ಯುಗಾದಿಯಂದೇ ಕಾಲಭೈರವೇಶ್ವರ ದೇಗುಲ ಮುಂದೆ ಮಾಟ ಮಂತ್ರ: ಬೆಚ್ಚಿಬಿದ್ದ ಜನರು
ಚಿಕ್ಕಮಗಳೂರು, ಮಾರ್ಚ್ 19: ಭದ್ರಾ ನದಿಯ ದಡದಲ್ಲಿ ನಿರಂತರ ವಾಮಾಚಾರಗಳು (black magic) ನಡೆಯುತ್ತಲೇ ಇರುತ್ತದೆ. ಆದರೆ ಈಗ ನದಿಯ ಸಮೀಪವಿರುವ ದೇವಸ್ಥಾನದ (temple) ಮುಂಭಾಗದಲ್ಲಿಯೇ ವಾಮಾಚಾರ ಮಾಡಲಾಗಿದೆ. ಅದರಲ್ಲೂ ಯುಗಾದಿಯ ಹಬ್ಬದ ದಿನವೇ ಕಿಡಿಗೇಡಿಗಳ ಕೃತ್ಯ ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ಜಿಲ್ಲೆಯ ಕಳಸ ತಾಲೂಕಿನ ಕಂಚಿನಕೆರೆ ಗ್ರಾಮದಲ್ಲಿರವ ಕಾಲಭೈರವೇಶ್ವರ ದೇಗುಲದ ಎದುರು ಘಟನೆ ನಡೆದಿದೆ. ಯುಗಾದಿ ಹಬ್ಬದ ದಿನವೇ ದೇವಾಲಯದ ಮುಂದೆ ವಾಮಾಚಾರ ಕಾಫಿನಾಡು ಚಿಕ್ಕಮಗಳೂರಿನ ದಕ್ಷಿಣ ಕಾಶಿ ಎಂದು ಕರೆಸಿಕೊಳ್ಳುವ ಕಳಸೇಶ್ವರ ದೇವರಿಗೆ ಹಲವು…