ರೋಹಿತ್, ಕೊಹ್ಲಿಯ ಶತಕಗಳ ಅಬ್ಬರ; ಬಿಸಿಸಿಐ ವಿರುದ್ಧ ಸಿಡಿದೆದ್ದ ಅಭಿಮಾನಿಗಳು – Kannada News | BCCI Blasted: No Live Stream for Rohit Kohli Vijay Hazare Centuries; Fan Anger

ಭಾರತೀಯ ದೇಶೀಯ ಕ್ರಿಕೆಟ್‌ನ ಅತಿದೊಡ್ಡ ಏಕದಿನ ಪಂದ್ಯಾವಳಿ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಡಿಸೆಂಬರ್ 24 ರಿಂದ ಪ್ರಾರಂಭವಾಗಿದೆ. ಈ ಆವೃತ್ತಿಯ ದೊಡ್ಡ ಹೈಲೈಟ್ ಎಂದರೆ ಟೀಂ ಇಂಡಿಯಾದ ಇಬ್ಬರು ದಂತಕಥೆಯ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಬಹಳ ಸಮಯದ ನಂತರ ಈ ಟೂರ್ನಿಯಲ್ಲಿ ಆಡಿದರು. ಈ ಇಬ್ಬರೂ ಸ್ಟಾರ್ ಆಟಗಾರರು ಮೊದಲ ಸುತ್ತಿನಲ್ಲಿ ತಮ್ಮ ರಾಜ್ಯ ತಂಡಗಳಾದ ಮುಂಬೈ ಮತ್ತು ದೆಹಲಿ ಪರ ಅದ್ಭುತ ಪ್ರದರ್ಶನ ನೀಡಿದರು. ಮುಂಬೈ ಪರ ಕಣಕ್ಕಿಳಿದಿದ್ದ ರೋಹಿತ್ ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ 155 ರನ್‌ಗಳ ಇನ್ನಿಂಗ್ಸ್ ಆಡಿದರೆ, ಮತ್ತೊಂದೆಡೆ ಡೆಲ್ಲಿ ಪರ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಆಂಧ್ರಪ್ರದೇಶ ವಿರುದ್ಧ ಶತಕ ಸಿಡಿಸಿ ಮಿಂಚಿದರು. ಇವರಿಬ್ಬರ ಈ ಇನ್ನಿಂಗ್ಸ್​ನಿಂದಾಗಿ ಇಬ್ಬರ ತಂಡಗಳು ಸುಲಭ ಗೆಲುವು ದಾಖಲಿಸಿದವು.

ಬಿಸಿಸಿಐ ಮೇಲೆ ಅಭಿಮಾನಿಗಳ ಕೋಪ

ದೇಶಿ ಕ್ರಿಕೆಟ್‌ನ ಇವರಿಬ್ಬರ ಆರ್ಭಟ ಅಭಿಮಾನಿಗಳಿಗೆ ಸಂತಸ ತಂದಿತ್ತಾದರೂ, ಬಿಸಿಸಿಐ ಮಾಡಿದ ಕಳಪೆ ಸಿದ್ಧತೆಗಳು ಅಭಿಮಾನಿಗಳನ್ನು ಕೆರಳಿಸಿದೆ. ವಾಸ್ತವವಾಗಿ ರೋಹಿತ್ ಮತ್ತು ವಿರಾಟ್ ಆಡಿದ ಪಂದ್ಯಗಳ ನೇರ ಪ್ರಸಾರ ಮಾಡಲಾಗಲಿಲ್ಲ ಹಾಗೆಯೇ ಆನ್‌ಲೈನ್ ಸ್ಟ್ರೀಮಿಂಗ್ ಕೂಡ ಇರಲಿಲ್ಲ. ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಆಯ್ದ ಪಂದ್ಯಗಳನ್ನು ಮಾತ್ರ ಪ್ರಸಾರ ಮಾಡಲಾಯಿತು, ಆದರೆ ಸ್ಟಾರ್ ಆಟಗಾರರನ್ನು ಒಳಗೊಂಡ ಪಂದ್ಯಗಳನ್ನು ನಿರ್ಲಕ್ಷಿಸಲಾಯಿತು. ಇದಲ್ಲದೆ, ವಿರಾಟ್ ಕೊಹ್ಲಿ ಆಡಿದ ಪಂದ್ಯಕ್ಕೆ ಅಭಿಮಾನಿಗಳಿಗೆ ಎಂಟ್ರಿ ಇರಲಿಲ್ಲ. ಇತ್ತ ಜೈಪುರದಲ್ಲಿ ರೋಹಿತ್ ಆಡಿದ ಪಂದ್ಯಕ್ಕೆ ಅಭಿಮಾನಿಗಳಿಗೆ ಪ್ರವೇಶವಿತ್ತಾದರೂ, ಗ್ಯಾಲರಿಯಲ್ಲಿ ದೂರದಲ್ಲಿ ಕುಳಿತಿದ್ದ ಅಭಿಮಾನಿಗಳು ಸ್ಕೋರ್ ನವೀಕರಣಗಳನ್ನು ಮಾತ್ರ ಅವಲಂಬಿಸಿದ್ದರು.

ಬಿಸಿಸಿಐನ ಈ ಕಳಪೆ ವ್ಯವಸ್ಥೆಗೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದ್ದರೂ, ಬಿಸಿಸಿಐನ ಇಂತಹ ನಿರ್ಲಕ್ಷ್ಯಕ್ಕಾಗಿ ಅನೇಕರು ಟೀಕಿಸಿದ್ದಾರೆ. ಸ್ಟಾರ್ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸುವಾಗ, ಅವರ ಪಂದ್ಯಗಳನ್ನು ಪ್ರಸಾರ ಮಾಡುವುದು ಮಂಡಳಿಯ ಜವಾಬ್ದಾರಿಯಾಗಿದೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ. ಇದು ಕ್ರಿಕೆಟ್ ಅನ್ನು ಉತ್ತೇಜಿಸಲು ಮತ್ತು ಯುವ ಆಟಗಾರರಿಗೆ ಸ್ಫೂರ್ತಿ ನೀಡಲು ಒಂದು ಅವಕಾಶವಾಗಿತ್ತು. ಆದರೆ ಬಿಸಿಸಿಐನ ನಿರ್ಲಕ್ಷ ಅಭಿಮಾನಿಗಳು ಕೆರಳುವಂತೆ ಮಾಡಿದೆ.

Vijay Hazare Trophy: 412 ರನ್ ಬೆನ್ನಟ್ಟಿ ಚಾಂಪಿಯನ್ ತಂಡಕ್ಕೆ ಮಣ್ಣು ಮುಕ್ಕಿಸಿದ ಕರ್ನಾಟಕ

ವರ್ಷಗಳ ಬಳಿಕ ದೇಶಿ ಕ್ರಿಕೆಟ್​ನಲ್ಲಿ ರೋಹಿತ್, ಕೊಹ್ಲಿ

ವಾಸ್ತವವಾಗಿ ಬಿಸಿಸಿಐ,ಕೇಂದ್ರೀಯ ಒಪ್ಪಂದಕ್ಕೆ ಒಳಪಡುವ ಪ್ರತಿಯೊಬ್ಬ ಆಟಗಾರರು ದೇಶೀಯ ಪಂದ್ಯಗಳಲ್ಲಿ ಆಡುವುದನ್ನು ಕಡ್ಡಾಯಗೊಳಿಸಿದೆ. ಇದರ ಪರಿಣಾಮವಾಗಿ ರೋಹಿತ್ ಮತ್ತು ವಿರಾಟ್ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಇಬ್ಬರೂ ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಕದಿನ ಸ್ವರೂಪದಲ್ಲಿ ಮಾತ್ರ ಆಡುತ್ತಿದ್ದಾರೆ. ಆದ್ದರಿಂದ ಈ ಪಂದ್ಯಾವಳಿ ಅವರಿಗೆ ಪಂದ್ಯ ಅಭ್ಯಾಸವನ್ನು ಪಡೆಯಲು ಅತ್ಯುತ್ತಮ ಅವಕಾಶವಾಗಿತ್ತು. ಜೈಪುರದಲ್ಲಿ ಮುಂಬೈ ಪರ ಆಡಿದ ರೋಹಿತ್ ಆಕ್ರಮಣಕಾರಿ ಶೈಲಿಯನ್ನು ಪ್ರದರ್ಶಿಸಿದರೆ, ಬೆಂಗಳೂರಿನಲ್ಲಿ ದೆಹಲಿ ಪರ ಆಡಿದ್ದ ವಿರಾಟ್ ಸಂಯಮ ಮತ್ತು ಆಕ್ರಮಣಶೀಲತೆಯ ಆಟ ಪ್ರದರ್ಶಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವಾರ ಅಖಾಡಕ್ಕೆ ‘ಮಾರ್ಕ್’, ‘45’: ಇನ್ನೂ ಕಡಿಮೆ ಆಗುತ್ತಾ ‘ದಿ ಡೆವಿಲ್’ ಕಲೆಕ್ಷನ್? – Kannada News | Mark 45 Vrusshabha and other movie releasing on 25 December 2025

2025ರ ವರ್ಷ ಮುಗಿಯುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳಾದ ‘45’ ಮತ್ತು ‘ಮಾರ್ಕ್’ ಸಿನಿಮಾ (Mark Movie) ಡಿಸೆಂಬರ್ 25ರಂದು ಬಿಡುಗಡೆ ಆಗುತ್ತಿದೆ. ಈಗಾಗಲೇ ‘ದಿ ಡೆವಿಲ್’ (The Devil) ಸಿನಿಮಾ ಡಿಸೆಂಬರ್ 11ರಂದು ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಸ್ಟಾರ್ ನಟರ ಸಿನಿಮಾಗಳೆಲ್ಲ ಒಂದೇ ತಿಂಗಳಲ್ಲಿ ರಿಲೀಸ್ ಆಗಿದ್ದರಿಂದ ಸಹಜವಾಗಿಯೇ ಬಾಕ್ಸ್ ಆಫೀಸ್​ನಲ್ಲಿ ಕ್ಲ್ಯಾಶ್ ಉಂಟಾಗಿದೆ. ಕಿಚ್ಚ ಸುದೀಪ್, ಉಪೇಂದ್ರ, ರಾಜ್ ಬಿ. ಶೆಟ್ಟಿ, ಶಿವರಾಜ್​​ಕುಮಾರ್ ಅಭಿಮಾನಿಗಳಿಗೆ ‘45’ (45 Kannada Movie) ಮತ್ತು ‘ಮಾರ್ಕ್’ ಸಿನಿಮಾಗಳಿಂದ ಮನರಂಜನೆ ಸಿಗಲಿದೆ. ಈ ಎರಡು ಸಿನಿಮಾಗಳ ನಡುವೆ ಪೈಪೋಟಿ ಇದೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್​ ಧರಿಸಿ ‘45’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್​​ಕುಮಾರ್, ರಾಜ್ ಬಿ. ಶೆಟ್ಟಿ ಮತ್ತು ಉಪೇಂದ್ರ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಒಂದು ಫ್ಯಾಂಟಸಿ ಕಥೆಯನ್ನು ಈ ಸಿನಿಮಾದಲ್ಲಿ ಅರ್ಜುನ್ ಜನ್ಯ ಅವರು ಹೇಳಿದ್ದಾರೆ. ಈಗಾಗಲೇ ಪ್ರೀಮಿಯರ್ ಶೋಗಳಿಂದ ಈ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ರಮೇಶ್ ರೆಡ್ಡಿ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

‘ಮಾರ್ಕ್’ ಸಿನಿಮಾಗೆ ಕಾಲಿವುಡ್ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದಾರೆ. ಈ ಮೊದಲು ‘ಮ್ಯಾಕ್ಸ್’ ಸಿನಿಮಾದಿಂದ ಯಶಸ್ಸು ಕಂಡ ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್ ‘ಮಾರ್ಕ್’ ಸಿನಿಮಾದಲ್ಲೂ ಮುಂದುವರಿದಿದೆ. ಡಿಸೆಂಬರ್ 25ರಂದು ಮುಂಜಾನೆ 6.30ಕ್ಕೆ ಮೊದಲ ಶೋ ಆರಂಭ ಆಗುತ್ತಿದೆ. ಸಿನಿಮಾ ಹೇಗಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಡಿಸೆಂಬರ್ 25ರಂದು ಕ್ರಿಸ್ಮಸ್ ರಜೆ ಇದೆ. ಅದರಿಂದ ಹೆಚ್ಚಿನ ಸಂಖೆಯ ಪ್ರೇಕ್ಷಕರು ಚಿತ್ರಮಂದಿರಗಳತ್ತ ಹೆಜ್ಜೆ ಹಾಕುವ ನಿರೀಕ್ಷೆ ಇದೆ. ಆ ಬಳಿಕ ವೀಕೆಂಡ್ ಬರಲಿದೆ. ಇದು ಕೂಡ ಈ ಸಿನಿಮಾಗಳಿಗೆ ಪ್ಲಸ್ ಆಗಲಿದೆ. ‘ಮಾರ್ಕ್’ ಮತ್ತು ‘45’ ಸಿನಿಮಾಗಳು ಬೇರೆ ಬೇರೆ ಶೈಲಿಗೆ ಸೇರಿದ ಚಿತ್ರಗಳಾದ್ದರಿಂದ ಪ್ರೇಕ್ಷಕರು ಎರಡೂ ಸಿನಿಮಾ ನೋಡಿ ಎಂಜಾಯ್ ಮಾಡಲಿದ್ದಾರೆ.

ಇದನ್ನೂ ಓದಿ: ಸುದೀಪ್ ‘ಮಾರ್ಕ್’ ಸಿನಿಮಾ ತುಳಿಯಲು ‘ಟಿವಿ9 ಕನ್ನಡ’ ಹೆಸರು ದುರ್ಬಳಕೆ ಮಾಡಿಕೊಂಡ ಕಿಡಿಗೇಡಿಗಳು

ದರ್ಶನ್ ಅವರ ‘ದಿ ಡೆವಿಲ್’ ಸಿನಿಮಾ ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್ ಮಾಡಿಲ್ಲ. ಮೊದಲ ದಿನ 10 ಕೋಟಿ ರೂಪಾಯಿಯಿಂದ ಆರಂಭ ಆದ ಈ ಸಿನಿಮಾದ ಕಲೆಕ್ಷನ್ ಈಗಾಗಲೇ ಲಕ್ಷಗಳಿಗೆ ಕುಸಿದಿದೆ. ‘45’ ಮತ್ತು ‘ಮಾರ್ಕ್’ ಸಿನಿಮಾದ ಪೈಪೋಟಿಯಿಂದಾಗಿ ‘ದಿ ಡೆವಿಲ್’ ಕಲೆಕ್ಷನ್ ಇನ್ನಷ್ಟು ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಅತ್ತ, ‘ಧುರಂಧರ್’ ಸಿನಿಮಾ ಕೂಡ ಕಠಿಣ ಪೈಪೋಟಿ ನೀಡುತ್ತಿದೆ.

ಮಲಯಾಳಂ ಚಿತ್ರರಂಗದಿಂದ ಮೋಹನ್​ಲಾಲ್ ನಟನೆ ‘ವೃಷಭ’ ಸಿನಿಮಾ ಇದೇ ದಿನ ಬಿಡುಗಡೆ ಆಗುತ್ತಿದೆ. ರಾಗಿಣಿ ದ್ವಿವೇದಿ, ಸಮರ್ಜಿತ್ ಲಂಕೇಶ್ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ ಸಿನಿಮಾ ಕೂಡ ಡಿ.25ಕ್ಕೆ ತೆರೆಕಾಣುತ್ತಿದೆ. ಈ ಎಲ್ಲ ಸಿನಿಮಾಗಳ ನಡುವೆ ಪೈಪೋಟಿ ಏರ್ಪಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂಗನ ಕಾಯಿಲೆ ಭೀತಿ: ಶಿವಮೊಗ್ಗದ ಬಳಿಕ, ಶಿರಸಿಯಲ್ಲೂ ಲ್ಯಾಬ್​​ ಆರಂಭಕ್ಕೆ ನಿರ್ಧಾರ – Kannada News | New KFD Lab in Sirsi, Karnataka Boosts Fight Against Monkey Fever

ಬೆಂಗಳೂರು, ಡಿಸೆಂಬರ್​​ 24: ಮಂಗನ ಕಾಯಿಲೆ ಭೀತಿ ಹಿನ್ನೆಲೆ ರಾಜ್ಯದಲ್ಲಿ ಶೀಘ್ರದಲ್ಲೇ ಮತ್ತೊಂದು KFD ಪರೀಕ್ಷಾ ಲ್ಯಾಬ್ ತೆರೆಯಲು ನಿರ್ಧರಿಸಲಾಗಿದೆ. ಶಿವಮೊಗ್ಗದಲ್ಲಿ ಒಂದು ಲ್ಯಾಬ್ ಕಾರ್ಯಾಚರಣೆ ಚಾಲ್ತಿಯಲ್ಲಿರುವ ನಡುವೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮತ್ತೊಂದು ಪರೀಕ್ಷಾ ಕೇಂದ್ರ ತೆರೆಯಲು ತಯಾರಿ ನಡೆದಿದೆ. ಮಂಗನ ಕಾಯಿಲೆಯನ್ನು ಗುರುತಿಸಲು ಹಾಗೂ ಸಾವಿನ ಪ್ರಮಾಣ ಶೂನ್ಯಕ್ಕೆ ತರಲು ಆರೋಗ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

13 ಜನರಲ್ಲಿ ಮಂಗನ ಕಾಯಿಲೆ ಪತ್ತೆ

ಪ್ರತಿವರ್ಷವೂ ಅಕ್ಟೋಬರ್​​ನಿಂದ ಜೂನ್​ವರೆಗೆ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಮಂಗನ ಕಾಯಿಲೆ ಪ್ರಕರಣಗಳು ಕಂಡುಬರುತ್ತವೆ. ಈ ಹಿನ್ನಲೆ ಈಗಾಗಲೇ ಆರೋಗ್ಯ ಇಲಾಖೆಯಿಂದ ಹಲವು ಟೆಸ್ಟ್​ಗಳನ್ನು ನಡೆಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 1,163, ಚಿಕ್ಕಮಗಳೂರು 124, ಉಡುಪಿಯಲ್ಲಿ 12 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 368 ಜನರಿಗೆ ಪರೀಕ್ಷೆ ನಡೆದಿದೆ. ಈ ಪೈಕಿ 13 ಜನರಲ್ಲಿ ಮಂಗನ ಕಾಯಿಲೆ ಇರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಮತ್ತೆ ವಕ್ಕರಿಸಿದ ಮಂಗನ ಕಾಯಿಲೆ; ಕಾಡಿನಂಚಿನ ಜನರಲ್ಲಿ ಆತಂಕ

ಕಳೆದ ವರ್ಷ ಮಂಗನ ಕಾಯಿಲೆಯಿಂದ ಸುಮಾರು 8 ಜನ ಸಾವನ್ನಪ್ಪಿದ್ದರು. ಹೀಗಾಗಿ ಈ ವರ್ಷ ಮುಂಜಾಗೃತೆ ವಹಿಸಿದ್ದೇವೆ. ಇದರಿಂದ ಒಬ್ಬರೂ ಮೃತಪಡಬಾರದು ಎಂಬುದು ನಮ್ಮ ಉದ್ದೇಶವಾಗಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚಿಸಲಾಗಿದೆ ಎಂದು ಸಚಿವ ದಿನೇಶ್​​ ಗುಂಡೂರಾವ್​​ ತಿಳಿಸಿದ್ದಾರೆ. ಇದುವರೆಗೆ ಸತ್ತ 87 ಮಂಗಗಳ ಪರೀಕ್ಷೆ ನಡೆಸಲಾಗಿದ್ದು, ಆ ಪೈಕಿ ಯಾವುದರಲ್ಲೂ ಕಾಯಿಲೆ ಪಾಸಿಟಿವ್​​ ಬಂದಿಲ್ಲ. ಅಕ್ಟೋಬರ್, ನವೆಂಬರ್, ಡಿಸೆಂಬರ್​​ನಲ್ಲಿಯವರೆಗೆ ಯಾರೊಬ್ಬರ ಸಾವು ಆಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿಯೇ 12 ಜನರಲ್ಲಿ ಈ ರೋಗ ಕಂಡುಬಂದಿದೆ. ಆ ಪೈಕಿ ಒಂದೇ ಗ್ರಾಮದ 10 ಜನರಿಗೆ ಮಂಗನ ಕಾಯಿಲೆ ವಕ್ಕರಿಸಿರೋದು ಗೊತ್ತಾಗಿದೆ. ಉಳಿದಂತೆ ಚಿಕ್ಕಮಗಳೂರಿನ ಒಬ್ಬರಲ್ಲಿ ಕಾಯಿಲೆ ಪತ್ತೆಯಾಗಿದೆ. ಈ ರೋಗದಿಂದ ಬಳಲುತ್ತಿರುವ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಲಾಗುತ್ತೆ. ವ್ಯಾಕ್ಸಿನ್ ಬಗ್ಗೆ ಕೇಂದ್ರ ಸರ್ಕಾರದ ಜೊತೆಗೆ ಸಂಪರ್ಕದಲ್ಲಿದ್ದು, ಹೊಸ ವ್ಯಾಕ್ಸಿನ್​​ನ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಮುಂದಿನ ವರ್ಷದ ಒಳಗೆ ಅದು ಬಳಕೆಗೆ ಲಭ್ಯ ಆಗಬಹುದು ಎಂದು ಸಚಿವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ನಿಂಬೆ ನೀರು ಕುಡಿಯುವುದು ಒಳ್ಳೆಯದೇ… ಇಲ್ಲಿದೆ ತಜ್ಞರ ಅಭಿಪ್ರಾಯ – Kannada News | Can Lemon Water Control High Blood Pressure? Expert Weighs In

ಅಧಿಕ ರಕ್ತದೊತ್ತಡ (High Blood Pressure) ಸಾಮಾನ್ಯ ಸಮಸ್ಯೆ ಅಲ್ಲವೇ ಅಲ್ಲ. ದೇಹದಲ್ಲಿ ಸದ್ದಿಲ್ಲದೆ ಹೆಚ್ಚಾಗಿ ಬಳಿಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಕ್ರಮೇಣ ಹೃದಯ, ಮೂತ್ರಪಿಂಡ ಮತ್ತು ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಇದಲ್ಲದೆ, ಅಧಿಕ ರಕ್ತದೊತ್ತಡವು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ರಕ್ತದೊತ್ತಡವನ್ನು ನಿಯಂತ್ರಿಸಲು ಕೆಲವರು ನಿಂಬೆ ನೀರು (Lemon Water) ಕುಡಿಯುತ್ತಾರೆ. ಅದರಲ್ಲಿಯೂ ನಿಂಬೆಹಣ್ಣು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ, ಇದು ಆರೋಗ್ಯಕ್ಕೂ ಒಳ್ಳೆಯದು. ಆದರೆ ಇದು ನಿಜವಾಗಿಯೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದೇ… ಈ ಬಗ್ಗೆ ಆರೋಗ್ಯ ತಜ್ಞರ ಅಭಿಪ್ರಾಯವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿಂಬೆ ನೀರು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆಯೇ?

ಎನ್ ಸಿ ಬಿ ಐ ಅಧ್ಯಯನಗಳ ಪ್ರಕಾರ, ನಿಂಬೆ ನೀರು ಅದರ ಸಿಟ್ರಿಕ್ ಆಮ್ಲ ಮತ್ತು ವಿಟಮಿನ್ ಸಿ ಅಂಶದಿಂದಾಗಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇವು ರಕ್ತನಾಳಗಳನ್ನು ಸಡಿಲಗೊಳಿಸುತ್ತವೆ ಮತ್ತು ದೇಹದಲ್ಲಿ ಜಲಸಂಚಯನವನ್ನು ಹೆಚ್ಚಿಸುತ್ತವೆ. ಆದರೆ ಇದು ಚಿಕಿತ್ಸೆಯಲ್ಲ, ಕೇವಲ ಪೋಷಕ ಆಹಾರ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಏಷ್ಯನ್ ಜರ್ನಲ್ ಆಫ್ ನರ್ಸಿಂಗ್ ಎಜುಕೇಶನ್ ಅಂಡ್ ರಿಸರ್ಚ್ – ನ್ಯಾರಿಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ, ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ಲೋ ಬಿಪಿ ಹೈ ಬಿಪಿಯಷ್ಟೇ ಅಪಾಯಕಾರಿ! ಇದನ್ನು ನಿಯಂತ್ರಿಸಲು ಈ ಸುಲಭ ಆಹಾರಗಳನ್ನು ಪ್ರಯತ್ನಿಸಿ ನೋಡಿ

ನಿಂಬೆ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು:

ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ: ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಸಿಟ್ರಸ್ ಫ್ಲೇವನಾಯ್ಡ್‌ಗಳನ್ನು ಹೊಂದಿರುತ್ತವೆ. ಇವು ಉತ್ಕರ್ಷಣ ನಿರೋಧಕ ಮತ್ತು ನಾಳೀಯ ಆರೋಗ್ಯಕ್ಕೆ ಸಂಬಂಧಿಸಿದ ಸಂಯುಕ್ತಗಳಾಗಿವೆ. ಅಷ್ಟೇ ಅಲ್ಲ, ರಕ್ತನಾಳಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಹಾಗಾಗಿ ರಕ್ತ ಪರಿಚಲನೆಗೆ ಅಗತ್ಯವಾಗಿರುತ್ತದೆ.

ಜಲಸಂಚಯನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ: ನಿಂಬೆ ನೀರು ದೇಹದಲ್ಲಿ ಜಲಸಂಚಯನವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡ ಇರುವವರಿಗೆ ಇದು ಬಹಳ ಮುಖ್ಯ. ಅಷ್ಟೇ ಅಲ್ಲ, ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಆದ್ದರಿಂದ, ನಿಮಗೆ ಅಧಿಕ ರಕ್ತದೊತ್ತಡವಿದ್ದರೂ ಸಹ, ನೀವು ಈ ಪಾನೀಯವನ್ನು ನಿಯಮಿತವಾಗಿ ಕುಡಿಯಬಹುದು. ಆದರೆ, ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದು ಬಹಳ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫ್ಯಾನ್ಸ್ ವಾರ್​​ ಬಗ್ಗೆ ನಟ ವಿನೋದ್ ರಾಜ್ ಮಾತು: ವಿಡಿಯೋ – Kannada News | Vinod Raj talks about ongoing Fans war

ಕನ್ನಡ ಚಿತ್ರರಂಗದಲ್ಲಿ (Sandalwood) ಪ್ರಸ್ತುತ ಫ್ಯಾನ್ಸ್ ವಾರ್ ಚರ್ಚೆ ಜೋರಾಗಿ ನಡೆಯುತ್ತಿದೆ. ‘ಮಾರ್ಕ್’ ಸಿನಿಮಾ ಇವೆಂಟ್​​ನಲ್ಲಿ ಸುದೀಪ್ ಅವರು ಪೈರಸಿ ಬಗ್ಗೆ, ಪೈರಸಿ ಮಾಡುವವರ ಬಗ್ಗೆ ಆಡಿದ ಮಾತುಗಳು ಫ್ಯಾನ್ಸ್ ವಾರ್​ಗೆ ನಾಂದಿ ಹಾಡಿದೆ. ದರ್ಶನ್ ಅಭಿಮಾನಿಗಳು ಸುದೀಪ್ ಮತ್ತು ಸುದೀಪ್ ಅಭಿಮಾನಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಮರ ಶುರು ಮಾಡಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಸಹ ದಾವಣಗೆರೆಯಲ್ಲಿ ಆಡಿರುವ ಮಾತುಗಳು ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಿವೆ. ಚಿತ್ರರಂಗದ ಹಿರಿಯ ನಟರಲ್ಲಿ ಒಬ್ಬರಾಗಿರುವ ವಿನೋದ್ ರಾಜ್ ಅವರು ಇದೀಗ ಪ್ರಸ್ತುತ ಚಾಲ್ತಿಯಲ್ಲಿರುವ ಫ್ಯಾನ್ಸ್ ವಾರ್​​ ಬಗ್ಗೆ ಮಾತನಾಡಿದ್ದಾರೆ, ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಪೋಷಕರೇ ಗಮನಿಸಿ: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಇರಲಿ ಎಚ್ಚರ; ಕಾರಣ ಇಲ್ಲಿದೆ

ಬೆಂಗಳೂರು, ಡಿಸೆಂಬರ್​​ 24: ನಗರದಲ್ಲಿ 50ಕ್ಕೂ ಹೆಚ್ಚು ಅನಧಿಕೃತ ಶಾಲೆಗಳು ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಶಿಕ್ಷಣ ಸಂಸ್ಥೆಗಳು  ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದು, ಅನಧಿಕೃತವಾಗಿ ಬೋಧನೆ ನಡೆಸುತ್ತಿವೆ. ಇಂತಹ ಶಾಲೆಗಳ ಕುರಿತು ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಡಿಡಿಪಿಐ ಮತ್ತು ಬಿಇಒಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.  ಹೆಣ್ಣೂರು ರಸ್ತೆಯ ಯುರೋಸ್ಕೂಲ್, ಕಿಡ್ಸ್ ಕ್ಯಾಸಲ್ ಪೂರ್ವ ಪ್ರಾಥಮಿಕ ಶಾಲೆ ಸಿಂಗಸಂದ್ರ, ಯರೋ ಸ್ಕೂಲ್ ತಿಪ್ಪಸಂದ್ರ ಗುಂಜೂರು, ಗರೇಭಾವಿಪಾಳ್ಯದ ಅಪೋಲೊ ಕಿಡ್ಸ್ ಪೂರ್ವ ಪ್ರಾಥಮಿಕ ಶಾಲೆ ಸೇರಿದಂತೆ ಹಲವು ನರ್ಸರಿ ಶಾಲೆಗಳಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸ್ಟಾರ್ ವಾರ್​​ಗಳ ನಡುವೆ ಸೂಪರ್ ಸ್ಟಾರ್ ಮಮ್ಮುಟಿಯ ಮಾತೊಮ್ಮೆ ಕೇಳಿ – Kannada News | Mammootty talks about stardom and how he wants to people recognize him

ಪ್ರಸ್ತುತ ಕರ್ನಾಟಕದಲ್ಲಿ ಫ್ಯಾನ್ಸ್ ವಾರ್ (Fans War) ಜೋರಾಗಿದೆ. ನಮ್ಮ ಸ್ಟಾರ್ ಗ್ರೇಟು, ನಿಮ್ಮ ಸ್ಟಾರು ಕಳಪೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಾಡಿ ಎಬ್ಬಿಸಿದ್ದಾರೆ. ಸ್ಟಾರ್​​ಗಳು ಅವರ ಆಪ್ತರು ಏನು ಕಡಿಮೆ ಇಲ್ಲ. ಅವರೂ ಸಹ ತಮ್ಮ ಸ್ಟಾರ್​​ ಗಿರಿಯನ್ನು ಅನವಶ್ಯಕ ಮಾತುಗಳ ಮೂಲಕ ಪ್ರದರ್ಶನಕ್ಕಿಡುತ್ತಿದ್ದಾರೆ. ತಮ್ಮ ಇಮೇಜು ಎಲ್ಲಿ ಮಂಕಾಗುತ್ತದೆಯೋ, ಜನ ಎಲ್ಲಿ ನಮ್ಮನ್ನು ಕಡೆಗಣಿಸಿಬಿಡುತ್ತಾರೆಯೋ ಎಂಬುದು ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಇಂಥಹಾ ಸಂದರ್ಭದಲ್ಲಿ ಭಾರತದ ಅಪ್ರತಿಮ ನಟರಲ್ಲಿ ಒಬ್ಬರಾದ, ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಮಮ್ಮುಟಿಯ ಮಾತುಗಳನ್ನು ಎಲ್ಲ ‘ಇಮೇಜು ಹುಚ್ಚಿನ’ ಸ್ಟಾರ್ ನಟರು ಕೇಳಿಸಿಕೊಳ್ಳಲೇ ಬೇಕು….

ಈಗ ಪ್ರತಿಯೊಬ್ಬ ಸ್ಟಾರ್ ನಟನಿಗೂ ಒಂದೊಂದು ಅಡ್ಡ ಹೆಸರುಗಳಿವೆ, ಒಬ್ಬರು ರಿಯಲ್ ಸ್ಟಾರ್, ಇನ್ನೊಬ್ಬರು ಸೂಪರ್ ಸ್ಟಾರ್, ಮತ್ತೊಬ್ಬರು ಇನ್ನೊಂದು ಸ್ಟಾರ್ ಹೀಗೆ. ಒಟ್ಟಾರೆ ಜನ ತಮ್ಮನ್ನು, ತಮ್ಮ ಹೆಸರನ್ನು ಬಹಳ ಕಾಲ ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದು ಅವರ ಸುಪ್ತ ಆಸೆ. ಇದೇ ಪ್ರಶ್ನೆಯನ್ನು ಸಂದರ್ಶಕನೊಬ್ಬ ಮಮ್ಮುಟಿ ಅವರಿಗೆ ಇತ್ತೀಚೆಗೆ ಕೇಳಿದ್ದಾರೆ. ‘ನಿಮಗೆ 74 ವರ್ಷ ಎಲ್ಲರೂ ಒಂದು ಹಂತಕ್ಕೆ ಬಂದ ಬಳಿಕ, ಇನ್ನು ಸಾಕು ಎಂದುಕೊಳ್ಳುತ್ತಾರೆ, ನಿಮಗೆ ಹಾಗೆ ಅನ್ನಿಸುತ್ತದೆಯೇ? ಎಂಬುದು ಸಂದರ್ಶಕನ ಪ್ರಶ್ನೆ.

‘ನನಗೆ ಸಾಕು ಎನಿಸುವುದಿಲ್ಲ, ನನಗೆ ದಣಿವು ಎನಿಸುವುದಿಲ್ಲ, ನನಗೆ ದಣಿವು ಎನಿಸಿದಾಗ ಅದೇ ನನ್ನ ಕೊನೆಯ ಉಸಿರಾಗುತ್ತದೆ. ನಾನು ಕೆಲಸ ಮಾಡುತ್ತಲೇ ಕೊನೆ ಉಸಿರೆಳೆಯಲು ಇಷ್ಟ ಪಡುತ್ತೀನಿ’ ಎನ್ನುತ್ತಾರೆ ಮಮ್ಮುಟಿ. ಕೂಡಲೇ ಸಂದರ್ಶಕ, ‘ನೀವು ಕೊನೆಯ ಉಸಿರಿನ ಬಗ್ಗೆ ಮಾತನಾಡಿದ್ದೀರಿ, ನೀವು ಹೋದ ಮೇಲೆ ಜನ ನಿಮ್ಮನ್ನು ಹೇಗೆ ನೆನಪಿಟ್ಟುಕೊಳ್ಳಬೇಕು ಎಂದು ನೀವು ಬಯಸಿದ್ದೀರಿ’ ಎನ್ನುತ್ತಾರೆ. ಮಮ್ಮುಟಿಯ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಇಂಥಹಾ ಒಂದು ಪ್ರಶ್ನೆಯನ್ನು ಸಂದರ್ಶಕ ಮಮ್ಮುಟಿ ಅವರಿಗೆ ಕೇಳುತ್ತಾರೆ. ಆಗ ಮಮ್ಮುಟಿ ಕೊಟ್ಟ ಉತ್ತರ ಸಂದರ್ಶಕನ ಕಣ್ಣಲ್ಲಿ ನೀರು ತರಿಸಿದೆ.

ಇದನ್ನೂ ಓದಿ:ಮಮ್ಮುಟಿ ಮೇಲೆ ಗಂಭೀರ ಆರೋಪ ಮಾಡಿದ ನಟ ಪರೇಶ್ ರಾವಲ್

‘ಎಷ್ಟು ಕಾಲ ಜನ ನೆನಪಿಟ್ಟುಕೊಳ್ಳುತ್ತಾರೆ. ಒಂದು ವರ್ಷ, ಹತ್ತು ವರ್ಷ, ಹದಿನೈದು ವರ್ಷ ಅಷ್ಟೆ. ಪ್ರಪಂಚ ಇರುವವರೆಗೆ ಜನ ನಿಮ್ಮನ್ನು ನೆನಪಿಟ್ಟುಕೊಳ್ಳಬೇಕು ಎಂದು ಆಶಿಸುವುದು ತಪ್ಪು. ಅದು ಯಾವ ಮಹನೀಯರಿಗೂ ಆಗಿಲ್ಲ. ಎಂತೆಥ ಮಹನೀಯರನ್ನೇ ಜನ ಸ್ಮರಿಸಿಕೊಂಡಿದ್ದು ಬಹಳ ಕಡಿಮೆ ಕಾಲಕ್ಕೆ. ಕಡಿಮೆ ಸಂಖ್ಯೆಯ ಮಹನೀಯರಷ್ಟೆ ಈಗಲೂ ಜನಸ್ಮೃತಿಯಲ್ಲಿದ್ದಾರೆ. ಎಷ್ಟೋ ಸಾವಿರಾರು ಅದ್ಭುತವಾದ ನಟರು ಇದ್ದರು, ಈಗಲೂ ಇದ್ದಾರೆ ಅವರಲ್ಲಿ ನಾನೂಬ್ಬ ಅಷ್ಟೆ. ಅಷ್ಟೋಂದು ನಟರ ನಡುವೆ ಜನ ಹೇಗೆ ನನ್ನನ್ನು ನೆನಪಿಟ್ಟುಕೊಂಡಾರು. ನಾನೇ ಈ ಜಗತ್ತಿನಲ್ಲಿ ಇಲ್ಲವಾದ ಮೇಲೆ ಜನ ನೆನಪಿಟ್ಟುಕೊಳ್ಳಬೇಕೆಂಬ ಅಪೇಕ್ಷೆ ಏಕೆ? ಅದೂ ಜಗತ್ತು ಇರುವ ವರೆಗೆ. ಆ ನಿರೀಕ್ಷೆಯೇ ಸರಿಯಲ್ಲ’ ಎಂದಿದ್ದಾರೆ ಮಮ್ಮುಟಿ.

ಮಹಾನ್ ನಟನೊಬ್ಬ, ಸ್ಟಾರ್ ಗಿರಿಯನ್ನು ಎಳ್ಳಷ್ಟು ತಲೆಗೆ ಹತ್ತಿಸಿಕೊಳ್ಳದೆ, ಇಷ್ಟು ಸರಳವಾಗಿ ನಿರ್ಗಮನದ ಬಗ್ಗೆ ಆಡಿದ ಮಾತುಗಳನ್ನು ಕೇಳಿ ಸಂದರ್ಶಕ ಕಣ್ಣೀರು ಹಾಕಿದ್ದಾರೆ. ಖಲೈದ್ ಅಲ್ ಅಮೆರಿ ಅವರ ಯೂಟ್ಯೂಬ್ ಅವರ ಚಾನೆಲ್​​ನಲ್ಲಿ ಸಂದರ್ಶನವನ್ನು ವೀಕ್ಷಿಸಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಕ್ಲು ಶಿವ ಕೊಲೆ ಕೇಸ್​​ನಲ್ಲಿ BJP ಶಾಸಕ  ಭೈರತಿ ಬಸವರಾಜ್​​ಗೆ ಮತ್ತಷ್ಟು ಸಂಕಷ್ಟ?

ಬೆಂಗಳೂರು, ಡಿಸೆಂಬರ್​​ 24: ರೌಡಿಶೀಟರ್​ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಭೈರತಿ ಬಸವರಾಜ್​ ಸೇರಿ ಉಳಿದ ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಕೋಕಾ ಕಾಯ್ದೆಯನ್ನು ತಿರಸ್ಕರಿಸಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​​ ಮೊರೆ ಹೋಗಲು ಅನುಮತಿ ಕೇಳಿ ಸಿಐಡಿ ಮಾಡಿದ್ದ ಮನವಿಗೆ ಗೃಹ ಇಲಾಖೆ ಹಸಿರು ನಿಶಾನೆ ತೋರಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ಕೋಕಾ ಕಾಯ್ದೆ ಅನ್ವಯಿಸುತ್ತದೆ ಎಂದು ತೀರ್ಪು ನೀಡಿದರೆ, ಭೈರತಿ ಬಸವರಾಜ್ ಸೇರಿದಂತೆ ಇತರ ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ಕಟ್ಟಿಟ್ಟ ಬುತ್ತಿ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಾರುಕಟ್ಟೆಯನ್ನು ಪ್ರಭಾವಿಸುವ ಗ್ರಾಹಕ ಅಭ್ಯಾಸಗಳು; ಒಂದು ಅವಲೋಕನ – Kannada News | The Impact of Fluctuations: How Consumer Habits Influence Market Movements

ಬಜಾಜ್ ಫಿನ್​ಸರ್ವ್ ಎಎಂಸಿಯ ಸೌರಭ್ ಗುಪ್ತಾ

ಭಾರತದ ಬೆಳವಣಿಗೆಯ ಕಥೆಯಲ್ಲಿ ಗ್ರಾಹಕ ಅಥವಾ ಅನುಭೋಗಿಯೇ ಸೂತ್ರಧಾರ. ತುಂಬಿತುಳುಕುತ್ತಿರುವ ಮಾಲ್​ಗಳಿಂದ ಹಿಡಿದು, ಗಿಜಿಗಿಜಿಗುಡುತ್ತಿರುವ ಇ-ಕಾಮರ್ಸ್​ವರೆಗೆ ಈ ಅನುಭೋಗ ಅಥವಾ ಕನ್ಸಮ್ಷನ್ ಸೆಕ್ಟರ್ ಉತ್ತಮವಾಗಿ ಬೆಳೆಯುತ್ತಿದೆ. ಜನರ ಆದಾಯದಲ್ಲಿ ಹೆಚ್ಚಳ ಆಗುತ್ತಿರುವುದು, ವೇಗವಾಗಿ ನಗರೀಕರಣ ಆಗುತ್ತಿರುವುದು, ಜೀವನಶೈಲಿಯಲ್ಲಿ ಬದಲಾವಣೆ ಆಗುತ್ತಿರುವುದು ರಚನಾತ್ಮಕವಾಗಿ ಪುಷ್ಟಿ ಕೊಡುತ್ತಿದೆ. ಭಾರತೀಯ ಆರ್ಥಿಕತೆಯಲ್ಲಿ ಅನುಭೋಗಕ್ಕೆ ಪ್ರಾಧಾನ್ಯ ಸ್ಥಾನ ಸಿಗುವಂತೆ ಮಾಡಿದೆ. ಅನುಭೋಗ ಶಕ್ತಿಯಿಂದ ನಡೆಯುವ ಬ್ಯುಸಿನೆಸ್​ಗಳು ಈ ಒಂದು ಟ್ರೆಂಡ್​ನ ಲಾಭ ಪಡೆಯುತ್ತಿವೆ.

ಇಲ್ಲಿ ಒಂದು ಕುತೂಹಲಕಾರಿ ಅಂಶ ಗಮನಿಸಬೇಕು: ಹೂಡಿಕೆದಾರರು ಈ ಸೆಕ್ಟರ್​ನಲ್ಲಿ ಹಣ ತೊಡಗಿಸುವುದು ಮಾತ್ರವಲ್ಲ, ಅನುಭೋಗಿಗಳಾಗಿ ಪ್ರತೀ ದಿನ ಅದರಲ್ಲಿ ಭಾಗಿಯಾಗುತ್ತಿರುತ್ತಾರೆ. ಸ್ಮಾರ್ಟ್​ಫೋನ್ ಖರೀದಿಸುವುದು, ಕಾಫಿ ಕುಡಿಯುವುದು, ಆರ್ಗ್ಯಾನಿಕ್ ದಿನಸಿ ವಸ್ತುಗಳನ್ನು ಖರೀದಿಸುವುದು ಇವೆಲ್ಲವೂ ಕೂಡ ಅವರು ಹೂಡಿಕೆ ಮಾಡಿರುವ ಅನುಭೋಗ ಸೆಕ್ಟರ್​ಗೆ ಬರುತ್ತವೆ. ವ್ಯಕ್ತಿಗಳಿಗೆ ಇದು ಎರಡು ಪಾತ್ರ ಸೃಷ್ಟಿಸುತ್ತದೆ. ಈ ಎರಡೂ ಕೂಡ ಒಂದೇ ನಾಣ್ಯದ ಎರಡು ಮುಖಗಳು. ನಿರ್ಧಾರ ಮತ್ತು ಪೋರ್ಟ್​ಫೋಲಿಯೋ ರಿಸಲ್ಟ್ ಎರಡನ್ನೂ ಪ್ರಭಾವಿಸುವಂಥವು.

ಒಂದು ಕಡೆ, ಹೂಡಿಕೆದಾರರು ಅನುಭೋಗವನ್ನು ಅವಕಾಶದ ಕಣ್ಣಿನಿಂದ ನೋಡಬಹುದು. ಉತ್ತಮ ಫಂಡಮೆಂಟಲ್ಸ್ ಇರುವ ಮತ್ತು ಹೆಚ್ಚು ವ್ಯಾಪಿಸಬಲ್ಲ ಬ್ಯುಸಿನೆಸ್ ಮಾಡಲ್ ಹೊಂದಿರುವ ಕಂಪನಿಗಳನ್ನು ಹೂಡಿಕೆದಾರರು ಹೆಕ್ಕುತ್ತಾರೆ. ಮತ್ತೊಂದು ಕಡೆ, ಗ್ರಾಹಕರು ತಮ್ಮ ಭಾವನೆ, ಅಭಿಲಾಷೆ, ಅನುಕೂಲತೆಯ ಆಧಾರದ ಮೇಲೆ ಕನ್ಸಂಪ್ಷನ್ ಆಯ್ಕೆ ಮಾಡಿಕೊಳ್ಳುತ್ತಾರೆ.

ಈ ಎರಡು ಅಂಶಗಳು ಮಿಳಿತಗೊಳ್ಳುವುದರಿಂದ ಹೊಸ ಚಲನಶೀಲತೆಯನ್ನು ಸೃಷ್ಟಿಸಬಹುದು. ಆದರೆ, ಅದನ್ನು ಸರಿಯಾಗಿ ಗ್ರಹಿಸದೇ ಹೋದಲ್ಲಿ ತಪ್ಪಾದ ನಿರ್ಧಾರಕ್ಕೆ ಕಾರಣವಾಗಬಹುದು.

ಹೂಡಿಕೆದಾರರು ತಾವು ಪದೇ ಪದೇ ಬಳಸುವ ಬ್ರ್ಯಾಂಡ್​ಗಳತ್ತ ಹೆಚ್ಚು ವಾಲುವುದುಂಟು. ಈ ಬ್ರ್ಯಾಂಡ್​ಗಳು ಬಹಳ ಪರಿಚಿತ ಹಾಗೂ ಸುರಕ್ಷಿತ ಭಾವನೆ ಮೂಡಿಸುವುದು ಇದಕ್ಕೆ ಕಾರಣ. ದಿನನಿತ್ಯದ ಅನುಭವವು ಆ ಬ್ಯುಸಿನೆಸ್ ಬಗ್ಗೆ ವಿಶ್ವಾಸ ಮೂಡಿಸಬಹುದು. ಆ ಕಂಪನಿಯ ಮೂಲಭೂತ ಅಂಶಗಳು ನಿರಾಸೆ ಮೂಡಿಸುವಂತಿದ್ದರೂ ಈ ವಿಶ್ವಾಸ ಗಟ್ಟಿಯಾಗಿರುತ್ತದೆ. ಇದು ಒಂದು ಸಮಸ್ಯೆ.

ಇದಕ್ಕೆ ಒಂದು ಉದಾಹರಣೆ ನೋಡೋಣ. ಒಬ್ಬ ವ್ಯಕ್ತಿ ಪ್ರತೀ ವಾರ ಒಂದೇ ಬ್ರ್ಯಾಂಡ್​ನ ಚಿಪ್​ಗಳನ್ನು ಖರೀದಿಸುತ್ತಿರುತ್ತಾನೆ. ಅಥವಾ ಅದೇ ಬ್ರ್ಯಾಂಡ್​ನ ಬಟ್ಟೆಯನ್ನು ಖರೀದಿಸುತ್ತಿರುತ್ತಾನೆ. ಅವನಿಗೆ ಆ ಬ್ರ್ಯಾಂಡ್ ಇಷ್ಟವಾಗಿರುತ್ತದೆ. ಆ ಕಂಪನಿಯೂ ಕೂಡ ಉತ್ತಮವಾಗಿರುತ್ತದೆ ಎಂಬುದು ಅವರ ಪೂರ್ವಗ್ರಹ ಪ್ರಭಾವಿತ ಅನಿಸಿಕೆ ಆಗಿರುತ್ತದೆ. ಈ ಭಾವನೆಯು ವೈಯಕ್ತಿಕ ಅನುಭೋಗವನ್ನು ಪ್ರತಿಫಲಿಸುತ್ತದೆ. ಆದ ಮಾತ್ರಕ್ಕೆ ಕಂಪನಿಯ ಗಳಿಕೆ, ಗುರಿ, ಬೆಳವಣಿಗೆ ಇವುಗಳನ್ನು ಪ್ರತಿಫಲಿಸುವುದಿಲ್ಲ ಎಂಬುದು ತಿಳಿದಿರಲಿ.

ಇದು ಇಲ್ಲಿಗೇ ನಿಲ್ಲುವುದಿಲ್ಲ. ದೃಢೀಕರಣ ಪಕ್ಷಪಾತಕ್ಕೆ (ಕನ್ಫರ್ಮೇಶನ್ ಬಯಾಸ್) ಪರಿಚಿತತೆಯು ಮೊದಲ ಹಂತವಾಗಿರುತ್ತದೆ. ಮನಸ್ಸು ಅನುಕೂಲಕರ ದೃಷ್ಟಿಕೋನವನ್ನು ರೂಪಿಸಿದ ನಂತರ, ಅದು ಹೊಸ ಉತ್ಪನ್ನ ಬಿಡುಗಡೆಗಳು, ಬಲವಾದ ಗೋಚರತೆ ಅಥವಾ ಸೆಲೆಬ್ರಿಟಿ ಅನುಮೋದನೆಯಂತಹ ಆಯ್ಕೆ ಮಾಡುವ ಮನೋಭಾವಕ್ಕೆ ನಾಂದಿಯಾಗುತ್ತದೆ, ಆದರೆ ಮಾರ್ಜಿನ್ ಒತ್ತಡ, ಸ್ಪರ್ಧಾತ್ಮಕ ತೀವ್ರತೆ ಅಥವಾ ವಿಭಿನ್ನತೆಯನ್ನು ಹೇಳಬಹುದಾದ ವಿಸ್ತೃತ ಮೌಲ್ಯಮಾಪನಗಳಂತಹ ಅಂಶಗಳನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ಮಾರಾಟದ ಪ್ರಮಾಣವನ್ನು ಸಂಪೂರ್ಣವಾಗಿ ಬೆಂಬಲಿಸದಿದ್ದರೂ ಸಹ, ವೈಯಕ್ತಿಕ ಆದ್ಯತೆಯು ಹೂಡಿಕೆಯಲ್ಲಿ ಆತ್ಮವಿಶ್ವಾಸ ಮೂಡಿಸಬಹುದು. ವಸ್ತುನಿಷ್ಠ ವಿಶ್ಲೇಷಣೆಯಲ್ಲಿ ಆಧಾರದ ಮೇಲೆ ಹೂಡಿಕೆ ನಡೆಯದೇ ಇರಬಹುದು.

ಪ್ರಯೋಗ ಪಕ್ಷಪಾತದ ಪಾತ್ರವೂ ಇರುತ್ತದೆ. ಅದರಲ್ಲೂ ಪ್ರಯೋಗಶೀಲತೆಯು ಲಭ್ಯ ಇದ್ದಾಗ ಇದು ಆಗುತ್ತದೆ. ಜನಪ್ರಿಯವಾಗಿರುವ ಬ್ರ್ಯಾಂಡ್, ಅಥವಾ ದುಬಾರಿ ಬೆಲೆಯ ಉತ್ಪನ್ನವು ಆ ಕಂಪನಿಗೆ ಉತ್ತಮ ಫಂಡಮೆಂಟಲ್ಸ್ ಇರಬಹುದು ಎಂದು ಹೂಡಿಕೆದಾರರು ಭಾವಿಸಿಬಿಡುವುದುಂಟು. ಹೀಗಾಗಿ, ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುವ ಅಥವಾ ಕಣ್ಣಿಗೆ ಬೀಳುವ ಕಂಪನಿಗಳ ಬಗ್ಗೆ ಹೂಡಿಕೆದಾರರಿಗೆ ಒಲವು ಹೆಚ್ಚಿರುತ್ತದೆ. ಎಲೆಮರೆ ಕಾಯಿಯಂತಿರುವ, ಆದರೆ ಫಂಡಮೆಂಟಲ್ಸ್ ಉತ್ತಮವಾಗಿರುವ ಕಂಪನಿಗಳನ್ನು ಅವರು ನಿರ್ಲಕ್ಷಿಸುವುದುಂಟು.

ಇದರಿಂದ ವ್ಯತಿರಿಕ್ತ ಪರಿಣಾಮ ಬೀರಬಹುದು. ಒಂದೇ ಒಂದು ಕಳಪೆ ವಿತರಣೆ ಅಥವಾ ನಿರಾಶಾದಾಯಕ ಉತ್ಪನ್ನದ ಮಾರಾಟವು ಹೂಡಿಕೆದಾರನು ತಾನು ನಂಬಿದ್ದ ಕಂಪನಿಯಿಂದ ದೂರ ಸರಿಯುವುದಕ್ಕೆ ಪ್ರೇರಕವಾಗಬುದು. ಇಲ್ಲಿ, ಇತ್ತೀಚಿನ ಘಟನೆಯು ದೀರ್ಘಕಾಲೀನ ಕಾರ್ಯಕ್ಷಮತೆಯನ್ನು ಮರೆಮಾಡುತ್ತದೆ, ಸಾಕ್ಷ್ಯದಿಂದ ಭಾವನೆಗಳಲ್ಲಿ ಬದಲಾವಣೆಯಾಗುತ್ತದೆ. ಗ್ರಾಹಕರ ಬಳಕೆಯು ಸಂಪೂರ್ಣ ವೈಯಕ್ತಿಕವಾಗಿರುವುದರಿಂದ ಇಂತಹ ಪೂರ್ವಾಗ್ರಹಗಳು ಸಹಜ. ಇದು ಗುರುತು, ಜೀವನಶೈಲಿ ಮತ್ತು ಆಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ. ಆದಾಗ್ಯೂ, ಹೂಡಿಕೆಯು ಶಿಸ್ತನ್ನು ಬಯಸುತ್ತದೆ.  ಆದರೆ ಮಾರುಕಟ್ಟೆ ಪಾಲು ಪ್ರವೃತ್ತಿಗಳು, ಬೆಲೆ ನಿಗದಿ ಸಾಮರ್ಥ್ಯ, ವಿತರಣಾ ವ್ಯಾಪ್ತಿ ಮತ್ತು ನಾವೀನ್ಯತೆ ಪೈಪ್‌ಲೈನ್‌ಗಳು ಮುಖ್ಯ. ವೃತ್ತಿಪರ ವಿಶ್ಲೇಷಣೆಯಿಂದ ಈ ವೈಯಕ್ತಿಕ ಆದ್ಯತೆಗಳನ್ನು ಪ್ರಜ್ಞಾಪೂರ್ವಕವಾಗಿ ವಿಶ್ಲೇಷಿಸುವ ಮೂಲಕ ಹೂಡಿಕೆದಾರರು ದೀರ್ಘಾವಧಿಯ ಅವಕಾಶಗಳನ್ನು ಸೆರೆಹಿಡಿಯಲು ಉತ್ತಮ ಸ್ಥಿತಿಯಲ್ಲಿರುತ್ತಾರೆ.

ಲೇಖಕರು: Sorbh Gupta, Head- Equity, Bajaj Finserv Asset Management

Source link

Christmas 2025: ಯೇಸುಕ್ರಿಸ್ತರ ಜನ್ಮ ದಿನಾಚರಣೆಯ ಸಂಭ್ರಮ; ಕ್ರಿಸ್ಮಸ್‌ ಹಬ್ಬದ ಇತಿಹಾಸ, ಮಹತ್ವವನ್ನು ತಿಳಿಯಿರಿ – Kannada News | Christmas 2025: Do you know why we celebrate Christmas?

ಡಿಸೆಂಬರ್‌ ಎಂದಾಕ್ಷಣ ಮೊದಲಿಗೆ ನೆನಪಿಗೆ ಬರುವುದೇ ಕ್ರಿಸ್‌ಮಸ್‌ (Christmas) ಹಬ್ಬ. ಕ್ರೈಸ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದಾದ ಈ ಕ್ರಿಸ್ಮಸ್‌  ಹಬ್ಬವನ್ನು  ಪ್ರಪಂಚದಾದ್ಯಂತ ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ, ವಿನೋದದ ಮೂಲಕ ಈ ಹಬ್ಬವನ್ನು ಆಚರಿಸುತ್ತೇವೆ. ಕ್ರಿಸ್‌ಮಸ್ ಕೇವಲ ಆಚರಣೆಯಲ್ಲ, ಇದು ಪ್ರೀತಿ, ಕರುಣೆ, ನಂಬಿಕೆ ಮತ್ತು ಮಾನವೀಯತೆಯ ಪುನರುಜ್ಜೀವನದ ಕಥೆಯಾಗಿದೆ. ಅಲ್ಲದೆ ಈ ಹಬ್ಬದ ಹಿಂದೆ ಆಳವಾದ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವಿದೆ, ಯೇಸು ಕ್ರಿಸ್ತರು ಜನಿಸಿದ ಪುಣ್ಯ ದಿನದಂದು ಕ್ರಿಸ್ಮಸ್‌ ಹಬ್ಬವನ್ನು ಆಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದ್ದು, ಈ ಹಬ್ಬದ ಇತಿಹಾಸವೇನು, ಕ್ರಿಸ್‌ಮಸ್‌ ಹಬ್ಬ ಆರಂಭವಾಗಿದ್ದು ಹೇಗೆ ಈ ಎಲ್ಲದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯೋಣ ಬನ್ನಿ.

ಕ್ರಿಸ್‌ಮಸ್ ಹಬ್ಬವನ್ನು ಏಕೆ ಆಚರಿಸಲಾಗುತ್ತದೆ?

ಯೇಸುಕ್ರಿಸ್ತರ ಜನ್ಮದಿನವಾದ ಡಿಸೆಂಬರ್‌ 25 ರಂದು ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ಕ್ರಿಶ್ಚಿಯನ್ ನಂಬಿಕೆಯ ಪ್ರಕಾರ, ಯೇಸುಕ್ರಿಸ್ತರು ದೇವರ ಮಗ ಮತ್ತು ಮಾನವೀಯತೆಯ ರಕ್ಷಕರೆಂದು ಪರಿಗಣಿಸಲ್ಪಟ್ಟಿದ್ದಾರೆ. ಪ್ರೀತಿ, ಕ್ಷಮೆ, ಸೇವೆ ಮತ್ತು ತ್ಯಾಗದ ಮಾರ್ಗವನ್ನು ತೋರಿದ, ಸಮಾಜದಲ್ಲಿ ಕರುಣೆ ಮತ್ತು ಸಹೋದರತ್ವ ಪಾಠ ಮಾಡಿದ ಇವರನ್ನು ಸ್ಮರಿಸುವ ಸಲುವಾಗಿ ಕ್ರಿಸ್ಮಸ್‌ ಹಬ್ಬವನ್ನು ಆಚರಿಸಲಾಗುತ್ತದೆ.

ಕ್ರಿಸ್ಮಸ್‌ ಹಬ್ಬದ ಇತಿಹಾಸವೇನು?

ಬೈಬಲ್‌ನಲ್ಲಿ ಯೇಸುಕ್ರಿಸ್ತರ ನಿಖರವಾದ ಜನ್ಮ ದಿನಾಂಕದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇತಿಹಾಸಕಾರರ ಪ್ರಕಾರ, ರೋಮನ್ ಸಾಮ್ರಾಜ್ಯದಲ್ಲಿ, ಸೂರ್ಯ ದೇವರ ಹಬ್ಬವನ್ನು (ಸೋಲ್ ಇನ್ವಿಕ್ಟಸ್) ಡಿಸೆಂಬರ್ 25 ರಂದು ಆಚರಿಸಲಾಗುತ್ತಿತ್ತು. ಈ ಸಮಯವು ಚಳಿಗಾಲದ ಅಯನ ಸಂಕ್ರಾಂತಿಯ ಆಸುಪಾಸಿನಲ್ಲಿ ಬರುತ್ತದೆ, ಆಗ ಹಗಲು ಹೆಚ್ಚಿರುತ್ತವೆ. ಇದರಿಂದಾಗಿ ನಾಲ್ಕನೇ ಶತಮಾನದಲ್ಲಿ ನಾಲ್ಕನೇ ಶತಮಾನದಲ್ಲಿ ಕ್ರಿಶ್ಚಿಯನ್ ಧರ್ಮದ ವಿಸ್ತರಣೆಯ ಸಮಯದಲ್ಲಿ, ಚರ್ಚ್‌ಗಳು ಯೇಸುವಿನ ಜನ್ಮದಿನವನ್ನು ಡಿಸೆಂಬರ್ 25 ರಂದು ಆಚರಿಸುವುದಾಗಿ ಘೋಷಿಸಿದವು. ಹಳೆಯ ಸೂರ್ಯನ ಹಬ್ಬವನ್ನು ಆಧ್ಯಾತ್ಮಿಕ ಬೆಳಕಿನ ಹಬ್ಬವಾಗಿ, ಅಂದರೆ ಕತ್ತಲಿನಿಂದ ಬೆಳಕಿನೆಡೆಗೆ ಎಂಬ ಕಲ್ಪನೆಯೊಂದಿಗೆ ಕ್ರಿಸ್ಮಸ್‌ ಹಬ್ಬದ ಆಚರಣೆ ಶುರುವಾಯಿತು.

ಕ್ರಿಸ್‌ಮಸ್ ಹಬ್ಬವನ್ನು ಮೊದಲು ಔಪಚಾರಿಕವಾಗಿ ರೋಮ್‌ನಲ್ಲಿ ನಾಲ್ಕನೇ ಶತಮಾನದಲ್ಲಿ ಆಚರಿಸಲಾಯಿತು. ಕಾಲಾನಂತರದಲ್ಲಿ, ಈ ಆಚರಣೆಯು ಯುರೋಪಿನಾದ್ಯಂತ ಮತ್ತು ನಂತರ ಪ್ರಪಂಚದಾದ್ಯಂತ ಹರಡಿತು. ಕ್ರಿಸ್‌ಮಸ್ ಹಬ್ಬವು ಭಾರತಕ್ಕೆ ಪೋರ್ಚುಗೀಸ್ ಮತ್ತು ಬ್ರಿಟಿಷ್ ಮಿಷನರಿಗಳೊಂದಿಗೆ ಆಗಮಿಸಿತು. ಇಂದು ಪ್ರಪಂಚದಾದ್ಯಂತ ಈ ಹಬ್ಬವನ್ನು ಜಾತಿ ಧರ್ಮದ ಬೇಧವಿಲ್ಲದೆ ಆಚರಿಸಲಾಗುತ್ತಿದೆ.

ಕ್ರಿಸ್‌ಮಸ್‌ಗೆ ಸಂಬಂಧಿಸಿದ ಪ್ರಮುಖ ಸಂಪ್ರದಾಯಗಳೇನು?

ಕ್ರಿಸ್‌ಮಸ್ ದಿನದಂದು ಕ್ರಿಶ್ಚಿಯನ್ನರು ಚರ್ಚ್‌ಗೆ ಹೋಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಮತ್ತು ಕ್ಯಾರೋಲ್‌ಗಳನ್ನು ಹಾಡಲಾಗುತ್ತದೆ. ಯೇಸುಕ್ರಿಸ್ತರ ಜನನವನ್ನು ಸಂಭ್ರಮಿಸುವ ಹಾಡುಗಳನ್ನು ಕ್ಯಾರೋಲ್‌ಗಳು ಎಂದು ಕರೆಯಲಾಗುತ್ತದೆ.  ಮುಖ್ಯವಾಗಿ  ಮನೆಗಳು ಮತ್ತು ಚರ್ಚ್‌ಗಳನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಕ್ರಿಸ್‌ಮಸ್ ಟ್ರೀ ಅಲಂಕರಿಸುವ, ಕೇಕ್ ಕತ್ತರಿಸುವ ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಸಂಪ್ರದಾಯಗಳು ಇವೆ.

ಇದನ್ನೂ ಓದಿ: ಕ್ರಿಸ್ಮಸ್‌ ಹಬ್ಬಕ್ಕೆ ಮನೆಯಲ್ಲೇ ಬಲು ಸುಲಭವಾಗಿ ತಯಾರಿಸಿ ಆರೋಗ್ಯಕರ ಡ್ರೈಫ್ರೂಟ್‌ ಕೇಕ್‌

ಕ್ರಿಸ್‌ಮಸ್‌ ಹಬ್ಬದ ಸಾಮಾಜಿಕ ಮತ್ತು ಮಾನವೀಯ ಸಂದೇಶ:

ಕ್ರಿಸ್‌ಮಸ್ ಕೇವಲ ಆಚರಣೆಯಲ್ಲ, ಅಗತ್ಯವಿರುವವರಿಗೆ, ಬಡವರಿಗೆ ಸಹಾಯ ನೀಡುವ ಮತ್ತು ಸೇವೆ ಮಾಡುವ ದಿನವೂ ಆಗಿದೆ. ಪ್ರೀತಿ ಮತ್ತು ಕರುಣೆ ಸಮಾಜವನ್ನು ಉತ್ತಮವಾಗಿ ಬದಲಾಯಿಸಬಹುದು ಎಂದು ಈ ಹಬ್ಬವು ನಮಗೆ ಕಲಿಸುತ್ತದೆ. ಅದಕ್ಕಾಗಿಯೇ ಇಂದು ಪ್ರಪಂಚದಾದ್ಯಂತ ಶಾಂತಿ ಮತ್ತು ಮಾನವೀಯತೆಯ ಸಂದೇಶದೊಂದಿಗೆ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:57 pm, Wed, 24 December 25

Source link

Exit mobile version