ಭಾರತ ವಿರೋಧಿ ಶಕ್ತಿಗಳೊಂದಿಗೆ ರಾಹುಲ್ ಗಾಂಧಿ? ಜರ್ಮನಿಗೆ ಹೋಗಿದ್ದು ಯಾಕೆ? ಬಿಜೆಪಿ ಟೀಕೆ – Kannada News | Congress is part of Global Progressive Alliance, which support anti India narrative, alleges BJP

ನವದೆಹಲಿ, ಡಿಸೆಂಬರ್ 27: ರಾಹುಲ್ ಗಾಂಧಿ ಅವರು ಜರ್ಮನಿ ಪ್ರವಾಸಕ್ಕೆ ಹೋಗಿದ್ದಾಗ ಭಾರತ ವಿರೋಧಿ ಶಕ್ತಿಗಳ ಸಂಪರ್ಕದಲ್ಲಿದ್ದರು ಎಂದು ಬಿಜೆಪಿ ಆರೋಪಿಸಿದೆ. ಜರ್ಮನಿಯಲ್ಲಿ ನಡೆದ ಗ್ಲೋಬಲ್ ಪ್ರೋಗ್ರೆಸ್ಸಿವ್ ಅಲಾಯನ್ಸ್ ಸಭೆಯಲ್ಲಿ ರಾಹುಲ್ ಗಾಂಧಿ ಉಪಸ್ಥಿತರಿದ್ದರು. ಇದು ಭಾರತ ವಿರೋಧಿ ಧೋರಣೆಗಳಿರುವ ಸಂಘಟನೆಯಾಗಿದೆ ಎಂದು ಬಿಜೆಪಿ ಟೀಕಿಸಿದೆ. ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಈ ವಿಚಾರ ಪ್ರಸ್ತಾಪಿಸಿ, ಕಾಂಗ್ರೆಸ್ ಪಕ್ಷದ ಬಣ್ಣ ಬಯಲಾಗಿದೆ ಎಂದಿದ್ದಾರೆ.

‘ರಾಹುಲ್ ಗಾಂಧಿ ಅವರ ಸಲಹೆಗಾರ ಸ್ಯಾಮ್ ಪಿತ್ರೋಡಾ ಅವರು ಕಾಂಗ್ರೆಸ್ ಪಕ್ಷದ ನಿಜ ಮುಖವನ್ನು ತೋರಿಸಿದ್ದಾರೆ. ಕಾಂಗ್ರೆಸ್ ಗ್ಲೋಬಲ್ ಪ್ರೋಗ್ರೆಸಿವ್ ಅಲಾಯನ್ಸ್​ನ ಒಂದು ಭಾಗವಾಗಿರುವುದು, ಹಾಗೂ ಅದರ ಸಭೆಯಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಜರ್ಮನಿಗೆ ಹೋಗಿದ್ದು, ಈ ವಿಚಾರಗಳನ್ನು ಸ್ಯಾಮ್ ಪಿತ್ರೋಡಾ ನಿನ್ನೆ ಸಂದರ್ಶನದಲ್ಲಿ ತಿಳಿಸಿದ್ದಾರೆ’ ಎಂದು ಸುಧಾಂಶು ತ್ರಿವೇದಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಆರೆಸ್ಸೆಸ್, ಬಿಜೆಪಿಯ ಸಂಘಟನಾ ಶಕ್ತಿ ಶ್ಲಾಘಿಸಿದ ಮಾಜಿ ಸಿಎಂ ದಿಗ್ವಿಜಯ ಸಿಂಗ್; ಕಾಂಗ್ರೆಸ್ಸನ್ನು ಕಿಚಾಯಿಸಿದ ಬಿಜೆಪಿ

‘ಭಾರತ ವಿರೋಧಿ ನಿಲುವು ಹೊಂದಿರುವ ಹಲವು ಸಂಘಟನೆಗಳ ಜಾಲದ ಭಾಗವಾಗಿರುವ ಸಂಘಟನೆಗೆ ಈ ಅಲಾಯನ್ಸ್ ಸಂಪರ್ಕ ಹೊಂದಿದೆ. ಗ್ಲೋಬಲ್ ಪ್ರೋಗ್ರೆಸ್ಸಿವ್ ಅಲಾಯನ್ಸ್ ಮತ್ತು ಕಾಂಗ್ರೆಸ್ ನಡುವೆ ಸಂಪರ್ಕ ಏನು ಎಂಬುದನ್ನು ಸ್ಯಾಮ್ ಪಿತ್ರೋಡ ತಿಳಿಸಿದ್ದಾರೆ. ಈ ಸಂಘಟನೆಯಲ್ಲಿ ಪಿತ್ರೋಡಾ ಸದಸ್ಯರಾಗಿದ್ದಾರೆ. ರಾಹುಲ್ ಗಾಂಧಿ ಅವರು ಅದರ ಪ್ರೆಸಿಡಿಯಂನಲ್ಲಿ (ಕಾರ್ಯಕಾರಿ ಸಮಿತಿ) ಇದ್ದಾರೆ. ಕಾಂಗ್ರೆಸ್ ಹೇಗೆ ಭಾರತ ವಿರೋಧಿ ಶಕ್ತಿಗಳ ಜೊತೆ ಕೈಜೋಡಿಸಿದೆ?’ ಎಂದು ಬಿಜೆಪಿ ಸಂಸದ ಪ್ರಶ್ನಿಸಿದ್ದಾರೆ.

ಸುಧಾಂಶು ತ್ರಿವೇದಿ ಮಾತನಾಡಿರುವುದು

‘ಕಾಂಗ್ರೆಸ್ ಈಗ ಮುಚ್ಚಿಡುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಪ್ರಗತಿಪರತೆಯ ಹೆಸರಿನಲ್ಲಿ ವಿದೇಶಗಳಿಂದ ಫಂಡಿಂಗ್ ಪಡೆದ ವೈಚಾರಿಕ ಇಕೋಸಿಸ್ಟಂವೊಂದು ಭಾರತೀಯ ರಾಜಕಾರಣವನ್ನು ಇಷ್ಟು ಮುಕ್ತವಾಗಿ ಪ್ರಭಾವಿಸುತ್ತಿದೆಯಲ್ಲ. ಕಾಂಗ್ರೆಸ್ ಬಹಳ ಸಹಜವೆಂಬಂತೆ ಇದೆ. ಈ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಯಾವಾಗ ಉತ್ತರಿಸುತ್ತಾರೆ?’ ಎಂದು ಬಿಜೆಪಿ ನಾಯಕ ಕೇಳಿದ್ದಾರೆ.

ಇತ್ತೀಚೆಗೆ ರಾಹುಲ್ ಗಾಂಧಿ ಅವರು ಜರ್ಮನಿಗೆ ಭೇಟಿ ನೀಡಿದ್ದರು. ಅಲ್ಲಿಯ ಬಿಎಂಡಬ್ಲ್ಯು ಕಾರ್ ಘಟಕದಲ್ಲಿದ್ದ ವಿಡಿಯೋವೊಂದನ್ನು ಹಂಚಿಕೊಂಡು, ಭಾರತದಲ್ಲಿ ಉತ್ಪಾದನಾ ವಲಯ ಕುಂಠಿತಗೊಂಡಿದೆ ಎಂದು ಹೇಳಿದ್ದರು. ಇದೇ ಜರ್ಮನಿಯಲ್ಲೇ ಗ್ಲೋಬಲ್ ಪ್ರೋಗ್ರೆಸ್ಸಿವ್ ಅಲಾಯನ್ಸ್​ನ ಮುಖ್ಯ ಕಚೇರಿ ಇರುವುದು.

ಇದನ್ನೂ ಓದಿ: ಭಾರತದ ತಂತ್ರಜ್ಞಾನ 2025: AI, ಸೆಮಿಕಂಡಕ್ಟರ್, ಸ್ವಾವಲಂಬನೆ & ಜಾಗತಿಕ ನಾಯಕತ್ವ

2013ರಲ್ಲಿ ಜರ್ಮನಿಯ ಲೀಪ್ಜಿಗ್ ಎಂಬಲ್ಲಿ ಮೈತಳೆದ ಇದು ಅಂತಾರಾಷ್ಟ್ರೀಯ ಪ್ರಗತಿಪರ, ಸಾಮಾಜಿಕ, ಪ್ರಜಾತಾಂತ್ರಿಕ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳ ಮೈತ್ರಿಕೂಟವಾಗಿದೆ. ಅಮೆರಿಕದ ವಿಪಕ್ಷವಾದ ಡೆಮಾಕ್ರಾಟ್, ಬ್ರಿಟನ್​ನ ಲೇಬರ್ ಪಾರ್ಟಿ ಮೊದಲಾದ ರಾಜಕೀಯ ಪಕ್ಷಗಳು ಈ ಸಂಘಟನೆಯ ಭಾಗವಾಗಿವೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳೂ ಕೂಡ ಇದರ ಭಾಗ ಎಂದು ಹೇಳಲಾಗುತ್ತದೆ. ಸೋಷಿಯಲ್ಸ್ಟ್ ವಿಚಾರಧಾರೆ ಹೊಂದಿರುವ ಆದರೆ, ಪ್ರಜಾತಂತ್ರ ವ್ಯವಸ್ಥೆಯ ಮೇಲೆ ನಂಬಿಕೆ ಹೊಂದಿರುವ ಸಂಘಟನೆಗಳು ಈ ಅಲಾಯನ್ಸ್​ನ ಭಾಗವಾಗಬಹುದು ಎಂದೆನ್ನಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಆತ ಬಿಟ್ರೂ ಆಕೆ ಬಿಡ್ಲಿಲ್ಲ: ವ್ಯಕ್ತಿಯನ್ನು ಬಲಿ ಪಡೆಯಿತಾ ಮಹಿಳೆಯ ಅಕ್ರಮ ಸಂಬಂಧ? – Kannada News | A Married Man Commits Suicide For illicit affair Woman blackmail In Chikkaballapur

ಚಿಕ್ಕಬಳ್ಳಾಪುರ, (ಡಿಸೆಂಬರ್ 27): ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿವಾಹಿತ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ  (Suicide) ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಗುಡಿಬಂಡೆ ಪಟ್ಟಣದ ಬಾಪೂಜಿ ನಗರದಲ್ಲಿ ನಡೆದಿದೆ. ಬಾಲಾಜಿ ಸಿಂಗ್ (30) ಮೃತ ದುರ್ದೈವಿ. ಬಾಲಾಜಿ ಸಿಂಗ್ ಗೆ ಮದುವೆಯಾಗಿ 8 ವರ್ಷ ಆಗಿದ್ದು, ಆರು ವರ್ಷದ ಮಗಳು ಇದ್ದಾಳೆ. ಆರ್ಥಿಕವಾಗಿ ಚನ್ನಾಗಿದ್ದ ಬಾಲಾಜಿ ಸಿಂಗ್, ತನ್ನದೆ ಕಾರುಗಳನ್ನು ಬಾಡಿಗೆಗೆ ಬಿಟ್ಟು ಅದರಿಂದ ಬರುವ ಹಣದಲ್ಲಿ ಪತ್ನಿ ಮಕ್ಕಳ ಜೊತೆ ಚನ್ನಾಗಿದ್ದ, ಆದ್ರೆ ಓರ್ವ ಮಹಿಳೆಯ ಸಹವಾಸ ಮಾಡಿ ಇದೀಗ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಅನೈತಿಕ ಸಂಬಂಧವೇ ಪ್ರಾಣ ಬಲಿ ಪಡೆಯಿತಾ?

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಪೂಜಿ ನಗರದಲ್ಲಿ ಇಂದು (ಡಿಸೆಂಬರ್ 27) ಬೆಳ್ಳಂಬೆಳಗ್ಗೆ ಬಾಲಾಜಿ ಸಿಂಗ್ ಎನ್ನುವ ವ್ಯಕ್ತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಬಾಲಾಜಿಗೆ ಈಗಾಗಲೇ ಮದುವೆಯಾಗಿ, ಮಗು ಸಹ ಇದೆ. ಹೀಗಿದ್ದೂ ಶಿಡ್ಲಘಟ್ಟ ಮೂಲದ ಮಹಿಳೆ ಜೊತೆ ಅಕ್ರಮ ಸಂಬಂಧ ಇತ್ತು. ಈ ವಿಷಯ ಬಾಲಾಜಿ ಸಿಂಗ್ ಪತ್ನಿಗೆ ಗೊತ್ತಾಗಿ ಗಲಾಟೆಗಳು ಆಗಿವೆ.  ಇದರಿಂದ ಬಾಲಾಜಿ ಮಹಿಳೆಯಿಂದ ದೂರವಾಗಿ ಪತ್ನಿ ಮಕ್ಕಳ ಜತೆ ಅರಾಮ್ ಇರಲು ಮುಂದಾಗಿದ್ದ. ಆದ್ರೆ, ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಮಾತ್ರ ಬಾಲಾಜಿಯನ್ನು ಬಿಡಲು ತಯಾರಿಲ್ಲ.ಬಾಲಾಜಿ ಸಿಂಗ್​ಗನ ಹನಿಟ್ರಾಪ್ ಮಾಡಿ ಬ್ಲಾಕ್ ಮೇಲ್ ಮಾಡ್ತಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ಬಾಲಾಕಿ ಮನೆಯಲ್ಲಿ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: 40 ವರ್ಷದ ಅಂಕಲ್, 19ರ ಯುವತಿಯ ಪ್ರೀತಿ ಪ್ರೇಮ: ಪ್ರೇಮಲೋಕದಲ್ಲಿ ತೇಲಾಡುವಾಗಲೇ ನಡೆಯಿತು ಘನಘೋರ!

ಬಾಲಾಜಿ ಸಾವಿನ ಸುತ್ತ ಅನುಮಾನದ ಹುತ್ತ

ಬಾಲಾಜಿ ಸಿಂಗ್ ಜೊತೆ ಕೆಲವು ವರ್ಷಗಳಿಂದ ಆಕೆ ಪ್ರೀತಿ ಪ್ರೇಮ ಅಂತ ಇಬ್ಬರು ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಈ ವಿಷಯ ಬಾಲಜಿ ಸಿಂಗ್ ಪತ್ನಿ, ತಾಯಿಗೆ ಗೊತ್ತಾಗಿದೆ. ಬಳಿಕ ಬಾಲಾಜಿ ಸಿಂಗ್​​ಗೆ ಬೈದು ಬುದ್ಧಿವಾದ ಹೇಳಿದ್ದಾರೆ. ಪತ್ನಿ ಮಕ್ಕಳು ಬೇಕಾ? ಇಲ್ಲಾ ಇಟ್ಟುಕೊಂಡವಳು ಬೇಕಾ? ಎಂದು ಪತ್ನಿ ಗಲಾಟೆ ಮಾಡಿದ್ದಳು. ಇದರಿಂದ ಬಾಲಾಜಿ ಸಿಂಗ್ ಪತ್ನಿ ಮಕ್ಕಳ ಜೊತೆ ಇರುತ್ತೇನೆಂದು ಹೇಳಿದ್ದ. ಆದ್ರೆ, ಕಡೆ ಪ್ರಿಯತಮೆ ಮಾತ್ರ ಬಾಲಾಜಿಯನ್ನು ಬಿಡಲು ಸಿದ್ಧಳಿಲ್ಲ. ಪದೇ ಪದೇ ಫೋನ್ ಮಾಡಿ ಕಿರುಕುಳ, ಬ್ಲ್ಯಾಕ್​ ಮೇಲ್ ಮಾಡುವುದನ್ನು ಶುರುಮಾಡಿದ್ದಳು. ಇದರಿಂದ ಬೇಸತ್ತು ಬಾಲಾಜಿ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಆದ್ರೆ, ಸ್ವಲ್ಪ ಹೊತ್ತಿನ ಬಳಿಕ ಬಾಲಾಜಿ ಸಿಂಗ್ ಆತ್ಮಹತ್ಯೆಗೆ ಕಾರಣ ಗೊತ್ತಿಲ್ಲ ಎಂದು ಉಲ್ಟಾ ಹೇಳಿಕೆ ನೀಡಿದ್ದಾರೆ. ಇದರಿಂದ ಬಾಲಾಜಿ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಈ ಸಂಬಂಧ ಪೊಲೀಸರು ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಚಾರ್ಜ್​ಶೀಟ್ ಸಲ್ಲಿಕೆ; ಅಲ್ಲು ಅರ್ಜುನ್ ಎಷ್ಟನೇ ಆರೋಪಿ? – Kannada News | Allu Arjun Accused A11 in Pushpa 2 Stampede, Charge Sheet Filed by Hyderabad Police

‘ಪುಷ್ಪ 2’ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಕೋರ್ಟ್​​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಘಟನೆ ನಡೆದು ಒಂದು ವರ್ಷಗಳ ಬಳಿಕ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ (Allu Arjun) ಅವರನ್ನು ಎ11 ಆರೋಪಿ ಆಗಿ ಹೆಸರಿಸಲಾಗಿದೆ. ಈ ಪ್ರಕರಣದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದರೆ, ಅವರ ಮಗ ತೀವ್ರವಾಗಿ ಗಾಯಗೊಂಡಿದ್ದರು.

2024ರ ಡಿಸೆಂಬರ್ 04 ರಂದು ಅಲ್ಲು ಅರ್ಜುನ್ ತಮ್ಮ ಕುಟುಂಬದೊಂದಿಗೆ ಹೈದರಾಬಾದ್​​ನ ಸಂಧ್ಯಾ ಚಿತ್ರಮಂದಿರಕ್ಕೆ ‘ಪುಷ್ಪ 2’ ಸಿನಿಮಾ ವೀಕ್ಷಿಸಲು ಆಗಮಿಸಿದ್ದರು. ಆಗ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಇದರಿಂದ ಉಂಟಾದ ಕಾಲ್ತುಳಿತದಲ್ಲಿ ಸಾಕಷ್ಟು ಹಾನಿ ಆಯಿತು. ಅಲ್ಲು ಅರ್ಜುನ್​ ಬಂದ ಕಾರಣದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರೆಂದು ಪೊಲೀಸರು ವಾದಿಸಿದರು. ಅವರನ್ನು ಬಂಧಿಸಿ ಒಂದು ದಿನ ಜೈಲಿನಲ್ಲೂ ಇಡಲಾಯಿತು ಈ ಘಟನೆ ನಡೆದು ಒಂದು ವರ್ಷ ಕಳೆದಿದೆ. ಈಗ ಪ್ರಕರಣದಲ್ಲಿ ಚಾರ್ಜ್​ಶೀಟ್ ಸಲ್ಲಿಕೆ ಆಗಿದೆ.

ಚಿಕ್ಕಡಪಲ್ಲಿ ಪೊಲೀಸರು ಸಂಪೂರ್ಣವಾಗಿ ತನಿಖೆ ಮಾಡಿ ಚಾರ್ಜ್​​ಶೀಟ್​​ನಲ್ಲಿ ಸಲ್ಲಿಕೆ ಮಾಡಿದ್ದಾರೆ. ಸಂಧ್ಯಾ ಥಿಯೇಟರ್​ ಮ್ಯಾನೇಜ್​​ಮೆಂಟ್​ ಅನ್ನು ಎ1 ಆಗಿ ಪರಿಗಣಿಸಲಾಗಿದೆ. ಘಟನೆಗೆ ಕಾರಣವಾದ ಲೋಪಗಳಿಗೆ ಥಿಯೇಟರ್​​ನವರು ಮುಖ್ಯ ಹೊಣೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಜನಸಂದಣಿಯ ನಿರ್ವಹಣೆ ಸರಿಯಾಗಿಲ್ಲದ ಕಾರಣ ಮತ್ತು ಸರಿಯಾದ ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಪರಿಸ್ಥಿತಿ ನಿಯಂತ್ರಣ ತಪ್ಪಿತು. ನಟನನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು. ಆಯೋಜಕರು ಜನರನ್ನು ನಿಯಂತ್ರಿಸುವಲ್ಲಿ ವಿಫಲರಾದರು ಎಂದು ತನಿಖೆ ಹೇಳಿದೆ. ಪ್ರಕರಣವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಪೊಲೀಸರ ಬಳಿ ಈಗ ಸಂಪೂರ್ಣವಾದ ಸಾಕ್ಷಿಗಳು ಸಿಕ್ಕಿವೆ. ಹೀಗಾಗಿ, ಚಾರ್ಜ್​​ಶೀಟ್ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ: ‘ಪುಷ್ಪ 2’ ಕಾಲ್ತುಳಿತಕ್ಕೆ ವರ್ಷ: ಬಾಲಕನ ಸ್ಥಿತಿ ಈಗ ಹೇಗಿದೆ? ನಿಂತಿದೆಯೇ ಅಲ್ಲು ಅರ್ಜುನ್ ನೆರವು? 

ಸಂಧ್ಯಾ ಚಿತ್ರಮಂದಿರ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಅಲ್ಲು ಅರ್ಜುನ್ ಮತ್ತು ‘ಪುಷ್ಪ 2’ ಚಿತ್ರತಂಡದ ವತಿಯಿಂದ ಬರೋಬ್ಬರಿ ಎರಡು ಕೋಟಿ ರೂಪಾಯಿ ಹಣ ನೀಡಲಾಗಿತ್ತು. ನಟ ಅಲ್ಲು ಅರ್ಜುನ್ ಅವರು ಕುಟುಂಬಕ್ಕೆ 25 ಲಕ್ಷ ರೂಪಾಯಿ ಘೋಷಣೆ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೂರು ನೀಡಿದ ವಿವಾಹಿತ ಮಹಿಳೆಯನ್ನೇ ಪಟಾಯಿಸಿದ ‘ಪೋಲಿ’ಸಪ್ಪ: ನ್ಯಾಯಕ್ಕಾಗಿ ಪತಿ ಹೋರಾಟ – Kannada News | Vijayapura: Police Officer Accused of Illicit Affair; Family Ruin Alleged

ವಿಜಯಪುರ, ಡಿಸೆಂಬರ್ 27: ನಾಗರಿಕ ರಕ್ಷಣೆ ಪೊಲೀಸ್ ಇಲಾಖೆ ಕರ್ತವ್ಯ. ಸಾಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾನೂನು ಪಾಲನೆ ಕೂಡ ಸೇರಿದೆ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವಲ್ಲಿ ಪೊಲೀಸ್ ಇಲಾಖೆ ಪಾತ್ರ ದೊಡ್ಡದು. ಆದರೆ ಓರ್ವ ಪೊಲೀಸ್ ಅಧಿಕಾರಿಯೇ (Police Officer) ಪುಟ್ಟ ಸಂಸಾರದಲ್ಲಿ ಮಾಡಬಾರದ ಕೆಲಸ ಮಾಡಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿವಾಹಿತ ಮಹಿಳೆಯ ಸಂಸಾರ ಹಾಳು ಮಾಡಿರುವ ಆರೋಪ ಕೇಳಿಬಂದಿದೆ.

ನಡೆದದ್ದೇನು?

ಭೀಮಾಶಂಕರ ಹೋಳ್ಕರ ಎಂಬುವವರದು ಪುಟ್ಟ ಸಂಸಾರ. ತಾಯಿ, ಪತ್ನಿ, ಇಬ್ಬರು ಪುಟ್ಟ ಮಕ್ಕಳು. ತಾನಾಯ್ತು, ತನ್ನ ಕೆಲಸವಾಯ್ತು ಎಂದುಕೊಂಡಿದ್ದರು. ಇದೀಗ ಸಂಸಾರದ ಸಮಸ್ಯೆಯಿಂದ ದಿಕ್ಕೆಟ್ಟು ಹೋಗಿದ್ದಾರೆ. ತನ್ನ ಸಂಸಾರ ಸಮಸ್ಯೆಗೆ ಓರ್ವ ಪೊಲೀಸ್ ಅಧಿಕಾರಿಯೇ ಕಾರಣವೆಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ನಪುಂಸಕ, ಗಂಡಸೇ ಅಲ್ಲ: ಹೆಂಡ್ತಿ ಕುಟುಂಬಸ್ಥರ ಆರೋಪ, ಮನನೊಂದು ಪತಿ ಸಾವಿಗೆ ಶರಣು

ಕಳೆದ 10 ವರ್ಷಗಳ ಹಿಂದೆ ಭೀಮಾಶಂಕರ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಅನುರಾಧ ಜೊತೆಗೆ ಮದುವೆಯಾಗಿತ್ತು. ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ. ತಂದೆಯನ್ನು ಕಳೆದುಕೊಂಡಿರುವ ಭೀಮಾಶಂಕರ, ತಾಯಿ, ಪತ್ನಿ ಮತ್ತು ಮಕ್ಕಳ ಜೊತೆಗೆ ವಾಸವಿದ್ದರು. ಮದುವೆಯಾದ ಐದು ವರ್ಷಗಳ ಬಳಿಕ ಗಂಡ-ಹೆಂಡತಿ ಮಧ್ಯೆ ಜಗಳ ಹಿನ್ನೆಲೆ ಅನುರಾಧಾ ಆಲಮೇಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ವೇಳೆ ವಿಚಾರಣೆ ನೆಪದಲ್ಲಿ ಆಲಮೇಲ ಠಾಣೆಯ ಎಎಸ್ಐ ಆಗಿದ್ದ ಮನೋಹರ ಕಂಚಗಾರ ಅನುರಾಧ ಮೊಬೈಲ್ ನಂಬರ್ ಪಡೆದುಕೊಂಡಿದ್ದರು. ಇದೇ ನೆಪದಲ್ಲಿ ಅನುರಾಧ ಹಾಗೂ ಪೊಲೀಸ್ ಅಧಿಕಾರಿ ಮನೋಹರ್ ಮಧ್ಯೆ ಮಾತಿನ ಸಲುಗೆ ಮುಂದೆ ಅನೈತಿಕ ಸಂಬಂಧಕ್ಕೆ ತಿರುಗಿತ್ತಂತೆ. ಬಳಿಕ 2023ರಲ್ಲಿ ಭೀಮಾಶಂಕರ ಪತ್ನಿ ಮಕ್ಕಳ ಸಮೇತ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದರಂತೆ. ಜೊತೆಗೆ ಪಿತ್ರಾರ್ಜಿ ಆಸ್ತಿ ಮಾರಾಟ ಮಾಡಿದ ಹಣವದಲ್ಲಿ ಬೆಂಗಳೂರಿನಲ್ಲಿ ಒಂದು ಮನೆಯನ್ನು ತನ್ನ ಹಾಗೂ ಪತ್ನಿ ಅನುರಾಧ ಹೆಸರಿನಲ್ಲಿ ಖರೀದಿ ಮಾಡಿದ್ದರು.

ಬೆಂಗಳೂರಿನಲ್ಲಿದ್ದರೂ ಇವರ ಸಂಸಾರದಲ್ಲಿ ಸಾಮರಸ್ಯ ಇರಲಿಲ್ಲ. ಸಣ್ಣ ಪುಟ್ಟ ವಿಷಯಕ್ಕೂ ಕುಂಬಳಗೋಡು ಪೊಲೀಸ್ ಠಾಣೆ ಮೆಟ್ಟಿಲು ಹತ್ತುವುದು ಅನುರಾಧಗೆ ಕಾಮನ್ ಆಗಿತ್ತು. ಇದೆಲ್ಲದರ ಹಿಂದೆ ಪೊಲೀಸ್ ಅಧಿಕಾರಿ ಮನೋಹರ್ ಕಂಚಗಾರ ಇದ್ದಾರೆಂಬ ವಿಚಾರ ಭೀಮಾಶಂಕರಗೆ ಗೊತ್ತಾಗಿದೆ. ಪತ್ನಿ ಹಾಗೂ ಪೊಲೀಸ್ ಅಧಿಕಾರಿ ನಡೆಸಿದ ಮಾತುಕತೆ ವಾಟ್ಸ್ ಆ್ಯಪ್ ಚಾಟಿಂಗ್ ಎಲ್ಲವು ಸಿಕ್ಕಿದ್ದು ಪತ್ನಿಯ ಪರಸಂಗ ಹಾಗೂ ಪೊಲೀಸ್ ಅಧಿಕಾರಿಯ ಅನೈತಿಕ ಸಂಬಂಧ ಬಯಲಾಗಿದೆ.

ಮಕ್ಕಳಿಗೆ ಹಿಂಸೆ

ಯಾವಾಗ ಪತ್ನಿ ಅನುರಾಧ ಹಾಗೂ ಪೊಲೀಸ್ ಅಧಿಕಾರಿಯ ಅನೈತಿಕ ಸಂಬಂಧ ಭೀಮಾಶಂಕರಗೆ ಗೊತ್ತಾಯಿತೋ ಆಗ ಇಬ್ಬರು ಮಕ್ಕಳನ್ನು ಆಕೆಯ ಬಳಿಯೇ ಬಿಟ್ಟು ತನ್ನೂರಿಗೆ ಬಂದಿದ್ದ. ಕೆಲ ದಿನಗಳ ಬಳಿಕ ಭೀಮಾಶಂಕರ ಪುತ್ರ ಬೇರೆಯವರ ಮೊಬೈಲ್​ನಿಂದ ಕಾಲ್ ಮಾಡಿ ತನ್ನನ್ನು ಕರೆದುಕೊಂಡು ಹೋಗು. ಅಮ್ಮನ ಬಳಿ ಓರ್ವ ವ್ಯಕ್ತಿ ಬರುತ್ತಾನೆ. ಆತನಿಗೆ ನಾನು ತಂದೆ ಎಂದು ಕರೆಯಬೇಕೆಂದು ಅಮ್ಮ ಹೇಳುತ್ತಾರೆ. ನನ್ನ ತಂದೆ ಭೀಮಾಶಂಕರ ಎಂದು ಹೇಳಿದ್ದಕ್ಕೆ ಕೈಯನ್ನು ಬೂಟಿನಿಂದ ತುಳಿದು ಹಿಂಸೆ ಕೊಟ್ಟಿದ್ದಾರೆ. ಮೈಗೆ ಬರೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

ಅನೈತಿಕ ಸಂಬಂಧ ಒಪ್ಪಿಕೊಂಡ ಅನುರಾಧ 

ಇದರಿಂದ ನೊಂದ ಭೀಮಾಶಂಕರ ಬೆಂಗಳೂರಿಗೆ ತೆರಳಿ ತನ್ನ ಅಪ್ರಾಪ್ತ ಮಗನನ್ನು ಕುಂಬಳಗೋಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾನೆ. ಪೊಲೀಸ್ ಅಧಿಕಾರಿಗಳು ಭೀಮಾಶಂಕರ ಹಾಗೂ ಅನುರಾಧ ಇಬ್ಬರ ಕೌನ್ಸಲಿಂಗ್ ಮಾಡಿದಾಗ ತಾನು ಪೊಲೀಸ್ ಅಧಿಕಾರಿ ಮನೋಹರ್ ಕೆಂಚಗಾರ ಜೊತೆ ಇರುತ್ತೇನೆ. ಅವರ ಹಾಗೂ ನನ್ನ ಮಧ್ಯೆ ಸಂಬಂಧವಿದೆ ಎಂದು ಒಪ್ಪಿಕೊಂಡಿದ್ದಾಳಂತೆ. ಆಕೆಯೇ ಸಂಬಂಧ ಒಪ್ಪಿಕೊಂಡು ಪೊಲೀಸ್ ಅಧಿಕಾರಿ ಮನೋಹರ್ ಜೊತೆಗೆ ಇರುತ್ತೇನೆಂದು ಹೇಳಿದ್ದಕ್ಕೆ ಭೀಮಾಶಂಕರ ತನ್ನ ಮಗನನ್ನು ವಾಪಸ್ ಕರೆದುಕೊಂಡು ಬಂದಿದ್ದಾರೆ. ಈ ಘಟನೆ ಭೀಮಾಶಂಕರ ಹಾಗೂ ಆತನ ತಾಯಿಗೆ ಆಘಾತ ತಂದಿದೆ.

ಇದನ್ನೂ ಓದಿ: ನವ ವಿವಾಹಿತೆ ಆತ್ಮಹತ್ಯೆ ಕೇಸ್: ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ! ಗಾನವಿ ಅಮ್ಮ ನೋವಿನ ಮಾತು

ಸದ್ಯ ಪತ್ನಿ ಅನುರಾಧ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿರುವ ಹಿಂದೆ ಪೊಲೀಸ್ ಅಧಿಕಾರಿ ಮನೋಹರ್ ಕಂಚಗಾರ ಕೈವಾಡವಿದೆ. ಆಲಮೇಲದಲ್ಲಿ ಎಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಗೆ ಪ್ರಮೋಷನ್ ಆಗಿದ್ದು ಪಿಎಸ್ಐ ಆಗಿ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ಧಾರೆ.

ಇನ್ನು ಬಸವನಬಾಗೇವಾಡಿ ಪೊಲೀಸ್ ಠಾಣೆಗೂ ಒಂದೂವರೆ ತಿಂಗಳಿನಿಂದ ಪಿಎಸ್ಐ ಮನೋಹರ್ ಕಂಚಗಾರ ಸೇವೆಗೆ ಹಾಜರಾಗಿಲ್ಲ. ಇಡೀ ಘಟನೆ ಕುರಿತು ಜಿಲ್ಲಾ ಪೊಲೀಸ್ ಇಲಾಖೆ ವಿಚಾರಣೆ ನಡೆಸುತ್ತಿದ್ದಾರೆ. ನ್ಯಾಯ ನೀಡಬೇಕಾಗಿರುವ ಪೊಲೀಸ್ ಅಧಿಕಾರಿಯೇ ಅನ್ಯಾಯ ಮಾಡುತ್ತಿರುವ ಆರೋಪ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆರೆಸ್ಸೆಸ್, ಬಿಜೆಪಿಯ ಸಂಘಟನಾ ಶಕ್ತಿ ಶ್ಲಾಘಿಸಿದ ಮಾಜಿ ಸಿಎಂ ದಿಗ್ವಿಜಯ ಸಿಂಗ್; ಕಾಂಗ್ರೆಸ್ಸನ್ನು ಕಿಚಾಯಿಸಿದ ಬಿಜೆಪಿ – Kannada News | Digvijaya Singh shares Narendra Modi’s old photo, praises organizational power of RSS

ಆರೆಸ್ಸೆಸ್ ಬಗ್ಗೆ ದಿಗ್ವಿಜಯ ಸಿಂಗ್ ಅವರ ಪೋಸ್ಟ್

ನವದೆಹಲಿ, ಡಿಸೆಂಬರ್ 27: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಹಾಲಿ ರಾಜ್ಯಸಭಾ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ದಿಗ್ವಿಜಯ ಸಿಂಗ್ (Digvijaya Singh) ಬಹಳ ಅಪರೂಪಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್ ಅನ್ನು ಹೊಗಳುವ ಕೆಲಸ ಮಾಡಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಹೀಗಳೆಯುವ ದಿಗ್ವಿಜಯ ಸಿಂಗ್, ಈಗ ವರಸೆ ಬದಲಿಸಿದ್ದು ಬಿಜೆಪಿಗೂ ಅಚ್ಚರಿಯ ಶಾಕ್ ಕೊಟ್ಟಿದೆ. ಸ್ವಲ್ಪವೂ ತಡ ಮಾಡದ ಬಿಜೆಪಿ ಈಗ ದಿಗ್ವಿಜಯರ ಅಸ್ತ್ರ ಬಳಸಿ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿಯನ್ನು ಕಿಚಅಯಿಸುವ ಕೆಲಸ ಮಾಡಿದೆ.

ದಿಗ್ವಿಜಯ ಸಿಂಗ್ ಹೇಳಿದ್ದೇನು?

ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಆಗುವುದಕ್ಕೂ ಮುನ್ನ ಸಾರ್ವಜನಿಕ ಸಮಾವೇಶವೊಂದರಲ್ಲಿ ಎಲ್​ಕೆ ಆಡ್ವಾಣಿ ಮತ್ತಿತರ ಹಿರಿಯ ಮುಖಂಡರ ಮುಂದೆ ನೆಲದ ಮೇಲೆ ಕುಳಿತುಕೊಂಡಿರುವ ಒಂದು ಬ್​ಲ್ಯಾಕ್ ಅಂಡ್ ವೈಟ್ ಚಿತ್ರವನ್ನು ದಿಗ್ವಿಜಯ ಸಿಂಗ್ ಅವರು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಅವರು ಆ ಪೋಸ್ಟ್​ನಲ್ಲಿ ಬರೆದಿರುವ ವಿಚಾರ ಈಗ ವೈರಲ್ ಆಗಿದೆ. ಆರೆಸ್ಸೆಸ್ ಮತ್ತು ಬಿಜೆಪಿ ಸಂಘಟನೆಗಳಲ್ಲಿ ತಳಮಟ್ಟದಲ್ಲಿರುವ ಕಾರ್ಯಕರ್ತರು ಹೇಗೆ ಮೇಲೆ ಬೆಳೆಯುತ್ತಾ ಹೋಗಿ ಮುಖ್ಯಮಂತ್ರಿ, ಮತ್ತು ಪ್ರಧಾನಿ ಮಂತ್ರಿಯೂ ಆಗಬಹುದು ಎಂಬುದನ್ನು ಈ ಚಿತ್ರ ತೋರಿಸುತ್ತದೆ. ಇದು ಸಂಘಟನೆಯ ಶಕ್ತಿ ಎಂದು ದಿಗ್ವಿಜಯ ಸಿಂಗ್ ಆ ಫೋಟೋಗೆ ವಿವರಣೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ತಂತ್ರಜ್ಞಾನ 2025: AI, ಸೆಮಿಕಂಡಕ್ಟರ್, ಸ್ವಾವಲಂಬನೆ & ಜಾಗತಿಕ ನಾಯಕತ್ವ

ಕೋರಾ ಪ್ಲಾಟ್​ಫಾರ್ಮ್​ನಲ್ಲಿ ಅವರಿಗೆ ಸಿಕ್ಕ ಆ ಚಿತ್ರವನ್ನು ಅವರು ಹಂಚಿಕೊಂಡು, ತಮ್ಮ ಅನಿಸಿಕೆ ಬರೆಯಲು ಕಾರಣವೂ ಇದೆ. ಕಾಂಗ್ರೆಸ್ ಪಕ್ಷವು ತೀರಾ ಕೇಂದ್ರೀಕೃತವಾಗಿದೆ. ತಳಮಟ್ಟದಲ್ಲಿ ಬಲವರ್ಧನೆ ಆಗಬೇಕು ಎಂದು ದಿಗ್ವಿಜಯ ಸಿಂಗ್ ಪದೇ ಪದೇ ಹೇಳುತ್ತಾ ಬರುತ್ತಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲೂ ಅವರು ಈ ಸಲಹೆ ನೀಡಿದ್ದರು. ತಮ್ಮ ಅನಿಸಿಕೆಗೆ ಪೂರಕವಾಗಿ ಅವರು ನರೇಂದ್ರ ಮೋದಿ ಅವರ ಹಳೆಯ ಫೋಟೋ ಹಂಚಿಕೊಂಡಿದ್ದಿರಬಹುದು.

ಬಿಜೆಪಿಗರ ಮಿಂಚಿನ ಪ್ರತಿಕ್ರಿಯೆ…

ದಿಗ್ವಿಜಯ ಸಿಂಗ್ ಅವರ ಈ ಮೋದಿ ಆಡ್ವಾಣಿ ಪೋಸ್ಟ್ ಅನ್ನು ಇಟ್ಟುಕೊಂಡು ಬಿಜೆಪಿಗರು ಕಾಂಗ್ರೆಸ್ಸನ್ನು ಕಿಚಾಯಿಸುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯವೈಖರಿ ಬಗ್ಗೆ ದಿಗ್ವಿಜಯ್ ಸಿಂಗ್ ಅವರ ಪೋಸ್ಟ್ ಕನ್ನಡಿ ಹಿಡಿದಿದೆ ಎಂದು ಹಲವರು ಹೇಳಿದ್ದಾರೆ.

ಇದನ್ನೂ ಓದಿ: ಭಾರತ 2025: ಹೊಸ ಭದ್ರತಾ ನೀತಿ, ಆಪರೇಷನ್ ಸಿಂದೂರ್ ಶಕ್ತಿ & ಭಯೋತ್ಪಾದನೆಗೆ ಖಡಕ್ ಉತ್ತರ

‘ದಿಗ್ವಿಜಯ್ ಸಿಂಗ್ ಅವರು ಬಹಿರಂಗವಾಗಿ ರಾಹುಲ್ ಗಾಂಧಿ ಎದುರು ಭಿನ್ನಮತ ತೋರಿದ್ದಾರೆ. ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಸಂಘಟನೆ ಕುಸಿದಿದೆ. ಈಗ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ ತೋರುತ್ತಿದೆ’ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ, ತಮ್ಮ ಪೋಸ್ಟ್ ಅನ್ನು ಬಿಜೆಪಿಗರು ಬಳಸಿಕೊಳ್ಳುತ್ತಿರುವಂತೆಯೇ ದಿಗ್ವಿಜಯ ಸಿಂಗ್ ಸ್ಪಷ್ಟೀಕರಣ ಕೂಡ ಕೊಟ್ಟಿದ್ದಾರೆ. ತಾನು ಸಂಘಟನೆಯನ್ನು ಮಾತ್ರವೇ ಹೊಗಳಿರುವುದು. ಆರೆಸ್ಸೆಸ್ ಮತ್ತು ಪ್ರಧಾನಿ ಮೋದಿಯನ್ನು ಯಾವಾಗಲೂ ವಿರೋಧಿಸಿದ್ದೇನೆ. ಆರೆಸ್ಸೆ ಮತ್ತು ಮೋದಿ ಅವರ ನೀತಿಗಳಿಗೆ ನನ್ನದು ವಿರೋಧ ಇದ್ದೇ ಇರುತ್ತದೆ ಎಂದೂ ಹಿರಿಯ ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚಾಮರಾಜನಗರ: ಗಸ್ತು ತೆರಳಿದ್ದಾಗ ಹುಲಿ ದಾಳಿ; ಅರಣ್ಯ ಇಲಾಖೆ ಸಿಬ್ಬಂದಿ ಬಲಿ – Kannada News | Chamarajanagar: Forest Department Personnel Killed in Tiger Attack During Patrol

ಮೃತ ಸಣ್ಣ ಹೈದ, ಹುಲಿ(ಸಂಗ್ರಹ ಚಿತ್ರ)

ಚಾಮರಾಜನಗರ, ಡಿಸೆಂಬರ್​ 27: ಹುಲಿ ದಾಳಿಗೆ (Tiger Attack) ಅರಣ್ಯ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮರಳಹಳ್ಳ ವ್ಯಾಪ್ತಿಯಲ್ಲಿ ನಡೆದಿದೆ. ಸಣ್ಣ ಹೈದ(56) ಮೃತ ಅರಣ್ಯ ಸಿಬ್ಬಂದಿ. ಘಟನಾ ಸ್ಥಳಕ್ಕೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಸಿಸಿಎಫ್ ಪ್ರಭಾಕರನ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದದ್ದೇನು?

ಚಾಮರಾಜನಗರದಲ್ಲಿ ದಿನ ಕಳೆದಂತೆ ಹುಲಿಗಳ ಆರ್ಭಟ ಮಿತಿಮೀರಿದೆ. ಕೇವಲ ಗುಂಡ್ಲುಪೇಟೆ ಭಾಗ ಅಷ್ಟೇ ಅಲ್ಲ ಚಾಮರಾಜನಗರ ಹನೂರು ತಾಲೂಕುಗಳಲ್ಲಿಯೂ ವ್ಯಾಘ್ರನ ಉಪಟಳ ಮಿತಿಮೀರಿದೆ. ಇತ್ತೀಚೆಗೆ ಗುಂಡ್ಲುಪೇಟೆ ತಾಲೂಕಿನ ದೇಪಾಪುರ ಗ್ರಾಮದಲ್ಲಿ ಬೃಹತ್ ವ್ಯಾಘ್ರವೊಂದು ಮೈಸೂರು ಕೇಜ್​ನಲ್ಲಿ ಲಾಕ್ ಆಗಿತ್ತು.

ಇದನ್ನೂ ಓದಿ: ಚಾಮರಾಜನಗರದಲ್ಲಿ 5 ಹುಲಿಗಳು ಪ್ರತ್ಯಕ್ಷ: ನಿಷೇಧಾಜ್ಞೆ ಜಾರಿ, ಹೊರಬರದಂತೆ ಸೂಚನೆ

ಇನ್ನೊಂದೆಡೆ ಚಾಮರಾಜನಗರ ತಾಲೂಕಿನ ನಂಜೆದೇವನಪುರದಲ್ಲಿ 5 ಹುಲಿಗಳು ಜಮೀನಿನಲ್ಲಿ ಓಡಾಟ ನಡೆಸಿ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​ನ ಸಿಬ್ಬಂದಿ ಅದೆಷ್ಟೂ ತಡಕಾಡಿದರು ಒಂದು ವ್ಯಾಘ್ರ ಸಹ ಇನ್ನು ಸೆರೆ ಹಿಡಿಯುವುದಕ್ಕೆ ಆಗುತ್ತಿಲ್ಲ. ಈ ಪ್ರಕರಣ ಮಾಸುವ ಮುನ್ನವೇ ಮತ್ತೆ ಗಡಿ ನಾಡು ಚಾಮರಾಜನಗರದಲ್ಲಿ ಫಾರೆಸ್ಟ್ ವಾಚರ್ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.

56 ವರ್ಷದ ಸಣ್ಣ ಹೈದ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್​ನ ಮರಳಹಳ್ಳದ ಕಳ್ಳಬೇಟೆ ಶಿಬಿರದಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದರು. ದಿನ ನಿತ್ಯ ಈ ಮರಳಹಳ್ಳ ಕ್ಯಾಂಪ್ ಸುತ್ತಮುತ್ತ ಬೀಟ್ ಹಾಕುವುದು, ಯಾರಾದರೂ ಕಾಡುಗಳ್ಳರು ಸಂಚರಿಸಿದ್ದಾರೆ, ಬೇಟೆ ನಡೆಸಿದ್ದಾರಾ ಎಂದು ಪತ್ತೆ ಹಚ್ಚುವುದರ ಜೊತೆ ಪ್ರಾಣಿಗಳ ಓಡಾಟದ ಮೇಲು ಕಣ್ಣಿಟ್ಟಿರ ಬೇಕು.

ದಿನ ನಿತ್ಯ ಬೀಟ್​​ಗೆ ಹೋಗುವ ಹಾಗೆ ತನ್ನ ಕ್ಯಾಂಪ್​ನ 4 ಮಂದಿ ಜೊತೆ ಇಂದು ಮಧ್ಯಾಹ್ನ ಸಣ್ಣಹೈದ ಬೀಟ್ ಗೆ ಹೋಗಿದ್ದರು. ಹುಲ್ಲು ಬೀಜಗಳನ್ನ ಆಯುವ ಕೆಲಸ ಮಾಡ್ತಾಯಿದ್ರು. ಈ ವೇಳೆ ಹಠಾತ್ತನೆ ಹುಲಿವೊಂದು ಸಣ್ಣ ಹೈದನ ಮೇಲೆ ದಾಳಿ ನಡೆಸಿದೆ ತಕ್ಷಣವೇ ಅಲರ್ಟ್ ಅದ ಜೊತೆಗಿದ್ದ ಸಿಬ್ಬಂದಿ ಕೂಗಿಕೊಂಡು ಪರಿಣಾಮ ಹುಲಿ ಪರಾರಿಯಾಗಿದೆ, ಆದರೆ ಸಣ್ಣ ಹೈದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!

ಸದ್ಯ ಸ್ಥಳಕ್ಕೆ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಸಿಎಫ್ ಹಾಗೂ ಮುಖ್ಯಸ್ಥ ಪ್ರಭಾಕರನ್ ಭೇಟಿ ನೀಡಿ  ಪರಿಶೀಲನೆ ಮಾಡಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತೆ. ಒಟ್ಟಿನಲ್ಲಿ ಹುಲಿ ದಾಳಿಗಳು ಗಡಿ ನಾಡು ಚಾಮರಾಜನಗರದಲ್ಲಿ ಮುಂದುವರೆದಿದ್ದು, ಜನ ಅಷ್ಟೇ ಅಲ್ಲ ಅರಣ್ಯ ಸಿಬ್ಬಂದಿ ಕೂಡ ಆತಂಕ ಪಡುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:37 pm, Sat, 27 December 25

Source link

‘ಟಾಕ್ಸಿಕ್​​’ಗೆ ಹೆದರಿ ಸಂಪ್ರದಾಯ ಮುರಿದ ನಟ ಸಲ್ಮಾನ್ ಖಾನ್; ಇದು ಯಶ್ ಪವರ್ – Kannada News | Salman Khan Fears Yash’s Toxic: Breaks Eid Release Tradition

‘ಟಾಕ್ಸಿಕ್’ ಸಿನಿಮಾ (Toxic Movie) ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಕೇವಲ ಸ್ಯಾಂಡಲ್​​ವುಡ್ ಮಾತ್ರವಲ್ಲ, ವಿಶ್ವ ಮಟ್ಟದಲ್ಲಿ ನಿರೀಕ್ಷೆ ಇದೆ. ಕನ್ನಡದ ಜೊತೆಗೆ ಇಂಗ್ಲಿಷನ್​​ನಲ್ಲಿ ಏಕಕಾಲಕ್ಕೆ ಶೂಟ್ ಆದ ಈ ಚಿತ್ರ ತೆಲುಗು, ಹಿಂದಿ ಮೊದಲಾದ ಭಾಷೆಗೆ ಡಬ್ ಆಗಿ ತೆರೆಗೆ ಬರುತ್ತಿದೆ. ಈಗ ‘ಟಾಕ್ಸಿಕ್’ ಚಿತ್ರಕ್ಕೆ ಸಲ್ಮಾನ್ ಖಾನ್ ಹೆದರಿದ್ದಾರೆ. ಅವರು ತಮ್ಮ ಸಂಪ್ರದಾಯವನ್ನು ಮುರಿದುಕೊಂಡಿದ್ದಾರೆ.

ಸಲ್ಮಾನ್ ಖಾನ್ ಅವರು ಯಾವಾಗಲೂ ಈದ್ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡುತ್ತಾರೆ. ಇದನ್ನು ಮೊದಲಿನಿಂದಲೂ ಅವರು ಅನುಸಿರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಅವರ ನಟನೆಯ ‘ಗಲ್ವಾನ್’ ಸಿನಿಮಾ ಮಾರ್ಚ್ 19ರಂದು (ಈದ್ ಹಬ್ಬದ ದಿನ) ತೆರೆಗೆ ಬರಲಿದೆ ಎನ್ನಲಾಗಿತ್ತು. ಆದರೆ, ಇದನ್ನು ಸಲ್ಲು ಏಪ್ರಿಲ್ 17ಕ್ಕೆ ಮುಂದೂಡಿಕೊಂಡಿದ್ದಾರೆ.

ಇದನ್ನೂ ಓದಿ: ರಾಧಿಕಾನ ಮೊದಲ ಬಾರಿಗೆ ಮನೆಗೆ ಕರೆತಂದಾಗ ಯಶ್​ಗೆ ಷರತ್ತು ಹಾಕಿದ್ದ ತಾಯಿ ಪುಷ್ಪಾ

2018ರಲ್ಲಿ ‘ಕೆಜಿಎಫ್’ ರಿಲೀಸ್ ಆಯಿತು. ಈ ವೇಳೆ ಶಾರುಖ್ ಖಾನ್ ಅವರ ‘ಝೀರೋ’ ಸಿನಿಮಾ ತೆರೆಗೆ ಬಂತು. ಈ ಚಿತ್ರ ‘ಕೆಜಿಎಫ್’ ಎದುರು ಹೀನಾಯವಾಗಿ ಸೋತಿದೆ. ‘ಕೆಜಿಎಫ್ 2’ ಚಿತ್ರದ ವೇಳೆ ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಬಿಡುಗಡೆ ಆಯಿತು. ಈ ಚಿತ್ರದ ಎದುರು ಯಶ್ ಚಿತ್ರ ಗೆದ್ದಿದೆ. ಈ ಕಾರಣದಿಂದಲೇ ಯಶ್ ಎದುರು ಬರೋಕೆ ಎಲ್ಲರೂ ಭಯ ಬೀಳುತ್ತಾ ಇದ್ದಾರೆ.

ಈಗ ಯಶ್ ಅವರ ‘ಟಾಕ್ಸಿಕ್’ ಚಿತ್ರ ಮಾರ್ಚ್ 19ರಂದು ತೆರೆಗೆ ಬರುತ್ತಿದೆ. ಇದೇ ಸಮಯದಲ್ಲಿ ‘ಧುರಂಧರ್ 2’ ಕೂಡ ತೆರೆಗೆ ಬರುತ್ತಿದೆ. ‘ಧುರಂಧರ್’ ಸಿನಿಮಾ ಸೂಪರ್ ಹಿಟ್ ಆಗಿರುವುದರಿಂದ ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಈ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್​​​ನಲ್ಲಿ ಕ್ಲ್ಯಾಶ್ ಆಗುವುದರಲ್ಲಿ ಇದೆ. ಈ ಕಾರಣಕ್ಕೆ ಸಲ್ಮಾನ್ ಖಾನ್ ಸಂಪ್ರದಾಯವನ್ನು ಬ್ರೇಕ್ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಇಂದು (ನವೆಂಬರ್ 27) ಜನ್ಮದಿನ. ಈ ವೇಳೆ ‘ಗಲ್ವಾನ್’ ಟೀಸರ್ ರಿಲೀಸ್ ಮಾಡಿ ರಿಲೀಸ್ ದಿನಾಂಕ ರಿವೀಲ್ ಮಾಡಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾತ್ರಿ ಮಲಗುವ ಮುನ್ನ ಒಂದು ಸ್ಪೂನ್‌ ಜೇನುತುಪ್ಪ ಸೇವಿಸುದರಿಂದ ಲಭಿಸುವ ಲಾಭಗಳೇನು? – Kannada News | What are the benefits of consuming honey before going to bed at night?

ಚಳಿಗಾಲದ (winter) ಶೀತ ವಾತಾವರಣದಲ್ಲಿ ತ್ವಚೆ ಸಂಬಂಧಿ ಸಮಸ್ಯೆಗಳ ಜೊತೆಗೆ  ಶೀತ, ಕೆಮ್ಮು, ನೆಗಡಿಯಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಹೀಗಾಗಿ ಈ ಸಮಯದಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನೇಕರು ಆರೋಗ್ಯಕರ ಕಷಾಯ, ಆಹಾರಗಳನ್ನು ಸೇವನೆ ಮಾಡುತ್ತಾರೆ. ಇದು ಮಾತ್ರವಲ್ಲದೆ ಚಳಿಗಾಲದಲ್ಲಿ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಲು ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪವನ್ನು ಸೇವನೆ ಮಾಡಬಹುದು. ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಜೇನುತುಪ್ಪವನ್ನು ಚಳಿಗಾಲದಲ್ಲಿ ಸೇವನೆ ಮಾಡುವುದರಿಂದ ಲಭಿಸುವ ಲಾಭಗಳೇನು ಎಂಬುದನ್ನು ನೋಡೋಣ.

ಮಲಗುವ ಮುನ್ನ ಒಂದು ಸ್ಪೂನ್‌ ಜೇನುತುಪ್ಪ ತಿಂದ್ರೆ ಏನಾಗುತ್ತದೆ?

ಉತ್ತಮ ನಿದ್ರೆ: ಜೇನುತುಪ್ಪವು ಗ್ಲೂಕೋಸ್ ಅಂಶವನ್ನು ಹೊಂದಿರುತ್ತದೆ, ಇದು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲದ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ದೇಹದಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್ ಆಗಿ ಪರಿವರ್ತನೆಗೊಳ್ಳುತ್ತದೆ. ಈ ಎರಡೂ ಅಂಶಗಳು ನಿದ್ರೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಮಲಗುವ ಮುನ್ನ ಒಂದು ಚಮಚ ಜೇನುತುಪ್ಪವನ್ನು ತಿನ್ನುವ ಅಭ್ಯಾಸ  ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಜೇನುತುಪ್ಪವು ನೈಸರ್ಗಿಕ ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದ್ದು, ಅದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅಲ್ಲದೆ ಜೇನುತುಪ್ಪವು ವಿಟಮಿನ್ ಸಿ ಮತ್ತು ಸತುವನ್ನು ಸಹ ಹೊಂದಿರುತ್ತದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶೀತ ಮತ್ತು ಜ್ವರವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಗಂಟಲು ನೋವಿನಿಂದ ಪರಿಹಾರ: ಚಳಿಗಾಲದಲ್ಲಿ ಗಂಟಲು ನೋವು ಮತ್ತು ಕೆಮ್ಮು ಸಾಮಾನ್ಯ ಸಮಸ್ಯೆಯಾಗಿದೆ.  ಹೀಗಿರುವಾಗ ರಾತ್ರಿ ಮಲಗುವ ಮುನ್ನ ಒಂದು ಸ್ಪೂನ್‌ ಜೇನುತುಪ್ಪದ ಸೇವನೆಯಿಂದ  ಗಂಟಲು ನೋವು, ಕೆಮ್ಮು ಕಡಿಮೆಯಾಗುತ್ತದೆ ಮತ್ತು ಉಸಿರಾಟದ ಕಾರ್ಯ ಸುಧಾರಿಸುತ್ತದೆ. ಜೇನುತುಪ್ಪವು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಸಹ ಹೊಂದಿದ್ದು, ಇದು ದೇಹ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಹೊಳೆಯುವ ಚರ್ಮ: ಜೇನುತುಪ್ಪವು ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ಶುಷ್ಕತೆಯನ್ನು ಹೋಗಲಾಡಿಸಲು ಮತ್ತು ಚರ್ಮವನ್ನು  ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಜೇನುತುಪ್ಪವನ್ನು ಸೇವಿಸುವುದರಿಂದ ಕಾಲಜನ್ ಉತ್ಪಾದನೆ ಹೆಚ್ಚಾಗುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಣೆಯಾಗುತ್ತದೆ. ಇದು ವಯಸ್ಸಾದ ಚಿಹ್ನೆಗಳು ಕಾಣಿಸುವುದನ್ನು ತಡೆಯುತ್ತದೆ.  ಇದು ಚರ್ಮದ ಟೋನ್ ಸುಧಾರಿಸುತ್ತದೆ ಮತ್ತು ವಯಸ್ಸಾದ ಚಿಹ್ನೆಗಳನ್ನು ನಿಧಾನಗೊಳಿಸುತ್ತದೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ಜೇನುತುಪ್ಪವು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಫ್ಲೇವನಾಯ್ಡ್‌ಗಳು ಮತ್ತು ಫೀನಾಲಿಕ್ ಸಂಯುಕ್ತಗಳನ್ನು ಹೊಂದಿರುತ್ತದೆ. ಈ ಸಂಯುಕ್ತಗಳು ಆರೋಗ್ಯಕರ ರಕ್ತನಾಳಗಳನ್ನು ಕಾಪಾಡಿಕೊಳ್ಳಲು, ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಹೃದಯ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು, ಆದ್ದರಿಂದ ಜೇನುತುಪ್ಪದ ಸೇವನೆ ರಕ್ತದೊತ್ತಡವನ್ನು ನಿಯಂತ್ರಿಸಲು, ಹೃದಯದ ಆರೋಗ್ಯವನ್ನು ಉತ್ತೇಜಿಸಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಅಡುಗೆ ಮನೆಯಲ್ಲಿ ಲಭ್ಯವಿರುವ ವಸ್ತುಗಳೇ ಸಾಕು

ಯಾರು ಜೇನುತುಪ್ಪ ಸೇವಿಸಬಾರದು?

ಜೇನುತುಪ್ಪವು ಆರೋಗ್ಯಕ್ಕೆ ಪ್ರಯೋಜನಕಾರಿ, ಆದರೆ ಕೆಲವರು ಅದನ್ನು ಸೇವಿಸುವುದನ್ನು ತಪ್ಪಿಸಬೇಕು. ಒಂದು ವರ್ಷದೊಳಗಿನ ಮಕ್ಕಳಿಗೆ ಜೇನುತುಪ್ಪವನ್ನು ಎಂದಿಗೂ ನೀಡಬಾರದು, ಮಧುಮೇಹಿಗಳು ಜೇನುತುಪ್ಪವನ್ನು ಎಚ್ಚರಿಕೆಯಿಂದ ಸೇವಿಸಬೇಕು, ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ. ಇದಲ್ಲದೆ, ಅಲರ್ಜಿ ಇರುವವರು ಜೇನುತುಪ್ಪ ಸೇವಿಸಬಾರದು. ವೈದ್ಯರು ಅಥವಾ ಪೌಷ್ಟಿಕತಜ್ಞರ ಸಲಹೆ ಮೇರೆಗೆ  ಜೇನುತುಪ್ಪ ಸೇವಿಸುವುದು ಸೂಕ್ತ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

VHT 2025-26: ತನ್ನ ವಿಕೆಟ್ ಉರುಳಿಸಿದ ಸ್ಪಿನ್ನರ್​ಗೆ ಸ್ಮರಣೀಯ ಉಡುಗೊರೆ ನೀಡಿದ ಕೊಹ್ಲಿ – Kannada News | Virat Kohli’s Gesture: Autographs Wicket Ball for Spinner Vishal Jaiswal

ಡಿಸೆಂಬರ್ 26 ರಂದು ನಡೆದ ವಿಜಯ್ ಹಜಾರೆ ಪಂದ್ಯಾವಳಿಯಲ್ಲಿ (Vijay Hazare Trophy) ದೆಹಲಿ ಮತ್ತು ಗುಜರಾತ್ (Delhi vs Gujarat) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ದೆಹಲಿ ತಂಡದ ಪರ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) 77 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ವಾಸ್ತವವಾಗಿ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ವಿರಾಟ್ ಭರ್ಜರಿ ಶತಕ ಸಿಡಿಸಿದ್ದರು. ಹೀಗಾಗಿ ಎರಡನೇ ಪಂದ್ಯದಲ್ಲೂ ಕೊಹ್ಲಿಯಿಂದ ಅದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಅದಕ್ಕೆ ಪೂರಕವಾಗಿ ಕೊಹ್ಲಿ ಕೂಡ ಅರ್ಧಶತಕ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿದ್ದರು. ಆದರೆ ಗುಜರಾತ್ ತಂಡದ ಯುವ ಸ್ಪಿನ್ನರ್ ವಿಶಾಲ್ ಜೈಸ್ವಾಲ್ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಕೊಹ್ಲಿ ಸ್ಟಂಪ್ ಔಟಾದರು. ಕೊಹ್ಲಿ ವಿಕೆಟ್ ಪಡೆದ ಸಂತಸದಲ್ಲಿ ವಿಶಾಲ್ ಕೂಡ ಸಂಭ್ರಮಿಸಿದ್ದರು. ಇದೀಗ ಪಂದ್ಯ ಮುಗಿದ ಬಳಿಕ ವಿಶಾಲ್​ರನ್ನು ಭೇಟಿಯಾಗಿರುವ ಕೊಹ್ಲಿ, ಅವರಿಗೆ ಸ್ಮರಣೀಯ ಉಡುಗೊರೆಯೊಂದನ್ನು ನೀಡಿದ್ದಾರೆ.

ವಿಶಾಲ್ ಜೈಸ್ವಾಲ್​ಗೆ ವಿಶೇಷ ಉಡುಗೊರೆ

ಈ ಟೂರ್ನಿಯಲ್ಲಿ ದೆಹಲಿ ಪರ ಎರಡನೇ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಸತತ ಎರಡನೇ ಶತಕ ಗಳಿಸುವ ಗುರಿಯೊಂದಿಗೆ ಅವರು 61 ಎಸೆತಗಳಲ್ಲಿ 77 ರನ್ ಕೂಡ ಬಾರಿಸಿದ್ದರು. ಆದರೆ ಜೈಸ್ವಾಲ್ ಅವರ ಅದ್ಭುತ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಕ್ರೀಸ್​ನಿಂದ ಹೊರಬಂದ ಕೊಹ್ಲಿ ಸ್ಟಂಪ್ ಔಟ್ ಆಗಿ ಹೊರನಡೆದರು.

ಕೊಹ್ಲಿ ವಿಕೆಟ್ ಪಡೆದ ಜೈಸ್ವಾಲ್ ಕೂಡ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ್ದರು.ಇದೀಗ ಪಂದ್ಯ ಮುಗಿದ ನಂತರ ಕೊಹ್ಲಿಯನ್ನು ಭೇಟಿಯಾಗಿರುವ ವಿಶಾಲ್ ಜೈಸ್ವಾಲ್ ಅವರೊಂದಿಗೆ ಫೋಟೋ ತೆಗೆಸಿಕೊಂಡಿರುವುದು ಮಾತ್ರವಲ್ಲದೆ, ಕೊಹ್ಲಿಯ ವಿಕೆಟ್ ಪಡೆದ ಚೆಂಡಿನ ಮೇಲೆ ಕೊಹ್ಲಿಯ ಆಟೋಗ್ರಾಫ್ ಪಡೆದಿದ್ದಾರೆ. ಇದೀಗ ಅದರ ಫೋಟೋವನ್ನು ಜೈಸ್ವಾಲ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹರಿಬಿಟ್ಟಿದ್ದು ಸಾಕಷ್ಟು ವೈರಲ್ ಆಗುತ್ತಿದೆ.

ಫೋಟೋ ಜೊತೆಗೆ ಕೆಲವು ಸಾಲುಗಳನ್ನು ಬರೆದುಕೊಂಡಿರುವ ವಿಶಾಲ್, ‘ಕೊಹ್ಲಿ ಅವರು ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸುವುದನ್ನು ನೋಡುವುದರಿಂದ ಹಿಡಿದು ಅವರಂತೆಯೇ ಅದೇ ಮೈದಾನದಲ್ಲಿ ಆಡುವ ಮತ್ತು ಅವರ ವಿಕೆಟ್ ಪಡೆಯುವವರೆಗೆ , ಇದು ನಾನು ಎಂದಿಗೂ ಊಹಿಸದ ಕ್ಷಣವಾಗಿದೆ. ವಿರಾಟ್ ಭಾಯ್ ಅವರ ವಿಕೆಟ್ ಪಡೆಯುವುದು ನಾನು ಶಾಶ್ವತವಾಗಿ ಪಾಲಿಸುವ ಅನುಭವವಾಗಿದೆ. ಈ ಸಂದರ್ಭದಲ್ಲಿ, ಈ ಪ್ರಯಾಣ ಮತ್ತು ಈ ಸುಂದರ ಆಟ ನನಗೆ ನೀಡಿದ ಎಲ್ಲದಕ್ಕೂ ನಾನು ತುಂಬಾ ಕೃತಜ್ಞನಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

VHT 2025-26: 77 ರನ್ ಬಾರಿಸಿದ ಕೊಹ್ಲಿಗೆ 10000 ರೂ. ಬಹುಮಾನ ನೀಡಿದ ಬಿಸಿಸಿಐ

4 ವಿಕೆಟ್ ಪಡೆದ ವಿಶಾಲ್ ಜೈಸ್ವಾಲ್

ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ವಿಶಾಲ್ ಜೈಸ್ವಾಲ್, ಹತ್ತು ಓವರ್‌ಗಳಲ್ಲಿ 42 ರನ್‌ ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಕೊಹ್ಲಿ ಜೊತೆಗೆ, ಅವರು ರಿಷಭ್ ಪಂತ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು ಹಾಗೆಯೇ ಅರ್ಪಿತ್ ರಾಣಾ ಮತ್ತು ನಿತೀಶ್ ರಾಣಾ ಅವರನ್ನು ಔಟ್ ಮಾಡಿದರು. ಜೈಸ್ವಾಲ್ ಅವರ ಈ ದಾಳಿಯಿಂದಾಗಿ ದೆಹಲಿ 50 ಓವರ್‌ಗಳಲ್ಲಿ 254 ರನ್ ಕಲೆಹಾಕಿತು. ಆದಾಗ್ಯೂ, ವಿಶಾಲ್ ಜೈಸ್ವಾಲ್ ತಂಡವು ಪಂದ್ಯವನ್ನು ಗೆಲ್ಲುವಲ್ಲಿ ವಿಫಲವಾಯಿತು. ಅಂತಿಮವಾಗಿ ಗುಜರಾತ್ ತಂಡವು 47.4 ಓವರ್‌ಗಳಲ್ಲಿ 247 ರನ್‌ಗಳಿಗೆ ಆಲೌಟ್ ಆಗಿ ಪಂದ್ಯವನ್ನು ಏಳು ರನ್‌ಗಳಿಂದ ಸೋತಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗರೂಗಳನ್ನು ಅವರ ನೆಲದಲ್ಲಿ ಮಣಿಸಿ ಭಾರತದ ದಾಖಲೆ ಸರಿಗಟ್ಟಿದ ಇಂಗ್ಲೆಂಡ್‌

Source link

Exit mobile version