ನವದೆಹಲಿ, ಮಾರ್ಚ್ 18: ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಚಲಿಸುವ ರೈಲನ್ನು ಹತ್ತಲು ಅಥವಾ ಇಳಿಯಲು ಪ್ರಯತ್ನಿಸಬೇಡಿ ಎಂದು ಎಚ್ಚರಿಸುತ್ತಲೇ ಇರುತ್ತಾರೆ. ಆ ರೀತಿ ಮಾಡುವುದರಿಂದ ಜೀವಕ್ಕೇ ಅಪಾಯವಾಗಬಹುದು. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಆಘಾತಕಾರಿ ವೀಡಿಯೊವೊಂದು ವೈರಲ್ (Viral Video) ಆಗುತ್ತಿದೆ. ಅದರಲ್ಲಿ, ಚಲಿಸುವ ರೈಲನ್ನು ಹತ್ತಲು ವ್ಯಕ್ತಿಯೊಬ್ಬ ಪ್ರಯತ್ನಿಸಿ ಕಾಲು ಜಾರಿ ಬೀಳುತ್ತಾನೆ. ತಕ್ಷಣ ಅಲ್ಲಿದ್ದ ಮಹಿಳಾ ಕಾನ್ಸ್ಟೆಬಲ್ ಆತನನ್ನು ಮೇಲೆತ್ತಿ ಪ್ರಾಣ ಉಳಿಸಿದ್ದಾರೆ. ಇದರಿಂದ ಆತ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾನೆ.
‘ಧುರಂಧರ್’ ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಇದಾದ ಕೇವಲ ಮೂರೇ ತಿಂಗಳಿಗೆ ‘ಧುರಂಧರ್ 2’ ರಿಲೀಸ್ ಆಗಿದೆ. ಈ ಸಿನಿಮಾದ ರನ್ಟೈಮ್ 3 ಗಂಟೆ 49 ನಿಮಿಷ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆ ನಿರೀಕ್ಷೆಗಳನ್ನು ಸಿನಿಮಾ ತಲುಪಿತೇ? ಆ ಬಗ್ಗೆ ಇಲ್ಲಿದೆ ವಿವರ.
‘ಧುರಂಧರ್’ ಸಿನಿಮಾ ಕ್ಲೈಮ್ಯಾಕ್ಸ್ನಲ್ಲಿ ಹಮ್ಜಾ ಅಲಿ ಮಜಾರಿ, ರೆಹ್ಮಾನ್ ಡಕಾಯಿತ್ನ ಹತ್ಯೆ ಮಾಡುತ್ತಾನೆ. ಆ ಬಳಿಕ ನಡೆಯುವ ಕಥೆಯೇ ‘ಧುರಂಧರ್ 2’. ಸಿನಿಮಾದ ಹೆಸರೇ ‘ಧುರಂಧರ್: ದಿ ರಿವೇಂಜ್’. ಹೀಗಾಗಿ, ಸಿನಿಮಾ ಉದ್ದಕ್ಕೂ ಸೇಡಿನ ಕಥೆ ಸಾಗುತ್ತದೆ. ರಕ್ತದೋಕುಳಿ ಹರಿಯುತ್ತದೆ. ಉರುಳುವ ತಲೆಗಳಿಗೆ ಲೆಕ್ಕ ಇಲ್ಲ. ಹಾಗಾದಾರೆ ಈ ಸೇಡಿನ ಹಿಂದಿನ ಕಾರಣವೇನು? ಜಸ್ಕಿರತ್ ಸಿಂಗ್, ಹಮ್ಜಾ ಆಗಿದ್ದೇಕೆ? ಅದನ್ನು ಸಿನಿಮಾದಲ್ಲೇ ನೋಡಬೇಕು.
‘ಧುರಂಧರ್’ ಸಿನಿಮಾದಲ್ಲಿ ಜಸ್ಕಿರತ್ ಸಿಂಗ್ ರಂಗಿ ಹೇಗೆ ಹಮ್ಜಾ ಆದ ಎಂಬುದನ್ನು ತೋರಿಸಿಲ್ಲ. ಆದರೆ, ಈ ಸಿನಿಮಾದಲ್ಲಿ ಜಸ್ಕಿರತ್ ಹಿನ್ನೆಲೆಯನ್ನು ವಿವರವಾಗಿ ಹೇಳಲಾಗಿದೆ. ಇದಕ್ಕಾಗಿ ನಿರ್ದೇಶಕರು ಆರಂಭದ ಅರ್ಧ ಗಂಟೆಯನ್ನು ಮೀಸಲಿಟ್ಟಿದ್ದಾರೆ. ಈ ಚಿತ್ರ ಪ್ರೀಕ್ವೆಲ್ನಿಂದ ಆರಂಭ ಆಗಿ, ಸೀಕ್ವೆಲ್ಗೆ ಸಾಗುತ್ತದೆ. ರಣವೀರ್ ಸಿಂಗ್ ಅವರು ಚಿತ್ರದುದ್ದಕ್ಕೂ ಕಾಣಿಸಿಕೊಂಡಿದ್ದಾರೆ. ಅವರದ್ದು ಒನ್ ಮ್ಯಾನ್ ಶೋ ಎಂದರೂ ತಪ್ಪಾಗಲಿಕ್ಕಿಲ್ಲ.
‘ಧುರಂಧರ್ 2’ ಸಿನಿಮಾದಲ್ಲಿ ಕೆಲವು ಟ್ವಿಸ್ಟ್ಗಳಿವೆ. ಆ ತಿರುವುಗಳನ್ನು ನೀವು ಊಹಿಸಲಿಕ್ಕೂ ಸಾಧ್ಯವಿಲ್ಲ. ಈ ಕಾರಣಕ್ಕೆ ‘ಧುರಂಧರ್ 2’ ಸಿನಿಮಾ ಹೆಚ್ಚು ಮನರಂಜನೆ ಕೊಡುತ್ತದೆ. ರಣವೀರ್ ಸಿಂಗ್ ಅವರು ರಕ್ತದೋಕುಳಿಯಲ್ಲಿ ಮಿಂದೆದ್ದಿದ್ದಾರೆ. ಅವರು ಭರ್ಜರಿ ಆ್ಯಕ್ಷನ್ ಮೆರೆದಿದ್ದಾರೆ. ಒಮ್ಮೆ ಹಮ್ಜಾ ಆಗಿ, ಮತ್ತೊಮ್ಮೆ ಜಸ್ಕಿರತ್ ಆಗಿ ಅವರು ಇಷ್ಟ ಆಗುತ್ತಾರೆ. ಆ್ಯಕ್ಷನ್ ದೃಶ್ಯಗಳನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ.
ಇನ್ನು, ಈ ಚಿತ್ರದ ಮತ್ತೊಂದು ಹೈಲೈಟ್ ಎಂದರೆ ಅರ್ಜುನ್ ರಾಂಪಾಲ್. ಅವರು ಐಸಿಸ್ ಮೇಜರ್ ಇಕ್ಬಾಲ್ ಆಗಿ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರಕ್ಕೂ ಸಾಕಷ್ಟು ತೂಕ ಇದೆ. ಎಸ್ಪಿ ಚೌದ್ರಿ ಅಸ್ಲಾಮ್ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರದ ಬಳಕೆ ಸರಿಯಾಗಿ ಆಗಿಲ್ಲ. ಆರ್. ಮಾಧವನ್ ಅವರು ಅಜಯ್ ಸನ್ಯಾಲ್ ಆಗಿ ಕಾಣಿಸಿಕೊಂಡಿದ್ದಾರೆ. ಸಾರಾ ಅರ್ಜುನ್, ರಾಕೇಶ್ ಬೇಡಿ ಮೊದಲಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಶಾಶ್ವತ್ ಸಚ್ದೇವ್ ಹಿನ್ನಲೆ ಸಂಗೀತ ಚಿತ್ರದ ತೂಕವನ್ನು ಹೆಚ್ಚಿಸಿದೆ. ಹಿನ್ನೆಲೆಯಲ್ಲಿ ಬರುವ ಹಾಡುಗಳು ಕೂಡ ಮನಸ್ಸಿನಲ್ಲಿ ಉಳಿಯುತ್ತವೆ. ವಿಕಾಶ್ ಛಾಯಾಗ್ರಹಣ ಸಿನಿಮಾವನ್ನು ಮತ್ತಷ್ಟು ಅಂದಗೊಳಿಸಿದೆ.
ನಿರ್ದೇಶಕ ಆದಿತ್ಯ ಧಾರ್ ಶ್ರಮವನ್ನು ಮೆಚ್ಚಲೇಬೇಕು. ಒಂದು ಅದ್ಭುತ ಚಿತ್ರವನ್ನು ಪ್ರೇಕ್ಷಕರ ಎದುರು ಇಟ್ಟಿದ್ದಾರೆ. ಈ ಚಿತ್ರವನ್ನು ‘ಧುರಂಧರ್’ಗಿಂತ ಮತ್ತಷ್ಟು ರಾ ಆಗಿ ಕಟ್ಟಿಕೊಟ್ಟಿದ್ದಾರೆ. ಅವರ ಕಡೆಯಿಂದ ಒಂದೊಳ್ಳೆಯ ಸ್ಪೈ ಸಿನಿಮಾ ಸಿಕ್ಕಿದೆ. ಹಲವು ನೈಜ ಘಟನೆಗಳನ್ನು ಕಾಲ್ಪನಿಕ ಕಥೆಯಲ್ಲಿ ಹೊಸೆದಿದ್ದಾರೆ. ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ, ನೋಟ್ ಬ್ಯಾನ್, ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ಮೋದಿ ಮಾತನಾಡಿದ ನೈಜ ವಿಡಿಯೋ ತೋರಿಸಿದ್ದಾರೆ ಆದಿತ್ಯ ಧಾರ್. ನೋಟ್ ಬ್ಯಾನ್ ಹಿಂದಿನ ಕಾರಣವನ್ನೂ ಕಥೆಗೆ ಲಿಂಕ್ ಕೊಟ್ಟಿದ್ದಾರೆ. ಈ ರೀತಿಯ ಹಲವು ಘಟನೆಗಳನ್ನು ತೋರಿಸಲಾಗಿದೆ. ಆದರೆ, ಇದರಲ್ಲಿ ಯಾವುದು ನೈಜ ಘಟನೆ? ಯಾವುದು ಕಾಲ್ಪನಿಕ ಎಂಬ ಗೊಂದಲಕ್ಕೆ ಉತ್ತರ ಸಿಗೋದಿಲ್ಲ.
ಸಿನಿಮಾದ ಅವಧಿ ಬರೋಬ್ಬರಿ 3 ಗಂಟೆ ಹಾಗೂ 49 ನಿಮಿಷ. ಪ್ರತಿ ವಿಷಯವನ್ನು ವಿವರವಾಗಿ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ಇದು ಕೆಲವು ಕಡೆಗಳಲ್ಲಿ ಪ್ರೇಕ್ಷಕನ ತಾಳ್ಮೆ ಪರೀಕ್ಷೆ ಮಾಡುತ್ತದೆ. ಪ್ರೀ ಕ್ಲೈಮ್ಯಾಕ್ಸ್ನಲ್ಲಿ ಬರೋ ಫೈಟ್ ಬಹುದೀರ್ಘ ಎನಿಸುತ್ತದೆ. ಬಡೆ ಸಾಬ್ ಪಾತ್ರದ ಸುತ್ತಲಿನ ಸಸ್ಪೆನ್ಸ್ ಸಂಪೂರ್ಣವಾಗಿ ಟೊಳ್ಳೆನಿಸುತ್ತದೆ. ಅಕ್ಷಯ್ ಖನ್ನಾ ಮೊದಲ ಭಾಗದಲ್ಲಿ ಶೋ ಸ್ಟೀಲರ್ ಆಗಿದ್ದರು. ಆದರೆ, ಈ ಸಿನಿಮಾದಲ್ಲಿ ಅವರು ಪೋಸ್ಟರ್ಗೆ ಮಾತ್ರ ಸೀಮಿತ ಆಗಿದ್ದಾರೆ ಎಂಬುದು ಬೇಸರದ ವಿಷಯ.
ಯಾದಗಿರಿ, ಮಾರ್ಚ್ 18): ಜಿಲ್ಲೆಯ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ (Mallikarjun Mutya) ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ನಡೆಯುತ್ತಿದ್ದ ತನಿಖೆಗೆ ತಡೆ ನೀಡಿ ಹೈಕೋರ್ಟ್ನ ಕಲಬುರಗಿ ವಿಭಾಗೀಯ ಪೀಠ ಆದೇಶ ಹೊರಡಿಸಿದೆ. ಪ್ರಕರಣದಲ್ಲಿ ವಿಚಾರಣೆಗೆ ತಡೆ ನೀಡುವಂತೆ ಮುತ್ಯಾ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿರುವ ಕಲಬುರಗಿ ಹೈಕೋರ್ಟ್ ಪೀಠ (Kalaburagi High Court Bench) ಇಂದು (ಮಾರ್ಚ್ 18) ಮಧ್ಯಂತರ ತಡೆ ನೀಡಿದೆ. ಇದರಿಂದ ಸ್ವಯಂ ಘೋಷಿತ ದೇವಮಾನವನಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಬಾಲಕಿ ಜತೆ ಅನುಚಿತವಾಗಿ ವರ್ತನೆ ಆರೋಪದಲ್ಲಿ ಕಳೆದ ಫೆಬ್ರವರಿ 25 ರಂದು ಶಹಾಪುರ ಸಿಡಿಪಿಒ ನೀಡಿದ ದೂರಿನ ಮೇರೆಗೆ ಗೋಗಿ ಪೊಲೀಸ್ ಠಾಣೆಯಲ್ಲಿ ಮುತ್ಯಾ ವಿರುದ್ಧ ಕೇಸ್ ದಾಖಲಾಗಿದ್ದು, ಶಹಾಪುರ ಸಿಪಿಐ ಶರಣಗೌಡ ನ್ಯಾಮಣ್ಣನವರ ಪ್ರಕರಣದ ತನಿಖೆ ನಡೆಸುತ್ತಿದ್ದರು. ಈಗಾಗಲೇ ಮೊದಲ ಹಂತದ ವಿಚಾರಣೆ ನಡೆಸಿದ್ದು, ಮುತ್ಯಾಗೆ ಸೇರಿದ ನಾಲ್ಕು ಮೊಬೈಲ್ ಫೋನ್ಗಳನ್ನು ಸಹ ತನಿಖಾಧಿಕಾರಿ ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದರು. ಆದ್ರೆ, ಇದೀಗ ಕೋರ್ಟ್, ತನಿಖೆಗೆ ಮಧ್ಯಂತರ ತಡೆ ನೀಡಿದ್ದು, ಮುತ್ಯಾಗೆ ಕೊಂಚ ನಿರಾಳರಾಗಿದ್ದಾರೆ.
ಅಪ್ರಾಪ್ತ ಬಾಲಕಿಯೊಂದಿಗೆಅನುಚಿತ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಮುತ್ಯಾ (Mallikarjun Mutya) ನಿರೀಕ್ಷಣಾ ಜಾಮೀನು ಅರ್ಜಿ (Bail Plea) ವಜಾಗೊಂಡಿದೆ. ತಮ್ಮ ವಿರುದ್ಧದ ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಡೆಸಿದ್ದ ಯಾದಗಿರಿ (Yadagir ) ಜಿಲ್ಲಾ ಪ್ರಧಾನ, ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮರಳುಸಿದ್ದರಾಧ್ಯ ಅವರು ಮಾರ್ಚ್ 09 ವಜಾ ಮಾಡಿ ಆದೇಶ ಹೊರಡಿಸಿದ್ದರು. ಇದರಿಂದ ಮುತ್ಯಾಗೆ ಬಂಧನ ಭೀತಿ ಎದುರಾಗಿತ್ತು.
ಏನಿದು ಪ್ರಕರಣ?
ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ರಾಜ್ಯಾದ್ಯಂತ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಯಾದಗಿರಿ ಜಿಲ್ಲಾಧಿಕಾರಿ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಇದರ ಬೆನ್ನಲ್ಲೇ ಡಿಸಿ ಸೂಚನೆ ಮೇರೆಗೆ ಫೆಬ್ರವರಿ 25ರಂದು ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಮುತ್ಯಾ ನಾಪತ್ತೆಯಾಗಿದ್ದ. ಇನ್ನೊಂದೆಡೆ ಅವರ ಭಕ್ತರು ಹಾಗೂ ಕೋಲಿ ಸಮಾಜ ಪ್ರತಿಭಟನೆ ನಡೆಸಿದ್ದು, ಮುತ್ಯಾ ವಿರುದ್ಧದ ಫೋಕ್ಸೋ ಪ್ರಕರಣ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದರು.
ಸುಧೀರ್ ಅತ್ತಾವರ್ ನಿರ್ದೇಶನ ಮಾಡಿರುವ ‘ಕೊರಗಜ್ಜ’ (Koragajja) ಸಿನಿಮಾ ಚಿತ್ರೀಕರಣದ ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇದೆ. ಸಿನಿಮಾ ಈಗಾಗಲೇ ಬಿಡುಗಡೆ ಆಗಬೇಕಿತ್ತು ಆದರೆ ಇದೀಗ ಮತ್ತೊಮ್ಮೆ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಈ ಬಾರಿ ಕೆಲವು ವಿಶೇಷ ಕಾರಣಗಳಿಗೆ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಸಿನಿಮಾ ತಂಡದಿಂದ ಹೊರಬಿದ್ದಿರುವ ಹೊಸ ಅಪ್ಡೇಟ್ ಎಂದರೆ ‘ಕೊರಗಜ್ಜ’ ಸಿನಿಮಾ ಇದೀಗ 3ಡಿ ತಂತ್ರಜ್ಙಾನದೊಂದಿಗೆ ಬಿಡುಗಡೆ ಆಗಲಿದೆ.
ಸಾಮಾನ್ಯವಾಗಿ ಚಿತ್ರೀಕರಣದ ವೇಳೆಯಲ್ಲೇ 3ಡಿ ಶೂಟಿಂಗ್ ಮಾಡುವುದು ಸಂಪ್ರದಾಯ. ಆದರೆ ‘ಕೊರಗಜ್ಜ’ ಸಿನಿಮಾವನ್ನು 2ಡಿ ತಂತ್ರಜ್ಞಾನದಲ್ಲಿ ಶೂಟಿಂಗ್ ಮಾಡಲಾಗಿದೆ. ಆದರೆ ಈಗ ಅದನ್ನು 3ಡಿಗೆ ಬದಲಾಯಿಸಲಾಗುತ್ತಿದೆ. 2ಡಿ ಯಲ್ಲಿ ಶೂಟಿಂಗ್ ಮಾಡಿ ಮತ್ತೆ 3ಡಿ ಗೆ ಕನ್ವರ್ಟ್ ಮಾಡುವುದು ಹೆಚ್ಚು ದುಬಾರಿ. ಆದರೆ ಕೆಲವರ ಸಲಹೆ ಮೇರೆಗೆ ಸಿನಿಮಾವನ್ನು 3ಡಿಗೆ ಬದಲಾಯಿಸಲಾಗಿದೆ. ಪ್ರೇಕ್ಷಕರಿಗೆ ಒಳ್ಳೆಯ ಅನುಭವ ನೀಡಲು, ಸಿನಿಮಾವನ್ನು ಬೇರೆ ಬೇರೆ ಭಾಷೆಯರಿಗೆ ತಲುಪುವಂತೆ ಮಾಡಲು 3ಡಿ ತಂತ್ರಜ್ಞಾನದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.
2ಡಿಯಲ್ಲಿ ಚಿತ್ರೀಕರಣಗೊಂಡ ಸಿನಿಮಾವನ್ನು ದುಬಾರಿ ವೆಚ್ಚದಲ್ಲಿ 3ಡಿ ತಂತ್ರಜ್ಞಾನಕ್ಕೆ ಬದಲಾವಣೆ ಮಾಡಲಾಗುತ್ತಿದ್ದು, ಸುಮಾರು 40 ಮಂದಿ ತಂತ್ರಜ್ಞರ ತಂಡ ಈ ಕಾರ್ಯದಲ್ಲಿ ತೊಡಗಿದೆ ಎಂದು ನಿರ್ದೇಶಕ ಸುಧೀರ್ ಅತ್ತಾವರ ತಿಳಿಸಿದ್ದಾರೆ.
ಇದರ ಜೊತೆಗೆ ‘ಕೊರಗಜ್ಜ’ ಸಿನಿಮಾದ ಚಿತ್ರೀಕರಣವನ್ನು ನೀರಿನ ಅಡಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ನಟಿ ಶ್ರುತಿ ಹಾಗೂ ಇನ್ನೂ ಕೆಲವು ಕಲಾವಿದರು ಈ ಅಂಡರ್ವಾಟರ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಕೇರಳದ ತಿರುವನಂತಪುರಂ ನಲ್ಲಿ ಖ್ಯಾತ ಮಲಯಾಳಂ ನಟ ಮೋಹನ್ ಲಾಲ್ ರವರ ಒಡೆತನ ದಲ್ಲಿದ್ದ “ವಿಸ್ಮಯ” ಸ್ಟುಡಿಯೋದಲ್ಲಿ ಅಂಡರ್ ವಾಟರ್ ನ ವಿಶೇಷ ಸೆಟ್ ನಿರ್ಮಿಸಿ ನಟಿ ಶ್ರತಿ ಅಭಿನಯಿಸಿದ ಭಾಗಗಳನ್ನು ನೀರಿನ ಅಡಿಯಲ್ಲಿ ಖ್ಯಾತ ಮಲಯಾಳಂ ಸಿನೆಮಾಟೋಗ್ರಾಫರ್ ಮನೋಜ್ ಪಿಳ್ಳೈ ನಾಲ್ಕು ಕ್ಯಾಮರಗಳಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.
ಈ ವಿಶೇಷ ಶೈಲಿಯ ಚಿತ್ರೀಕರಣಕ್ಕಾಗಿ ಶ್ರತಿ ಸುಮಾರು 15ದಿನಗಳ ತಯಾರಿ ಪಡೆದಿದ್ದಾಗಿ ಹೇಳಿದೆ ಚಿತ್ರತಂಡ. ಶೂಟಿಂಗ್ ವೇಳೆ ಮಾರ್ಗದರ್ಶನಕ್ಕಾಗಿ ಸ್ಕ್ಯೂಬಾ ಡೈವರ್ಸ್ ಗಳನ್ನು ನಿಯೋಜಿಸಲಾಗಿತ್ತು. ಅಲ್ಲದೆ ಆಂಬ್ಯಲೆನ್ಸ್ ಮತ್ತು ವೈದ್ಯರ ತಂಡ ಕೂಡಾ ಸ್ಥಳದಲ್ಲಿ ಮೊಕ್ಕಾಂ ಹೂಡಿತ್ತು. ಹಾರ್ನೆಸ್ ನಲ್ಲಿ ಸುಮಾರು 30ಅಡಿ ಎತ್ತರದಿಂದ ನೀರಿಗೆ ಜಿಗಿದು ಮತ್ತೆ ಹಾರಿ ಹೊರಬರುವ ಮೈ ನವಿರೇಳಿಸುವ ಅಪಾಯಕಾರಿ ಸ್ಟಂಟ್ ನಲ್ಲಿ ನಟಿ ಶ್ರತಿ ಸ್ವತಃ ಅಭಿನಯಿಸಿ ಎಲ್ಲರನ್ನು ದಂಗು ಬಡಿಸಿದರು.ಇದಲ್ಲದೆ ನೀರಿನೊಳಗೆ 22 ಸೆಕೆಂಡ್ ಗಳ ಕಾಲ ಯಾವುದೇ ಆಮ್ಲಜನಕದ ಸಹಾಯವಿಲ್ಲದೆ ಶ್ರತಿ ಅಭಿನಯಿಸಿ ಎಲ್ಲರನ್ನು ದಂಗುಬಡಿಸಿದರು ಎಂದು ಚಿತ್ರತಂಡ ಹೇಳಿದೆ.
ಮಾರ್ಚ್ 28 ರಂದು 2026 ರ ಐಪಿಎಲ್ (IPL 2026) ಆರಂಭವಾಗಲಿದ್ದು, 19 ನೇ ಸೀಸನ್ ಆರಂಭವಾಗುವ ಮುನ್ನ ಸನ್ರೈಸರ್ಸ್ ಹೈದರಾಬಾದ್ (SRH) ತನ್ನ ಹೊಸ ನಾಯಕನನ್ನು ಘೋಷಿಸಿದೆ. ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ (Ishan Kishan) ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಸನ್ರೈಸರ್ಸ್ ಹೈದರಾಬಾದ್ ತಂಡದ ಚುಕ್ಕಾಣಿ ಹಿಡಿದ 11 ನೇ ನಾಯಕ ಇಶಾನ್ ಕಿಶನ್. ಕೆಲವು ಫ್ರಾಂಚೈಸಿಗಳು ನಾಯಕರನ್ನು ಬದಲಿಸುವುದನ್ನೇ ಕಾಯಕ ಮಾಡಿಕೊಂಡಿವೆ. ಪ್ರತಿ ಸೀಸನ್ಗೂ ಒಬ್ಬೊಬ್ಬರನ್ನು ನಾಯಕನಾಗಿ ನೇಮಿಸಿದ ನಿದರ್ಶನಗಳು ಇವೆ. ಹಾಗಿದ್ದರೆ, 10 ಐಪಿಎಲ್ ಫ್ರಾಂಚೈಸಿಗಳಲ್ಲಿ ಯಾವ ಫ್ರಾಂಚೈಸಿ ತನ್ನ ತಂಡದ ನಾಯಕರನ್ನು ಅಧಿಕ ಬಾರಿ ಬದಲಿಸಿದೆ ಎಂಬುದನ್ನು ನೋಡುವುದಾದರೆ..
ಮೊದಲ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ನಾಯಕರನ್ನು ಬದಲಿಸಿದ ಫ್ರಾಂಚೈಸಿಯಾಗಿದೆ. ಪಂಜಾಬ್ ಕಿಂಗ್ಸ್ ಇದುವರೆಗೆ 17 ನಾಯಕರನ್ನು ನೇಮಿಸಿದೆ. ಯುವರಾಜ್ ಸಿಂಗ್, ಸಂಗಕ್ಕಾರ, ಜಯವರ್ಧನೆ, ಗಿಲ್ಕ್ರಿಸ್ಟ್, ಡೇವಿಡ್ ಹಸ್ಸಿ, ಜಾರ್ಜ್ ಬೈಲಿ, ವೀರೇಂದ್ರ ಸೆಹ್ವಾಗ್, ಡೇವಿಡ್ ಮಿಲ್ಲರ್, ಮುರಳಿ ವಿಜಯ್, ಗ್ಲೆನ್ ಮ್ಯಾಕ್ಸ್ವೆಲ್, ಆರ್ ಅಶ್ವಿನ್, ಕೆಎಲ್ ರಾಹುಲ್, ಮಾಯಾಂಕ್ ಅಗರ್ವಾಲ್, ಶಿಖರ್ ಧವನ್, ಸ್ಯಾಮ್ ಕರನ್, ಜೀತೇಶ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಪಂಜಾಬ್ ತಂಡದ ನಾಯಕತ್ವ ವಹಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಕೂಡ ಹಿಂದೆ ಬಿದ್ದಿಲ್ಲ
ಐಪಿಎಲ್ನಲ್ಲಿ ಅತಿ ಹೆಚ್ಚು ನಾಯಕರನ್ನು ಬದಲಿಸಿದ ಎರಡನೇ ತಂಡ ಡೆಲ್ಲಿ ಕ್ಯಾಪಿಟಲ್ಸ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ದಿನೇಶ್ ಕಾರ್ತಿಕ್, ಜೇಮ್ಸ್ ಹೋಪ್ಸ್, ಜಯವರ್ಧನೆ, ವಾರ್ನರ್, ಕೆವಿನ್ ಪೀಟರ್ಸನ್, ಜೆಪಿ ಡುಮಿನಿ, ಜಹೀರ್ ಖಾನ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಡು ಪ್ಲೆಸಿಸ್ ಮತ್ತು ಅಕ್ಷರ್ ಪಟೇಲ್ ಈ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದಾರೆ.
11 ನಾಯಕರನ್ನು ಬದಲಿಸಿದ ಎಸ್ಆರ್ಹೆಚ್
ಸನ್ರೈಸರ್ಸ್ ಹೈದರಾಬಾದ್ ಐಪಿಎಲ್ನಲ್ಲಿ 11 ನಾಯಕರನ್ನು ಬದಲಿಸಿದೆ. ಇವರಲ್ಲಿ ಸಂಗಕ್ಕಾರ, ಕ್ಯಾಮರೂನ್ ವೈಟ್, ಶಿಖರ್ ಧವನ್, ಡ್ಯಾರೆನ್ ಸ್ಯಾಮಿ, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಭುವನೇಶ್ವರ್ ಕುಮಾರ್, ಮನೀಶ್ ಪಾಂಡೆ, ಮಾರ್ಕ್ರಾಮ್, ಕಮ್ಮಿನ್ಸ್ ಮತ್ತು ಇಶಾನ್ ಕಿಶನ್ ಸೇರಿದ್ದಾರೆ.
ಉಳಿದ ಫ್ರಾಂಚೈಸಿಗಳ ಪಟ್ಟಿ
ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಲಾ ಒಂಬತ್ತು ನಾಯಕರನ್ನು ನೇಮಿಸಿವೆ. ಆರ್ಸಿಬಿ ರಾಹುಲ್ ದ್ರಾವಿಡ್, ಕೆವಿನ್ ಪೀಟರ್ಸನ್, ಅನಿಲ್ ಕುಂಬ್ಳೆ, ಡೇನಿಯಲ್ ವೆಟ್ಟೋರಿ, ವಿರಾಟ್ ಕೊಹ್ಲಿ, ಶೇನ್ ವ್ಯಾಟ್ಸನ್, ಡು ಪ್ಲೆಸಿಸ್, ರಜತ್ ಪಟಿದಾರ್ ಮತ್ತು ಜಿತೇಶ್ ಶರ್ಮಾ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಮುಂಬೈ ಇಂಡಿಯನ್ಸ್ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಶಾನ್ ಪೊಲಾಕ್, ಡ್ವೇನ್ ಬ್ರಾವೋ, ರಿಕಿ ಪಾಂಟಿಂಗ್, ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸೌರವ್ ಗಂಗೂಲಿ, ಮೆಕಲಮ್, ಗಂಭೀರ್, ದಿನೇಶ್ ಕಾರ್ತಿಕ್, ಇಯೋನ್ ಮಾರ್ಗನ್, ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ಅಜಿಂಕ್ಯ ರಹಾನೆ ಸೇರಿದಂತೆ 8 ಆಟಗಾರರನ್ನು ನಾಯಕರನ್ನಾಗಿ ನೇಮಿಸಿದೆ. ರಾಜಸ್ಥಾನ ರಾಯಲ್ಸ್ ತಂಡವು ಶೇನ್ ವಾರ್ನ್, ಶೇನ್ ವ್ಯಾಟ್ಸನ್, ದ್ರಾವಿಡ್, ಸ್ಟೀವ್ ಸ್ಮಿತ್, ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ಸೇರಿದಂತೆ 7 ಆಟಗಾರರನ್ನು ನಾಯಕರನ್ನಾಗಿ ನೇಮಿಸಿದೆ.
ಚೆನ್ನೈ ಮತ್ತು ಲಕ್ನೋ ತಲಾ 4 ನಾಯಕರನ್ನು ನೇಮಿಸಿವೆ. ಧೋನಿ, ರೈನಾ, ಜಡೇಜಾ ಮತ್ತು ಗೈಕ್ವಾಡ್ ಚೆನ್ನೈ ತಂಡವನ್ನು ಮುನ್ನಡೆಸಿದ್ದಾರೆ. ಕೆಎಲ್ ರಾಹುಲ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ ಮತ್ತು ಪಂತ್ ಲಕ್ನೋ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದಾರೆ. ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ಮತ್ತು ಶುಭಮನ್ ಗಿಲ್ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಕೆಲಸ ಮಾಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಂಡ್ಯ, ಮಾರ್ಚ್ 18: ವೈರಮುಡಿ ಉತ್ಸವ ಕರ್ನಾಟಕದ ಅತ್ಯಂತ ಭವ್ಯ ಆಚರಣೆಗಳಲ್ಲೊಂದು. ವಜ್ರಖಚಿತ ಕಿರೀಟಧಾರಿಯಾದ ಶ್ರೀ ಚೆಲುವನಾರಾಯಣಸ್ವಾಮಿಯನ್ನು (Cheluvanarayana Swamy) ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಕ್ತಿ ಮತ್ತು ಸಂಸ್ಕೃತಿಯ ಸಮ್ಮಿಲನವಾಗುವ ಈ ಉತ್ಸವದಲ್ಲಿ ಈಗ ಹೊಸ ವಿವಾದವೊಂದು ಸೃಷ್ಟಿಯಾಗಿದೆ. ಸರ್ಕಾರದಿಂದ ನಡೆಯುತ್ತಿದ್ದ ಉತ್ಸವ ಇದೀಗ ಖಾಸಗಿ ಪ್ರಾಯೋಜಕತ್ವಕ್ಕೆ ಮೊರೆ ಹೋಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆದರೆ ಇದಕ್ಕೆ ಅಧಿಕಾರಿಗಳು ಕೊಡುತ್ತಿರುವ ಉತ್ತರವೇ ಬೇರೆ.
ಪ್ರಯೋಜಕತ್ವಕ್ಕೆ ಮೊರೆ ಹೋದ ಸರ್ಕಾರ?
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಮಾರ್ಚ್ 23 ರಿಂದ ಏಪ್ರಿಲ್ 4ರವರೆಗೆ ವೈರಮುಡಿ ಬ್ರಹ್ಮೋತ್ಸವ ನೆರವೇರಲಿದೆ. ಮಾರ್ಚ್ 28ರಂದು ನಡೆಯಲಿರುವ ವೈರಮುಡಿ ಕಿರೀಟಧಾರಣ ಮಹೋತ್ಸವಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪ್ರತಿವರ್ಷ ಅದ್ದೂರಿ ಉತ್ಸವಕ್ಕೆ ಅನುದಾನ ನೀಡುತ್ತ ಬಂದಿದ್ದ ಸರ್ಕಾರ ಈ ಉತ್ಸವಕ್ಕೆ ಹಣ ಬಿಡುಗಡೆ ಮಾಡದೆ ಖಾಸಗಿ ಪ್ರಯೋಜಕತ್ವಕ್ಕೆ ಮುಂದಾದರಾ ಅನ್ನೋ ಪ್ರಶ್ನೆ ಮೂಡಿದೆ.
ಕಳೆದ ಬಾರಿ ಸರ್ಕಾರ ನೀಡಿದ್ದ 1 ಕೋಟಿ ರೂ ಅನುದಾನದ ಭರವಸೆ ಮೇರೆಗೆ ವಿಜೃಂಭಣೆಯಿಂದ ವೈರಮುಡಿ ಉತ್ಸವ ನೆರವೇರಿತ್ತು. ಅದರಂತೆ ಈ ಬಾರಿ ಕೂಡ ಉತ್ಸವ ನಡೆಸಲು ಸರ್ಕಾರ ಮುಂದಾಗಿದೆ. ಆದರೆ ಉತ್ಸವಕ್ಕೆ ಖಾಸಗಿ ಪ್ರಯೋಜಕತ್ವ ಪಡೆಯುತ್ತಿದ್ದಾರೆ ಅನ್ನೋ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಆಹ್ವಾನ ಪತ್ರಿಕೆಯಲ್ಲಿ ಪ್ರಾಯೋಜಕರ ಹೆಸರು ನಮೂದಿಸಿದ್ದು, ಯಾವ ಮಾನದಂಡದ ಮೇಲೆ ಪ್ರಾಯೋಜಕರ ಹೆಸರನ್ನು ನಮೂದಿಸಿದ್ದು, ಅಂತ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದ್ದಿಷ್ಟು
ಈ ಆರೋಪಗಳನ್ನ ಮಂಡ್ಯ ಜಿಲ್ಲಾಧಿಕಾರಿಗಳು ತಳ್ಳಿಹಾಕಿದ್ದಾರೆ. ಪ್ರಾಯೋಜಕತ್ವ ಪಡೆಯಲಾಗುತ್ತೆ, ಆದರೆ ಅವರ ಹೆಸರನ್ನ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವುದಿಲ್ಲ. ಈ ವೈರಲ್ ಆಗಿರುವ ಆಹ್ವಾನ ಪತ್ರಿಕೆ ಅಧಿಕೃತವಲ್ಲ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲದೆ ಯಾರೋ ದುರುದ್ದೇಶ ಪೂರ್ವಕವಾಗಿ ಆಹ್ವಾನ ಪತ್ರಿಕೆ ವೈರಲ್ ಮಾಡಿದ್ದಾರೆ. ತನಿಖೆ ನಡೆಸಿ ಅಂತವರ ವಿರುದ್ಧ ಕನೂನು ಕ್ರಮ ಜರುಗಿಸುತ್ತೇವೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದ್ದಾರೆ.
ಒಟ್ಟಾರೆ ಭಕ್ತಿ ಮತ್ತು ಪರಂಪರೆಯ ಸಂಕೇತವಾಗಬೇಕಿದ್ದ ವೈರಮುಡಿ ಉತ್ಸವ ಈ ಬಾರಿ ಆರಂಭದಲ್ಲೇ ವಿಘ್ನ ಶುರುವಾಗಿದ್ದು, ನಿಜಕ್ಕೂ ಆಹ್ವಾನ ಪತ್ರಿಕೆ ಮುದ್ರಿಸಿರುವ ಉದ್ದೇಶ ಏನು ಅನ್ನೋದು ತನಿಖೆಯಿಂದ ಬಯಲಾಗಬೇಕಿದೆ.
ಬೆಂಗಳೂರು, (ಮಾರ್ಚ್ 18): ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಿನ್ನೆ (ಮಾರ್ಚ್ 17) ವರ್ಷದ ಮಳೆಯಾಗಿದ್ದು, ಇಂದು (ಮಾರ್ಚ್ 18) ಸಹ ಮಳೆಯಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಸುತ್ತಮುತ್ತ ಭಾರೀ ಆಲಿಕಲ್ಲು ಮಳೆಯಾಗುತ್ತಿದೆ. ಇದರಿಂದ ಮಳೆ ನೀರು ನುಗ್ಗಿ ಬಸ್ ನಿಲ್ಥಾಣ ಸೇರಿದಂತೆ ಹೆದ್ದಾರಿಯಲ್ಲಿ ಜನರ ಪರದಾಡುತ್ತಿದ್ದಾರೆ. ಇನ್ನು ಭಾರೀ ಮಳೆಯಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (kempegowda international airport) ಆಗಮಿಸಬೇಕಿದ್ದ 20ಕ್ಕೂ ಅಧಿಕ ವಿಮಾನಗಳು ಡೈವರ್ಟ್ ವಿಮಾನಗಳನ್ನು ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿಗೆ ಡೈವರ್ಟ್ ಮಾಡಲಾಗಿದೆ.
ಬೆಂಗಳೂರಿಗೆ ಬರುತ್ತಿದ್ದ ವಿಮಾನಗಳು ಬೇರೆಡೆಗೆ ಡೈವರ್ಟ್
ಸಂಜೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದರಿಂದ ಮುಂಜಾಗ್ರತಾವಾಗಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ 20 ಕ್ಕೂ ಅಧಿಕ ವಿಮಾನಗಳನ್ನು ಬೇರೆ ಕಡೆ ಡೈವರ್ಟ್ ಮಾಡಲಾಗಿದೆ. ಬೇರೆ ಕಡೆಗಳಿಂದ ಬರುತ್ತಿದ್ದ ವಿಮಾನಗಳನ್ನು ಪಕ್ಕದ ಚೆನ್ನೈ, ಹೈದರಾಬಾದ್, ಮಂಗಳೂರು, ಗುವಾಹಟಿ, ಪುಕೆಟ್,ಪಾಟ್ನಾ, ಲಕ್ನೋ, ಚಂಡಿಗಡ್, ಶ್ರೀನಗರ, ದೆಹಲಿ, ಇಂಪಾಲ್, ಕೊಚ್ಚಿಗೆ ಡೈವರ್ಟ್ ಮಾಡಲಾಗಿದೆ.
ಇನ್ನು ರಾಷ್ಟ್ರರಾಜಧಾನಿ ನವದೆಹಲಿಯಿಂದ ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳನ್ನು ಚೆನ್ನೈಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಬುಧವಾರ ಸಂಜೆ 5ರ ಮೇಲೆ ದೆಹಲಿಯಿಂದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಒಟ್ಟು ಹದಿನೈದು ವಿಮಾನಗಳನ್ನು ಚೆನ್ನೈಗೆ ಡೈವರ್ಟ್ ಮಾಡಲಾಗಿದೆ.
ಇನ್ನು ಮಳೆಯಿಂದಾಗಿ ಲ್ಯಾಂಡಿಂಗ್ ಸಮಸ್ಯೆ ಹಾಗೂ ಏರ್ ಟ್ರಾಪಿಕ್ ನಿಂದ ವಿಮಾನಗಳನ್ನ ಡೈವರ್ಟ್ ಮಾಡಲಾಗಿದೆ. ಇನ್ನು 30ಕ್ಕೂ ಅಧಿಕ ವಿಮಾನಗಳ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಡಿಲೆಯಾಗಿದೆ. ಇದರಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ ಪ್ರಯಾಣಿಕರು ಪರದಾಡುವಂತಾಗಿದೆ.
ಐಪಿಎಲ್ ಇತಿಹಾಸದಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದೆ. ಕೊಹ್ಲಿ 2011 ರಿಂದ 2023 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದ್ದರು. ಈ ಅವಧಿಯಲ್ಲಿ ನಾಯಕನಾಗಿ 143 ಪಂದ್ಯಗಳನ್ನಾಡಿದ್ದ ಕೊಹ್ಲಿ 4994 ರನ್ ಬಾರಿಸಿದ್ದರು. ಇದರಲ್ಲಿ ಐದು ಶತಕಗಳು ಮತ್ತು 37 ಅರ್ಧಶತಕಗಳನ್ನು ಸೇರಿದ್ದವು. ಆದರೂ ಕೊಹ್ಲಿಗೆ ತಂಡವನ್ನು ಟ್ರೋಫಿ ಗೆಲುವಿನತ್ತ ಮುನ್ನಡೆಸಲು ಸಾಧ್ಯವಾಗಲಿಲ್ಲ.
ಎರಡನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದ ಎಂಎಸ್ ಧೋನಿ ಇದ್ದಾರೆ. ನಾಯಕನಾಗಿ ಧೋನಿ 226 ಪಂದ್ಯಗಳಲ್ಲಿ 4753 ರನ್ ಗಳಿಸಿದ್ದಾರೆ. ಇದರಲ್ಲಿ 22 ಅರ್ಧಶತಕಗಳು ಸೇರಿವೆ. ಧೋನಿಯ ಗರಿಷ್ಠ ಸ್ಕೋರ್ ಅಜೇಯ 84 ರನ್.
ಮೂರನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಐಪಿಎಲ್ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ರೋಹಿತ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಐದು ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ. ಅವರು 158 ಪಂದ್ಯಗಳಲ್ಲಿ ನಾಯಕನಾಗಿ 3986 ರನ್ ಮತ್ತು 25 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಅವರ ಗರಿಷ್ಠ ಸ್ಕೋರ್ ಅಜೇಯ 98 ರನ್.
ನಾಲ್ಕನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎರಡು ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದ ಗೌತಮ್ ಗಂಭೀರ್ ಇದ್ದಾರೆ. ಗಂಭೀರ್ ನಾಯಕನಾಗಿ 129 ಪಂದ್ಯಗಳಲ್ಲಿ 3518 ರನ್ ಗಳಿಸಿದ್ದಾರೆ ಮತ್ತು 31 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಐದನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಇದ್ದಾರೆ. ವಾರ್ನರ್ ನಾಯಕನಾಗಿ 83 ಪಂದ್ಯಗಳಲ್ಲಿ 3356 ರನ್ ಗಳಿಸಿದ್ದಾರೆ. 2016 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಟ್ರೋಫಿಗೆ ಮುನ್ನಡೆಸಿದ್ದ ವಾರ್ನರ್ ಒಂದು ಶತಕ ಮತ್ತು 32 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಏನೂ ಬಂಡವಾಳ ಇಲ್ಲದೇ ಜನರು ಉನ್ನತ ಹಂತಕ್ಕೆ ಹೋಗಿರುವ ಉದಾಹರಣೆಗಳು ಹಲವಿವೆ. ಪಿತ್ರಾರ್ಜಿತ ಆಸ್ತಿ ಅಥವಾ ತಂದೆ ತಾಯಿಯ ಹಣದ ನೆರವು, ಮನೆ ಇತ್ಯಾದಿ ಯಾವ ಸೌಲಭ್ಯವೂ ಸ್ವಂತವಾಗಿ ಹಣ, ಆಸ್ತಿ ಸಂಪಾದನೆ ಮಾಡುವುದು ನಿಜಕ್ಕೂ ಸಾಧನೆಯೇ. ಈ ನಿಟ್ಟಿನಲ್ಲಿ ಯಾವುದೇ ವ್ಯಕ್ತಿಯ ಮೊದಲ ಮುಖ್ಯ ಅಂಶ ಆತನ ಸಂಪಾದನೆಯ ಶಕ್ತಿ. ಹಣ ಸಂಪಾದನೆಗೆ ಬೇಕಾದ ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಬಹಳ ಮುಖ್ಯ.
ಹಣವಂತರಾಗಲು ಮೂರು ಅಂಶಗಳಿರಬೇಕು. ಹಣ ಗಳಿಕೆ, ಹಣ ಉಳಿಸುವಿಕೆ ಮತ್ತು ಹಣ ಹೂಡಿಕೆ. ಹಣ ಗಳಿಕೆಗೆ ಬೇಕಾಗಿರುವುದು ಕೌಶಲ್ಯ. ತಂತ್ರಜ್ಞಾನ, ಎಂಜಿನಿಯರಿಂಗ್, ಫೈನಾನ್ಸ್, ಬ್ಯುಸಿನೆಸ್ ಇತ್ಯಾದಿ ಕೌಶಲ್ಯಗಳನ್ನು ಕಲಿತಿರಬೇಕು.
ಹೆಚ್ಚೆಚ್ಚು ಹಣ ಸಂಪಾದಿಸುವುದು ಎಷ್ಟು ಮುಖ್ಯವೋ, ಸಾಧ್ಯವಾದಷ್ಟೂ ಹಣವನ್ನು ಉಳಿಸುವುದೂ ಅಷ್ಟೇ ಮುಖ್ಯ. ಗಳಿಸಿದ ಹಣದಲ್ಲಿ ಅರ್ಧದಷ್ಟು ಹಣ ಉಳಿಸಲು ಸಾಧ್ಯವಾದರೆ ಬಹಳ ದೊಡ್ಡ ಸಂಗತಿ. ಎಮರ್ಜೆನ್ಸಿ ಫಂಡ್ ಇಟ್ಟಿರುವುದು, ಅಧಿಕ ಬಡ್ಡಿಯ ಸಾಲ ಪಡೆಯದಿರುವುದು ಇತ್ಯಾದಿ ಆರ್ಥಿಕ ಶಿಸ್ತನ್ನು ರೂಢಿಸಿಕೊಂಡವರು ಹಣವಂತರಾಗಲು ಸಾಧ್ಯ.
ಹೂಡಿಕೆ ರೂಢಿ
ಉಳಿಸಿದ ಹಣವನ್ನು ಹಾಗೇ ಇಟ್ಟುಕೊಂಡರೆ ಉಪಯೋಗವಿಲ್ಲ. ತಕ್ಕಮಟ್ಟಿಗೆ ಹಣ ಬೆಳೆಯುವ ಕಡೆ ಅದನ್ನು ಹೂಡಿಕೆ ಮಾಡಬೇಕು. ಫಿಕ್ಸೆಡ್ ಡೆಪಾಸಿಟ್, ಸ್ಮಾಲ್ ಸೇವಿಂಗ್ಸ್ ಸ್ಕೀಮ್, ಮ್ಯೂಚುವಲ್ ಫಂಡ್, ಇಟಿಎಫ್, ರಿಯಲ್ ಎಸ್ಟೇಟ್, ಷೇರುಗಳು ಇತ್ಯಾದಿ ಹಲವು ಹೂಡಿಕೆ ಮಾರ್ಗಗಳಿವೆ. ಇಟಿಎಫ್, ಇಂಡೆಕ್ಸ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ದೀರ್ಘಾವಧಿ ದೃಷ್ಟಿಯಲ್ಲಿ ಸುರಕ್ಷಿತ ಹಾಗೂ ಲಾಭದಾಯಕ ಎಂಬುದು ಈಗಾಗಲೇ ಸಾಬೀತಾಗಿರುವ ಸಂಗತಿ. ನೀವು ಸಂಪಾದನೆ ಶುರು ಮಾಡಿದಾಗಲೇ ಹೂಡಿಕೆ ಆರಂಭಿಸಿದರೆ ಬಹಳ ದೀರ್ಘಾವಧಿ ಹೂಡಿಕೆ ಸಾಧ್ಯವಾಗುತ್ತದೆ. ಹಣದ ಕಾಂಪೌಂಡಿಂಗ್ ಗುಣ ನಿಮಗೆ ವರದಾನವಾಗುತ್ತದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಮತ್ತು ರಮ್ಯಾ ನಟನೆಯ ‘ಆಕಾಶ್’ ಸಿನಿಮಾ ಬಿಡುಗಡೆ ಆಗಿ 21 ವರ್ಷಗಳಾಗಿವೆ. ಇತ್ತೀಚೆಗಷ್ಟೆ ‘ಆಕಾಶ್’ ಸಿನಿಮಾ ಮರು ಬಿಡುಗಡೆ ಆಗಿತ್ತು. ನಟಿ ರಮ್ಯಾ ಸಹ ‘ಆಕಾಶ್’ ಸಿನಿಮಾದ ಮರು ಬಿಡುಗಡೆ ಶೋಗೆ ಹೋಗಿ ಎಂಜಾಯ್ ಮಾಡಿದ್ದರು. ಇದೀಗ ನಟಿ ರಮ್ಯಾ ಅವರು ‘ಆಕಾಶ್’ ಸಿನಿಮಾದ ಶೂಟಿಂಗ್ನ ವಿಡಿಯೋ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘಣ್ಣ, ರಾಜ್ಕುಮಾರ್, ಪಾರ್ವತಮ್ಮ, ಯುವ, ವಿನಯ್ ರಾಜ್ಕುಮಾರ್, ಮಹೇಶ್ ಬಾಬು ಇನ್ನೂ ಹಲವರು ವಿಡಿಯೋನಲ್ಲಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ…