ಈ ಫಂಡ್ನಲ್ಲಿ 10,000 ರೂ ಎಸ್ಐಪಿ; 21 ವರ್ಷದಲ್ಲಿ ಬರೋಬ್ಬರಿ 2 ಕೋಟಿ ರೂ ರಿಟರ್ನ್ಸ್
ಸದ್ಯ ಷೇರು ಮಾರುಕಟ್ಟೆ ಕಳೆದ ಒಂದು ವರ್ಷದಿಂದ ಅಲ್ಪ ಹಿನ್ನಡೆಯಲ್ಲಿದೆ. ಆದರೆ, ದೀರ್ಘಾವಧಿಯಲ್ಲಿ ಮಾರುಕಟ್ಟೆ ಬೆಳವಣಿಗೆ ಉತ್ತಮವಾಗಿರುತ್ತದೆ. ಅಂತೆಯೇ, ಮ್ಯೂಚುವಲ್ ಫಂಡ್ಗಳೂ ಕೂಡ ದೀರ್ಘಾವಧಿಯಲ್ಲಿ ಸ್ಥಿರವಾಗಿ ರಿಟರ್ನ್ಸ್ ತರಬಲ್ಲುವು. ಕೆನರಾ ರೊಬೇಕೊ ಲಾರ್ಜ್ ಅಂಡ್ ಮಿಡ್ಕ್ಯಾಪ್ ಫಂಡ್ (Canara Robeco Large and Mid Cap Fund) ಇದಕ್ಕೆ ಉತ್ತಮ ಉದಾಹರಣೆ. ಈ ಫಂಡ್ ಆರಂಭವಾಗಿ 21 ವರ್ಷ ಪೂರ್ಣವಾಗಿದೆ. 2005ರ ಮಾರ್ಚ್ 11ರಂದು ಶುರುವಾದ ಈ ಸ್ಕೀಮ್ನಲ್ಲಿ ಈಗ ಇರುವ ಒಟ್ಟು ಹೂಡಿಕೆ ಹತ್ತಿರಹತ್ತಿರ 25,000…