ದಿನ ಭವಿಷ್ಯ: ಇಂದು ಈ ರಾಶಿಯವರ ವರ್ತನೆ ವಿಭಿನ್ನ ಹಾಗೂ ಅತಿರೇಕವೂ ಆಗಿರಲಿದೆ..
ಮೇಷ ರಾಶಿ: ಇಂದಿನ ಪ್ರಯಾಣದಲ್ಲಿ ಅಡೆತಡೆಗಳಿದ್ದರೂ ಅದನ್ನು ಲೆಕ್ಕಿಸದೇ ಮುನ್ನಡೆಯುವಿರಿ. ಹೊಂದಾಣಿಕೆ ಕಷ್ಟವಾದರೂ ಅನಿವಾರ್ಯವಾಗಬಹುದು. ಶರೀರದಲ್ಲಿ ಅಸಮತೋಲನವು ಇರಲಿದೆ. ಇಂದು ಉಪಾಯದಿಂದ ಕೆಲಸವನ್ನು ಮಾಡುವುದು ಉತ್ತಮ. ಸ್ನೇಹಿತರ ವಿವಾಹ ಸಮಾರಂಭದಲ್ಲಿ ಖುದ್ದಾಗಿ ಭಾಗಿಯಾಗುವಿರಿ. ವ್ಯಾಪಾರವು ಮಧ್ಯಮಗತಿಯಲ್ಲಿ ಇರುವುದು. ನಿಮ್ಮದಾದ ನಿಯಮವನ್ನು ಬಿಡಲು ನೀವು ತಯಾರಿರುವುದಿಲ್ಲ. ಕೆಲವರ ಮನೋಗತವನ್ನು ಅರಿತುಕೊಳ್ಳುವಿರಿ. ಹಿರಿಯರ ಜೊತೆ ವರ್ತನೆಗಳು ಬಿಗುಮಾನದಿಂದ ಇರಲಿದೆ. ವೃಷಭ ರಾಶಿ: ದಾಂಪತ್ಯದಲ್ಲಿ ಮನಸ್ತಾಪವನ್ನು ಶಾಂತಗೊಳಿಸಿಕೊಳ್ಳುವುದು ಒಳ್ಳೆಯದು. ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದಿಲ್ಲ. ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು. ಸಕಾಲಕ್ಕೆ ಭೋಜನವನ್ನು ಸ್ವೀಕರಿಸುವುದು…