ಯುಗಾದಿ ಭವಿಷ್ಯ 2026 ರ ಪ್ರಕಾರ, ವೃಷಭ ರಾಶಿಯವರಿಗೆ ಈ ವರ್ಷ ಸ್ಥಿರತೆ ಮತ್ತು ಬೆಳವಣಿಗೆಯನ್ನು ತರಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತುತಜ್ಞ ವೇದಬ್ರಹ್ಮ ಶ್ರೀ ಕೆ. ವೆಂಕಟೇಶ್ ಶರ್ಮಾ ಗುರೂಜಿ ಅವರು ವಿವರವಾದ ಭವಿಷ್ಯ ನುಡಿದಿದ್ದಾರೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಯಶಸ್ಸು ನಿಧಾನವಾಗಿ ಆದರೆ ಖಚಿತವಾಗಿ ಸಿಗಲಿದೆ. ಹಣಕಾಸು ಉಳಿತಾಯಕ್ಕೆ ಇದು ಉತ್ತಮ ಸಮಯವಾಗಿದ್ದು, ಉತ್ತಮ ಸಂಪಾದನೆ ಇರುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿ ನೆಲಸಲಿದೆ. ತಂದೆ-ತಾಯಿಗಳ ಸೇವೆ ಮಾಡಿದಷ್ಟು ಪುಣ್ಯ ಈ ರಾಶಿಯವರಿಗೆ ಲಭಿಸಲಿದೆ ಎಂದು ಕೆ. ವೆಂಕಟೇಶ್ ಶರ್ಮಾ ಅವರು ತಿಳಿಸಿದ್ದಾರೆ.
ಗ್ರಹಗಳ ಸ್ಥಾನವನ್ನು ಗಮನಿಸಿದರೆ, ಎರಡನೇ ಗುರು ಹಣಕಾಸು ವಿಷಯದಲ್ಲಿ ಅನುಕೂಲವನ್ನು ತಂದರೆ, ನಾಲ್ಕನೇ ಕೇತು ವಿರೋಧಗಳನ್ನು ತರಬಹುದು. ಇದಕ್ಕೆ ಗಣಪತಿ ಆರಾಧನೆ ಸೂಕ್ತ. ಐದನೇ ಚಂದ್ರ ಉಸಿರಾಟ ಮತ್ತು ಶೀತಕ್ಕೆ ಸಂಬಂಧಿಸಿದ ಕೆಲವು ಆರೋಗ್ಯ ಸಮಸ್ಯೆಗಳನ್ನು ನೀಡಬಹುದು; ಓಂ ನಮಃ ಶಿವಾಯ ಜಪವು ಇದಕ್ಕೆ ಪರಿಹಾರವಾಗಿದೆ. ಹತ್ತನೇ ಬುಧ ಲಕ್ಷ್ಮೀಕರನಾಗಿದ್ದಾನೆ. ಹತ್ತನೇ ರಾಹು ಹಣಕಾಸು ನಷ್ಟದ ಭಯವನ್ನು ನೀಡಬಹುದು, ಇದಕ್ಕೆ ಸುಬ್ರಹ್ಮಣ್ಯ, ಈಶ್ವರ ಅಥವಾ ಲಕ್ಷ್ಮೀನರಸಿಂಹ ಆರಾಧನೆ ಮತ್ತು ದಾನ ಉತ್ತಮ ಫಲ ನೀಡುತ್ತದೆ. ಹನ್ನೊಂದರಲ್ಲಿ ರವಿ, ಕುಜ, ಶನಿ ಶುಭ ವೃದ್ಧಿ ಮತ್ತು ದ್ರವ್ಯ ಲಾಭವನ್ನು ನೀಡಿದರೆ, ಹನ್ನೆರಡರಲ್ಲಿ ಶುಕ್ರ ಶುಭ ಲಾಭವನ್ನು ತರಲಿದ್ದಾನೆ. ಆಗ್ನೇಯ ದಿಕ್ಕು ಶುಭವಾಗಿದ್ದು, 5, 6, 8 ಶುಭ ಸಂಖ್ಯೆಗಳು, ಬಿಳಿ, ಹಸಿರು, ಕಪ್ಪು ಶುಭ ಬಣ್ಣಗಳಾಗಿವೆ. ನಿರ್ದಿಷ್ಟ ಶುಭ ದಿನಾಂಕಗಳಲ್ಲಿ ಕೈಗೊಂಡ ಕಾರ್ಯಗಳು ಯಶಸ್ಸನ್ನು ತರುತ್ತವೆ.
ವಾಷಿಂಗ್ಟನ್, ಮಾರ್ಚ್ 19: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ತನ್ನ ಬಡ್ಡಿದರದಲ್ಲಿ (US Fed Reserve Rates) ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಈಗಿರುವ ಶೇ. 3.50-3.75 ಶ್ರೇಣಿಯಲ್ಲಿ ಬಡ್ಡಿದರ ಮುಂದುವರಿಸುವ ನಿರ್ಧಾರ ಮಾಡಿದೆ. ಫೆಡರಲ್ ರಿಸರ್ವ್ನ ಛೇರ್ಮನ್ ಜಿರೋಮ್ ಪೋವೆಲ್ ನೇತೃತ್ವದಲ್ಲಿ ನಡೆದ ಎಫ್ಒಎಂಸಿ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಆದರೆ, ಗಮನಾರ್ಹ ಅಂಶವೆಂದರೆ, ಬಡ್ಡಿದರ ಹೆಚ್ಚಳ ಸಾಧ್ಯತೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಮುಂಬರುವ ದಿನಗಳಲ್ಲಿ ಬಡ್ಡಿದರ ಕಡಿಮೆ ಆಗುವ ಸುಳಿವನ್ನು ಈ ಸಭೆಯಲ್ಲಿ ಕೊಡಲಾಗಿದೆ.
ಆದರೆ, ಬಡ್ಡಿದರ ಕಡಿಮೆ ಆದರೂ ಸತತವಾಗಿ ಆಗುವುದಿಲ್ಲ ಎನ್ನಲಾಗಿದೆ. ಈ ವರ್ಷ ಒಮ್ಮೆ ಮಾತ್ರವೇ ಬಡ್ಡಿ ದರ ಕಡಿಮೆ ಮಾಡಬಹುದು. ಶೇ. 3.25-3.50 ಶ್ರೇಣಿಗೆ ಬಡ್ಡಿದರ ಇಳಿಯಬಹುದು. ಮುಂದಿನ ವರ್ಷ, ಅಂದರೆ 2027ಕ್ಕೆ ಬಡ್ಡಿ ಶೇ. 3.1ಕ್ಕೆ ಇಳಿಯಬಹುದು. ಅದಾಗಿ ಕೆಲ ವರ್ಷಗಳವರೆಗೂ ಬಡ್ಡಿದರ ಶೇ. 3ರ ಆಸುಪಾಸಿನಲ್ಲೇ ಇರಬಹುದು ಎನ್ನುವ ಸುಳಿವನ್ನು ಫೆಡರಲ್ ರಿಸರ್ವ್ ಕೊಟ್ಟಿದೆ. ಅಂದರೆ, ಮುಂದಿನ ಐದಾರು ವರ್ಷಗಳಲ್ಲಿ ಬಹಳ ನಿಧಾನಗತಿಯಲ್ಲಿ ಬಡ್ಡಿದರ ಇಳಿಸುವ ಪ್ಲಾನ್ ಫೆಡರಲ್ ರಿಸರ್ವ್ನದ್ದು.
ಹಣದುಬ್ಬರವು ಸೆಂಟ್ರಲ್ ಬ್ಯಾಂಕ್ ನಿರೀಕ್ಷೆಮೀರಿ ಹೆಚ್ಚಲಿದೆ
ಫೆಡರಲ್ ರಿಸರ್ವ್ ಸಭೆಯಲ್ಲಿ ಹಣದುಬ್ಬರದ ಬಗ್ಗೆ ಅಂದಾಜು ಪರಿಷ್ಕರಣೆ ಮಾಡಲಾಗಿದೆ. ಈ ಹಿಂದೆ ಮಾಡಿದ್ದ ಅಂದಾಜಿಗಿಂತ ಹಣದುಬ್ಬರ ಹೆಚ್ಚಿರಬಹುದು ಎಂದು ಹೇಳಲಾಗಿದೆ. ಸಭೆಯಲ್ಲಿ ಬಂದಿರುವ ಅಭಿಪ್ರಾಯದ ಪ್ರಕಾರ 2026ರಲ್ಲಿ ವೈಯಕ್ತಿಕ ಅನುಭೋಗ ವೆಚ್ಚ ಅಥವಾ ಪಿಸಿಇ ಆಧಾರಿತ ಹಣದುಬ್ಬರ ಶೇ. 2.7ರಷ್ಟು ಇರಬಹುದು. ಹಿಂದೆ ಮಾಡಲಾಗಿದ್ದ ಅಂದಾಜು ಪ್ರಕಾರ 2026ರಲ್ಲಿ ಶೇ 2.4ರಷ್ಟು ಹಣದುಬ್ಬರ ದರ ಇರಬಹುದು ಎನ್ನಲಾಗಿತ್ತು.
ಈ ಹಣದುಬ್ಬರ ಏರಿಕೆ 2026ರ ವರ್ಷಕ್ಕೆ ಮಾತ್ರ ಸೀಮಿತವಾಗಬಹುದು. ಮುಂದಿನ ವರ್ಷಗಳಲ್ಲಿ ನಿಧಾನಗತಿಯಲ್ಲಿ ಬೆಲೆ ಏರಿಕೆ ಪ್ರಮಾಣ ತಗ್ಗಬಹುದು. 2028ರಲ್ಲಿ ಫೆಡರಲ್ ರಿಸರ್ವ್ನ ಹಣದುಬ್ಬರ ಗುರಿಯಾದ ಶೇ. 2ರ ಮಟ್ಟವನ್ನು ತಲುಪುವ ನಿರೀಕ್ಷೆ ಇದೆ.
ಇನ್ನು, ಅಮೆರಿಕದ ಜಿಡಿಪಿ ಬೆಳವಣಿಗೆ ಬಗ್ಗೆಯೂ ಫೆಡರಲ್ ರಿಸರ್ವ್ ಅಂದಾಜು ಮಾಡಿದೆ. ಕಳೆದ ಬಾರಿಯ ಸಭೆಯಲ್ಲಿ 2026ರಲ್ಲಿ ಜಿಡಿಪಿ ಶೇ. 2.3ರಷ್ಟು ಹೆಚ್ಚಬಹುದು ಎನ್ನಲಾಗಿತ್ತು. ಈಗ ಅದರ ನಿರೀಕ್ಷೆಯನ್ನು ಶೇ. 2.4ಕ್ಕೆ ಏರಿಸಿದೆ. 2027ರಲ್ಲಿ ಶೇ. 2.3 ಮತ್ತು 2028ರಲ್ಲಿ ಶೇ. 2.1ರಷ್ಟು ಜಿಡಿಪಿ ಬೆಳವಣಿಗೆ ದರ ಇರಬಹುದು ಎಂದಿದೆ. ದೀರ್ಘಾವಧಿಯಲ್ಲಿ ಅಮೆರಿಕದ ಆರ್ಥಿಕ ಬೆಳವಣಿಗೆ ದರ ಶೇ. 2.0-1.8ರ ಶ್ರೇಣಯಲ್ಲಿ ಇರಬಹುದು ಎಂದು ಫೆಡರಲ್ ರಿಸರ್ವ್ ಅಂದಾಜಿಸಿದೆ.
ಪುಟಾಣಿ ಮಕ್ಕಳು (little kids) ಏನು ಮಾಡಿದ್ರು ನೋಡೋಕೆ ಚಂದ. ಈ ಪುಟಾಣಿ ತೊದಲು ನುಡಿಗಳನ್ನು ಕೇಳುವುದು ಇನ್ನು ಚಂದ. ಅಮ್ಮ ಏನಾದ್ರೂ ಬೈದರೆ, ಹೊಡೆದರೆ ಅಪ್ಪನ ಬಳಿ ಹೋಗಿ ದೂರು ಹೇಳುವುದನ್ನು ನೀವು ನೋಡಿರುತ್ತೀರಿ. ಆದರೆ ಈ ಪುಟಾಣಿ ಮಾತ್ರ ಹಾಗೆ ಮಾಡಿಲ್ಲ. ಅಮ್ಮ ಬೈದರೆಂದು ದೇವರ ಮುಂದೆ ಅಳುತ್ತಾ ಅಮ್ಮನ ಬಗ್ಗೆ ದೂರು ಹೇಳಿದೆ. ಈ ಮುದ್ದಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮುಗ್ಧತೆ ಕರಗಿ ಹೋಗಿದ್ದಾರೆ.
Lavkush Yadav Baba Nam ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿ ಅಮ್ಮ ಬೈದದ್ದಂತಿದೆ. ಇದರಿಂದ ಬೇಸರಗೊಂಡ ಪುಟ್ಟ ಕಂದಮ್ಮ ದೇವರ ಮುಂದೆ ಅಳುತ್ತಾ ಅಮ್ಮನ ಬಗ್ಗೆ ಕಂಪ್ಲೇಂಟ್ ಮಾಡಿರುವುದನ್ನು ನೀವು ನೋಡಬಹುದು. ಅಮ್ಮನತ್ತ ಕೈ ತೋರಿಸಿ ದೇವರ ಮುಂದೆ ದೂರು ಹೇಳುತ್ತಿರುವಂತಿದೆ ಈ ದೃಶ್ಯ.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಪುಟಾಣಿಯ ದೂರು ಕೇಳಿ ದೇವ್ರು ಖಂಡಿತ ನಕ್ಕಿರುತ್ತಾರೆ ಎಂದಿದ್ದಾರೆ. ಇನ್ನೊಬ್ಬರು, ಮುಗ್ಧತೆ ಅಂದ್ರೆ ಇದೇ ಅಲ್ಲವೇ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ವರ್ಷ ರಂಜಾನ್ ಸಂದರ್ಭದಲ್ಲಿ ದಳಪತಿ ವಿಜಯ್ ಅವರು ಇಫ್ತಾರ್ ಕೂಟದಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರ ವಿರುದ್ಧ ದೂರು ದಾಖಲಾಗಿತ್ತು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಬಾರಿಯೂ ವಿಜಯ್ ಅವರು ಇಫ್ತಾರ್ ಕೂಟದಲ್ಲಿ ಭಾಗಿ ಆಗಿದ್ದಾರೆ. ಆದರೆ, ವಿವಾದಿಂದ ದೂರ ಇರಲು ಅವರು ಕೆಲ ತಂತ್ರಗಳನ್ನು ಬಳಸಿದ್ದಾರೆ.
ಮಮಲ್ಲಪುರಂನಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಿತ್ತು. ಹೋಟೆಲ್ ಒಂದರಲ್ಲಿ ಬುಧವಾರ ಸಂಜೆ ಆರು ಗಂಟೆಯಿಂದ 9 ಗಂಟೆವರೆಗೆ ಈ ಕಾರ್ಯಕ್ರಮ ನೆರವೇರಿತ್ತು. ಈ ಕೂಟದಲ್ಲಿ ಕೇವಲ ಆಮಂತ್ರಣ ನೀಡಿದವರು ಮಾತ್ರ ಭಾಗಿ ಆಗಲು ಅವಕಾಶ ಇತ್ತು. ತಮಿಳುನಾಡಿನಾದ್ಯಂತದಿಂದ 1 ಸಾವಿರ ಜನರಿಗೆ ಮಾತ್ರ ಆಮಂತ್ರಣಕೊಡಲಾಗಿತ್ತು. ಆಮಂತ್ರಣ ಇಲ್ಲದೆ ಬರುವವರಿಗೆ ಆಹ್ವಾನ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಲಾಗಿತ್ತು.
ಚುನಾವಣಾ ಸಮಯ ಮತ್ತು ಈಗ ಜಾರಿಯಲ್ಲಿರುವ ನೀತಿ ಸಂಹಿತೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗದ ಪೂರ್ವಾನುಮತಿ ಪಡೆದು ಈ ಸಭೆಯನ್ನು ಆಯೋಜಿಸಲಾಗಿದೆ ಎಂದು ಟಿವಿಕೆ ಸ್ಪಷ್ಟಪಡಿಸಿದೆ. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ವಿಜಯ್ ಅವರ ಪ್ರಚಾರ ಸಭೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಹೀಗಾಗಿ, ಯಾವುದೇ ವಿವಾದ ಆದರೂ ಅದು ಅವರಿಗೆ ಹಿನ್ನಡೆ ತರುತ್ತದೆ. ಅದರಿಂದ ತಪ್ಪಿಸಿಕೊಳ್ಳು ಅವರು ಮುಂಜಾಗೃತ ಕ್ರಮ ಕೈಗೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಇಫ್ತಾರ್ ಕೂಟದಲ್ಲಿ ಭಾಗಿಯಾದ ದಳಪತಿ ವಿಜಯ್: ವಿಡಿಯೋ
ಕಳೆದ ವರ್ಷ ಆಯೋಜನೆ ಮಾಡಿದ ಇಫ್ತಾರ್ ಕೂಟ ವಿವಾದದಲ್ಲಿ ಅಂತ್ಯವಾಯ್ತು. ವಿಜಯ್ ಅವರು ಮುಸ್ಲಿಂ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂತು. ಇದರಿಂದ ವಿಜಯ್ ಪಾಠಗಳನ್ನು ಕಲಿತಂತೆ ಕಾಣುತ್ತದೆ. 2025ರ ಇಫ್ತಾರ್ ಕೂಟಕ್ಕೂ ಮೊದಲು ವಿಜಯ್ ದಿನವಿಡೀ ಉಪವಾಸ ಮಾಡಿದ್ದರು. ಉಪವಾಸ ಪೂರ್ಣಗೊಳಿಸುವ ಮೊದಲು ಪ್ರಾರ್ಥನೆ ಸಲ್ಲಿಸುವುದನ್ನು ತೋರಿಸಿದ್ದಕ್ಕಾಗಿ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದ್ದರೂ, ತಮಿಳುನಾಡು ಸುನ್ನತ್ ಜಮಾತ್ ಚೆನ್ನೈ ಪೊಲೀಸ್ ಆಯುಕ್ತರಿಗೆ ಕಾರ್ಯಕ್ರಮವನ್ನು ಸರಿಯಾಗಿ ನಿರ್ವಹಿಸಲಾಗಿಲ್ಲ, ಪಾವಿತ್ರ್ಯವನ್ನು ಅಗೌರವಿಸಿದೆ ಎಂದು ಆರೋಪಿಸಿ ದೂರು ನೀಡಿದರು. ನಂತರ ಉತ್ತರ ಪ್ರದೇಶದ ಬರೇಲಿಯಲ್ಲಿರುವ ಸುನ್ನಿ ಮುಸ್ಲಿಂ ಸಂಸ್ಥೆಯು ವಿಜಯ್ ಅವರ ವಿರುದ್ಧ ಫತ್ವಾ ಹೊರಡಿಸಿತು. ಆ ಸಮಯದಲ್ಲಿ ವಿಜಯ್ ಯಾವುದಕ್ಕೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಲಿಲ್ಲ.
ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ಹೊಸ ಸೀಸನ್ಗೆ ತಯಾರಿ ನಡೆಸಲು ಮಾರ್ಚ್ 18 ರಂದು ಆರ್ಸಿಬಿ ತಂಡದ ಶಿಬಿರ ಆರಂಭವಾಗಿದೆ. ತಂಡದ ಆಟಗಾರರು ಶಿಬಿರಕ್ಕೆ ಮರಳಿರುವ ಚಿತ್ರವನ್ನು ಎಕ್ಸ್ ಖಾತೆಯಲ್ಲಿ ಆರ್ಸಿಬಿ ಹಂಚಿಕೊಂಡಿದೆ.
ಮಾರ್ಚ್ 18, ಬುಧವಾರ ತಂಡವನ್ನು ಸೇರಿಕೊಂಡ ಕಿಂಗ್ ಕೊಹ್ಲಿ ಮೊದಲ ತರಬೇತಿ ಅವಧಿಯಲ್ಲಿ ಭಾಗವಹಿಸಿದರು. ವಿರಾಟ್ ಕೊಹ್ಲಿ ನೆಟ್ಸ್ನಲ್ಲಿ ಭಾಗವಹಿಸಿರುವುದು ಅವರ ಅಭಿಮಾನಿಗಳಿಗೆ ಖುಷಿಕೊಟ್ಟಿದ್ದು, ಐಪಿಎಲ್ ಮೊದಲ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.
ಕೊಹ್ಲಿ ತಂಡ ಸೇರಿರುವ ಕೆಲವು ಫೋಟೋಗಳನ್ನು ಆರ್ಸಿಬಿಯು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದೆ. ಇವುಗಳಲ್ಲಿ ಕೊಹ್ಲಿ ಸಂಪೂರ್ಣವಾಗಿ ಬದಲಾದಂತೆ ಕಾಣುತ್ತಿರುವುದನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
ಕೊಹ್ಲಿ ಅವರ ಕೇಶವಿನ್ಯಾಸದಲ್ಲಿನ ಬದಲಾವಣೆ ಅಭಿಮಾನಿಗಳನ್ನು ಅಚ್ಚರಿಗೊಳಿಸಿತು. ಅವರ ಹೇರ್ಸ್ಟೈಲ್ ಮೊದಲಿಗಿಂತ ಸಂಪೂರ್ಣವಾಗಿ ಭಿನ್ನವಾಗಿ ಕಾಣಿಸಿದೆ. ಇದು ಅಭಿಮಾನಿಗಳನ್ನು ಅಚ್ಚರಿಗೊಳಿಸಿತು. ಕೊಹ್ಲಿ ಹೊಸ ಲುಕ್ನ ಫೋಟೊ ಇಲ್ಲಿದೆ ನೋಡಿ. ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿವೆ.
ಕಳೆದ 2 ಐಪಿಎಲ್ ಸೀಸನ್ಗಳಲ್ಲಿ ಕೊಹ್ಲಿ ಅವರಿಂದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮೂಡಿಬಂದಿತ್ತು. ತಂಡ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವುದಕ್ಕೂ ಕೊಹ್ಲಿ ಬ್ಯಾಟಿಂಗ್ ನೆರವಾಗಿತ್ತು. ಇದೀಗ, ಅವರ ಹೇರ್ಸ್ಟೈಲ್ ಏನೇ ಇರಲಿ, ಈ ಬಾರಿಯೂ ಅವರ ಬ್ಯಾಟ್ನಿಂದ ರನ್ ಹೊಳೆ ಹರಿಯಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ಮಾರ್ಚ್ 28ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡಗಳು ಮುಖಾಮುಖಿಯಾಗಲಿವೆ. ಕೊಹ್ಲಿ ಬ್ಯಾಟಿಂಗ್ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಗರಿಗೆದರಿದೆ.
ಯುಗಯುಗಾಂತರಗಳಿಂದ ಯುಗಾದಿ ಹಬ್ಬವು ತನ್ನದೇ ಆದ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ಪ್ರತಿಯೊಂದು ಹಬ್ಬದಂತೆ ಯುಗಾದಿಯೂ ತನ್ನ ವಿಶಿಷ್ಟತೆಯನ್ನು ಹೊಂದಿದೆ, ವಿಶೇಷವಾಗಿ ಬೇವು ಬೆಲ್ಲದ ಸೇವನೆಯ ಮೂಲಕ. ಈ ಬಗ್ಗೆ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಆಯುರ್ವೇದದ ದೃಷ್ಟಿಯಿಂದ ಬೇವು ಮತ್ತು ಬೆಲ್ಲ ಎರಡೂ ಆರೋಗ್ಯ ಮತ್ತು ಶಕ್ತಿವರ್ಧಕಗಳಾಗಿವೆ. ಬೇವಿನು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಸಹಕಾರಿ. ಬೆಲ್ಲವೂ ಸಹ ಶಕ್ತಿ ಮತ್ತು ಆರೋಗ್ಯವನ್ನು ಒದಗಿಸುತ್ತದೆ.
ಜೀವನದ ಸಾಂಕೇತಿಕ ಅರ್ಥದಲ್ಲಿ ಬೇವು ಕಷ್ಟಗಳು ಮತ್ತು ದುಃಖವನ್ನು ಪ್ರತಿನಿಧಿಸಿದರೆ, ಬೆಲ್ಲವು ಸುಖ, ಸಂತೋಷ ಮತ್ತು ಅದೃಷ್ಟವನ್ನು ಸೂಚಿಸುತ್ತದೆ. “ಬೇವು ಬೆಲ್ಲ ಎರಡನ್ನೂ ಸವಿದವ ಕವಿ ಮಲ್ಲ” ಎಂಬ ಮಾತಿದೆ, ಇದು ಜೀವನದ ಕಹಿ-ಸಿಹಿ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವಿಕೆಯ ಮಹತ್ವವನ್ನು ಒತ್ತಿಹೇಳುತ್ತದೆ. ಹಿಂದೂ ಸಂಪ್ರದಾಯದಲ್ಲಿ ಹೊಸ ವರ್ಷದ ಆರಂಭದಲ್ಲಿ ಬೇವು ಬೆಲ್ಲವನ್ನು ಸೇವಿಸುವುದು ಆ ವರ್ಷವಿಡೀ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕೇತವಾಗಿದೆ.
ಹೊಸ ವರ್ಷದಂದು ಬೇವು ಬೆಲ್ಲ ಸೇವನೆಯು ವೈಜ್ಞಾನಿಕ ಮಹತ್ವವನ್ನೂ ಹೊಂದಿದೆ. ಚೈತ್ರ ಮಾಸದಲ್ಲಿ ಸೂರ್ಯನು ಭೂಮಿಯ ಸಮೀಪದಲ್ಲಿ ಇರುವುದರಿಂದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ಈ ಸಮಯದಲ್ಲಿ ಬೇವು ಬೆಲ್ಲವನ್ನು ಸೇವಿಸುವುದರಿಂದ ದೇಹದ ಉಷ್ಣತೆ ಸಮತೋಲನಗೊಂಡು, ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ದೇಹವನ್ನು ನಿಶಕ್ತಿ ಮತ್ತು ಆರೋಗ್ಯದಲ್ಲಿನ ಏರುಪೇರುಗಳಿಂದ ರಕ್ಷಿಸುತ್ತದೆ. ಅಲ್ಲದೆ, ನಮ್ಮಲ್ಲಿರುವ ರಜೋಗುಣ, ತಮೋಗುಣ ಮತ್ತು ಸತ್ವಗುಣಗಳನ್ನು ಸಮತೋಲನಗೊಳಿಸಲು ಸಹಕಾರಿಯಾಗಿದೆ. ಚೈತ್ರ ಮಾಸದಲ್ಲಿ ಪ್ರಕೃತಿ ಹೊಸ ಚಿಗುರನ್ನು ಪಡೆಯುವಂತೆ, ಬೇವಿನ ಹೊಸ ಚಿಗುರಿನ ಜೊತೆ ಬೆಲ್ಲವನ್ನು ಸೇವಿಸುವುದರಿಂದ ನಮ್ಮ ದೇಹ, ಮನಸ್ಸು ಮತ್ತು ಸಂಕಲ್ಪಗಳು ಹೊಸ ಚೈತನ್ಯವನ್ನು ಪಡೆಯುತ್ತವೆ.
ಜ್ಯೋತಿಷ್ಯದ ದೃಷ್ಟಿಕೋನದಿಂದ ನೋಡಿದಾಗ, ಬೇವು ಮತ್ತು ಬೆಲ್ಲದ ಸೇವನೆಯು ಗ್ರಹಗಳ ಅನುಗ್ರಹಕ್ಕೆ ಕಾರಣವಾಗುತ್ತದೆ. ಬೆಲ್ಲವು ಹಳದಿ ಬಣ್ಣವನ್ನು ಮತ್ತು ಬೇವು ಹಸಿರು ಬಣ್ಣವನ್ನು ಪ್ರತಿನಿಧಿಸುವುದರಿಂದ, ಇವು ಗುರು ಮತ್ತು ಬುಧ ಗ್ರಹಗಳ ಅನುಗ್ರಹವನ್ನು ನೀಡುತ್ತವೆ ಎಂದು ನಂಬಲಾಗಿದೆ. ಇದು ಪಾಪ ಗ್ರಹಗಳ ಶಕ್ತಿಯನ್ನು, ಅವುಗಳ ಪ್ರಭಾವವನ್ನು ಮತ್ತು ಕರ್ಮಫಲಗಳನ್ನು ಕಡಿಮೆ ಮಾಡುತ್ತದೆ. ಬೇವಿನು ಮಧುಮೇಹ ರೋಗಿಗಳಿಗೆ ರಾಮಬಾಣವಿದ್ದಂತೆ. ಈ ಬೇವು ಬೆಲ್ಲವನ್ನು ಕೇವಲ ಒಂದು ದಿನವಲ್ಲದೆ, ಯುಗಾದಿ ವಾರವಿಡೀ ಸೇವಿಸುವುದರಿಂದ ಮತ್ತು ಇತರರಿಗೆ ಹಂಚುವುದರಿಂದ ವಿಶೇಷ ಫಲ ಸಿಗುತ್ತದೆ.
ಒಂದು ಶ್ಲೋಕ ಹೀಗೆ ಹೇಳುತ್ತದೆ: “ಶತಾಯುರ್ ವಜ್ರದೇಹಾಯ ಸರ್ವಸಂಪತ್ಕರಾಯಚ ಸರ್ವಾರಿಷ್ಟ ವಿನಾಶನಾಯ ನಿಂಬಕಂದಳ ಭಕ್ಷಣಂ”. ಇದರರ್ಥ, ಬೇವು ಬೆಲ್ಲ ಸೇವನೆಯು ನೂರು ವರ್ಷ ಆಯುಷ್ಯ, ವಜ್ರದಂತಹ ದೇಹ, ಸಕಲ ಸಂಪತ್ತು ಮತ್ತು ಎಲ್ಲಾ ಅರಿಷ್ಟಗಳ ವಿನಾಶಕ್ಕೆ ಕಾರಣವಾಗುತ್ತದೆ. ಇದರಿಂದ ಗ್ರಹ ಶಕ್ತಿಗಳು, ಗ್ರಹ ಕಾಟಗಳು ಕಡಿಮೆಯಾಗಿ, ಮನಸ್ಸಿನ ಆಲೋಚನೆಗಳು ಸುಧಾರಿಸಿ, ರೋಗನಿರೋಧಕ ಶಕ್ತಿ ಬೆಳೆಯುತ್ತದೆ. ರಾಹು, ಕೇತು, ಕುಜ ಮತ್ತು ಶನಿ ಗ್ರಹಗಳ ಕಾಟವೂ ಕಡಿಮೆಯಾಗುತ್ತದೆ.
ಕೊನೆಯದಾಗಿ, ಬೇವು ಬೆಲ್ಲ ಕೇವಲ ಸಾಂಪ್ರದಾಯಿಕ ಆಚರಣೆಯಲ್ಲ, ಬದಲಿಗೆ ಆರೋಗ್ಯವರ್ಧಕ, ಆಯುಷ್ಯ ವರ್ಧಕ ಮತ್ತು ಹೊಸ ವರ್ಷದ ಆರಂಭದಲ್ಲಿ ಸಕಾರಾತ್ಮಕ ಪ್ರಭಾವ ಬೀರುವ ಮಹತ್ವಪೂರ್ಣ ಅಂಶವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಮೇಶ್ ಅರವಿಂದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈಗ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ಅಭಿಮಾನಿಗಳ ಭವಿಷ್ಯ ಹೇಳೋದಾಗಿ ಹೇಳಿದ್ದಾರೆ. ಈ ವಿಡಿಯೋ ಹಂಚಿಕೊಳ್ಳೋಕೆ ಕಾರಣ ಯುಗಾದಿ. ಹಿಂದೂಗಳು ಯುಗಾದಿಯನ್ನು ಹೊಸ ವರ್ಷ ಎಂದು ಪರಿಗಣಿಸುತ್ತಾರೆ. ಹೀಗಾಗಿ, ವಿಡಿಯೋ ಮಾಡಿರೋ ರಮೇಶ್ ಅರವಿಂದ್, ಹೊಸ ವರ್ಷ ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತೆ ಎಂದಿದ್ದಾರೆ.
ದೆಹಲಿ, ಮಾ.19: ಚಾಂದ್ರಮಾನ ಯುಗಾದಿ ಮತ್ತು ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ವಸಂತ ಋತುವಿನ ಆಗಮನವು ಹೊಸ ಚೈತನ್ಯ ಮತ್ತು ಸಾಧ್ಯತೆಗಳನ್ನು ಹೊತ್ತು ತರಲಿ ಎಂದು ಅವರು ಹಾರೈಸಿದ್ದಾರೆ. “ಪವಿತ್ರ ಯುಗಾದಿಯ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸುಖಮಯ ಹೊಸ ವರ್ಷದ ಶುಭಾಶಯಗಳು” ಎಂದು ಪ್ರಧಾನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಸಂತ ಕಾಲದ ಹಸಿರು, ಹೂವುಗಳ ಸುಗಂಧ ಮತ್ತು ಹಣ್ಣುಗಳ ಆಗಮನವು ಹೊಸ ಶಕ್ತಿಯ ಸಂಕೇತವಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಯುಗಾದಿಯು ಹೊಸ ಕೃಷಿ ಚಟುವಟಿಕೆಗಳ ಆರಂಭದ ಕಾಲ. ಈ ಸಮಯದಲ್ಲಿ ನಮ್ಮ ದೇಶದ ಕಷ್ಟಜೀವಿ ರೈತರು ಹೊಸ ಆಶಾವಾದದೊಂದಿಗೆ ಮುಂದಿನ ಕೃಷಿ ಚಕ್ರಕ್ಕೆ ಸಜ್ಜಾಗುತ್ತಿರುವುದನ್ನು ಪ್ರಧಾನಿ ಶ್ಲಾಘಿಸಿದ್ದಾರೆ.
ಜೀವನದ ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಯುಗಾದಿಯ ಸಾಂಪ್ರದಾಯಿಕ ಸಂದೇಶವನ್ನು ಪ್ರಧಾನಿ ನೆನಪಿಸಿದ್ದಾರೆ. ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಯಶಸ್ಸನ್ನು ಕೃತಜ್ಞತೆಯಿಂದ ಸ್ವೀಕರಿಸಲು ಈ ಹಬ್ಬ ಪ್ರೇರಣೆ ನೀಡುತ್ತದೆ ಎಂದಿದ್ದಾರೆ. ಮುಂಬರುವ ವರ್ಷವು ಎಲ್ಲರ ಜೀವನದಲ್ಲಿ ಉತ್ತಮ ಆರೋಗ್ಯ, ಸುಖ ಮತ್ತು ಶಾಂತಿಯನ್ನು ತರಲಿ ಎಂದು ಮೋದಿ ಅವರು ಪ್ರಾರ್ಥಿಸಿದ್ದಾರೆ.
ಯುಗಾದಿ ಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ಮೂಲಕ ಅವರು ಹಂಚಿಕೊಂಡಿರುವ ಸಂದೇಶದಲ್ಲಿ ಕನ್ನಡಿಗರ ಸಂಸ್ಕೃತಿ ಮತ್ತು ಹೊಸ ಆರಂಭದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಕರ್ನಾಟಕದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ಪ್ರಧಾನಿ ಮೋದಿಯವರು ಕನ್ನಡ ಭಾಷೆಯಲ್ಲೇ ಸಂದೇಶ ನೀಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಯುಗಾದಿಯು ಹೊಸ ಭರವಸೆ ಮತ್ತು ಚೈತನ್ಯದ ಹಬ್ಬವಾಗಿದ್ದು, ಇದು ಪ್ರತಿಯೊಬ್ಬರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲಿ ಎಂದು ಅವರು ಹಾರೈಸಿದ್ದಾರೆ.ಮುಂಬರುವ ವರ್ಷವು ಕರ್ನಾಟಕದ ಮನೆಮನಗಳಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಐಶ್ವರ್ಯವನ್ನು ತುಂಬಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ: ಯುಗಾದಿ ಹಬ್ಬದ ಸಂಭ್ರಮ; ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಸಂದೇಶ
ಉತ್ತರ ಭಾರತದ ರಾಜ್ಯಗಳಿಗೆ ಪ್ರಧಾನಿ ಮೋದಿ ವಿಶೇಷ ಪತ್ರ
ವಿಕ್ರಮ ಸಂವತ್ 2083 ಮತ್ತು ಚೈತ್ರ ನವರಾತ್ರಿಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ದೆಹಲಿಯ ಜನತೆಗೆ ವೈಯಕ್ತಿಕ ಪತ್ರಗಳನ್ನು ಬರೆದಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಈ ದಿನಕ್ಕೆ ಇರುವ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಅವರು ಶ್ಲಾಘಿಸಿದ್ದಾರೆ.ಭಾರತೀಯ ಕಾಲಗಣನೆಯ ಸಂಕೇತವಾದ ವಿಕ್ರಮ ಸಂವತ್ 2083ರ ಆರಂಭವು ದೇಶದಾದ್ಯಂತ ಹೊಸ ಭರವಸೆ ಮತ್ತು ಸಮೃದ್ಧಿಯನ್ನು ತರಲಿ ಎಂದು ಪ್ರಧಾನಿ ಹಾರೈಸಿದ್ದಾರೆ.
ಕಲಿಯುಗದ ಕಾಲಗಣನೆಯಾದ ಯುಗಾಬ್ದ 5128ನೇ ವರ್ಷಕ್ಕೆ ನಾವು ಕಾಲಿಡುತ್ತಿರುವುದು ನಮ್ಮ ಪುರಾತನ ನಾಗರಿಕತೆಯ ಜೀವಂತಿಕೆಗೆ ಸಾಕ್ಷಿ ಎಂದು ಅವರು ಉಲ್ಲೇಖಿಸಿದ್ದಾರೆ. ಶಕ್ತಿ ದೇವತೆಯ ಆರಾಧನೆಯಾದ ಚೈತ್ರ ನವರಾತ್ರಿಯು ದೇಶದ ಜನರಲ್ಲಿ ಆತ್ಮವಿಶ್ವಾಸ ಮತ್ತು ದೃಢತೆಯನ್ನು ತುಂಬಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಈ ದಿನವನ್ನು ‘ನವ ವರ್ಷ’ವನ್ನಾಗಿ ಆಚರಿಸುವ ಪರಂಪರೆಯನ್ನು ಸ್ಮರಿಸಿರುವ ಅವರು, ಇದು ಭಾರತದ ಸಾಂಸ್ಕೃತಿಕ ಏಕತೆಯ ಪ್ರತಿಬಿಂಬ ಎಂದಿದ್ದಾರೆ.ಹೊಸ ವರ್ಷವು ‘ವಿಕಸಿತ ಭಾರತ’ದ ಸಂಕಲ್ಪವನ್ನು ಈಡೇರಿಸಲು ಎಲ್ಲರಿಗೂ ಶಕ್ತಿ ನೀಡಲಿ ಎಂದು ಮೋದಿ ಅವರು ತಮ್ಮ ಪತ್ರದಲ್ಲಿ ಆಶಿಸಿದ್ದಾರೆ.
ಇಸ್ಲಾಮಾಬಾದ್, ಮಾರ್ಚ್ 19: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಹಲವು ದೇಶಗಳಲ್ಲಿ ತೈಲ ಬಿಕ್ಕಟ್ಟು ಎದುರಾಗಿದೆ. ಅದರಲ್ಲಿ ಪಾಕಿಸ್ತಾನ(Pakistan)ಕೂಡ ಒಂದು. ತೈಲ ಕೊರತೆಯಿಂದಾಗಿ ಮಾರ್ಚ್ 23 ರಂದು ನಿಗದಿಯಾಗಿದ್ದ ಗಣರಾಜ್ಯೋತ್ಸವ ಪರೇಡ್ ಅನ್ನು ಕೂಡ ಸರ್ಕಾರ ರದ್ದುಗೊಳಿಸಿದೆ.
ಪ್ರಧಾನಿ ಶೆಹಬಾಜ್ ಷರೀಫ್ ಅವರ ಕಚೇರಿ ಮಂಗಳವಾರ ಇದನ್ನು ಪ್ರಕಟಿಸಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಉಂಟಾದ ಗಲ್ಫ್ ತೈಲ ಬಿಕ್ಕಟ್ಟಿನಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಗಲ್ಫ್ ತೈಲ ಬಿಕ್ಕಟ್ಟು ಮತ್ತು ಸರ್ಕಾರ ಘೋಷಿಸಿದ ಕಠಿಣ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು, ಮಾರ್ಚ್ 23 ರಂದು ಪಾಕಿಸ್ತಾನ ದಿನಾಚರಣೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಆಚರಣೆಗಳನ್ನು ನಡೆಸಲಾಗುವುದಿಲ್ಲ ಎಂದು ಸರ್ಕಾರಿ ಹೇಳಿಕೆಯಲ್ಲಿ ನಿರ್ಧರಿಸಲಾಗಿದೆ. ಬದಲಾಗಿ, ಸರಳ ಧ್ವಜಾರೋಹಣ ಸಮಾರಂಭವನ್ನು ಮಾತ್ರ ನಡೆಸಲಾಗುವುದು. ಮತ್ತೊಂದೆಡೆ ಹಬ್ಬ ಮುಗಿದ ಮೇಲೆ ಯುದ್ಧ ಮುಂದುವರೆಸೋಣ ಎಂದು ಅಫ್ಘಾನ್ ಬಳಿ ಕೇಳಿದೆ.
ಎಲ್ಲಾ ಸಚಿವಾಲಯಗಳು, ಇಲಾಖೆಗಳು ಮತ್ತು ಘಟಕಗಳು ಈ ಸಂದರ್ಭವನ್ನು ಸರಳ ಮತ್ತು ಘನತೆಯಿಂದ ಆಚರಿಸಬೇಕೆಂದು ಹೇಳಿಕೆಯಲ್ಲಿ ನಿರ್ದೇಶಿಸಲಾಗಿದೆ.
ಮಾರ್ಚ್‌ನಲ್ಲಿ, ಪ್ರಧಾನಿ ಶಹಬಾಜ್ ಷರೀಫ್, ಅಮೆರಿಕ-ಇಸ್ರೇಲ್-ಇರಾನ್ ಯುದ್ಧದಿಂದ ಉಂಟಾದ ತೀವ್ರ ಇಂಧನ ಬಿಕ್ಕಟ್ಟು ಮತ್ತು ಆರ್ಥಿಕ ಅಸ್ಥಿರತೆಯನ್ನು ಪರಿಹರಿಸಲು ವ್ಯಾಪಕವಾದ ಕಠಿಣ ಕ್ರಮಗಳನ್ನು ಘೋಷಿಸಿದರು. ಜಾಗತಿಕ ತೈಲ ಬೆಲೆಗಳು ಗಗನಕ್ಕೇರುತ್ತಿದ್ದಂತೆ ಸರ್ಕಾರಿ ವೆಚ್ಚವನ್ನು ತೀವ್ರವಾಗಿ ಕಡಿಮೆ ಮಾಡುವುದು ಮತ್ತು ಇಂಧನವನ್ನು ಉಳಿಸುವ ಗುರಿಯನ್ನು ಈ ತುರ್ತು ಕ್ರಮಗಳು ಹೊಂದಿವೆ.
ಯುದ್ಧ ಪ್ರಾರಂಭವಾಗಿ ಎರಡು ವಾರಗಳಿಗಿಂತ ಹೆಚ್ಚು ಸಮಯ ಕಳೆದಿದೆ, ಈ ಅವಧಿಯಲ್ಲಿ ಇರಾನ್ ಕೊಲ್ಲಿಯಲ್ಲಿ ಹಲವಾರು ಹಡಗುಗಳ ಮೇಲೆ ದಾಳಿ ಮಾಡಿದೆ, ವಿಶ್ವದ ಐದನೇ ಒಂದು ಭಾಗದಷ್ಟು ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ವಾಸ್ತವಿಕವಾಗಿ ಮುಚ್ಚಿದೆ.
ಪಾಕಿಸ್ತಾನವು ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲ ಮತ್ತು ಸಂಸ್ಕರಿಸಿದ ಇಂಧನದ ಮೇಲೆ ಹೆಚ್ಚು ಅವಲಂಬಿತವಾಗಿದೆ, ಹೆಚ್ಚಾಗಿ ಹಾರ್ಮುಜ್ ಜಲಸಂಧಿಯ ಮೂಲಕವೇ ಆಗಿತ್ತು.
ಪಾಕಿಸ್ತಾನ ಸರ್ಕಾರ ಸೀಮೆಎಣ್ಣೆ ಮತ್ತು ಲಘು ಡೀಸೆಲ್ ಎಣ್ಣೆ (LDO) ಬೆಲೆಗಳನ್ನು ಹೆಚ್ಚಿಸಿದೆ. ರಂಜಾನ್ ಸಮಯದಲ್ಲಿ ಇಂಧನ ಬೆಲೆಗಳಲ್ಲಿನ ತೀವ್ರ ಏರಿಕೆ ಇನ್ನಷ್ಟು ನೋವಿನಿಂದ ಕೂಡಿದೆ. ಪಾಕಿಸ್ತಾನದ ಬಜೆಟ್ ಈಗಾಗಲೇ ಬಿಕ್ಕಟ್ಟಿನಲ್ಲಿದೆ ಮತ್ತು ಮೂಲಭೂತ ಅವಶ್ಯಕತೆಗಳ ಬೆಲೆಗಳ ಏರಿಕೆ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.
ಮಾರ್ಚ್ 23 ಪಾಕಿಸ್ತಾನಕ್ಕೆ ಐತಿಹಾಸಿಕ ದಿನ. 1940 ರ ಈ ದಿನದಂದು, ಲಾಹೋರ್ ನಿರ್ಣಯವನ್ನು ಮಂಡಿಸಲಾಯಿತು. ಈ ನಿರ್ಣಯವು ಪ್ರತ್ಯೇಕ ಮುಸ್ಲಿಂ ತಾಯ್ನಾಡನ್ನು ಒತ್ತಾಯಿಸಿತು, ಇದು ನಂತರ 1947 ರಲ್ಲಿ ಭಾರತದ ವಿಭಜನೆಗೆ ಕಾರಣವಾಯಿತು. ನಂತರ, ಮಾರ್ಚ್ 23, 1956 ರಂದು, ಪಾಕಿಸ್ತಾನವು ತನ್ನ ಮೊದಲ ಸಂವಿಧಾನವನ್ನು ಅಂಗೀಕರಿಸಿತು ಮತ್ತು ತನ್ನನ್ನು ತಾನು ಗಣರಾಜ್ಯವೆಂದು ಘೋಷಿಸಿತು.
ಈ ಬಿಕ್ಕಟ್ಟು ಹಣದುಬ್ಬರದ ಮೇಲೂ ಪರಿಣಾಮ ಬೀರಿದೆ ಮತ್ತು ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 47 ಲಕ್ಷ ಪಾಕಿಸ್ತಾನಿಗಳಿಂದ ಬರುವ ಹಣಕ್ಕೂ ಅಪಾಯವಿದೆ.
ಬೆಂಗಳೂರು, ಮಾ.19: ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 9ರಂದು ನಡೆಯಲಿರುವ ಈ ಚುನಾವಣೆಗೆ ಬಿಜೆಪಿ ಹಳೆಯ ಹುಲಿ ಮತ್ತು ಹೊಸ ಮುಖಕ್ಕೆ ಅವಕಾಶ ನೀಡಿದೆ. ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿದೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ವೀರಣ್ಣ ಚರಂತಿಮಠ್ ಅವರಿಗೆ ಬಿಜೆಪಿ ಮತ್ತೆ ಮಣೆ ಹಾಕಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಪ್ರಾಬಲ್ಯ ಹೆಚ್ಚಿರುವುದರಿಂದ ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ. ಬಾಗಲಕೋಟೆಯಲ್ಲಿ ಮಾಜಿ ಶಾಸಕ ಎಚ್.ವೈ. ಮೇಟಿ ಅವರ ನಿಧನ ನಂತರ ಉಪಚುನಾವಣೆ ಘೋಷಣೆಯಾದ ನಂತರ ಕಾಂಗ್ರೆಸ್ನಲ್ಲಿ ಭಾರೀ ಗದ್ದಲ ಉಂಟಾಗಿದೆ. ಇದರ ನಡುವೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ರಾಜಕೀಯ ನೇರ ಪೈಪೋಟಿಗೆ ವೇದಿಕೆ ಸಿದ್ಧ ಮಾಡಿದೆ.
ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರ ಅಭ್ಯರ್ಥಿಯಾಗು ಬಿಜೆಪಿ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಿದೆ. ಇಲ್ಲಿ ಬಿಜೆಪಿ ‘ವಾಲ್ಮೀಕಿ’ (ST) ಸಮುದಾಯಕ್ಕೆ ಆದ್ಯತೆ ನೀಡಿದೆ. ಎಸ್.ಟಿ ಮತಗಳನ್ನು ಸೆಳೆಯುವ ಉದ್ದೇಶದಿಂದ ಶ್ರೀನಿವಾಸ್ ದಾಸಕರಿಯಪ್ಪ ಅವರನ್ನು ಕಣಕ್ಕಿಳಿಸಲಾಗಿದ್ದು, ಕ್ಷೇತ್ರದಲ್ಲಿ ಸಾಮಾಜಿಕ ಸಮತೋಲನ ಕಾಪಾಡಲು ಬಿಜೆಪಿ ಪ್ರಯತ್ನಿಸಿದೆ ಎಂದು ಹೇಳಲಾಗಿದೆ. ಇಲ್ಲಿಯೂ ಕೂಡ ಈ ಹಿಂದೆ ಕಾಂಗ್ರೆಸ್ ಪ್ರಬಲ್ಯ ಇತ್ತು. ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನವಾದ ನಂತರ ಇಲ್ಲಿಯೂ ಕೂಡ ಕಾಂಗ್ರೆಸ್ಗೆ ಇಲ್ಲಿ ಅಭ್ಯರ್ಥಿ ಆಯ್ಕೆ ತಲೆನೋವಾಗಿದೆ.