ಉದ್ಯೋಗ ನೇಮಕಾತಿಗೂ AI ಸಂಕಷ್ಟ! ಕಾಪಿ ಪೇಸ್ಟ್ ಅರ್ಜಿಗಳಿಂದ ರಿಕ್ರೂಟರ್​ಗೆ ತಲೆನೋವು

ಉದ್ಯೋಗ ನೇಮಕಾತಿಗೂ AI ಸಂಕಷ್ಟ! ಕಾಪಿ ಪೇಸ್ಟ್ ಅರ್ಜಿಗಳಿಂದ ರಿಕ್ರೂಟರ್​ಗೆ ತಲೆನೋವು

ಬೆಂಗಳೂರು, ಮಾರ್ಚ್​ 21: ಇಂದಿನ ತಂತ್ರಜ್ಞಾನದ ಯುಗದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಎಐ (AI) ಅಂದರೆ ಕೃತಕ ಬುದ್ಧಿಮತ್ತೆ ಕಂಟಕ ತರಬಹುದು ಎಂಬ ಆತಂಕದ ಜೊತೆಗೆ ಉದ್ಯೋಗಿಗಳ ಕೆಲಸವನ್ನೂ ಕಸಿದುಕೊಳ್ಳಬಹುದೆಂಬ ಭಯ ಈಗಾಗಲೇ ಸೃಷ್ಟಿಯಾಗಿದೆ. ಇದರ ಜೊತೆಗೆ ಎಐನಿಂದ ನೇಮಕಾತಿ ಪ್ರಕ್ರಿಯೆಯೂ ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ ಎಂಬ ಅಭಿಪ್ರಾಯಗಳು ಹರಿದಾಡಿದ್ದು, ಈ ಬಗ್ಗೆ ಬೆಂಗಳೂರು ಮೂಲದ ಟೇಕ್ ಯು ಫಾರ್ವರ್ಡ್​ ಸಂಸ್ಥೆಯ ಸಂಸ್ಥಾಪಕ ರಾಜ್ ವಿಕ್ರಮಾದಿತ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಕಾಪಿ ಪೇಸ್ಟ್ ಅರ್ಜಿಗಳೇ ಹೆಚ್ಚು ಎಂದ ಸಂಸ್ಥಾಪಕ

ಇತ್ತೀಚೆಗೆ ಯೂಸರ್ ಎಕ್ಸ್‌ಪೀರಿಯನ್ಸ್ (UX) ಹುದ್ದೆಗೆ ನಡೆದ ನೇಮಕಾತಿ ಪ್ರಕ್ರಿಯೆಯನ್ನು ಉದಾಹರಿಸಿ ಮಾತನಾಡಿದ ಅವರು, ಹೆಚ್ಚಿನ ಅಭ್ಯರ್ಥಿಗಳ ಅರ್ಜಿಗಳು AI ಮೂಲಕ ತಯಾರಿಸಲಾಗಿವೆ. ಅಲ್ಲದೆ ಅವುಗಳು ಕೇವಲ ತಾಂತ್ರಿಕತೆಯನ್ನು ಹೊಂದಿದ್ದು, ಅರ್ಜಿಯನ್ನು ಉತ್ತಮಗೊಳಿಸುವ ಕನಿಷ್ಠ ಪ್ರಯತ್ನವೂ ಕಂಡುಬಂದಿಲ್ಲವೆಂದು ಬರೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅರ್ಜಿಗಳ ಸಂಖ್ಯೆ ಹೆಚ್ಚಾಗಿದೆ, ಆದರೆ ಗುಣಮಟ್ಟದ ಅಭ್ಯರ್ಥಿಗಳು ಕಡಿಮೆಯಾಗುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

35 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ ಬಳಿಕ ನಡೆದ ಮೊದಲ ಹಂತದ ಮೌಲ್ಯಮಾಪನದಲ್ಲಿ ಬಹುತೇಕರು ಕಾಪಿ-ಪೇಸ್ಟ್ ಅಥವಾ AI ಆಧಾರಿತ ಉತ್ತರಗಳನ್ನು ಸಲ್ಲಿಸಿದ್ದರೆಂದು ಅವರು ಹೇಳಿದ್ದಾರೆ. ಸಂಶೋಧನೆ, ವೈಯಕ್ತಿಕ ಅಭಿಪ್ರಾಯ ಅಥವಾ ಕೆಲಸದ ಮೇಲೆ ಆಸಕ್ತಿ ತೋರಿದವರ ಸಂಖ್ಯೆ ಕಡಿಮೆ ಇರುವುದು ಸ್ಪಷ್ಟವಾಗಿ ಗೋಚರಿಸಿತು ಎಂದು ತಿಳಿಸಿದ್ದಾರೆ. ಈ 35 ಮಂದಿಯಲ್ಲಿ ಕೇವಲ ಒಬ್ಬ ಅಭ್ಯರ್ಥಿ ಮಾತ್ರ ಪ್ರಾಮಾಣಿಕ ಪ್ರಯತ್ನ ತೋರಿದ್ದು, ಆತನನ್ನು ನೇಮಕ ಮಾಡಲಾಗಿದೆ. ಉಳಿದವರು ಮೂಲಭೂತ ಸಿದ್ಧತೆಯನ್ನೂ ತೋರಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಪುಸ್ತಕ ಅನುವಾದಕ್ಕೂ ಬಂತು AI: ತಂತ್ರಜ್ಞಾನದ ಮೂಲಕ ಭಾಷಾಂತರಗೊಂಡ ಮೊದಲ ಬುಕ್​​ ಮಾ.15ರಂದು ಬಿಡುಗಡೆ

ವಿಕ್ರಮಾದಿತ್ಯ ಮಾಡಿದ ಎಕ್ಸ್ ಪೋಸ್ಟ್ ಇಲ್ಲಿದೆ

ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, AI ಉಪಕರಣಗಳಿಂದ ಸಾಮಾನ್ಯ, ಒಂದೇ ಮಾದರಿಯ ಅರ್ಜಿಗಳು ಹೆಚ್ಚಾಗಿವೆ ಎಂದು ಹಲವರು ಒಪ್ಪಿಕೊಂಡಿದ್ದಾರೆ. ನಿಜವಾದ ಸಾಮರ್ಥ್ಯ ತೋರಿಸಲು ಇಂದಿನ ದಿನಗಳಲ್ಲಿ ಆಳವಾದ ಪರಿಶ್ರಮ ಮತ್ತು ವೈಯಕ್ತಿಕತೆ ಮುಖ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪೆಟ್ರೋಲ್, ಡೀಸೆಲ್ ಖಾಲಿ ವದಂತಿ: ಚಾಮರಾಜನಗರ, ಕೊಳ್ಳೇಗಾಲದಲ್ಲಿ ಬಂಕ್​ಗಳಿಗೆ ಮುಗಿಬಿದ್ದ ವಾಹನ ಸವಾರರು

ಚಾಮರಾಜನಗರ, ಮಾರ್ಚ್ 21: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದ ಆತಂಕ ನಡುವೆ ಚಾಮರಾಜನಗರ ಜಿಲ್ಲೆಯಲ್ಲಿ ಪೆಟ್ರೋಲ್ ಕೊರತೆ ವದಂತಿ ಭಾರೀ ಗೊಂದಲಕ್ಕೆ ಕಾರಣವಾಗಿದೆ. ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ಪಟ್ಟಣಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ ಎಂಬ ವದಂತಿ ಹಬ್ಬಿದ್ದು, ವಾಹನ ಸವಾರರು ಏಕಾಏಕಿ ಪೆಟ್ರೋಲ್ ಬಂಕ್‌ಗಳತ್ತ ಮುಗಿಬಿದ್ದರು. ಇದರಿಂದ ಹಲವು ಬಂಕ್‌ಗಳಲ್ಲಿ ಉದ್ದ ಸಾಲುಗಳು ಕಂಡುಬಂದವು. ಗ್ಯಾಸ್ ಕೊರತೆಯಂತೆಯೇ ಪೆಟ್ರೋಲ್ ಹಾಗೂ ಡೀಸೆಲ್‌ಗೂ ಸಮಸ್ಯೆ ಉಂಟಾಗಬಹುದು ಎಂಬ ಭಯ ಜನರಲ್ಲಿ ಹೆಚ್ಚಾಗಿದ್ದು, ಮುಂಜಾಗ್ರತೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಖರೀದಿಸಲು ಜನರು ಹರಸಾಹಸ ಪಟ್ಟರು. ಕೆಲವು ಕಡೆಗಳಲ್ಲಿ ವಾಹನಗಳ ದೀರ್ಘ ಸಾಲುಗಳು ಟ್ರಾಫಿಕ್ ಸಮಸ್ಯೆಯನ್ನೂ ಉಂಟುಮಾಡಿದವು.

ಬಂಕ್ ಸಿಬ್ಬಂದಿ, ‘ಪೆಟ್ರೋಲ್ ಹಾಗೂ ಡೀಸೆಲ್ ಸಾಕಷ್ಟು ಲಭ್ಯವಿದೆ, ಯಾವುದೇ ಕೊರತೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದರೂ, ಜನರು ಅದನ್ನು ನಂಬದೇ ಖರೀದಿಸಲು ಮುಂದಾದರು. ಇದರಿಂದ ಕೆಲ ಸಮಯ ತಾತ್ಕಾಲಿಕ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Source link

ತೀವ್ರ ಗತಿಯಲ್ಲಿ ಕುಸಿದ ‘ಉಸ್ತಾದ್ ಭಗತ್ ಸಿಂಗ್’ ಕಲೆಕ್ಷನ್; ಒಂದಕಿಂಗೆ ಬಂದ ಗಳಿಕೆ

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಸಾಕಷ್ಟು ನಿರೀಕ್ಷೆಗಳೊಂದಿಗೆ ರಿಲೀಸ್ ಆಯಿತು. ಆದರೆ, ಸಿನಿಮಾ ಮೊದಲ ದಿನ ಭರ್ಜರಿ ಗಳಿಕೆ ಮಾಡಿತ್ತು. ಈ ಚಿತ್ರದ ಮೊದಲ ದಿನದ ಕಲೆಕ್ಷನ್ 34.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆದರೆ, ಎರಡನೇ ದಿನ ಚಿತ್ರದ ಗಳಿಕೆ ತೀವ್ರವಾಗಿ ಕುಸಿದಿದ್ದು, ಅಭಿಮಾನಿಗಳ ಆತಂಕಕ್ಕೆ ಕಾರಣ ಆಗಿದೆ. ಮುಂದಿನ ದಿನಗಳ ಕಲೆಕ್ಷನ್ ಆಧಾರದ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರ ಆಗಲಿದೆ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗೆ ಪವನ್ ಕಲ್ಯಾಣ್ ಹೀರೋ. ಅವರು ರಾಜಕೀಯಕ್ಕೆ ಸೇರಿದ್ದರಿಂದ ಸಿನಿಮಾ ಕೆಲಸಗಳು ಅರ್ಧಕ್ಕೆ ನಿಂತವು. ಆದರೆ, ಅವರು ಸಮಯ ಮಾಡಿಕೊಂಡು ಸಿನಿಮಾ ಶೂಟಿಂಗ್ ಮುಗಿಸಿಕೊಟ್ಟರು. ಈಗ ಚಿತ್ರ ಮಾರ್ಚ್ 19ರಂದು ರಿಲೀಸ್ ಆಗಿದೆ. ಮೊದಲ ದಿನ ಸಿನಿಮಾ ಅಬ್ಬರಿಸಿತ್ತು. ಭಾರತದಲ್ಲಿ ಸುಮಾರು 35 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

ಎರಡನೇ ದಿನವಾದ ಶುಕ್ರವಾರ ಸಿನಿಮಾ ಕೇವಲ 9.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನ ಈ ಚಿತ್ರ 4,607 ಶೋ ನೀಡಲಾಗಿತ್ತು. ಎರಡನೇ ದಿನ ಶೋ ಸಂಖ್ಯೆಯನ್ನು 3,447ಕ್ಕೆ ಇಳಿಸಲಾಗಿದೆ. ಇದು ‘ಧುರಂಧರ್ 2’ ಸಿನಿಮಾ ಎಫೆಕ್ಟ್ ಎಂದು ಹೇಳಲಾಗುತ್ತಾ ಇದೆ. ಶನಿವಾರ ಹಾಗೂ ಭಾನುವಾರ ಸಿನಿಮಾದ ಗಳಿಕೆ ಮೇಲೆ ಚಿತ್ರದ ಭವಿಷ್ಯ ನಿರ್ಧಾರ ಆಗಲಿದೆ.

ಇದನ್ನೂ ಓದಿ: ‘ಧುರಂಧರ್ 2’ ಅಬ್ಬರಕ್ಕೂ ಜಗ್ಗಿಲ್ಲ ‘ಉಸ್ತಾದ್ ಭಗತ್ ಸಿಂಗ್’; ಪವನ್ ಸಿನಿಮಾ ಗಳಿಕೆ ಎಷ್ಟು?

ಬಹಳ ಸಮಯದಿಂದ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಕೆಲಸಗಳು ನಿಂತಿದ್ದವು. ಕೊನೆಗೆ ಸಮಯ ಮಾಡಿಕೊಂಡು ಸಿನಿಮಾದ ಶೂಟ್​​ನ ಮಾಡಿಕೊಟ್ಟರು ಪವನ್. ಈಗ ಸಿನಿಮಾ ಬಿಡುಗಡೆ ಆಗಿದೆ. ಆದರೆ, ಅಂದುಕೊಂಡ ಮಟ್ಟಕ್ಕೆ ಸಿನಿಮಾ ಗಮನ ಸೆಳೆಯುತ್ತಿಲ್ಲ ಎಂಬುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೆಟ್ರೋಲ್ ಉಳಿಸಲು ವರ್ಕ್ ಫ್ರಂ ಹೋಂ? ಕೋವಿಡ್ ಸಂದರ್ಭದ ರೂಲ್ಸ್ ಮತ್ತೆ ಜಾರಿ ಸಾಧ್ಯತೆ!

ನವದೆಹಲಿ, ಮಾರ್ಚ್ 21: ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಎದುರಾದ ತುರ್ತು ಪರಿಸ್ಥಿತಿ ಮತ್ತೆ ಸೃಷ್ಟಿಯಾಗುತ್ತದೆಯಾ? ಇಂಥದ್ದೊಂದು ಪ್ರಶ್ನೆಗೆ ಇದೀಗ ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (IEA) ಮಾಡಿರುವ ಶಿಫಾರಸುಗಳು ಕಾರಣವಾಗಿದೆ. ಸದ್ಯ ಇರಾನ್, ಇಸ್ರೇಲ್, ಅಮೆರಿಕ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಬಿಕ್ಕಟ್ಟಿನ ಸನ್ನಿವೇಶ ಸೃಷ್ಟಿಯಾಗಿದೆ. ಇದನ್ನು ನಿರ್ವಹಿಸಲು ಇಂಧನ ಮತ್ತು ಗ್ಯಾಸ್ ಬಳಕೆ ಕಡಿತಗೊಳಿಸುವಂತೆ ಐಇಎ ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಜಗತ್ತಿನಲ್ಲಿ ಲಾಕ್‌ಡೌನ್ ಪರಿಸ್ಥಿತಿ ಸೃಷ್ಟಿಯಾಗಬಹುದು ಎಂಬ ಕಳವಳಗಳ ನಡುವೆ ಈ ಕ್ರಮಗಳನ್ನು ಸೂಚಿಸಲಾಗಿದೆ. ಪೆಟ್ರೋಲ್ ಉಳಿಸುವುದಕ್ಕಾಗಿ ಮನೆಯಿಂದಲೇ ಕೆಲಸ ಮಾಡುವುದನ್ನು ಪ್ರೋತ್ಸಾಹಿಸುವುದು (ವರ್ಕ್ ಫ್ರಂ ಹೋಂ), ಇಂಧನ ಬಳಕೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಹೆದ್ದಾರಿಗಳಲ್ಲಿ ವಾಹನಗಳ ವೇಗ ಮಿತಿಯನ್ನು ಕನಿಷ್ಠ 10 ಕಿಲೋಮೀಟರ್‌ನಷ್ಟು ಕಡಿತಗೊಳಿಸಲು ಸಂಸ್ಥೆ ಸಲಹೆ ನೀಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಯನ್ನು ತಗ್ಗಿಸಲು ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಲು, ಹಾಗೂ ದೊಡ್ಡ ನಗರಗಳಲ್ಲಿ ಸಮ-ಬೆಸ ಮಾದರಿಯಲ್ಲಿ ಕಾರುಗಳ ಸಂಚಾರವನ್ನು ನಿರ್ಬಂಧಿಸಲು ಐಇಎ ಶಿಫಾರಸು ಮಾಡಿದೆ. ಕಾರುಗಳಲ್ಲಿ ಪ್ರಯಾಣಿಸುವಾಗ ಶೇರಿಂಗ್ ಮೂಲಕ ಪ್ರಯಾಣ ಹೆಚ್ಚಿಸುವಂತೆ ಪ್ರೇರೇಪಿಸಲಾಗಿದೆ. ವಾಣಿಜ್ಯ ವಾಹನಗಳ ದಕ್ಷ ಚಾಲನೆಗಾಗಿ ಲೋಡ್ ಆಪ್ಟಿಮೈಸೇಷನ್ ಮತ್ತು ಉತ್ತಮ ನಿರ್ವಹಣೆಯನ್ನು ಪ್ರೋತ್ಸಾಹಿಸಲು ತಿಳಿಸಲಾಗಿದೆ.

ಎಲ್‌ಪಿಜಿ ಬಳಕೆಗೆ ಸಂಬಂಧಿಸಿದಂತೆ, ಅಡುಗೆಯಂತಹ ಅಗತ್ಯಗಳಿಗೆ ಮಾತ್ರ ಎಲ್‌ಪಿಜಿಯನ್ನು ಬಳಸಬೇಕು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಸಾರಿಗೆ ಮತ್ತು ಇತರ ಕೆಲಸಗಳಿಗೆ ಎಲ್‌ಪಿಜಿ ಬಳಕೆ ಬೇಡ ಎಂದು ಹೇಳಲಾಗಿದೆ. ವಿಮಾನ ಪ್ರಯಾಣವನ್ನು ಸಾಧ್ಯವಾದಷ್ಟು ತಪ್ಪಿಸುವಂತೆ ಮತ್ತು ಎಲ್‌ಪಿಜಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಕರೆಂಟ್ ಸ್ಟವ್ ಹಾಗೂ ಪರ್ಯಾಯ ಆಯ್ಕೆಗಳನ್ನು ಪ್ರೋತ್ಸಾಹಿಸಲು ಸೂಚಿಸಲಾಗಿದೆ. ಕೈಗಾರಿಕೆಗಳಲ್ಲಿ ಎಲ್‌ಪಿಜಿ ಬದಲಿಗೆ ನೈಸರ್ಗಿಕ ಅನಿಲ, ಬ್ಯೂಟೇನ್, ಪ್ರೋಪೇನ್, ಇಥೇನ್ ಮುಂತಾದ ಅನಿಲಗಳನ್ನು ಬಳಸಲು ಐಇಎ ಸಲಹೆ ನೀಡಿದೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Source link

ಸಮಾಜ ಕಲ್ಯಾಣ ಜಲಾಖೆ ಸಹಾಯಕ ನಿರ್ದೇಶಕ ಕಚೇರಿಯಲ್ಲೇ ನೇಣಿಗೆ ಶರಣು! ಸಾವಿಗೂ ಮುನ್ನ ಮಾಡಿದ ವೀಡಿಯೋದಲ್ಲೇನಿದೆ ಗೊತ್ತಾ?

ತುಮಕೂರು, ಮಾರ್ಚ್​ 21: ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ (59) ಆತ್ಮಹತ್ಯೆ (suicide) ಮಾಡಿಕೊಂಡ ಘಟನೆ ಭಾರಿ ವಿವಾದ ಎಬ್ಬಿಸಿದೆ. ಪಾವಗಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲೇ ಅವರು ನೇಣಿಗೆ ಶರಣಾಗಿದ್ದು, ತಮ್ಮ ಸಾವಿಗೆ ಜಂಟಿ ನಿರ್ದೇಶಕ ಕಾರಣವೆಂದು ಹೇಳಿದ ವೀಡಿಯೋ ವೈರಲ್ ಆಗಿದೆ.

ಮೇಲಾಧಿಕಾರಿ ಕಿರುಕುಳದಿಂದ ಬೇಸತ್ತಿದ್ದ ಮಲ್ಲಿಕಾರ್ಜುನ

ಮೃತ ಮಲ್ಲಿಕಾರ್ಜುನ ಆತ್ಮಹತ್ಯೆಗೆ ಮುನ್ನ ವಿಡಿಯೋ ಮಾಡಿದ್ದು, ತಮ್ಮ ಸಾವಿಗೆ ಜಂಟಿ ನಿರ್ದೇಶಕ ಕೃಷ್ಣಪ್ಪ ಕಾರಣ ಎಂದು ಆರೋಪಿಸಿದ್ದಾರೆ. ನನ್ನ ತಾಯಿ, ಪತ್ನಿ ಮತ್ತು ಮಕ್ಕಳು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ ಮೇಲಾಧಿಕಾರಿ ನೀಡಿದ ಕಿರುಕುಳದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ಅಲ್ಲದೆ, ಕೃಷ್ಣಪ್ಪ ಅವರಿಗೆ ದೇವರು ಹಾಗೂ ಕಾನೂನು ಶಿಕ್ಷೆ ನೀಡಲಿದೆ ಎಂದೂ ಹೇಳಿದ್ದಾರೆ.

ಸಾವಿಗೂ ಮುನ್ನ ಅಧಿಕಾರಿ ಮಾಡಿದ ವೀಡಿಯೋ ಇಲ್ಲಿದೆ

ಡೆತ್ ನೋಟ್ ವಶಕ್ಕೆ ಪಡೆದಿರುವ ಪೊಲೀಸರು

ಮಲ್ಲಿಕಾರ್ಜುನ ಮೂಲತಃ ಪಾವಗಡ ತಾಲೂಕಿನವರಾಗಿದ್ದು, ಕಳೆದ ಮೂರು ವರ್ಷಗಳಿಂದ ಅಲ್ಲಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ನೂ ಕೆಲವೇ ದಿನಗಳಲ್ಲಿ ಅವರ ಸೇವಾ ಅವಧಿ ಮುಕ್ತಾಯಗೊಳ್ಳಬೇಕಿತ್ತು. ಆದರೆ ಜಂಟಿ ನಿರ್ದೇಶಕ ನೀಡಿದ ಕಿರುಕುಳದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ದಿನ ಸಂಜೆ, ಕಚೇರಿಯ ಎಲ್ಲಾ ಸಿಬ್ಬಂದಿ ತೆರಳಿದ ನಂತರ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ.

ಸಾವಿಗೆ ಮುನ್ನ ಡೆತ್ ನೋಟ್ ಬರೆದಿರುವುದಾಗಿ ತಿಳಿದುಬಂದಿದ್ದು, ಅದರಲ್ಲಿ ಕೃಷ್ಣಪ್ಪ ಹಾಗೂ ಹಣಕಾಸು ಸಂಬಂಧಿತ ವಿಚಾರಗಳನ್ನೂ ಉಲ್ಲೇಖಿಸಿರುವ ಮಾಹಿತಿ ಲಭ್ಯವಾಗಿದೆ. ಪ್ರಕರಣ ಸಂಬಂಧ ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡೆತ್ ನೋಟ್ ವಶಪಡಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ನಾನು ಅವರ ತೊಡೆಯ ಮೇಲೆ ಕುಳಿತು ಬೆಳದವನು, ಅದಕ್ಕೆ ಅದೃಷ್ಟವಂತ’; ರವಿಚಂದ್ರನ್

ನಟ ರವಿಚಂದ್ರನ್ ಅವರು ‘ಕ್ರೇಜಿ ಬ್ರಹ್ಮ’ ಈವೆಂಟ್ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡುವಾಗ ಅವರು ಹಳೆದ ದಿನಗಳನ್ನು ನೆನಪಿಸಿಕೊಂಡರು. ರವಿಚಂದ್ರನ್ ಅವರು ರಾಜ್​​ಕುಮಾರ್, ಅಂಬರೀಷ್ ಮೊದಲಾದವರ ಜೊತೆ ಬೆಳೆದವರು. ಹೀಗಾಗಿ, ಅವರು ತಮ್ಮನ್ನು ತಾವು ಲಕ್ಕಿ ಎಂದು ಕರೆದುಕೊಂಡಿದ್ದಾರೆ. ಅವರಿಂದಾಗಿಯೇ ಇಲ್ಲಿರೋದಾಗಿ ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇರಾನ್​ನ 140 ಮಿಲಿಯನ್ ಬ್ಯಾರೆಲ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಂತೆ ಅಮೆರಿಕ!

ವಾಷಿಂಗ್ಟನ್, ಮಾರ್ಚ್ 21: ಮಧ್ಯಪ್ರಾಚ್ಯ ಯುದ್ಧದಿಂದ ಜಗತ್ತಿನಾದ್ಯಂತ ಕಚ್ಚಾ ತೈಲ, ಅಡುಗೆ ಅನಿಲ ಸೇರಿದಂತೆ ತೀವ್ರ ಇಂಧನ ಬಿಕ್ಕಟ್ಟು ಎದುರಾಗಿದೆ. ಇಂಥ ಸನ್ನಿವೇಶದಲ್ಲಿ ಇದೀಗ ಅಮೆರಿಕ ಮಹತ್ವದ ಹೇಳಿಕೆ ನೀಡಿದೆ. ಸಮುದ್ರದಲ್ಲಿ ಸಿಲುಕಿರುವ, ಇರಾನ್‌ಗೆ ಸೇರಿದ 140 ಮಿಲಿಯನ್ ಬ್ಯಾರೆಲ್ ಬ್ಯಾರೆಲ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿ ಇಂಧನ ಪೂರೈಕೆಯನ್ನು ಸುಗಮಗೊಳಿಸುವುದಾಗಿ ಅಮೆರಿಕದ ಖಜಾನೆ ಸಚಿವ ಸ್ಕಾಟ್ ಬೆಸೆಂಟ್ (Scott Bessent) ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್ ಸಂದೇಶದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಡೊನಾಲ್ಡ್ ಟ್ರಂಪ್ (Donald Trump) ನೇತೃತ್ವದ ಅಮೆರಿಕ ಆಡಳಿತ, ಇರಾನ್ ವಿರುದ್ಧದ ಒತ್ತಡವನ್ನು ಮತ್ತಷ್ಟು ಹೆಚ್ಚಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಬೆಸೆಂಟ್ ಹೇಳಿಕೆಯ ಪ್ರಕಾರ, ಜಾಗತಿಕ ಉಗ್ರ ಚಟುವಟಿಕೆಗಳಿಗೆ ಇರಾನ್ ಪ್ರಮುಖ ಕಾರಣವಾಗಿದ್ದು, ಅದನ್ನು ನಿಯಂತ್ರಿಸಲು ‘ಆಪರೇಷನ್ ಎಪಿಕ್ ಫ್ಯೂರಿ’ ಹೆಸರಿನ ಕ್ರಮಗಳನ್ನು ಅಮೆರಿಕ ವೇಗವಾಗಿ ಮುಂದುವರೆಸುತ್ತಿದೆ. ಇರಾನ್ ನಡೆಸಿದ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳಿಗೆ ಪ್ರತಿಯಾಗಿ ಅಮೆರಿಕ ತನ್ನ ಆರ್ಥಿಕ ಹಾಗೂ ಸೈನಿಕ ಶಕ್ತಿಯನ್ನು ಬಳಸುತ್ತಿದೆ.

ಜಾಗತಿಕ ಮಾರುಕಟ್ಟೆಗೆ 140 ಮಿಲಿಯನ್ ಬ್ಯಾರೆಲ್ ತೈಲ

ಇದಕ್ಕೂ ಮಧ್ಯೆ, ಸಮುದ್ರದಲ್ಲಿ ಸಿಲುಕಿರುವ ಇರಾನ್ ತೈಲವನ್ನು ತಾತ್ಕಾಲಿಕವಾಗಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅಮೆರಿಕ ನಿರ್ಧರಿಸಿದೆ. ಸುಮಾರು 140 ಮಿಲಿಯನ್ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ತರಲು ಈ ಕ್ರಮ ನೆರವಾಗಲಿದೆ. ಇದರಿಂದ ಜಾಗತಿಕ ತೈಲ ಸರಬರಾಜು ಹೆಚ್ಚಾಗಿ ಬೆಲೆ ಸ್ಥಿರತೆ ಸಾಧಿಸಲು ಸಹಾಯವಾಗಲಿದೆ ಎಂದು ಬೆಸೆಂಟ್ ತಿಳಿಸಿದ್ದಾರೆ.

ಇರಾನ್ ತೈಲವನ್ನು ಕಡಿಮೆ ದರದಲ್ಲಿ ಚೀನಾ ಸಂಗ್ರಹಿಸುತ್ತಿದೆ ಎಂಬ ಆರೋಪವನ್ನೂ ಬೆಸೆಂಟ್ ಮಾಡಿದ್ದಾರೆ. ಈ ತೈಲವನ್ನು ಮಾರುಕಟ್ಟೆಗೆ ಬಿಡುವುದರಿಂದ ಇರಾನ್‌ನ ಆರ್ಥಿಕ ಪ್ರಭಾವ ಕಡಿಮೆಯಾಗಲಿದೆ ಎಂಬುದು ಅಮೆರಿಕದ ಲೆಕ್ಕಾಚಾರ.

ಸ್ಕಾಟ್ ಬೆಸೆಂಟ್ ಎಕ್ಸ್ ಪೋಸ್ಟ್

ಈ ತಾತ್ಕಾಲಿಕ ಅನುಮತಿ ಈಗಾಗಲೇ ಸಾಗಾಟ ಹಂತದಲ್ಲಿರುವ ತೈಲಕ್ಕೆ ಮಾತ್ರ ಅನ್ವಯವಾಗುತ್ತದೆ. ಹೊಸ ಉತ್ಪಾದನೆ ಅಥವಾ ಖರೀದಿಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಜೊತೆಗೆ, ಈ ಮಾರಾಟದಿಂದ ಇರಾನ್‌ಗೆ ಹಣ ತಲುಪುವುದು ಕಷ್ಟವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಕ್ರಮ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್, ಇಸ್ರೇಲ್, ಅಮೆರಿಕ ಸಂಘರ್ಷದಲ್ಲಿ ಹೊಸ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳಿಗೆ ಕಾರಣವಾಗಲಿದೆ. ಅಮೆರಿಕದ ಈ ನಿಲುವು ಯುದ್ಧದ ದಿಕ್ಕು ಹಾಗೂ ಜಾಗತಿಕ ಇಂಧನ ಮಾರುಕಟ್ಟೆ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂ ಓದಿ: ಇರಾನ್, ಇಸ್ರೇಲ್, ಅಮೆರಿಕ ಯುದ್ಧಕ್ಕೆ ಬ್ರೇಕ್? ಟ್ರಂಪ್ ಆ ಸಂದೇಶದಲ್ಲಿದೆ ಮಹತ್ವದ ಸುಳಿವು!

ಒಟ್ಟಿನಲ್ಲಿ, ಇರಾನ್ ವಿರುದ್ಧದ ಒತ್ತಡ ಮುಂದುವರಿಯುವ ಸೂಚನೆಗಳ ನಡುವೆ, ಜಾಗತಿಕ ತೈಲ ಮಾರುಕಟ್ಟೆಯನ್ನು ಸಮತೋಲನದಲ್ಲಿಡಲು ಅಮೆರಿಕ ತೆಗೆದುಕೊಂಡಿರುವ ಈ ಕ್ರಮ ಗಮನ ಸೆಳೆಯುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ಪೂಜೆಯ ಫಲ ಸಿಗಬೇಕೆ? ಹಾಗಾದರೆ ಮಡಿ ಮತ್ತು ಶಿಸ್ತಿನ ಈ ರಹಸ್ಯಗಳನ್ನು ತಿಳಿಯಿರಿ

ನಮ್ಮ ಜೀವನ ನಿರ್ವಹಣೆಯಲ್ಲಿ ಭಗವಂತನ ಆಶ್ರಯವನ್ನು ಪಡೆಯುವುದು ಅತ್ಯಗತ್ಯ. ಇದಕ್ಕಾಗಿ ಪೂಜೆ, ಪುನಸ್ಕಾರ, ಹವನ, ಯಜ್ಞ, ಯಾಗಾದಿಗಳು, ಮತ್ತು ಜಪ-ತಪಗಳಂತಹ ವಿವಿಧ ಪೂಜಾ ವಿಧಾನಗಳನ್ನು ಅನುಸರಿಸುತ್ತೇವೆ. ಯದ್ಭಾವಂ ತದ್ಭವತಿ ಎಂಬಂತೆ ನಮ್ಮ ಭಾವನೆಗಳಿಗೆ ಅನುಗುಣವಾಗಿ ಭಗವಂತನನ್ನು ಆರಾಧಿಸುತ್ತೇವೆ. ಭಗವಂತನು ಸರ್ವಾಂತರ್ಯಾಮಿ, ಸರ್ವವ್ಯಾಪಿ ಮತ್ತು ಸರ್ವಶಕ್ತನಾಗಿರುತ್ತಾನೆ. ಆದರೆ, ಇಂತಹ ಆರಾಧನೆಯಲ್ಲಿ ಮಡಿಯ ಅಗತ್ಯವಿದೆಯೇ ಎಂಬ ಪ್ರಶ್ನೆ ಹಲವು ಬಾರಿ ಉದ್ಭವಿಸುತ್ತದೆ. ಮಡಿಯಿಂದಲೇ ಪೂಜೆ ಮಾಡಬೇಕಾ ಎಂಬುದು ಹಲವರ ಅನುಮಾನ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಮಡಿ ಎಂದರೆ ಕೇವಲ ಸ್ವಚ್ಛತೆ ಮತ್ತು ಶುಭ್ರತೆ. ಇದು ಭಯಾನಕವಾದ ಪದವಲ್ಲ, ಬದಲಾಗಿ ಶುಚಿತ್ವದ ಪ್ರತೀಕ. ದೇವರು ಸ್ವತಃ ಮಡಿಯನ್ನು ಕೇಳಿಲ್ಲ, ಆದರೆ ಶುಭ್ರತೆಯಿಂದ, ಶುದ್ಧ ಮನಸ್ಸಿನಿಂದ ಮತ್ತು ಒಳ್ಳೆಯ ಭಾವನೆಗಳಿಂದ ಆರಾಧಿಸಲು ಮಡಿಯನ್ನು ಅನುಸರಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಮಡಿಯು ಶುಚಿತ್ವದ ಸಂಕೇತವಾಗಿದೆ. ಹಿರಿಯರು, ಆಚಾರ್ಯರು ಮತ್ತು ಗುರುಗಳು ಇದನ್ನು ಒಂದು ಸಂಪ್ರದಾಯವಾಗಿ ರೂಪಿಸಿಕೊಂಡು ಬಂದಿದ್ದಾರೆಯೇ ಹೊರತು, ಮಡಿಗೆ ಯಾವುದೇ ಕಟ್ಟುಪಾಡುಗಳಿಲ್ಲ.

ದೇವರ ಪೂಜೆಯಲ್ಲಿ, ಭಜನೆಗಳಲ್ಲಿ, ಯಜ್ಞ-ಯಾಗಾದಿಗಳಲ್ಲಿ ಎಲ್ಲರೂ ಒಟ್ಟಾಗಿ ಸೇರುವಾಗ, ಎಲ್ಲರೂ ಶುಚೀರ್ಭೂತರಾಗಿ ಭಗವಂತನಿಗೆ ಏಕಾಗ್ರತೆಯಿಂದ ಮತ್ತು ಶ್ರದ್ಧೆಯಿಂದ ಆರಾಧನೆ ಸಲ್ಲಿಸಲಿ ಎಂಬ ಉದ್ದೇಶದಿಂದ ಮಡಿಯನ್ನು ರೂಪಿಸಲಾಗಿದೆ. ಇದು ಶುಭ್ರತೆ, ಶ್ರದ್ಧೆ ಮತ್ತು ಭಕ್ತಿಗೆ ಒಂದು ಪ್ರತೀಕವಾಗಿದೆ. ಹೇಗೆ ಜೀವನದ ಪ್ರತಿ ವಿಷಯದಲ್ಲೂ ಸಿಸ್ತು ಇರುತ್ತದೆಯೋ, ಹಾಗೆಯೇ ಮಡಿಯೂ ಒಂದು ಸಿಸ್ತಿನ ಪ್ರತೀಕವಾಗಿದೆ. ಉದಾಹರಣೆಗೆ, ರೈತರು ಬೆಳೆಯನ್ನು ಬಿತ್ತುವ ಮೊದಲು ಭೂಮಿಗೆ ನಮಸ್ಕರಿಸಿ ತೆಂಗಿನಕಾಯಿ ಒಡೆಯುತ್ತಾರೆ. ಇದು ನಂಬಿಕೆಯ ಪ್ರತೀಕ. ಅದೇ ರೀತಿ ಮಡಿಯೂ ಸಿಸ್ತು ಮತ್ತು ನಂಬಿಕೆಯ ಒಂದು ರೂಪವಾಗಿದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಮಡಿಯಲ್ಲಿ ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿ ಎರಡೂ ಮುಖ್ಯ. ಅಂತರಂಗ ಶುದ್ಧಿಯಿಂದ ಭಗವಂತನನ್ನು ಒಲಿಸಿಕೊಳ್ಳಬಹುದು. ಇದರ ಜೊತೆಗೆ, ಬಾಹ್ಯ ಶುದ್ಧಿಯನ್ನೂ ಕಾಪಾಡಿಕೊಂಡಾಗ ಭಗವಂತನ ದೈವೀಕ ಶಕ್ತಿಗಳು ಅಲ್ಲಿ ನೆಲೆಸುತ್ತವೆ. ಅಯ್ಯಪ್ಪ ದೀಕ್ಷೆ, ಸತ್ಯನಾರಾಯಣ ಸ್ವಾಮಿ ವ್ರತ, ದುರ್ಗಾಪರಮೇಶ್ವರಿ ವ್ರತ, ಚಾಮುಂಡೇಶ್ವರಿ ವ್ರತಗಳಂತಹ ಅನೇಕ ವ್ರತಗಳಲ್ಲಿ ಕೆಲವು ಕಟ್ಟುಪಾಡುಗಳು ಮತ್ತು ಸಿಸ್ತಿನ ಕ್ರಮಗಳನ್ನು ಪಾಲಿಸಲಾಗುತ್ತದೆ. ಮಡಿಯೂ ಇದೇ ರೀತಿ ಒಂದು ಕ್ರಮ. ಕರಗ ಮಹೋತ್ಸವದಂತಹ ಸಂದರ್ಭಗಳಲ್ಲಿ ಉಪವಾಸ ಮಾಡಿ ಕರಗವನ್ನು ಹೊರಲಾಗುತ್ತದೆ; ಇದು ನಂಬಿಕೆಯ ಪ್ರತೀಕ. ಮೌನವಾಗಿ ಭಗವಂತನನ್ನು ಆರಾಧಿಸುವುದು, ಜಪ ಮಾಡುವಾಗ ಯಾರೊಂದಿಗೂ ಮಾತನಾಡದೆ ಇರುವುದು, ಇವೆಲ್ಲವೂ ಸಿಸ್ತಿನ ಒಂದು ರೂಪವಾಗಿದೆ.

ಒಟ್ಟಾರೆಯಾಗಿ, ಮಡಿಯು ನಮ್ಮ ಭಾವನೆಗಳಿಗೆ, ಭಗವಂತನ ಜೊತೆ ಉತ್ತಮ ಸಂಕಲ್ಪವಿಟ್ಟುಕೊಂಡು, ಭಗವಂತನೊಂದಿಗೆ ಬಾಂಧವ್ಯವನ್ನು ಬೆಳೆಸುವ ಒಂದು ಪ್ರಕ್ರಿಯೆ. ಇದು ಯಾವುದೇ ರೀತಿಯಿಂದಲೂ ಕೆಟ್ಟದ್ದಲ್ಲ, ಬದಲಾಗಿ ಒಂದು ಪವಿತ್ರವಾದ ನಿಯಮ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಸಿನಿಮಾ ತಿರಸ್ಕರಿಸಿದ ಆ ಸ್ಟಾರ್ ನಟನಿಗೆ ಈಗ ಬೇಸರ

ಧುರಂಧರ್ 2 ಚಿತ್ರದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಮೊದಲ ಎರಡು ದಿನಗಳಲ್ಲಿ, ಈ ಚಿತ್ರವು ವಿಶ್ವಾದ್ಯಂತ 240 ಕೋಟಿ ಗಳಿಸಿದೆ. ಭಾರತದಲ್ಲಿ, ಈ ಚಿತ್ರವು 100 ಕೋಟಿ ಗಡಿ ದಾಟಿದೆ. ಮುಂದಿನ ಕೆಲವು ದಿನಗಳಲ್ಲಿ, ಧುರಂಧರ್ 2 ಭಾರತೀಯ ಚಿತ್ರರಂಗದಲ್ಲಿ ಹೊಸ ಗಳಿಕೆಯ ಇತಿಹಾಸವನ್ನು ಸೃಷ್ಟಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಈ ಚಿತ್ರವನ್ನು ನೋಡಿದ ನಂತರ ಚಿತ್ರಮಂದಿರದಿಂದ ಹೊರಬರುವ ಪ್ರತಿಯೊಬ್ಬರೂ ಈ ಚಿತ್ರವನ್ನು ಹೊಗಳುತ್ತಿದ್ದಾರೆ. ಏಕೆಂದರೆ ಧುರಂಧರ್‌ನ ಮೊದಲ ಭಾಗವು ಕೊನೆಗೊಂಡ ತಿರುವು ಅನೇಕ ಪ್ರಶ್ನೆಗಳಿಗೆ ಉತ್ತರಿಸದೆ ಬಿಟ್ಟಿತು. ಅವುಗಳಿಗೆ ಉತ್ತರಗಳು ಎರಡನೇ ಭಾಗದಲ್ಲಿವೆ. ಪ್ರೇಕ್ಷಕರು ಒಂದು ಉತ್ತಮ ಸಿನಿಮಾ ನೋಡಿದ ಅನುಭವವನ್ನು ಹೊಂದಿದ್ದಾರೆ. ಧುರಂಧರ್‌ನಲ್ಲಿ, ಹಮ್ಜಾ ಅಲಿ ಮಜಾರಿ ಪಾತ್ರವನ್ನು ನಿರ್ವಹಿಸುವ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರದ ಆಫರ್ ಈ ಮೊದಲು ಅನಿಲ್ ಕಪೂರ್​​ಗೆ ಹೋಗಿತ್ತು.

‘ಧುರಂಧರ್‌’ ಮೊದಲ ಭಾಗ ಹಿಟ್ ಆದ ನಂತರ, ಈ ಚಿತ್ರವನ್ನು ನಿರಾಕರಿಸಿದ ಕೆಲವು ನಟರ ಹೆಸರುಗಳು ಮುನ್ನೆಲೆಗೆ ಬಂದವು. ಈಗ ಎರಡನೇ ಭಾಗ ಬಿಡುಗಡೆಯಾದ ನಂತರವೂ, ಅಂತಹ ಒಬ್ಬ ದೊಡ್ಡ ನಟನ ಹೆಸರು ಮುನ್ನೆಲೆಗೆ ಬಂದಿದೆ. ಅವರೇ ಅನಿಲ್ ಕಪೂರ್. ಅವರು ಧುರಂಧರ್ 2 ಅನ್ನು ನಿರಾಕರಿಸಿದರು . ಅವರು ಇದನ್ನು ಒಂದು ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದರು. ನಿರಾಕರಣೆಯ ಹಿಂದಿನ ಕಾರಣ ಅವರು ಹೇಳಿದ್ದಾರೆ.

‘ಧುರಂಧರ್ 2 ರಲ್ಲಿ ಒಂದು ಸಣ್ಣ ಪಾತ್ರಕ್ಕಾಗಿ ಆದಿತ್ಯ ಧರ್ ನನ್ನನ್ನು ಸಂಪರ್ಕಿಸಿದರು. ಆದರೆ ನಾನು ನಿರಾಕರಿಸಿದೆ. ನಾನು ಇಂದು ಏನಾಗಿದ್ದೇನೋ ಅದು ನನ್ನ ವೃತ್ತಿಪರತೆ ಮತ್ತು ನನ್ನ ಮಾತನ್ನು ಉಳಿಸಿಕೊಳ್ಳುವ ಬದ್ಧತೆಯಿಂದಾಗಿ. ಅದು ಹೆಚ್ಚು ಮುಖ್ಯ. ಪ್ರತಿಭೆಯೇ ಎಲ್ಲವೂ ಅಲ್ಲ. ನಾನು ಈ ಪಾತ್ರವನ್ನು ಮಾಡಲು ನಿಜವಾಗಿಯೂ ಇಷ್ಟಪಡುತ್ತಿದ್ದೆ ಎಂದು ಆದಿತ್ಯಗೆ ಹೇಳಿದೆ. ಆದರೆ ನಾನು ಆ ಡೇಟ್ಸ್​​ನ ಬೇರೆಯವರಿಗೆ ನೀಡಿದ್ದೆ’ ಎಂದು ಅನಿಲ್ ಕಪೂರ್ ಹೇಳಿದರು.

ಇದನ್ನೂ ಓದಿ: ಶುಕ್ರವಾರವೂ ಅಬ್ಬರಿಸಿದ ‘ಧುರಂಧರ್ 2’ ಸಿನಿಮಾ; ಕನ್ನಡದಲ್ಲಿ ಗಳಿಕೆ ಎಷ್ಟು?

‘ನಾನು ಆದಿತ್ಯ ಅವರ ಚಿತ್ರವನ್ನು ಮಾಡುತ್ತಿರುವಾಗ ಅದೇ ಸಮಯದಲ್ಲಿ ಮತ್ತೊಂದು ಬ್ಲಾಕ್‌ಬಸ್ಟರ್ ಚಿತ್ರದ ನಿರ್ದೇಶಕರು ನನಗೆ ಕರೆ ಮಾಡಿ ಆಫರ್ ಕೊಟ್ಟರೆ, ಆದಿತ್ಯ ಅವರ ಚಿತ್ರವನ್ನು ತಿರಸ್ಕರಿಸಿದರೆ ಆ ಸಮಯದಲ್ಲಿ ಅವರ ಚಿತ್ರವನ್ನು ಮಾಡಿದರೆ ಅದು ವೃತ್ತಿಪರತೆಯ ಕೊರತೆಯಾಗುತ್ತದೆ ಎಂದು ನಾನು ಭಾವಿಸಿದೆ. ಆದ್ದರಿಂದ ‘ನಾವು ಭವಿಷ್ಯದಲ್ಲಿ ಅವರ ಜೊತೆ ಕೆಲಸ ಮಾಡುತ್ತೇವೆ’ ಎಂದು ಅನಿಲ್ ಕಪೂರ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಮೈಸೂರು ಸೇರಿದಂತೆ ಬೆಂಗಳೂರು, ಬೆಳಗಾವಿಯ ವಾಯು ಗುಣಮಟ್ಟದಲ್ಲಿ ಸುಧಾರಣೆ

ಬೆಂಗಳೂರು, ಮಾರ್ಚ್​ 21: ಹಲವಾರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ (Bengaluru Air Quality) ಕುಸಿತ ಕಂಡಿತ್ತು. ಆದರೆ ಇಂದು ಹಲವು ಭಾಗಗಳಲ್ಲಿ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದಂತಿದೆ. ಬೆಂಗಳೂರು, ಬೆಳಗಾವಿ ಮತ್ತು ಮೈಸೂರು ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ 150ಕ್ಕಿಂತ ಕಡಿಮೆ ಇರುವುದು ಕಂಡು ಬಂದಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 140ಕ್ಕೆ ತಲುಪಿದೆ. ಕೆಲ ದಿನಗಳಿಂದ ಉಡುಪಿ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಏರ್ ಕ್ವಾಲಿಟಿ ತೀರಾ ಕಳಪೆ ಮಟ್ಟಕ್ಕೆ ಇಳಿದಿತ್ತು. ಆದರೆ ಇಂದು ಉಡುಪಿ, ಮಂಗಳೂರು ಸೇರಿ ಹಲವೆಡೆ ಏರ್ ಕ್ವಾಲಿಟಿ 150ಕ್ಕಿಂತ ಕಡಿಮೆ ಇದೆ. ಆದರೆ ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –140
  • ಮಂಗಳೂರು-130
  • ಮೈಸೂರು –117
  • ಬೆಳಗಾವಿ – 78
  • ಕಲಬುರ್ಗಿ-104
  • ಶಿವಮೊಗ್ಗ – 138
  • ಬಳ್ಳಾರಿ – 156
  • ಹುಬ್ಬಳ್ಳಿ- 108
  • ಉಡುಪಿ –120
  • ವಿಜಯಪುರ –99

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version