ಥಿಯೇಟರ್‌ನಲ್ಲಿ ‘ಸ್ಪೈಡರ್ ಮ್ಯಾನ್’ ಕಥೆ ಹೇಳುತ್ತಿದ್ದ ಯುವಕನಿಗೆ ಧರ್ಮದೇಟು; ವಿಡಿಯೋ ವೈರಲ್ – Kannada News | Spider Man Brand New Day Screening Turns Violent Over Spoilers See Viral Video

ಚಿತ್ರಮಂದಿರದಲ್ಲಿ ಇಷ್ಟಪಟ್ಟು ಸಿನಿಮಾ ನೋಡಲು ಬಂದವರಿಗೆ ಪಕ್ಕದಲ್ಲಿದ್ದವನೇ ಕಥೆಯ ರಹಸ್ಯ ಬಿಚ್ಚಿಟ್ಟರೆ ಕೋಪ ಬರುವುದು ಸಹಜ. ಇತ್ತೀಚೆಗೆ ತೆರೆಕಂಡ ಬಹುನಿರೀಕ್ಷಿತ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ (Spider-Man: Brand New Day) ಸಿನಿಮಾ ಪ್ರದರ್ಶನದ ವೇಳೆ ಇಂಥದ್ದೇ ಒಂದು ಘಟನೆ ನಡೆದಿದೆ. ಈ ವೇಳೆ ಶುರುವಾದ ಪ್ರೇಕ್ಷಕರ ನಡುವಿನ ವಾಗ್ವಾದವು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಹೊಸದಾಗಿ ಬಿಡುಗಡೆಯಾಗಿರುವ, ಮಾರ್ವೆಲ್ ಸ್ಟುಡಿಯೋಸ್ ನಿರ್ಮಾಣದ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರವನ್ನು ನೋಡಲು ನಾಲ್ವರು ಸ್ನೇಹಿತರು ಅತ್ಯಂತ ಕಾತರದಿಂದ ಚಿತ್ರಮಂದಿರಕ್ಕೆ ತೆರಳಿದ್ದರು. ಅವರ ಪಕ್ಕದ ಸೀಟ್‌ನಲ್ಲೇ ಒಬ್ಬ ಯುವಕ ಹಾಗೂ ಆತನ ಸ್ನೇಹಿತೆ ಕುಳಿತಿದ್ದರು. ತನ್ನ ಸ್ನೇಹಿತೆಗೆ ಕಥೆ ವಿವರಿಸುತ್ತಿದ್ದ ಯುವಕನಿಂದಾಗಿ ಕಿರಿಕ್ ಶುರು ಆಯಿತು ಎನ್ನಲಾಗಿದೆ.

ವೈರಲ್ ಪೋಸ್ಟ್‌ನಲ್ಲಿ ಏನಿದೆ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಮಾಹಿತಿಯ ಪ್ರಕಾರ, ಪಕ್ಕದಲ್ಲಿದ್ದ ಯುವಕ ಈಗಾಗಲೇ ಈ ಸಿನಿಮಾವನ್ನು ಒಮ್ಮೆ ವೀಕ್ಷಿಸಿದ್ದ. ಎರಡನೇ ಬಾರಿ ತನ್ನ ಸ್ನೇಹಿತೆಯೊಂದಿಗೆ ಸಿನಿಮಾ ನೋಡಲು ಬಂದಿದ್ದ ಆತ, ಪ್ರದರ್ಶನದುದ್ದಕ್ಕೂ ಮುಂಬರುವ ದೃಶ್ಯಗಳ ಕಥೆಯನ್ನು ಆಕೆಗೆ ಜೋರಾಗಿ ಹೇಳಲು ಪ್ರಾರಂಭಿಸಿದ್ದ. ಮುಂದೆ ಯಾವ ದೃಶ್ಯ ಬರಲಿದೆ, ಕಥೆಯಲ್ಲಿ ಏನು ತಿರುವು ಸಿಗಲಿದೆ ಎಂಬುದನ್ನು ಆ ಯುವಕ ನಿರಂತರವಾಗಿ ಹೇಳುತ್ತಿದ್ದರಿಂದ ಪಕ್ಕದಲ್ಲಿದ್ದ ನಾಲ್ವರು ಪ್ರೇಕ್ಷಕರ ಸಿನಿಮಾ ವೀಕ್ಷಣೆಯ ಉತ್ಸಾಹ ಸಂಪೂರ್ಣವಾಗಿ ಹಾಳಾಗಿತ್ತು.

ಕೈಕೈ ಮಿಲಾಯಿಸಿದ ಪ್ರೇಕ್ಷಕರು:

ಮೊದಲಿಗೆ ಸಮಾಧಾನದಿಂದಲೇ ಯುವಕನಿಗೆ ಎಚ್ಚರಿಕೆ ನೀಡಿದರೂ ಆತ ಸ್ಪಾಯ್ಲರ್ ನೀಡುವುದನ್ನು ನಿಲ್ಲಿಸಲಿಲ್ಲ. ಇದರಿಂದ ಆಕ್ರೋಶಗೊಂಡ ನಾಲ್ವರು ಸ್ನೇಹಿತರು ಥಿಯೇಟರ್ ಒಳಗಡೆಯೇ ಆತನ ಜೊತೆ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಕೊನೆಗೆ ಗಲಾಟೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಸಿನಿಮಾ ಮಂದಿರದಲ್ಲೇ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ಸ್ಪೈಡರ್-ಮ್ಯಾನ್ ಅಬ್ಬರ; 4 ದಿನಗಳಲ್ಲಿ 300 ಕೋಟಿ ಕ್ಲಬ್ ಸೇರಿದ ‘ಬ್ರ್ಯಾಂಡ್ ನ್ಯೂ ಡೇ’

ಡೆಸ್ಟಿನ್ ಡೇನಿಯಲ್ ಕ್ರೆಟನ್ ನಿರ್ದೇಶನದ ಈ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾದಲ್ಲಿ ಟಾಮ್ ಹಾಲೆಂಡ್, ಝೆಂಡಾಯಾ, ಜಾಕೋಬ್ ಬಟಾಲನ್, ಮಾರ್ಕ್ ರಫೆಲೊ ಮುಂತಾದವರು ನಟಿಸಿದ್ದಾರೆ. ಚಿತ್ರಮಂದಿರದಲ್ಲಿ ಮಾರಾಮಾರಿ ನಡೆದಿರುವ ಈ ಘಟನೆಯ ನಂತರ, ‘ಮೊದಲೇ ಸಿನಿಮಾ ನೋಡಿದವರು ಇತರರಿಗೆ ಸ್ಪಾಯ್ಲರ್ ನೀಡಿ ಅವರ ಅನುಭವ ಹಾಳು ಮಾಡಬಾರದು’ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಂಡ್​ಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ರಿಟರ್ನ್ಸ್ ಸಿಗಲ್ಲವಾ? ಲ್ಯಾಡರಿಂಗ್ ತಂತ್ರ ಬಳಸಿ ಅಧಿಕ ಆದಾಯ ಪಡೆಯಿರಿ – Kannada News | Use laddering strategy in investing in bonds to get higher yield

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಣಕಾಸು ವರ್ಷದ ದ್ವಿತೀಯಾರ್ಧದ ವೇಳೆಗೆ ಬಡ್ಡಿದರಗಳನ್ನು 50 ರಿಂದ 75 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ. ಇಂತಹ ಬದಲಾಗುತ್ತಿರುವ ಬಡ್ಡಿದರದ ವಾತಾವರಣದಲ್ಲಿ ಬಾಂಡ್ (Bond) ಹೂಡಿಕೆದಾರರು ಗರಿಷ್ಠ ಆದಾಯ ಗಳಿಸಲು ಹಾಗೂ ಅಪಾಯವನ್ನು ಕಡಿಮೆ ಮಾಡಲು ‘ಏಣಿ ತಂತ್ರ’ (Laddering Strategy) ಅತ್ಯಂತ ಸೂಕ್ತವಾಗಿದೆ ಎಂದು ಸ್ಟ್ಯಾಂಡರ್ಡ್ ಚಾರ್ಟರ್ಡ್ ವೆಲ್ತ್ ಇಂಡಿಯಾದ ಹೂಡಿಕೆ ವಿಭಾಗದ ಮುಖ್ಯಸ್ಥ ವಿನಯ್ ಜೋಸೆಫ್ ಅಭಿಪ್ರಾಯಪಟ್ಟಿದ್ದಾರೆ.

ಏನಿದು ‘ಲ್ಯಾಡರಿಂಗ್ ತಂತ್ರ’?

ಏಣಿ ತಂತ್ರ ಅಥವಾ ಲ್ಯಾಡರಿಂಗ್ ಎಂದರೆ ನಿಮ್ಮ ಸಂಪೂರ್ಣ ಹಣವನ್ನು ಒಂದೇ ಬಾಂಡ್‌ನಲ್ಲಿ ಅಥವಾ ಒಂದೇ ಮುಕ್ತಾಯದ ಅವಧಿಯ (Maturity Period) ಯೋಜನೆಗಳಲ್ಲಿ ಹೂಡಿಕೆ ಮಾಡದೆ, ವಿವಿಧ ಕಾಲಾವಧಿಯ ಬಾಂಡ್‌ಗಳಲ್ಲಿ ವಿಂಗಡಿಸಿ ಹೂಡಿಕೆ ಮಾಡುವುದು. ಉದಾಹರಣೆಗೆ, 1 ವರ್ಷ, 2 ವರ್ಷ, 3 ವರ್ಷ, 5 ವರ್ಷ ಮೆಚ್ಯೂರಿಟಿಯ ಬಾಂಡ್​ಗಳಲ್ಲಿ ಹೂಡಿಕೆ ಮಾಡಬಹುದು.

ಇದನ್ನೂ ಓದಿ: ಪಿಎಫ್ ವೇತನ ಮಿತಿ 15,000 ರೂನಿಂದ 25,000 ರೂ ಏರಿಕೆ: ಹಣಕಾಸು ಸಚಿವಾಲಯ ಅನುಮೋದನೆ; ಏನಿದರ ಅನುಕೂಲ?

ಇದರಿಂದ ಕಾಲಕಾಲಕ್ಕೆ ಬಾಂಡ್‌ಗಳು ಮೆಚ್ಯೂರಿಟಿಯಾದಾಗ (Maturity), ಆ ಹಣವನ್ನು ಆ ಸಮಯದಲ್ಲಿ ಲಭ್ಯವಿರುವ ಹೆಚ್ಚಿನ ಬಡ್ಡಿದರದಲ್ಲಿ ಮರುಹೂಡಿಕೆ (Reinvest) ಮಾಡಲು ಅವಕಾಶ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಬಾಂಡ್​ಗಳಲ್ಲಿ ಹೇಗೆ ಹೂಡಿಕೆ ಮಾಡಬಹುದು ಎಂಬುದಕ್ಕೆ ಈ ಕೆಳಗಿನ ಸಲಹೆಗಳನ್ನು ಪರಿಗಣಿಸಬಹುದು:

ಅಲ್ಪಾವಧಿಯ ಬಾಂಡ್‌ಗಳಿಗೆ ಆದ್ಯತೆ

ಮಾರುಕಟ್ಟೆಯಲ್ಲಿ ಬಡ್ಡಿದರಗಳು ಏರಿಕೆಯಾಗುತ್ತಿರುವಾಗ ಅಲ್ಪಾವಧಿಯ (1 ರಿಂದ 3 ವರ್ಷದ Short-Maturity Bonds) ಬಾಂಡ್‌ಗಳು ಉತ್ತಮ ಆದಾಯ ನೀಡುತ್ತವೆ. ಇವುಗಳಲ್ಲಿ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯ ಬಡ್ಡಿದರದ ಏರಿಳಿತಗಳ ಅಪಾಯ (Duration Risk) ಕಡಿಮೆಯಿರುತ್ತದೆ.

ಉತ್ತಮ ಗುಣಮಟ್ಟದ ಕಾರ್ಪೊರೇಟ್ ಬಾಂಡ್‌ಗಳು

ಪ್ರಸ್ತುತ ಸನ್ನಿವೇಶದಲ್ಲಿ ಸರ್ಕಾರಿ ಸೆಕ್ಯುರಿಟಿಗಳಿಗೆ (G-Secs) ಹೋಲಿಸಿದರೆ ಉತ್ತಮ ರೇಟಿಂಗ್ ಹೊಂದಿರುವ ಕಾರ್ಪೊರೇಟ್ ಬಾಂಡ್‌ಗಳು (Corporate Bonds) ಹೆಚ್ಚಿನ ಮತ್ತು ಆಕರ್ಷಕ ಆದಾಯವನ್ನು ನೀಡುತ್ತಿವೆ. ಹೂಡಿಕೆದಾರರು ತಮ್ಮ ಪೋರ್ಟ್‌ಫೋಲಿಯೋದಲ್ಲಿ ಇವುಗಳನ್ನು ಸೇರಿಸಿಕೊಳ್ಳಬಹುದು.

ಇದನ್ನೂ ಓದಿ: ಯುಪಿಐ ಪಾವತಿಗೆ ಹೆಚ್ಚುವರಿ ಭದ್ರತೆ; ಯೆಸ್ ಎಂದರಷ್ಟೇ ಪೇಮೆಂಟ್; ವಂಚನೆ, ತಪ್ಪಾದ ಹಣ ವರ್ಗಾವಣೆ ತಡೆಯಲು ಈ ಕ್ರಮಕ್ಕೆ ಯೋಚನೆ

ಮಲ್ಟಿ-ಅಸ್ಸೆಟ್ ತಂತ್ರ

ಸಂಪೂರ್ಣ ಹಣವನ್ನು ಬಾಂಡ್‌ಗಳಲ್ಲೇ ಇಡದೆ, ಹೆಚ್ಚಿನ ಲಾಭಾಂಶ (Dividend) ನೀಡುವ ಷೇರುಗಳು, ದೀರ್ಘಾವಧಿಯ ಬಾಂಡ್‌ಗಳು ಹಾಗೂ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್ (REITs) ನಂತಹ ವಿವಿಧ ಆಸ್ತಿ ವಿಭಾಗಗಳಲ್ಲಿ ಹೂಡಿಕೆ ಹಂಚಿಕೆ ಮಾಡುವುದರಿಂದ (Multi-Asset Strategies) ಮಾರುಕಟ್ಟೆಯ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದು ಪರಿಣಿತರ ಸಲಹೆ.

ಆರ್‌ಬಿಐ ಬಡ್ಡಿದರ ಹೆಚ್ಚಳ ಮಾಡುವ ಸೂಚನೆಗಳು ಇರುವುದರಿಂದ, ಒಂದೇ ಕಡೆ ದೀರ್ಘಾವಧಿಗೆ ಹಣ ತೊಡಗಿಸುವ ಬದಲು ಬಾಂಡ್ ಲ್ಯಾಡರಿಂಗ್ ತಂತ್ರಗಾರಿಕೆ ಅನುಸರಿಸುವುದು ಮತ್ತು ಪೋರ್ಟ್‌ಫೋಲಿಯೋವನ್ನು ವೈವಿಧ್ಯಗೊಳಿಸುವುದು (Diversification) ಹೂಡಿಕೆಯನ್ನು ಸುರಕ್ಷಿತವಾಗಿರಿಸಲು ಹಾಗೂ ಉತ್ತಮ ಆದಾಯ ಪಡೆಯಲು ಸಹಾಯ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Karnataka Cabinet Expansion Live: ರಾಜಭವನದಲ್ಲಿ 20 ನೂತನ ಸಚಿವರ ಪ್ರಮಾಣವಚನ – Kannada News | Karnataka Cabinet Ministers Oath Taking Live Streaming

ಬೆಂಗಳೂರು, ಆ.3: ರಾಜ್ಯದ ನೂತನ ಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮಗಳ ನಡೆಯುತ್ತಿದೆ. 20 ಸಚಿವರ ಪ್ರಮಾಣವಚನ ನಡೆಯುತ್ತಿದೆ. ಕಾಂಗ್ರೆಸ್​​​ನ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಎಂ ಡಿಕೆ ಶಿವಕುಮಾರ್​, ಕಾಂಗ್ರೆಸ್​​ ಕೆಪಿಸಿಸಿ ಅಧ್ಯಕ್ಷರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ರಾಜ್ಯ ಭನವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಬಗ್ಗೆ ಲೈವ್​​ ವಿಡಿಯೋ ಇಲ್ಲಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಡಿಕೆ ಶಿವಕುಮಾರ್​​ ಕ್ಯಾಬಿನೆಟ್​ನ ನೂತನ ಸಚಿವರ ಪ್ರಮಾಣ ವಚನಕ್ಕೆ ಸಜ್ಜಾದ ಲೋಕಭವನ – Kannada News | Lokabhavana Set for Swearing In Ceremony of New Ministers in D.K. Shivakumar Cabinet

ಬೆಂಗಳೂರು, ಆಗಸ್ಟ್​​ 03: ರಾಜ್ಯ ಸಂಪುಟದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬೆಂಗಳೂರಿನ ಲೋಕಭವನದ ಗ್ಲಾಸ್ ಹೌಸ್ ಸಜ್ಜಾಗಿದೆ. ಇಡೀ ಗ್ಲಾಸ್ ಹೌಸ್ ಕನ್ನಡದ ಬಾವುಟಗಳಿಂದ ಅಲಂಕರಿಸಲಾಗಿದೆ. ಸಿಎಂ ಡಿಕೆ ಶಿವಕುಮಾರ್ ಸಂಪುಟಕ್ಕೆ ಸೇರ್ಪಡೆಯಾಗಲಿರುವ 20 ನೂತನ ಸಚಿವರು ಸಂಜೆ 5 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯ ವೇದಿಕೆಯ ಮೇಲೆ ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯ ಮುಂಭಾಗದಲ್ಲಿ ನಿಯೋಜಿತ ಸಚಿವರು ಕುಳಿತುಕೊಳ್ಳಲು 20 ಪ್ರತ್ಯೇಕ ಆಸನಗಳನ್ನು ಕಾಯ್ದಿರಿಸಲಾಗಿದ್ದು, ಐದೈದು ಜನರ ತಂಡವಾಗಿ ಅಥವಾ ಒಬ್ಬೊಬ್ಬರಾಗಿ ವೇದಿಕೆಗೆ ತೆರಳಿ ಪ್ರಮಾಣ ವಚನ ಸ್ವೀಕರಿಸಲು ಅನುಕೂಲವಾಗುವಂತೆ ವಿಶೇಷ ಮಾರ್ಗವನ್ನು ನಿರ್ಮಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

CWG 2026: ಪದಕ ವಿಜೇತರನ್ನು ಮುಕ್ತಕಂಠದಿಂದ ಶ್ಲಾಘಿಸಿದ ಮೋದಿ – Kannada News | India’s CWG 2026 Performance: 39 Medals, PM Modi Praises Athletes, Ahmedabad to Host 2030

ಗ್ಲಾಸ್ಗೋದಲ್ಲಿ ನಡೆದ 2026 ರ ಕಾಮನ್‌ವೆಲ್ತ್ ಕ್ರೀಡಾಕೂಟ ( Commonwealth Games 2026) ಮುಕ್ತಾಯವಾಗಿದೆ. ಈ ಕ್ರೀಡಾಕೂಟದಲ್ಲಿ ಭಾರತ ಒಟ್ಟು 39 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡದುಕೊಂಡಿತು. ಭಾರತ ಗೆದ್ದ ಒಟ್ಟು 39 ಪದಕಗಳಲ್ಲಿ 13 ಚಿನ್ನ 17 ಬೆಳ್ಳಿ ಮತ್ತು 9 ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಕಳೆದ ಆವೃತ್ತಿಗೆ ಹೋಲಿಸಿಕೊಂಡರೆ ಈ ಬಾರಿ ಭಾರತದ ಪ್ರದರ್ಶನ ಕೊಂಚ ನಿರಸವಾಗಿತ್ತು. ಇದಕ್ಕೆ ಕಾರಣ ಈ ಆವೃತ್ತಿಯಲ್ಲಿ ಭಾರತ ಪದಕ ಗೆಲ್ಲುವಂತಹ ಕೆಲವು ಸ್ಪರ್ಧೆಗಳನ್ನು ಕೈಬಿಟ್ಟಿದ್ದು, ಭಾರತದ ಪದಕಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿತ್ತು. ಅದಾಗ್ಯೂ ಈ ಕ್ರೀಡಾಕೂಟದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸಿದ ಭಾರತದ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು (PM Modi) ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಪ್ರದರ್ಶನದ ಬಗ್ಗೆ ಹೆಮ್ಮೆಯಿದೆ

ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಳ್ಳುವ ಮೂಲಕ ಪದಕ ವಿಜೇತರನ್ನು ಅಭಿನಂದಿಸಿರುವ ಮೋದಿ, ‘ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಮ್ಮ ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆಯಿದೆ. ಭಾರತ 13 ಚಿನ್ನ ಸೇರಿದಂತೆ 39 ಪದಕಗಳನ್ನು ಗೆದ್ದಿರುವುದು ಸಂತೋಷ ತಂದಿದೆ. ಪದಕ ವಿಜೇತರಿಗೆ ಅಭಿನಂದನೆಗಳು. ಕ್ರೀಡಾಕೂಟದ ಉದ್ದಕ್ಕೂ, ನಮ್ಮ ಪ್ರತಿಭಾನ್ವಿತ ಕ್ರೀಡಾಪಟುಗಳು ಅಸಾಧಾರಣ ಕೌಶಲ್ಯ, ದೃಢನಿಶ್ಚಯ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ್ದಾರೆ. ಅವರ ಕಠಿಣ ಪರಿಶ್ರಮ ನಮ್ಮ ಯುವಕರಿಗೆ ಸ್ಫೂರ್ತಿ ನೀಡುತ್ತದೆ. ಮುಂದಿನ ಪ್ರಯತ್ನಗಳಿಗೆ ಇಡೀ ಭಾರತೀಯ ತಂಡಕ್ಕೆ ನನ್ನ ಶುಭಾಶಯಗಳು. ಅವರು ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮುಂದುವರಿಸಿ ರಾಷ್ಟ್ರಕ್ಕೆ ಮತ್ತಷ್ಟು ಕೀರ್ತಿ ತರಲಿ’ ಎಂದು ಬರೆದುಕೊಂಡಿದ್ದಾರೆ.

ಭಾರತದ ಆತಿಥ್ಯ

11 ದಿನಗಳ ಕಾಲ ನಡೆದ ಈ ಕ್ರೀಡಾಕೂಟಕ್ಕೆ ತೆರೆ ಬಿದ್ದಿದ್ದು, ಇದೀಗ 2030 ರಲ್ಲಿ ನಡೆಯಲಿರುವ ಈ ಕ್ರೀಡಾಕೂಟಕ್ಕೆ ಭಾರತ ಆತಿಥ್ಯವಹಿಸಲಿದೆ. ಹೀಗಾಗಿ ಆತಿಥೇಯ ಭಾರತಕ್ಕೆ ಸ್ಕಾಟ್ಲೆಂಡ್ ಔಪಚಾರಿಕವಾಗಿ ಕಾಮನ್‌ವೆಲ್ತ್ ಕ್ರೀಡಾಕೂಟದ ಧ್ವಜ ಮತ್ತು ವಿಧ್ಯುಕ್ತ ಲಾಠಿ ಪ್ರದಾನ ಮಾಡಿತು. 2030 ರ ಕಾಮನ್‌ವೆಲ್ತ್ ಕ್ರೀಡಾಕೂಟವು ಅಹಮದಾಬಾದ್‌ನಲ್ಲಿ ನಡೆಯಲಿದ್ದು, ಆಸ್ಟ್ರೇಲಿಯಾ ನಂತರ ಬಹು-ಕ್ರೀಡಾ ಕಾರ್ಯಕ್ರಮವನ್ನು ಒಂದಕ್ಕಿಂತ ಹೆಚ್ಚು ಬಾರಿ ಆಯೋಜಿಸಿದ ಎರಡನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಭಾರತವು ಈ ಹಿಂದೆ 2010 ರಲ್ಲಿ ನವದೆಹಲಿಯಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:09 pm, Mon, 3 August 26

Source link

ಮಂಕಾಳು ವೈದ್ಯ ಹೆಸರು ಔಟ್, ಎಸ್.ಎಸ್. ಮಲ್ಲಿಕಾರ್ಜುನ್ ಇನ್ ಆಗಿದ್ದು ಹೇಗೆ? – Kannada News | Karnataka Cabinet Reshuffle: SS Mallikarjun Replaces Mankalu Vaidya Amidst Confusion

ಬೆಂಗಳೂರು, ಆ.3: ಕರ್ನಾಟಕದ ನೂತನ ಸಚಿವ ಸಂಪುಟ ಸೇರ್ಪಡೆಯ ಕುರಿತು ನಡೆದ ಕೊನೆ ಕ್ಷಣದ ಬೆಳವಣಿಗೆಗಳ ಬಗ್ಗೆ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಗೊಂದಲ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಸಚಿವರ ಪಟ್ಟಿಯಿಂದ ಮಂಕಾಳು ವೈದ್ಯ ಅವರನ್ನು ಕೈಬಿಟ್ಟು, ಕೊನೆ ಕ್ಷಣದಲ್ಲಿ ಮಲ್ಲಿಕಾರ್ಜುನ್ ಅವರಿಗೆ ಸ್ಥಾನ ನೀಡಲಾಗಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್.ಎಸ್. ಮಲ್ಲಿಕಾರ್ಜುನ್, “ನನಗೆ ಗೊತ್ತಿಲ್ಲ. ಬೆಳಗ್ಗೆ ಸಿಎಂ ಅವರೇ ಫೋನ್ ಮಾಡಿ ನೀನು ಬಾರಪ್ಪ, ರೆಡಿಯಾಗಪ್ಪ ನಾಲ್ಕು ಗಂಟೆಗೆ ಅಂದಿದ್ರು” ಎಂದು ತಿಳಿಸಿದರು. ಆದರೆ, ನಂತರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದಿರುವುದನ್ನು ಗಮನಿಸಿ ಗೊಂದಲಕ್ಕೊಳಗಾಗಿದ್ದರು. ಇದರ ನಂತರ, “ಮತ್ತೆ ಅವರೇ ಫೋನ್ ಮಾಡಿದ್ರು. ಕೊನೆಗಳಿಗೆಯಲ್ಲಿ ಏನೋ ಚೇಂಜ್ ಆಗಿರಬೇಕಪ್ಪ, ನೀನು ಮತ್ತೆ, ನಾಲ್ಕು ಗಂಟೆ ಸುಮಾರು ಸ್ವೇರಿಂಗ್-ಇನ್-ಗೆ ಬಾ ಅಂತ ಅಂದು ಅವರೇ ಹೇಳಿದ್ರು” ಎಂದು ಮಲ್ಲಿಕಾರ್ಜುನ್ ವಿವರಿಸಿದ್ದಾರೆ. ತಮಗೆ ಈ ಬಗ್ಗೆ ಯಾವುದೇ ಸ್ಪಷ್ಟ ಕಲ್ಪನೆ ಇಲ್ಲ ಎಂದು ಅವರು ಪುನರುಚ್ಚರಿಸಿದರು. “ಸುಳ್ಳು ಸುಳ್ಳು ಅವೆಲ್ಲ, ಯಾವುದೂ ಆ ಚರ್ಚೆನೇ ಆಗಿ ನಡೆದಿಲ್ಲ” ಎಂದು ಹೇಳುವ ಮೂಲಕ ತಮ್ಮ ಸಚಿವ ಸ್ಥಾನದ ಬಗ್ಗೆ ಇದ್ದ ಹಿಂದಿನ ವರದಿಗಳನ್ನು ಅಲ್ಲಗಳೆದರು. ಎಲ್ಲ ಜಾತಿ, ಜನಾಂಗದವರಿಗೂ, ಲಿಂಗಾಯತ, ಎಸ್‌ಸಿ, ಎಸ್‌ಟಿ ಸೇರಿದಂತೆ ಎಲ್ಲರಿಗೂ ಸಮಾನ ಪಾಲನ್ನು ಹಂಚಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಸಿಎಂ ಅವರನ್ನು ಭೇಟಿಯಾಗಲು ಹೋಗುತ್ತಿದ್ದೇನೆ ಎಂದು ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:12 pm, Mon, 3 August 26

Source link

ಮಂತ್ರಿಗಿರಿ ಸಿಗದಿದ್ದಕ್ಕೆ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದ ಶಾಸಕರಿಗೆ ಭರ್ಜರಿ ಶಾಕ್​​ ಕೊಟ್ಟ ಹೈಕಮಾಂಡ್ – Kannada News | Karnataka Cabinet Expansion: MLA Who Threatened to Resign Over Cabinet Snub Gets a Shock from the High Command

ಮಲ್ಲಿಕಾರ್ಕುನ ಖರ್ಗೆ ಮತ್ತು ರಾಹುಲ್​​ ಗಾಂಧಿImage Credit source: PTI

ಬೆಂಗಳೂರು, ಆಗಸ್ಟ್​​ 03: ಸಿಎಂ ಡಿಕೆ ಶಿವಕುಮಾರ್​​ ಸಚಿವ ಸಂಪುಟ ವಿಸ್ತರಣೆ ಸಂಬಂಧ 20 ಜನರ ಹೆಸರನ್ನು ಒಳಗೊಂಡ ಪಟ್ಟಿ ಹೈಕಮಾಂಡ್​​ನಿಂದ ಬಿಡುಗಡೆ ಬೆನ್ನಲ್ಲೇ ಕಾಂಗ್ರೆಸ್​​ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಮಂತ್ರಿಗಿರಿ ಸಿಗದಿದ್ದಕ್ಕೆ ಮುನಿಸಿಕೊಂಡಿರುವ ಕೆಲ ಶಾಸಕರು ರಾಜೀನಾಮೆ ನೀಡೋದಾಗಿ ಅದಾಗಲೇ ಘೋಷಣೆ ಮಾಡಿದ್ದಾರೆ. ಆದರೆ ಪಕ್ಷದ ಶಾಸಕ ರಾಜೀನಾಮೆ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ವರಿಷ್ಠರು, ಸಿಎಂ ಡಿ.ಕೆ.ಶಿವಕುಮಾರ್​​ಗೆ ಕರೆ ಮಾಡಿ ಈ ಬಗ್ಗೆ ವಿವರ ಕೇಳಿದ್ದಾರೆ ಎನ್ನಲಾಗಿದೆ.

ರಾಜೀನಾಮೆ ಅಂಗೀಕರಿಸಲು ಸೂಚನೆ

ರಾಜೀನಾಮೆ ಬೆದರಿಕೆ ಹಾಕಿರುವ ಶಾಸಕರ ಕುರಿತು ವರಿಷ್ಠರು ವಿವರಣೆ ಕೇಳಿದ್ದು, ಸಚಿವ ಸ್ಥಾನ ಸಿಗದಿದ್ದವರಿಗೆ ನಿಗಮ ಮಂಡಳಿ ಕೊಡುತ್ತೇವೆ. ಅದನ್ನೂ ಮೀರಿ ರಾಜೀನಾಮೆ ನೀಡಿದರೆ ಅಂಗೀಕರಿಸಿ ಎಂದಿ ಸಿಎಂ ಡಿಕೆಶಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ನೂತನ ಸಚಿವರ ಪ್ರಮಾಣವಚನಕ್ಕು ಮುನ್ನವೇ ವರಿಷ್ಠರ ತೀರ್ಮಾನದ ಬಗ್ಗೆ ಕೆಲ ಕಾಂಗ್ರೆಸಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಡುವೆಯೇ ಹೈಕಮಾಂಡ್​​ನ ಈ ಸೂಚನೆ ಭಾರಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ‘ಇದು ನಿರಾಶಾದಾಯಕ ಪಟ್ಟಿ’: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತನ್ವೀರ್ ಸೇಠ್ ತೀವ್ರ ಬೇಸರ

ರಾಜೀನಾಮೆಗೆ ಮುಂದಾಗಿರುವ ಕೆಲ ಶಾಸಕರು

ಮಂತ್ರಿಗಿರಿ ಸಿಗದ್ದಕ್ಕೆ ಮುನಿಸಿಕೊಂಡಿರುವ ವಿಜಯಪುರ ಜಿಲ್ಲೆಯ ಇಂಡಿ ಶಾಸಕ ಯಶವಂತರಾಯಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸ್ಪೀಕರ್​ ರುದ್ರಪ್ಪ ಲಮಾಣಿಗೆ ರಾಜೀನಾಮೆ ಪತ್ರವನ್ನು ಅವರು ಸಲ್ಲಿಕೆ ಮಾಡಿದ್ದರೆ, ಇತ್ತ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಳೆ (ಆಗಸ್ಟ್ 4) ಬೆಳಗ್ಗೆ 10 ಗಂಟೆಗೆ ಶಾಸಕ ಸ್ಥಾನ ಹಾಗೂ ನಿಗಮ ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದವರು ಘೋಷಿಸಿದ್ದಾರೆ. ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಭದ್ರಾವತಿ ಎಂಎಲ್​​ಎ ಸಂಗಮೇಶ್​, 30-40 ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಬಿಜೆಪಿಗರು 50 ಕೋಟಿ ಕೊಡ್ತೀನಿ ಅಂದ್ರೂ ಹೋಗಿಲ್ಲ. ಆದರೆ ಮಂತ್ರಿ ಮಾಡ್ತೀವಿ ಎಂದು ಹೇಳಿ ಮೋಸ ಮಾಡಿದ್ದಾರೆ. 136 ಸ್ಥಾನ ಇದೆ ಅಂತಾ ಕಾಂಗ್ರೆಸ್​ಗೆ ಹಮ್ಮು ಬಂದಿದೆ. ನಾಳೆ ನನ್ನ ಕ್ಷೇತ್ರದ ಜನರ ಜೊತೆಗೆ ಸಭೆ ನಡೆಸುತ್ತೇನೆ. ಕ್ಷೇತ್ರದ ಜನ ಹೇಳಿದ್ರೆ ನಾನು ರಾಜೀನಾಮೆ ಕೊಡ್ತೇನೆ ಎಂದವರು ತಿಳಿಸಿದ್ದಾರೆ.

ವರದಿ: ಈರಣ್ಣಾ ಬಸವ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.​​

Source link

ಅನುಮತಿ ಇಲ್ಲದೆ ಆಫ್ರಿಕಾದಲ್ಲಿ ವ್ಯಾಪಾರ: ಮೈಸೂರಿನ 9 ಮಂದಿ ಬಂಧನ! – Kannada News | 9 Mysuru Traders Arrested in Africa for Unauthorized Business: Families Seek Govt Help

ಮೈಸೂರಿನ 9 ಮಂದಿ ಬಂಧನImage Credit source: gettyimages.com

ಮೈಸೂರು, ಆಗಸ್ಟ್ 03: ಉತ್ತಮ ಜೀವನೋಪಾಯ ಕಂಡುಕೊಳ್ಳುವ ಭರವಸೆಯೊಂದಿಗೆ ವಿದೇಶಕ್ಕೆ ತೆರಳಿದ್ದ ಮೈಸೂರಿನ ಜನರಿಗೆ ಆಫ್ರಿಕಾದಲ್ಲಿ ಭಾರೀ ಆಘಾತ ಎದುರಾಗಿದೆ. ಸೂಕ್ತ ಕಾನೂನು ಅನುಮತಿ ಹಾಗೂ ನಿಯಮಾವಳಿಗಳನ್ನು ಪಾಲಿಸದೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪದ ಮೇಲೆ, ಮೈಸೂರು ಮೂಲದ ಒಂಬತ್ತು ಜನರನ್ನು ಆಫ್ರಿಕಾ ದೇಶದ ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಯುರ್ವೇದ ತೈಲ ಮಾರಾಟಕ್ಕೆ ತೆರಳಿದ್ದ ವ್ಯಾಪಾರಿಗಳು

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಪಕ್ಷಿರಾಜಪುರ ಗ್ರಾಮಕ್ಕೆ ಸೇರಿದ ಈ 9 ಮಂದಿ, ಸುಮಾರು ಎರಡು ತಿಂಗಳ ಹಿಂದೆ ಆಯುರ್ವೇದದ ವಿಶೇಷ ತೈಲ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಆಫ್ರಿಕಾಗೆ ಪ್ರವಾಸ ಬೆಳೆಸಿದ್ದರು. ಆದರೆ, ಅಲ್ಲಿನ ಸ್ಥಳೀಯ ಸರ್ಕಾರ ಮತ್ತು ಅರಣ್ಯ/ವಾಣಿಜ್ಯ ಇಲಾಖೆಗಳಿಂದ ಅಧಿಕೃತ ಅನುಮತಿ ಪಡೆಯದೆ ವ್ಯಾಪಾರ ನಡೆಸುತ್ತಿದ್ದಾರೆ ಎನ್ನಲಾದ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ನಿರೋಣಿ ಸೇರಿದಂತೆ ಪ್ರಭುದೇವ, ಗಿರೀಶ್, ಷಹಜಹಾನ್, ಶಾಂತಿ ಹಾಗೂ ಇತರ ನಾಲ್ವರು ಸೇರಿದ್ದಾರೆ.

ಜನಪ್ರತಿನಿಧಿಗಳ ಬಳಿ ಕುಟುಂಬಸ್ಥರ ರಕ್ಷಣೆಯ ಮೊರೆ

ವಿದೇಶದಲ್ಲಿ ಬಂಧನಕ್ಕೊಳಗಾಗಿರುವ ತಮ್ಮ ಕುಟುಂಬ ಸದಸ್ಯರನ್ನು ರಕ್ಷಿಸಿ, ಭಾರತಕ್ಕೆ ವಾಪಸ್ ಕರೆತರಲು ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಸಂತ್ರಸ್ತ ಕುಟುಂಬಸ್ಥರು ಹುಣಸೂರು ಕ್ಷೇತ್ರದ ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ವಿಷಯದ ಗಂಭೀರತೆಯನ್ನು ಅರಿತ ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್ ಅವರು, ಕೂಡಲೇ ಸಚಿವ ಡಾ. ಯತೀಂದ್ರ ಅವರ ಗಮನಕ್ಕೆ ತಂದಿದ್ದಾರೆ.

ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ಆಫ್ರಿಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ (Indian Embassy) ಮೂಲಕ ಮಾತುಕತೆ ನಡೆಸಿ, ಬಂಧಿತರನ್ನು ಶೀಘ್ರವಾಗಿ ಬಿಡುಗಡೆಗೊಳಿಸಲು ಅಗತ್ಯ ರಾಜತಾಂತ್ರಿಕ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋನಾಕ್ಷಿ ಸಿನ್ಹಾ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್; ಖಾರದ ಮಾತುಗಳಲ್ಲಿ ಟೀಕೆ – Kannada News | Kangana Ranaut Cryptic Post Sparks New Controversy with Sonakshi Sinha

ಬಾಲಿವುಡ್ ಕಂಟ್ರೋವರ್ಸಿ ಕ್ವೀನ್ ಕಂಗನಾ ರಣಾವತ್ (Kangana Ranaut) ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ ಒಂದು ಬಾಲಿವುಡ್‌ನಲ್ಲಿ ಹೊಸ ವಾಗ್ವಾದಕ್ಕೆ ನಾಂದಿ ಹಾಡಿದೆ. ಕಂಗನಾ ಪೋಸ್ಟ್ ಯಾರ ವಿರುದ್ಧ ಇದೆ ಎಂಬ ಚರ್ಚೆ ಜೋರಾಗಿದೆ. ಸೋನಾಕ್ಷಿ ಸಿನ್ಹಾ ಅವರನ್ನು ಗುರಿಯಾಗಿಸಿಕೊಂಡೇ ಕಂಗನಾ ರಣಾವತ್ ಈ ರೀತಿ ಹೇಳಿದ್ದಾರೆ ಎಂದು ನೆಟ್ಟಿಗರು ಅಂದಾಜಿಸುತ್ತಿದ್ದಾರೆ. ಅಷ್ಟಕ್ಕೂ ಆ ಪೋಸ್ಟ್​​ನಲ್ಲಿ ಏನಿದೆ? ಅದನ್ನು ಕಂಡು ಜನರಿಗೆ ಸೋನಾಕ್ಷಿ ಸಿನ್ಹಾ (Sonakshi Sinha) ನೆನಪಾಗಲು ಕಾರಣ ಏನು? ಮುಂದೆ ಓದಿ..

ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ ಮತ್ತು ಜಾರ್ಖಂಡ್ ಪತ್ರಿಕೆ ಸೋರಿಕೆ ಕುರಿತಾಗಿ ಹರಿದಾಡುತ್ತಿದ್ದ ಪೋಸ್ಟ್ ಒಂದಕ್ಕೆ ಕಂಗನಾ ಲೈಕ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ, ಈ ಸ್ಕ್ರೀನ್‌ಶಾಟ್ ಸಂಪೂರ್ಣ ನಕಲಿ ಎಂದು ಕಂಗನಾ ರಣಾವತ್ ಸ್ಪಷ್ಟನೆ ನೀಡಿದ್ದಾರೆ. ಈ ಸ್ಪಷ್ಟನೆ ನೀಡುತ್ತಲೇ ಕಂಗನಾ ಅವರು ಮತ್ತೊಬ್ಬ ನಟಿಯ ನಡೆ-ನುಡಿ ಮತ್ತು ಶೈಲಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಜೇಬುಗಳ್ಳರ ರೀತಿ ವರ್ತನೆ:

‘ನಾನು ಯಾರನ್ನೂ ಬಾಡಿ ಶೇಮ್ ಮಾಡುವುದಿಲ್ಲ. ಆದರೆ, ಇತ್ತೀಚೆಗೆ ನಟಿಯೊಬ್ಬಳು ಹಾಫ್‌ ಪ್ಯಾಂಟ್ ಮತ್ತು ಉಲ್ಟಾ ಕ್ಯಾಪ್ ಧರಿಸಿ, ಜೇಬುಗಳ್ಳರ ರೀತಿ ಮಾತನಾಡುತ್ತಾ, ಪ್ರತಿಭಟನಾಕಾರರ ನಡವಳಿಕೆಯನ್ನು ಬೆಂಬಲಿಸುತ್ತಿರುವುದನ್ನು ಗಮನಿಸಿದ್ದೇನೆ. ನೀವು ಹೇಗೆ ಡ್ರೆಸ್ ಮಾಡಿಕೊಳ್ಳುತ್ತೀರಿ ಎಂಬುದು ನಿಮ್ಮ ಭಾವನೆಗಳನ್ನು ತೋರಿಸುತ್ತದೆ’ ಎಂದು ಕಂಗನಾ ಹೇಳಿದ್ದಾರೆ.

‘ಆತ್ಮೀಯ ನಟಿಯೇ, ನಿನ್ನ ಸಂಗಾತಿ ನಿನಗೆ ಒಬ್ಬ ಜೇಬುಗಳ್ಳನಂತೆ ಭಾಸವಾಗುವಂತೆ ಮಾಡುತ್ತಿದ್ದಾರೆ. ನೀನು ಮೊದಲು ಎಷ್ಟು ಅಚ್ಚುಕಟ್ಟಾಗಿ ಮಾತನಾಡುತ್ತಿದ್ದೆ, ಡ್ರೆಸ್ ಮಾಡುತ್ತಿದ್ದೆ. ನಿನಗೆ ಈಗೇನಾಯಿತು? ನಿನ್ನ ಅಭಿಪ್ರಾಯಗಳು ನಿನ್ನವೇ ಆಗಿರಲಿ. ಆದರೆ ಸ್ಟೈಲಿಂಗ್ ವಿಷಯದಲ್ಲಿ ಸುಧಾರಣೆ ಅಗತ್ಯವಿದೆ. ಸಹಾಯ ಬೇಕಾದರೆ ನಾನು ಸದಾ ಸಿದ್ಧ’ ಎಂದು ಕಂಗನಾ ಅವರು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಸೋನಾಕ್ಷಿ ಅವರತ್ತ ಬೆರಳು ತೋರಿಸಿದ ನೆಟ್ಟಿಗರು:

ಕಂಗನಾ ಅವರು ಈ ಪೋಸ್ಟ್ ಮಾಡಿರುವುದು ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರನ್ನು ಉದ್ದೇಶಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರು ಚರ್ಚಿಸುತ್ತಿದ್ದಾರೆ. ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ಬಗ್ಗೆ ಬಾಲಿವುಡ್‌ನಿಂದ ಮೊದಲು ಧ್ವನಿ ಎತ್ತಿದವರಲ್ಲಿ ಸೋನಾಕ್ಷಿ ಸಿನ್ಹಾ ಕೂಡ ಪ್ರಮುಖರಾಗಿದ್ದರು.

ಇದನ್ನೂ ಓದಿ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಸೋನಾಕ್ಷಿ ಸಿನ್ಹಾ ಸಂಭ್ರಮ: ವಿದ್ಯಾರ್ಥಿಗಳ ಬಳಿ ಕ್ಷಮೆ ಕೇಳಿದ ನಟಿ

ಇನ್ನು, ಕಂಗನಾ ಹೇಳಿರುವಂತೆ ಡ್ರೆಸ್ ಮಾಡಿಕೊಳ್ಳುವುದು ಕೂಡ ಸೋನಾಕ್ಷಿ ಸಿನ್ಹಾ ಅವರೇ. ಟಿ-ಶರ್ಟ್, ಶಾರ್ಟ್ಸ್ ಹಾಗೂ ಕ್ಯಾಪ್ ಧರಿಸಿ ಸೋನಾಕ್ಷಿ ಅವರು ಹಂಚಿಕೊಂಡಿದ್ದ ವಿಡಿಯೋ ಒಂದರಲ್ಲಿ, ಲಡಾಖ್‌ನ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಬೆಂಬಲಕ್ಕೆ ನಿಂತು ಸರ್ಕಾರದ ವಿರುದ್ಧ ಮಾತನಾಡಿದ್ದರು. ಪ್ರಸ್ತುತ ಕಂಗನಾ ಅವರ ಈ ಹೇಳಿಕೆಯು ಬಾಲಿವುಡ್‌ನಲ್ಲಿ ಹೊಸ ಜಗಳಕ್ಕೆ ಹಾದಿಮಾಡಿಕೊಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇರಾನ್ ಯುದ್ಧದಿಂದ ಹಿಂದೆ ಸರಿಯುವಂತೆ ಟ್ರಂಪ್‌ಗೆ ಸೌದಿ ಅರೇಬಿಯಾ ಒತ್ತಾಯ: ಕಾರಣಗಳೇನು? – Kannada News | Saudi Urges Trump: Halt Iran War – Vision 2030, Oil Prices and Regional Stability Fears

ರಿಯಾದ್, ಆಗಸ್ಟ್​ 03: ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಅಮೆರಿಕ-ಇಸ್ರೇಲ್ ಮತ್ತು ಇರಾನ್(Iran) ನಡುವಿನ ಮಿಲಿಟರಿ ಸಂಘರ್ಷವನ್ನು ತಕ್ಷಣವೇ ಶಮನಗೊಳಿಸುವಂತೆ ಹಾಗೂ ಇರಾನ್ ಮೇಲಿನ ಹೆಚ್ಚಿನ ದಾಳಿಗಳನ್ನು ತಡೆಹಿಡಿಯುವಂತೆ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ (MBS) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮನವಿ ಮಾಡಿದ್ದಾರೆ.

ಅಮೆರಿಕದ ಮಿತ್ರರಾಷ್ಟ್ರವಾಗಿದ್ದರೂ ಸೌದಿ ಅರೇಬಿಯಾ ಈ ಯುದ್ಧವನ್ನು ತಡೆಯಲು ಮುಂದಾಗಿರುವುದರ ಹಿಂದಿರುವ ಪ್ರಮುಖ ರಾಜಕೀಯ ಮತ್ತು ಆರ್ಥಿಕ ಕಾರಣಗಳ ವಿಶ್ಲೇಷಣೆ ಇಲ್ಲಿದೆ. ಸೌದಿ ಅರೇಬಿಯಾವು ತೈಲದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಿ, ದೇಶವನ್ನು ಜಾಗತಿಕ ಪ್ರವಾಸೋದ್ಯಮ, ತಂತ್ರಜ್ಞಾನ ಮತ್ತು ಹೂಡಿಕೆಯ ಕೇಂದ್ರವಾಗಿಸಲು ‘ವಿಷನ್ 2030’ ಎಂಬ ಶತಕೋಟಿ ಡಾಲರ್ ವೆಚ್ಚದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತಂದಿದೆ.

ಯುದ್ಧದ ವಾತಾವರಣವಿದ್ದರೆ ವಿದೇಶಿ ಹೂಡಿಕೆದಾರರು ಸೌದಿಗೆ ಬರಲು ಹಿಂಜರಿಯುತ್ತಾರೆ. ಇರಾನ್ ಮೇಲಿನ ದಾಳಿ ಉಲ್ಬಣಗೊಂಡರೆ ಸೌದಿಯ ಮೆಗಾ ಪ್ರಾಜೆಕ್ಟ್‌ಗಳಿಗೆ ಧಕ್ಕೆಯಾಗಲಿದೆ ಎಂಬ ಭೀತಿ ರಿಯಾದ್ ಆಡಳಿತಕ್ಕಿದೆ. ಅಮೆರಿಕ ಅಥವಾ ಇಸ್ರೇಲ್‌ಗೆ ಗಲ್ಫ್ ದೇಶಗಳು ಜಾಗ ಅಥವಾ ಬೆಂಬಲ ನೀಡಿದರೆ, ಪ್ರತಿಯಾಗಿ ಸೌದಿ ಅರೇಬಿಯಾ ಮತ್ತು ಯುಎಇಯಲ್ಲಿರುವ ತೈಲ ಸಂಸ್ಕರಣಾಗಾರಗಳು ಹಾಗೂ ಮೂಲಸೌಕರ್ಯಗಳ ಮೇಲೆ ಕ್ಷಿಪಣಿ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಸಿದೆ.

ಮತ್ತಷ್ಟು ಓದಿ: ಬಹಿರಂಗವಾಗಿ ಯುದ್ಧದ ಬೆದರಿಕೆ ಹಾಕುತ್ತಿರುವ ಅಮೆರಿಕ ರಹಸ್ಯವಾಗಿ ಸಂಧಾನ ಬಯಸುತ್ತಿದೆ; ಇರಾನ್‌ ಆರೋಪ

ವಿಶ್ವದ ಶೇ. 20ರಷ್ಟು ತೈಲ ರವಾನೆಯಾಗುವ ‘ಹಾರ್ಮುಜ್ ಜಲಸಂಧಿ’ಯಲ್ಲಿ ಇರಾನ್ ಹಡಗು ಸಂಚಾರ ತಡೆದಿರುವುದರಿಂದ ಸೌದಿಯ ತೈಲ ರಫ್ತಿಗೂ ಅಡಚಣೆಯಾಗಿದೆ. ಯೆಮೆನ್‌ನ ಹೌತಿ ಬಂಡುಕೋರರಿಗೆ ಇರಾನ್‌ನ ನೇರ ಬೆಂಬಲವಿದೆ. ಬಲಪ್ರಯೋಗ ಅಥವಾ ಮಿಲಿಟರಿ ಕಾರ್ಯಾಚರಣೆಗಳಿಂದಷ್ಟೇ ಹೌತಿಗಳನ್ನು ಮಟ್ಟಹಾಕಲು ಸಾಧ್ಯವಿಲ್ಲ ಎಂಬುದನ್ನು ಸೌದಿ ಅರೇಬಿಯಾ ತನ್ನ ಗಡಿ ಯುದ್ಧದ ಅನುಭವದಿಂದ ಅರಿತಿದೆ.

ಅಮೆರಿಕ-ಇರಾನ್ ಯುದ್ಧ ತೀವ್ರಗೊಂಡರೆ, ಯೆಮೆನ್‌ನಿಂದ ಹೌತಿಗಳು ಮತ್ತೆ ಸೌದಿಯ ವಿಮಾನ ನಿಲ್ದಾಣಗಳು ಹಾಗೂ ತೈಲ ಸಂಸ್ಥೆಗಳ (Aramco) ಮೇಲೆ ಡ್ರೋನ್ ದಾಳಿ ಆರಂಭಿಸುವ ಅಪಾಯವಿದೆ. ಪ್ರಸ್ತುತ ಬಿಕ್ಕಟ್ಟನ್ನು ಬಗೆಹರಿಸಲು ಗಲ್ಫ್ ರಾಷ್ಟ್ರಗಳಾದ ಕತಾರ್ ಮತ್ತು ಒಮಾನ್ ಮುಂಚೂಣಿಯಲ್ಲಿ ನಿಂತು ಇರಾನ್, ಅಮೆರಿಕ ಹಾಗೂ ಸೌದಿ ಪ್ರತಿನಿಧಿಗಳ ನಡುವೆ ಮಧ್ಯವರ್ತಿಯಾಗಿ ಚರ್ಚೆ ನಡೆಸುತ್ತಿವೆ.

ಚೀನಾದ ಮಧ್ಯಸ್ಥಿಕೆಯಲ್ಲಿ 2023 ರಲ್ಲಿ ಇರಾನ್ ಮತ್ತು ಸೌದಿ ಅರೇಬಿಯಾ ತಮ್ಮ ಏಳು ವರ್ಷಗಳ ರಾಜತಾಂತ್ರಿಕ ಹಗೆತನವನ್ನು ಕೊನೆಗೊಳಿಸಿ ದೂತಾವಾಸಗಳನ್ನು ಮತ್ತೆ ತೆರೆದಿದ್ದವು. ಈ ಹೊಸ ರಾಜತಾಂತ್ರಿಕ ಬಾಂಧವ್ಯವನ್ನು ಹಾಳುಮಾಡಿಕೊಳ್ಳಲು ಸೌದಿ ಅರೇಬಿಯಾ ಬಯಸುತ್ತಿಲ್ಲ. ಈ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಯಲ್ಲಿ ಭಾರಿ ಏರಿಳಿತ ಕಂಡುಬಂದಿದ್ದು, ಯುದ್ಧ ಮುಂದುವರಿದರೆ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟುವ ಆತಂಕ ಎದುರಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version