟರ ಚಿತ್ರಗಳಿಗೆ ಆಯ್ಕೆ ಆಗುತ್ತಿದ್ದಾರೆ. ನಟ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲಿ ಕಾಂಬಿನೇಷನ್​ನ ಸಿನಿಮಾಗೆ ಈಗ ಮೃಣಾಲ್ ಠಾಕೂರ್ ಎಂಟ್ರಿ ನೀಡಿದ್ದಾರೆ. ‘ಪೆದ್ದಿ’ (Peddi) ಚಿತ್ರದಲ್ಲೂ ಅವರು ನಟಿಸಲಿದ್ದಾರೆ.

‘ಪುಷ್ಪ 2’ ಸಿನಿಮಾದಿಂದ ಸೂಪರ್ ಸಕ್ಸಸ್ ಕಂಡ ಅಲ್ಲು ಅರ್ಜುನ್ ಅವರು ಈಗ ಸ್ಟಾರ್ ಡೈರೆಕ್ಟರ್ ಅಟ್ಲಿ ಜೊತೆ ಹೊಸ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಬಹುನಿರೀಕ್ಷಿತ ಚಿತ್ರದಲ್ಲಿ ಮೃಣಾಲ್ ಒಂದು ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಬಾಕಿ ಇದ್ದರೂ, ಮೂಲಗಳ ಪ್ರಕಾರ ಮೃಣಾಲ್ ಈಗಾಗಲೇ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ.

ಇದು ಮೃಣಾಲ್ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲಾಗಲಿದೆ. ಇಷ್ಟೇ ಅಲ್ಲದೇ, ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದಲ್ಲಿ ಕೂಡ ಮೃಣಾಲ್ ಠಾಕೂರ್ ಅವರು ಅಭಿಮಾನಿಗಳಿಗೆ ಕಿಕ್ ನೀಡಲಿದ್ದಾರೆ. ಹೌದು, ರಾಮ್ ಚರಣ್ ಅಭಿನಯದ, ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಚಿತ್ರದ ಒಂದು ವಿಶೇಷ ಹಾಡಿಗೆ ಮೃಣಾಲ್ ಹೆಜ್ಜೆ ಹಾಕಲಿದ್ದಾರೆ.

‘ಪೆದ್ದಿ’ ಸಿನಿಮಾದಲ್ಲಿ ಗ್ರಾಮೀಣ ಭಾಗದ ಕ್ರೀಡೆ ಮತ್ತು ರಾಜಕೀಯದ ಕಥೆ ಇರಲಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಮೃಣಾಲ್ ಅವರು ಸ್ಪೆಷಲ್ ಸಾಂಗ್​ನಲ್ಲಿ ಹೆಜ್ಜೆ ಹಾಕಲು ಒಪ್ಪಿದ್ದಾರೆ. ಈ ಹಾಡಿನಲ್ಲಿ ಅವರು ರಾಮ್ ಚರಣ್ ಮತ್ತು ಜಾನ್ವಿ ಇಬ್ಬರ ಜೊತೆಗೂ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಧನುಷ್ ಬಗ್ಗೆ ಮೊದಲ ಬಾರಿ ಅಸಲಿ ವಿಷಯ ಬಾಯಿಬಿಟ್ಟ ಮೃಣಾಲ್ ಠಾಕೂರ್

ಸ್ಟಾರ್ ಹೀರೋಯಿನ್​ಗಳು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವಾಗ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಳ್ಳುವುದು ಮಾಮೂಲಿ. ‘ಪುಷ್ಪ’ ಸಿನಿಮಾದಲ್ಲಿ ಸಮಂತಾ, ‘ಕೂಲಿ’ ಸಿನಿಮಾದಲ್ಲಿ ಪೂಜಾ ಹೆಗ್ಡೆ ಐಟಂ ಸಾಂಗ್ ಮಾಡಿದ ರೀತಿಯಲ್ಲೇ ಈಗ ಮೃಣಾಲ್ ಕೂಡ ಅವರು ‘ಪೆದ್ದಿ’ ಮತ್ತು AA22xA6 ಸಿನಿಮಾಗಳಲ್ಲಿ ಐಟಂ ಸಾಂಗ್ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version