ಮಳೆ ಅಂತ ಪಾಳು ಮನೆಯ ಕೆಳಗೆ ನಿಂತಿದ್ದ ದಂಪತಿ ಮೇಲೆ ಕುಸಿದ ಗೋಡೆ: ಮುಂದಾಗಿದ್ದು ಘೋರ ದುರಂತ
ಬೆಳಗಾವಿ, ಮಾರ್ಚ್ 17: ರಣ ರಣ ಬಿಸಿಲಿನ ನಡುವೆ ರಾಜ್ಯದಲ್ಲಿ ಆಲಿಕಲ್ಲು ಸಹಿತ ಮಳೆಯಾಗುತ್ತಿದೆ (Rain). ಆ ಮೂಲಕ ಬಿಸಿಲಿಂದ ಬೆಂಡಾಗಿದ್ದ ಭೂಮಿಗೆ ವರುಣ ತಂಪೆರದಿದ್ದಾನೆ. ಸುಡುಬೇಸಿಗೆ ನಡುವೆ ಅಕಾಲಿಕ ಮಳೆ ಶುರುವಾಗಿದೆ. ಈ ಅಕಾಲಿಕ ಮಳೆಗೆ ದುರಂತಗಳು ಸಂಭವಿಸಿದೆ. ಮಳೆ ಹೆಚ್ಚಾದ ಹಿನ್ನೆಲೆ ಪಾಳು ಮನೆಯ ಕೆಳಗೆ ನಿಂತಿದ್ದ ದಂಪತಿ ಮೇಲೆ ಗೋಡೆ ಕುಸಿದುಬಿದ್ದು ಪತ್ನಿ ಸಾವನ್ನಪ್ಪಿದ್ದು (death), ಪತಿ ಬಚಾವ್ ಆಗಿರುವಂತಹ ಘಟನೆ ಬೆಳಗಾವಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ನಡೆದಿದ್ದೇನು? ದಂಪತಿ ಕೋಳಿಗಳನ್ನು…