IPL 2026: ಹೊಸ ಲುಕ್ನೊಂದಿಗೆ ಆರ್ಸಿಬಿಗೆ ಮರಳಿದ ಕಿಂಗ್ ಕೊಹ್ಲಿ! ವಿರಾಟ್ ಹೇಗಿದ್ದಾರೆ ನೋಡಿ
ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ಹೊಸ ಸೀಸನ್‌ಗೆ ತಯಾರಿ ನಡೆಸಲು ಮಾರ್ಚ್ 18 ರಂದು ಆರ್ಸಿಬಿ ತಂಡದ ಶಿಬಿರ ಆರಂಭವಾಗಿದೆ. ತಂಡದ ಆಟಗಾರರು ಶಿಬಿರಕ್ಕೆ ಮರಳಿರುವ ಚಿತ್ರವನ್ನು ಎಕ್ಸ್ ಖಾತೆಯಲ್ಲಿ ಆರ್ಸಿಬಿ ಹಂಚಿಕೊಂಡಿದೆ. ಮಾರ್ಚ್ 18, ಬುಧವಾರ ತಂಡವನ್ನು ಸೇರಿಕೊಂಡ ಕಿಂಗ್ ಕೊಹ್ಲಿ ಮೊದಲ ತರಬೇತಿ ಅವಧಿಯಲ್ಲಿ ಭಾಗವಹಿಸಿದರು. ವಿರಾಟ್ ಕೊಹ್ಲಿ ನೆಟ್ಸ್ನಲ್ಲಿ ಭಾಗವಹಿಸಿರುವುದು ಅವರ ಅಭಿಮಾನಿಗಳಿಗೆ ಖುಷಿಕೊಟ್ಟಿದ್ದು, ಐಪಿಎಲ್ ಮೊದಲ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಕೊಹ್ಲಿ ತಂಡ ಸೇರಿರುವ ಕೆಲವು ಫೋಟೋಗಳನ್ನು…