ರಾಮನಗರ, ಮಾರ್ಚ್ 22:ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬ್ರಹ್ಮಣಿಪುರ ಕೆರೆಯಲ್ಲಿ ಬೆಳ್ಳಂ ಬೆಳಿಗ್ಗೆ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿವೆ. ಈಗಾಗಲೇ ಚನ್ನಪಟ್ಟಣ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇತ್ತೀಚೆಗೆ ಒಂದು ಆನೆಯನ್ನ ಸೆರೆ ಹಿಡಿಯಲಾಗಿತ್ತು. ಇದರಿಂದ ಜನರು ಕೊಂಚ ನಿಟ್ಟುಸಿರು ಬಿಡುವ ನಡುವೆಯೇ ಇದೀಗ ಗ್ರಾಮದಲ್ಲಿ ಮತ್ತೆ ಮೂರು ಕಾಡಾನೆಗಳು ಕಾಣಿಸಿಕೊಂಡಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಯತ್ನ ನಡೆಸಿದ್ದಾರೆ.
ಭಕ್ತಿಪೂರ್ವಕವಾಗಿ ಭಗವಂತನನ್ನು ಆರಾಧಿಸುವ ಅನೇಕ ವಿಧಾನಗಳಲ್ಲಿ, ದುರ್ಗಾದೇವಿಗೆ ವೀಳ್ಯದೆಲೆ ಹಾರವನ್ನು ಅರ್ಪಿಸುವುದು ಒಂದು ವಿಶೇಷ ಮಹತ್ವವನ್ನು ಹೊಂದಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿ ಹೇಳುವಂತೆ, ದುರ್ಗಾ ಅಂದರೆ ದುರ್ಗತಿನಾಶಿನಿ, ಅಂದರೆ ಎಲ್ಲಾ ದುರ್ಗತಿಗಳನ್ನು ನಾಶಪಡಿಸುವ ಶಕ್ತಿ ಸ್ವರೂಪಿಣಿ ತಾಯಿ. ಮಹಾಲಕ್ಷ್ಮಿ, ಮಹಾಕಾಳಿ, ಮಹಾಸರಸ್ವತಿ ಈ ತ್ರಿಶಕ್ತಿಗಳೂ ಕೂಡ ದುರ್ಗಾದೇವಿಯ ಅಂಶಗಳೇ ಆಗಿವೆ. ಈ ಕಾರಣಕ್ಕಾಗಿ ದುರ್ಗಾದೇವಿಗೆ ವೀಳ್ಯದೆಲೆ ಹಾರವನ್ನು ಅರ್ಪಿಸುವುದು ಅತ್ಯಂತ ಶುಭಕರವೆಂದು ಪರಿಗಣಿಸಲಾಗುತ್ತದೆ. ಹನುಮಂತ, ಮಹಾಲಕ್ಷ್ಮಿ ಮುಂತಾದ ದೇವತೆಗಳಿಗೆ ವೀಳ್ಯದೆಲೆ ಹಾರ ಅರ್ಪಿಸುವ ಪದ್ಧತಿಯಂತೆ, ದುರ್ಗಾದೇವಿಗೆ ಈ ಅರ್ಪಣೆಯು ನಮ್ಮ ಸಂಕಲ್ಪಗಳನ್ನು ಈಡೇರಿಸಲು ಸಹಾಯ ಮಾಡುತ್ತದೆ.
ದುರ್ಗಾದೇವಿಗೆ ವೀಳ್ಯದೆಲೆ ಹಾರವನ್ನು ಯಾವಾಗ ಮತ್ತು ಯಾವ ಉದ್ದೇಶಕ್ಕಾಗಿ ಅರ್ಪಿಸಬೇಕು ಎಂಬುದನ್ನು ಈ ಆಚರಣೆಯಲ್ಲಿ ವಿವರಿಸಲಾಗಿದೆ. ಜೀವನದಲ್ಲಿ ಭಯದ ವಾತಾವರಣ, ಕುಟುಂಬದಲ್ಲಿ ಅಥವಾ ಕಾನೂನು ವಿಷಯಗಳಲ್ಲಿನ ಆತಂಕ, ಆರೋಗ್ಯದ ಭಯ, ವಾಹನ, ವ್ಯಾಪಾರ, ಸಾಲದ ಭಯ, ಮನಸ್ಸಿನ ಜಿಗುಪ್ಸೆ, ಒಂಟಿಯಾಗಿ ಮಾತನಾಡುವುದು ಅಥವಾ ನಗುವುದು, ಮಾತಿನಲ್ಲಿ ತೊದಲುವುದು, ಕಣ್ಣಿನಲ್ಲಿ ನೀರು ಬರುವುದು, ಒಂಟಿಯಾಗಿ ಕುಳಿತು ಆಲೋಚಿಸುವುದು, ಮನಸ್ಸಿನಲ್ಲಿ ದುಃಖ ತುಂಬಿಕೊಳ್ಳುವುದು, ಜೀವನವೇ ಸಾಕಪ್ಪಾ ಎನ್ನುವಷ್ಟು ನಿರಾಸೆ ಕಾಡುವಂತಹ ಸಂದರ್ಭಗಳಲ್ಲಿ ಈ ಪೂಜೆಯು ಪರಿಹಾರ ನೀಡುತ್ತದೆ. ಅಲ್ಲದೆ, ರಾಜಕೀಯವಾಗಿ ಅಪವಾದಗಳು ಎದುರಾದಾಗ, ಉನ್ನತ ಹುದ್ದೆಯಲ್ಲಿರುವವರು ಅಪಮಾನಗಳಿಗೆ ಅಥವಾ ಅಪಹಾಸ್ಯಕ್ಕೆ ಒಳಗಾದಾಗ, ಬುದ್ಧಿ ಮಂಕಾದಾಗ, ಜ್ಞಾಪಕಶಕ್ತಿ ಕೊರತೆಯಾದಾಗ, ಬಾಣಂತಿಯರಿಗೆ ಆರೋಗ್ಯ ಸಮಸ್ಯೆಗಳು ಕಾಡಿದಾಗ, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಾಲಿಗೆ ಒಣಗಿದಾಗ ಈ ವಿಶೇಷ ಪೂಜೆಯನ್ನು ಆಚರಿಸಬಹುದು.
ಈ ಎಲ್ಲಾ ಸಮಸ್ಯೆಗಳಿಗೆ ಏಕೈಕ ವಿಧಾನವೆಂದರೆ, ಒಂಬತ್ತು ಮಂಗಳವಾರಗಳಂದು ಸಂಧ್ಯಾಕಾಲದಲ್ಲಿ ಶ್ರೀ ದುರ್ಗಾದೇವಿಗೆ ಅಥವಾ ಯಾವುದೇ ಅಮ್ಮನ ದೇವಾಲಯದಲ್ಲಿ ವೀಳ್ಯದೆಲೆ ಹಾರವನ್ನು ಅರ್ಪಿಸುವುದು. ಈ ಹಾರವು 45 ಎಲೆಗಳಿಂದ ಕೂಡಿದ್ದು (4+5=9), ಈ ಹಾರವನ್ನು ಹೊಲಿದು ದೇವಿಗೆ ಸಮರ್ಪಿಸಬೇಕು. ನೈವೇದ್ಯವಾಗಿ ಬೆಲ್ಲದಿಂದ ಮಾಡಿದ ಸಿಹಿ ಪಾಯಸವನ್ನು ಅರ್ಪಿಸಬೇಕು. ನಂತರ ಅಲ್ಲಿ ಸ್ವಲ್ಪ ಹೊತ್ತು ಕುಳಿತು “ಓಂ ದುಂ ದುರ್ಗಾಯೈ ನಮಃ” ಎಂಬ ಮಂತ್ರವನ್ನು ಜಪಿಸಬೇಕು. ಒಂಬತ್ತನೆಯ ಹಾಗೂ ಕೊನೆಯ ಮಂಗಳವಾರದಂದು, ನಿಮ್ಮ ಮನೆಯಲ್ಲಿ ಮೂರು ಜನ ಮುತ್ತೈದೆಯರಿಗೆ ಕದಳಿ ಫಲ (ಬಾಳೆಹಣ್ಣು) ಸಮೇತ ತಾಂಬೂಲವನ್ನು ನೀಡಿದರೆ, ನಿಮ್ಮ ಎಲ್ಲಾ ಸಂಕಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಗಲಕೋಟೆ, ಮಾರ್ಚ್ 22: ಹೊನ್ನಾಕಟ್ಟಿ ಚೆಕ್ ಪೋಸ್ಟ್‌ನಲ್ಲಿ ಮಾರುತಿ ಎರ್ಟಿಗಾ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 32.50 ಲಕ್ಷ ರೂಪಾಯಿ ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಹಣ ರಾಯಚೂರಿನ ಬಿ. ವೀರೇಶ್ ಬಾಬು ಅವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಈ ಹಣವನ್ನು ರಾಯಚೂರಿನಿಂದ ಬೆಳಗಾವಿ ಕಡೆಗೆ ಕಾರಿನಲ್ಲಿ ಸಾಗಿಸಲಾಗುತ್ತಿತ್ತು. ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಯಾವುದೇ ಸೂಕ್ತ ದಾಖಲೆಗಳಿಲ್ಲದೆ ನಗದು ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿ, ತಕ್ಷಣವೇ ಹಣವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ರಾಜ್ಯದಲ್ಲಿ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಅಕ್ರಮ ಹಣ ಸಾಗಾಟವನ್ನು ತಡೆಯಲು ಮತ್ತು ಮತದಾರರಿಗೆ ಹಣದ ಆಮಿಷ ಒಡ್ಡುವುದನ್ನು ನಿಯಂತ್ರಿಸಲು ವ್ಯಾಪಕ ತಪಾಸಣೆ ಹಾಗೂ ನಿಗಾವನ್ನು ತೀವ್ರಗೊಳಿಸಿದೆ.
ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರಿಗೆ ‘ಧುರಂಧರ್’ ಮತ್ತು ‘ಧುರಂಧರ್ 2’ (Dhurandhar 2) ಸಿನಿಮಾದಿಂದ ಖ್ಯಾತಿ ಹೆಚ್ಚಾಗಿದೆ. ಈ ಚಿತ್ರಗಳಲ್ಲಿ ಅವರು ನಿರ್ವಹಿಸಿರುವ ಪಾಕಿಸ್ತಾನಿ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಹುಬೇಡಿಕೆಯ ನಟನಾಗಿರುವ ಅವರು ಈ ಪಾತ್ರಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ. ಆ ಬಗ್ಗೆ ಮಾಹಿತಿ ಸಿಕ್ಕಿದೆ. ಮೂಲಗಳ ಪ್ರಕಾರ, ಸಂಜಯ್ ದತ್ ಅವರಿಗೆ ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ (Sanjay Dutt Remuneration) ನೀಡಲಾಗಿದೆ.
‘ಧುರಂಧರ್ 2’ ಸಿನಿಮಾದಲ್ಲಿ ಸಂಜಯ್ ದತ್ ಅವರು ಪಾಕಿಸ್ತಾನದ ಪೊಲೀಸ್ ಅಧಿಕಾರಿ ಎಸ್‌ಪಿ ಚೌಧರಿ ಅಸ್ಲಂ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರವು ಕರಾಚಿಯ ನೈಜ ಪೊಲೀಸ್ ಅಧಿಕಾರಿ ಚೌಧರಿ ಅಸ್ಲಂ ಖಾನ್ ಅವರ ಜೀವನದಿಂದ ಪ್ರೇರಿತವಾಗಿದೆ. ಲಿಯಾರಿ ಪ್ರದೇಶದ ಭೂಗತ ಲೋಕ ಮತ್ತು ಮಾದಕವಸ್ತು ಮಾಫಿಯಾವನ್ನು ಮಟ್ಟ ಹಾಕಲು ರಚಿಸಲಾದ ಲಿಯಾರಿ ಟಾಸ್ಕ್ ಫೋರ್ಸ್ ನೇತೃತ್ವವನ್ನು ಚೌಧರಿ ಅಸ್ಲಂ ವಹಿಸಿಕೊಂಡಿದ್ದರು.
ಆ ಪಾತ್ರಕ್ಕೆ ಸಂಜಯ್ ದತ್ ಅವರು ಜೀವ ತುಂಬಿದ್ದಾರೆ. ಅವರ ಗಡುಸಾದ ಧ್ವನಿ, ಖಡಕ್ ಡೈಲಾಗ್ ಡೆಲಿವರಿ ಮತ್ತು ಮ್ಯಾನರಿಸಂ ಕಾರಣದಿಂದ ಆ ಪಾತ್ರ ಚೆನ್ನಾಗಿ ಮೂಡಿಬಂದಿದೆ. ಬೇರೆ ಪಾತ್ರಗಳ ರೀತಿ ಈ ಪಾತ್ರ ಕೂಡ ಸಿನಿಮಾದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಈ ಫ್ರಾಂಚೈಸಿಯ ಎರಡು ಭಾಗಗಳಿಗಾಗಿ ಸಂಜಯ್ ದತ್ ಅವರಿಗೆ ಒಟ್ಟು 10 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ.
ಕಲಾವಿದರ ಸಂಭಾವನೆ, ಮೇಕಿಂಗ್ ಖರ್ಚು ಎಲ್ಲವೂ ಸೇರಿ ಅದ್ದೂರಿ ಬಜೆಟ್ನಲ್ಲಿ ‘ಧುರಂಧರ್ 2’ ಸಿನಿಮಾ ಮೂಡಿಬಂದಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದೆ. ಕೇವಲ 3 ದಿನಗಳಲ್ಲಿ ಈ ಸಿನಿಮಾ ಜಾಗತಿಕವಾಗಿ 500 ಕೋಟಿ ರೂಪಾಯಿ ಗಡಿಯನ್ನು ದಾಟಿದೆ ಎಂಬ ಮಾಹಿತಿ ಲಭ್ಯಬಾಗಿದೆ.
ಯುಗಾದಿ, ಈದ್ ಹಬ್ಬದ ರಜೆ ಹಾಗೂ ವೀಕೆಂಡ್ ಜೊತೆಯಾಗಿ ಬಂದಿದ್ದರಿಂದ ಭಾರತದಲ್ಲಿ ಕಲೆಕ್ಷನ್ ಚೆನ್ನಾಗಿ ಆಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದುವರೆಗೆ ಸುಮಾರು 339 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್, ಆರ್. ಮಾಧವನ್, ಅರ್ಜುನ್ ರಾಮ್ಪಾಲ್ ಅವರಂತಹ ಘಟಾನುಘಟಿ ಕಲಾವಿದರಿದ್ದಾರೆ.
ಮಂಗಳೂರು, ಮಾರ್ಚ್ 22: ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ಪೊಲೀಸ್ ವರದಿ ಹೇಳಿದ್ದ ನಡುವೆಯೇ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ಗೆ ಬಿಗ್ ಶಾಕ್ ಸಿಕ್ಕಿದೆ. ಬೆಳ್ತಂಗಡಿ ತಾಲೂಕಿನ ವೇಣೂರು ಠಾಣೆಯಲ್ಲಿ ಸಂದೇಶ್ ವಿರುದ್ಧ ಸಂತ್ರಸ್ತೆ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಅತ್ಯಾಚಾರ ಆರೋಪದಡಿ ಎಫ್ಐಆರ್ ದಾಖಲಾಗಿದೆ. 2018 ರಿಂದ 2023ರವರೆಗೆ ಶಿಕ್ಷಕಿ ಮನೆಗೆ ಹೋಗಿ ಬೆದರಿಸಿ ಅತ್ಯಾಚಾರ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
2020ರಲ್ಲಿ ಸಂದೇಶ್ ಬೆಳ್ತಂಗಡಿ ಸರ್ಕಲ್ ವ್ಯಾಪ್ತಿಯಲ್ಲಿರುವ ವೇಣೂರು ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದರು. ಹೀಗಾಗಿ ವೇಣೂರು ಠಾಣಾ ವ್ಯಾಪ್ತಿಯಲ್ಲೇ ಅತ್ಯಾಚಾರ ಆರೋಪದಡಿ ಸೆಕ್ಷನ್ 376(2)(a)(1), 376(2)(n), 384, 506ರಡಿ ಕೇಸ್ ದಾಖಲಾಗಿದೆ. ಸಂದೇಶ್ ವಿರುದ್ಧ ಇಬ್ಬರು ಮಹಿಳೆಯರು ಮಾಡಿದ್ದ ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ಪೊಲೀಸ್ ವರದಿ ಹೇಳಿದೆ. ಮಾಧ್ಯಮಗಳ ಮುಂದೆ ಬಂದಿದ್ದ ಆ ಮಹಿಳೆಯರಿಗೆ ಕಿರುಕುಳ ನೀಡಿಲ್ಲ. ಪ್ರಚೋದನೆಗೆ ಒಳಪಟ್ಟು ಪಿಐ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಮಹಿಳೆಯರ ಆರೋಪ ಸುಳ್ಳು ಮತ್ತು ಪ್ರೇರಿತ ಎಂದು ಸಾಬೀತಾಗಿದೆ ಎಂದು ನಿನ್ನೆಯಷ್ಟೇ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದರು. ಆ ಬೆನ್ನಲ್ಲೇ ಈಗ ಸಂದೇಶ್ ವಿರುದ್ಧ ಅತ್ಯಾಚಾರ ದೂರು ದಾಖಲಾಗಿದೆ.
ಸಂತ್ರಸ್ತೆ ಮಹಿಳೆ ಆರೋಪ ಸಂಬಂಧ ಕೆಲ ಆಡಿಯೋ ವಿಡಿಯೋಗಳ ಬಯಲಿಗೆ ಬರುತ್ತಿದ್ದಂತೆಯೇ ಇನ್ಸ್ಪೆಕ್ಟರ್ ವಿರುದ್ಧದ ಪ್ರಕರಣದ ತನಿಖೆ ನಡೆಸಿ ವರದಿ ನೀಡುವ ಹೊಣೆಯನ್ನು ಎಸಿಪಿ ಶ್ರೀಕಾಂತ್‌ಗೆ ನೀಡಲಾಗಿತ್ತು. ಪ್ರಕರಣ ಸಂಬಂಧ ಶಾಸಕ ಉಮಾನಾಥ್ ಕೋಟ್ಯಾನ್ ಗೃಹ ಸಚಿವರನ್ನ ಭೇಟಿ ಮಾಡಿ ಮಾಡಿ ಸಂದೇಶ್ರನ್ನು ಅಮಾನತ್ತಿನಲ್ಲಿಟ್ಟು ತನಿಖೆ ಮಾಡುವಂತೆ ಮನವಿ ಮಾಡಿದ್ದರು. ಅಲ್ಲದೇ ಈ ಬಗ್ಗೆ ಮಹಿಳಾ ಆಯೋಗ ಸಹ ಸುಮಟೋ ಕೇಸ್ ದಾಖಲಿಸಿಕೊಂಡು, ಪ್ರಕರಣದ ವರದಿ ನೀಡುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿತ್ತು. ಈ ಎಲ್ಲಾ ಬೆಳವಣಿಗೆ ಬಳಿಕ ಇನ್ಸ್ಪೆಕ್ಟರ್ ಸಂದೇಶ ಅವರನ್ನು ಅಮಾನತು ಕೂಡ ಮಾಡಲಾಗಿತ್ತು.
ಬೆಂಗಳೂರು, ಮಾರ್ಚ್ 22: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದ ಇಂಧನ ಸರಬರಾಜಿನ ಬಗ್ಗೆ ಉಂಟಾದ ಆತಂಕದ ನಡುವೆಯೇ ಅಮೆರಿಕಾದಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (LPG)ಸಾಗಣೆ ಭಾರತಕ್ಕೆ ತಲುಪಿದೆ. ಸಿಂಗಾಪುರ್ ಧ್ವಜದಡಿಯಲ್ಲಿ ಸಾಗುವ ‘ಪೈಕ್ಸಿಸ್ ಪಯನಿಯರ್’ ಹಡಗು ಭಾನುವಾರ ಬೆಳಗ್ಗೆ ನವ ಮಂಗಳೂರು ಬಂದರಿಗೆ ಆಗಮಿಸಿದೆ.
ಬಂದರಿಗೆ ಬಂದಿರುವ ಹಡಗಿನಲ್ಲಿರುವ LPG ಪ್ರಮಾಣ ಎಷ್ಟು?
ನವ ಮಂಗಳೂರು ಬಂದರು ಪ್ರಾಧಿಕಾರದ ಮಾಹಿತಿ ಪ್ರಕಾರ 47,236 ಟನ್ ಸಾಮರ್ಥ್ಯದ ಈ ಹಡಗು ಬೆಳಗ್ಗೆ ಸುಮಾರು 6 ಗಂಟೆಗೆ ಬರ್ತ್ ಸಂಖ್ಯೆ 13ಕ್ಕೆ ತಲುಪಿತು. ಫೆಬ್ರವರಿ 14ರಂದು ಟೆಕ್ಸಾಸ್‌ನ ನೆದರ್‌ಲ್ಯಾಂಡ್ ಬಂದರಿನಿಂದ ಹೊರಟಿದ್ದ ಈ ಹಡಗು, ಈಗ ಏಜಿಸ್ ಲಾಜಿಸ್ಟಿಕ್ಸ್ ಲಿಮಿಟೆಡ್‌ಗಾಗಿ ಸುಮಾರು 16,714 ಟನ್ LPG ಇಳಿಸಲು ಯೋಜಿಸಲಾಗಿದೆ. ಹಡಗು ಸೋಮವಾರ ಬೆಳಿಗ್ಗೆ ಹೊರಡಲಿದೆ ಎಂದು ನಿರೀಕ್ಷಿಸಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಸುಮಾರು ಮೂರು ವಾರಗಳಿಂದ ನಡೆಯುತ್ತಿರುವ ಸಂಘರ್ಷದಿಂದ ಭಾರತದ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಹೋಟೆಲ್‌ಗಳಂತಹ ವಾಣಿಜ್ಯ ಉದ್ಯಮಗಳಿಗೆ LPG ಪೂರೈಕೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿ, ಗೃಹ ಬಳಕೆಗಾಗಿ ಆದ್ಯತೆ ನೀಡಲಾಗಿತ್ತು. ಇದರ ಮಧ್ಯೆ ಮಾರ್ಚ್ 18ರಂದು ‘ಜಾಗ್ ಲಾಡ್ಕಿ’ ಎಂಬ ಕಚ್ಚಾ ತೈಲ ಟ್ಯಾಂಕರ್ ಸುಮಾರು 80,800 ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಮುಂದ್ರಾ ಬಂದರಿಗೆ ತಂದು ತಲುಪಿಸಿತ್ತು. ಜೊತೆಗೆ ‘ನಂದಾ ದೇವಿ’ ಮತ್ತು ‘ಶಿವಾಲಿಕ್’ ಎಂಬ LPG ಸಾಗಣೆ ಹಡಗುಗಳು ಕ್ರಮವಾಗಿ ವಾಡಿನಾರ್ ಮತ್ತು ಮುಂದ್ರಾ ಬಂದರುಗಳಿಗೆ ತಲುಪಿವೆ.
ಇರಾನ್, ಹೋರ್ಮುಜ್ ಕಣಿವೆಯ ಮೂಲಕ ಭಾರತೀಯ ಹಡಗುಗಳಿಗೆ ಸುರಕ್ಷಿತ ಸಂಚಾರ ಭರವಸೆ ನೀಡಿದರೂ, ಯುಎಇ ಬಂದರು ಪ್ರದೇಶಗಳ ಮೇಲೆ ದಾಳಿ ಸಾಧ್ಯತೆಗಳ ಬಗ್ಗೆ ಎಚ್ಚರಿಕೆ ನೀಡಿದೆ. ಭಾರತ ತನ್ನ ಇಂಧನ ಅವಶ್ಯಕತೆಗಳಿಗೆ ಬಹಳ ಮಟ್ಟಿಗೆ ಆಮದುಗಳ ಮೇಲೆ ಅವಲಂಬಿತವಾಗಿದೆ. ದೇಶದ ಒಟ್ಟು ಕಚ್ಚಾ ತೈಲದ ಶೇ 88, ನೈಸರ್ಗಿಕ ಅನಿಲದ ಶೇ 50 ಮತ್ತು LPGಯ ಸುಮಾರು ಶೇ60 ವಿದೇಶಗಳಿಂದ ಬರುತ್ತವೆ. ಫೆಬ್ರವರಿ 28ರಂದು ಅಮೆರಿಕಾ-ಇಸ್ರೇಲ್ ದಾಳಿಗಳ ನಂತರ ಉದ್ಭವಿಸಿದ ಪರಿಸ್ಥಿತಿಗೂ ಮೊದಲು ಈ ಆಮದುಗಳ ಬಹುಪಾಲು ಸೌದಿ ಅರೇಬಿಯಾ ಮತ್ತು ಯುಎಇ ಮುಂತಾದ ಪಶ್ಚಿಮ ಏಷ್ಯಾ ದೇಶಗಳಿಂದ ಆಗುತ್ತಿತ್ತು.
ಸೌದಿ, ಮಾರ್ಚ್ 22: ಪತ್ನಿ ಜತೆ ಫೋನ್‌ನಲ್ಲಿ ಮಾತನಾಡುತ್ತಿರುವಾಗಲೇ ಸೌದಿಯಲ್ಲಿ ಇರಾನ್(Iran) ವೈಮಾನಿಕ ದಾಳಿ ನಡೆಸಿದ್ದು ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ರವಿ ಗೋಪಾಲ್ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಬಘೈನ್ ಗ್ರಾಮದವರಾಗಿದ್ದಾರೆ. ರವಿಯ ಮೃತದೇಹವನ್ನು ಸ್ವದೇಶಕ್ಕೆ ತರಲು ಕುಟುಂಬವು ಹೆಣಗಾಡುತ್ತಿದ್ದು, ಅಧಿಕಾರಿಗಳು ಇಲ್ಲಿಯವರೆಗೆ ಮೌನವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾರ್ಚ್ 18ರ ರಾತ್ರಿ, ಕಾರ್ಖಾನೆಯಲ್ಲಿ ಕೆಲಸ ಮುಗಿಸಿದ ನಂತರ, ರವಿ ತನ್ನ ಪತ್ನಿ ರಿತು ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ಹಠಾತ್ ಸ್ಫೋಟ ಸಂಭವಿಸಿತ್ತು, ಕರೆ ಹಠಾತ್ತನೆ ಸಂಪರ್ಕ ಕಡಿತಗೊಂಡಿತು ಮತ್ತು ಸ್ವಲ್ಪ ಸಮಯದ ನಂತರ ಅವರ ಕರೆ ಸ್ಥಗಿತಗೊಂಡಿತ್ತು.
ರಾತ್ರಿ 8.20 ರ ಸುಮಾರಿಗೆ ಕರೆ ಬಂದಿತ್ತು, 9.53 ಸುಮಾರಿಗೆ ಸ್ಫೋಟದ ಶಬ್ದ ಕೇಳುವವರೆಗೂ ಅಲ್ಲಿ ಸಾಮಾನ್ಯವಾಗಿತ್ತು ಎಂದು ರಿತು ನೆನಪಿಸಿಕೊಂಡರು, ನಂತರ ಸಂಪರ್ಕ ಕಡಿತಗೊಂಡಿತು. ಪದೇ ಪದೇ ಪ್ರಯತ್ನಿಸಿದರೂ ಕುಟುಂಬವು ಅವರನ್ನು ಮತ್ತೆ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಮರುದಿನ, ಸ್ನೇಹಿತರೊಬ್ಬರು ಕ್ಷಿಪಣಿ ದಾಳಿಯಲ್ಲಿ ರವಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಕ್ಕೆ ಮಾಹಿತಿ ನೀಡಿದ್ದರು.
ಮಾರ್ಚ್ 18 ರಂದು (ಬುಧವಾರ), ಸೌದಿ ಅರೇಬಿಯಾ ನಾಲ್ಕು ಇರಾನಿನ ಬ್ಯಾಲಿಸ್ಟಿಕ್ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ. ಮತ್ತು ಕೆಲವು ಭಗ್ನಾವಶೇಷಗಳು ನಗರದ ದಕ್ಷಿಣಕ್ಕೆ ಸಂಸ್ಕರಣಾಗಾರದ ಬಳಿ ಬಿದ್ದವು. ಬಿದ್ದ ಅವಶೇಷಗಳು ಡಿಕ್ಕಿ ಹೊಡೆದು ಭಾರತೀಯ ಪ್ರಜೆ ಸಾವನ್ನಪ್ಪಿರಬಹುದು.
ರವಿ ಅವರ ಹೆತ್ತವರು, ಪತ್ನಿ ಮತ್ತು ನಾಲ್ಕು ವರ್ಷದ ಮಗ ಸೇರಿದಂತೆ ಅವರ ಕುಟುಂಬಕ್ಕೆ ಅವರೇ ಏಕೈಕ ಆದಾಯ ಗಳಿಸುವ ವ್ಯಕ್ತಿಯಾಗಿದ್ದರು. ರವಿ ಸೆಪ್ಟೆಂಬರ್ 2020 ರಲ್ಲಿ ರಿತು ಅವರನ್ನು ವಿವಾಹವಾಗಿದ್ದರು ಮತ್ತು ಅಂದಿನಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು.
ಸರ್ಕಾರದಿಂದ ಇದುವರೆಗೆ ಯಾವುದೇ ನಿರ್ದಿಷ್ಟ ನೆರವು ಸಿಕ್ಕಿಲ್ಲ ಎಂದು ಕುಟುಂಬ ಆರೋಪಿಸಿದೆ. ಕುಟುಂಬವು ಘಟನೆಯ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ವರದಿ ಮಾಡಿದ್ದು, ಅವರು ತ್ವರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದಾಗ್ಯೂ, ರವಿಯ ಮೃತದೇಹವನ್ನು ಇನ್ನೂ ಭಾರತಕ್ಕೆ ಕಳುಹಿಸಲಾಗಿಲ್ಲ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಇಲ್ಲಿಯವರೆಗೆ ಆರು ಭಾರತೀಯರು ಸಾವನ್ನಪ್ಪಿದ್ದಾರೆ.
ಮಾರ್ಚ್ 14 ರಂದು, ಒಮನ್‌ನ ಸೊಹಾರ್‌ನಲ್ಲಿ ಡ್ರೋನ್ ದಾಳಿಯಲ್ಲಿ ಇಬ್ಬರು ಭಾರತೀಯರು ಸಾವನ್ನಪ್ಪಿದ್ದರು. ಒಂದು ವಾರದ ಹಿಂದೆ, ಸೌದಿ ಅರೇಬಿಯಾದ ಅಲ್ ಖಾರ್ಜ್‌ನಲ್ಲಿ ರಾಡಾರ್ ವ್ಯವಸ್ಥೆಗಳನ್ನು ಗುರಿಯಾಗಿಸಲು ಉದ್ದೇಶಿಸಲಾದ ಇರಾನಿನ ಕ್ಷಿಪಣಿ ವಸತಿ ಪ್ರದೇಶವನ್ನು ಅಪ್ಪಳಿಸಿ ಒಬ್ಬ ಭಾರತೀಯ ಪ್ರಜೆ ಸಾವನ್ನಪ್ಪಿದ್ದರು.
ಬೆಂಗಳೂರು, ಮಾರ್ಚ್ 22: ಜನ್ಮತಃ ಹೈಪರ್‌ಇನ್ಸುಲಿನಿಸಮ್ (Congenital Hyperinsulinism) ಎನ್ನುವ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 16 ದಿನದ ಶಿಶುವಿಗೆ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ವೈಟ್‌ಫೀಲ್ಡ್‌ನ ಮಣಿಪಾಲ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ತೀವ್ರ ಹೈಪೋಗ್ಲೈಸೀಮಿಯಾ (ರಕ್ತದಲ್ಲಿ ಶರ್ಕರ ಪ್ರಮಾಣ ಕಡಿಮೆಯಾಗುವುದು) ಪರಿಣಾಮವಾಗಿ ಶಿಶುವಿಗೆ ಶಾಶ್ವತ ಮೆದುಳು ಹಾನಿಯ ಅಪಾಯ ಉಂಟಾಗಿತ್ತು. 4.6 ಕೆ.ಜಿ ತೂಕ ಹೊಂದಿದ್ದ ಈ ನವಜಾತ ಶಿಶುವಿಗೆ ಹೆಚ್ಚಿನ ಪ್ರಮಾಣದ ಇಂಟ್ರಾವೀನಸ್ ಗ್ಲೂಕೋಸ್ ನೀಡುತ್ತಿದ್ದರೂ ರಕ್ತದಲ್ಲಿ ಶರ್ಕರ ಪ್ರಮಾಣ ತೀವ್ರವಾಗಿ ಕುಸಿಯುತ್ತಿತ್ತು. ಈ ಹಿನ್ನೆಲೆ ತುರ್ತು ಚಿಕಿತ್ಸೆ ನಡೆಸಲಾಗಿದೆ.
ವೈದ್ಯರು ಮೇದೋಜೀರಕ ಗ್ರಂಥಿಯಲ್ಲಿ ಅತಿಯಾಗಿ ಇನ್ಸುಲಿನ್ ಉತ್ಪಾದನೆ ಮಾಡುತ್ತಿದ್ದ ಸಣ್ಣ ಫೋಕಲ್ ಲೀಷನ್ ಅನ್ನು ಪತ್ತೆಹಚ್ಚಿದರು. ಈ ಸಮಸ್ಯೆ ನಿರ್ದಿಷ್ಟ ಭಾಗಕ್ಕೆ ಮಾತ್ರ ಸೀಮಿತವಾಗಿದ್ದರಿಂದ, ಸಂಪೂರ್ಣ ಮೇದೋಜೀರಕ ಗ್ರಂಥಿ ತೆಗೆದುಹಾಕುವ ಅಗತ್ಯವಿಲ್ಲದೆ ನಿರ್ದಿಷ್ಟ ಜಾಗದಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗಿದೆ. ಇದರಿಂದ ದೀರ್ಘಕಾಲಿಕ ಅಡ್ಡ ಪರಿಣಾಮಗಳ ಅಪಾಯವೂ ಕಡಿಮೆ ಇರಲಿದೆ ಎನ್ನಲಾಗಿದೆ.
ಶಿಶುವಿನ ವಯಸ್ಸು ಹಾಗೂ ಸಮಸ್ಯೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ವೈದ್ಯರು ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಇದರ ಮೂಲಕ ಸಮಸ್ಯೆಯಿದ್ದ ಭಾಗದಲ್ಲಿ ನಿಖರವಾಗಿ ಚಿಕಿಯ್ಸೆ ನೀಡಲಾಗಿದೆ. ಯಾವುದೇ ರಕ್ತಸ್ರಾವ ಅಥವಾ ಸಂಕೀರ್ಣತೆ ಇಲ್ಲದೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬಳಿಕ ಶಿಶುವಿನ ರಕ್ತದ ಶರ್ಕರ ಮಟ್ಟ ತಕ್ಷಣವೇ ಸಾಮಾನ್ಯಗೊಂಡಿದ್ದಲ್ಲದೆ, ಗ್ಲೂಕೋಸ್ ನೀಡುವ ಅಗತ್ಯವೂ ಬಂದಿಲ್ಲ. ಇನ್ನು ಶಿಶುವನ್ನು ಒಂಬತ್ತು ದಿನಗಳ ಕಾಲ ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿ (NICU) ಇಟ್ಟು, ಆರೋಗ್ಯ ಸುಧಾರಣೆಯ ಬಳಿಕ ಪೋಷಕರ ಜೊತೆ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ರಷ್ಯಾ, ಮಾರ್ಚ್ 22: ಯುವತಿಯೊಬ್ಬಳು ಓಡಿ ಬಂದು ರಸ್ತೆ ದಾಟಲು ಹೋಗಿ ವಾಹನದಡಿಗಾಗಿರುವ ಘಟನೆ ರಷ್ಯಾದ ಕ್ರಾಸ್ನೊಯಾರ್ಸ್ಕ್‌ನ ಆಸ್ಟಿಲೆರೊ ಜಿಲ್ಲೆಯಲ್ಲಿ ನಡೆದಿದೆ. ಯುವತಿಯೊಬ್ಬಳು ರಸ್ತೆ ದಾಟುತ್ತಿದ್ದಾಗ ಜಾರಿಬಿದ್ದಿದ್ದು, ವಾಹನವೊಂದು ಆಕೆಯ ಮೇಲೆ ಹತ್ತಿದೆ. ಯುವತಿ ವಾಹನದ ಕೆಳಗೆ ಸಿಲುಕಿಕೊಂಡಿದ್ದು, ಕಾರು ಕೆಲವು ಮೀಟರ್ಗಳಷ್ಟು ದೂರ ಆಕೆಯನ್ನು ಎಳೆದುಕೊಂಡು ಹೋಗಿದೆ. ಬಳಿಕ ಹೇಗೋ ಸಾಹಸ ಮಾಡಿ ಆಕೆಯನ್ನು ಹೊರಗೆ ತೆಗೆಯಲಾಯಿತು.
ದಕ್ಷಿಣ ಭಾರತದ ಖ್ಯಾತ ಸೆಲೆಬ್ರಿಟಿಗಳಾದ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಅವರು ಮದುವೆಯ ಬಳಿಕ ಹನಿಮೂನ್ಗೆ ತೆರಳಿದ್ದಾರೆ. ಈ ನವಜೋಡಿಯ ಹನಿಮೂನ್ (Honeymoon) ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉದಯಪುರದಲ್ಲಿ ನಡೆದ ಅದ್ದೂರಿ ಮದುವೆಯ ನಂತರ, ಈ ದಂಪತಿ ಥೈಲ್ಯಾಂಡ್‌ಗೆ ಹಾರಿದ್ದಾರೆ. ಅಲ್ಲಿನ ಸುಂದರ ದ್ವೀಪದಲ್ಲಿ ಕಾಲ ಕಳೆಯುತ್ತಿದ್ದಾರೆ. ತಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳಲು ಯಾವುದೇ ಐಷಾರಾಮಿ ರೆಸಾರ್ಟ್ ಬದಲು ವಿಲ್ಲಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಈಗ ವೈರಲ್ ಆಗಿರುವ ಫೋಟೋದಲ್ಲಿ, ಪ್ರಕೃತಿಯ ನಡುವೆ ಇರುವ ಸುಂದರವಾದ ಮೆಟ್ಟಿಲುಗಳ ಮೇಲೆ ವಿಜಯ್ ಮತ್ತು ರಶ್ಮಿಕಾ ಪರಸ್ಪರ ಪ್ರೀತಿಯಿಂದ ನೋಡುತ್ತಿರುವುದನ್ನು ಕಾಣಬಹುದು. ರಶ್ಮಿಕಾ ಹಳದಿ ಬಣ್ಣದ ಫ್ಲೋರಲ್ ಡ್ರೆಸ್‌ನಲ್ಲಿ ಮಿಂಚುತ್ತಿದ್ದರೆ, ವಿಜಯ್ ಕ್ಯಾಶುವಲ್ ಟೀ-ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದಾರೆ. ಈ ಫೋಟೋ ವೈರಲ್ ಆಗಿದೆ.
‘ಅವರು ಉಳಿದುಕೊಂಡಿರುವ ವಿಲ್ಲಾ ಸಮುದ್ರದ ಕಡೆಗೆ ಮುಖ ಮಾಡಿದ್ದು, ಅತ್ಯಂತ ಆಪ್ತವಾದ ವಾತಾವರಣ ಹೊಂದಿದೆ. ಅವರ ಮದುವೆಯಂತೆಯೇ, ಹನಿಮೂನ್ ಕೂಡ ಅವರ ಸರಳತೆ ಮತ್ತು ವೈಯಕ್ತಿಕ ಇಷ್ಟಗಳಿಗೆ ಸಾಕ್ಷಿಯಾಗಿದೆ’ ಎಂದು ಅವರ ಆಪ್ತ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ವೈರಲ್ ಆಗಿರುವ ಫೋಟೋಗೆ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಫೆಬ್ರವರಿ 26ರಂದು ಉದಯಪುರದ ಐಷಾರಾಮಿ ಹೋಟೆಲ್‌ನಲ್ಲಿ ಇವರಿಬ್ಬರೂ ವಿವಾಹವಾಗಿದ್ದರು. ಈ ಮದುವೆಯು ವಿಜಯ್ ಅವರ ತೆಲುಗು ಸಂಪ್ರದಾಯ ಮತ್ತು ರಶ್ಮಿಕಾ ಅವರ ಕೊಡಗಿನ ಕೊಡವ ಸಂಪ್ರದಾಯಗಳ ಸುಂದರ ಸಮ್ಮಿಲನವಾಗಿತ್ತು. ಕೇವಲ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ನಡೆದ ಈ ಮದುವೆಯ ಫೋಟೋಗಳು ಈಗಾಗಲೇ ಅಭಿಮಾನಿಗಳ ಮನಗೆದ್ದಿವೆ.
ಈ ವೈರಲ್ ಆಗಿರುವ ಈ ಜೋಡಿಯ ಹನಿಮೂನ್ ಫೋಟೋಗೆ ಅಭಿಮಾನಿಗಳು ‘ಮೇಡ್ ಫಾರ್ ಈಚ್ ಅದರ್’ ಎಂದು ಕಾಮೆಂಟ್ ಮಾಡುತ್ತಿದ್ದು, ವಿರೋಶ್ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ‘ರಣಬಾಲಿ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಜೊತೆಯಾಗಿ ನಟಿಸಲಿದ್ದಾರೆ. ಆ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ.