ಮದುವೆ ಮನೆಗಳೇ ಈತನ ಟಾರ್ಗೆಟ್: ಕುಖ್ಯಾತ ಕಳ್ಳ ಪಲ್ಸರ್ ಬಾಬು ಅರೆಸ್ಟ್; 42 ಲಕ್ಷ ರೂ.ಗೂ ಅಧಿಕ ಮೌಲ್ಯದ ಸ್ವತ್ತು ವಶ!

ಮದುವೆ ಮನೆಗಳೇ ಈತನ ಟಾರ್ಗೆಟ್: ಕುಖ್ಯಾತ ಕಳ್ಳ ಪಲ್ಸರ್ ಬಾಬು ಅರೆಸ್ಟ್; 42 ಲಕ್ಷ ರೂ.ಗೂ ಅಧಿಕ ಮೌಲ್ಯದ ಸ್ವತ್ತು ವಶ!

ಬೆಂಗಳೂರು, ಮಾರ್ಚ್​ 18: ಮದುವೆ ಸಮಾರಂಭಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಚನ್ನಪಟ್ಟಣ ಮೂಲದ ಕುಖ್ಯಾತ ಕಳ್ಳ ‘ಪಲ್ಸರ್ ಬಾಬು’ ಅಲಿಯಾಸ್ ಬಾಬುನನ್ನು (Pulsar Babu) ಬೆಂಗಳೂರಿನ (Bangalore) ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದ ಮದುವೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಈತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈತನ ವಿರುದ್ಧ ಈಗಾಗಲೇ 19 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಅಂದಹಾಗೆ, ಈತ ಈ ಹಿಂದೆ ಕೂಡ ಇಂಥದ್ದೇ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಯಾಗಿದ್ದ.

ಪಲ್ಸರ್ ಬಾಬುಗೆ ವರದಾನವಾಗಿದ್ದ ಕೊರೊನಾ

ಬಂಧಿತ ಆರೋಪಿ ಪಲ್ಸರ್ ಬಾಬು ವಿವಿಧ ಪೊಲೀಸ್ ಠಾಣೆಗಳ 19ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ. ಈ ಹಿಂದೆ ಈತ ಜೈಲು ಸೇರಿದ್ದ. ಕೊರೊನಾ ಸಮಯದಲ್ಲಿ ಸಣ್ಣಪುಟ್ಟ ಅಪರಾಧಗಳಡಿ ಜೈಲಲ್ಲಿದ್ದ ಸುಮಾರು 2,000 ಕೈದಿಗಳನ್ನು ಬಿಡುಗಡೆ ಮಾಡಿದಾಗ ಪಲ್ಸರ್ ಬಾಬುಗೂ ಹೊರಬರುವ ಅವಕಾಶ ಸಿಕ್ಕಿತ್ತು. ಆದರೆ, ಜೈಲಿನಿಂದ ಹೊರಬಂದ ಮೇಲೆ ಸುಧಾರಿಸುವ ಬದಲು ತನ್ನ ಹಳೆ ಚಾಳಿಯನ್ನೇ ಮುಂದುವರಿಸಿದ್ದ.

ಮಕ್ಕಳೇ ಈತನ ಟಾರ್ಗೆಟ್

ಐಷಾರಾಮಿ ಜೀವನ ಮತ್ತು ಮೋಜು-ಮಸ್ತಿಗೆ ದಾಸನಾಗಿದ್ದ ಈತ, ಮದುವೆ ಮನೆಗಳಲ್ಲಿ ಓಡಾಡುವ ಸಣ್ಣ ಮಕ್ಕಳನ್ನು ಟಾರ್ಗೆಟ್ ಮಾಡುತ್ತಿದ್ದ. ಮಕ್ಕಳ ಬಳಿ ಇರುವ ಚಿನ್ನಾಭರಣ ಹಾಗೂ ಮೊಬೈಲ್‌ಗಳನ್ನು ನಯವಾಗಿಯೇ ಎಗರಿಸಿ ಪರಾರಿಯಾಗುತ್ತಿದ್ದ. ಅಷ್ಟೇ ಅಲ್ಲದೆ, ಮದುವೆ ಮನೆಯಲ್ಲಿರುವ ಬೆಲೆಬಾಳುವ ಕ್ಯಾಮರಾ, ಲ್ಯಾಪ್‌ಟಾಪ್ ಹಾಗೂ ಪಾರ್ಕಿಂಗ್‌ನಲ್ಲಿರುವ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ.

ಕದ್ದ ಚಿನ್ನದಲ್ಲಿ ಶೋಕಿ!

ಆರೋಪಿ ಕದ್ದ ಚಿನ್ನವನ್ನು ಮಾರಾಟ ಮಾಡುವ ಬದಲು, ಅದನ್ನು ಕರಗಿಸಿ ತನಗೆ ಬೇಕಾದ ವಿನ್ಯಾಸದ ತಿರುಪತಿ ಲಾಕೆಟ್ ಮತ್ತು ಉಂಗುರಗಳನ್ನು ಮಾಡಿಸಿಕೊಂಡು ಶೋಕಿ ಮಾಡುತ್ತಿದ್ದ. ಅಲ್ಲದೆ, ಕದ್ದ ಹಣದಲ್ಲಿ ಕಾರುಗಳನ್ನು ಖರೀದಿ ಮಾಡಿ ಮೋಜು-ಮಸ್ತಿ ಮಾಡುತ್ತಿದ್ದ.

42 ಲಕ್ಷ ರೂ. ಮೌಲ್ಯದ ವಸ್ತುಗಳ ಜಪ್ತಿ

ಬಂಧಿತನಿಂದ ಪೊಲೀಸರು ಒಟ್ಟು 42.38 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 2 ಕಾರುಗಳು ಹಾಗೂ 4 ಬೈಕ್‌ಗಳು, 132 ಗ್ರಾಂ ಚಿನ್ನಾಭರಣ, 7 ಮೊಬೈಲ್ ಫೋನ್‌ಗಳು, 1 ಹೈ ಎಂಡ್ ಕ್ಯಾಮರಾ ಮತ್ತು 2 ಲೆನ್ಸ್‌ಗಳು, 2 ಲ್ಯಾಪ್‌ಟಾಪ್‌ಗಳು ಹಾಗೂ 1.20 ಲಕ್ಷ ರೂ. ನಗದು ಸೇರಿವೆ.

ಇದನ್ನೂ ಓದಿ: ಕೆಲಸ ಮಾಡ್ತಿದ್ದ ಅಂಗಡಿಗೇ ಕನ್ನ: ಕದ್ದ ಆಭರಣ ಮಾರಿ ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಸಿದ್ದವರು ಲಾಕ್!

ಆರೋಪಿ ಬಂಧನದಿಂದ ಸದಾಶಿವನಗರ, ವರ್ತೂರು, ಜಾಲಹಳ್ಳಿ, ಹೆಣ್ಣೂರು ಹಾಗೂ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಒಟ್ಟು 8 ಪ್ರಕರಣಗಳು ಬೆಳಕಿಗೆ ಬಂದಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಜ್ವಲ್ ರೇವಣ್ಣ ಪ್ರಕರಣ: ಪ್ರೀತಂ ಗೌಡ, ಶ್ರೇಯಸ್ ಪಟೇಲ್ ಆಪ್ತರಿಗೆ ಬಿಗ್ ರಿಲೀಫ್

ಹಾಸನ, ಮಾರ್ಚ್​​ 18: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ. ಈ ಪ್ರಕರಣದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ ಮತ್ತು ಸಂಸದ ಶ್ರೇಯಸ್ ಪಟೇಲ್ ಅವರ ಆಪ್ತರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ. ಪ್ರೀತಂ ಗೌಡ ಆಪ್ತರಾದ ಶರತ್ ಮತ್ತು ಕಿರಣ್, ಹಾಗೆಯೇ ಶ್ರೇಯಸ್ ಪಟೇಲ್ ಆಪ್ತರಾಗಿರುವ ಪುಟ್ಟರಾಜು ಅವರಿಗೆ ಆರೋಪಗಳಿಂದ ಮುಕ್ತಿ ದೊರೆತಿದೆ. ವಿಶೇಷ ತನಿಖಾ ತಂಡ (SIT) ಈ ಮೂವರ ಹೆಸರುಗಳನ್ನು ತಮ್ಮ ದೋಷಾರೋಪ ಪಟ್ಟಿಯಿಂದ ಕೈಬಿಟ್ಟಿದೆ. ಪ್ರಾಥಮಿಕ ಆರೋಪಗಳ ಪ್ರಕಾರ, ಶರತ್, ಕಿರಣ್ ಮತ್ತು ಪುಟ್ಟರಾಜು ಅವರು ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ಪೆನ್ ಡ್ರೈವ್ ವೀಡಿಯೋಗಳ ಹಂಚಿಕೆಯಲ್ಲಿ ಮತ್ತು ಅವುಗಳನ್ನು ದೊಡ್ಡ ಮಟ್ಟದಲ್ಲಿ ವೈರಲ್ ಮಾಡುವಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿತ್ತು. ಆದರೆ, ಎಸ್ಐಟಿ ನಡೆಸಿದ ತನಿಖೆಯಲ್ಲಿ ಇವರು   ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬುದು ದೃಢಪಟ್ಟಿದೆ.  ಹಾಸನದ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಕೆಯಾದ 13,712 ಪುಟಗಳ ಚಾರ್ಜ್ ಶೀಟ್‌ನಲ್ಲಿ ಈ ಮೂವರ ಹೆಸರುಗಳನ್ನು ಸೇರಿಸಲಾಗಿಲ್ಲ. ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಇವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೀವಾಗೇ ಅಮೆರಿಕ ಬಿಟ್ಟು ಹೋಗಿ; ಫ್ಲೈಟ್ ಟಿಕೆಟ್ ಕೊಡ್ತೀವಿ, ಎರಡೂವರೆ ಲಕ್ಷ ರೂ ಹಣ ಕೊಡ್ತೀವಿ: ವಲಸಿಗ ಭಾರತೀಯರಿಗೆ ಅಮೆರಿಕ ಆಫರ್

ವಾಷಿಂಗ್ಟನ್, ಮಾರ್ಚ್ 18: ಅಕ್ರಮವಾಗಿ ವಾಸಿಸುತ್ತಿರುವ ವಲಸಿಗರನ್ನು ಹೊರಗೆ ಕಳುಹಿಸಲು ಅಮೆರಿಕದ ಸರ್ಕಾರ ಹೊಸ ಪ್ಲಾನ್ ಹಾಕಿದೆ. ವಲಸಿಗರು ತಾವಾಗಿಯೇ ಹೊರ ಹೋಗಲು ಬಯಸಿದರೆ ಒಂದಷ್ಟು ಹಣಕಾಸು ನೆರವು ಕೊಡುವುದಾಗಿ ಸರಕಾರ ಹೇಳಿದೆ. ಈ ವಲಸಿಗರು ಹೊರಹೋಗುವುದಾದರೆ ಅವರಿಗೆ 2,600 ಡಾಲರ್​ಗಳ ಎಕ್ಸಿಟ್ ಬೋನಸ್ ಕೊಡಲಾಗುವುದು. ಅಂದರೆ, ಸುಮಾರು ಎರಡೂವರೆ ಲಕ್ಷ ರೂ ಪ್ರೋತ್ಸಾಹ ಧನ ಕೊಡಲಾಗುವುದು. ಜೊತೆಗೆ, ದಂಡಪಾವತಿ ಇತ್ಯಾದಿಯಿಂದ ವಿನಾಯಿತಿ ಸಿಗುತ್ತದೆ. ಫ್ಲೈಟ್ ಟಿಕೆಟ್ ಅನ್ನೂ ಸರ್ಕಾರವೇ ಒದಗಿಸುತ್ತದೆ.

ಅಮೆರಿಕದ ಗೃಹ ಭದ್ರತಾ ಇಲಾಖೆ ಇಂಥದ್ದೊಂದು ಆಫರ್ ಅನ್ನು ಅಕ್ರಮ ವಲಸಿಗರಿಗೆ ನೀಡಿದೆ. ಎಲ್ಲಾ ದೇಶದಿಂದ ಬಂದು ಅಕ್ರಮವಾಗಿ ನೆಲಸಿರುವ ವಲಸಿಗರಿಗೆ ಇದು ಅನ್ವಯ ಆಗುತ್ತದೆ. ತಮ್ಮ ದೇಶಕ್ಕೆ ವಾಪಸ್ ಹೋಗುವಂತೆ ಕೊಟ್ಟಿರುವ ಗಡುವು ಮೀರಿ ನೆಲಸಿರುವವರನ್ನು ಬಂಧಿಸಿ, ದಂಡ ವಿಧಿಸಿ, ಬಲವಂತವಾಗಿ ಗಡೀಪಾರು ಮಾಡುವ ಕಾನೂನು ಅಮೆರಿಕದಲ್ಲಿ ತರಲಾಗಿದೆ. ಆದರೆ, ಆ ಪರಿಸ್ಥಿತಿಯಲ್ಲಿ ಸಿಲುಕಲು ಬಯಸದೆ ಗೌರವಯುತವಾಗಿ ಹೊರಹೋಗಲು ಅವಕಾಶ ಬಯಸುತ್ತಿರುವವರಿಗೆ ಗೃಹ ಇಲಾಖೆ ಆಫರ್ ಕೊಟ್ಟಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಕಟ್ಟಡಕ್ಕೆ ಬೆಂಕಿ; ಮೂರು ಮಕ್ಕಳು ಸೇರಿ ಆರು ಮಂದಿ ಬಲಿ

ಅಮೆರಿಕದಿಂದ ತಾವಾಗೇ ಹೊರಹೋಗಲು ಬಯಸುವ ಅಕ್ರಮ ವಲಸಿಗರಿಗೆ 2,600 ಡಾಲರ್​ಗಳ ಎಕ್ಸಿಟ್ ಬೋನಸ್ ಕೊಡಲಾಗುತ್ತದೆ. ಉಚಿತವಾಗಿ ಪ್ರಯಾಣ ವ್ಯವಸ್ಥೆಯನ್ನು ಸರ್ಕಾರವೇ ಮಾಡುತ್ತದೆ. ಕೆಲ ದಂಡಗಳಿಂದಲೂ ವಿನಾಯಿತಿ ಕೊಡುತ್ತದೆ.

ಅಮೆರಿಕದ ಗೃಹ ಇಲಾಖೆಯ ಟ್ವೀಟ್

‘ನೀವು ನಿಮ್ಮ ದೇಶಕ್ಕೆ ಬೇಕಾದರೆ ಹೋಗಬಹುದು. ಅಥವಾ ನಿಮಗೆ ಕಾನೂನುಬದ್ಧ ವಾಸಕ್ಕೆ ಅವಕಾಶ ಇರುವ ದೇಶಕ್ಕೆ ಬೇಕಾದರೂ ಹೋಗಬಹುದು. ನೀವಾಗಿಯೇ ಹೋದರೆ ಭತ್ಯೆ ಕೊಡಲಾಗುತ್ತದೆ’ ಎಂದು ಅಮೆರಿಕದ ಗೃಹ ಇಲಾಖೆ ಹೇಳಿದೆ.

ಇದನ್ನೂ ಓದಿ: ಫ್ಲೈಟ್​ನಲ್ಲಿ ಶುಲ್ಕರಹಿತ ಸೀಟುಗಳು ಕನಿಷ್ಠ ಶೇ. 60 ಇರಬೇಕು; ಸರ್ಕಾರದಿಂದ ಹೊಸ ನಿಯಮಗಳು

ಇಲಾಖೆ ತನ್ನ ಎಕ್ಸ್ ಅಕೌಂಟ್​ನಿಂದ ಮಾಡಿದ ಒಂದು ಟ್ವೀಟ್​ನಲ್ಲಿ ತಾಜ್​ಮಹಲ್ ಫೋಟೋ ಕೂಡ ಇದೆ. ಅದು ಅಕ್ರಮವಾಗಿ ನೆಲಸಿರುವ ಭಾರತೀಯರನ್ನು ಉದ್ದೇಶಿಸಿ ಮಾಡಿರುವಂಥದ್ದು. ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿರುವ ವಲಸಿಗರಲ್ಲಿ ಭಾರತೀಯ ಸಮುದಾಯ 3ನೇ ಸ್ಥಾನ ಪಡೆಯುತ್ತದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

“ಟಿಕೆಟ್ ಬೇಕಿದ್ದರೆ ಡೈರೆಕ್ಟ್ ಡಿಎಂ ಮಾಡಿ”: ಐಪಿಎಲ್ ಟಿಕೆಟ್ ವಂಚನೆ ನಡೆಯುತ್ತಿದೆ ಎಚ್ಚರ

ಬೆಂಗಳೂರು, ಮಾ.18: ಐಪಿಎಲ್ ಪಂದ್ಯಾವಳಿ ಆರಂಭವಾಗುತ್ತಿರುವಂತೆಯೇ, ಟಿಕೆಟ್ ಖರೀದಿಯ ವಿಚಾರದಲ್ಲಿ ವಂಚನೆಗಳು ಹೆಚ್ಚಾಗುತ್ತಿವೆ. ಐಪಿಎಲ್ ಪಂದ್ಯಗಳ ಟಿಕೆಟ್‌ಗಳನ್ನು ಖರೀದಿಸಲು ಉತ್ಸುಕರಾಗಿರುವ ಅಭಿಮಾನಿಗಳು ಹೆಚ್ಚು ಜಾಗರೂಕರಾಗಿರಬೇಕು ಎಂದು ಬೆಂಗಳೂರು ಸೈಬರ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಐಪಿಎಲ್ ಟಿಕೆಟ್‌ಗಳನ್ನು ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ. ಈ ವಂಚಕರು, “ಟಿಕೆಟ್ ಬೇಕಿದ್ದರೆ ಡೈರೆಕ್ಟ್ ಮೆಸೇಜ್ (ಡಿಎಂ) ಮಾಡಿ” ಎಂದು ಪೋಸ್ಟ್‌ಗಳನ್ನು ಹಾಕಿ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಇಂತಹ ನಕಲಿ ಖಾತೆಗಳ ಸಂದೇಶಗಳಿಗೆ ಮರುಳಾಗಿ, ಅವರು ಸೂಚಿಸಿದಂತೆ ಹಣ ಪಾವತಿಸಿ ಟಿಕೆಟ್ ಖರೀದಿಸಲು ಮುಂದಾದರೆ, ನೀವು ನಿಮ್ಮ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಟಿಕೆಟ್‌ಗಳನ್ನು ಪೋಸ್ಟ್ ಮಾಡುವುದಾಗಿ ಅಥವಾ ಆನ್‌ಲೈನ್‌ನಲ್ಲಿ ಕಳುಹಿಸುವುದಾಗಿ ಹೇಳಿ ಹಣ ಪಡೆದು ನಂತರ ಯಾವುದೇ ಟಿಕೆಟ್ ನೀಡದೆ ವಂಚಿಸುವುದು ಇವರ ಸಾಮಾನ್ಯ ವಿಧಾನವಾಗಿದೆ. ಆದ್ದರಿಂದ, ಟಿಕೆಟ್‌ಗಳಿಗಾಗಿ ಹಣ ಕಳೆದುಕೊಳ್ಳುವುದನ್ನು ತಪ್ಪಿಸಲು, ಅಧಿಕೃತ ಮತ್ತು ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಟಿಕೆಟ್ ಖರೀದಿಸುವುದು ಅತಿ ಮುಖ್ಯ. ಸಾಮಾಜಿಕ ಜಾಲತಾಣಗಳಲ್ಲಿನ ನಕಲಿ ಪೋಸ್ಟ್‌ಗಳನ್ನು ನಂಬಿ ಮೋಸ ಹೋಗಬಾರದು ಎಂದು ಸೈಬರ್ ಪೊಲೀಸ್ ಇಲಾಖೆ ಸೂಚಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಪೇಡ್​ ಪ್ರೀಮಿಯರ್ ಶೋ ಕ್ಯಾನ್ಸಲ್; ಕೊನೆ ಕ್ಷಣದಲ್ಲಿ ತೊಂದರೆ

‘ಧುರಂಧರ್ 2’ ಸಿನಿಮಾಗೆ (Dhurandhar 2 ) ಕೊನೆಯ ಕ್ಷಣದಲ್ಲಿ ತೊಂದರೆ ಎದುರಾಗಿದೆ. ಸಿನಿಮಾದ ಕೆಲವು ದೃಶ್ಯಗಳಿಗೆ ಕತ್ತರಿ ಹಾಗೂ ಬದಲಾವಣೆ ಮಾಡಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಇದರಿಂದ ಕನ್ನಡ, ತೆಲುಗು ಸೇರಿದಂತೆ ಮೊದಲಾದ ಭಾಷೆಗಳಲ್ಲಿ ಸಿನಿಮಾ ಇಂದು ಪ್​ರೀಮೀಯರ್ ಆಗೋದು ಅನುಮಾನ ಎಂದು ಹೇಳಲಾಗುತ್ತಿದೆ. ಇದರಿಂದ ಕನ್ನಡ, ತೆಲುಗು ವರ್ಷನ್ ಬುಕ್ ಮಾಡಿದವರಿಗೆ ಬೇಸರ ಆಗಿದೆ. ಈಗಾಗಲೇ ಬೆಂಗಳೂರಲ್ಲಿ ಕನ್ನಡ ವರ್ಷನ್ ಪ್ರೀಮಿಯರ್​​ ಶೋಗಳನ್ನು ಕ್ಯಾನ್ಸಲ್ ಮಾಡಲಾಗಿದೆ.

ಮಾರ್ಚ್ 17ರಂದು ‘ಧುರಂಧರ್ 2’ ಚಿತ್ರಕ್ಕೆ ಪ್ರಮಾಣ ಪತ್ರ ಸಿಕ್ಕಿದೆ. 21 ಬದಲಾವಣೆಗಳನ್ನು ಮಾಡಲು ಸೂಚಿಸಲಾಗಿದೆ. ಅತ್ಯಂತ ಹಿಂಸಾತ್ಮಕ ವಿಷಯಗಳನ್ನು ತೆಗೆಯಲು ಸೂಚಿಸಲಾಗಿದೆ. ಸದ್ಯ ಹಿಂದಿ ವರ್ಷನ್ ಬಗ್ಗೆ ತಂಡದವರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಅದರ ಎಡಿಟ್ ಮಾಡಿ ಯುಎಫ್​​ಓಗೆ ಅಪ್​​ಲೋಡ್ ಮಾಡುವ ಭರದಲ್ಲಿ ತಂಡದವರಿದ್ದಾರೆ. ಹೀಗಾಗಿ, ಇನ್ನು, ಕನ್ನಡ ಹಾಗೂ ತೆಲುಗು ವರ್ಷನ್ ಇಂದು ಪ್ರದರ್ಶನ ಕಾಣೋದು ಅನುಮಾನ ಎನ್ನಲಾಗುತ್ತಿದೆ. ಸದ್ಯ ವೈಜಿಆರ್​ ಮಾಲ್​ ಅಲ್ಲಿ ಕನ್ನಡದ ಒಂದು ಶೋ ಇದೆ. ಅದು ಕೂಡ ಶೀಘ್ರವೇ ಕ್ಯಾನ್ಸಲ್ ಆಗಬಹುದು.

ಧುರಂಧರ್ 2

ಸದ್ಯ ಮೊದಲಾರ್ಧದ ಡಿಜಿಟಲ್ ಕಾಪಿ ಮಾತ್ರ ನೀಡಲಾಗಿದೆಯಂತೆ. ಎರಡನೇ ಭಾಗದ ಎಡಿಟಿಂಗ್ ನಡೆಯುತ್ತಿದೆ. ಹೀಗಾಗಿ, ಹಿಂದಿ ವರ್ಷನ್ ಪ್ರೀಮಿಯರ್​​ಗೂ ತೊಂದರೆ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾದ ಭೀಕರ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ: ತಗ್ಗಿತು ಚಿತ್ರದ ಅವಧಿ

ಬೆಂಗಳೂರಲ್ಲಿ ಕನ್ನಡ ವರ್ಷನ್​​ ಪ್ರೀಮಿಯರ್​​ಗಳನ್ನು ಇಂದು ಆಯೋಜಿಸಲಾಗಿತ್ತು. ಪಿವಿಆರ್, ಗೋಪಾಲನ್ ಅಲ್ಲಿ ಶೋ ನೀಡಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಇದನ್ನು ಕ್ಯಾನ್ಸಲ್ ಮಾಡಿರೋದು ಚರ್ಚೆ ಹುಟ್ಟುಹಾಕಿದೆ. ಹೀಗಾಗಿ, ಇಂದು ಶೋ ಕನ್ನಡ, ತೆಲುಗು ವರ್ಷನ್​ಗಳಲ್ಲಿ ಪ್ರದರ್ಶನ ಕಾಣೋದು ಅನುಮಾನವೇ.

‘ಧುರಂಧರ್ 2’ ಸಿನಿಮಾದ ರನ್​ ಟೈಮ್ ಈ ಮೊದಲು 3 ಗಂಟೆ 55 ನಿಮಿಷ ಇತ್ತು. ಹೊಸ ವರ್ಷನ್ ಮೂರು ಗಂಟೆ 49 ನಿಮಿಷ ಇದೆ. ರಣವೀರ್ ಸಿಂಗ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಆದಿತ್ಯ ಧಾರ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸೆನ್ಸಾರ್ ಪ್ರಮಾಣಪತ್ರದ ತೊಂದರೆಯನ್ನು ಅನೇಕ ಸಿನಿಮಾಗಳು ಎದುರಿಸಿವೆ. ‘ಧುರಂಧರ್ 2’ ಕೂಡ ಇದೆ ಸಮಸ್ಯೆಗೆ ಒಳಗಾಗಿರೋದು ಅನೇಕರಿಗೆ ಅಚ್ಚರಿ ತಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೆಡಿಕಲ್ ಸ್ಟೋರ್ ಪರವಾನಗಿ ನವೀಕರಣಕ್ಕಾಗಿ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಕೋಲಾರ ಡ್ರಗ್​​ ಕಂಟ್ರೋಲರ್

ಕೋಲಾರ, ಮಾರ್ಚ್​​ 18: ಮೆಡಿಕಲ್ ಸ್ಟೋರ್ ಪರವಾನಗಿ ನವೀಕರಣಕ್ಕಾಗಿ 38,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೋಲಾರ ಜಿಲ್ಲಾ ಡ್ರಗ್​​ ಕಂಟ್ರೋಲರ್​​ ಸೇರಿ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕರ್ನಾಟಕ ದಲಿತ ಸಿಂಹ ಸೇನೆ ಮುಖಂಡ ಹೂಹಳ್ಳಿ ಪ್ರಕಾಶ್, ಕೃಷ್ಣಯ್ಯ ದೂರಿನ ಅನ್ವಯ ಲೋಕಾಯುಕ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪ್ರಕರಣ ಸಂಬಂಧ ಜಿಲ್ಲಾ ಔಷಧ ನಿಯಂತ್ರಕರಾದ ಶ್ಯಾಮಲಾ, ವಾಹನ ಚಾಲಕ ಮಹಂತೇಶ್ ಮತ್ತು ನಿವೃತ್ತ ಡಿ ಗ್ರೂಪ್ ಶ್ರೀನಿವಾಸನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಮಾಲೂರು ತಾಲೂಕಿನ ಟೇಕಲ್ ಬಳಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ನಡೆಸಿದ್ದು, ಈ ವೇಳೆ ಅಧಿಕಾರಿಗಳನ್ನು ಕಂಡು ಎಡಿಸಿ ಶ್ಯಾಮಲಾ ಹಾಗೂ ಮತ್ತಿಬ್ಬರು ಎಸ್ಕೇಪ್​​ ಆಗಿದ್ದರು. ಇವರ ಕಾರನ್ನು ಬೆನ್ನಟ್ಟಿದ್ದ ಲೋಕಾಯುಕ್ತ ಪೊಲೀಸರು ಮೂವರನ್ನೂ ಅಂತಿಮವಾಗಿ ಬಂಧಿಸಿದ್ದಾರೆ. ಆದರೆ ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆಂದು ಪಡೆದಿದ್ದ 35 ಸಾವಿರ ರೂಪಾಯಿ ಲಂಚದ ಹಣವನ್ನು ಮಾರ್ಗ ಮಧ್ಯದಲ್ಲಿಯೇ ಇವರು ಬಿಸಾಡಿದ್ದಾರೆ. ವಿಚಾರಣೆ ವೇಳೆ ವಿಷಯ ಬೆಳಕಿಗೆ ಬಂದಿದ್ದು, ಹಣಕ್ಕಾಗಿ ತಡರಾತ್ರಿವರೆಗೂ ಲೋಕಾಯುಕ್ತ ಅಧಿಕಾರಿಗಳು ಹುಡುಕಾಡಿರುವ ಪ್ರಸಂಗವೂ ನಡೆದಿದೆ. ಆದರೆ ಎಸೆದ ದುಡ್ಡು ಸಿಗದ ಕಾರಣ, ಹಣ ಸ್ವೀಕರಿಸುವ ವಿಡಿಯೋ ಅಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಲಂಚ ಪಡೆಯುವಾಗ ಲೋಕಾಯುಕ್ತ ಟ್ರ್ಯಾಪ್; ಸಿಕ್ಕಿಬೀಳುತ್ತಿದ್ದಂತೆ ಕೈ ಕೊಯ್ದುಕೊಂಡು ಮಹಿಳಾ ಪಿಡಿಒ ಹೈಡ್ರಾಮಾ!

ಈ ಬಗ್ಗೆ ಪ್ರತಿಕ್ರಿಯಿಸಿರುವ ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್, ಮೆಡಿಕಲ್ ಸ್ಟೋರ್ ಪರವಾನಗಿ ನವೀಕರಣಕ್ಕಾಗಿ 38,000 ಲಂಚಕ್ಕೆ ಜಿಲ್ಲಾ ಡ್ರಗ್​​ ಕಂಟ್ರೋಲರ್ ಬೇಡಿಕೆ ಇಟ್ಟಿದ್ದ ಹಿನ್ನೆಲೆ ದಾಳಿ ನಡೆಸಲಾಗಿದೆ. ಆದರೆ ಲಂಚವಾಗಿ ಸ್ವೀಕರಿಸಿದ್ದ ಹಣವನ್ನು ಅಧಿಕಾರಿ ಮಾರ್ಗ ಮಧ್ಯೆಯೇ ಬಿಸಾಡಿದ್ದಾರೆ. ಆ ದುಡ್ಡಿಗಾಗಿ ಹುಡುಕಾಟ ನಡೆಸಿದ್ದೇವೆ. ಹೀಗಿದ್ದರೂ ಲಂಚ ಕೇಳಿರುವ ಆಡಿಯೋ ಮತ್ತು ಹಣ ಸ್ವೀಕರಿಸುವ ವಿಡಿಯೋ ಸಾಕ್ಷ್ಯ ನಮ್ಮ ಬಳಿ ಇದ್ದು, ಅವುಗಳ ಆಧಾರದಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರಜ್ವಲ್ ವಿಡಿಯೋ ವೈರಲ್ ಪ್ರಕರಣ: ಪ್ರಮುಖರ ಹೆಸರೇ ಚಾರ್ಜ್​​ಶೀಟ್​​ನಿಂದ ಮಿಸ್ಸಿಂಗ್​​?

ಹಾಸನ, ಮಾರ್ಚ್​​ 18: ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಪ್ರಕರಣ ಸಂಬಂಧ ಎಸ್​ಐಟಿ ಚಾರ್ಜ್​​ಶೀಟ್​​ ಬಗ್ಗೆ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಕೇಸ್​​ನ ಆರನೇ ಆರೋಪಿಯೂ ಆಗಿರುವ ದೇವರಾಜೇಗೌಡ, ಪ್ರಕರಣದಲ್ಲಿ ಯಾರ್ಯಾರು ಇದ್ದಾರೆ ಎಂಬುದು ಜಗತ್ತಿಗೆ ಗೊತ್ತಿದೆ. ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ ಪ್ರಕರಣ ಇದು. ಪ್ರಮುಖ ಆರೋಪಿ ಸ್ಥಾನದಲ್ಲಿರುವ ಪ್ರೀತಂಗೌಡ, ಡಿ.ಕೆ. ಶಿವಕುಮಾರ್, ಶ್ರೇಯಸ್‌ ಪಟೇಲ್, ಕ್ವಾಲಿಟಿ ಬಾರ್ ಶರತ್, ಹಲವು ರಾಜಕಾರಣಿಗಳ ಹೆಸರಿಲ್ಲ. ಶಿವಲಿಂಗೇಗೌಡ ಬಹಿರಂಗವಾಗಿ ಹೇಳಿದರೂ ಅವರಿಗೆ ಏಕೆ ನೋಟಿಸ್​​ ಕೊಡಲಿಲ್ಲ?, ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ. ಪೆನ್​​ಡ್ರೈವ್​​ ಹಂಚಿಕೆ ಮಾಡಿದವರ ಹೆಸರೇ ಚಾರ್ಜ್​​​ಶೀಟ್​​ನಲ್ಲಿ ಇಲ್ಲ. ಹೀಗಾಗಿ ತನಿಖೆ ಮಾಡಿದ ಅಧಿಕಾರಿಗಳನ್ನೇ ತನಿಖೆ ಮಾಡಬೇಕು. ಈ ಬಗ್ಗೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸುತ್ತೇನೆ ಎಂದು  ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಯಚೂರು: ಭಾರೀ ಅಗ್ನಿ ಅವಘಡಕ್ಕೆ 300ಕ್ಕೂ ಹೆಚ್ಚು ಚೀಲ ಭತ್ತ ಭಸ್ಮ

ರಾಯಚೂರು, ಮಾರ್ಚ್ 18: ಆಕಸ್ಮಿಕ ಅಗ್ನಿ ಅವಘಡದಿಂದ 300 ಕ್ಕೂ ಹೆಚ್ಚು ಭತ್ತದ ಚೀಲಗಳು ಸುಟ್ಟು ಭಸ್ಮವಾದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಹೊರವಲಯದಲ್ಲಿ ನಡೆದಿದೆ. ಉತ್ತಮ ಬೆಲೆ ಸಿಗಲೆಂದು ಭತ್ತವನ್ನು ಶೇಖರಿಸಿ ಕಾಯುತ್ತಿದ್ದ ರೈತ ಇದೀಗ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ಕಂಗಾಲಾಗಿದ್ದಾನೆ. ಮಹಮ್ಮದ್ ಯೂಸಫ್ ಎಂಬ ರೈತನಿಗೆ ಸೇರಿದ ಈ ಭತ್ತವನ್ನು ಜಮೀನಿನಲ್ಲಿರುವ ದನದ ಶೆಡ್‌ನಲ್ಲಿ ಸಂಗ್ರಹಿಸಲಾಗಿತ್ತು. ಆರ್‌ಎನ್‌ಆರ್ ಜಾತಿಯ ಭತ್ತಕ್ಕೆ ಉತ್ತಮ ದರ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಅವರು 300 ಕ್ಕೂ ಹೆಚ್ಚು ಚೀಲಗಳನ್ನು ಸಂಗ್ರಹಿಸಿದ್ದರು. ಆದರೆ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕೇವಲ ಒಂದು ಗಂಟೆಯೊಳಗೆ ಸಂಪೂರ್ಣ ಭತ್ತ ಸುಟ್ಟು ಕರಕಲಾಗಿದೆ.

ಬೆಂಕಿಯ ತೀವ್ರತೆಗೆ ದನದ ಶೆಡ್ ಕೂಡ ಸಂಪೂರ್ಣವಾಗಿ ಭಸ್ಮವಾಗಿದ್ದು, ಒಟ್ಟು ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಭತ್ತ ಹಾಗೂ 6 ಲಕ್ಷ ರೂಪಾಯಿ ಮೌಲ್ಯದ ಶೆಡ್ ನಷ್ಟವಾಗಿದೆ. ಬೆಂಕಿಯಿಂದ ಉಳಿದಿದ್ದ ಅರೆಬರೆ ಭತ್ತವನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಅದನ್ನು ದನಗಳಿಗೆ ಮಾತ್ರ ಬಳಸುವಂತಾಗಿದೆ ಎಂದು ರೈತ ಯೂಸಫ್ ನೋವಿನಿಂದ ತಿಳಿಸಿದ್ದಾರೆ. ಘಟನೆಯಿಂದ ಮಾನಸಿಕವಾಗಿ ಕುಗ್ಗಿರುವ ರೈತ, ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಈ ಅಗ್ನಿ ಅವಘಡದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯುಗಾದಿ ಹಬ್ಬಕ್ಕೆ ಎಎಂಬಿ ಸಿನಿಮಾಸ್ ಆಫರ್; ಬೆಳಗಿನ ಶೋನಲ್ಲಿ ಉಚಿತ ಪಾಪ್​ಕಾರ್ನ್

ಬೆಂಗಳೂರಿನ ಗಾಂಧಿನಗರದಲ್ಲಿರುವ ಹೊಚ್ಚ ಹೊಸ ಮಲ್ಟಿಪ್ಲೆಕ್ಸ್ ‘ಎಎಂಬಿ ಸಿನಿಮಾಸ್’ (AMB Cinemas) ಕಡೆಯಿಂದ ಸಿನಿಮಾ ಪ್ರೇಮಿಗಳಿಗಾಗಿ ಯುಗಾದಿ ಹಬ್ಬದ ವಿಶೇಷ ಆಫರ್ ನೀಡಲಾಗುತ್ತಿದೆ. ಕೆಲವೇ ತಿಂಗಳುಗಳ ಹಿಂದೆ ‘ಕಪಾಲಿ’ ಚಿತ್ರಮಂದಿರವನ್ನು ಅತ್ಯಾಧುನಿಕ ಮಲ್ಟಿಪ್ಲೆಕ್ಸ್ ಆಗಿ ಪರಿವರ್ತಿಸಿದ ಎಎಂಬಿ ಸಿನಿಮಾಸ್ ನೀಡಲಿರುವ ಆಫರ್​​ಗಳು ಪ್ರೇಕ್ಷಕರಿಗೆ ಸಿನಿಮಾದ ಮೋಜನ್ನು ಹೆಚ್ಚಿಸಲಿದೆ. ಈ ವಿಶೇಷ ಆಫರ್‌ಗಳು ಬಹುನಿರೀಕ್ಷಿತ ಚಿತ್ರಗಳಾದ ‘ಲವ್ ಮಾಕ್ಟೇಲ್ 3’, ‘ಧುರಂಧರ್ 2’ (Dhurandhar 2) ಮತ್ತು ‘ಉಸ್ತಾದ್ ಭಗತ್ ಸಿಂಗ್’ ಚಿತ್ರಗಳಿಗೆ ಅನ್ವಯವಾಗಲಿವೆ. ಏನಿದು ಆಫರ್? ಮುಂದೆ ಓದಿ..

ಎಎಂಬಿ ಸಿನಿಮಾಸ್​​ನಲ್ಲಿ ಬೆಳಗಿನ ಪ್ರದರ್ಶನಗಳಿಗೆ ಆಫರ್ ನೀಡಲಾಗುತ್ತಿದೆ. ಬೆಳಿಗ್ಗೆ 11 ಗಂಟೆಯೊಳಗಿನ ಪ್ರದರ್ಶನಗಳಿಗೆ ಟಿಕೆಟ್ ಕಾಯ್ದಿರಿಸುವ ಪ್ರೇಕ್ಷಕರಿಗೆ ಉಚಿತ ಪಾಪ್‌ಕಾರ್ನ್ ಮತ್ತು ಉಡುಗೊರೆಗಳನ್ನು ನೀಡಲಾಗುವುದು. ಈ ಕೊಡುಗೆಯು ಮಾರ್ಚ್ 19ರಿಂದ ಮಾರ್ಚ್ 26ರವರೆಗೆ ಮಾತ್ರ ಲಭ್ಯವಿರುತ್ತದೆ. ‘ಬುಕ್ ಮೈ ಶೋ’ ಮೂಲಕ ಟಿಕೆಟ್ ಕಾಯ್ದಿರಿಸುವ ಗ್ರಾಹಕರು ‘AMB100’ ಕೋಡ್ ಬಳಸುವ ಮೂಲಕ 100 ರೂಪಾಯಿ ರಿಯಾಯಿತಿ ಪಡೆಯಬಹುದು.

ಕರ್ನಾಟಕದಲ್ಲಿ ಮೊಟ್ಟಮೊದಲ ‘ಡಾಲ್ಬಿ ಸಿನಿಮಾ’ ತಂತ್ರಜ್ಞಾನವನ್ನು ಪರಿಚಯಿಸಿದ ಮಲ್ಟಿಪ್ಲೆಕ್ಸ್ ಎಂಬ ಖ್ಯಾತಿ ‘ಎಎಂಬಿ ಸಿನಿಮಾಸ್’ಗಿದೆ. ಇದು ಅತ್ಯಂತ ಸ್ಪಷ್ಟವಾದ ದೃಶ್ಯ ವೈಭವ, ಅದ್ಭುತ ಕಾಂಟ್ರಾಸ್ಟ್ ಮತ್ತು ತಲ್ಲೀನಗೊಳಿಸುವ ಸೌಂಡ್ ವ್ಯವಸ್ಥೆಯನ್ನು ಹೊಂದಿದೆ. ಪ್ರೇಕ್ಷಕರ ಸಿನಿಮಾ ವೀಕ್ಷಣೆಯ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ.

ಎಎಂಬಿ ಸಿನಿಮಾಸ್ ಅತ್ಯಾಧುನಿಕ ಪ್ರೊಜೆಕ್ಷನ್ ತಂತ್ರಜ್ಞಾನ, ಸುಧಾರಿತ ಸೌಂಡ್ ವ್ಯವಸ್ಥೆ ಮತ್ತು ಐಷಾರಾಮಿ ಆಸನಗಳನ್ನು ಹೊಂದಿದೆ. 7 ಸ್ಟಾರ್ ಅನುಭವ ನೀಡುವ ಐಷಾರಾಮಿ ಸೌಲಭ್ಯವಿದ್ದರೂ ಇಲ್ಲಿನ ಟಿಕೆಟ್ ದರಗಳು ಸಾಮಾನ್ಯ ಜನರಿಗೆ ಕೈಗೆಟುಕುವಂತಿದೆ ಎಂಬುದು ವಿಶೇಷ. ಅವುಗಳ ಜೊತೆಗೆ ಸಿನಿಪ್ರಿಯರಿಗೆ ‘ಎಎಂಬಿ ಸಿನಿಮಾಸ್’ ಕಡೆಯಿಂದ ಯುಗಾದಿ ಆಫರ್ ಸಿಗುತ್ತಿರುವುದು ವಿಶೇಷ.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾದ ಭೀಕರ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ: ತಗ್ಗಿತು ಚಿತ್ರದ ಅವಧಿ

ಯುಗಾದಿ ಹಬ್ಬದ ಪ್ರಯುಕ್ತ ಬಹುನಿರೀಕ್ಷಿತ ಸಿನಿಮಾಗಳಾದ ‘ಧುರಂಧರ್ 2’, ‘ಉಸ್ತಾದ್ ಭಗತ್ ಸಿಂಗ್’, ‘ಲವ್ ಮಾಕ್ಟೇಲ್ 3’ ಬಿಡುಗಡೆ ಆಗುತ್ತಿವೆ. ಎಎಂಬಿ ಸಿನಿಮಾಸ್​​ನ ಬೆಳಗಿನ ಪ್ರದರ್ಶನಗಳಲ್ಲಿ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳುವ ಪ್ರೇಕ್ಷಕರಿಗೆ ಉಚಿತ ಪಾಪ್‌ಕಾರ್ನ್ ಆಫರ್ ಸಿಗಲಿದೆ. ಇದರಿಂದ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಉತ್ತೇಜನ ಸಿಕ್ಕಂತೆ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮತ್ತೆ ಮುನ್ನೆಲೆಗೆ ಬಂದ ಅನುಷ್ಕಾ ಶೆಟ್ಟಿ ಮದುವೆ ವಿಷಯ; ಹುಡುಗ ಯಾರು?

ಅನುಷ್ಕಾ ಶೆಟ್ಟಿ ಅವರಿಗೆ ಈಗ 44 ವರ್ಷ. ಅವರು ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅವರು ವಿವಾಹದ ಕಾರಣಕ್ಕೆ ಸುದ್ದಿ ಆಗೋದಕ್ಕಿಂತ ಹೆಚ್ಚಾಗಿ, ವಿವಾಹದ ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರ ವಿವಾಹ ಆಗುತ್ತದೆ ಎನ್ನುವ ಸುದ್ದಿ ಕೇಳಿ ಬರುತ್ತಲೇ ಇದೆ. ಈಗ ಮತ್ತೊಮ್ಮೆ ಅನುಷ್ಕಾ ವಿವಾಹ ವಿಷಯ ಚರ್ಚೆಗೆ ಕಾರಣ ಆಗಿದೆ.

ಸೆಲೆಬ್ರಿಟಿಗಳ ಜೀವನದ ಬಗ್ಗೆ ಅಭಿಮಾನಿಗಳು ಕಣ್ಣಿಡುತ್ತಾರೆ. ಸಾರ್ವಜನಿಕವಾಗಿ ಯಾರದ್ದಾದರೂ ಜೊತೆಗೆ ಕಾಣಿಸಿಕೊಂಡರೆ ವದಂತಿ ಹೆಚ್ಚುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಅನ್​​ಫಾಲೋ ಮಾಡಿದ್ದು, ಫಾಲೋ ಮಾಡಿದ್ದು ನೋಡಿ ಅನೇಕ ವಿಷಯಗಳನ್ನು ಕೆಲವರು ಡಿಕೋಡ್ ಮಾಡಿದ್ದು ಇದೆ. ಅನುಷ್ಕಾ ವಿಷಯದಲ್ಲೂ ಹಾಗೆಯೇ ಆಗಿದೆ.

ಅನುಷ್ಕಾ ಶೆಟ್ಟಿ ಅವರು ಪ್ರಭಾಸ್ ಜೊತೆ ಡೇಟ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ವಿಷಯ ನಿಜವಾಗಿಲ್ಲ. ಅವರು ಮಧ್ಯದಲ್ಲೇ ದೂರ ಆದರು ಎನ್ನಲಾಗಿದೆ. ಈಗ ಅನುಷ್ಕಾ ಆಗಲಿ, ಪ್ರಭಾಸ್ ಆಗಲಿ ಮದುವೆ ಆಗಿಲ್ಲ.ಪ್ರಭಾಸ್ ಅವರು ಮದುವೆ ವಿಷಯ ಬಂದಾಗ ಉತ್ತರಿಸೋಕೆ ಹೋಗಲ್ಲ. ಆದರೆ, ಅನುಷ್ಕಾ ವಿಷಯ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ.

ಅನುಷ್ಕಾ ಶೆಟ್ಟಿ ಅವರು ಈ ಬಾರಿ ಉದ್ಯಮಿಯೊಬ್ಬರ ಜೊತೆ ಮದುವೆ ಆಗಲಿದ್ದಾರೆ ಎಂದು ಹೇಲಾಗುತ್ತಿದೆ. ಆದರೆ, ಈ ವಿಷಯವನ್ನು ನಟಿ ಅಧಿಕೃತ ಮಾಡಿಲ್ಲ. ಮನೆಯವರು ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಹರಿದಾಡುತ್ತಿರುವ ವಿಷಯ ನಿಜವೇ ಅಥವಾ ಹತ್ತರಲ್ಲಿ ಹಂದನೆಯ ವದಂತಿಯಾಗಿ ಇಲ್ಲಿಗೆ ಕೊನೆಯಾಗಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ಇದನ್ನೂ ಓದಿ: ಮತ್ತೆ ಕೇಳಿಬಂತು ಅನುಷ್ಕಾ ಶೆಟ್ಟಿ ಮದುವೆ ವಿಷಯ: ಈ ಬಾರಿ ಪ್ರಭಾಸ್ ಹೆಸರಿಲ್ಲ

ಅನುಷ್ಕಾ ಶೆಟ್ಟಿ ಅವರು ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಸಿನಿಮಾದಿಂದ ದೊಡ್ಡ ಯಶಸ್ಸು ಕಂಡರು. ಆದರೆ, ಈ ಯಶಸ್ಸನ್ನು ಅವರು ಉತ್ತಮವಾಗಿ ಬಳಸಿಕೊಂಡಿಲ್ಲ. ಅವರು ದೊಡ್ಡ ಮಟ್ಟದಲ್ಲಿ ಗೆಲವು ಸಾಧಿಸೋಕೆ ಸಾಧ್ಯವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version