‘45’ ಸಿನಿಮಾ ವಿಮರ್ಶೆ; ಅರ್ಜುನ್ ಜನ್ಯ ಮ್ಯಾಜಿಕ್​​ನಲ್ಲಿ ‘ಶಿವ’ತಾಂಡವ; – Kannada News | 45 Film Review: Raj B Shetty, Upendra and Shivrajkumar Shine in Arjun Janya’s Directorial Debut

ಅರ್ಜುನ್ ಜನ್ಯ ಅವರು ಇಷ್ಟು ವರ್ಷಗಳ ಕಾಲ ಮ್ಯೂಸಿಕ್ ಲೋಕದಲ್ಲಿ ಗಮನ ಸೆಳೆದವರು. ಅವರು ಈಗ ‘45’ ಸಿನಿಮಾನ ನಿರ್ದೇಶನ ಮಾಡಿದ್ದಾರೆ. ಮೊದಲ ಚಿತ್ರ ಎಂದರೆ ದೊಡ್ಡ ಚಾಲೆಂಜ್ ಇರುತ್ತದೆ. ಈ ಚಾಲೆಂಜ್ ಮಧ್ಯೆ ಅರ್ಜುನ್ ಅವರು ಮಲ್ಟಿ ಸ್ಟಾರರ್ ಸಿನಿಮಾ ಹಾಗೂ ಬಿಗ್ ಬಜೆಟ್​ನ ಆಯ್ಕೆ ಮಾಡಿಕೊಂಡಿದ್ದಾರೆ. ಗ್ರಾಫಿಕ್ಸ್ ಕೆಲಸ ಕೂಡ ಬಹುವಾಗಿರೋ ‘45’ ಚಿತ್ರದ ವಿಮರ್ಶೆ ಇಲ್ಲಿದೆ.

ವಿನಯ್ (ರಾಜ್ ಬಿ ಶೆಟ್ಟಿ) ಓರ್ವ ಸಾಮಾನ್ಯ ಐಟಿ ಉದ್ಯೋಗಿ. ನಿತ್ಯ ಕಚೇರಿ ಹೋಗಿ ಬರುವ ಕಾಯಕ ಅವನದ್ದು. ತಾಯಿ ಹಾಗೂ ಪ್ರೀತಿಸಿದಾಕೆ ಆತನ ಪ್ರಪಂಚ. ಈ ಪ್ರಪಂಚದ ಒಳಗೆ ರಾಯಪ್ಪ (ಉಪೇಂದ್ರ) ಹಾಗೂ ಶಿವಪ್ಪನ (ಶಿವರಾಜ್​​ಕುಮಾರ್) ಆಗಮನ ಆಗುತ್ತದೆ. ಒಂದು ಕನಸಿನಿಂದ ಜೀವನ ಕಲಸು ಮೇಲೋಗರ ಆಗುತ್ತದೆ. ನಿಜ ಯಾವುದು-ಸುಳ್ಯಾವುದು ಎಂದು ಅರ್ಥೈಸಿಕೊಳ್ಳಲು ಆತ ವಿಫಲನಾಗುತ್ತಾನೆ. ಅಲ್ಲಿಂದ ಆತನ ಒದ್ದಾಟ ಶುರು. 45 ದಿನಗಳ ಆಟ ಕೂಡ ಶುರುವಾಗುತ್ತದೆ. ಅಲ್ಲಿ ರಾಯಪ್ಪ-ಶಿವಪ್ಪ ಹೇಗೆ ಬರುತ್ತಾರೆ? ಏಕೆ ಬರುತ್ತಾರೆ ಎಂದೆಲ್ಲ ಹೇಳುತ್ತಾ ಹೋದರೆ ಸಿನಿಮಾದ ಸ್ವಾದ ಉಳಿದುಕೊಳ್ಳುವುದಿಲ್ಲ. ಅದನ್ನು ಥಿಯೇಟರ್​​ನಲ್ಲಿ ನೋಡಿಯೇ ಆನಂದಿಸಬೇಕು.

ಅರ್ಜುನ್ ಜನ್ಯಗೆ ಫುಲ್ ಮಾರ್ಕ್ಸ್

ಈವರೆಗೆ ಎಲ್ಲರೂ ಅರ್ಜುನ್ ಜನ್ಯ ಅವರನ್ನು ಮ್ಯೂಸಿಕ್ ಡೈರೆಕ್ಟರ್ ಆಗಿ ಮಾತ್ರ ನೋಡಿದ್ದಾರೆ. ಅದ್ಭುತ ಮೆಲೋಡಿ ಹಾಡುಗಳನ್ನು ಅವರು ಚಿತ್ರರಂಗಕ್ಕೆ ನೀಡಿದ್ದಾರೆ. ತಮ್ಮಲ್ಲೊಬ್ಬ ಒಳ್ಳೆಯ ನಿರ್ದೇಶಕ ಇದ್ದಾನೆ ಎಂಬುದನ್ನು ‘45’ ಸಿನಿಮಾ ಮೂಲಕ ತೋರಿಸಿದ್ದಾರೆ. ಈ ಸಿನಿಮಾ ನೋಡಿದರೆ ಅರ್ಜುನ್ ಅವರು ಅದೆಷ್ಟೋ ವರ್ಷಗಳಿಂದ ತಮ್ಮಲ್ಲಿರುವ ನಿರ್ದೇಶಕನ ಪೋಷಿಸುತ್ತಾ ಬರುತ್ತಿದ್ದರೇನೋ ಎಂದನಿಸಿಬಿಡುತ್ತದೆ.

ಸಾವಿನ ಬಳಿಕದ ಮುಂದೇನು?

‘ಸಾವಿನ ಬಳಿಕ ಮುಂದೇನು?’ ಈ ರೀತಿಯ ಪ್ರಶ್ನೆ ಎಲ್ಲರಿಗೂ ಇರುತ್ತದೆ. ಇದಕ್ಕೆ ಅದರದ್ದೇ ಆದ ಉತ್ತರಗಳು ಸಿಗುತ್ತವೆ. ‘ಗರುಡ ಪುರಾಣ’ದ ಪ್ರತಿ ಪುಟ ತಿರುವು ಹಾಕಿದಾಗಲೂ ಹೊಸದೊಂದು ವಿಷಯ, ಜೀವನದ ಮತ್ತೊಂದು ರೂಪ ಗೊತ್ತಾಗುತ್ತದೆ. ಈ ವಿಷಯಗಳು ಸಿನಿಮಾದಲ್ಲೂ ಟ್ರಾವೆಲ್ ಆಗುತ್ತವೆ. ಗರುಡ ಪುರಾಣವನ್ನು ಸಿನಿಮಾ ಕಥೆಗೆ ಬ್ಲೆಂಡ್ ಮಾಡಿದ ಅರ್ಜುನ್ ಜನ್ಯ ಸ್ಟೈಲ್ ಇಷ್ಟ ಆಗುತ್ತದೆ.

ಇಲ್ಲಿ ಅರ್ಜುನ್ ಜನ್ಯ ಅವರು ಮತ್ತೊಂದು ತಂತ್ರಗಾರಿಕೆಯ ಬಗ್ಗೆ ಮಾತನಾಡಲೇಬೇಕು. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಈ ಮೊದಲಿನ ಕಲ್ಟ್ ಸಿನಿಮಾಗಳ ದೃಶ್ಯಗಳನ್ನು ರೀ ಕ್ರಿಯೇಟ್ ಮಾಡಿದ್ದಾರೆ. ಹೊಂದಿಕೆ ಆಗೋ ಹಳೆಯ ಹಾಡುಗಳು ದೃಶ್ಯದ ಸ್ವಾದ ಹೆಚ್ಚಿಸಿವೆ. ಗ್ರಾಫಿಕ್ಸ್ ವಿಷಯದಲ್ಲಿ ಎಲ್ಲಿಯೂ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ. ಸುಧಾರಾಣಿಯ ಪಾತ್ರದ ಅವಶ್ಯಕತೆ ಇರಲಿಲ್ಲ ಎಂದನಿಸದೇ ಇರದು.

ಉಪ್ಪಿ vs ರಾಜ್

ಮಧ್ಯಮ ವರ್ಗದ ವ್ಯಕ್ತಿಯಾಗಿ ವಿನಯ್​​ನ ಒದ್ದಾಟ, ಭಾವನಾತ್ಮಕವಾಗಿ ಸೆಳೆದುಕೊಳ್ಳುವ ರೀತಿ ಇಷ್ಟ ಆಗುತ್ತದೆ. ಆತನ ಅಸಹಾಯಕತೆ ನೋವು ತರಿಸುತ್ತದೆ. ಅವರು ನಟನೆಯಲ್ಲಿ ಹೆಚ್ಚು ಅಂಕ ಪಡೆಯುತ್ತಾರೆ. ಅವರ ಈ ಹಿಂದಿನ ಸಿನಿಮಾಗಳ ಪಾತ್ರಗಳು ಇಲ್ಲಿ ಬಂದು ಹೋಗುತ್ತವೆ. ಇನ್ನು ರಾಯಪ್ಪನ ಪಾತ್ರದಲ್ಲಿ ಉಪ್ಪಿ ತಮ್ಮ ಖದರ ತೋರಿಸಿದ್ದಾರೆ. ಸಿಗಾರ್ ಸೇದುವ ಸ್ಟೈಲ್, ಹೇರ್ ಸ್ಟೈಲ್, ಭಿನ್ನ ಉಡುಗೆ, ಚಿತ್ರ-ವಿಚಿತ್ರ ವಾಹನಗಳು ಅವರ ಮ್ಯಾನರಿಸಂಗೆ ಹೊಸ ಖದರ್ ನೀಡಿದೆ. ಕಣ್ಣಿನ ಮೂಲಕವೇ ಅವರು ಮಾತನಾಡುತ್ತಾರೆ. ಕೆಲ ದೃಶ್ಯಗಳಲ್ಲಿ ರಾಕ್ಷಸನ ರೀತಿ ಕಾಣಿಸುತ್ತಾರೆ. ಸಿನಿಮಾ ಉದ್ದಕ್ಕೂ ಉಪ್ಪಿ vs ರಾಜ್ ಎಂಬಂತಾಗುತ್ತದೆ.

ಶಿವಣ್ಣನ ಮೇಲುಗೈ

ಶಿವರಾಜ್​​ಕುಮಾರ್ ಶಿವಪ್ಪ ಪಾತ್ರ ಸಿನಿಮಾ ಮೆರಗು ಹೆಚ್ಚಿಸಿದೆ. ಅವರು ಇಡೀ ಚಿತ್ರಕ್ಕೆ ಬೇರೆಯದೇ ತೂಕ ಕೊಡುತ್ತಾರೆ. ಲೇಟ್​ ಆಗಿ ಎಂಟ್ರಿ ಕೊಟ್ಟರೂ ಪ್ರೇಕ್ಷಕರ ಮನಸ್ಸಿನಲ್ಲಿ ಹಾಗೆಯೇ ಆವರಿಸಿಕೊಂಡು ಬಿಡುತ್ತಾರೆ ಅವರು. ಶಿವಣ್ಣ ತಮ್ಮ ನಟನೆ ಮೂಲಕ ಒಂದು ಹೆಜ್ಜೆ ಮೇಲೆ ಕಾಣಿಸಿಕೊಳ್ಳುತ್ತಾರೆ. ಇದು ಅವರ ಹೆಚ್ಚುಗಾರಿಕೆ. ಅವರು ಚಿತ್ರದಲ್ಲಿ ವಿವಿಧ ಅವತಾರದಲ್ಲಿ ಕಾಣಿಸಿಕೊಳ್ಳುವುದರಿಂದ ಫ್ಯಾನ್ಸ್​​ಗೆ ಹಬ್ಬ ಫಿಕ್ಸ್. ಅದರಲ್ಲೂ ಕೊನೆಯಲ್ಲಿ ಬರೋ ಶಿವತಾಂಡವ ಹೊಸ ಗುಂಗು ಹತ್ತಿಸುತ್ತದೆ.

ಲಾರಿಯಲ್ಲಿ ಬೈಕ್ ಚೇಸಿಂಗ್ ದೃಶ್ಯ, ಮಾರುಕಟ್ಟೆ ಮೇಲಿನ ದಾಳಿ ಹಾಗೂ ಸಿನಿಮಾದ ಕೊನೆಯ 45 ನಿಮಿಷ ಮನರಂಜನೆಯ ರಸದೌತಣ ಬಡಿಸುತ್ತದೆ. ಸಿನಿಮಾದ ಬಿಜಿಎಂ ಅಲ್ಲಿ ಅರ್ಜುನ್ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಳ್ಳುತ್ತಾರೆ. ಇನ್ನು ಈ ಚಿತ್ರದಲ್ಲಿ ಲಾಜಿಕ್​​ಗೆ ಜಾಗವಿಲ್ಲ. ಇಲ್ಲಿ ಎಲ್ಲವೂ ಅರ್ಜುನ್ ಜನ್ಯ ಮ್ಯಾಜಿಕ್ ಮಾತ್ರ. ಕೆಲವೊಂದು ಡಾಟ್​​​ಗಳನ್ನು ಕೂಡಿಸದೇ ಸಿನಿಮಾ ನೋಡಿದರೆ ಇಷ್ಟ ಆಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಪ್ಲಿಕೇಶನ್‌ಗಳಲ್ಲಿ ಉಚಿತ ಚಲನಚಿತ್ರ ವೀಕ್ಷಿಸುವ ಅಭ್ಯಾಸ ಇದೆಯಾ? ಈಗಲೇ ನಿಲ್ಲಿಸಿ – Kannada News | PikaShow Warning: Free Movies Risk Data Breach, Cyber Attacks and Legal Action

ಇಂದಿನ ಜನರಿಗೆ ಎಲ್ಲವೂ ಫ್ರೀ.. ಫ್ರೀ ಇರಬೇಕು. ಎಲ್ಲಿ ಉಚಿತ ಇರುತ್ತದೆ ಅಲ್ಲಿ ಜನ ಮೊದಲು, ಆದರೆ ಈ ಫ್ರೀಯಿಂದ ದೊಡ್ಡ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಅದರಲ್ಲೂ ಈ ಯುವಕರು ಹೆಚ್ಚು ಅಪಾಯಕ್ಕೆ ಸಿಲುಕಿಕೊಳ್ಳುತ್ತಿರುವ ಪ್ರಕರಣಗಳು ಕಂಡು ಬರುತ್ತಿದೆ. ಇಂದಿನ ಯುವಕರಿಗೆ ಮೂವಿ ನೋಡುವ ಹುಚ್ಚು ಹೆಚ್ಚು. ಹೊಸ ಹೊಸ ಸಿನಿಮಾ (free movie apps) ಬಂದರೆ ಅದನ್ನು ಥಿಯೇಟರ್​​ಗಿಂತ ಮೊಬೈಲ್​ನಲ್ಲಿ ನೋಡುವವರೇ ಹೆಚ್ಚು. ಅದಕ್ಕಾಗಿ ಬೇರೆ ಬೇರೆ ಅಪ್ಲಿಕೇಶನ್‌ ಡೌನ್​​ ಲೋಡ್​​ ಮಾಡಿಕೊಳ್ಳುತ್ತಾರೆ. ಆದರೆ ಇದರಿಂದ ದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ. ವರದಿಗಳ ಪ್ರಕಾರ, ಅನೇಕ ಮೊಬೈಲ್ ಬಳಕೆದಾರರು ಉಚಿತವಾಗಿ ಚಲನಚಿತ್ರಗಳನ್ನು ವೀಕ್ಷಿಸಲು ಪಿಕಾಶೋನಂತಹ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಆದರೆ ಇದರಿಂದ ವೈಯಕ್ತಿಕ ಡೇಟಾಗಳು ಶೇರ್​​ ಆಗುತ್ತದೆ ಎಂಬ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ.

ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ದೋಸ್ತ್ I4C ಎಂಬ ಸಂಸ್ಥೆಯು ಉಚಿತ ಚಲನಚಿತ್ರಗಳನ್ನು ನೋಡುವ ಆ್ಯಪ್​​​​​ಗಳು ಅಪಾಯಕಾರಿ ಮತ್ತು ನಿಮ್ಮನ್ನು ಕಾನೂನು ತೊಂದರೆಗೆ ಸಿಲುಕಿಸಬಹುದು ಎಂದು ಎಚ್ಚರಿಸಿದೆ.ಈ ಬಗ್ಗೆ ಸೈಬರ್ ದೋಸ್ತ್ I4C ಎಕ್ಸ್‌ನಲ್ಲಿ ಹೀಗೆ ಪೋಸ್ಟ್ ಮಾಡಿದೆ. ಉಚಿತ ಚಲನಚಿತ್ರಗಳ ಕುರಿತು ಮಾಹಿತಿ ಮತ್ತು ಭದ್ರತೆ ಸಂಬಂಧಿಸಿದ ಒಂದು ಪ್ರಕಟನೆಯನ್ನು ನೀಡಿದೆ. ಅಪರಿಚಿತ ಅಪ್ಲಿಕೇಶನ್ ಅಥವಾ ಗೊತ್ತಿಲ್ಲದ ಅಪ್ಲಿಕೇಶನ್​​ಗಳಲ್ಲಿ ಪೈರೇಟೆಡ್ ಕಂಟೆಂಟ್‌ನ ವಿವರಗಳು ಮತ್ತು ಸೈಬರ್ ಅಪಾಯಗಳು ಮತ್ತು ಕಾನೂನು ತೊಂದರೆಗಳು ಇವೆ. ಉಚಿತ ಚಲನಚಿತ್ರಗಳ ದುರಾಸೆಯಿಂದ ನಿಮ್ಮ ಡೇಟಾ ಮತ್ತು ಸುರಕ್ಷತೆಯನ್ನು ಅಪಾಯಕ್ಕೆ ದೂಡಬೇಡಿ. ಅಪರಿಚಿತ ಅಪ್ಲಿಕೇಶನ್‌ಗಳಿಂದ ಪೈರೇಟೆಡ್ ವಿಷಯವನ್ನು ವೀಕ್ಷಿಸುವುದರಿಂದ ನಿಮ್ಮನ್ನು ಸೈಬರ್ ಅಪಾಯ ಮತ್ತು ಕಾನೂನು ತೊಂದರೆಗೆ ಸಿಲುಕಿಸಬಹುದು.

ಇದನ್ನೂ ಓದಿ:ನಿಮಗೂ ಗೂಗಲ್, ಯೂಟ್ಯೂಬ್ ಪೇಜ್ ಲೋಡ್ ಆಗುತ್ತಿಲ್ಲವೇ?

ಈ ಅಪ್ಲಿಕೇಶನ್‌ಗಳು ಸುರಕ್ಷಿತವಲ್ಲ:

ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸೈಬರ್ ದೋಸ್ತ್, ಪಿಕಾಶೋ ಅಪ್ಲಿಕೇಶನ್‌ನಂತಹ ಪೈರೇಟೆಡ್ ಚಲನಚಿತ್ರಗಳನ್ನು ಒದಗಿಸುವ ಅಪ್ಲಿಕೇಶನ್‌ಗಳು ಸುರಕ್ಷಿತವಾಗಿಲ್ಲ ಎಂದು ಹೇಳಿದೆ. ಲಕ್ಷಾಂತರ ಬಳಕೆದಾರರು ಅದನ್ನು ಬಳಸುವ ಮೂಲಕ ತಮ್ಮ ಡೇಟಾವನ್ನು ಅಪಾಯಕ್ಕೆ ಸಿಲುಕಿಕೊಳ್ಳುತ್ತುದ್ದಾರೆ ಎಂದು ಹೇಳಿದೆ. ಉಚಿತ ಚಲನಚಿತ್ರಗಳನ್ನು ಒದಗಿಸುವ ಅಪ್ಲಿಕೇಶನ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೌನ್​​ಲೋಡ್​ ಮಾಡಿದ ನಂತರ ನಿಮ್ಮ ಸಾಧನದಲ್ಲಿ ಮಾಲ್‌ವೇರ್ ಮತ್ತು ಸ್ಪೈವೇರ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳುವ ಸಾಧ್ಯತೆಗಳು ಇದೆ ಎಂದು ಸೈಬರ್ ದೋಸ್ತ್ I4C ಹೇಳಿದೆ. ಇದನ್ನು ಇನ್ಸ್ಟಾಲ್​​ ಮಾಡಿದ ನಂತರ ಲಾಗಿನ್ ಐಡಿಗಳು ಮತ್ತು ಪಾಸ್‌ವರ್ಡ್‌ಗಳು ಸೇರಿದಂತೆ ನಿಮ್ಮ ಬ್ಯಾಂಕಿಂಗ್ ಮಾಹಿತಿಯನ್ನು ಪ್ರವೇಶಿಸಬಹುದು ಮತ್ತು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ. ಇದರ ಜತೆಗೆ ಸರ್ಕಾರ ಕೂಡ ನಕಲಿ ಚಲನಚಿತ್ರಗಳ ಅಪ್ಲಿಕೇಶನ್​​ಗಳನ್ನು ಡೌನ್​​​ಲೋಡ್​​ ಮಾಡಿಕೊಂಡರೆ ಕಾನೂನು ಕ್ರಮತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

​​

Published On – 12:49 pm, Wed, 24 December 25

Source link

Video: ಅಂತರ ಕಾಯ್ದುಕೊಳ್ಳಿ, ಇಎಂಐ ಬಾಕಿ ಇದೆ; ಕಾರಿನ ಹಿಂಬದಿಯ ಬರಹ ವೈರಲ್ – Kannada News | Keep your distance, EMI is pending; Man warns other motorists

ಮಂಗಳೂರು, ಡಿಸೆಂಬರ್ 24: ಆಟೋ, ಬೈಕ್ (bike) ಸೇರಿದಂತೆ ಕಾರಿನ ಹಿಂಭಾಗದಲ್ಲಿ ಪ್ರೀತಿ ಪಾತ್ರದ ಹೆಸರು, ಕೆಲವರು ತಂದೆ ತಾಯಿಯ ಆಶೀರ್ವಾದ, ಕೈಕೊಟ್ಟ ಪ್ರೇಮಿಯ ನೆನಪಿನಲ್ಲಿ ಕೆಲ ಸಾಲುಗಳನ್ನು ಬರೆದಿರುವುದನ್ನು ನೋಡಿರುತ್ತಿರುತ್ತೀರಿ. ಇಂತಹ ಸಾಲುಗಳನ್ನು ನೋಡಿದಾಗ ತುಟಿಯಂಚಿನಲ್ಲಿ ಸದ್ದಿಲ್ಲದೇ ನಗು ಮೂಡುತ್ತದೆ. ಇದೀಗ ಇಂತಹದ್ದೇ ಕಾರಿನ ಹಿಂಭಾಗದಲ್ಲಿ ಬರೆದ ಸಾಲುಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ. ಮಂಗಳೂರಿನ (Manglore) ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಚಲಿಸುತ್ತಿರುವ ಮಾರುತಿ ಸುಜುಕಿ ಆಲ್ಟೋ ಕಾರ್‌ನ ಹಿಂಭಾಗದಲ್ಲಿ ಬರೆದ ಸಾಲುಗಳು ಉಳಿದ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಂತಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ ಕ್ರಿಡಿಬಲ್ ಮಂಗಳೂರು (incrediblemangloree) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಿಂಬದಿ ವಾಹನ ಸವಾರರು ಮಾರುತಿ ಸುಜುಕಿ ಆಲ್ಟೋ ಕಾರಿನ ಹಿಂಭಾಗದಲ್ಲಿ ಬರೆಯಲಾದ ಸಾಲುಗಳನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಕಾರಿನ ಹಿಂಭಾಗದಲ್ಲಿ ಅಂತರ ಕಾಯ್ದುಕೊಳ್ಳಿ…ಇಎಂಐ ಬಾಕಿ ಇದೆ ಎಂದು ಬರೆದಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ದೇವ್ರು ಕಣ್ಬಿಟ್ರೆ ಆನಂದ, ಮನುಷ್ಯ ಕಣ್ಬಟ್ರೆ ಗೋವಿಂದ; ಆಟೋ ಹಿಂಬದಿ ಬರೆದ ಸಾಲುಗಳು ವೈರಲ್

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಪಾಪ ಈ ವಾಹನಕ್ಕೆ ಗುದ್ದುವ ಮುನ್ನ ಜೋಕೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ತನ್ನ ಕಾರಿಗೆ ಏನಾದರೂ ಸಮಸ್ಯೆಯಾದಲ್ಲಿ ಸಾಲಕ್ಕೆ ನೀವೇ ಹೊಣೆಗಾರರು ಎಂಬಂತಿದೆ ಈ ಸಾಲು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ವ್ಯಕ್ತಿಯ ನೋವು ಕಾರಿನ ಹಿಂಭಾಗದ ಬರಹವೇ ಹೇಳುತ್ತಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿಗೆ ಲೋಕಾಯುಕ್ತ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತು ಇದೆ ಗೊತ್ತೇ? – Kannada News | Lokayukta Raids Close Aide of Karnataka Minister Zameer Ahmed Khan Over Disproportionate Assets Allegations

ಬೆಂಗಳೂರು, ಡಿಸೆಂಬರ್ 24: ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಜ್ ಖಾನ್ ನಿವಾಸ ಸೇರಿದಂತೆ ಹತ್ತು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಈ ದಾಳಿ ನಡೆದಿದೆ. ಬೆಂಗಳೂರಿನ ಹಲಸೂರು ನಿವಾಸ, ಇತರ ಆರು ಮನೆಗಳು ಸೇರಿದಂತೆ ಒಟ್ಟು ಏಳು ಮನೆಗಳು, ಕೊಡಗಿನಲ್ಲಿರುವ ಎರಡು ಕಾಫಿ ಎಸ್ಟೇಟ್‌ಗಳು ಮತ್ತು ಹೆಚ್.ಡಿ.ಕೋಟೆಯಲ್ಲಿನ ಒಂದು ರೆಸಾರ್ಟ್ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಸರ್ದಾರ್ ಸರ್ಫರಾಜ್ ಖಾನ್ ವಸತಿ ಇಲಾಖೆಗೆ ನಿಯೋಜನೆಗೊಂಡಿರುವ ಅಧಿಕಾರಿಯಾಗಿದ್ದು, ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳ್ಳಂಬೆಳಿಗ್ಗೆ 50ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ದಾಳಿಯನ್ನು ನಡೆಸಿದ್ದಾರೆ. ಎಲ್ಲಾ 10 ಸ್ಥಳಗಳಲ್ಲಿ ದಾಖಲೆಗಳ ಪರಿಶೀಲನೆ ಮತ್ತು ಆಸ್ತಿ ವಿವರಗಳ ಸಂಗ್ರಹ ಕಾರ್ಯ ಮುಂದುವರೆದಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Money Plant Vastu: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ – Kannada News | Money Plant Vastu: Place a Coin for Wealth and Prosperity Tips

ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಅನ್ನು ಅತ್ಯಂತ ಶುಭ ಸಸ್ಯವೆಂದು ಪರಿಗಣಿಸಲಾಗುತ್ತದೆ. ಇದನ್ನು ಸಂಪತ್ತನ್ನು ಆಕರ್ಷಿಸುವ ಸಸ್ಯ ಎಂದೂ ಹೇಳಲಾಗುತ್ತದೆ. ಮನಿ ಪ್ಲಾಂಟ್ ಗಿಡದ ಬುಡದಲ್ಲಿ ಒಂದು ರೂಪಾಯಿ ಅಥವಾ ಯಾವುದೇ ನಾಣ್ಯವನ್ನು ಇಡುವುದರಿಂದ ಅದರ ಸಕಾರಾತ್ಮಕ ಪರಿಣಾಮಗಳು ಹಲವು ಪಟ್ಟು ಹೆಚ್ಚಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರವು ತಿಳಿಸುತ್ತದೆ.

ಮನಿ ಪ್ಲಾಂಟ್‌ನ ಬುಡದಲ್ಲಿ ನಾಣ್ಯವನ್ನು ಹೂತಿಟ್ಟರೆ, ಅದು ಹಣದ ಆಕರ್ಷಣೆಯನ್ನು ವೇಗಗೊಳಿಸುತ್ತದೆ ಎಂಬ ನಂಬಿಕೆಯಿದೆ. ನಾಣ್ಯವು ಸ್ವತಃ ಸಂಪತ್ತಿನ ಸಂಕೇತವಾಗಿದ್ದು, ಮನಿ ಪ್ಲಾಂಟ್ ಜೊತೆಗೆ ಅದರ ಸಂಬಂಧವು ಹಣದ ಹರಿವಿಗೆ ಹೊಸ ಅವಕಾಶಗಳು ಮತ್ತು ಮಾರ್ಗಗಳನ್ನು ತೆರೆಯುತ್ತದೆ ಎಂದು ಹೇಳಲಾಗುತ್ತದೆ.

ಜ್ಯೋತಿಷ್ಯದ ಪ್ರಕಾರ, ಮನಿ ಪ್ಲಾಂಟ್ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಸಂಬಂಧಿಸಿದ ಸಸ್ಯವಾಗಿದೆ. ಈ ಗಿಡದ ಬುಡದಲ್ಲಿ ನಾಣ್ಯವನ್ನು ಇಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ವ್ಯಕ್ತಿಗೆ ದೊರೆಯುತ್ತದೆ ಎಂದು ನಂಬಲಾಗುತ್ತದೆ. ಇದರ ಪರಿಣಾಮವಾಗಿ ಮನೆಯಲ್ಲಿ ಸಂಪತ್ತು, ಸಮೃದ್ಧಿ ಮತ್ತು ಧನಸಂಪಾದನೆಯಲ್ಲಿ ಸ್ಥಿರತೆ ಇರುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಯಾವುದೇ ವ್ಯಕ್ತಿ ಸಾಲದ ಹೊರೆಯಿಂದ ಬಳಲುತ್ತಿದ್ದರೆ ಅಥವಾ ನಿರಂತರ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಮನಿ ಪ್ಲಾಂಟ್‌ನಲ್ಲಿ ನಾಣ್ಯವನ್ನು ಇಡುವುದು ಉಪಯುಕ್ತ ಪರಿಹಾರವೆಂದು ಪರಿಗಣಿಸಲಾಗುತ್ತದೆ. ಈ ವಾಸ್ತು ಪರಿಹಾರವು ಆರ್ಥಿಕ ಸಂಕಷ್ಟಗಳು ಮತ್ತು ಸಾಲ ಸಮಸ್ಯೆಗಳನ್ನು ಕ್ರಮೇಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಮನಿ ಪ್ಲಾಂಟ್ ಉತ್ತಮವಾಗಿ ಬೆಳೆದಂತೆ, ಮನೆಯ ಆದಾಯವೂ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. ಗಿಡದ ಬುಡದಲ್ಲಿ ನಾಣ್ಯವನ್ನು ಇಡುವುದರಿಂದ ವೃತ್ತಿ, ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರದಲ್ಲಿ ವೇಗವಾದ ಪ್ರಗತಿ ಮತ್ತು ಯಶಸ್ಸು ದೊರೆಯುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಗನ್ ಹುಟ್ಟುಹಬ್ಬದಂದು ಪಟಾಕಿ ಹೊಡಿಬೇಡಿ ಎಂದಿದ್ದಕ್ಕೆ ಗರ್ಭಿಣಿ ಹೊಟ್ಟೆಗೆ ಒದ್ದ ವ್ಯಕ್ತಿ – Kannada News | Pregnant Woman Allegedly Assaulted After Objecting to Fireworks at Birthday Event

ಆಂಧ್ರಪ್ರದೇಶ, ಡಿಸೆಂಬರ್ 24: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್ ಜಗನ್​ಮೋಹನ್ ರೆಡ್ಡಿ ಹುಟ್ಟುಹಬ್ಬದ ದಿನ ತಾನು ಗರ್ಭಿಣಿ(Pregnant) ದಯವಿಟ್ಟು ಹೆಚ್ಚು ಪಟಾಕಿ ಹೊಡೆಯಬೇಡಿ ಎಂದು ಕೇಳಿಕೊಂಡಿದ್ದಕ್ಕೆ ವೈಎಸ್​ಆರ್ ಕಾಂಗ್ರೆಸ್​ನ ಕಾರ್ಯಕರ್ತ ಅಜಯ್ ದೇವ್ ಎಂಬಾತ ಮಹಿಳೆಯ ಒದ್ದಿರುವ ಘಟನೆ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ನಡೆದಿದೆ. ಸಾರ್ವಜನಿಕರ ಆಕ್ರೋಶದ ನಂತರ ಬಲವಾದ ಕ್ರಮವಾಗಿ, ಆಂಧ್ರಪ್ರದೇಶದಲ್ಲಿ ಪೊಲೀಸರು ಮಂಗಳವಾರ ಗರ್ಭಿಣಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಮೆರವಣಿಗೆ ಮಾಡಿದರು.

ಡಿಸೆಂಬರ್ 21 ರಂದು ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿತ್ತು.
ಶ್ರೀ ಸತ್ಯಸಾಯಿ ಜಿಲ್ಲೆಯ ಕದಿರಿ ಪಟ್ಟಣದ ಆರ್‌ಟಿಸಿ ಬಸ್ ನಿಲ್ದಾಣ ವೃತ್ತದಿಂದ ಗ್ರಾಮೀಣ ಪೊಲೀಸ್ ಠಾಣೆಯವರೆಗೆ ಸಾರ್ವಜನಿಕರ ಸಮ್ಮುಖದಲ್ಲಿ ಪೊಲೀಸರು ಪ್ರಮುಖ ಆರೋಪಿ ಅಜಯ್ ದೇವನನ್ನು ಮೆರವಣಿಗೆ ಮಾಡಿದರು.

ಅಜಯ್ ದೇವನನ್ನು ಬರಿಗಾಲಿನಲ್ಲಿ ನಡೆಯುವಂತೆ ಮಾಡಲಾಗಿತ್ತು. ಸಂಧ್ಯಾರಾಣಿ ಎಂಬುವವರು ಇಲ್ಲಿ ಹೆಚ್ಚು ಜನ ಸಂದಣಿ ಇದೆ ಸ್ವಲ್ಪ ದೂರದಲ್ಲಿ ಪಟಾಕಿ ಸಿಡಿಸಿ ಎಂದು ಮನವಿ ಮಾಡಿಕೊಂಡಿದ್ದಕ್ಕೆ ಕೋಪಗೊಂಡು ಆತ ಆಕೆಯ ಮೇಲೆ ಹಲ್ಲೆ ನಡೆಸಿದ್ದ.

ಮತ್ತಷ್ಟು ಓದಿ: 7 ತಿಂಗಳ ಗರ್ಭಿಣಿ ಹತ್ಯೆ ಪ್ರಕರಣ: ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು

ವೈಎಸ್‌ಆರ್‌ಸಿಪಿ ಕಾರ್ಯಕರ್ತ ಅಂಜಿನಪ್ಪ ಜೊತೆ ಸೇರಿ, ಆಕೆಯ ಕತ್ತು ಹಿಸುಕಿ ಕೊಂದು, ಆಕೆಯ ಗರ್ಭದಲ್ಲಿರುವ ಮಗುವಿಗೆ ಹಾನಿ ಮಾಡುವ ಉದ್ದೇಶದಿಂದ ಹೊಟ್ಟೆಗೆ ಒದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಜಯ್ ದೇವಾ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರಸ್ತುತ ತಲೆಮರೆಸಿಕೊಂಡಿರುವ ಎರಡನೇ ಆರೋಪಿ ಅಂಜಿನಪ್ಪನನ್ನು ಪತ್ತೆಹಚ್ಚಿ ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ.ಈ ಹಲ್ಲೆಯನ್ನು ಸ್ಪಷ್ಟ ಕ್ರಿಮಿನಲ್ ಉದ್ದೇಶದಿಂದ ನಡೆಸಲಾಗಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಕದಿರಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಶಿವ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಚಂದ್ರಬಾಬು ನಾಯ್ಡು ನೇತೃತ್ವದ ಸಮ್ಮಿಶ್ರ ಸರ್ಕಾರದ ಆಳ್ವಿಕೆಯಲ್ಲಿ ಆಂಧ್ರಪ್ರದೇಶ ಮಹಿಳೆಯರಿಗೆ ಅಸುರಕ್ಷಿತವಾಗಿದೆ ಎಂದು ವೈಎಸ್‌ಆರ್‌ಸಿಪಿ ಆರೋಪಿಸಿದ ನಂತರ ಈ ಘಟನೆ ನಡೆದಿದೆ. ಸರ್ಕಾರವು ನಾಗರಿಕರನ್ನು ರಕ್ಷಿಸುವ ಬದಲು ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಪೊಲೀಸ್ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್ – Kannada News | Anjanadri Temple Clash: Fight Between Two Swamijis Inside Hanuman Sanctum, Video Goes Viral

ಕೊಪ್ಪಳ, ಡಿಸೆಂಬರ್ 24: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಇಬ್ಬರು ಸ್ವಾಮೀಜಿಗಳ ನಡುವೆ ಭಾರೀ ಗಲಾಟೆ ನಡೆದಿದೆ. ಆಂಜನೇಯ ಸ್ವಾಮಿಯ ಗರ್ಭಗುಡಿಯಲ್ಲಿಯೇ ಸ್ವಾಮೀಜಿಗಳ ಮಧ್ಯೆ ಮಾತಿನ ಚಕಮಕಿ ಆರಂಭವಾಗಿ ಬಳಿಕ ಹೊಡೆದಾಟದ ಮಟ್ಟಕ್ಕೆ ತಲುಪಿದೆ. ದೇವಸ್ಥಾನದ ಪೂಜಾ ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಅರ್ಚಕ ವಿದ್ಯಾದಾಸ ಬಾಬಾ ಸ್ವಾಮೀಜಿ, ಹಂಪಿಯ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪೂಜಾ ಸಮಯದಲ್ಲಿ ಅವಾಚ್ಯ ಪದ ಬಳಸಿ ನಿಂದನೆ ಮಾಡಲಾಗಿದೆ ಎಂದು ವಿದ್ಯಾದಾಸ ಬಾಬಾ ಆರೋಪಿಸಿದ್ದಾರೆ.

ಇಬ್ಬರ ನಡುವೆ ವಾಗ್ವಾದ ತೀವ್ರಗೊಂಡಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರ ಸಮ್ಮುಖದಲ್ಲಿಯೇ ಇಬ್ಬರು ಸ್ವಾಮೀಜಿಗಳು ಹೊಡೆದಾಡಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.

ಈ ಘಟನೆಯ ಹಿನ್ನೆಲೆಯಲ್ಲಿ ವಿದ್ಯಾದಾಸ ಬಾಬಾ ಸ್ವಾಮೀಜಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪೂಜಾ ಕಾರ್ಯಕ್ಕೆ ಅಡ್ಡಿಪಡಿಸಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ! – Kannada News | Bengaluru Petrol Attack: A man set a mother on fire for not getting her daughter married to him!

ಬೆಂಗಳೂರು, ಡಿಸೆಂಬರ್ 24: ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಯುವತಿಯ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೀಕರ ಘಟನೆ ಬೆಂಗಳೂರಿನ ಬಸವೇಶ್ವರನಗರದ ಭೋವಿ ಕಾಲೋನಿಯಲ್ಲಿ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಗೀತಾ ಎಂದು ಗುರುತಿಸಲಾಗಿದ್ದು, ಆರೋಪಿಯ ಹೆಸರು ಮುತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಗೀತಾ ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದು, ಮುತ್ತು ಎಂಬ ಯುವಕ ಅದೇ ಪ್ರದೇಶದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿದ್ದ.

ಒಬ್ಬರಿಗೊಬ್ಬರು ಪರಿಚಯವಾದ ಬಳಿಕ, ಗೀತಾ, ಆಕೆಯ 19 ವರ್ಷದ ಮಗಳು ಹಾಗೂ ಮುತ್ತು ಒಂದೇ ಮನೆಯಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಯುವತಿಯನ್ನು ಮದುವೆ ಮಾಡಿಕೊಡುವಂತೆ ಮುತ್ತು ಗೀತಾಳ ಮೇಲೆ ಒತ್ತಡ ಹೇರುತ್ತಿದ್ದ ಎಂದು ಆರೋಪಿಸಲಾಗಿದೆ. ಆದರೆ ಗೀತಾ ಇದಕ್ಕೆ ಸ್ಪಷ್ಟವಾಗಿ ನಿರಾಕರಿಸಿದ್ದಕ್ಕೆ ಕೋಪಗೊಂಡ ಯುವಕ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಘಟನೆ ನಂತರ ಆರೋಪಿ ಪರಾರಿಯಾಗಿದ್ದು, ತೀವ್ರವಾಗಿ ಗಾಯಗೊಂಡ ಗೀತಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದರ್ಶನ್ ಸಿಂಹ ಎಂದ ಧನ್ವೀರ್​ಗೆ ಟಾಂಗ್ ಕೊಟ್ಟ ವಿನಯ್ ಗೌಡ – Kannada News | Vinay Gowda share post in support of Sudeep

ದರ್ಶನ್ (Darshan) ಮತ್ತು ಸುದೀಪ್ ಅಭಿಮಾನಿಗಳ ಮಧ್ಯೆ ವರ್ಷಗಳಿಂದಲೂ ಫ್ಯಾನ್ಸ್ ವಾರ್ ನಡೆಯುತ್ತಲೇ ಇದೆ. ಆದರೆ ಸುದೀಪ್ ಇದಕ್ಕೆಲ್ಲ ಹೆಚ್ಚು ಪ್ರತಿಕ್ರಿಯಿಸುತ್ತಿರಲಿಲ್ಲ. ಆದರೆ ತಮ್ಮ ಸಿನಿಮಾಕ್ಕೆ ಬೆದರಿಕೆಗಳು ಬಂದಾಗ ಪರೋಕ್ಷವಾಗಿ ಸುದೀಪ್ ಅವರು ಎಚ್ಚರಿಕೆ ನೀಡಿದರು. ಸುದೀಪ್ ಅವರ ಸಣ್ಣ ಹೇಳಿಕೆಯನ್ನೇ ದೊಡ್ಡದು ಮಾಡಿ ಇದೀಗ ಫ್ಯಾನ್ಸ್​​ಗಳ ಜೊತೆಗೆ ದರ್ಶನ್ ಆಪ್ತರು ಸಹ ಅಖಾಡಕ್ಕಿಳಿದು ಫ್ಯಾನ್ಸ್ ವಾರ್ ಬೆಂಕಿಗೆ ತುಪ್ಪ ಸುರಿದಿದ್ದಾರೆ. ದರ್ಶನ್ ಅವರ ಪರಮಾಪ್ತ ಧನ್ವೀರ್ ಗೌಡ, ‘ಕಾಡಿನಲ್ಲಿ ಸಾಕಷ್ಟು ಪ್ರಾಣಿಗಳಿರುತ್ತವೆ, ಆದರೆ ಸಿಂಹ ಮಾತ್ರವೇ ಕಾಡಿನ ರಾಜ’ ಎಂದು ಪೋಸ್ಟ್ ಹಂಚಿಕೊಂಡಿದ್ದರು. ಧನ್ವೀರ್ ಅವರ ಈ ಪೋಸ್ಟ್ ಸುದೀಪ್ ಅವರ ಬಗ್ಗೆಯೇ ಎಂಬುದು ಎಂಥವರಿಗೂ ಅರ್ಥವಾಗುವಂತಿತ್ತು, ಇದೀಗ ಧನ್ವೀರ್​​ಗೆ ಟಾಂಗ್ ಕೊಟ್ಟಿದ್ದಾರೆ ಸುದೀಪ್ ಆಪ್ತ ವಿನಯ್ ಗೌಡ.

ವಿನಯ್ ಗೌಡ ಅವರು, ಧನ್ವೀರ್ ಅವರ ಪೋಸ್ಟ್​​ಗೆ ಎದುರಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಕಾಡಿನ ರಾಜ ಸಿಂಹ ಎಂಬುದು ಗೊತ್ತು, ಆದರೆ ಆ ಸಿಂಹ ಸುದೀಪ್’ ಎಂದಿದ್ದಾರೆ. ಆ ಮೂಲಕ ದರ್ಶನ್ ಅನ್ನು ಸಿಂಹವೆಂದಿದ್ದ ಧನ್ವೀರ್​​ಗೆ ನೇರವಾಗಿ ಕೌಂಟರ್ ಕೊಟ್ಟಿದ್ದಾರೆ ವಿನಯ್ ಗೌಡ. ಆ ಮೂಲಕ ಸುದೀಪ್ ಪರವಾಗಿ ನಿಂತಿದ್ದಾರೆ ವಿನಯ್ ಗೌಡ.

ಅಸಲಿಗೆ ವಿನಯ್ ಗೌಡ ಅವರು, ದರ್ಶನ್ ನಟಿಸಿರುವ ‘ಡೆವಿಲ್’ ಸಿನಿಮಾನಲ್ಲಿ ನಟಿಸಿದ್ದರು. ಆದರೆ ಸಿನಿಮಾದ ಪ್ರಚಾರಕ್ಕೆ ಅವರು ಹೋಗಿರಲಿಲ್ಲ. ಚಿತ್ರತಂಡದ ಜೊತೆಗೆ ವಿಶೇಷವಾಗಿ ದರ್ಶನ್ ಜೊತೆಗಿನ ಮನಸ್ಥಾಪವೇ ಇದಕ್ಕೆ ಕಾರಣ ಎಂಬ ಮಾತುಗಳು ಸಹ ಅಲ್ಲಲ್ಲಿ ಕೇಳಿ ಬಂದಿತ್ತು. ಆದರೆ ಖಾಸಗಿ ಕಾರಣಕ್ಕಾಗಿ ತಾವು ಪ್ರಚಾರಕ್ಕೆ ಹೋಗಿಲ್ಲ ಎಂದು ವಿನಯ್ ಹೇಳಿಕೊಂಡಿದ್ದರು. ಸೂಕ್ಷ್ಮವಾಗಿ ಗಮನಿಸಿದರೆ ವಿನಯ್ ಗೌಡ ಅವರು ತಮ್ಮ ಇನ್​​ಸ್ಟಾಗ್ರಾಂನಲ್ಲಿ ‘ಡೆವಿಲ್’ ಸಿನಿಮಾ ಕುರಿತಾಗಿ ಒಂದೇ ಒಂದು ಪೋಸ್ಟ್ ಸಹ ಹಂಚಿಕೊಂಡಿಲ್ಲ.

ಇದನ್ನೂ ಓದಿ:‘ಈ ಹಿಂದೆ ದರ್ಶನ್ ಬಗ್ಗೆ ಕೆಟ್ಟದ್ದು ಮಾತನಾಡಿದ್ರೆ ತೋರಿಸಲಿ’; ಕಿಚ್ಚ ಸುದೀಪ್ ಸವಾಲು

‘ಡೆವಿಲ್’ ಸಿನಿಮಾ ತಂಡ ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆಯೂ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದ ವಿನಯ್ ಗೌಡ, ‘ನಾನು ಪೇಯ್ಡ್ ಆಕ್ಟರ್, ಸಂಭಾವನೆ ಕೊಟ್ಟರು ನಟಿಸಿದ್ದೀನಿ. ‘ಡೆವಿಲ್’ ಸಿನಿಮಾನಲ್ಲಿ ನನಗೆ ಎಷ್ಟು ಸ್ಕೋಪ್ ಇದೆ ಎಂದು ಎಲ್ಲರೂ ನೋಡಿದ್ದಾರೆ. ಬುಕ್​​ ಮೈ ಶೋನಲ್ಲಿ ‘ಡೆವಿಲ್’ ಸಿನಿಮಾದಲ್ಲಿ ನಟಿಸಿರುವ ಎಲ್ಲರ ಹೆಸರಿದೆ, ಆದರೆ ನನ್ನ ಹೆಸರಿಲ್ಲ. ಇನ್ನು ದರ್ಶನ್ ಅವರ ಬಗ್ಗೆ ನಾನು ಮಾತನಾಡಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಮಾತನಾಡಬಾರದು ಎಂದೇ ನಾನು ಮಾತನಾಡಿಲ್ಲ. ನಾನು ಮಾತನಾಡಿ ಅವರಿಗೆ ಕಾನೂನಾತ್ಮಕವಾಗಿ ಏನಾದರೂ ಸಮಸ್ಯೆ ಆಗುವುದು ಸರಿಯಲ್ಲ ಎಂದು ಸುಮ್ಮನಿದ್ದೇನೆ’ ಎಂದಿದ್ದಾರೆ ವಿನಯ್ ಗೌಡ.

ವಿನಯ್ ಗೌಡ ಅವರು, ಸುದೀಪ್ ಅವರ ಆಪ್ತರಲ್ಲಿ ಒಬ್ಬರು. ಬಿಗ್​​ಬಾಸ್ ಸ್ಪರ್ಧಿಯಾಗಿದ್ದ ವಿನಯ್ ಅವರು ಅಲ್ಲಿ ಸುದೀಪ್ ಅವರ ಗೆಳೆತನ ಗಳಿಸಿದರು. ಇದೀಗ ಸುದೀಪ್ ವಿರುದ್ಧ ಕೆಲವರು ವಿನಾಕಾರಣ ಪೋಸ್ಟ್​​ಗಗಳನ್ನು ಹಂಚಿಕೊಳ್ಳುತ್ತಿರುವಾಗ ಸಹಜವಾಗಿಯೇ ವಿನಯ್ ಅವರು ಸುದೀಪ್ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:36 am, Wed, 24 December 25

Source link

ಎಲ್ಲರೂ ನಂಗೆ ಅಭಿಮಾನಿಗಳು; ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ – Kannada News | Sadhu Kokila, Not ready to Talk About Fans War

ಕನ್ನಡ ಚಿತ್ರರಂಗದಲ್ಲಿ ಫ್ಯಾನ್ ವಾರ್ ಬಗ್ಗೆ ಚರ್ಚೆ ನಡೆಯುತ್ತಿರುವುದು ತಿಳಿದೇ ಇದೆ. ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳು ಸಾಕಷ್ಟು ಕಿತ್ತಾಡಿಕೊಳ್ಳುತ್ತಿರುವುದನ್ನು ನೋವು ನೋಡಿರಬಹುದು. ಈ ಬಗ್ಗೆ ಸಾಧು ಕೋಕಿಲಗೆ ಪ್ರಶ್ನೆ ಮಾಡಲಾಯಿತು. ಎಲ್ಲಾ ಸ್ಟಾರ್​​ಸ್​​ಗಳ ಫ್ಯಾನ್ಸ್ ನನಗೆ ಅಭಿಮಾನಿಗಳು. ಹೀಗಾಗಿ, ನಾನು ಈ ಬಗ್ಗೆ ಮಾತನಾಡುವುದೇ ಇಲ್ಲ ಎಂದಿದ್ದಾರೆ ಸಾಧು. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version