ಹುಣಸೂರು, ಮಾ.19: ಆಹಾರ ಮತ್ತು ನೀರು ಅರಸಿ ನಾಡಿಗೆ ಬಂದಿದ್ದ ಒಂಟಿ ಸಲಗವೊಂದು ವಾಪಸ್ ಕಾಡಿಗೆ ಹೋಗುವ ಸಂಭ್ರಮದಲ್ಲಿ ರೈಲ್ವೆ ಬ್ಯಾರಿಕೇಡ್‌ಗಳ ನಡುವೆ ಸಿಲುಕಿ ಹಾಕಿಕೊಂಡು ಅಕ್ಷರಶಃ ಮರಣಯಾತನೆ ಅನುಭವಿಸಿದ ಘಟನೆ ಉಡುವೆಪುರ ಗ್ರಾಮದ ಬಳಿ ನಡೆದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದಿದ್ದ ಈ ಒಂಟಿ ಸಲಗ, ಹಸಿವಿನಿಂದಾಗಿ ಹುಣಸೂರು ತಾಲೂಕಿನ ಉಡುವೆಪುರ ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿತ್ತು. ಬೆಳ್ಳಂಬೆಳಿಗ್ಗೆ ಜಮೀನಿನಲ್ಲಿ ಆನೆಯನ್ನು ಕಂಡ ರೈತರು ಭಯದಿಂದ ಜೋರಾಗಿ ಕೂಗಾಡಿದ್ದಾರೆ. ಜನರ ಚೀರಾಟ ಮತ್ತು ವಾಹನಗಳ ಹಾರ್ನ್ ಸದ್ದಿನಿಂದ ಬೆದರಿದ ಆನೆ, ಗಾಬರಿಯಿಂದ ಕಾಡಿನತ್ತ ಓಡಲಾರಂಭಿಸಿದೆ. ಕಾಡಿನೊಳಗೆ ಪ್ರವೇಶಿಸುವ ಬರದಲ್ಲಿ ಆನೆಯು ರೈಲ್ವೆ ಹಳಿಗಳಿಂದ ನಿರ್ಮಿಸಲಾಗಿದ್ದ ತಡೆಗೋಡೆಯ (Railway Track Fence) ಅಡಿಯಿಂದ ನುಸುಳಲು ಪ್ರಯತ್ನಿಸಿದೆ. ಈ ವೇಳೆ ಆನೆಯ ದೇಹವು ಕಂಬಗಳ ನಡುವೆ ಸಿಲುಕಿಕೊಂಡಿದೆ. ಸುಮಾರು ಹೊತ್ತು ಆನೆಯು ಹೊರಬರಲಾರದೆ ಒದ್ದಾಡಿದ್ದು, ಅದರ ಸ್ಥಿತಿಯನ್ನು ಕಂಡು ಸ್ಥಳೀಯರು ಮರುಗಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಆನೆಗೆ ಯಾವುದೇ ಗಾಯವಾಗದಂತೆ ಜಾಣ್ಮೆಯಿಂದ ಅದನ್ನು ಬಿಡಿಸುವಲ್ಲಿ ಯಶಸ್ವಿಯಾದರು.
ನೀವು ಕ್ರೈಮ್ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುತ್ತೀರಾ? ಒಟಿಟಿಯಲ್ಲಿ ಉತ್ತಮ ಕ್ರೈಮ್ ಥ್ರಿಲ್ಲರ್ ಸಿನಿಮಾವನ್ನು ನೋಡಲು ಬಯಸುತ್ತೀರಾ? ಈ ಸಿನಿಮಾ ಹತ್ತು ವರ್ಷಗಳ ಹಿಂದೆ, ಅಂದರೆ 2016ರಲ್ಲಿ ಬಿಡುಗಡೆಯಾಯಿತು. ಆದರೆ ಈ ಸಿನಿಮಾದ ಹೆಸರು ಖಂಡಿತವಾಗಿಯೂ ಟಾಪ್ ಕ್ರೈಮ್ ಥ್ರಿಲ್ಲರ್ ಸಿನಿಮಾಗಳ ಪಟ್ಟಿಯಲ್ಲಿದೆ. ಈ ಸಿನಿಮಾದ ಹೆಸರು ‘ಧ್ರುವಂಗಲ್ ಪದಿನಾರು’. ಕಾರ್ತಿಕ್ ನರೇನ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾ ಮಾಡುವ ಸಮಯದಲ್ಲಿ ಕಾರ್ತಿಕ್ ಕೇವಲ 21 ವರ್ಷ ವಯಸ್ಸಿನವನಾಗಿದ್ದನು. ಉತ್ತಮ ಥ್ರಿಲ್ಲರ್ ಸಿನಿಮಾವನ್ನು ನೀಡಿದರು.
ಅಪಘಾತದಿಂದಾಗಿ ತನ್ನ ಕಾಲು ಕಳೆದುಕೊಂಡ ನಿವೃತ್ತ ಇನ್ಸ್‌ಪೆಕ್ಟರ್ ತನ್ನ ವೃತ್ತಿಜೀವನದ ಅತ್ಯಂತ ಕಠಿಣ ಪ್ರಕರಣವನ್ನು ಹೇಗೆ ಪರಿಹರಿಸುತ್ತಾನೆ ಎಂಬುದರ ಕುರಿತಾಗಿದೆ ಈ ಸಿನಿಮಾ. ಈ ಸಿನಿಮಾದ ಸಂಪೂರ್ಣ ಕಥೆ ನಿವೃತ್ತ ಪೊಲೀಸ್ ಅಧಿಕಾರಿ ದೀಪಕ್ (ರಹಮಾನ್) ಸುತ್ತ ಸುತ್ತುತ್ತದೆ. ದೀಪಕ್ ಅಪಘಾತದಲ್ಲಿ ತನ್ನ ಕಾಲುಗಳನ್ನು ಕಳೆದುಕೊಳ್ಳುತ್ತಾನೆ. ಅವನು ತನ್ನ ವೃತ್ತಿಜೀವನದ ಕೊನೆಯ, ಅಪೂರ್ಣ ಪ್ರಕರಣವನ್ನು ತನಿಖೆ ಮಾಡುತ್ತಾನೆ.
ಒಂದೇ ರಾತ್ರಿಯಲ್ಲಿ ಮೂರು ವಿಭಿನ್ನ ಘಟನೆಗಳು (ಅಪಘಾತ, ಆತ್ಮಹತ್ಯೆ, ಕೊಲೆ) ನಡೆಯುತ್ತವೆ. ಈ ಚಿತ್ರದ ಪರಾಕಾಷ್ಠೆ ಪ್ರೇಕ್ಷಕರಿಗೆ ಅನಿರೀಕ್ಷಿತ ಆಘಾತವನ್ನು ನೀಡುತ್ತದೆ. ಪೊಲೀಸ್ ತನಿಖೆಯನ್ನು ಇದರಲ್ಲಿ ಬಹಳ ಹತ್ತಿರದಿಂದ ತೋರಿಸಲಾಗಿದೆ. ಈ ಚಿತ್ರ ಹಿಂದಿಯಲ್ಲಿಯೂ ತಯಾರಾಗಲಿದೆ ಎಂಬ ಗುಸುಗುಸು ಕೇಳಿಬರುತ್ತಿದೆ. ನಟ ವರುಣ್ ಧವನ್ ಹಿಂದಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಇದನ್ನು ಈ ಹಿಂದೆ ಕನ್ನಡದಲ್ಲಿಯೂ ರಿಮೇಕ್ ಮಾಡಲಾಗಿತ್ತು. ಇದರ ಹೆಸರು ‘ದೃಶ್ಯ’.
ಈ ಚಿತ್ರದ ವಿಶೇಷವೆಂದರೆ ಇದು ಕೇವಲ 1 ಗಂಟೆ 45 ನಿಮಿಷ ಇದೆ. ಈ ಚಿತ್ರವು IMDB ಅಲ್ಲಿ 8.2 ರೇಟಿಂಗ್ ಪಡೆದಿದೆ. ಈ ಚಿತ್ರವು ಹಲವು ಪ್ರಶಸ್ತಿಗಳನ್ನು ಸಹ ಗೆದ್ದಿದೆ. ವೆಂಕಟೇಶ್ ಮತ್ತು ಮೋಹನ್ ಲಾಲ್ ನಟಿಸಿದ ‘ದೃಶ್ಯಂ’ ನಂತಹ ಕ್ರೈಮ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ನೀವು ಇಷ್ಟಪಟ್ಟರೆ, ನಿಮಗೆ ಈ ಚಿತ್ರವೂ ಖಂಡಿತವಾಗಿಯೂ ಇಷ್ಟವಾಗುತ್ತದೆ. ಪ್ರಸ್ತುತ, ಈ ಚಿತ್ರ ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.
ಬೆಂಗಳೂರು, ಮಾರ್ಚ್ 18: ಯುಗಾದಿ (Ugadi) ಹಾಗೂ ರಂಜಾನ್ ಹಬ್ಬದ ಸಾಲು ರಜೆಗಳ ಸಂದರ್ಭ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ನೈಋತ್ಯ ರೈಲ್ವೆ (SWR) ಬೆಂಗಳೂರು (Bangalore) ನಗರದಿಂದ ವಿವಿಧ ಸ್ಥಳಗಳಿಗೆ ವಿಶೇಷ ರೈಲುಗಳ ಸೇವೆ ಒದಗಿಸುತ್ತಿದೆ. ಬೆಳಗಾವಿ, ಹುಬ್ಬಳ್ಳಿ, ವಿಜಯಪುರ, ಹೋಸಪೇಟೆ ಹಾಗೂ ಗೋವಾ (ಮಡಗಾಂವ್) ಮಾರ್ಗಗಳಿಗೆ ಈ ವಿಶೇಷ ರೈಲುಗಳು ಸಂಚರಿಸುತ್ತಿವೆ. ವಿಶೇಷ ರೈಲುಗಳ ವೇಳಾಪಟ್ಟಿ, ಎಲ್ಲೆಲ್ಲಿ ನಿಲುಗಡೆ ಹೊಂದಿವೆ ಎಂಬ ಹಾಗೂ ಇತರ ಮಾಹಿತಿ ಇಲ್ಲಿದೆ.
ಬೆಂಗಳೂರು ಬೆಳಗಾವಿ ವಿಶೇಷ ರೈಲು
ರೈಲು ಸಂಖ್ಯೆ 06503 ಮಾರ್ಚ್ 18ರಂದು ಸಂಜೆ 7 ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರಿನಿಂದ ಹೊರಟು, ಮುಂದಿನ ದಿನ ಬೆಳಿಗ್ಗೆ 7.35ಕ್ಕೆ ಬೆಳಗಾವಿ ತಲುಪಿದೆ.
ರಿಟರ್ನ್ ರೈಲು ಸಂಖ್ಯೆ 06504 ಮಾರ್ಚ್ 22ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು, ಮಾರ್ಚ್ 23ರಂದು ಬೆಳಿಗ್ಗೆ 5ಕ್ಕೆ ಬೆಂಗಳೂರು ತಲುಪಲಿದೆ.
ಈ ರೈಲು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೊಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಬೆಂಗಳೂರು ವಿಜಯಪುರ ವಿಶೇಷ ರೈಲು
ರೈಲು ಸಂಖ್ಯೆ 06277 ಮಾರ್ಚ್ 18ರಂದು ರಾತ್ರಿ 9.50ಕ್ಕೆ ಯಶವಂತಪುರದಿಂದ ಹೊರಟು, ಮುಂದಿನ ದಿನ ಬೆಳಿಗ್ಗೆ 9.45ಕ್ಕೆ ವಿಜಯಪುರ ತಲುಪಿದೆ.
ರಿಟರ್ನ್ ರೈಲು ಸಂಖ್ಯೆ 06278 ಮಾರ್ಚ್ 22ರಂದು ಮಧ್ಯಾಹ್ನ 1.30ಕ್ಕೆ ವಿಜಯಪುರದಿಂದ ಹೊರಟು, ಮಾರ್ಚ್ 23ರಂದು ರಾತ್ರಿ 12.30ಕ್ಕೆ ಯಶವಂತಪುರ ತಲುಪಲಿದೆ.
ಈ ರೈಲು ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಹುಬ್ಬಳ್ಳಿ-ಯಶವಂತಪುರ ವಿಶೇಷ ರೈಲು
ರೈಲು ಸಂಖ್ಯೆ 07379 ಮಾರ್ಚ್ 18ರಂದು ಮಧ್ಯಾಹ್ನ 12ಕ್ಕೆ ಹುಬ್ಬಳ್ಳಿಯಿಂದ ಹೊರಟು, ಅದೇ ದಿನ ರಾತ್ರಿ 8.15ಕ್ಕೆ ಯಶವಂತಪುರ ತಲುಪಿದೆ.
ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ಬೆಂಗಳೂರು ಗೋವಾ (ಮಡಗಾಂವ್) ವಿಶೇಷ ರೈಲು
ರೈಲು ಸಂಖ್ಯೆ 06267 ಮಾರ್ಚ್ 18ರಂದು ಮಧ್ಯಾಹ್ನ 12ಕ್ಕೆ ಯಶವಂತಪುರದಿಂದ ಹೊರಟು, ಮಾರ್ಚ್ 19ರಂದು ಬೆಳಿಗ್ಗೆ 6.45ಕ್ಕೆ ಮಡಗಾಂವ್ ತಲುಪಿದೆ.
ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮಂಗಳೂರು ಸಮೀಪದ ಹಲವಾರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ರಿಟರ್ನ್ ರೈಲು ಸಂಖ್ಯೆ 06268 ಮಾರ್ಚ್ 19ರಂದು ಬೆಳಿಗ್ಗೆ 11ಕ್ಕೆ ಮಡಗಾಂವ್‌ನಿಂದ ಹೊರಟು, ಮಾರ್ಚ್ 20ರಂದು ಬೆಳಿಗ್ಗೆ 5.20ಕ್ಕೆ ಬೆಂಗಳೂರು ಕ್ಯಾಂಟೋನ್ಮೆಂಟ್ ತಲುಪಲಿದೆ. ಈ ರೈಲು SMVT ಬೆಂಗಳೂರಲ್ಲಿಯೂ ನಿಲುಗಡೆ ಹೊಂದಿದೆ.
ಬೆಂಗಳೂರು ಹೋಸಪೇಟೆ ವಿಶೇಷ ರೈಲು
ರೈಲು ಸಂಖ್ಯೆ 06533 ಮಾರ್ಚ್ 18ರಂದು ಸಂಜೆ 6.15ಕ್ಕೆ ಯಶವಂತಪುರದಿಂದ ಹೊರಟು, ಮಾರ್ಚ್ 19ರಂದು ಮಧ್ಯಾಹ್ನ 4ಕ್ಕೆ ಹೋಸಪೇಟೆ ತಲುಪಲಿದೆ. ರಿಟರ್ನ್ ರೈಲು ಸಂಖ್ಯೆ 06534 ಮಾರ್ಚ್ 19ರಂದು ಬೆಳಿಗ್ಗೆ 9ಕ್ಕೆ ಹೋಸಪೇಟೆಯಿಂದ ಹೊರಟಿದ್ದು, ಸಂಜೆ 7.20ಕ್ಕೆ ಯಶವಂತಪುರ ತಲುಪಲಿದೆ.
ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕ್ಯಾಂಟೋನ್ಮೆಂಟ್ ಮತ್ತು ತೋರಣಗಲ್ಲು ನಿಲ್ದಾಣಗಳಲ್ಲಿ ಈ ರೈಲಿಗೆ ನಿಲುಗಡೆ ಇರುತ್ತದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಊರಿಗೆ ತೆರಳಿ ವಾಪಸಾಗುತ್ತಿರುವ ಹಿನ್ನೆಲೆಯಲ್ಲಿ, ಈ ವಿಶೇಷ ರೈಲುಗಳು ಪ್ರಯಾಣಿಕರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲ ಕಲ್ಪಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಕಠ್ಮಂಡು, ಮಾರ್ಚ್ 19: ನೇಪಾಳದಲ್ಲಿ ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಆದರೆ ಪವಾಡವೆಂಬಂತೆ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಪೈಲಟ್ ಸೇರಿ ಐದು ಪ್ರಯಾಣಿಕರು ಬದುಕುಳಿದಿದ್ದಾರೆ.ಆದರೆ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ, ಅವರ ಕಾಲಿಗೆ ಸಣ್ಣಪುಟ್ಟ ಗಾಯವಾಗಿದೆ. ಏರ್ ರಾಜವಂಶದ ಚಾಪರ್ ಅಪಘಾತಕ್ಕೊಳಗಾಗಿರುವ ಹೆಲಿಕಾಪ್ಟರ್ ಆಗಿದೆ. ಕೃಷಿ ಭೂಮಿಯಲ್ಲಿ ಇಳಿಯುವಾಗ ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತು. ಗಾಯಗೊಂಡ ಪ್ರಯಾಣಿಕರನ್ನು ಕಂಪನಿಯ ಮತ್ತೊಂದು ಹೆಲಿಕಾಪ್ಟರ್ ಮೂಲಕ ಕಠ್ಮಂಡುವಿಗೆ ಸ್ಥಳಾಂತರಿಸಲಾಯಿತು. ಉಳಿದ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.
ಆಮಿರ್ ಖಾನ್ ನಟನೆಯ ‘ದಂಗಲ್’ ಸಿನಿಮಾ ವಿಶಿಷ್ಟ ದಾಖಲೆಗಳನ್ನು ಮಾಡಿದ್ದು ಗೊತ್ತೇ ಇದೆ. ಈ ಸಿನಿಮಾ ಮೂಲಕ ವಿಶಿಷ್ಟ ದಾಖಲೆ ಬರೆದರು. ‘ದಂಗಲ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಅವರು, ಅಲ್ಪಾವಧಿಯಲ್ಲಿಯೇ ತಮ್ಮ ಸಹಜ ನಟನೆಗಾಗಿ ಮೆಚ್ಚುಗೆಯನ್ನು ಪಡೆದರು. ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ಅವರು ಮುಂಬೈನಲ್ಲಿ ಭವ್ಯವಾದ ಮನೆಯನ್ನು ಖರೀದಿಸಿದ್ದಾರೆ.
ಸಾನ್ಯಾ ಈ ಅಪಾರ್ಟ್‌ಮೆಂಟ್ ಅನ್ನು ಸುಮಾರು 14.3 ಕೋಟಿ ರೂಪಾಯಿ ನೀಡಿ ಖರೀದಿಸಿದ್ದಾರೆ. ಇದಕ್ಕಾಗಿ ಅವರು ಕೇವಲ 71.5 ಲಕ್ಷ ರೂ. ಸ್ಟಾಂಪ್ ಡ್ಯೂಟಿಯಲ್ಲಿ ಪಾವತಿಸಿದ್ದಾರೆ . ಮುಂಬೈನಲ್ಲಿ ಇದು ಅವರ ಎರಡನೇ ಮನೆ. ಅವರು 2018 ರಲ್ಲಿ ಫ್ಲಾಟ್ ಖರೀದಿಸಿದ್ದರು. ಆ ಫ್ಲ್ಯಾಟ್ ಚಿಕ್ಕದಾಗಿತ್ತು. ತಮ್ಮ ಕುಟುಂಬ ಸದಸ್ಯರು ದೆಹಲಿಯಿಂದ ಬಂದಾಗ ಆರಾಮವಾಗಿರಬೇಕೆಂಬ ಉದ್ದೇಶದಿಂದ ಈ ದೊಡ್ಡ ಮನೆಯನ್ನು ಖರೀದಿಸಿರುವುದಾಗಿ ಹೇಳಿದ್ದಾರೆ. ಈ ಮನೆ ವಿಶಾಲವಾಗಿದೆ.
ಈ ಮನೆ ಸಮುದ್ರಕ್ಕೆ ಮುಖ ಮಾಡಿಕೊಂಡಿದೆ. ಹೀಗಾಗಿ, ಮನೆಯಲ್ಲೇ ಕುಳಿತು ಸಮುದ್ರ ತೀರದಲ್ಲಿ ನಡೆಯುವ ದೃಶ್ಯಗಳನ್ನು ಅವರು ಕಣ್ತುಂಬಿಕೊಳ್ಳಬಹುದು. ಸಮುದ್ರವನ್ನು ನೋಡುತ್ತಾ ಮತ್ತು ಸೂರ್ಯಾಸ್ತವನ್ನು ಆನಂದಿಸುವ ವಿಶಾಲವಾದ ಬಾಲ್ಕನಿಗಳಿವೆ.
ಆರಂಭದಲ್ಲಿ, ಆರ್ಥಿಕ ಸಮಸ್ಯೆಗಳಿಂದಾಗಿ ಸನ್ಯಾ ಮನೆ ಖರೀದಿಸಲು ಹಿಂಜರಿಯುತ್ತಿದ್ದರು. ಆದರೆ, ಬಾಡಿಗೆಗೆ ಪಡೆಯುವುದಕ್ಕಿಂತ ಸ್ವಂತ ಮನೆ ಹೊಂದಿರುವುದು ಉತ್ತಮ ಎಂದು ಅವರ ತಂದೆ ಈ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದರು.ಈಗ ಅವರ ಆಸೆ ಈಡೇರಿರುವುದರಿಂದ, ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅವರಿಗೆ ಶುಭ ಹಾರೈಸುತ್ತಿದ್ದಾರೆ. ಸಾನ್ಯಾ ಅವರು ಬಾಲಿವುಡ್ನಲ್ಲಿ ಹೆಸರು ಮಾಡಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿ ಗಮನ ಸೆಳೆದಿದ್ದಾರೆ. ‘ದಂಗಲ್’ ಅವರ ಮೊದಲ ಸಿನಿಮಾ. ಈ ಚಿತ್ರ ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ನೀಡಿತು.
ಮಿರ್ಜಾಪುರ, ಮಾರ್ಚ್ 19: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ವಿಂಧ್ಯಾಚಲ ಪ್ರದೇಶದಲ್ಲಿ ಹೊಸದಾಗಿ ಅಗಲೀಕರಣಗೊಂಡ ರಸ್ತೆಯ ಮಧ್ಯದಲ್ಲಿ ಹ್ಯಾಂಡ್ ಪಂಪ್ ಇರುವುದು ತೀವ್ರ ಆಕ್ರೋಶವನ್ನು ಹುಟ್ಟುಹಾಕಿತ್ತು. ವಿಂಧ್ಯವಾಸಿನಿ ದೇವಸ್ಥಾನಕ್ಕೆ ಹೋಗುವ ಪ್ರಮುಖ ಮಾರ್ಗವಾದ ದೂಧ್‌ನಾಥ್ ತಿರಹಾದಿಂದ ವಿಂಧ್ಯಚಲದವರೆಗೆ ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತಿದೆ. ರಸ್ತೆಬದಿಯಲ್ಲಿರುವ ಹ್ಯಾಂಡ್ ಪಂಪ್ ಅನ್ನು ತೆಗೆದುಹಾಕುವ ಬದಲು, ಅಧಿಕಾರಿಗಳು ಅದರ ಸುತ್ತ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ.ವಿಸ್ತರಣೆಯ ನಂತರ ಅದನ್ನು ಮಧ್ಯದಲ್ಲಿಯೇ ಬಿಟ್ಟಿದ್ದರು.
ಕೈ ಪಂಪ್ ಮೊದಲು ಬದಿಯಲ್ಲಿತ್ತು, ಆದರೆ ಅಗಲಗೊಳಿಸಿದ ನಂತರ ಅದು ಮಧ್ಯದಲ್ಲಿ ಬಂದಿತ್ತು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಆದರೆ ಈಗ ವಾಹನ ಓಡಾಡುವಾಗ ಮಧ್ಯದಲ್ಲಿ ಹ್ಯಾಂಡ್ ಪಂಪ್ ಇದ್ದರೆ ಅಲ್ಲಿ ಹೋಗಿ ನೀರು ತೆಗೆದುಕೊಳ್ಳಲು ಕೂಡ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂಬುದು ಜನರ ವಾದ. ಕೊನೆಗೂ ಈಗ ಆ ಹ್ಯಾಂಡ್ಪಂಪನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.
ಭಾರತೀಯ ಸಂಸ್ಕೃತಿಯಲ್ಲಿ ಅಡುಗೆಮನೆಯನ್ನು ಕೇವಲ ಆಹಾರ ತಯಾರಿಸುವ ಸ್ಥಳವೆಂದು ಪರಿಗಣಿಸದೆ, ಅದನ್ನು ‘ಲಕ್ಷ್ಮಿಯ ನಿವಾಸ’ ಮತ್ತು ‘ಅನ್ನಪೂರ್ಣೇಶ್ವರಿಯ ಸನ್ನಿಧಿ’ ಎಂದು ಪೂಜಿಸಲಾಗುತ್ತದೆ. ಆದರೆ ಆಧುನಿಕ ಜೀವನಶೈಲಿಯ ಧಾವಂತದಲ್ಲಿ, ನಾವು ತಿಳಿಯದೆಯೇ ಹೊರಗಿನ ಧೂಳು ತುಂಬಿದ ಪಾದರಕ್ಷೆಗಳನ್ನು ಅಥವಾ ಮನೆಯೊಳಗಿನ ಚಪ್ಪಲಿಗಳನ್ನು ಧರಿಸಿ ಅಡುಗೆಮನೆ ಪ್ರವೇಶಿಸುತ್ತೇವೆ. ವಾಸ್ತು ಶಾಸ್ತ್ರ ಮತ್ತು ವಿಜ್ಞಾನದ ಪ್ರಕಾರ, ಈ ಒಂದು ಸಣ್ಣ ಅಭ್ಯಾಸವು ನಿಮ್ಮ ಮನೆಯ ನೆಮ್ಮದಿಯನ್ನೇ ಕಸಿದುಕೊಳ್ಳಬಲ್ಲದು.
ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯು ಧನಾತ್ಮಕ ಶಕ್ತಿಯ ಕೇಂದ್ರ. ಚಪ್ಪಲಿಗಳು ಹೊರಗಿನ ನಕಾರಾತ್ಮಕ ಶಕ್ತಿಯನ್ನು ಹೊತ್ತು ತರುತ್ತವೆ. ಅಶುದ್ಧ ಸ್ಥಿತಿಯಲ್ಲಿ ಅಡುಗೆಮನೆಯನ್ನು ಪ್ರವೇಶಿಸುವುದು ಅನ್ನಪೂರ್ಣ ದೇವಿ ಮತ್ತು ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಇದರ ಪರಿಣಾಮಗಳು ಅನಗತ್ಯ ಖರ್ಚುಗಳು ಹೆಚ್ಚಾಗುವುದು ಮತ್ತು ಬಂದ ಹಣ ಕೈಯಲ್ಲಿ ನಿಲ್ಲದೆ ಇರಬಹುದು. ಇದಲ್ಲದೇ ಸಣ್ಣ ವಿಷಯಗಳಿಗೂ ದಂಪತಿಗಳ ನಡುವೆ ಕಹಿ ಉಂಟಾಗುವುದು ಮತ್ತು ಮನೆಯಲ್ಲಿ ಅಶಾಂತಿ ಮನೆಮಾಡುವುದು. ಉತ್ತಮ ಅವಕಾಶಗಳು ಕೈತಪ್ಪುವುದು ಮತ್ತು ಕುಟುಂಬದ ಸದಸ್ಯರ ಯಶಸ್ಸಿಗೆ ಅಡೆತಡೆಗಳು ಎದುರಾಗಬಹುದು.
ಇದು ಕೇವಲ ಧಾರ್ಮಿಕ ನಂಬಿಕೆಯಲ್ಲ, ಇದರ ಹಿಂದೆ ಬಲವಾದ ವೈಜ್ಞಾನಿಕ ಕಾರಣವೂ ಇದೆ. ನಾವು ಧರಿಸುವ ಶೂ ಅಥವಾ ಚಪ್ಪಲಿಗಳಲ್ಲಿ ಕೋಟ್ಯಂತರ ಹಾನಿಕಾರಕ ಬ್ಯಾಕ್ಟೀರಿಯಾಗಳು ಮತ್ತು ಸೂಕ್ಷ್ಮಜೀವಿಗಳಿರುತ್ತವೆ. ಅಡುಗೆಮನೆಯ ಬೆಚ್ಚಗಿನ ವಾತಾವರಣವು ಈ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪೂರಕವಾಗಿದೆ. ನೆಲದ ಮೇಲೆ ಚೆಲ್ಲುವ ಆಹಾರದ ಮೂಲಕ ಈ ಸೂಕ್ಷ್ಮಜೀವಿಗಳು ಸುಲಭವಾಗಿ ಹರಡುತ್ತವೆ. ಇದರಿಂದಾಗಿ ಟೈಫಾಯಿಡ್, ಅತಿಸಾರ ಮತ್ತು ಗಂಭೀರ ಹೊಟ್ಟೆಯ ಸೋಂಕುಗಳು ಉಂಟಾಗುವ ಅಪಾಯವಿರುತ್ತದೆ. ವಿಶೇಷವಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಇದು ಗಂಭೀರ ಪರಿಣಾಮ ಬೀರಬಹುದು.
ಕುಟುಂಬದ ಆರೋಗ್ಯ, ಆರ್ಥಿಕ ಸಮೃದ್ಧಿ ಮತ್ತು ಮಾನಸಿಕ ಶಾಂತಿಗಾಗಿ ಅಡುಗೆಮನೆಯನ್ನು ಪವಿತ್ರವಾಗಿಡುವುದು ಅತ್ಯಗತ್ಯ. ಇಂದಿನಿಂದಲೇ ಅಡುಗೆಮನೆಯೊಳಗೆ ಪಾದರಕ್ಷೆಗಳನ್ನು ಧರಿಸುವ ಅಭ್ಯಾಸವನ್ನು ಬಿಟ್ಟುಬಿಡಿ. ಸ್ವಚ್ಛವಾದ ಅಡುಗೆಮನೆಯೇ ಸುಖೀ ಕುಟುಂಬದ ಅಡಿಪಾಯ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾ.19: ರಾಜ್ಯದಲ್ಲಿ ಸುಡುತ್ತಿದ್ದ ಬಿಸಿಲ ಬೇಗೆಯ ನಡುವೆಯೇ ವರುಣದೇವ ಅನಿರೀಕ್ಷಿತ ಎಂಟ್ರಿ ಕೊಟ್ಟಿದ್ದಾನೆ. ನೆನ್ನೆ (ಮಾ.18) ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದ್ದು, ಭೂಮಿ ತಂಪಾಗಿದೆಯಾದರೂ ರೈತರ ಬದುಕು ಮಾತ್ರ ಬೀದಿಗೆ ಬಿದ್ದಿದೆ. ನಗರದ ಕೆ.ಆರ್. ಪುರಂ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 3 ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ 20ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಬೇರೆಡೆಗೆ ಡೈವರ್ಟ್ ಮಾಡಲಾಗಿದೆ.
ಧಾರಾಕಾರ ಮಳೆಗೆ ನೆಲಮಂಗಲದ ಬಸವನಹಳ್ಳಿ ಕ್ರಾಸ್ ಬಳಿ ಬೃಹತ್ ನೇಮ್ ಬೋರ್ಡ್ ಪಿಲ್ಲರ್ ಉರುಳಿಬಿದ್ದಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಚಾಮರಾಜನಗರದ ಕಡುವಿನಕಟ್ಟೆಹುಂಡಿಯಲ್ಲಿ ಕಟಾವಿಗೆ ಬಂದಿದ್ದ ಬಾಳೆ ಬೆಳೆ ನೆಲಕಚ್ಚಿದೆ. ಕೋಲಾರದಲ್ಲಿ ಮಾವಿನ ಹೂವು ಮತ್ತು ಕಾಯಿಗಳು ಉದುರಿದ್ದು, ದ್ರಾಕ್ಷಿ ಬೆಳೆಗಾರರು ರೋಗಭೀತಿಯ ಆತಂಕದಲ್ಲಿದ್ದಾರೆ.
ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಮಳೆಯಿಂದಾಗಿ ರಸ್ತೆಗಳೆಲ್ಲಾ ಬಿಳಿ ಮಂಜಿನಿಂದ ಆವೃತವಾಗಿದ್ದು, ಕಾಶ್ಮೀರದಂತಹ ದೃಶ್ಯ ಕಂಡುಬಂದಿದೆ. ಶಿವಮೊಗ್ಗದಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಮೈಸೂರಿನ ಹುಣಸೂರು ತಾಲೂಕಿನ ದಾಸನಪುರದಲ್ಲಿ ಶಾಲೆಯ ಮೇಲ್ಚಾವಣಿ ಹಾರಿಹೋಗಿದೆ. ಶಿಕ್ಷಕರ ಸಮಯಪ್ರಜ್ಞೆಯಿಂದಾಗಿ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನ ಕಡಬ, ದಾವಣಗೆರೆಯ ಗುಡಾಳ್ ಗ್ರಾಮ ಮತ್ತು ಬಾಗಲಕೋಟೆಯಲ್ಲಿಯೂ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ತುಸು ನೆಮ್ಮದಿ ಸಿಕ್ಕಿದೆ.
‘ಧುರಂಧರ್ 2’ ಸಿನಿಮಾ (Dhurandha 2) ಮಾರ್ಚ್ 19ರಂದು ರಿಲೀಸ್ ಆಗಲಿದೆ. ಅದಕ್ಕೂ ಒಂದು ದಿನ ಮೊದಲ ಎಲ್ಲ ಕಡೆಗಳಲ್ಲಿ ಪೇಯ್ಡ್ ಪ್ರೀಮಿಯರ್ಗಳನ್ನು ಆಯೋಜನೆ ಮಾಡಲಾಗಿತ್ತು. ಹೀಗಾಗಿ, ಒಂದು ದಿನ ಮೊದಲೇ ಅನೇಕರು ಸಿನಿಮಾನ ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಚಿತ್ರ ನೋಡಿದ ಅನೇಕರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಚಿತ್ರ ಪೇಯ್ಡ್ ಪ್ರೀಮಿಯರ್ನಿಂದಲೇ ಸಿನಿಮಾಗೆ ಭರ್ಜರಿ ಗಳಿಕೆ ಮಾಡಿದೆ. ಇದು ನಿರ್ಮಾಪಕರ ಖುಷಿ ಹೆಚ್ಚಿಸಿದೆ.
‘ಧುರಂಧರ್ 2’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಲು ಕಾರಣ ಮೊದಲ ಭಾಗ. ‘ಧುರಂಧರ್’ ಸಿನಿಮಾ ಹಿಟ್ ಆದ ಬಳಿಕ ‘ಧುರಂಧರ್ 2’ ಸಿನಿಮಾ ರಿಲೀಸ್ ಆಯಿತು. ವಿಶೇಷ ಎಂದರೆ, ‘ಧುರಂಧರ್’ ಸಿನಿಮಾ ಇನ್ನೂ ಥಿಯೇಟರ್ನಲ್ಲಿ ಪ್ರದರ್ಶನ ಕಾಣುತ್ತಿದೆ.ಹಾಗಿರುವಾಗಲೇ ‘ಧುರಂಧರ್ 2’ ತೆರೆಗೆ ಅಪ್ಪಳಿಸಿದೆ. ಈ ಚಿತ್ರವನ್ನು ನೋಡಿದ ವೀಕ್ಷರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
‘ಧುರಂಧರ್ 2’ ಸಿನಿಮಾ ಪೇಯ್ಡ್ ಪ್ರೀಮಿಯರ್ಗಿಂದಲೇ 50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ಈ ಮೊದಲು ಪವನ್ ಕಲ್ಯಾಣ್ ನಟನೆಯ ‘ಒಜಿ’ ಸಿನಿಮಾ ಪ್ರೀಮಿಯರ್ ಶೋಗಳಿಂದ 25 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಮಾಡಿತ್ತು. ಆ ದಾಖಲೆಗಳನ್ನು ‘ಧುರಂಧರ್ 2’ ಮುರಿದು ಹಾಕಿದೆ. ಪ್ರೀಮಿಯರ್ ಶೋಗಳಿಂದ ‘ಓಜಿ’ ಚಿತ್ರ ಮಾಡಿದ ಗಳಿಕೆಗಿಂತ ದುಪ್ಪಟ್ಟು ಗಳಿಕೆಯನ್ನು ‘ಧುರಂಧರ್ 2’ ಸಿನಿಮಾ ಮಾಡಿದೆ.
ಇಂದು ಯುಗಾದಿ ಪ್ರಯುಕ್ತ ರಜಾ ಇದೆ. ಇದು ‘ಧುರಂಧರ್ 2’ ಸಿನಿಮಾಗೆ ಸಹಕಾರಿ ಆಗಲಿದೆ. ಈ ಚಿತ್ರದ ಬುಕಿಂಗ್ ಜೋರಾಗಿಯೇ ನಡೆಯುತ್ತಿದೆ. ಹೀಗಾಗಿ, ಮೊದಲ ದಿನ ಸಿನಿಮಾದ ಕಲೆಕ್ಷನ್ 200-300 ಕೋಟಿ ರೂಪಾಯಿ ಆಗಬಹುದು ಎಂದು ಊಹಿಸಲಾಗಿದೆ. ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಈ ಕಾರಣದಿಂದಲೂ ಚಿತ್ರ ಹೆಚ್ಚು ಗಳಿಕೆ ಮಾಡಬಹುದು.
ರಣವೀರ್ ಸಿಂಗ್, ಸಾರಾ ಅರ್ಜುನ್, ಅರ್ಜುನ್ ರಾಮ್ಪಾಲ್, ಸಂಜಯ್ ದತ್ ಮೊದಲಾದವರು ‘ಧುರಂಧರ್ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಆದಿತ್ಯ ಧಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಕತಾರ್, ಮಾರ್ಚ್ 19: ಇರಾನ್(Iran) ನಡೆಸುತ್ತಿರುವ ದಾಳಿಯು ಭಾರತಕ್ಕೆ ನೇರವಾಗಿ ಪರಿಣಾಮ ಬೀರದಿದ್ದರೂ ಕೂಡ ಪರೋಕ್ಷವಾಗಿ ಅದರ ಪರಿಣಾಮವನ್ನು ಅನುಭವಿಸುತ್ತಿದೆ. ಪಶ್ಚಿಮ ಏಷ್ಯಾ ಅಥವಾ ಮಧ್ಯಪ್ರಾಚ್ಯವು ಪೂರ್ಣ ಪ್ರಮಾಣದ ಯುದ್ಧಭೂಮಿಯಾಗಿದೆ. ಯುದ್ಧವು ಇರಾನ್ ಮತ್ತು ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ನೇರವಾಗಿ ನಡೆದರೂ, ಅದರ ಪರಿಣಾಮವು ಇಡೀ ವಿಶ್ವ ಅನುಭವಿಸುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ.
ಇರಾನ್ ಕೊಲ್ಲಿಯಲ್ಲಿರುವ ಯುಎಸ್ ವಾಯುನೆಲೆಗಳು ಮತ್ತು ಮಿಲಿಟರಿ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿತ್ತು. ಈಗ, ಇರಾನ್ ಒಂದು ಹೆಜ್ಜೆ ಮುಂದೆ ಹೋಗಿದೆ. ಅದು ಪಶ್ಚಿಮ ಏಷ್ಯಾದಲ್ಲಿ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಲು ಪ್ರಾರಂಭಿಸಿದೆ. ಇಡೀ ಜಗತ್ತನ್ನು ಕಾಡುತ್ತಿರುವ ಭಯ ಈಗ ವಾಸ್ತವವಾಗುತ್ತಿದೆ.
ಇರಾನ್ ಕತಾರ್‌ನಲ್ಲಿರುವ ಇಂಧನ ಸೌಲಭ್ಯಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿತ್ತು, ಆದರೆ ಈಗ ಅದನ್ನು ಪ್ರಾರಂಭಿಸಿದೆ.ಕತಾರಿ ಅನಿಲ ಸೌಲಭ್ಯದ ಮೇಲಿನ ದಾಳಿ ಈಗಾಗಲೇ ಪ್ರಾರಂಭವಾಗಿದೆ. ಇದರರ್ಥ ಅನಿಲ ಬೆಲೆಗಳು ಗಗನಕ್ಕೇರಲಿವೆ.
ಇರಾನ್ ಈಗ ಅದು ಗಾಯಗೊಂಡ ಸಿಂಹದಂತಾಗಿದೆ. ಅದು ಸೇಡಿನ ಬೆಂಕಿಯಿಂದ ಉರಿಯುತ್ತಿದೆ. ಇರಾನ್ ಈಗ ತನ್ನ ಅನಿಲ ಘಟಕಗಳ ಮೇಲಿನ ಇಸ್ರೇಲ್ ದಾಳಿಗೆ ಸೇಡು ತೀರಿಸಿಕೊಳ್ಳಲು ಪ್ರಾರಂಭಿಸಿದೆ. ತನ್ನ ಅನಿಲ ಘಟಕಗಳ ಮೇಲಿನ ದಾಳಿಯ ನಂತರ, ಇರಾನ್ ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ತೈಲ ಮತ್ತು ಅನಿಲ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ.
ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ನಡೆಯುತ್ತಿರುವ ಯುದ್ಧದ ಸಮಯದಲ್ಲಿ ಇರಾನ್ ಈ ಹಿಂದೆಯೂ ಇದೇ ರೀತಿಯ ಬೆದರಿಕೆಗಳನ್ನು ಹಾಕಿದೆ. ಆದರೆ ಈಗ ಇರಾನ್ ತನ್ನ ಬೆದರಿಕೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಾರಂಭಿಸಿದೆ. ಬುಧವಾರ ಪರ್ಷಿಯನ್ ಕೊಲ್ಲಿಯಲ್ಲಿರುವ ಇರಾನ್‌ನ ಸೌತ್ ಪಾರ್ಸ್ ಅನಿಲ ಘಟಕ ಮತ್ತು ಅದರ ಸಂಬಂಧಿತ ಮೂಲಸೌಕರ್ಯಗಳ ಮೇಲೆ ದಾಳಿಯ ನಂತರ ಇರಾನ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇಸ್ರೇಲ್ ಈ ದಾಳಿಯನ್ನು ನಡೆಸಿತು. ಈಗ ಅದು ಅಮೆರಿಕ ಮತ್ತು ಇಸ್ರೇಲಿ ಮಿತ್ರರಾಷ್ಟ್ರಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ.
New video reportedly showing huge fire at the moment of impact of an Iranian ballistic missile attack on the Ras Laffan Gas facility in Qatar.
ಪ್ರಮುಖ ಇಂಧನ ಮೂಲಸೌಕರ್ಯಗಳ ಮೇಲೆ ಕ್ಷಿಪಣಿ ದಾಳಿ ನಡೆದ ನಂತರ ಇರಾನ್-ಇಸ್ರೇಲ್-ಯುಎಸ್ ಸಂಘರ್ಷವು ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇರಾನ್ ಕತಾರ್‌ನ ರಾಸ್ ಲಫಾನ್ ಕೈಗಾರಿಕಾ ನಗರದ ಮೇಲೆ ಕ್ಷಿಪಣಿ ದಾಳಿ ನಡೆಸಿತು. ಈ ದಾಳಿಯಲ್ಲಿ ಕತಾರ್ ಗಮನಾರ್ಹ ಹಾನಿಯನ್ನು ಅನುಭವಿಸಿದೆ .
ಗಲ್ಫ್ ದೇಶಗಳಲ್ಲಿನ ಇಂಧನ ಮೂಲಸೌಕರ್ಯದ ಮೇಲೆ ಈ ದಾಳಿಯ ಪರಿಣಾಮವು ಅನಿಲ ಮತ್ತು ತೈಲ ಬೆಲೆಗಳಲ್ಲಿ ಏರಿಕೆಗೆ ಕಾರಣವಾಗಬಹುದು. ರಾಸ್ ಲಫಾನ್ ಸಂಕೀರ್ಣದ ಮೇಲಿನ ಕ್ಷಿಪಣಿ ದಾಳಿಯು ಮಧ್ಯಪ್ರಾಚ್ಯ ಮತ್ತು ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಆಘಾತದ ಅಲೆಗಳನ್ನು ಹುಟ್ಟುಹಾಕಿದೆ.
ಈ ದಾಳಿಯು ಇರಾನ್ ಮತ್ತು ಯುಎಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಅಪಾಯಕಾರಿ ತಿರುವು ಎಂದೇ ಹೇಳಬಹುದು. ಕತಾರ್ ಭಾರತದ ಅತಿದೊಡ್ಡ ಅನಿಲ ಪೂರೈಕೆದಾರ. ಭಾರತವು ಕತಾರ್‌ನಿಂದ ಅತಿ ಹೆಚ್ಚು ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ.
ಭಾರತವು ವಾರ್ಷಿಕವಾಗಿ ಸುಮಾರು 27 ಮಿಲಿಯನ್ ಟನ್ ಎಲ್‌ಎನ್‌ಜಿಯನ್ನು ಆಮದು ಮಾಡಿಕೊಳ್ಳುತ್ತದೆ, ಇದರಲ್ಲಿ ಕತಾರ್ 47% ಅಥವಾ ವಾರ್ಷಿಕವಾಗಿ ಸರಿಸುಮಾರು 12-13 ಮಿಲಿಯನ್ ಟನ್‌ಗಳನ್ನು ಹೊಂದಿದೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿರುವುದರಿಂದ ಅನೇಕ ಭಾರತೀಯ ಅನಿಲ ಹಡಗುಗಳು ಇನ್ನೂ ಸಮುದ್ರದಲ್ಲಿ ಸಿಲುಕಿಕೊಂಡಿವೆ.
ಭಾರತವು ಇರಾನ್‌ನೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದೆ ಮತ್ತು ತನ್ನ ಹಡಗುಗಳನ್ನು ಒಂದೊಂದಾಗಿ ಸ್ವದೇಶಕ್ಕೆ ಹಿಂದಿರುಗಿಸುತ್ತಿದೆ.ರಾಸ್ ಲಫಾನ್ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡರೆ, ಭಾರತವು ಇತರ ಮೂಲಗಳಿಂದ ದುಬಾರಿ ಅನಿಲ ಖರೀದಿಸಬೇಕಾಗುತ್ತದೆ.