ಇರಾನ್-ಇಸ್ರೇಲ್ ಸಂಘರ್ಷ; ರಿಯಾದ್‌ನಲ್ಲಿ ಭಾರತೀಯ ಪ್ರಜೆ ಸಾವು

ಇರಾನ್-ಇಸ್ರೇಲ್ ಸಂಘರ್ಷ; ರಿಯಾದ್‌ನಲ್ಲಿ ಭಾರತೀಯ ಪ್ರಜೆ ಸಾವು

ರಿಯಾದ್, ಮಾರ್ಚ್ 20: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಉಲ್ಬಣಗೊಳ್ಳುತ್ತಲೇ ಇದೆ. ಇಸ್ರೇಲ್-ಇರಾನ್ (Israel- Iran War) ನಡುವಿನ ಯುದ್ಧದಲ್ಲಿ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ (Riyadh Attack) ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಶುಕ್ರವಾರ ದೃಢಪಡಿಸಿದೆ. ಅವರ ಮೃತದೇಹವನ್ನು ಭಾರತಕ್ಕೆ ಶೀಘ್ರವಾಗಿ ಹಿಂದಿರುಗಿಸಲಾಗುವುದು ಎಂದು ಅಲ್ಲಿನ ಸರ್ಕಾರ ಹೇಳಿದೆ. “ಮಾರ್ಚ್ 18ರಂದು ರಿಯಾದ್‌ನಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಭಾರತೀಯ ಪ್ರಜೆಯೊಬ್ಬರು ದುರಂತವಾಗಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿತು” ಎಂದು ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಗಲ್ಫ್) ಅಸೀಮ್ ಮಹಾಜನ್ ಪತ್ರಿಕಾಗೋಷ್ಠಿಯಲ್ಲಿ ಖಚಿತಪಡಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

 

Source link

ಕಂಗನಾ ಮಾಡಿದ ‘ಎಮರ್ಜೆನ್ಸಿ’ ಸಿನಿಮಾ 2 ದಿನ ಓಡಲಿಲ್ಲ: ಖಾರವಾಗಿ ಹೇಳಿದ ‘ಧುರಂಧರ್ 2’ ನಟ

ಬಾಲಿವುಡ್‌ನ ಹಿರಿಯ ನಟ ರಾಕೇಶ್ ಬೇಡಿ ಅವರು ‘ಧುರಂಧರ್ 2’ (Dhurandhar 2) ಸಿನಿಮಾದಲ್ಲಿ ಮಾಡಿದ ಪಾತ್ರ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಪಾಕಿಸ್ತಾನದ ರಾಜಕಾರಣಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಯಶಸ್ಸಿನ ಅಲೆಯಲ್ಲಿ ರಾಕೇಶ್ ಬೇಡಿ (Rakesh Bedi) ಅವರು ತೇಲುತ್ತಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ, ಒಂದು ವರ್ಗದ ಜನರು ಇದನ್ನು ಪ್ರೊಪಗಾಂಡಾ ಎಂದು ಕರೆಯುತ್ತಿದ್ದಾರೆ. ಈ ಟೀಕೆಗಳಿಗೆ ರಾಕೇಶ್ ಬೇಡಿ ಅವರು ಖಡಕ್ ಉತ್ತರ ನೀಡಿದ್ದು, ಇದೇ ವೇಳೆ ಕಂಗನಾ ರಣಾವತ್ ನಟಿಸಿ, ನಿರ್ದೇಶಿಸಿದ ‘ಎಮರ್ಜೆನ್ಸಿ’ (Emergency Movie) ಚಿತ್ರದ ಸೋಲನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಕೇಶ್ ಬೇಡಿ, ‘ನಾನು ರಾಜಕೀಯವನ್ನು ನಂಬುವುದಿಲ್ಲ. ಕೇವಲ ಸಿನಿಮಾವನ್ನು ನಂಬುತ್ತೇನೆ. ಪ್ರತಿಯೊಬ್ಬರಿಗೂ ಒಂದು ಚಿತ್ರವನ್ನು ಇಷ್ಟಪಡುವ ಅಥವಾ ಇಷ್ಟಪಡದಿರುವ ಹಕ್ಕಿದೆ. ಆದರೆ ಒಂದು ಚಿತ್ರವನ್ನು ಸರ್ಕಾರದ ಪರ ಅಥವಾ ಸರ್ಕಾರದ ವಿರೋಧಿ ಎಂಬ ಹಣೆಪಟ್ಟಿಯ ಅಡಿಯಲ್ಲಿ ವರ್ಗೀಕರಿಸುವುದು ಸರಿಯಲ್ಲ. ಜನರು ಈ ಚಿತ್ರವನ್ನು ಪ್ರೀತಿಸುತ್ತಿದ್ದಾರೆ ಎನ್ನುವುದೇ ಅಂತಿಮ ತೀರ್ಪು’ ಎಂದು ಹೇಳಿದ್ದಾರೆ.

‘ಧುರಂಧರ್ 2’ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ ರಾಕೇಶ್ ಬೇಡಿ ಅವರು ರಾಜಕೀಯ ವ್ಯಕ್ತಿಗಳ ಬಯೋಪಿಕ್‌ಗಳ ಬಗ್ಗೆ ಪ್ರಸ್ತಾಪಿಸಿದರು. ‘ಇತ್ತೀಚೆಗೆ ಇಂದಿರಾ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಚಿತ್ರಗಳು ಬಂದವು. ಆದರೆ ಆ ಚಿತ್ರಗಳು ಕನಿಷ್ಠ ಎರಡು ದಿನವೂ ಚಿತ್ರಮಂದಿರದಲ್ಲಿ ಓಡಲಿಲ್ಲ. ಆದರೆ ಧುರಂಧರ್ ಚಿತ್ರದ ಬರವಣಿಗೆ ಮತ್ತು ಮೇಕಿಂಗ್ ಅತ್ಯಂತ ಪ್ರಬಲವಾಗಿದೆ. ಇಷ್ಟು ದೊಡ್ಡ ಮಟ್ಟದ ಸಿನಿಮಾವನ್ನು ಪ್ರೇಕ್ಷಕರು ಈ ಹಿಂದೆ ನೋಡಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಕೇಶ್ ಬೇಡಿ ಅವರ ಈ ಮಾತುಗಳು ನೇರವಾಗಿ ನಟಿ ಕಂಗನಾ ರಣಾವತ್ ಅವರಿಗೆ ನೀಡಿದ ಟಾಂಗ್ ಎನ್ನಲಾಗುತ್ತಿದೆ. ಕಂಗನಾ ನಿರ್ದೇಶಿಸಿ, ನಟಿಸಿದ್ದ ‘ಎಮರ್ಜೆನ್ಸಿ’ ಸಿನಿಮಾ 2025ರಲ್ಲಿ ಬಿಡುಗಡೆಯಾಗಿತ್ತು. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ಕುರಿತಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಹಿನ್ನಡೆ ಅನುಭವಿಸಿತ್ತು. ವಿಶ್ವದಾದ್ಯಂತ ಕೇವಲ 18.40 ಕೋಟಿ ರೂಪಾಯಿ ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿತ್ತು.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾ ಒಟಿಟಿ ರಿಲೀಸ್ ಯಾವಾಗ? ಇಲ್ಲಿದೆ ವಿವರ

ಸಾಮಾಜಿಕ ಜಾಲತಾಣಗಳಲ್ಲಿ ‘ಧುರಂಧರ್ 2’ ಚಿತ್ರದ ಕಥಾಹಂದರದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾಗಿ ಕಮಾಯಿ ಮಾಡುತ್ತಿದೆ. ಗಟ್ಟಿಯಾದ ಚಿತ್ರಕಥೆ ಮತ್ತು ಅದ್ದೂರಿ ಮೇಕಿಂಗ್‌ನಿಂದಾಗಿ ಪ್ರೇಕ್ಷಕರು ಈ ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ. ಧುರಂಧರ್ ಮೊದಲ ಪಾರ್ಟ್ ಹಿಟ್ ಆಗಿದ್ದರಿಂದ 2ನೇ ಪಾರ್ಟ್ ಹೆಚ್ಚು ಹೈಪ್ ಪಡೆದುಕೊಂಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

SA vs NZ: ದಕ್ಷಿಣ ಆಫ್ರಿಕಾಕ್ಕೆ ಸತತ 2ನೇ ಸೋಲು; ಸರಣಿಯಲ್ಲಿ ಕಿವೀಸ್ ಮೇಲುಗೈ

2026 ರ ಟಿ20 ವಿಶ್ವಕಪ್ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದ ದಕ್ಷಿಣ ಆಫ್ರಿಕಾ ತಂಡ ಇದೀಗ ಅದೇ ನ್ಯೂಜಿಲೆಂಡ್ (South Africa vs New Zealand) ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಉಭಯ ತಂಡಗಳ ನಡುವೆ ಈ ಟಿ20 ಸರಣಿ ನಡೆಯುತ್ತಿದೆ. ಎರಡೂ ತಂಡಗಳು ಸ್ಟಾರ್ ಆಟಗಾರರಿಲ್ಲದೆ ಈ ಸರಣಿಯಲ್ಲಿ ಕಣಕ್ಕಿಳಿದಿವೆ. ಆದಾಗ್ಯೂ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮೇಲುಗೈ ಸಾಧಿಸುವಲ್ಲಿ ನ್ಯೂಜಿಲೆಂಡ್ ಯಶಸ್ವಿಯಾಗಿದೆ. ಐದು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 3 ಪಂದ್ಯಗಳು ನಡೆದಿದ್ದು, ಕಿವೀಸ್ ಪಡೆ 2 ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ 2-1 ಅಂತರದ ಮುನ್ನಡೆ ಪಡೆದುಕೊಂಡಿದೆ.

ಕಿವೀಸ್​ಗೆ ಸತತ 2ನೇ ಗೆಲುವು

ಉಭಯ ತಂಡಗಳ ನಡುವಿನ ಮೊದಲ ಪಂದ್ಯವನ್ನು ಆಫ್ರಿಕಾ ತಂಡ ಏಕಪಕ್ಷೀಯವಾಗಿ ಗೆದ್ದುಕೊಂಡಿತ್ತು. ಆದರೆ ಆ ಬಳಿಕ ಭರ್ಜರಿ ಪುನರಾಗಮನ ಮಾಡಿರುವ ಕಿವೀಸ್ ಸತತ ಎರಡು ಪಂದ್ಯಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎರಡನೇ ಪಂದ್ಯವನ್ನು 68 ರನ್​ಗಳಿಂದ ಗೆದ್ದುಕೊಂಡಿದ್ದ ಕಿವೀಸ್ ಇದೀಗ ಮೂರನೇ ಟಿ20 ಪಂದ್ಯದಲ್ಲಿ 8 ವಿಕೆಟ್​ಗಳ ಸುಲಭ ಜಯ ದಾಖಲಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆಫ್ರಿಕಾ 136 ರನ್ ಕಲೆಹಾಕಿದರೆ, ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 16.2 ಓವರ್​ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.

136 ರನ್​ಗಳಿಗೆ ಕುಸಿದ ಆಫ್ರಿಕಾ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ ತಂಡ, ಲಾಕಿ ಫರ್ಗುಸನ್ ದಾಳಿಗೆ ಅಕ್ಷರಶಃ ನಲುಗಿ ಹೋಯಿತು. ಹೀಗಾಗಿ ತಂಡದ ಯಾವ ಆಟಗಾರನಿಗೂ 26 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ತಂಡದ ಪರ ನ್ಕೊಬಾನಿ ಮೊಕೊಯೆನಾ ಗರಿಷ್ಠ 26 ರನ್​ಗಳ ಇನ್ನಿಂಗ್ಸ್ ಆಡಿದರೆ, ಜಾರ್ಜ್ ಲಿಂಡೆ 23 ರನ್​ಗಳ ಕಾಣಿಕೆ ನೀಡಿದರು. ಉಳಿದ ಯಾವ ಬ್ಯಾಟ್ಸ್‌ಮನ್​ಗೂ 20 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಆಫ್ರಿಕಾ ತಂಡ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 136 ರನ್ ಕಲೆಹಾಕಿತು.

ಫರ್ಗುಸನ್ ಮಾರಕ ದಾಳಿ

ಕಿವೀಸ್ ಪರ ಮಾರಕ ದಾಳಿ ನಡೆಸಿದ ವೇಗಿ ಲಾಕಿ ಫರ್ಗುಸನ್ ತಮ್ಮ ನಾಲ್ಕು ಓವರ್‌ಗಳಲ್ಲಿ 2.25 ಎಕಾನಮಿ ರೇಟ್‌ನಲ್ಲಿ ಕೇವಲ 9 ರನ್‌ಗಳನ್ನು ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದರು. ಹಾಗೆಯೇ ತಮ್ಮ ನಾಲ್ಕು ಓವರ್‌ಗಳಲ್ಲಿ 17 ಡಾಟ್ ಬಾಲ್‌ಗಳನ್ನು ಎಸೆದಿದ್ದು, ಹರಿಣಗಳ ಮೇಲೆ ಒತ್ತಡ ಹೇರಿತು. ಉಳಿದಂತೆ ಕೈಲ್ ಜೇಮಿಸನ್, ನಾಯಕ ಮಿಚೆಲ್ ಸ್ಯಾಂಟ್ನರ್ ಹಾಗೂ ಬೆಂಜಮಿನ್ ಸಿಯರ್ಸ್ ತಲಾ 2 ವಿಕೆಟ್ ಪಡೆದರು.

SA vs NZ: 18 ರನ್​ಗೆ 5 ವಿಕೆಟ್; ಹೀನಾಯವಾಗಿ ಸೋತ ಆಫ್ರಿಕಾ

ಲೇಥಮ್ ಅರ್ಧಶತಕದ ಇನ್ನಿಂಗ್ಸ್

ಈ ಗುರಿ ಬೆನ್ನಟ್ಟಿದ ಕಿವೀಸ್ ಪಡೆಗೆ ಭರ್ಜರಿ ಆರಂಭ ಸಿಕ್ಕಿತು. ಎರಡನೇ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ಆರಂಭಿಕ ಡೆವೋನ್ ಕಾನ್ವೇ 39 ರನ್​ಗಳ ಇನ್ನಿಂಗ್ಸ್ ಆಡುವುದರ ಜೊತೆಗೆ ಟಾಮ್ ಲೇಥಮ್ ಜೊತೆಗೂಡಿ ಮೊದಲ ವಿಕೆಟ್​ಗೆ 96 ರನ್​ಗಳ ಇನ್ನಿಂಗ್ಸ್ ಆಡಿದರು. ಇತ್ತ ಲೇಥಮ್ ಅಜೇಯ 63 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿದರು. ಟಿಮ್ ರಾಬಿನ್ಸನ್ ಕೂಡ 17 ರನ್​ಗಳ ಕಾಣಿಕೆ ನೀಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ: ಡಿಸಿಎಂ ಡಿಕೆ ಶಿವಕುಮಾರ್​​ ಎಚ್ಚರಿಕೆ

ಬೆಂಗಳೂರು, ಮಾರ್ಚ್​ 20: ಬೆಂಗಳೂರಲ್ಲಿ ಇನ್ಮುಂದೆ ಟೋಯಿಂಗ್ (Towing) ಪ್ರಾರಂಭವಾಗಲಿದೆ. ಆ ಮೂಲಕ ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆ ಇಡಲಾಗಿದೆ. ನಾನ್ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್​ ಮಾಡಲಾಗುವುದು. ಎಲ್ಲಾ ಕಾರ್ಪೊರೇಷನ್​​ಗೂ ಎರಡೆರಡು ಟೋಯಿಂಗ್ ವಾಹನ ನೀಡಿದ್ದು, ಈ ಬಗ್ಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ (DK Shivakumar) ಹೇಳಿದ್ದಾರೆ.

ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ

ವಿಧಾನಸೌಧದಲ್ಲಿಂದು ಜಿಬಿಎ 5 ನಗರ ಪಾಲಿಕೆಗಳ 2026-27ನೇ ಸಾಲಿನ ಆಯವ್ಯಯದ ಸಿದ್ಧತೆಯ ಕುರಿತು ಅಧಿಕಾರಿಗಳು ಹಾಗೂ ಬೆಂಗಳೂರಿನ ಶಾಸಕರೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್​​ ಪೂರ್ವಭಾವಿ ಸಭೆ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಹೆಚ್ಚು ಕಾಲ ಹಳೇ ವಾಹನಗಳನ್ನು ನಿಲ್ಲಿಸಿದರೂ ಟೋಯಿಂಗ್ ಮಾಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ನೌಕರರ ವರ್ಗಾವಣೆಗಿಂತ ಮಾಡಬೇಕಾದ ಉತ್ತಮ ಕೆಲಸಗಳಿವೆ: ಸಿಎಂಗೆ ಹೈಕೋರ್ಟ್ ತರಾಟೆ

ನಗರದ ರಸ್ತೆಗಳಲ್ಲಿ ಎಲ್ಲೆಲ್ಲಿ ಹಳೇ ವಾಹನಗಳನ್ನು ನಿಲ್ಲಿಸಿದ್ದಾರೋ ಅದನ್ನು ತುಂಬಿಕೊಂಡು ಹೋಗಿ ನಿರ್ದಿಷ್ಟ ಜಾಗದಲ್ಲಿ ಡಂಪ್ ಮಾಡುತ್ತೇವೆ. ಹಳೇ ವಾಹನಗಳನ್ನು ಟೋಯಿಂಗ್ ಮಾಡಲು ಬೆಳ್ಳಳ್ಳಿ, ಮಿಟಗಾನಹಳ್ಳಿ, ಸೊಂಡೆಕೊಪ್ಪ, ಗಿಡ್ಡೇನಹಳ್ಳಿಗಳಲ್ಲಿ ಜಾಗ ನಿಗದಿ ಮಾಡಲಾಗಿದೆ ಎಂದು ಡಿಕೆ ಶಿವಕುಮಾರ್​ ಮಾಹಿತಿ ನೀಡಿದ್ದಾರೆ.

ಫ್ಲೆಕ್ಸ್ ಹಾಕಿದರೆ 1 ಲಕ್ಷ ರೂ ದಂಡ

ವ್ಯಾಪಾರ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಎಲ್ಲಿ ವ್ಯಾಪಾರ ಮಾಡಬೇಕು ಅಂತ ನಿಗದಿ  ಮಾಡುತ್ತೇವೆ. ಯಾರು ನೋಂದಣಿ ಮಾಡಿದ್ದಾರೆ ಅವರಿಗೆ ಮಾತ್ರ ಅವಕಾಶ ನೀಡಬೇಕು. ಇದಕ್ಕೆ ಎಲ್ಲಾ ಶಾಸಕರು ಸಹಮತ ವ್ಯಕ್ತಪಡಿಸಿದ್ದಾರೆ. ಎಲ್ಲಾ ಪಾರ್ಟಿಯವರು ಫ್ಲೆಕ್ಸ್ ಹಾಕುತ್ತಾರೆ. ಯಾರು ಫ್ಲೆಕ್ಸ್ ಹಾಕ್ತಾರೆ ಅವರಿಗೆ 50 ಸಾವಿರದಿಂದ 1 ಲಕ್ಷ ರೂ ದಂಡ ಹಾಕಬೇಕು. ಈ ಬಗ್ಗೆ ಪೊಲೀಸರಿಗೂ, ಕಾರ್ಪೊರೇಷನ್​ನವರಿಗೆ ತಿಳಿಸಿದ್ದೇನೆ, ಕೇಸ್ ಹಾಕುತ್ತೇವೆ ಎಂದಿದ್ದಾರೆ.

ಬೀದಿ ಬದಿ ವ್ಯಾಪಾರಸ್ಥರು ಅಂಗಡಿ ಹಾಕಬಾರದು, ಯಾರೇ ಇದ್ದರೂ ಎತ್ಕೊಂಡು ಹೋಗಬೇಕು. 30 ಸಾವಿರ ಜನ ತಳ್ಳೋ ಗಾಡಿ ಬೇಕು ಎಂದು ಕೇಳಿದ್ದಾರೆ, ಟೆಂಡರ್ ಕರೆದಿದ್ದೇವೆ. ಎಲ್ಲಿ ಬೇಕು ಅಷ್ಟೇ ವ್ಯಾಪಾರ ಮಾಡಬೇಕು. ಐಡೆಂಟಿಟಿ ಕಾರ್ಡ್ ಇದರೆ ಅಷ್ಟೇ ಮಾರಾಟ ಮಾಡಬೇಕು. ಇನ್ನು ಪಾರ್ಕ್​ನಲ್ಲಿ ಅನಧಿಕೃತ ಕೆಲಸ ನಡೆಯುತ್ತಿವೆ ಅಂತ ಆರೋಪವಿದೆ ಹೀಗಾಗಿ ಪಾರ್ಕ್ ಟೈಮ್ ನಿಗದಿ ಮಾಡುತ್ತೇವೆ. ಈ ಬಗ್ಗೆ ಐದು ಪಾಲಿಕೆಯ ಲೋಕಲ್ ಎಂಎಲ್ಎಗಳು ನಿರ್ಧಾರ ಮಾಡಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್​​ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್​ ಉತ್ತರ ನೋಡಿ

ಫುಟ್ ಪಾತ್ ಪಾಲಿಸಿ ತರಬೇಕು ಅಂತ ಇದೆ. ಬೀದಿ ಬದಿ ವ್ಯಾಪಾರ ಮಾಡುತ್ತಾರೆ. ಇದರಿಂದ ಸಮಸ್ಯೆ ಆಗಿದೆ. ಹೀಗಾಗಿ ನಿಗದಿತ ಸ್ಥಳದಲ್ಲಿ ವ್ಯಾಪಾರ ಮಾಡಬೇಕು. ಈ ಸಮಸ್ಯೆ ನಿಲ್ಲಿಸಬೇಕು ಅಂತ ಪಾಲಿಸಿ ಮಾಡಬೇಕು ಎಂದಿದ್ದಾರೆ.

ವಾರ್ಡ್ ವೈಸ್ ಬಜೆಟ್​ಗೆ ಒತ್ತಾಯ

ಇನ್ನು ಜಿಬಿಎ ಬಜೆಟ್​​ ಸಭೆ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್​​, ಇಂದು ಬೆಂಗಳೂರು ನಗರದ ಶಾಸಕರ ಜೊತೆ ಬಜೆಟ್ ಸಭೆ ಆಗಿದೆ. ಪ್ರಮುಖ ನಿರ್ಣಯ ಆಗಿದೆ. ಅಶೋಕ್ ಕೂಡ ಬಂದಿದ್ದರು. ಅಭಿಪ್ರಾಯ ತಿಳಿಸಿದ್ದಾರೆ. ವಾರ್ಡ್ ವೈಸ್ ಬಜೆಟ್ ನೀಡಬೇಕು ಎಂದು ಒತ್ತಿಯಿಸಿದ್ದಾರೆ ಎಂದರು. ಇನ್ನು ಶಾಸಕರಿಂದ ವಾರ್ಡಿಗೆ 5-10 ಕೋಟಿ ರೂ ಅನುದಾನ ಬೇಡಿಕೆ ವಿಚಾರವಾಗಿ ಮಾತನಾಡಿದ್ದು, ನೋಡೋಣ ಎಷ್ಟಾಗಲಿದೆ. ಅವರು ಆಕಾಶನೂ ಕೇಳ್ತಾರೆ, ಭೂಮಿನೂ ತಂದು ಕೊಡಿ ಅಂತ ಕೇಳುತ್ತಾರೆ. ನಮ್ಮಿಂದ ಎಷ್ಟಾಗಲಿದೆ ಅನ್ನೋದು ನೋಡಿ ಕೊಡುತ್ತೇವೆ ಎಂದರು.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಐಪಿಎಲ್ ಮುಗಿದ ಕೂಡಲೇ ಟಿ20 ಸರಣಿ ಆಡಲಿದೆ ಭಾರತ; ವೇಳಾಪಟ್ಟಿ ಪ್ರಕಟ

ಕೆಲವೇ ದಿನಗಳ ಹಿಂದೆ ಟಿ20 ವಿಶ್ವಕಪ್ ಗೆದ್ದುಕೊಂಡಿರುವ ಟೀಂ ಇಂಡಿಯಾ (Team India) ಇದೀಗ ಐಪಿಎಲ್‌ನಲ್ಲಿ (IPL 2026) ಕಣಕ್ಕಿಳಿಯಲು ಸಜ್ಜಾಗಿದೆ. ಎರಡು ತಿಂಗಳ ಕಾಲ ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಬೆವರು ಹರಿಸಲಿರುವ ಟೀಂ ಇಂಡಿಯಾ ಆಟಗಾರರು ಆ ಬಳಿಕ ಮತ್ತೆ ರಾಷ್ಟ್ರೀಯ ಕರ್ತವ್ಯಕ್ಕೆ ಮರಳಲಿದ್ದಾರೆ. ಅದಕ್ಕೆ ಪೂರಕವಾಗಿ ಇದೀಗ ಭಾರತದ ಮುಂದಿನ ಟಿ20 ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಸೂರ್ಯಕುಮಾರ್ ಯಾದವ್ (Suryakumar Yadav) ನೇತೃತ್ವದ ತಂಡವು ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ಈ ಸರಣಿ ಜೂನ್ ಕೊನೆಯ ವಾರದಲ್ಲಿ ನಡೆಯಲಿದ್ದು, ಸರಣಿಯ ದಿನಾಂಕಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಮೊದಲು ಟೀಂ ಇಂಡಿಯಾ ಈ ಸರಣಿಯನ್ನು ಆಡಲಿದೆ. ವಾಸ್ತತವಾಗಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಜುಲೈ ತಿಂಗಳಲ್ಲಿ ಐದು ಪಂದ್ಯಗಳ ಟಿ20 ಸರಣಿ ಹಾಗೂ ಆ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಆ ಸರಣಿ ಆರಂಭಕ್ಕೂ ಮುನ್ನ ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಈ ಟಿ20 ಸರಣಿಯನ್ನು ಆಡಲಿದೆ.

ಭಾರತದ ಇಂಗ್ಲೆಂಡ್ ಪ್ರವಾಸ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿ ಜುಲೈ 1 ರಂದು ಆರಂಭವಾಗಲಿದ್ದು, ಅದಕ್ಕೂ ಮುನ್ನ ಅಂದರೆ ಜೂನ್‌ನಲ್ಲಿ ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ. ಈ ಸರಣಿಯ ದಿನಾಂಕಗಳನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಈ ಸರಣಿಯ ನಂತರ, ಟೀಂ ಇಂಡಿಯಾ ಜುಲೈ 1, 4, 7, 9 ಮತ್ತು 11 ರಂದು ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಇದರ ನಂತರ ಜುಲೈ 14 ರಂದು ಏಕದಿನ ಸರಣಿ ಆರಂಭವಾಗಲಿದ್ದು, ಎರಡನೇ ಏಕದಿನ ಪಂದ್ಯ ಜುಲೈ 16 ರಂದು ಮತ್ತು ಮೂರನೇ ಪಂದ್ಯ ಜುಲೈ 19 ರಂದು ನಡೆಯಲಿದೆ.

ತಪ್ಪು ನನ್ನದೇ.. ಟಿ20 ವಿಶ್ವಕಪ್ ಗೆದ್ದು ಅಕ್ಷರ್ ಪಟೇಲ್ ಬಳಿ ಕ್ಷಮೆಯಾಚಿಸಿದ ಸೂರ್ಯ

ಭಾರತ-ಐರ್ಲೆಂಡ್ ಟಿ20 ಸರಣಿ

ಭಾರತ ತಂಡವು ಟಿ20 ಸರಣಿಗಾಗಿ ಐರ್ಲೆಂಡ್​ಗೆ ಭೇಟಿ ನೀಡುತ್ತಿರುವುದು ಇದು ನಾಲ್ಕನೇ ಬಾರಿಯಾಗಲಿದೆ. ಟೀಂ ಇಂಡಿಯಾ ಇದುವರೆಗೆ ಐರ್ಲೆಂಡ್‌ನಲ್ಲಿ ಆರು ಟಿ20 ಪಂದ್ಯಗಳನ್ನು ಆಡಿದ್ದು, ಎಲ್ಲವನ್ನೂ ಗೆದ್ದಿದೆ. ಭಾರತ ಮತ್ತು ಐರ್ಲೆಂಡ್ ನಡುವಿನ ಈ ಎಲ್ಲಾ ಪಂದ್ಯಗಳು ಡಬ್ಲಿನ್‌ನ ಮಲಾಹೈಡ್‌ನಲ್ಲಿ ನಡೆದಿದ್ದವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್​ಗೆ ಮತ್ತೊಂದು ಹೊಡೆತ; ಅಮೆರಿಕ- ಇಸ್ರೇಲ್ ದಾಳಿಯಲ್ಲಿ ಐಆರ್‌ಜಿಸಿ ವಕ್ತಾರ ಅಲಿ ನೈನಿ ಹತ್ಯೆ

ಟೆಹ್ರಾನ್, ಮಾರ್ಚ್ 20: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧವು 21ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್‌ನ (Iran War) ಪ್ರಮುಖ ನಗರಗಳ ಮೇಲೆ ಇಸ್ರೇಲ್ ಮತ್ತು ಅಮೆರಿಕ ವೈಮಾನಿಕ ದಾಳಿ ನಡೆಸುತ್ತಿದೆ. ಒಂದೊಂದಾಗಿ ಕಮಾಂಡ್‌ನ ಸೇನೆಯ ಪ್ರಮುಖ ನಾಯಕರನ್ನು ಹತ್ಯೆ ಮಾಡುತ್ತಿದೆ. ಇತ್ತೀಚೆಗೆ, ಇಸ್ರೇಲ್ ಮತ್ತೊಮ್ಮೆ ಟೆಹ್ರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಗಳಲ್ಲಿ ಇರಾನ್‌ನ ಐಆರ್‌ಜಿಸಿ ವಕ್ತಾರ ಅಲಿ ಮೊಹಮ್ಮದ್ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಘೋಷಿಸಿದೆ. ಇರಾನ್ ಕೂಡ ಅಲಿ ಮೊಹಮ್ಮದ್ ನೈನಿಯವರ ಸಾವನ್ನು ದೃಢಪಡಿಸಿದೆ.

ಅಲಿ ಮೊಹಮ್ಮದ್ ನೈನಿ ಸೇರಿದಂತೆ ತನ್ನ ನಾಯಕರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಘೋಷಿಸಿದೆ. ಅಲಿ ಮೊಹಮ್ಮದ್ ನೈನಿ ಅವರ ಸಾವಿನಿಂದ ತನ್ನ ಪಡೆಗಳ ನೈತಿಕತೆ ದುರ್ಬಲಗೊಳ್ಳುವುದಿಲ್ಲ ಎಂದು ಇರಾನ್ ಹೇಳಿದೆ. ಇರಾನ್ ಕೂಡ ಇಸ್ರೇಲ್ ಮತ್ತು ಅಮೆರಿಕ ಸೇರಿದಂತೆ ಅವುಗಳ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ಮುಂದುವರಿಸಿದೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ಸಂಘರ್ಷ:ಈ 9 ವಾಯು ಪ್ರದೇಶಗಳಲ್ಲಿ ಹಾರಾಟ ನಡೆಸದಂತೆ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸಲಹೆ

ಇರಾನ್ ಯುಎಇ, ಕತಾರ್ ಮತ್ತು ಅಬುಧಾಬಿಯಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿಗಳನ್ನು ನಾಶ ಮಾಡುತ್ತಿದೆ. ಇರಾನ್ ವಿಶೇಷವಾಗಿ ತೈಲ ಮತ್ತು ಅನಿಲ ಸಂಸ್ಕರಣಾಗಾರಗಳನ್ನು ಗುರಿಯಾಗಿಸಿಕೊಂಡಿದೆ. ಇರಾನ್ ಮತ್ತೊಮ್ಮೆ ದುಬೈ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇರಾನಿನ ಕ್ಷಿಪಣಿ ಇಸ್ರೇಲ್‌ನಲ್ಲಿರುವ IIFA ವಿದ್ಯುತ್ ಸ್ಥಾವರದ ಮೇಲೆ ದಾಳಿ ಮಾಡಿದೆ. ಇದರಿಂದ ಎಚ್ಚೆತ್ತ ಇಸ್ರೇಲ್ ತಕ್ಷಣವೇ ವಿದ್ಯುತ್ ಸ್ಥಾವರವನ್ನು ಸ್ಥಗಿತಗೊಳಿಸಿತು. ಇರಾನ್ ದುಬೈನಲ್ಲಿರುವ ಕುವೈತ್‌ನಲ್ಲಿರುವ ಅತಿದೊಡ್ಡ ತೈಲ ಸಂಸ್ಕರಣಾಗಾರವಾದ ಮಿನಾ ಅಲ್ ಅಹ್ಮದಿ ಮೇಲೆಯೂ ದಾಳಿ ಮಾಡಿದೆ.

ಇದನ್ನೂ ಓದಿ: Video: ಇಸ್ರೇಲ್​​ನ ಹೈಫಾ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಕ್ಷಿಪಣಿ ದಾಳಿ

ಪಶ್ಚಿಮ ಏಷ್ಯಾ ಯುದ್ಧವು ಪ್ರಪಂಚದಾದ್ಯಂತ ಸುಮಾರು 85 ದೇಶಗಳ ಮೇಲೆ ಪರಿಣಾಮ ಬೀರಿತು. ಈ ಯುದ್ಧದ ನಂತರ ಗಲ್ಫ್ ದೇಶಗಳಿಂದ ಜಗತ್ತಿಗೆ ತೈಲ ಪೂರೈಕೆ ನಿಂತುಹೋಯಿತು. ಇದರ ಪರಿಣಾಮವಾಗಿ ಸುಮಾರು 85 ಪೆಟ್ರೋಲಿಯಂ ಮತ್ತು ಅನಿಲದ ಕೊರತೆ ಉಂಟಾಯಿತು. ಇದರಿಂದಾಗಿ ಅನೇಕ ದೇಶಗಳಲ್ಲಿ ಅವುಗಳ ಬೆಲೆಗಳು ಹೆಚ್ಚಾಯಿತು. ಭಾರತದಲ್ಲಿ ವಿದ್ಯುತ್ ಪೆಟ್ರೋಲ್ ಮತ್ತು ಕೈಗಾರಿಕಾ ಡೀಸೆಲ್ ಬೆಲೆಗಳು ಕೂಡ ಹೆಚ್ಚಾಗಿದೆ. ಈ ಯುದ್ಧವು ಇರಾನ್ ಮತ್ತು ಇಸ್ರೇಲ್‌ಗೆ ಹಾಗೂ ಅಮೆರಿಕಕ್ಕೆ ಭಾರಿ ನಷ್ಟವನ್ನುಂಟುಮಾಡಿದೆ. ಇರಾನಿನ ದಾಳಿಯಿಂದಾಗಿ ಅಮೆರಿಕ ಇಲ್ಲಿಯವರೆಗೆ ಸುಮಾರು 16 ಯುದ್ಧವಿಮಾನಗಳನ್ನು ಕಳೆದುಕೊಂಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸಾಯಿ ಪಲ್ಲವಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಮಣಿರತ್ನಂ

ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಅವರು ಈಗ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಲೈಕಾ ಪ್ರೊಡಕ್ಷನ್ ಈ ಚಿತ್ರವನ್ನು ಅನೌನ್ಸ್ ಮಾಡಿದೆ. ಈ ಸಿನಿಮಾ ಬಹಳ ಕುತೂಹಲ ಮೂಡಿಸಿದೆ. ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಮಣಿರತ್ನಂ ಅವರು. ಈ ಸಿನಿಮಾಗೆ ಸಾಯಿ ಪಲ್ಲವಿ ನಾಯಕಿ. ಈ ಚಿತ್ರ ಇನ್ನು ಕೆಲವೇ ವಾರಗಳಲ್ಲಿ ಶೂಟಿಂಗ್ ಆರಂಭಿಸಲಿದೆ.

ಮಣಿರತ್ನಂ ಅವರು ‘ಥಗ್ ಲೈಫ್’ ಹೆಸರಿನ ಸಿನಿಮಾ ಮಾಡಿದರು. ಕಮಲ್ ಹಾಸನ್ ಜೊತೆ ಮಾಡಿದ ಈ ಚಿತ್ರ ಅಟ್ಟರ್ ಫ್ಲಾಪ್ ಆಯಿತು. ಕರ್ನಾಟಕದಲ್ಲಿ ಈ ಚಿತ್ರ ಬಿಡುಗಡೆಯನ್ನೇ ಕಂಡಿಲ್ಲ. ಅದಕ್ಕೂ ಮೊದಲು ಬಂದ ‘ಪೊನ್ನಿಯೆನ್ ಸೆಲ್ವನ್’ ಹಾಗೂ ‘ಪೊನ್ನಿಯೆನ್ ಸೆಲ್ವನ್ 2’ ಸಿನಿಮಾಗಳು ತಮಿಳುನಾಡಿನಲ್ಲಿ ಮೆಚ್ಚುಗೆ ಪಡೆಯಿತು. ಈಗ ಅವರು ಗೆಲ್ಲುವ ಕನಸಿನೊಂದಿಗೆ ಹೊಸ ಚಿತ್ರ ಘೋಷಣೆ ಮಾಡಿರೋದು ವಿಶೇಷ.

ಮಣಿರತ್ನಂ ಅವರು ಹಲವು ಅದ್ಭುತ ಚಿತ್ರಗಳನ್ನು ಪ್ರೇಕ್ಷಕರ ಎದುರು ಇಟ್ಟಿದ್ದಾರೆ. ಅವರು ಇತ್ತೀಚೆಗೆ ಕೊಂಚ ಚಾರ್ಮ್ ಕಳೆದುಕೊಂಡಿದ್ದಾರೆ. ಆದರೆ, ಈ ಹೊಸ ಸಿನಿಮಾ ಮೂಲಕ ಅವರಿಗೆ ಗೆಲುವು ಸಿಗುವ ನಿರೀಕ್ಷೆ ಇದೆ.
‘ಮದ್ರಾಸ್ ಟಾಕೀಸ್’ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಇದು ಸಂಸ್ಥೆಯ 23ನೇ ಸಿನಿಮಾ. ಸಾಯಿ ಪಲ್ಲವಿ ಅವರು ಸದ್ಯ ‘ರಾಮಾಯಣ’ ಸಿನಿಮಾ ಶೂಟ್​​ ಅಲ್ಲಿ ಬ್ಯುಸಿ ಇದ್ದು, ಶೀಘ್ರವೇ ಮರಳಲಿದ್ದಾರೆ. ವಿಜಯ್ ಸೇತುಪತಿ ಅವರು ಈ ಚಿತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಮೊದಲು ವಿಜಯ್ ಹಾಗೂ ಮಣಿರತ್ನಂ ಅವರು ‘ಚೆಕ್ಕ ಚಿವಂತ ವಾನಮ್’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು.

ಇದನ್ನೂ ಓದಿ: ಸಾಯಿ ಪಲ್ಲವಿ ಕೈತಪ್ಪಿದ ಮಧುಬಾಲಾ ಬಯೋಪಿಕ್ ಅವಕಾಶ: ಕಾರಣ ಏನು?

ಸಾಯಿ ಪಲ್ಲವಿ ಅವರನ್ನು ಮಣಿರತ್ನಂ ಅವರು ಈ ಮೊದಲು ಹೊಗಳಿದ್ದರು. ಸಾಯಿ ಪಲ್ಲವಿ ಜೊತೆ ಸಿನಿಮಾ ಮಾಡುತ್ತೇನೆ ಎಂದು ಮಣಿರತ್ನಂ ಹೇಳಿದ್ದರು. ಈಗ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಓರ್ವ ಅದ್ಭುತ ನಟಿ. ಅವರು ಓರ್ವ ಅದ್ಭುತ ನಿರ್ದೇಶಕನ ಜೊತೆ ಸೇರುತ್ತಿದ್ದಾರೆ ಎಂದಾಗ ಸಹಜವಾಗಿಯೇ ಕುತೂಹಲ ಹೆಚ್ಚುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗದ್ದರ್ ಪ್ರಶಸ್ತಿ: ರಶ್ಮಿಕಾ ಬೌನ್ಸರ್ ಕಿರಿಕ್, ರಾಜಮೌಳಿ ತಂದೆಗೆ ಅವಮಾನ

ತೆಲಂಗಾಣ ಸರ್ಕಾರವು ನಿನ್ನೆಯಷ್ಟೆ (ಮಾರ್ಚ್ 19) ‘ಗದ್ದರ್ ಚಲನಚಿತ್ರ ಪ್ರಶಸ್ತಿ’ (Gaddar) ಎರಡನೇ ಆವೃತ್ತಿಯ ಪ್ರದಾನ ಸಮಾರಂಭವನ್ನು ಆಯೋಜಿಸಿತ್ತು. ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು, ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ನೀಡಲಾಯ್ತು. ಸಿಎಂ ರೇವಂತ್ ರೆಡ್ಡಿ ಸೇರಿದಂತೆ ಇನ್ನೂ ಕೆಲವು ಗಣ್ಯರುಗಳು ಅತ್ಯುತ್ತಮ ನಟ, ನಟಿ ಮತ್ತು ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯ್ತು. ಕಾರ್ಯಕ್ರಮ ಚೆನ್ನಾಗಿ ನಡೆಯಿತಾದರೂ ಎರಡು ಪ್ರಮುಖ ವಿಷಯಗಳು ತುಸು ತಡವಾಗಿ ವರದಿ ಆಗಿವೆ. ಕಾರ್ಯಕ್ರದ ವೇಳೆ ರಶ್ಮಿಕಾ ಮಂದಣ್ಣ ಅವರ ಬೌನ್ಸರ್ ಕಿರಿಕ್ ಮಾಡಿಕೊಂಡಿದ್ದಾರೆ ಹಾಗೂ ರಾಜಮೌಳಿ ಅವರ ತಂದೆ ಖ್ಯಾತ ಕತೆಗಾರ ವಿಯೇಂದ್ರ ಪ್ರಸಾದ್ ಅವರಿಗೆ ಅಪಮಾನ ನಡೆದಿದೆ ಎಂದು ಕೆಲ ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ನಟಿ ರಶ್ಮಿಕಾ ಮಂದಣ್ಣ ಅವರ ವೈಯಕ್ತಿಕ ಬೌನ್ಸರ್ ಒಬ್ಬರು ತೆಲಂಗಾಣದ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (FDC) ಅಧ್ಯಕ್ಷ ದಿಲ್ ರಾಜು ಅವರ ಆಪ್ತ ಸಹಾಯಕರೊಂದಿಗೆ ಜಗಳ ಮಾಡಿದ್ದಾರೆಂದು ವರದಿಯಾಗಿದೆ. ಕಾರ್ಯಕ್ರಮದಲ್ಲಿ ರಶ್ಮಿಕಾ ಮತ್ತು ದಿಲ್ ರಾಜು ಅಕ್ಕ-ಪಕ್ಕ ಕೂತಿದ್ದರು. ಆದರೆ ದಿಲ್ ರಾಜು ಅವರ ಆಪ್ತರನ್ನು ಅಭಿಮಾನಿಯೆಂದು ತಪ್ಪಾಗಿ ಭಾವಿಸಿ ರಶ್ಮಿಕಾರ ಬೌನ್ಸರ್ ಕಿರಿಕ್ ಮಾಡಿದ್ದಾರೆ ಎನ್ನಲಾಗಿದ್ದು, ಬೌನ್ಸರ್ ಹೊಸದಾಗಿ ಕೆಲಸಕ್ಕೆ ಸೇರಿದ್ದರಿಂದ ಅಲ್ಲಿನ ಗಣ್ಯರ ಬಗ್ಗೆ ಅವರಿಗೆ ಅಷ್ಟಾಗಿ ತಿಳಿದಿರಲಿಲ್ಲ ಎನ್ನಲಾಗಿದೆ. ಮಾಧ್ಯಮದವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವವರೆಗೂ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ:ಮಗಳಾಗಿ ಬಂದೆ, ಸೊಸೆಯಾಗಿದ್ದೀನಿ: ಪ್ರಶಸ್ತಿ ಸ್ವೀಕರಿಸಿ ಭಾವುಕರಾದ ರಶ್ಮಿಕಾ

ಖ್ಯಾತ ಚಿತ್ರಕಥೆಗಾರರೂ ಆಗಿರುವ ಹಾಗೂ ರಾಜಮೌಳಿ ಅವರ ತಂದೆಯೂ ಆಗಿರುವ ಸಂಸದ ವಿಜಯೇಂದ್ರ ಪ್ರಸಾದ್ ಅವರು ಸಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆದರೆ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಎಡವಟ್ಟಿನಿಂದಾಗಿ ಸಮಾರಂಭದಿಂದ ಅರ್ಧಕ್ಕೇ ಹೊರನಡೆದರು. ಕಾರ್ಯಕ್ರಮದ ಜವಾಬ್ದಾರಿ ಹೊತ್ತಿದ್ದ ಮುಂಬೈ ಮೂಲದ ಕಂಪನಿಗೆ ದಕ್ಷಿಣ ಭಾರತದ ಸೆಲೆಬ್ರಿಟಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಅವರು ವಿಜಯೇಂದ್ರ ಪ್ರಸಾದ್ ಅವರನ್ನು ನಟ ಆರ್ ನಾರಾಯಣ ಮೂರ್ತಿ ಎಂದು ತಪ್ಪಾಗಿ ಭಾವಿಸಿ, ಅದೇ ಹೆಸರಿನಿಂದ ಕರೆದರು. ಇದರಿಂದ ಬೇಸರಗೊಂಡ ವಿಜಯೇಂದ್ರ ಪ್ರಸಾದ್ ಅವರು ವೇದಿಕೆಯಿಂದ ಕೋಪದಿಂದಲೇ ನಿರ್ಗಮಿಸಿದರು ಎನ್ನಲಾಗಿದೆ.

‘ಎನ್‌.ಟಿ.ಆರ್ ಜೀವಮಾನ ಸಾಧನೆ’ಯನ್ನು ಮೆಗಾಸ್ಟಾರ್ ಚಿರಂಜೀವಿ ಅವರಿಗೆ ನೀಡಲಾಯ್ತು. ಪ್ರಶಸ್ತಿ ಸ್ವೀಕರಿಸಿದ ಚಿರಂಜೀವಿ ಅವರು, ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ತೆಲಂಗಾಣ ಸರ್ಕಾರವನ್ನು ಶ್ಲಾಘಿಸಿದರು. ಚಲನಚಿತ್ರ ರಂಗಕ್ಕೆ ಸರ್ಕಾರ ನೀಡುತ್ತಿರುವ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕಲಾವಿದರನ್ನು ಪ್ರೋತ್ಸಾಹಿಸುವ ವಿಷಯದಲ್ಲಿ ಆಂಧ್ರಪ್ರದೇಶ ಸರ್ಕಾರವು ತೆಲಂಗಾಣವನ್ನು ನೋಡಿ ಕಲಿಯಬೇಕು ಎಂದು ಸಹ ಅಭಿಪ್ರಾಯಪಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಿಡನ್ ಕ್ಯಾಮೆರಾ, 58 ಮಹಿಳೆಯರ ಅಶ್ಲೀಲ ವಿಡಿಯೋ; ಬಯಲಾಗುತ್ತಲೇ ಇದೆ ಸಂಖ್ಯಾಶಾಸ್ತ್ರಜ್ಞ ಅಶೋಕ್ ಖರತ್ ಕರ್ಮಕಾಂಡ

ಮುಂಬೈ, ಮಾರ್ಚ್ 20: ಮಹಾರಾಷ್ಟ್ರದ ನಾಸಿಕ್‌ನಲ್ಲಿ (Nasik) ಆಧ್ಯಾತ್ಮಿಕತೆಯ ಸೋಗಿನಲ್ಲಿ 35 ವರ್ಷದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪ್ರಭಾವಿ ಸಂಖ್ಯಾಶಾಸ್ತ್ರಜ್ಞ ಅಶೋಕ್ ಖರತ್ ಅವರನ್ನು ಬಂಧಿಸಲಾಗಿದೆ. ನಿವೃತ್ತ ನೌಕಾ ಅಧಿಕಾರಿಯಾಗಿರುವ 67 ವರ್ಷದ ಅಶೋಕ್ ಖರತ್ ತನಗೆ ಮಾದಕ ದ್ರವ್ಯ ನೀಡಿ, ವಶಪಡಿಸಿಕೊಂಡು, ತನ್ನ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಅವರ ಫಾರ್ಮ್​ಹೌಸ್​ ಮೇಲೆ ದಾಳಿ ನಡೆಸಿದಾಗ ಶಾಕಿಂಗ್ ಸತ್ಯಗಳು ಬೆಳಕಿಗೆ ಬಂದಿವೆ.

ಲೈಂಗಿಕ ಶೋಷಣೆ ಕೇವಲ ಒಬ್ಬ ಮಹಿಳೆಗೆ ಸೀಮಿತವಾಗಿಲ್ಲ ಎಂಬ ಸಂಗತಿ ಪೊಲೀಸ್ ತನಿಖೆ ಬಹಿರಂಗಪಡಿಸಿದೆ. ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯಾಗಿರುವುದರಿಂದ ತನ್ನನ್ನು ‘ಕ್ಯಾಪ್ಟನ್’ ಎಂದು ಕರೆದುಕೊಳ್ಳುವ ಅಶೋಕ್ ಖರತ್, ಮಹಿಳೆಯರಿಗೆ ಅವರ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿ ತನ್ನ ಕಚೇರಿಗೆ ಕರೆಸುತ್ತಿದ್ದರು. ಅಲ್ಲಿಗೆ ಬಂದ ನಂತರ ಮಾದಕ ದ್ರವ್ಯವನ್ನು ನೀಡುವ ಮೂಲಕ ಅವರನ್ನು ಸಮ್ಮೋಹನಗೊಳಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಆರು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ಅಜ್ಜ

ಇದಾದ ನಂತರ ಆ ಮಹಿಳೆಯರಲ್ಲಿ ಭಯವನ್ನು ಹುಟ್ಟುಹಾಕುವ ಮೂಲಕ, ಅವರ ಗಂಡಂದಿರ ಸಾವಿನ ಬಗ್ಗೆ ಬೆದರಿಕೆ ಹಾಕುವ ಮೂಲಕ ಅವರ ಮೇಲೆ ಅತ್ಯಾಚಾರ ಮಾಡುತ್ತಿದ್ದರು. ಇದಿಷ್ಟೇ ಅಲ್ಲ, ಅಶೋಕ್ ಖರತ್ ತನ್ನ ಕಚೇರಿಯೊಳಗೆ ಗುಪ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಅವರ ಮೇಲೆ ದಾಳಿ ನಡೆದ ವೇಳೆ ಆತ ಚಿತ್ರೀಕರಿಸಿದ 58 ಮಹಿಳೆಯರನ್ನು ಒಳಗೊಂಡ ಅಶ್ಲೀಲ ವಿಡಿಯೋಗಳನ್ನು ಒಳಗೊಂಡಿರುವ ಪೆನ್ ಡ್ರೈವ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಫೇಸ್​​ಬುಕ್​ನಲ್ಲಿ ‘ನೀಲಿ ಡ್ರಮ್’ ಪೋಸ್ಟ್ ನೋಡಿ ಹೆಂಡತಿಯನ್ನು ಪ್ರೇಮಿ ಜೊತೆ ಹೋಗಲು ಬಿಟ್ಟ ಗಂಡ!

ಈ ವಿಷಯದ ತನಿಖೆಗಾಗಿ ಮಹಾರಾಷ್ಟ್ರ ಸರ್ಕಾರವು ಐಪಿಎಸ್ ಅಧಿಕಾರಿ ತೇಜಸ್ವಿನಿ ಸತ್ಪುಟೆ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚಿಸಿದೆ. ಈ ಆಶೋಕ್ ಖರತ್ ದೆಹಲಿಯಿಂದ ಮಹಾರಾಷ್ಟ್ರದ ಸರ್ಕಾರದವರೆಗೆ ಅನೇಕ ರಾಜಕೀಯ ಸಂಪರ್ಕಗಳನ್ನು ಹೊಂದಿದ್ದಾರೆಂದು ವದಂತಿಗಳಿವೆ. ಉದ್ಯಮಿಗಳು, ರಾಜಕಾರಣಿಗಳು, ಸೆಲಬ್ರಿಟಿಗಳಿಗೆ ಸಂಖ್ಯಾಶಾಸ್ತ್ರ ಹೇಳುವ ಜ್ಯೋತಿಷಿಯೆಂದು ಪರಿಚಿತರಾಗಿದ್ದ ಅಶೋಕ್ ಖರತ್ ದೊಡ್ಡ ಜಾಲವನ್ನೇ ಹೊಂದಿದ್ದರು. ನಾಸಿಕ್‌ನ ಸಿನ್ನಾರ್‌ನಲ್ಲಿರುವ ಶ್ರೀ ಈಶಾನ್ಯೇಶ್ವರ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷರಾಗಿ, ಖರತ್ ಪ್ರಮುಖ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ವ್ಯಾಪಾರ ಉದ್ಯಮಿಗಳಿಗೆ ಆಧ್ಯಾತ್ಮಿಕ ಮಾರ್ಗದರ್ಶಕರಾಗಿ ಗುರುತಿಸಲ್ಪಟ್ಟಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

SECL Apprentice Recruitment 2026: 1600 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ; ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಪದವೀಧರರಿಗೆ ಸುವರ್ಣವಕಾಶ

ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (SECL) ಅಪ್ರೆಂಟಿಸ್ ಹುದ್ದೆಗಳಿಗೆ ದೊಡ್ಡ ನೇಮಕಾತಿ ಅಭಿಯಾನವನ್ನು ಘೋಷಿಸಿದೆ. ಈ ಅಭಿಯಾನವು ಒಟ್ಟು 1,600 ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಎಂಜಿನಿಯರಿಂಗ್ ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಅವಕಾಶಗಳನ್ನು ನೀಡುತ್ತದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 31 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಪ್ರತಿಷ್ಠಿತ PSU ನಲ್ಲಿ ಕೆಲಸದ ಅನುಭವವನ್ನು ಪಡೆಯಬಹುದು.

ಪದವೀಧರರು ಮತ್ತು ಡಿಪ್ಲೊಮಾ ಪಡೆದವರಿಗೆ ಪ್ರತ್ಯೇಕ ಹುದ್ದೆಗಳು:

ಈ ನೇಮಕಾತಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ವರ್ಗವು ಪದವೀಧರ ಅಪ್ರೆಂಟಿಸ್‌ಗಳಿಗೆ ಆಗಿದ್ದು, ಗಣಿಗಾರಿಕೆ, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಸಿವಿಲ್‌ನಂತಹ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಎರಡನೇ ವರ್ಗವು ತಂತ್ರಜ್ಞ ಅಪ್ರೆಂಟಿಸ್‌ಗಳಿಗೆ ಆಗಿದ್ದು, ಎಂಜಿನಿಯರಿಂಗ್ ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಒಟ್ಟು ಹುದ್ದೆಗಳಲ್ಲಿ ಗಣಿಗಾರಿಕೆ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಚ್ಚಿನ ಪಾಲನ್ನು ಹೊಂದಿದ್ದಾರೆ.

ಅರ್ಹತೆಗಳ ವಿವರ:

ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಸಂಬಂಧಿತ ವ್ಯಾಪಾರದಲ್ಲಿ ಬಿಇ/ಬಿ.ಟೆಕ್ ಅಥವಾ ಡಿಪ್ಲೊಮಾ ಹೊಂದಿರಬೇಕು. NATS ಪೋರ್ಟಲ್‌ನಲ್ಲಿ ನೋಂದಣಿ ಕೂಡ ಕಡ್ಡಾಯವಾಗಿದೆ. 2023, 2024, ಅಥವಾ 2025 ರಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಈ ಹಿಂದೆ ಅಪ್ರೆಂಟಿಸ್‌ಶಿಪ್ ಪೂರ್ಣಗೊಳಿಸಿದವರು ಅಥವಾ ಒಂದು ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರುವವರು ಅರ್ಹರಾಗಿರುವುದಿಲ್ಲ.

ವಿದ್ಯಾರ್ಥಿವೇತನ ಮತ್ತು ಸೌಲಭ್ಯಗಳು:

ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯ ಸಮಯದಲ್ಲಿ ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ. ಪದವೀಧರ ಅಪ್ರೆಂಟಿಸ್‌ಗಳು ಸುಮಾರು 9,000ರೂ. ಮತ್ತು ಡಿಪ್ಲೊಮಾ ಪಡೆದವರಿಗೆ ತಿಂಗಳಿಗೆ 8,000ರೂ. ನೀಡಲಾಗುತ್ತದೆ. ಈ ಮೊತ್ತವನ್ನು ಭಾರತ ಸರ್ಕಾರದ ನಿಯಮಗಳಿಗೆ ಅನುಸಾರವಾಗಿ ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​​ನಲ್ಲಿ ಉದ್ಯೋಗವಕಾಶ; ಪದವೀಧರರಿಗೆ ಸುವರ್ಣವಕಾಶ

ಪರೀಕ್ಷೆಯಿಲ್ಲದೆ ಆಯ್ಕೆ:

ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳನ್ನು ಅವರ ಶೈಕ್ಷಣಿಕ ಅರ್ಹತೆಯ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯಿಂದ ಆಯ್ಕೆ ಮಾಡಲಾಗುತ್ತದೆ. ಇಬ್ಬರು ಅಭ್ಯರ್ಥಿಗಳು ಒಂದೇ ಅಂಕಗಳನ್ನು ಗಳಿಸಿದರೆ, ಹಿರಿಯ ಅಭ್ಯರ್ಥಿಗೆ ಆದ್ಯತೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಮೊದಲು NATS ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನಂತರ, ಅಧಿಕೃತ SECL ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಅಂತಿಮವಾಗಿ, ಫಾರ್ಮ್ ಅನ್ನು ಸಲ್ಲಿಸಿ ಮತ್ತು ಪ್ರಿಂಟ್​ ಕಾಪಿ ತೆಗೆದಿಟ್ಟಯಕೊಳ್ಳಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version