Headlines

VHT 2025-26: ಮಿಂಚಿದ ಮಯಾಂಕ್, ಪಡಿಕ್ಕಲ್, ಪ್ರಸಿದ್ಧ್; ಕರ್ನಾಟಕಕ್ಕೆ ಸತತ 6ನೇ ಜಯ – Kannada News | Vijay Hazare: Karnataka Extends Unbeaten Run with Dominant Win vs Rajasthan

ಗುಜರಾತ್​ನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ 6ನೇ ಸುತ್ತಿನ ಪಂದ್ಯದಲ್ಲೂ ಕರ್ನಾಟಕ ತಂಡ ಅಮೋಘ ಜಯಭೇರಿ ಬಾರಿಸಿದೆ. ರಾಜಸ್ಥಾನ ವಿರುದ್ಧದ ಪಂದ್ಯವನ್ನು 151 ರನ್​ಗಳಿಂದ ಗೆದ್ದುಕೊಂಡಿರುವ ಕರ್ನಾಟಕ ತಂಡ ಈ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ಈ ಆವೃತ್ತಿಯಲ್ಲಿ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು, ಆಡಿದ ಎಲ್ಲಾ ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ಇದರೊಂದಿಗೆ ಎಲೈಟ್ ಎ ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ…

Read More

Chanakya Niti: ಪದೇ ಪದೇ ಹಣವನ್ನು ಸಾಲ ಪಡೆಯುವುದರಿಂದ ಏನಾಗುತ್ತದೆ ಗೊತ್ತಾ? – Kannada News | Chanakya Niti: If you borrowing money, you will have to face all these problems

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ನಮ್ಮ ಜೀವನಕ್ಕೆ ಬೇಕಾಗಿರುವಂತಹ ಸಾಕಷ್ಟು ವಿಚಾರಗಳ ಬಗ್ಗೆ ಹೇಳಿದ್ದಾರೆ.  ಜೊತೆಗೆ ಈ ನೀತಿಗಳಲ್ಲಿ, ಅವರು ನಿರಂತರವಾಗಿ ಇತರರಿಂದ ಸಾಲ ಪಡೆಯುವವರ ಬಗ್ಗೆಯೂ ಮಾತನಾಡುತ್ತಾರೆ. ಸಹಾಯ ಪಡೆಯಲು, ಪರಿಸ್ಥಿತಿಯನ್ನು ನಿಭಾಯಿಸಲು ಸಾಲ ಪಡೆಯುವುದು  ಸುಲಭದ ಮಾರ್ಗವೆಂದು ಹಲವರು ಭಾವಿಸುತ್ತಾರೆ. ಈ ಅಭ್ಯಾಸವು ಆರಂಭದಲ್ಲಿ ಆರ್ಥಿಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಹುದಾದರೂ, ಅದು ದೀರ್ಘಾವಧಿಯಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆಚಾರ್ಯ ಚಾಣಕ್ಯ ಎಚ್ಚರಿಸಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ, ಈ ಅಭ್ಯಾಸವು ವ್ಯಕ್ತಿಯ…

Read More

ಉಚ್ಛಾಟಿತ ವಚನಾನಂದ ಶ್ರೀಗೆ ಮತ್ತೊಂದು ಸಂಕಷ್ಟ, ಧ್ಯಾನದ ಮೊರೆ ಹೋದ ಸ್ವಾಮೀಜಿ – Kannada News | Harihar Panchamasa­li Petha Row: hostel students complaints to child welfare committee against vachananda swamiji

ದಾವಣಗೆರೆ, (ಏಪ್ರಿಲ್ 17):  ಹರಿಹರ ಪಂಚಮಸಾಲಿ ಗುರುಪೀಠದಿಂದ (Harihar Panchamasa­li Petha) ವಚನಾನಂದ ಶ್ರೀಗಳನ್ನು (vachananda swamiji) ಉಚ್ಛಾಟನೆ ಮಾಡಲಾಗಿದೆ. ಆದರೂ ಸಹ ಯಾವುದೇ ಕಾರಣಕ್ಕೂ ಮಠ ಬಿಟ್ಟು ಹೋಗಲು ಎಂದು ಪಟ್ಟು ಹಿಡಿದಿರುವ ವಚನಾನಂದ ಶ್ರೀಗಳ ವಿರುದ್ಧ ಹಾಸ್ಟೆಲ್ ವಿದ್ಯಾರ್ಥಿಗಳು ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದಾರೆ. ಇದರಿಂದ ಸ್ವಾಮೀಜಿಗೆ ಸಂಕಷ್ಟ ಎದುರಾಗಿದೆ. ಇನ್ನು ವಿದ್ಯಾರ್ಥಿಗಳ ದೂರು ಬೆನ್ನಲ್ಲೇ ಮಕ್ಕಳ ಕಲ್ಯಾಣ ಸಮಿತಿಯವರು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಮಠಕ್ಕೆ ಭೇಟಿ…

Read More

ಚಾಕೊಲೇಟ್ ಕೊಡುವ ನೆಪದಲ್ಲಿ ಹೇಯ ಕೃತ್ಯ: 8 ವರ್ಷದ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ – Kannada News | Hubballi: Elderly Man Arrested for POCSO After Physical assaulting 8 Year Old Girl

ಅಶೋಕನಗರ ಪೊಲೀಸ್ ಠಾಣೆImage Credit source: tv9 kannada ಹುಬ್ಬಳ್ಳಿ, ಫೆಬ್ರವರಿ 02: ಕ್ಯಾನ್ಸರ್ ಪೀಡಿತ 75 ವರ್ಷದ ವೃದ್ಧನಿಂದ 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವಂತಹ ಘಟನೆ ಹುಬ್ಬಳ್ಳಿಯ (Hubballi) ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ 29ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚಾಕೊಲೇಟ್ ಕೊಡುವುದಾಗಿ ಹೇಳಿ ಪಕ್ಕದ ಮನೆಯ ಬಾಲಕಿಯನ್ನ ಮನೆಗೆ ಕರೆಸಿಕೊಂಡು ವೃದ್ಧ ಕೃತ್ಯವೆಸಗಿದ್ದಾನೆ. ಹುಬ್ಬಳ್ಳಿಯ ಅಶೋಕನಗರ ಠಾಣೆಯಲ್ಲಿ ಪೋಕ್ಸೋ ಕೇಸ್ (POCSO Case) ದಾಖಲಾಗಿದ್ದು, ಸದ್ಯ ಆರೋಪಿ…

Read More

ಕಾಬೂಲ್‌ನಲ್ಲಿ ಭೀಕರ ಸ್ಫೋಟ; 7 ಮಂದಿ ಸಾವು, 13 ಜನರಿಗೆ ಗಾಯ – Kannada News | 7 people Killed and 13 Injured In Afghanistans Kabul Blast

ಕಾಬೂಲ್, ಜನವರಿ 19: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ (Blast) 7 ಜನರು ಸಾವನ್ನಪ್ಪಿದ್ದಾರೆ ಮತ್ತು 13 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೊಡ್ಡ ಕಚೇರಿ ಕಟ್ಟಡಗಳು, ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ರಾಯಭಾರ ಕಚೇರಿಗಳನ್ನು ಹೊಂದಿರುವ ಪ್ರದೇಶದಲ್ಲೇ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಈ ಸ್ಫೋಟ ನಡೆದ ಶಹರ್-ಎ-ನಾವ್ ಕಾಬೂಲ್‌ನ ಸುರಕ್ಷಿತ ಭಾಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಸ್ಫೋಟದ ಜವಾಬ್ದಾರಿಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ. ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ …

Read More

ರಾವಣನ ಪಾತ್ರ ಮಾಡಲು ಒಪ್ಪಿದ್ದೇಕೆ ಯಶ್, ನಿರ್ದೇಶಕರು ಕೊಟ್ಟರು ಉತ್ತರ

ರಣ್​​ಬೀರ್ ಕಪೂರ್ (Ranbir Kapoor), ಯಶ್ ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ ‘ರಾಮಾಯಣ’ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್​ನ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಎರಡು ಭಾಗಗಳ ನಿರ್ಮಾಣಕ್ಕೆ ಸುಮಾರು 4000 ಕೋಟಿ ಬಜೆಟ್ ಮೀಸಲಿಡಲಾಗಿದೆಯಂತೆ. ಸಿನಿಮಾಕ್ಕೆ ವಿಶ್ವದರ್ಜೆಯ ವಿಎಫ್​​ಎಕ್ಸ್ ತಂತ್ರಜ್ಞಾನ ಬಳಸಲಾಗಿದೆ. ಸಿನಿಮಾವನ್ನು ಐಮ್ಯಾಕ್ಸ್ ಗಾಗಿ ವಿಶೇಷವಾಗಿ ಚಿತ್ರೀಕರಿಸಲಾಗಿದೆ. ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿಯೂ ಹಾಗೂ ರಾವಣನಾಗಿ ನಟ ಯಶ್ ನಟಿಸಿದ್ದಾರೆ. ಆದರೆ ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾದಿಂದ…

Read More

ಸೆಪ್ಟಿಕ್ ಟ್ಯಾಂಕ್​​ನಲ್ಲಿದ್ದಿದ್ದು ಸಿಯಾಳ ಶವ, ಕೊಲೆ ಮಾಡಿದ್ದು ಆಕೆಯ ಪ್ರೇಮಿ, ಅಂತೂ ಪ್ರಕರಣ ಇತ್ಯರ್ಥ – Kannada News | Bhopal Septic Tank Murder: Married Lover Kills Girlfriend Siya Over Blackmail, Body Found

ಭೋಪಾಲ್, ಫೆಬ್ರವರಿ 15:  ವಿವಾಹಿತ ಪ್ರೇಮಿಯೊಬ್ಬ ಪ್ರೇಯಸಿಯನ್ನು ಹತ್ಯೆ(Murder) ಮಾಡಿ ಸೆಪ್ಟಿಕ್ ಟ್ಯಾಂಕ್​​ಗೆ ಎಸೆದಿದ್ದ ಘಟನೆ ಭೋಪಾಲ್​​ನಲ್ಲಿ ನಡೆದಿದೆ. ಘಟನೆ ನಡೆದು 24 ಗಂಟೆಯೊಳಗೆ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಖಾಲಿ ಜಾಗದಲ್ಲಿರುವ ಸೆಪ್ಟಿಕ್ ಟ್ಯಾಂಕ್​ನಲ್ಲಿ ಯುವತಿಯ ಶವ ಪತ್ತೆಯಾಗಿತ್ತು. ಪ್ರೀತಿ, ದ್ರೋಹ, ಬ್ಲ್ಯಾಕ್​ಮೇಲ್ ಹಾಗೂ ಕೊಲೆ ಪ್ರಕರಣ ಬಹಿರಂಗಗೊಂಡಿದೆ. ಮೃತ ಯುವತಿಯನ್ನು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನಿವಾಸಿ ಅಶ್ರಫಿ ಅಲಿಯಾಸ್ ಸಿಯಾ ಎಂದು ಗುರುತಿಸಲಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಸೋಮವಾರ ಸಿಯಾಳನ್ನು ಆಕೆಯ ವಿವಾಹಿತ ಪ್ರಿಯಕರ ಸಮೀರ್ ತನ್ನ…

Read More

OTT Release this week: ಈ ವಾರ ಒಟಿಟಿಗೆ ಬಂದಿವೆ ಬ್ಲಾಕ್ ಬಸ್ಟರ್ ಸಿನಿಮಾಗಳು

ಮಲಯಾಳಂ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಕೇವಲ ಕಂಟೆಂಟ್ ಇಂದಲೇ ಗೆಲ್ಲುತ್ತಿವೆ. ಅಂಥಹಾ ಸಿನಿಮಾಗಳ ಸಾಲಿಗೆ ಸೇರುತ್ತದೆ ‘ಆಡು 3’. ಈ ಮಲಯಾಳಂ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹಿಟ್ ಆಗಿತ್ತು. ಇದೀಗ ಒಟಿಟಿಗೆ ಬಂದಿದ್ದು, ಜೀ5ನಲ್ಲಿ ಸ್ಟ್ರೀಮ್ ಆಗುತ್ತಿದೆ. ಶರ್ವಾನಂದ ಅವರ ಬಹು ನಿರೀಕ್ಷಿತ ಸಿನಿಮಾ ‘ಬೈಕರ್’ ಕೆಲ ವಾರಗಳ ಹಿಂದಷ್ಟೆ ಈ ಸಿನಿಮಾ ಬಿಡುಗಡೆ ಆಗಿತ್ತು. ‘ಬೈಕರ್’ ಸಿನಿಮಾದ ಮೇಲೆ ಶರ್ವಾನಂದಗೆ ಭಾರಿ ನಂಬಿಕೆ ಇತ್ತು. ಸಿನಿಮಾ ಸಾಧಾರಣ ಯಶಸ್ಸನ್ನಷ್ಟೆ ಕಂಡಿತು. ಸಿನಿಮಾ ಇದೀಗ ನೆಟ್​​ಫ್ಲಿಕ್ಸ್​ನಲ್ಲಿ ವೀಕ್ಷಣೆಗೆ…

Read More

SRH vs RR: ಅತಿ ಹೆಚ್ಚು ಸಿಕ್ಸರ್; ಕ್ರಿಸ್ ಗೇಲ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಿ ಕೇವಲ 29 ಎಸೆತಗಳಲ್ಲಿ 97 ರನ್ ಬಾರಿಸಿದರು. ಕೂದಲೆಳೆ ಅಂತರದಲ್ಲಿ ಶತಕ ವಂಚಿತರಾದ ವೈಭವ್ ಕೇವಲ 3 ರನ್‌ಗಳಿಂದ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕವನ್ನು ತಪ್ಪಿಸಿಕೊಂಡರು. ವೈಭವ್ ಈ ಶತಕವನ್ನು ಪೂರೈಸಿದ್ದರೆ, ಅದು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕವಾಗುತ್ತಿತ್ತು. ಈ ಮೂಲಕ ವೈಭವ್ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿಯುತ್ತಿದ್ದರು. 2013 ರ ಐಪಿಎಲ್‌ನಲ್ಲಿ ಕ್ರಿಸ್ ಗೇಲ್…

Read More

ಹಸುಗೂಸು ಬಿಟ್ಟು ದೊಡ್ಡ ಮಗಳ ಮದ್ವೆಗೆ ಹೋದ ತಾಯಿ: ಕೂಸು ದುರಂತ ಸಾವು! – Kannada News | Tumakuru: Newborn Baby Dies After Mother Leaves Infant Behind to Attend Wedding

ಮಗು (ಪ್ರಾತಿನಿಧಿಕ ಚಿತ್ರ)Image Credit source: Freepik ತುಮಕೂರು, ಜನವರಿ 30: ಮಗುವೊಂದು (baby) ಜನನವಾಗಿ ಕೇವಲ ಒಂದು ದಿನ ಕಳೆದಿತ್ತು. ಪಿಳಿಪಿಳಿ ಅಂತ ಬಿಡುತ್ತಿದ್ದ ಪುಟ್ಟ ಕಣ್ಣು ಅಮ್ಮನನ್ನು ಹುಡುಕುತ್ತಿತ್ತು. ತಾಯಿಯ ಅಕ್ಕರೆ ಬಯಸಿ ಅಳುತ್ತಿದ್ದ ಆ ಮಗುವಿನ ಬದುಕಿಗೆ ತಮ್ಮವರೇ ಶತ್ರುಗಳಾಗಿದ್ದಾರೆ. ತಿಳಿದೋ ಅಥವ ತಿಳಿಯದೆಯೋ ಆದ ತಪ್ಪಿಗೆ ಪುಟ್ಟ ಕಂದ ಕಣ್ಬಿಟ್ಟು ಪ್ರಪಂಚ ನೊಡುವ ಮುಂಚೆಯೇ ಶಾಶ್ವತವಾಗಿ ಕಣ್ಮುಚ್ಚಿದೆ. ಈ ಕರುಳು ಹಿಂಡುವ ಘಟನೆಗೆ ತುಮಕೂರು (Tumakuru) ಜಿಲ್ಲೆ ಸಾಕ್ಷಿಯಾಗಿದೆ. ನಡೆದದ್ದೇನು? ಮಗುವಿಗೆ…

Read More