ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ – Kannada News | Belagavi Tourism Alert: Forest Department Bans Entry to 9 Waterfalls in Khanapur and Jamboti Due to Heavy Rains
ಬೆಳಗಾವಿ, ಜುಲೈ 6: ಪಶ್ಚಿಮಘಟ್ಟದ ಭಾಗದಲ್ಲಿ ಮಳೆ ಚುರುಕು ಪಡೆದುಕೊಂಡಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ, ಜಾಂಬೋಟಿ ಮತ್ತು ಕಣಕುಂಬಿ ಪ್ರದೇಶದಲ್ಲಿ ಅಧಿಕ ಮಳೆಯಾಗುತ್ತಿದೆ. ಇದರಿಂದ ಜಲಪಾತಗಳು ಮೈದುಂಬಿಕೊಂಡಿದ್ದು ಧುಮ್ಮಿಕ್ಕಿ ಹರಿಯುತ್ತಿವೆ. ಇದನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಲಪಾತಗಳತ್ತ ಮುಖ ಮಾಡುತ್ತಿದ್ದು, ಅನಾಹುತಗಳನ್ನು ತಡೆಯಲು ಅರಣ್ಯ ಇಲಾಖೆಯು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಖಾನಾಪುರ ತಾಲೂಕಿನ ಬೆಟಣೆ, ಚಿಕಲೆ, ಚೋರ್ಲಾ, ಬಟವಾಡೆ ಫಾಲ್ಸ್ ಸೇರಿದಂತೆ ಒಟ್ಟು 9 ಜಲಪಾತಗಳಿಗೆ ಅರಣ್ಯ ಇಲಾಖೆ ಪ್ರವೇಶ ನಿರ್ಬಂಧ ಹೇರಿದೆ. ಈ ಪ್ರದೇಶಗಳನ್ನು…