ದಿ ಹಂಡ್ರೆಡ್ ಲೀಗ್​ನ 8 ತಂಡಗಳು ಪ್ರಕಟ

Source link

ಎಲ್​ಪಿಜಿ ಸಿಲಿಂಡರ್ ಸಮಸ್ಯೆ ಇದ್ರೂ ನೋ ಟೆನ್ಶನ್: ಗಮನ ಸೆಳೆಯುತ್ತಿದೆ ಪೊಲೀಸ್​ ಕಾನ್​ಸ್ಟೇಬಲ್ ಮನೆಯ ಬಯೋಗ್ಯಾಸ್ ಪದ್ಧತಿ

ರಾಯಚೂರು, ಮಾರ್ಚ್ 17: ಎಲ್​ಪಿಜಿ ಸಿಲಿಂಡರ್ ಕೊರತೆ ರಾಜ್ಯಾದ್ಯಂತ ಜನರನ್ನು ತೀವ್ರವಾಗಿ ಕಾಡುತ್ತಿರುವ ಸಮಯದಲ್ಲಿ, ರಾಯಚೂರಿನ ಕಾನ್​ಸ್ಟೇಬಲ್ ವಿನೋದ್ ಬಯೋಗ್ಯಾಸ್ ಪದ್ಧತಿ ಅಳವಡಿಸಿ ಗಮನ ಸೆಳೆದಿದ್​ದಾರೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ಎಲ್​ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಅನೇಕ ಕಡೆಗಳಲ್ಲಿ ಜನ ಕಿಲೋಮೀಟರ್‌ಗಟ್ಟಲೆ ಸರತಿಯಲ್ಲಿ ನಿಂತು ಪರದಾಡುತ್ತಿರುವಂಥ ಸ್ಥಿತಿ ಇದೆ. ವಿನೋದ್ ಅವರು ಕಳೆದ ಎರಡು ವರ್ಷಗಳಿಂದ ಮನೆಯ ದೈನಂದಿನ ಅಡುಗೆಗೆ ಬಯೋಗ್ಯಾಸ್ ಬಳಸುತ್ತಿದ್ದು, ಇದು ಯಾವುದೇ ಅಡೆತಡೆ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಇದು ಈಗ ಗಮನ ಸೆಳೆದಿದೆ.

ಕೇವಲ 10,500 ರೂ. ವೆಚ್ಚದಲ್ಲಿ 1000 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಟ್ಯಾಂಕ್ ಬಳಸಿ ಈ ಘಟಕವನ್ನು ಸ್ಥಾಪಿಸಲಾಗಿದೆ. ಇದು ಗೃಹ ತ್ಯಾಜ್ಯ, ಹಣ್ಣು, ತರಕಾರಿ ತ್ಯಾಜ್ಯದಿಂದ ಅನಿಲ ಉತ್ಪಾದಿಸುತ್ತದೆ. ಇದು ಎಲ್​ಪಿಜಿ ಸಿಲಿಂಡರ್‌ನಂತೆಯೇ ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತದೆ. ವಿನೋದ್ ಅವರ ಈ ಮಾದರಿ ಪದ್ಧತಿಯನ್ನು ವೀಕ್ಷಿಸಲು ಮತ್ತು ಮಾಹಿತಿ ಪಡೆಯಲು ಈಗ ಸಾಕಷ್ಟು ಮಂದಿ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಈ ಬಯೋಗ್ಯಾಸ್ ಪದ್ಧತಿಯು ಕನಿಷ್ಠ 25-30 ವರ್ಷಗಳ ಬಾಳಿಕೆ ಬರಲಿದ್ದು, ಆರ್ಥಿಕವಾಗಿ ಮತ್ತು ಪರಿಸರ ಸ್ನೇಹಿಯಾಗಿ ಉತ್ತಮ ಪರ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Sunil Gavaskar: ಪಾಕ್ ಆಟಗಾರನ ಖರೀದಿ, ಸೈನಿಕರ ಸಾವಿಗೆ ಪರೋಕ್ಷ ಕೊಡುಗೆ..!

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್​ಗೆ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕಾಲಿಟ್ಟಿದೆ. ಈ ಲೀಗ್​ನಲ್ಲಿ ಸನ್​ರೈಸರ್ಸ್ ಲೀಡ್ಸ್ ತಂಡವನ್ನು ಕಣಕ್ಕಿಳಿಸುತ್ತಿರುವ ಸನ್​ ಗ್ರೂಪ್ ವಿರುದ್ಧ ಇದೀಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಆಕ್ರೋಶಕ್ಕೆ ಕಾರಣ ಸನ್​ರೈಸರ್ಸ್​ ಲೀಡ್ಸ್ ತಂಡವು ಪಾಕಿಸ್ತಾನ್ ತಂಡದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿರುವುದು. ಇದೀಗ ಈ ಖರೀದಿಯನ್ನು ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಕೂಡ ಟೀಕಿಸಿದ್ದಾರೆ.

ದಿ ಹಂಡ್ರೆಡ್ ಲೀಗ್​ 2026ರ ಹರಾಜಿನಲ್ಲಿ ಸನ್ ರೈಸರ್ಸ್ ಲೀಡ್ಸ್ ತಂಡವು ಅಬ್ರಾರ್ ಅಹ್ಮದ್ ಅವರನ್ನು ಸುಮಾರು ₹2.34 ಕೋಟಿ (£1,90,000) ನೀಡಿ ಖರೀದಿಸಿದೆ. ಈ ಖರೀದಿ ಬಗ್ಗೆ ‘ಮಿಡ್-ಡೇ’ ಪತ್ರಿಕೆಯಲ್ಲಿ ಬರೆದ ಅಂಕಣದಲ್ಲಿ ಪ್ರಸಾಪಿಸಿರುವ ಸುನಿಲ್ ಗವಾಸ್ಕರ್, ಇದು ಭಾರತೀಯ ಸೈನಿಕರ ಸಾವಿಗೆ ಪರೋಕ್ಷ ಕೊಡುಗೆ! ಎಂದು ಆಕ್ರೋಶ ಹೊರಹಾಕಿದ್ದಾರೆ.

ಪಾಕಿಸ್ತಾನಿ ಆಟಗಾರರು ಗಳಿಸುವ ಹಣದ ಮೇಲೆ ಆ ದೇಶದ ಸರ್ಕಾರ ತೆರಿಗೆ ವಿಧಿಸುತ್ತದೆ. ಆ ಹಣವನ್ನು ಭಾರತೀಯ ಸೈನಿಕರ ವಿರುದ್ಧ ಬಳಸುವ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಸಲಾಗುತ್ತದೆ.

ಅಂದರೆ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನೀಡುವ ಮೊತ್ತದಲ್ಲಿ ಪಾಕ್ ಸರ್ಕಾರಕ್ಕೂ ಪಾಲು ಹೋಗುತ್ತದೆ. ಹೀಗಾಗಿ ಈ ಒಪ್ಪಂದವು “ಭಾರತೀಯ ಸೈನಿಕರು ಮತ್ತು ನಾಗರಿಕರ ಸಾವಿಗೆ ಪರೋಕ್ಷವಾಗಿ ಕೊಡುಗೆ ನೀಡುತ್ತದೆ” ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಅಷ್ಟೇ ಅಲ್ಲದೆ, ನಿಮಗೆ ಗೆಲುವು ಮುಖ್ಯವೋ ಅಥವಾ ಭಾರತೀಯರ ಜೀವ ಮುಖ್ಯವೋ ಎಂದು ಸುನಿಲ್ ಗವಾಸ್ಕರ್ ಎಸ್​ಆರ್​ಹೆಚ್​ ಮಾಲೀಕರನ್ನು ಪ್ರಶ್ನಿಸಿದ್ದಾರೆ. ವಿದೇಶಿ ಕೋಚ್‌ಗಳಿಗೆ ಭಾರತದ ಭಾವನೆಗಳು ತಿಳಿಯದಿರಬಹುದು, ಆದರೆ ಭಾರತೀಯ ಮಾಲೀಕರು ಇದನ್ನು ತಡೆಯಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎಸ್​ಆರ್​ಎಲ್​ ತಂಡದ ಸಮರ್ಥನೆ:

ಸನ್ ರೈಸರ್ಸ್ ಲೀಡ್ಸ್ ತಂಡದ ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ, ಇದು ಕೇವಲ ಕ್ರೀಡಾ ದೃಷ್ಟಿಕೋನದಿಂದ ತೆಗೆದುಕೊಂಡ ನಿರ್ಧಾರ ಎಂದು ಸಮರ್ಥಿಸಿಕೊಂಡಿದ್ದಾರೆ. ಆದಿಲ್ ರಶೀದ್ ಅವರು ಲಭ್ಯವಿಲ್ಲದ ಕಾರಣ ಅಬ್ರಾರ್ ಅಹ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿಸಿಸಿಐ  ಪ್ರತಿಕ್ರಿಯೆ:

ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು, ಇದು ವಿದೇಶಿ ಲೀಗ್ ಆಗಿರುವುದರಿಂದ ಭಾರತೀಯ ಕ್ರಿಕೆಟ್ ಮಂಡಳಿಯು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ:

ಈ ಬೆಳವಣಿಗೆಯಿಂದಾಗಿ ಭಾರತೀಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಂಡವನ್ನು ಬಹಿಷ್ಕರಿಸುವಂತೆ ಅಭಿಯಾನ ನಡೆಸುತ್ತಿದ್ದಾರೆ. ಅಬ್ರಾರ್ ಅಹ್ಮದ್ ಈ ಹಿಂದೆ ಭಾರತೀಯ ಸೇನೆಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಆತನನ್ನು ತಂಡದಿಂದ ಕೈ ಬಿಡುವಂತೆ ಸನ್​ರೈಸರ್ಸ್ ಹೈದರಾಬಾದ್ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: WTC ಫೈನಲ್​ಗೇರಲು ಟೀಮ್ ಇಂಡಿಯಾ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಒಟ್ಟಿನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ದಿ ಹಂಡ್ರೆಡ್ ಲೀಗ್​ನಲ್ಲಿ ತೆಗೆದುಕೊಂಡ ಒಂದು ನಿರ್ಧಾರದಿಂದ ಇಕ್ಕಟ್ಟಿಗೆ ಸಿಲುಕಿದ್ದು, ಈ ಬಗ್ಗೆ ಪುನರ್​ಪರಿಶೀಲಿಸಲು ಫ್ರಾಂಚೈಸಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

 

Source link

Daily Devotional: ಶುಭ ಸಮಾರಂಭಗಳಲ್ಲಿ ಮುಯ್ಯಿ ಕೊಡುವುದರ ಅರ್ಥ ಮತ್ತು ಮಹತ್ವ

ಹಿಂದೂ ಸನಾತನ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳಾದ ನಾಮಕರಣ, ವಿವಾಹ, ಅಥವಾ ಗೃಹಪ್ರವೇಶದಂತಹ ಸಂದರ್ಭಗಳಲ್ಲಿ ಮುಯ್ಯಿ ನೀಡುವ ಪದ್ಧತಿಯು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಇದು ಕೇವಲ ಒಂದು ಆಚರಣೆಯಾಗದೆ, ಆಳವಾದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಮಹತ್ವವನ್ನು ಹೊಂದಿದೆ ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಮುಯ್ಯಿ ಎಂದರೆ ಕೇವಲ ಕೊಡುಗೆಯಲ್ಲ, ಬದಲಿಗೆ ಪ್ರೀತಿಪೂರ್ವಕವಾಗಿ, ಮನಸ್ಸಿನ ಉತ್ತಮ ಭಾವನೆಯಿಂದ ನೀಡುವ ಒಂದು ಕಾಣಿಕೆಯಾಗಿದೆ. ಅದು ಹಣದ ರೂಪದಲ್ಲಿರಬಹುದು, ವಸ್ತುವಿನ ರೂಪದಲ್ಲಿರಬಹುದು, ಯಾವುದೇ ರೀತಿಯಲ್ಲಿರಬಹುದು, ಆದರೆ ಅದರ ಹಿಂದಿರುವ ಭಾವನೆಯೇ ಪ್ರಮುಖವಾದುದು. “ಮುಯ್ಯಿ” ಎಂಬ ಪದವು ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯ ಭಾಗವಾಗಿದೆ, ಇದು ಸಂಬಂಧಗಳನ್ನು ಬಲಪಡಿಸುವ ಮತ್ತು ಪರಸ್ಪರ ಸಹಕಾರವನ್ನು ಸೂಚಿಸುವ ಒಂದು ವಿಶಿಷ್ಟ ಪದ್ಧತಿಯಾಗಿದೆ.

ಹಿಂದಿನ ಕಾಲದಿಂದಲೂ, ಮದುವೆ ಅಥವಾ ಮನೆ ಕಟ್ಟುವಂತಹ ದೊಡ್ಡ ಕಾರ್ಯಗಳು ಕುಟುಂಬಗಳಿಗೆ ಅಪಾರ ಆರ್ಥಿಕ ಹೊರೆಯನ್ನು ತರುತ್ತಿದ್ದವು. “ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು” ಎಂಬ ನಾಣ್ಣುಡಿಯು ಈ ಕಷ್ಟಗಳನ್ನು ಎತ್ತಿ ತೋರಿಸುತ್ತದೆ. ಇಂತಹ ಸಂದರ್ಭಗಳಲ್ಲಿ, ನೆಂಟರು, ಸ್ನೇಹಿತರು ಅಥವಾ ಆತ್ಮೀಯರು ಬರಿಗೈಯಲ್ಲಿ ಹೋಗುವುದಿಲ್ಲ. ಒಂದು ಮುಯ್ಯಿ ಕವರ್‌ನಲ್ಲಿ ತಮ್ಮ ಕೈಲಾದ ಹಣವನ್ನು ಇರಿಸಿ, ಆತಿಥೇಯರ ಆರ್ಥಿಕ ಹೊರೆಗೆ ಒಂದು ಸಣ್ಣ ಸಹಾಯ ನೀಡುತ್ತಾರೆ. ಇದು ಕೇವಲ ಹಣಕಾಸಿನ ನೆರವಲ್ಲ, ಆತಿಥೇಯರ ಕಷ್ಟದಲ್ಲಿ ನಾವಿದ್ದೇವೆ ಎಂಬ ಮಾನಸಿಕ ಬೆಂಬಲವನ್ನೂ ಸೂಚಿಸುತ್ತದೆ.

ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಇತ್ತೀಚಿನ ದಿನಗಳಲ್ಲಿ, ಕೆಲವರು ಆಮಂತ್ರಣ ಪತ್ರಿಕೆಗಳಲ್ಲಿ “ಮುಯ್ಯಿ ಸ್ವೀಕರಿಸುವುದಿಲ್ಲ” ಎಂದು ನಮೂದಿಸುತ್ತಾರೆ. ಇದು ಅವರ ಸಂಪತ್ತನ್ನು ಸೂಚಿಸಬಹುದು, ಆದರೆ ಮುಯ್ಯಿಯ ನಿಜವಾದ ಅರ್ಥವನ್ನು ನಿರ್ಲಕ್ಷಿಸಿದಂತಾಗುತ್ತದೆ. ಮುಯ್ಯಿಯು ಕೇವಲ ಆರ್ಥಿಕ ಸಹಾಯವಲ್ಲ, ಬದಲಿಗೆ ಆಶೀರ್ವಾದ, ಶುಭ ಹಾರೈಕೆ ಮತ್ತು ಸಂಬಂಧಗಳ ಬಾಂಧವ್ಯವನ್ನು ಬಲಪಡಿಸುವ ಒಂದು ಸಂಕೇತವಾಗಿದೆ. ಆತಿಥೇಯರು ಎಷ್ಟೇ ಶ್ರೀಮಂತರಾಗಿದ್ದರೂ, ಅತಿಥಿಗಳು ನೀಡುವ ಮುಯ್ಯಿ ಕೇವಲ ಹಣವಲ್ಲ, ಅದು ಸದ್ಭಾವನೆ ಮತ್ತು ಆಶೀರ್ವಾದದ ರೂಪದಲ್ಲಿರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿ 17 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ, ಈ ಭಾಗದಲ್ಲಿ ಮಾತ್ರ ಬಿಸಿಗಾಳಿ

ಬೆಂಗಳೂರು, ಮಾ17: ರಾಜ್ಯದಲ್ಲಿ ಬೇಸಿಗೆಯ ಬಿಸಿಲ ಬೇಗೆಯ ನಡುವೆಯೇ ವರುಣನ ಆಗಮನದ ಮುನ್ಸೂಚನೆ ಸಿಕ್ಕಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 17 ಜಿಲ್ಲೆಗಳಲ್ಲಿ ಅನಿರೀಕ್ಷಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಲಘು ಮಳೆಯಾಗುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನ 34°C ಮತ್ತು ಕನಿಷ್ಠ 21°C ದಾಖಲಾಗಬಹುದು. ಮಳೆಯ ಮುನ್ಸೂಚನೆ ಒಂದೆಡೆಯಾದರೆ, ಉತ್ತರ ಕರ್ನಾಟಕದ ಜಿಲ್ಲೆಗಳಾದ ಕಲ್ಬುರ್ಗಿ, ರಾಯಚೂರು ಮತ್ತು ವಿಜಯಪುರದಲ್ಲಿ ತಾಪಮಾನ ಏರಿಕೆಯಾಗಲಿದೆ. ಇಲ್ಲಿ ಗರಿಷ್ಠ ತಾಪಮಾನ 38°C ದಾಟುವ ಸಂಭವವಿದೆ.

ಇದನ್ನೂ ಓದಿ: ಪೂಜೆ, ಪುನಸ್ಕಾರ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವಾ? ಶಾಸ್ತ್ರಗಳು ಹೇಳೋದೇನು ನೋಡಿ

ಕರ್ನಾಟಕದ ವಿವಿಧ ಜಿಲ್ಲೆಗಳ ತಾಪಮಾನ ಮತ್ತು ಮಳೆಯ ವಿವರ ಇಲ್ಲಿದೆ:

ಜಿಲ್ಲೆ/ನಗರ ಗರಿಷ್ಠ ತಾಪಮಾನ ಕನಿಷ್ಠ ತಾಪಮಾನ ಮಳೆ ಮುನ್ಸೂಚನೆ
ಬೆಂಗಳೂರು 33°C 19°C ಹಗುರ ಮಳೆ (40-50% ಸಂಭವನೀಯತೆ)
ಮೈಸೂರು 33°C 19°C ಹಗುರ ಮಳೆ (40% ಸಂಭವನೀಯತೆ)
ಮಂಗಳೂರು 31°C 24°C ಭಾಗಶಃ ಮೋಡ, ರಾತ್ರಿ ಮಳೆ ಸಾಧ್ಯತೆ (65%)
ಕಲಬುರಗಿ 34°C 22°C ಮೋಡ ಕವಿದ ವಾತಾವರಣ
ಬಾಗಲಕೋಟೆ 35°C 21°C ಗುಡುಗು ಸಹಿತ ಮಳೆ ಸಾಧ್ಯತೆ

ಮಳೆ ಬರುವ ಸಂದರ್ಭದಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದ್ದು, ಸಾರ್ವಜನಿಕರು ಮತ್ತು ರೈತರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಲಬುರಗಿಯಲ್ಲಿ ರಾಜ್ಯದ ಅತಿ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಸೆಖೆ ಹೆಚ್ಚಿರಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಮಹಿಳೆ ಜತೆ ಅಕ್ರಮ ಸಂಬಂಧಕ್ಕಾಗಿ ತಡರಾತ್ರಿ ಕಂಪೌಂಡ್ ಹಾರಿದ್ದ ಪೊಲೀಸ್! ಸಿಸಿಟಿವಿ ವಿಡಿಯೋ ವೈರಲ್

ಮಂಗಳೂರು, ಮಾರ್ಚ್ 17: ದೂರು ನೀಡಲು ಬಂದ ಮಹಿಳೆಯನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಬಲವಂತ ಮಾಡಿರುವ ಆರೋಪ ಎದುರಿಸುತ್ತಿರುವ ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಇದೀಗ ಅನೇಕ ಆರೋಪಗಳು ಕೇಳಿಬರುತ್ತಿವೆ. ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತನಿಖೆಗೆ ಆದೇಶಿಸಿದ್ದು, ಯಾರಾದರೂ ಸಂತ್ರಸ್ತೆಯರಿದ್ದರೆ ಧೈರ್ಯವಾಗಿ ಬಂದು ದೂರು ನೀಡಿ, ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಅಭಯ ನೀಡಿದ್ದಾರೆ. ಆರೋಪಿ ಸಂದೇಶ್ ಹಲವಾರು ಮಹಿಳೆಯರ ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ತಡರಾತ್ರಿ ಮಹಿಳೆಯೊಬ್ಬರ ಮನೆ ಕಂಪೌಂಡ್ ಹಾರಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.

ಹೆಚ್ಚಿನ ವಿವರಗಳಿಗೆ ಓದಿ: ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ: ಸಂತ್ರಸ್ತ ಮಹಿಳೆಯ ಅಪ್ರಾಪ್ತ ಮಗಳ ಮೇಲೂ ಕಣ್ಣು! ಆಡಿಯೋ ವೈರಲ್

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WTC ಫೈನಲ್​ಗೇರಲು ಟೀಮ್ ಇಂಡಿಯಾ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

Source link

ಇರಾನ್-ಇಸ್ರೇಲ್ ಸಮರಕ್ಕೆ ಬಳ್ಳಾರಿ ಜೀನ್ಸ್ ಉದ್ಯಮ ತತ್ತರ: ರಫ್ತು ಸ್ಥಗಿತ, ಉತ್ಪಾದನೆ ಕುಸಿತ

ಬಳ್ಳಾರಿ, ಮಾರ್ಚ್ 17: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ (Iran Israel War) ಪರಿಣಾಮ ಜಾಗತಿಕವಾಗಿ ಮಾತ್ರವಲ್ಲದೆ, ಸ್ಥಳೀಯವಾಗಿಯೂ ತಟ್ಟತೊಡಗಿದೆ. ಬಳ್ಳಾರಿಯ ಹೆಮ್ಮೆಯ ಜೀನ್ಸ್ ಉದ್ಯಮಕ್ಕೆ (Ballari Jeans Industry) ಈ ಯುದ್ಧ ಈಗ ಭಾರಿ ಹೊಡೆತ ನೀಡಿದೆ. ಕೊಲ್ಲಿ ರಾಷ್ಟ್ರಗಳಿಂದ ಬರುತ್ತಿದ್ದ ಕೆಮಿಕಲ್ ಸರಬರಾಜು ಸ್ಥಗಿತಗೊಂಡಿರುವುದು ಉದ್ಯಮಿಗಳನ್ನು ಹೈರಾಣಾಗಿಸಿದೆ. ಇದರಿಂದಾಗಿ ಉತ್ಪಾದನೆ ಕುಸಿತವಾಗಿದೆ. ಮತ್ತೊಂದೆಡೆ, ರಫ್ತು ಕೂಡ ಸ್ಥಗಿತಗೊಂಡಿದೆ. ಇದು ಜೀನ್ಸ್ ಉದ್ಯಮಿಗಳನ್ನು, ಕಾರ್ಮಿಕರನ್ನು ಸಂಕಷ್ಟಕ್ಕೆ ಈಡುಮಾಡಿದೆ.

ಜೀನ್ಸ್ ಉದ್ಯಮಕ್ಕೆ ಕೆಮಿಕಲ್ ಬಿಸಿ

ಜೀನ್ಸ್ ಪ್ಯಾಂಟ್‌ಗಳಿಗೆ ಬಣ್ಣ ನೀಡಲು ಬಳಸುವ ರಾಸಾಯನಿಕಗಳು ಹೆಚ್ಚಾಗಿ ಗಲ್ಫ್ ರಾಷ್ಟ್ರಗಳಿಂದ ಹಡಗುಗಳ ಮೂಲಕ ಸರಬರಾಜಾಗುತ್ತಿದ್ದವು. ಆದರೆ ಯುದ್ಧದ ಹಿನ್ನೆಲೆಯಲ್ಲಿ ಹಡಗುಗಳ ಸಂಚಾರ ಸ್ಥಗಿತಗೊಂಡಿದ್ದು, ಕೆಮಿಕಲ್ ಪೂರೈಕೆ ಸಂಪೂರ್ಣ ನಿಂತುಹೋಗಿದೆ. ಜೀನ್ಸ್ ಲೇಪನಕ್ಕೆ ಮುಖ್ಯವಾಗಿ ಬೇಕಾದ ಹೈಡ್ರೋಜನ್ ಪೆರಾಕ್ಸೈಡ್, ಸೋಡಿಯಂ ಹೈಪೋಕ್ಲೋರೈಟ್ಸ್ ಹಾಗೂ ಪೊಟ್ಯಾಸಿಯಮ್ ಪರ್ಮಾಂಗನೇಟ್ ರಾಸಾಯನಿಕಗಳ ಕೊರತೆ ಉಂಟಾಗಿದೆ.

ಮೂರ್ನಾಲ್ಕು ಪಟ್ಟು ಹೆಚ್ಚಾದ ಕೆಮಿಕಲ್ ದರ

ಹಿಂದೆ ಕೆಜಿಗೆ ಕೇವಲ 40 ರೂಪಾಯಿಗೆ ಸಿಗುತ್ತಿದ್ದ ಕೆಮಿಕಲ್ ದರ ಈಗ 150 ರೂಪಾಯಿ ಗಡಿ ದಾಟಿದೆ. ಸ್ಥಳೀಯವಾಗಿ ಸ್ಟಾಕ್ ಇರುವ ಕೆಮಿಕಲ್‌ಗಳನ್ನು ಮಾರಾಟಗಾರರು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದು ಉದ್ಯಮಿಗಳನ್ನು ಸಂಕಷ್ಟಕ್ಕೆ ದೂಡಿದೆ.

ರಂಜಾನ್, ಯುಗಾದಿ ಹಬ್ಬದ ಸೀಸನ್‌ನಲ್ಲೇ ಏಟು

ಸಾಮಾನ್ಯವಾಗಿ ಯುಗಾದಿ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ಬಳ್ಳಾರಿ ಜೀನ್ಸ್ ಬಟ್ಟೆಗಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇರುತ್ತದೆ. ಈ ಬಾರಿ ಸುಮಾರು 20 ಲಕ್ಷ ಜೀನ್ಸ್ ಪ್ಯಾಂಟ್‌ಗಳು ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳಿಗೆ ರಫ್ತಾಗಬೇಕಿತ್ತು. ಆದರೆ ಬಣ್ಣದ ಕೊರತೆಯಿಂದಾಗಿ ಉತ್ಪಾದನೆಯು ಶೇ 50ರಷ್ಟು ಕುಸಿತ ಕಂಡಿದೆ. ಇದರಿಂದಾಗಿ ಕೋಟ್ಯಂತರ ರೂಪಾಯಿ ವ್ಯವಹಾರಕ್ಕೆ ಧಕ್ಕೆಯಾಗಿದೆ.

ಇದನ್ನೂ ಓದಿ: ಬಂದ್ ಆಗುವ ಆತಂಕದಲ್ಲಿ ಬಳ್ಳಾರಿ ಜೀನ್ಸ್ ಉದ್ಯಮ: ಬೀದಿಗೆ ಬೀಳಲಿದೆ ಎರಡು ಲಕ್ಷ ಜನರ ಬದುಕು

ಕಾರ್ಮಿಕರ ಕೊರತೆ ನಡುವೆ ಬೆಲೆ ಏರಿಕೆ ಮರ್ಮಾಘಾತ

ಬಳ್ಳಾರಿಯ ಜೀನ್ಸ್ ಉದ್ಯಮವು ಈಗಾಗಲೇ ಕಾರ್ಮಿಕರ ಕೊರತೆಯಿಂದ ಹೈರಾಣಾಗಿತ್ತು. ಈಗ ಅಂತರಾಷ್ಟ್ರೀಯ ಸಂಘರ್ಷದಿಂದಾಗಿ ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿರುವ ಜೀನ್ಸ್ ಫ್ಯಾಕ್ಟರಿಗಳು ಮುಚ್ಚುವ ಭೀತಿ ಎದುರಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: 400 ಮಂದಿ ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ!

ಕಾಬೂಲ್, ಮಾ.17: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಕಾಬೂಲ್‌ನಲ್ಲಿರುವ ಮಾದಕ ವ್ಯಸನಿಗಳ ಪುನರ್ವಸತಿ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 400 ಮಂದಿ ಸಾವನ್ನಪ್ಪಿದ್ದಾರೆ ಮತ್ತು 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರ್ಕಾರ ತಿಳಿಸಿದೆ.

ಸೋಮವಾರ ರಾತ್ರಿ ಸುಮಾರು 9 ಗಂಟೆಗೆ ಕಾಬೂಲ್‌ನಲ್ಲಿರುವ ‘ಓಮಿದ್’ (Omid) ಹೆಸರಿನ 2,000 ಹಾಸಿಗೆಗಳ ಸಾಮರ್ಥ್ಯದ ಮಾದಕ ವ್ಯಸನಿಗಳ ಚಿಕಿತ್ಸಾ ಆಸ್ಪತ್ರೆಯ ಮೇಲೆ ಈ ದಾಳಿ ನಡೆದಿದೆ. ಆಸ್ಪತ್ರೆಯ ಬಹುಪಾಲು ಕಟ್ಟಡಗಳು ಧ್ವಂಸವಾಗಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಾಲಿಬಾನ್ ವಕ್ತಾರ ಹಮ್ದುಲ್ಲಾ ಫಿತ್ರತ್ ಆತಂಕ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ನೋಡಿ ಎಕ್ಸ್​​​​​​​ ಪೋಸ್ಟ್​​:

ಆದರೆ ಪಾಕಿಸ್ತಾನ ಈ ಆರೋಪವನ್ನು ತಿರಸ್ಕರಿಸಿದೆ. ತಾವು ಕೇವಲ ‘ಭಯೋತ್ಪಾದಕರ ಅಡಗುತಾಣಗಳು ಮತ್ತು ಮಿಲಿಟರಿ ನೆಲೆಗಳನ್ನು’ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದೇವೆ ಎಂದು ಹೇಳಿಕೊಂಡಿದೆ. ನಾಗರಿಕರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪಾಕಿಸ್ತಾನ ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ: ಯುದ್ಧದ ನಡುವೆಯೂ ಅರ್ಮೇನಿಯಾ ಮೂಲಕ ಇರಾನ್​ನಿಂದ 550 ಭಾರತೀಯರ ಸ್ಥಳಾಂತರ

ಕಳೆದ ಒಂದು ತಿಂಗಳಿನಿಂದ ಉಭಯ ದೇಶಗಳ ನಡುವೆ ಗಡಿ ಸಂಘರ್ಷ ತೀವ್ರಗೊಂಡಿದೆ. ಅಫ್ಘಾನಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸುತ್ತಿದ್ದರೆ, ಅಫ್ಘಾನಿಸ್ತಾನವು ಪಾಕಿಸ್ತಾನದ ದಾಳಿಯನ್ನು ತನ್ನ ಸಾರ್ವಭೌಮತ್ವದ ಉಲ್ಲಂಘನೆ ಎಂದು ಕರೆದಿದೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯುದ್ಧದಿಂದ ಜೋರ್ಡನ್​ ಅಲ್ಲಿ ‘NTR-Neel’ ಚಿತ್ರಕ್ಕೆ ತೊಂದರೆ? ಸಹಾಯಕ್ಕೆ ಬಂದ್ರಂತೆ ಟ್ರಂಪ್

ಪ್ರಶಾಂತ್ ನೀಲ್ ಅವರು ಸದ್ಯ ಜೂನಿಯರ್ ಎನ್​​ಟಿಆರ್ (JR NTR) ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ದೊಡ್ಡ ಬಜೆಟ್​ ಅಲ್ಲಿ ನಿರ್ಮಾಣ ಆಗುತ್ತಿದ್ದು, ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಈ ಸಿನಿಮಾ ಬಗ್ಗೆ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಅವರು ಮಾತನಾಡಿದ್ದಾರೆ. ಇತ್ತೀಚೆಗೆ ಅವರು ಜೋರ್ಡನ್ ಶೂಟ್​​​ನಲ್ಲಿ ಭಾಗಿಯಾಗಿದ್ದಾಗಿ ರಿವೀಲ್ ಮಾಡಿದ್ದಾರೆ.

ಪ್ರಶಾಂತ್ ನೀಲ್ ಅವರು ಮುಂದಿನ ಸಿನಿಮಾ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇತ್ತೀಚೆಗೆ ಉತ್ತರ ಕನ್ನಡದ ಕುಮುಟಾದಲ್ಲಿ ಶೂಟ್ ನಡೆದಿದೆ ಎಂದು ಹೇಳಲಾಗಿತ್ತು. ಆ ಬಳಿಕ ತಂಡ ವಿವಿಧ ಕಡೆಗಳಲ್ಲಿ ಚಿತ್ರೀಕರಣ ಮಾಡಿದೆ. ವಿದೇಶದಲ್ಲೂ ಶೂಟಿಂಗ್ ನಡೆದಿದೆ. ಈ ಸಿನಿಮಾ ಬಗ್ಗೆ ಈಗ ಕ್ಯಾಮೆರಾಮೆನ್ ಭುವನ್ ಗೌಡ ವಿವರಿಸಿದ್ದಾರೆ.

ಇದನ್ನೂ ಓದಿ: ಜೂ ಎನ್​​ಟಿಆರ್ ಸಿನಿಮಾಕ್ಕೆ ಬಾಲಿವುಡ್​​ ನಟನ ಕರೆತಂದ ಪ್ರಶಾಂತ್ ನೀಲ್: ಯಾರದು?

ಇತ್ತೀಚೆಗೆ ಭುವನ್ ಮಾಲ್ ಒಂದರಲ್ಲಿ ಅಂಗಡಿ ಉದ್ಘಾಟನೆಗೆ ತೆರಳಿದ್ದರು. ಈ ವೇಳೆ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ‘ಜೋರ್ಡನ್​ ಅಲ್ಲಿ ನಾವು ಶೂಟಿಂಗ್​​ಗೆ ಹೋಗಿದ್ದೆವು’ ಎಂದು ಹೇಳಿದರು ಭುವನ್. ‘ಯುದ್ಧದಿಂದ ಚಿತ್ರೀಕರಣ ನಿಂತಿತು ಎಂಬ ಮಾತಿದೆಯಲ್ಲ’ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ನಾವು ಇಲ್ಲಿ ಬಂದು ಲ್ಯಾಂಡ್​ ಆದ ಬಳಿಕ ಯುದ್ಧ ಶುರುವಾಯಿತು’ ಎಂದು ಭುವನ್ ಹೇಳಿದರು.

‘ಯಾವುದೇ ತೊಂದರೆ ಎದುರಾಗಿಲ್ಲ ಅಲ್ಲವೇ’ ಎಂದು ಕೇಳಿದಾಗ, ‘ಟ್ರಂಪ್ ಕರೆ ಮಾಡಿದ್ರು. ಯಾವಾಗ ಹೊರಡುತ್ತೀರೋ ಆಗ ಫ್ಲೈಟ್ ಕಳಸ್ತೀನಿ ಅಂದ್ರು’ ಎಂದು ಫನ್ ಆಗಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಸಿನಿಮಾ ಹೆಸರನ್ನು ‘ಡ್ರ್ಯಾಗನ್’ ಎಂದು ಕರೆದಾಗ ಅವರು ಯಾವುದೇ ವಿರೋಧ ತೋರಿಸಿಲ್ಲ. ಹೀಗಾಗಿ, ಚಿತ್ರಕ್ಕೆ ಇದೇ ಟೈಟಲ್ ಫೈನಲ್ ಆಯಿತೇ ಎಂಬ ಪ್ರಶ್ನೆಯೂ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version