Video: ಲಿಫ್ಟ್​ ಬಾಗಿಲಲ್ಲಿ ಕೈ ಸಿಲುಕಿ ಒದ್ದಾಡಿದ ಮಗು

Video: ಲಿಫ್ಟ್​ ಬಾಗಿಲಲ್ಲಿ ಕೈ ಸಿಲುಕಿ ಒದ್ದಾಡಿದ ಮಗು

ಪುಣೆ, ಮಾರ್ಚ್​ 15: ಲಿಫ್ಟ್​ನಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವಾಗ ತುಂಬಾ ಜಾಗೃತೆಯಾಗಿರಬೇಕು. ಲಿಫ್ಟ್​​ನಿಂದ ಹೊರ ಬರಬೇಕು ಎನ್ನುವಾಗ ಅಜ್ಜಿಯ ಕೈಲಿದ್ದ ಮಗುವಿನ ಕೈ ಲಿಫ್ಟ್​ ಬಾಗಿಲಲ್ಲಿ ಸಿಲುಕಿ ಒದ್ದಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ತಾಯಿ ಮತ್ತು ಅಜ್ಜಿ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಲಿಫ್ಟ್ ಹತ್ತಿದ್ದಾರೆ, ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ ಮಗುವಿನ ಕೈ ಲಿಫ್ಟ್ ಬಾಗಿಲೊಳಗೆ ಸಿಲುಕಿದೆ. ಲಿಫ್ಟ್​ನಲ್ಲಿದ್ದವರು ಹರಸಾಹಸ ಪಟ್ಟು ಅಂತೂ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವರು ದಿನಗಳ ಹಿಂದೆ ಇಂಥದ್ದೇ ಘಟನೆ ನಡೆದಿತ್ತು. ವ್ಯಕ್ತಿಯೊಬ್ಬರು ಇನ್ನೇನು ಲಿಫ್ಟ್​ ಇಳಿಯಬೇಕು ಎನ್ನುವಷ್ಟರಲ್ಲಿ ಬಾಗಿಲು ತೆಗೆದಾಕ್ಷಣ ಲಿಫ್ಟ್​ ಕೆಳಗೆ ಹೋಗಿತ್ತು, ವ್ಯಕ್ತಿ ನೇರವಾಗಿ ಕೆಳಗೆ ಬಿದ್ದಿದ್ದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಯುದ್ಧದ ಬಿಸಿ: ವಿಮಾನ ಟಿಕೆಟ್ ದರವೂ ಏರಿಕೆ, ಪ್ರಯಾಣಿಕರು ಕಂಗಾಲು

ಬೆಂಗಳೂರು, ಮಾರ್ಚ್ 15: ಭಾರತದಲ್ಲಿ ವಿಮಾನ ಪ್ರಯಾಣವು ಮತ್ತಷ್ಟು ದುಬಾರಿಯಾಗಿದ್ದು, ಇಂಡಿಗೋ, ಏರ್ ಇಂಡಿಯಾ ಮತ್ತು ಆಕಾಸ ಏರ್‌ಲೈನ್ಸ್‌ನಂತಹ ಪ್ರಮುಖ ವಿಮಾನಯಾನ ಸಂಸ್ಥೆಗಳು ಇಂಧನ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿವೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಮಧ್ಯಪ್ರಾಚ್ಯದಲ್ಲಿ ಇಂಧನ ಬೆಲೆಗಳ ಮೇಲೆ ಪರಿಣಾಮ ಬೀರಿದ್ದು, ಭಾರತೀಯ ಜನಸಾಮಾನ್ಯರ ಮೇಲೆ ನೇರವಾಗಿ ಪ್ರಭಾವ ಬೀರಿದೆ. ಈ ನಿರ್ಧಾರದಿಂದಾಗಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ದರಗಳು ಏರಿಕೆಯಾಗಿವೆ.

ಇಂಡಿಗೋ ವಿಮಾನಯಾನ ಸಂಸ್ಥೆಯು ಭಾರತದೊಳಗಿನ ಪ್ರಯಾಣಕ್ಕೆ ಪ್ರತಿ ಟಿಕೆಟ್‌ಗೆ 425 ರೂ. ಇಂಧನ ಶುಲ್ಕವನ್ನು ವಿಧಿಸುತ್ತಿದೆ. ಮಧ್ಯಪ್ರಾಚ್ಯಕ್ಕೆ 900 ರೂ., ಆಗ್ನೇಯ ಏಷ್ಯಾ, ಚೀನಾ, ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದಂತಹ ಪ್ರದೇಶಗಳಿಗೆ 1,800 ರೂ. ಮತ್ತು ಯುರೋಪ್‌ಗೆ ತೆರಳುವ ವಿಮಾನಗಳಿಗೆ 2,300 ರೂ. ಶುಲ್ಕ ನಿಗದಿಪಡಿಸಲಾಗಿದೆ. ವಿಮಾನ ದರಗಳ ಈ ಹಠಾತ್ ಏರಿಕೆಗೆ ಪ್ರಯಾಣಿಕರು ತೀವ್ರ ಅಸಮಾಧಾನಕ್ಕೆ ವ್ಯಕ್ತಪಡಿಸುತ್ತಿದ್ದಾರೆ. ಅನಿವಾರ್ಯ ಕಾರಣಗಳಿಂದ ಪ್ರಯಾಣಿಸಬೇಕಾದವರು ಹೆಚ್ಚಿನ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಕಳೆದುಕೊಂಡಿದ್ದು ಅಮೂಲ್ಯ ಎಂದೆನಿಸದು

ಮೇಷ ರಾಶಿ:

ಧನಾರ್ಜನೆಗೆ ಹೆಚ್ಚು ಅವಕಾಶಗಳು ಲಭ್ಯವಾಗಿದ್ದು ಉತ್ತಮ ಆದಾಯದ್ದನ್ನು ಆಯ್ಕೆ ಮಾಡಿಕೊಳ್ಳುವಿರಿ. ಆದರೆ ಇದರಿಂದ ಕೆಲವು ರಿಸ್ಕ್ ಗಳನ್ನೂ ಎದುರಿಸಬೇಕಾಗುವುದು. ಆಪ್ತರ ಮೇಲಿನ ನಂಬಿಕೆ ಹುಸಿಯಾಗುವುದು. ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾದರೂ ಸ್ವಲ್ಪ ನೆಮ್ಮದಿಯು ಇರಲಿದೆ. ಸ್ತ್ರೀಯರಿಗೆ ಅಭದ್ರತೆಯು ಕಾಡಬಹುದು. ಮಕ್ಕಳ ವಿಚಾರದಲ್ಲಿ ನೀವು ಮೃದುವಾಗುವಿರಿ. ಬಂಧುಗಳು ಅನಿರೀಕ್ಷಿತ ಭೇಟಿಯಾಗಿ ಸಂತೋಷ ಕೊಡುವರು. ಹಲವು ದಿನದ ಮನಸ್ತಾಪವು ದೂರವಾಗಬಹುದು.

ವೃಷಭ ರಾಶಿ:

ನಿಮ್ಮ ನಕಾರಾತ್ಮಕ ಜನಪ್ರಿಯತೆಯು ನಿಮಗೆ ಬೇಸರ ಕೊಡುವುದು. ಮಿತ್ರರ ಸಹಕಾರವನ್ನು ಬಹಳ ದಿನಗಳ ಅನಂತರ ಕೇಳುವಿರಿ. ಆದರೆ ಅವರಿಂದ ಅದು ಸಿಗದು. ನಿಮ್ಮ ವ್ಯವಹಾರವನ್ನು ಅಳೆಯುವುದು ಸುಲಭವಲ್ಲ. ಅಜ್ಞಾನದಿಂದ ತಪ್ಪುಗಳು ನಡೆಯಬಹುದು. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಇಂದು ಒಂಟಿಯಾದಂತೆ ನಿಮಗೆ ಅನ್ನಿಸಬಹುದು. ಅತಿಯಾದ ಕೋಪವನ್ನು ಮಾಡಿಕೊಳ್ಳುವುದು ಬೇಡ.

ಮಿಥುನ ರಾಶಿ:

ಅನಿರೀಕ್ಷಿತ ನಿಧಿಯ ನಿರೀಕ್ಷೆಯಲ್ಲಿ ಇರುವಿರಿ. ಮನೆಯ ಕಾರ್ಯಗಳು ಇಂದು ಅಧಿಕವಾಗಿ ಇರಬಹುದು. ಅಂದುಕೊಂಡಿದ್ದರ ವಿರುದ್ಧ ನಡೆಯುವುದು ನಿಮಗೆ ಬೇಸರ ತರಿಸಬಹುದು. ನಿಮ್ಮ ವ್ಯಕ್ತಿತ್ವದ ಬಗ್ಗೆ ಇತರರು ಹೆಮ್ಮೆಪಡುವರು. ಪ್ರಶಂಸೆಯಿಂದ ಅಹಂಕಾರವು ಬರುವ ಸಾಧ್ಯತೆ ಇದೆ. ಕುಟುಂಬಕ್ಕೆ ಹೆಚ್ಚು ಸಮಯವನ್ನು ಕೊಡುವಿರಿ. ಸಣ್ಣ ವಸ್ತುವನ್ನು ದಾನ ಮಾಡಿ ಸಂತೋಷಪಡುವಿರಿ.

ಕರ್ಕಾಟಕ ರಾಶಿ:

ಇಂದು ಎಲ್ಲದಕ್ಕೂ ಯಂತ್ರದ ಮೊರೆ ಹೋಗುವುದರಿಂದ ನಿಮಗೆ ಕಷ್ಟ. ಸಹೋದ್ಯೋಗಿಗಳು ಅಹಂಕಾರವನ್ನು ತೋರಿಸುವರು. ನಿಮ್ಮ ನಿಲುವಲ್ಲಿ ನೀವಿರುವುದು ಉತ್ತಮ. ಬೇಕೆಂದುಕೊಂಡಿದ್ದನ್ನು ಪಡೆಯುವುದು ಕಷ್ಟವಾಗುವುದು. ಗೊತ್ತಿಲ್ಲದ ಕಾರ್ಯವನ್ನು ಮಾಡಲು ನಿಮಗೆ ಉತ್ಸಾಹ ಇರಲಿದೆ. ಇನ್ನೊಬ್ಬರ ವಸ್ತುವಿನ ಬಗ್ಗೆ ಮೋಹವು ಇರುವುದು‌. ಆತ್ಮಪ್ರಶಂಸೆಯು ಅಧಿಕಾವಾಗಿ ತೋರುವುದು. ಮಾಧ್ಯಮ‌ ಕ್ಷೇತ್ರದಲ್ಲಿ ಇರುವವರಿಗೆ ಮೇಲುಗೈ ಸಾಧಿಸುವ ಅವಕಾಶವಿರಲಿದೆ.

ಸಿಂಹ ರಾಶಿ:

ಸಹನೆಯನ್ನು ಮೀರಿ ನೀವು ಇಂದು ವರ್ತಿಸುವಿರಿ. ತಂತ್ರಜ್ಞಾನದಿಂದ ಅನ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿದೆ. ನೂತನ ವಾಹನದ ಖರೀದಿಗೆ ಪರ ಊರಿಗೆ ಹೋಗುವಿರಿ. ಮೊದಲೇ ನಿಶ್ಚಯಪಡಿಸಿದ ಕಾರ್ಯವನ್ನು ಬಿಟ್ಟು ಬೇರೆ ಯೋಚನೆ ಮಾಡುವುದು ಬೇಡ. ನಿಮಗೆ ವಹಿಸಿದ ಕೆಲಸವನ್ನು ಅದ್ಭುತವಾಗಿ ಮಾಡಲು ಪ್ರಯತ್ನಿಸುವಿರಿ. ನಿಮ್ಮ ಕಾಯುವಿಕೆಯು ಸಾರ್ಥಕವಾಗಬಹುದು. ಮಾತಿನಲ್ಲಿ ಮಾರ್ದವ ಇರಲಿ.

ಕನ್ಯಾ ರಾಶಿ:

ಇಂದು ಮಕ್ಕಳ ವಿಚಾರವಾಗಿ ನಿಮಗೆ ದೂರು ಬರಬಹುದು. ವಿವಾಹದ ಬಗ್ಗೆ ಯೋಚನೆ ಇದ್ದರೂ ಪ್ರಸ್ತಾಪಿಸುವವರು ಯಾರು ಇಲ್ಲ. ಅನೇಕ ದಿನಗಳಿಂದ ಅನಾರೋಗ್ಯದ ಕಾರಣ ಬಳಲುತ್ತಿದ್ದು ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುವುದು. ಉದ್ಯೋಗದಲ್ಲಿ ಮಕ್ಕಳಿಗೆ ಪ್ರವೇಶವನ್ನು ಕೊಡುವಿರಿ. ಅಪಮಾನದಿಂದ ಮನಸ್ಸು ಉಗ್ರರೂಪಕ್ಮೆ ಬದಲಾಗಬಹುದು. ಯಾರ ಬಗ್ಗೆಯೂ ಸುಮ್ಮನೆ ಆಡಿಕೊಳ್ಳುವುದು ಬೇಡ.

ತುಲಾ ರಾಶಿ:

ನಿಮಗೆ ಸಂಬಂಧಿಸದ ವಿಚಾರಗಳಲ್ಲಿ ಪ್ರವೇಶವನ್ನು ಪಡೆಯುವುದು ಬೇಡ. ಸರ್ಕಾರದ ಕಾರ್ಯಗಳನ್ನು ಬೇಗ ಮುಗಿಸಿಕೊಳ್ಳಲಿದ್ದೀರಿ. ವ್ಯವಹಾರದ ದಾಖಲೆಗಳು ಸರಿಯಾಗಿ ಇಟ್ಟುಕೊಳ್ಳುವಿರಿ. ವಿದೇಶಕ್ಕೆ ತೆರಳುವ ನಿರೀಕ್ಷೆಯಲ್ಲಿ ಇರುವಿರಿ. ಮನಸ್ಸಿಗೆ ಹಿಡಿಸಿದ ಕೆಲಸವನ್ನು ಮಾತ್ರ ಬೇಗ ಮಾಡಿ ಮುಗಿಸುವಿರಿ. ಮಕ್ಕಳನ್ನು ಪಡೆದುಕೊಳ್ಳುವ ಚಿಂತೆಯು ಕಾಡುವುದು. ಪ್ರೇಮದಲ್ಲಿ ಸಿಕ್ಕಿಕೊಂಡು ಕಷ್ಟಪಡುವಿರಿ. ನಿಮ್ಮ ತೀರ್ಮಾನವನ್ನು ಒಪ್ಪುವುದು ಕಷ್ಟವಾದೀತು.

ವೃಶ್ಚಿಕ ರಾಶಿ:

ಬಂಧುಗಳ ಕುಹಕಕ್ಕೆ ಸಿಲುಕುವಿರಿ. ನ್ಯಾಯಾಲಯದ ಹೋರಾಟವು ಅಪಯಶಸ್ಸನ್ನು ಕೊಡಬಹುದು. ಕಲಾವಂತಿಕೆಯಿಂದ ನಿಮ್ಮ ಅನೇಕ ನಕಾರಾತ್ಮಕ ವಿಚಾರಗಳು ಮರೆಯಾಗಬಹುದು. ಭೂಮಿಯ ವ್ಯವಹಾರಕ್ಕೆ ಆಪ್ತರನ್ನು ಜೋಡಿಸಿಕೊಳ್ಳುವಿರಿ. ದಾನದಿಂದ ಸಮಾಧಾನ ಸಿಗುವ ಸಾಧ್ಯತೆ ಇದೆ. ಇನ್ನೊಬ್ಬರ ಒತ್ತಾಯದ ಕಾರಣಕ್ಕೆ ನೀವು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ಮಕ್ಕಳಿಂದ ಆರ್ಥಿಕ ಸಹಾಯವು ಸಿಗುವುದು.

ಧನು ರಾಶಿ:

ಹಿರಿಯರ ಕೋಪಕ್ಕೆ ನೀವು ಬಲಿಯಾಗಬೇಕಾದೀತು. ಮಾನಸಿಕವಾದ ಅಸ್ಥಿರತೆಯಿಂದ ನಿಮಗೆ ಕಷ್ಟವಾದೀತು. ವೃತ್ತಿಯಲ್ಲಿ ನಿಮಗೆ ತೃಪ್ತಿಯು ಸಿಗಲಿದೆ. ಧಾರ್ಮಿಕ ವಿಚಾರವಾಗಿ ನೀವು ದೂರ ಪ್ರಯಾಣವನ್ನು ಮಾಡುವಿರಿ. ಎಲ್ಲ ಕೆಲಸದಲ್ಲಿ ಆತ್ಮತೃಪ್ತಿಯನ್ನು ಬಯಸುಬಿರಿ. ನಿಮ್ಮ ಮಾತುಗಳೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಕೆಲಸವು ಸಿಗುವುದು. ಇಂದು ಸಂದರ್ಭವನ್ನು ನೋಡಿಕೊಂಡು ಮಾತನಾಡಿ.

ಮಕರ ರಾಶಿ:

ಆರ್ಥಿಕತೆಯಲ್ಲಿ ನೀವು ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗುವುದು. ನಿಮ್ಮ ಬಾಗುವ ಸ್ವಭಾವವು ನಿಮ್ಮನ್ನು ಮೇಲಕ್ಕೆ ಏರಿಸುವುದು. ಹೇಳಿಕೊಳ್ಳಲಾಗದ ಸಂಕಟವನ್ನು ಮನಸ್ಸಿನಲ್ಲಿಯೇ ನುಂಗುವಿರಿ. ಪ್ರಭಾವಿ ಗಣ್ಯರ ಜೊತೆ ಕೆಲವು ಸಮಯವನ್ನು ಕಳೆಯುವಿರಿ. ಪ್ರೀತಿಯನ್ನು ಕುಟುಂಬದ ಜೊತೆ ಹಂಚಿಕೊಳ್ಳುವಿರಿ. ಮನೆತನದ ಕಾರಣದಿಂದ ನಿಮಗೆ ಗೌರವವು ಪ್ರಾಪ್ತವಾಗಲಿದೆ. ಮೇಲಧಿಕಾರಿಗಳನ್ನು ಮೆಚ್ಚಿಸುವಿರಿ. ನಿಮ್ಮ ಮೌನವನ್ನು ಅನ್ಯರೀತಿಯಲ್ಲಿ ಅರ್ಥೈಸಿಕೊಳ್ಳಬಹುದು.

ಕುಂಭ ರಾಶಿ:

ನಿಮ್ಮ ಬದುಕಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳುವಿರಿ. ಬರುವ ಹಣವು ಕೈಸೇರಿದರೂ ಖರ್ಚಿನ ದಾರಿ ಮುಕ್ತವಾಗಿರುವುದು ಮಕ್ಕಳಿಗೆ ಸಿಗುವ ಪುರಸ್ಕಾರದಿಂದ ನಿಮಗೆ ಸಂತೋಷವಾಗುವುದು. ಅಪರೂಪದ ಮಿತ್ರರು ನಿಮ್ಮನ್ನು ಭೇಟಿ ಮಾಡುವರು. ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭವು ಆಗಲಿದೆ. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಸಫಲರಾಗುವುದಿಲ್ಲ. ಏಕಪಕ್ಷೀಯವಾದ ನಿರ್ಧಾರದಿಂದ ನಿಮ್ಮವರಿಗೆ ಬೇಸರವಾದೀತು.

ಮೀನ ರಾಶಿ:

ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ ಅಭಾವವು ಹೆಚ್ಚು ತೋರುವುದು. ಹೂಡಿಕೆಯಿಂದ ನಷ್ಟ ಸಂಭವ. ತಾಯಿ ಮೇಲೆ ಪ್ರೀತಿ ಹೆಚ್ಚಾಗುವುದು. ಅವರಿಗೆ ಖುಷಿಯಾಗುವಂತೆ ನಡೆದುಕೊಳ್ಳುವಿರಿ. ಇಂದಿನ ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಬಂಧುಗಳ ಕಾರಣಕ್ಕಾಗಿ ಧನವ್ಯಯವಾಗುವುದು. ನಿಮ್ಮ ಆಸ್ತಿಯ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಹಳೆಯ ನೋವುಗಳು ಕಾಣಿಸಿಕೊಳ್ಳಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಮೀನ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಶ್ರವಣಾ, ಯೋಗ : ಪರಿಘ, ಕರಣ : ಕೌಲವ, ಸೂರ್ಯೋದಯ – 06 – 33 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:03 – 18:34, ಯಮಗಂಡ ಕಾಲ 12:33 – 14:03, ಗುಳಿಕ ಕಾಲ 15:33 – 17:33

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ:  ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 15ರ ದಿನಭವಿಷ್ಯ

ಈ ದಿನ ಕನಿಷ್ಠ 108 ಬಾರಿ ‘ಓಂ’ ಕಾರ ಜಪ ಮಾಡಿ. ಇದರಿಂದ ನಿಮ್ಮ ಸುಪ್ತ ಪ್ರಜ್ಞೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮ ಕೈಲಿ ಇನ್ನಷ್ಟು ಮೊತ್ತವನ್ನು ಇಟ್ಟುಕೊಳ್ಳಬೇಕು ಎಂದು ಆಲೋಚನೆ ಮಾಡಲಿದ್ದೀರಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದಂಥವರು ಈ ದಿನ ಸ್ವಲ್ಪ ಮಟ್ಟಿಗೆ ಒತ್ತಡಕ್ಕೆ ಗುರಿ ಆಗಬೇಕಾಗುತ್ತದೆ. ನೀವು ಬಹಳ ಆತ್ಮವಿಶ್ವಾಸದಿಂದ ನೀಡಿದಂಥ ಹಣಕಾಸಿನ ಸಲಹೆಗಳು ಬೂಮ್ ರಾಂಗ್ ಆಗಬಹುದು. ಆದ್ದರಿಂದ ಇತರರಿಗೆ ಸಲಹೆ ನೀಡುವ ಮುಂಚೆ ಸಾಧಕ- ಬಾಧಕಗಳ ಬಗ್ಗೆ ಆಲೋಚಿಸಿ, ಹೆಜ್ಜೆಯಿಡುವುದು ಒಳ್ಳೆಯದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಬ್ಯಾಂಕ್ ಲಾಕರ್ ನಲ್ಲಿ ಚಿನ್ನದ ಒಡವೆಗಳನ್ನು ಇಡುವುದಕ್ಕೆ ಆಲೋಚಿಸುತ್ತೀರಿ ಎಂದಾದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ ಹಾಗೂ ಸಾಮಾನ್ಯ ದಿನಗಳಲ್ಲಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ನಿಗಾ ವಹಿಸುವುದು ಮುಖ್ಯ. ಒಂದು ವೇಳೆ ನೀವೇನಾದರೂ ಚೂಪಾದ ವಸ್ತುಗಳನ್ನು ಬಳಸುತ್ತೀರಿ ಅಥವಾ ಅಂಥ ವಸ್ತುಗಳನ್ನು ಬಳಸುವಂಥ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೀರಿ ಅಂತಾದಲ್ಲಿ ಸಣ್ಣ-ಪುಟ್ಟ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಏನಾಗುತ್ತಿದೆ ನಿಮ್ಮ ಸುತ್ತ ಎಂಬ ಬಗ್ಗೆ ವಾಸ್ತವ ಸಂಗತಿ ತಿಳಿಯಲಿದೆ. ಕೆಲವರು ನಿಮ್ಮನ್ನು ದೂರವಿಟ್ಟು ಕೆಲಸ ಮಾಡುತ್ತಿದ್ದಾರೆ ಎಂಬ ಸಂಗತಿ ತಿಳಿದುಬರಲಿದೆ. ಕಮಿಷನ್ ಆಧಾರದಲ್ಲಿ ಕೆಲಸ ಮಾಡುವಂಥವರು ನಿಮಗೆ ಬರಬೇಕಾದ ಹಣದ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ಏಕೆಂದರೆ ನಿಮ್ಮ ಜತೆಗೆ ಚೆನ್ನಾಗಿರುವಂತೆಯೇ ಕಾಣಿಸುವಂಥವರು ನಿಮಗೆ ಬರಬೇಕಾದ ಆದಾಯವನ್ನು ತಮ್ಮದಾಗಿಸಿಕೊಳ್ಳುವಂಥ ಸಾಧ್ಯತೆಗಳಿವೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ:  ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 15ರ ದಿನಭವಿಷ್ಯ

ಮನೆಯ ಮುಖ್ಯ ದ್ವಾರದ ಮೇಲೆ ‘ಸ್ವಸ್ತಿಕ’ ಚಿಹ್ನೆಯನ್ನು ಬರೆಯಿರಿ. ಇದರಿಂದ ನಕಾರಾತ್ಮಕ ಆಲೋಚನೆಗಳು ದೂರ ಆಗಲಿದೆ. ಕುಟುಂಬ ಸದಸ್ಯರ ಮಧ್ಯೆ ಸಾಮರಸ್ಯ ಮೂಡಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನೀವೇ ನಂಬುವುದಕ್ಕೆ ಸಾಧ್ಯವಿಲ್ಲದ ಗಾಸಿಪ್ ನಿಮ್ಮ ಬಗ್ಗೆ ಹರಿದಾಡಲಿದೆ. ಸಂಬಂಧಿಕರ ಬಳಿ ಈ ಹಿಂದೆ ನೀವು ಮಾಡಿದಂಥ ಸಾಲವೋ ಅಥವಾ ಆಸ್ತಿ ವ್ಯವಹಾರವೋ ವಿಪರೀತ ಒತ್ತಡವನ್ನು ಸೃಷ್ಟಿ ಮಾಡಲಿದೆ. ನಕ್ಕು ಸುಮ್ಮನಾಗ ಬೇಕಾದ ಆಕ್ಷೇಪ, ಆಪಾದನೆಗಳ ಬಗ್ಗೆ ವಿಪರೀತ ತಲೆ ಕೆಡಿಸಿಕೊಳ್ಳುವಂತಾಗುತ್ತದೆ. ಮುಖ್ಯವಾದ ವಸ್ತುವೊಂದನ್ನು ಒಂದು ಕಡೆ ಇಟ್ಟು, ಮತ್ತೊಂದು ಕಡೆ ಹುಡುಕಾಟ ನಡೆಸುವಂತಾಗುತ್ತದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಸ್ವಂತವಾಗಿ ವ್ಯವಹಾರ ಶುರು ಮಾಡುವುದಕ್ಕೆ ಸ್ನೇಹಿತರು ಹಾಗೂ ಸಂಬಂಧಿಕರು ಸಹ ಉತ್ತೇಜನ ನೀಡುವ ಸಾಧ್ಯತೆ ಇದೆ. ಇನ್ನು ನಿಮ್ಮಲ್ಲಿ ಯಾರು ಸ್ವ ಉದ್ಯೋಗ ಮಾಡಬೇಕು ಎಂದು ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿರುವಿರೋ ಅಂಥವರಿಗೆ ಸಲೀಸಾಗಿ ಹಣ ಸಿಗುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಉದ್ಯೋಗ ಬದಲಾವಣೆ ಮಾಡಬೇಕು ಎಂದು ಯೋಚಿಸುತ್ತಿರುವವರಿಗೆ ಸದ್ಯಕ್ಕೆ ಬದಲಾವಣೆ ಮಾಡುವುದು ಬೇಡ ಎಂದೆನಿಸುವುದಕ್ಕೆ ಶುರು ಆಗುತ್ತದೆ. ಪ್ರಕೃತಿ ಮಧ್ಯದಲ್ಲಿ ಸಮಯ ಕಳೆಯಬೇಕು, ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು ಎಂದು ನಿಶ್ಚಯ ಮಾಡಲಿದ್ದೀರಿ. ಜಿಮ್, ಯೋಗ ಅಥವಾ ಪ್ರಾಣಾಯಾಮಕ್ಕೆ ಸೇರ್ಪಡೆ ಆಗುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 15ರ ದಿನಭವಿಷ್ಯ

ಈ ದಿನ ಅನಾಥಾಶ್ರಮ ಅಥವಾ ವೃದ್ಧಾಶ್ರಮಗಳಿಗೆ ಶಕ್ತ್ಯಾನುಸಾರ ಸಹಾಯ ಮಾಡಿ. ಹೀಗೆ ಮಾಡುವುದರಿಂದ ವೃಥಾರೋಪಗಳಿಂದ ಹೊರಗೆ ಬರುತ್ತೀರಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಈ ಹಿಂದೆ ಯಾವಾಗಲೋ ನೀವು ಆಡಿದ ಮಾತು ಅಥವಾ ಕಾಮೆಂಟ್ ಗಳು ಈ ದಿನ ಸಮಸ್ಯೆಯಾಗಿ ತಲೆ ಎತ್ತಬಹುದು. ಅದಕ್ಕೆ ಸಮಜಾಯಿಷಿ ನೀಡುವುದರಲ್ಲಿ ಹೈರಾಣಾಗುತ್ತೀರಿ. ಒಂದು ವೇಳೆ ತುರ್ತಾದ ಕೆಲಸದ ಮೇಲೆ ದೂರದ ಊರುಗಳಿಗೆ ತೆರಳಬೇಕಾದವರು ಅಲ್ಲಿಂದ ಬಂದ ನಂತರದಲ್ಲಿ ಕೆಲಸ ಮಾಡಿಕೊಳ್ಳಿ. ಅದರ ಬದಲಿಗೆ ಇನ್ಯಾರಿಗಾದರೂ ಆ ಕೆಲಸವನ್ನು ವಹಿಸಿದರೆ ಆ ನಂತರ ಪರಿತಪಿಸಬೇಕಾಗುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನಿಮ್ಮಲ್ಲೊಂದು ಸಮಾಧಾನ ಮೂಡುವ ದಿನ ಇದಾಗಿರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಇರುವಂಥವರಿಗೆ ಮುಖ್ಯವಾದ ಜವಾಬ್ದಾರಿ, ಹುದ್ದೆ ದೊರೆಯುವಂಥ ಸುಳಿವು ದೊರೆಯಲಿದೆ. ವಿದೇಶಗಳಲ್ಲಿ ಉದ್ಯೋಗಕ್ಕೆ ಅಥವಾ ವ್ಯಾಸಂಗಕ್ಕೆ ತೆರಳಬೇಕು ಎಂದಿರುವವರಿಗೆ ಅನಿರೀಕ್ಷಿತವಾಗಿ ದೊಡ್ಡ ಮಟ್ಟದ ನೆರವು ದೊರೆಯಲಿದೆ. ಮದುವೆ ವಯಸ್ಕರಾಗಿದ್ದು ಮ್ಯಾಟ್ರಿಮೋನಿ ವೆಬ್ ಸೈಟ್ ಗಳ ಮೂಲಕ ಪ್ರಯತ್ನ ಮಾಡುತ್ತಿರುವವರಿಗೆ ನಿಮ್ಮ ಮನಸ್ಸಿಗೆ ಒಪ್ಪುವಂಥ ಸಂಬಂಧ ದೊರೆಯುವ ಅವಕಾಶಗಳು ಹೆಚ್ಚಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಬ್ಯಾಂಕಿಂಗ್ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುತ್ತಿರುವವರಿಗೆ ಸಕಾರಾತ್ಮಕವಾದ ಬೆಳವಣಿಗೆ ಆಗಲಿದ್ದು, ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೃಷಿಕರಾಗಿದ್ದಲ್ಲಿ ಹೊಸದಾಗಿ ಜಮೀನು ಖರೀದಿ ಮಾಡುವ ಅಥವಾ ಗುತ್ತಿಗೆಗೆ ಭೂಮಿ ಪಡೆಯುವಂಥ ಯೋಗ ಇದ್ದು, ಕುಟುಂಬ ಸದಸ್ಯರು ಸಹ ನಿಮ್ಮ ಬೆನ್ನಿಗೆ ಬೆಂಬಲವಾಗಿ ನಿಲ್ಲಲಿದ್ದಾರೆ. ಮನೆಗೆ ಅಗತ್ಯ ಇರುವಂಥ ವಾಹನವನ್ನು ಖರೀದಿ ಮಾಡುವುದಕ್ಕೆ ಅಡ್ವಾನ್ಸ್ ನೀಡಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Source link

ಬಾಬರ್ ಅಝಂ ಮಾನಸಿಕವಾಗಿ ಅಸ್ವಸ್ಥ; ಪಾಕ್ ಮಾಜಿ ಕ್ರಿಕೆಟಿಗನ ಸ್ಫೋಟಕ ಹೇಳಿಕೆ

ಬಾಬರ್ ಆಝಂ (Babar Azam).. ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕ್ರಿಕೆಟಿಗ. ನಾಯಕನಾಗಿ ತಂಡವನ್ನು ಅನೇಕ ಗೆಲುವಿನತ್ತ ಮುನ್ನಡೆಸಿದ ಮತ್ತು ಆಟಗಾರನಾಗಿಯೂ ಹಲವು ಸ್ಮರಣೀಯ ಇನ್ನಿಂಗ್ಸ್​ಗಳನ್ನು ಆಡಿದ್ದ ಹೆಗ್ಗಳಿಕೆಗೆ ಬಾಬರ್ ಅರ್ಹರು. ಆದರೆ ಕಳೆದೊಂದು ವರ್ಷದಿಂದ ಬಾಬರ್ ಅವರ ಪ್ರದರ್ಶನ ತೀರ ಕಳಪೆಯಾಗಿದೆ. ಮುಂಚೆ ರನ್ ಮಳೆ ಹರಿಸುತ್ತಿದ್ದ ಬಾಬರ್ ಇದೀಗ ರನ್ ಬರ ಎದುರಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಇತ್ತಿಚಿಗಷ್ಟೆ ಮುಗಿದ ಟಿ20 ವಿಶ್ವಕಪ್​ನಲ್ಲೂ (T20 World Cup) ಬಾಬರ್ ಬ್ಯಾಟ್ ಮೌನವಾಗಿತ್ತು. ಹೀಗಾಗಿ ಬಾಬರ್ ಅವರ ಕಳಪೆ ಫಾರ್ಮ್​ ತಜ್ಞರು ಮತ್ತು ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿತ್ತು. ಹೆಚ್ಚಿನವರು ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರಶ್ನಿಸಿದ್ದರೆ, ಪಾಕ್ ತಂಡದ ಮಾಜಿ ಕ್ರಿಕೆಟಿಗ ಬಸಿತ್ ಅಲಿ (Basit Ali), ಬಾಬರ್ ಮಾನಸಿಕವಾಗಿ ಅನರ್ಹ ಎಂದು ಜರಿದಿದ್ದಾರೆ.

ಏಕದಿನ ಸರಣಿಯಿಂದ ಬಾಬರ್ ಔಟ್

ವಾಸ್ತವವಾಗಿ ಟಿ20 ವಿಶ್ವಕಪ್ ಬಳಿಕ ಪಾಕಿಸ್ತಾನ ತಂಡ ಏಕದಿನ ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಮಾಡಿದೆ. ಈ ಪ್ರವಾಸಕ್ಕೆ ಬಾಬರ್ ಆಝಂ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ. ಆದರೆ ಏಕದಿನ ಸರಣಿಯಲ್ಲಿ ಬಾಬರ್ ಅವರ ಪ್ರದರ್ಶನ ಉತ್ತಮವಾಗಿದ್ದರೂ ಅವರನ್ನು ತಂಡದಿಂದ ಕೈಬಿಟ್ಟಿದ್ದು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನ ತಂಡದ ಆಯ್ಕೆದಾರ ಆಕಿಬ್ ಜಾವೇದ್ ಅವರ ಬಳಿ ಈ ಬಗ್ಗೆ ಪ್ರಶ್ನೆ ಕೇಳಿದಾಗ, ‘ಬಾಬರ್ ಶ್ರೀಲಂಕಾದಿಂದ ಹಿಂದಿರುಗಿದ ನಂತರ ಗಾಯಕ್ಕೆ ತುತ್ತಾಗಿದ್ದಾರೆ. ಅದಕ್ಕಾಗಿಯೇ ಅವರಿಗೆ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ ಎಂದಿದ್ದರು.

ಬಾಬರ್ ಮಾನಸಿಕವಾಗಿ ಅನರ್ಹ

ಆದರೆ ಆಕಿಬ್ ಜಾವೇದ್ ಅವರ ಈ ಹೇಳಿಕೆಯನ್ನು ಅಲ್ಲಗಳೆದಿರುವ ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಬಸಿತ್ ಅಲಿ, ಬಾಬರ್ ಆಝಂ ಗಾಯಗೊಂಡಿಲ್ಲ, ಬದಲಿಗೆ, ಸಮಸ್ಯೆ ಅವರ ಮನಸ್ಥಿತಿಯಲ್ಲಿದೆ ಎಂದಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಬಸಿತ್, ‘ಬಾಬರ್ ಆಝಂ ದೈಹಿಕವಾಗಿ ಅಲ್ಲ, ಮಾನಸಿಕವಾಗಿ ಅನರ್ಹರು. ಹೀಗಾಗಿ ಬಾಂಗ್ಲಾದೇಶ ಪ್ರವಾಸಕ್ಕೆ ಬಾಬರ್ ಅವರನ್ನು ಆಯ್ಕೆ ಮಾಡದಿರುವುದು ಸರಿಯಾಗಿದೆ, ಏಕೆಂದರೆ ಅವರು ಈ ಸರಣಿಯಲ್ಲೂ ವಿಫಲರಾಗುತ್ತಿದ್ದರು’ ಎಂದಿದ್ದಾರೆ.

T20 World Cup: ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಿಂದ ಬಾಬರ್ ಆಝಂ ಔಟ್

ಸತತ 4ನೇ ಟೂರ್ನಿಯಲ್ಲೂ ಬಾಬರ್ ವೈಫಲ್ಯ

2026 ರ ವಿಶ್ವಕಪ್ ಬಾಬರ್​ಗೆ ಉತ್ತಮವಾಗಿರಲಿಲ್ಲ. ಟೂರ್ನಿಯಲ್ಲಿ ಆರು ಇನ್ನಿಂಗ್ಸ್‌ಗಳನ್ನು ಆಡಿದ ಬಾಬರ್ ಕೇವಲ 91 ರನ್‌ ಮಾತ್ರ ಕಲೆಹಾಕಿದರು. ಇದರಲ್ಲಿ ಅವರ ಗರಿಷ್ಠ ಸ್ಕೋರ್ 46. ವಾಸ್ತವವಾಗಿ ಬಾಬರ್ ಐಸಿಸಿ ಟೂರ್ನಮೆಂಟ್‌ನಲ್ಲಿ ವಿಫಲರಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, 2025 ರ ಚಾಂಪಿಯನ್ಸ್ ಟ್ರೋಫಿ, 2024 ರ ಟಿ20 ವಿಶ್ವಕಪ್ ಮತ್ತು ಅದಕ್ಕೂ ಮೊದಲು ನಡೆದಿದ್ದ 2023 ರ ಏಕದಿನ ವಿಶ್ವಕಪ್‌ನಲ್ಲಿ ಬಾಬರ್ ಅವರ ಬ್ಯಾಟ್ ಮೌನವಾಗಿತ್ತು ಮತ್ತು ಈ ಎಲ್ಲಾ ಟೂರ್ನಿಗಳಲ್ಲಿ, ಪಾಕಿಸ್ತಾನ ತಂಡವು ಸೆಮಿಫೈನಲ್ ತಲುಪಲು ಸಹ ವಿಫಲವಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಲಿಕಾನ್ ಸಿಟಿ ಜನರೇ ಎಚ್ಚರ: ಬೆಂಗಳೂರಲ್ಲಿ ತಾಪಮಾನ ಏರಿಕೆ; ಬಿಸಿಲಿನಿಂದ ರಕ್ಷಣೆಗೆ ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು, ಮಾರ್ಚ್​​ 14: ರಾಜ್ಯದಲ್ಲಿ ಈ ವರ್ಷದ ಬೇಸಿಗೆ ಕಾಲ ಆರಂಭವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಜನರಿಗೆ ಬಿಸಿಲು (Heatwave) ಕಾಡೋದಕ್ಕೆ ಶುರುವಾಗಿದೆ. ಹೇಗೋ ಬಿಸಿಲನ್ನು ತಡೆದುಕೊಂಡು ಇರುವ ಜನರಿಗೆ ಮುಂದಿನ ದಿನದಲ್ಲಿ ಸೂರ್ಯ ಮತಷ್ಟು ಸುಡಲಿದ್ದಾನೆ. ಹೀಗಂತ‌ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜೊತೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಕೂಡ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನದ ಅಲರ್ಟ್

ಈಗಾಗಲೇ ಬೇಸಿಗೆ ಶುರುವಾಗಿದೆ. ದಿನನಿತ್ಯ ಬಿಸಿಲ ಧಗೆ ಹೆಚ್ಚುತ್ತಲೇ ಇದೆ. ಬೆಂಗಳೂರಿನ ಬಿಸಿಲಿಗೆ ಜನರು ತತ್ತರಿಸಿದ್ದಾರೆ. ಮನೆಗಳಲ್ಲಿ, ಕಚೇರಿಗಳಲ್ಲಿ ಏರ್ ಕೂಲರ್‌ಗಳನ್ನ ಹಾಕೊಂಡು ಕೂರುವ ಪರಿಸ್ಥಿತಿ ಇದೆ ಬೆಂಗಳೂರಿನಲ್ಲಿ. ಹೀಗಿರುವಾಗ ಮುಂದಿನ ದಿನದಲ್ಲಿ ಬೆಂಗಳೂರಿನಲ್ಲಿ ಇರ್ಬೇಕಾ ಅನ್ನೋ ಮಟ್ಟಿಗೆ ಬಿಸಿಲು ಕಾಡಲಿದೆ.

ಇದನ್ನೂ ಓದಿ: ಈ ಭಾಗದ ಜನರಿಗೆ ಬಿಗ್​​​ ಅಲರ್ಟ್​​​ ನೀಡಿದ ಹವಾಮಾನ ಇಲಾಖೆ: ಮಧ್ಯಾಹ್ನ ಹೊರಗೆ ಹೋಗುವ ಮುನ್ನ ಎಚ್ಚರ!

ಸಿಲಿಕಾನ್ ಸಿಟಿ ಜನರೇ ಎಚ್ಚರದಿಂದ ಇರಿ, ಕೂಲ್ ಸಿಟಿ ಅಂತಾನೇ ಕರೆಸಿಕೊಳ್ಳುವ ರಾಜಧಾನಿ ಬೆಂಗಳೂರು ಸದ್ಯ ಹಾಟ್ ಸಿಟಿಯಾಗಿ ಬದಲಾಗಿದೆ. ಕಳೆದ ಒಂದು ವಾರದಿಂದ ರಾಜಧಾನಿಯಲ್ಲಿ ತಾಪಮಾನ ಏರಿಕೆ ಹಿನ್ನಲೆ ಎಂಥಾ ಸೆಕೆ ಅಂತ ಸಿಟಿ ಜನ ಶಾಪ್ ಹಾಕೋಕ್ಕೆ ಶುರು ಮಾಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 33 ರಿಂದ 34 ಡಿಗ್ರಿ ತಾಪಮಾನ ದಾಖಲಾಗುತ್ತಿದೆ. ಯುಗದಿ ಹಬ್ಬದ ಬಳಿಕ ಮಾರ್ಚ್ 3ನೇ ವಾರದ ಬಳಿಕ 38-39 ಡಿಗ್ರಿ ತಲುಪಲಿದೆ ಬೆಂಗಳೂರಿನ ತಾಪಮಾನದ ಏರಿಕೆ. ಈ ಹಿನ್ನೆಲೆ ಹವಮಾನ ಇಲಾಖೆ ಸೂಚನೆ ನೀಡಿದ್ದು, ಸಿಲಿಕಾನ್ ಸಿಟಿ ಜನರಿಗೆ ಬಿಸಿಲು ಕಾಡಲಿದೆ.

ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ

ಇತ್ತ ಹವಾಮಾನ ಇಲಾಖೆ ಸೂಚನೆ ಬೆನ್ನಲೆ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ತಾಪಮಾನ ಏರಿಕೆ ಹಿನ್ನಲೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬಿಸಿಲು ಹೆಚ್ಚಿರುವಾಗ ಏನು ಮಾಡಬೇಕು, ಏನು ಮಾಡಬಾರದು ಅಂತ ಜಾಗೃತಿಗೆ ಗೈಡ್ ಲೈನ್ಸ್ ನೀಡಿದೆ. ಇನ್ನು ಉರಿಯುವ ಬಿಸಿಲಿಗೆ ಹೀಟ್ ಸ್ಟ್ರೋಕ್ ಭೀತಿ ಒಂದು ಕಡೆಯಾದರೆ, ಖಾಯಿಲೆಗಳ ಏರಿಕೆಯ ಆತಂಕ ಶುರುವಾಗಿದೆ. ತಾಪಮಾನ ಏರಿಕೆ ಬೆನ್ನಲ್ಲೇ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮುಂದಾಗಿದೆ.

ಹೀಟ್ ಸ್ಟ್ರೋಕ್ ಬಗ್ಗೆ ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ. ಬೆಳಗ್ಗೆ 11 ರಿಂದ ಸಂಜೆ 4 ಗಂಟೆ ಬಗ್ಗೆ ಗಮನ ಇರಲಿ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರು ಮತ್ತಷ್ಟು ಹಾಟ್ ಆಗಲಿದೆ. ಹೀಗಾಗಿ ಹೈ ಬಿಪಿ, ಹೃದಯ ಸಂಬಂಧಿ ಖಾಯಿಲೆ ಇರುವವರು, ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳು ರಣ ಬಿಸಿಲಿಗೆ ಮೈ ಒಡ್ಡದಂತೆ ಎಚ್ಚರಿಕೆ ನೀಡಲಾಗಿದೆ.

ವೈದ್ಯರ ಸಲಹೆ ಏನು?

ದೇಹದ ಉಷ್ಣತೆಯು 40 C ಅಥವಾ ಅದಕ್ಕಿಂತ ಹೆಚ್ಚು ಏರಿದರೆ ಅತ್ಯಂತ ಗಂಭೀರ ಸಮಸ್ಯೆ ಎದುರಾಗುವ ಸಂಭವ ಇದೆ. ಕೆಲವು ಸಂದರ್ಭಗಳಲ್ಲಿ ಹೀಟ್ ಸ್ಟ್ರೋಕ್ ಕೂಡ ಸಾಧ್ಯತೆ ಇದ್ದು, ಇದು ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಹೀಗಾಗಿ ತಾಪಮಾನ ಇಳಿಕೆಯವರೆಗೂ 11 ರಿಂದ 4 ಗಂಟೆಯವರೆಗೂ ಹೆಚ್ಚು ಬಿಸಿಲಿಗೆ ಮೈ ಒಡ್ಡದೆ ಇರುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಜೊತೆಗೆ ಹೆಚ್ಚಾಗಿ ನೀರು, ತಂಪು ಪಾನೀಯಗಳು ಸೇರಿದಂತೆ ನಿರ್ಜಲೀಕರಣ ಆಗದಂತದ ಆಹಾರವನ್ನ ಹೆಚ್ಚಾಗಿ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Bengaluru Air Quality: ಮೈಸೂರಿನಲ್ಲಿ ಮತ್ತಷ್ಟು ಹದಗೆಟ್ಟ ಏರ್ ಕ್ವಾಲಿಟಿ

ಒಟ್ಟಿನಲ್ಲಿ ಈ ವರ್ಷ ಕೂಡ ಬೆಂಗಳೂರು ಮಂದಿಗೆ ಬೇಸಿಗೆಯ ಧಗೆ ಕಾಡಲಿದ್ದು, ಜನರು ಬಿಸಿಲಿನಿಂದ ಉಂಟಾಗುವ ಆರೋಗ್ಯದ ಸಮಸ್ಯೆಯಿಂದ ದೂರ ಇರಲು ಹೆಚ್ಚು ಗಮನ ಹರಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಧುರಂಧರ್ 2’ ಸಿನಿಮಾಕ್ಕೆ ಸ್ಪರ್ಧೆ ಒಡ್ಡಲು ‘ಉಸ್ತಾದ್ ಭಗತ್ ಸಿಂಗ್’ ಪ್ಲ್ಯಾನ್

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ‘ಟಾಕ್ಸಿಕ್’ ಸಿನಿಮಾ ಅದೇ ದಿನ ಬಿಡುಗಡೆ ಆಗಬೇಕಿತ್ತು ಆದರೆ ‘ಟಾಕ್ಸಿಕ್’ ಬಿಡುಗಡೆ ಮುಂದೂಡಲ್ಪಟ್ಟಿದೆ. ‘ಧುರಂಧರ್ 2’ಗೆ ಹೆದರಿ ಇನ್ನೂ ಕೆಲವು ಸಿನಿಮಾಗಳು ಬಿಡುಗಡೆ ದಿನಾಂಕ ಮುಂದಕ್ಕೆ ಹಾಕಿಕೊಂಡಿದ್ದವು. ಆದರೆ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 19ರಂದೇ ಬಿಡುಗಡೆ ಆಗುತ್ತಿದೆ. ಆದರೆ ‘ಧುರಂಧರ್ 2’ ಸಿನಿಮಾ ಬಿಡುಗಡೆಗೆ ಮುಂಚೆಯೇ ಪವನ್ ಸಿನಿಮಾಕ್ಕೆ ಸ್ಪರ್ಧೆ ಒಡ್ಡುತ್ತಿದೆ. ಆದರೆ ‘ಧುರಂಧರ್ 2’ಗೆ ಪ್ರತಿಸ್ಪರ್ಧೆ ಒಡ್ಡಲು ‘ಭಗತ್ ಸಿಂಗ್’ ತಂಡ ಯೋಜನೆ ಹಾಕಿಕೊಂಡಿದೆ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಸ್ಪೆಷಲ್ ಶೋಗಳನ್ನು ಆಯೋಜಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದ್ದವು ಆದರೆ, ‘ಧುರಂಧರ್ 2’ ಸಿನಿಮಾ ಮುಂಚಿತವಾಗಿಯೇ ಪ್ರೀಮಿಯರ್ ಶೋಗಳನ್ನು ಪ್ರಕಟಿಸಿತು. ಸಿನಿಮಾ ಬಿಡುಗಡೆಗೆ ಹಿಂದಿನ ದಿನ ಅಂದರೆ ಮಾರ್ಚ್ 18ರಂದು ಸಂಜೆ ಐದು ಗಂಟೆಯಿಂದಲೇ ಶೋಗಳನ್ನು ಪ್ರದರ್ಶಿಸುತ್ತಿದೆ. ಇದು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಭಾರಿ ಪೆಟ್ಟು ನೀಡಿದೆ. ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಸಹ ಪ್ರೀಮಿಯಮ್ ಶೋ ಆಯೋಜಿಸಲು ಯೋಜಿಸಿತ್ತು, ಆದರೆ ‘ಧುರಂಧರ್ 2’ ಕಾರಣಕ್ಕೆ ಅದು ರದ್ದಾಗಿತ್ತು.

ಇದನ್ನೂ ಓದಿ:‘ಕಾಲರ್ ಎತ್ತರ’ ಎಂದು ಕುಣಿದ ಪವನ್ ಕಲ್ಯಾಣ್: ಸ್ಟೆಪ್ಪು ನೋಡಿ

ಆದರೆ ಇದೀಗ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಹೊಸ ಯೋಜನೆಯೊಂದಿಗೆ ಬಂದಿದೆ. ಸಂಜೆ ಪೇಯ್ಡ್ ಪ್ರೀಮಿಯರ್ ಶೋ ಬದಲಿಗೆ ಬೆಳಿಗಿನ ಜಾವ ಬೆನಿಫಿಟ್ ಶೋಗಳನ್ನು ಆಯೋಜಿಸಲು ಮುಂದಾಗಿದೆ. ಆಂಧ್ರ ಮತ್ತು ತೆಲಂಗಾಣಗಳಲ್ಲಿ ಬೆಳಗಿನ ಜಾವ 4 ಮತ್ತು 5 ಗಂಟೆಗೆ ಶೋಗಳನ್ನು ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ. ಅಲ್ಲಿ ಮಾತ್ರವೇ ಅಲ್ಲದೆ ಕರ್ನಾಟಕದಲ್ಲಿಯೂ ಸಹ ಅರ್ಲಿ ಮಾರ್ನಿಂಗ್ ಶೋಗಳನ್ನು ಆಯೋಜನೆ ಮಾಡಲಾಗುತ್ತಿದೆ. ಸಿನಿಮಾದ ಟಿಕೆಟ್ ದರಗಳು ಸುಮಾರು 500 ರೂಪಾಯಿಗಳು ಆಂಧ್ರ ಮತ್ತು ತೆಲಂಗಾಣದಲ್ಲಿ ಇರಲಿವೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿ ಸಹಜವಾಗಿಯೇ ಟಿಕೆಟ್ ದರ ಹೆಚ್ಚೇ ಇರಲಿದೆ.

‘ಪುಷ್ಪ 2’ ಸಿನಿಮಾದ ಸ್ಪೆಷಲ್ ಶೋನಲ್ಲಿ ಆಗಿದ್ದ ಅನಾಹುತದ ಬಳಿಕ ತೆಲಂಗಾಣದಲ್ಲಿ ಬೆನಿಫಿಟ್ ಶೋ, ಫ್ಯಾನ್ಸ್ ಶೋಗಳನ್ನು ರದ್ದು ಮಾಡಲಾಗಿತ್ತು. ಆಂಧ್ರದಲ್ಲಿಯೂ ಸಹ ಅರ್ಲಿ ಮಾರ್ನಿಂಗ್ ಶೋಗಳನ್ನು ಪ್ರದರ್ಶಿಸಲಾಗುತ್ತಿರಲಿಲ್ಲ. ಆದರೆ ಇದೀಗ ಪವನ್ ಕಲ್ಯಾಣ್ ಸಿನಿಮಾಕ್ಕಾಗಿ ಇದೀಗ ಮತ್ತೆ ಅರ್ಲಿ ಮಾರ್ನಿಂಗ್ ಶೋ ಪ್ರದರ್ಶಿಸಲಾಗುತ್ತಿದೆ. ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ಪವನ್ ಕಲ್ಯಾಣ್ ಜೊತೆಗೆ ಶ್ರೀಲೀಲಾ ಸಹ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಇಂದು (ಮಾರ್ಚ್ 14) ಬಿಡುಗಡೆ ಆಗಿದೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್​ನ ಕರಾವಳಿ ಮೇಲೆ ಬಾಂಬ್ ಹಾಕುತ್ತೇನೆ; ಹಾರ್ಮುಜ್ ಜಲಸಂಧಿಯನ್ನು ತೆರೆಯುವ ಶಪಥ ಮಾಡಿದ ಟ್ರಂಪ್

ನವದೆಹಲಿ, ಮಾರ್ಚ್ 14: ಇರಾನ್‌ನೊಂದಿಗಿನ ಉದ್ವಿಗ್ನತೆ ಹಾರ್ಮುಜ್ ಜಲಸಂಧಿಯ ಮೇಲೆ ಕೂಡ ಪರಿಣಾಮ ಬೀರಬಹುದು. ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಯಾವೆಲ್ಲ ರೀತಿಯಲ್ಲಿ ಸಾಧ್ಯವೋ ಆ ಎಲ್ಲ ಪ್ರಯತ್ನ ಮಾಡುತ್ತೇವೆ. ಕರಾವಳಿಯ ಮೇಲೆ ಬಾಂಬ್ ಹಾಕಲು ಕೂಡ ಅಮೆರಿಕ ಸಿದ್ಧವಿದೆ. ನಾವು ಏನು ಮಾಡುತ್ತೇವೆಂದು ನೋಡುತ್ತಿರಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎಚ್ಚರಿಸಿದ್ದಾರೆ. ಈ ಬಗ್ಗೆ ಅವರು ಟ್ರುತ್ ಸೋಷಿಯಲ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇರಾನ್‌ನ ಕರಾವಳಿಯ ಬಳಿ ಅಮೆರಿಕದ ಪಡೆಗಳು ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸುತ್ತವೆ. ಈ ಮಾರ್ಗಕ್ಕೆ ಬೆದರಿಕೆ ಹಾಕುವ ಯಾವುದೇ ಇರಾನಿನ ದೋಣಿಗಳು ಅಥವಾ ಹಡಗುಗಳನ್ನು ಉರುಳಿಸುತ್ತವೆ ಎಂದಿರುವ ಟ್ರಂಪ್, “ನಾವು ಶೀಘ್ರದಲ್ಲೇ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತ ಮತ್ತು ಮುಕ್ತಗೊಳಿಸುತ್ತೇವೆ” ಎಂದು ಶಪಥ ಮಾಡಿದ್ದಾರೆ.

ಇದನ್ನೂ ಓದಿ: ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಬದುಕಿದ್ದಾರಷ್ಟೇ, ಟ್ರಂಪ್ ಹೀಗ್ಯಾಕಂದ್ರು?

ಚೀನಾ, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್ (ಇಂಗ್ಲೆಂಡ್) ಸೇರಿದಂತೆ ಇತರೆ ದೇಶಗಳು ಹಾರ್ಮುಜ್ ಜಲಸಂಧಿಯ ಪ್ರದೇಶಕ್ಕೆ ಹಡಗುಗಳನ್ನು ಕಳುಹಿಸುವಂತೆ ಟ್ರಂಪ್ ಒತ್ತಾಯಿಸಿದ್ದಾರೆ. ಅಡೆತಡೆಗಳನ್ನು ತಡೆಗಟ್ಟಲು ಮತ್ತು ಜಲಸಂಧಿಯು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಬಹುರಾಷ್ಟ್ರಗಳು ಅಲ್ಲಿಗೆ ತೆರಳಬೇಕು ಎಂದು ಟ್ರಂಪ್ ಆಗ್ರಹಿಸಿದ್ದಾರೆ.

ಅಮೆರಿಕವು ಇರಾನ್‌ನ 100% ಮಿಲಿಟರಿ ಸಾಮರ್ಥ್ಯವನ್ನು ನಾಶಪಡಿಸಿದೆ ಎಂದು ಟ್ರಂಪ್ ಹೇಳಿಕೊಂಡರೂ, ಇರಾನ್ ಇನ್ನೂ ಡ್ರೋನ್‌ಗಳು, ಅಲ್ಪ-ಶ್ರೇಣಿಯ ಕ್ಷಿಪಣಿಗಳನ್ನು ಬಳಸಿಕೊಂಡು ಸಣ್ಣ ಪ್ರಮಾಣದ ದಾಳಿಗಳನ್ನು ನಡೆಸುವ ಸಾಧ್ಯತೆಯಿದೆ. ಇದು ಹಾರ್ಮುಜ್ ಜಲಸಂಧಿಯಲ್ಲಿ ಹಾದುಹೋಗುವ ಹಡಗುಗಳಿಗೆ ಅಪಾಯವನ್ನುಂಟುಮಾಡಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ದಾಳಿ ನಡೆಸಲು ಇನ್ನೇನೂ ಉಳಿದಿಲ್ಲ; ಇರಾನ್ ಮೇಲಿನ ಯುದ್ಧ ಬೇಗ ಕೊನೆಯಾಗಲಿದೆ ಎಂದ ಟ್ರಂಪ್

“ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಪ್ರಯತ್ನಿಸಿದ್ದರಿಂದ ಪ್ರಭಾವಿತರಾದ ಅನೇಕ ದೇಶಗಳು, ಜಲಸಂಧಿಯನ್ನು ಮುಕ್ತವಾಗಿ ಮತ್ತು ಸುರಕ್ಷಿತವಾಗಿಡಲು ಅಮೆರಿಕ ಸಂಯುಕ್ತ ಸಂಸ್ಥಾನದೊಂದಿಗೆ ಯುದ್ಧನೌಕೆಗಳನ್ನು ಕಳುಹಿಸಲಿವೆ” ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.

ಹಾರ್ಮುಜ್ ಜಲಸಂಧಿಯು ವಿಶ್ವದ ತೈಲ ಸಾಗಣೆಯ ಗಮನಾರ್ಹ ಭಾಗವು ಹಾದುಹೋಗುವ ಪ್ರಮುಖ ಸಮುದ್ರ ಮಾರ್ಗವಾಗಿದೆ. ಈಗಾಗಲೇ ಭಾರತೀಯ ಹಡಗುಗಳಿಗೆ ಈ ಮಾರ್ಗದಲ್ಲಿ ಸಂಚರಿಸಲು ಇರಾನ್ ಅನುಮತಿ ನೀಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version