Headlines

ಅರಸು ದಾಖಲೆ ಬ್ರೇಕ್ ಮಾಡಲಿರುವ ಸಿಎಂ ಸಿದ್ದರಾಮಯ್ಯಗೆ ಪ್ರಲ್ಹಾದ್​​ ಜೋಶಿ ಟಕ್ಕರ್

ಬೆಂಗಳೂರು, ಜನವರಿ 05: ಸಿದ್ದರಾಮಯ್ಯ ಅತಿ ಹೆಚ್ಚು ಅವಧಿಗೆ ಸಿಎಂ ಆಗಿದ್ದಾರೆಯೇ ಹೊರತು ಅಭಿವೃದ್ಧಿ, ಸಾಧನೆ ಏನೂ ಆಗಿಲ್ಲ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್​​ ಜೋಶಿ ವಾಗ್ದಾಳಿ ಮಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿ ಅರಸು ದಾಖಲೆ ಬ್ರೇಕ್ ಆಗಲಿರುವ ವಿಚಾರವಾಗಿ ಪ್ರಯತಿಕ್ರಿಯಿಸಿದ ಪ್ರಲ್ಹಾದ್​​ ಜೋಶಿ,  ಸಿದ್ದರಾಮಯ್ಯ ಸುದೀರ್ಘ ಅವಧಿಗೆ ಸಿಎಂ ಆಗಿರುವುದಕ್ಕೆ ಬೇಸರವಿಲ್ಲ. ರಾಜ್ಯದ ಜನರಿಗೆ ಇದು ಸಂತಸ ತರಬೇಕಿತ್ತು, ಆದರೆ ಜನರಿಗೆ ಸಂತಸವಾಗಿಲ್ಲ. ಸುದೀರ್ಘವಾಗಿ ಖಾಲಿ ಖಜಾನೆ ಮಾಡಿರುವುದೇ ಅವರ ಸಾಧನೆ. ಯಾವುದೇ ಅಭಿವೃದ್ಧಿ…

Read More

Video: ಭಾರತ Vs ಕೆನಡಾ; ಕಾರ್ಪೊರೇಟ್ ಕೆಲಸದ ಸಂಸ್ಕೃತಿಯನ್ನು ಹೋಲಿಸಿದ ಭಾರತೀಯ ಮಹಿಳೆ – Kannada News | Indian woman admires work culture in Canada

ಕೈಯಲ್ಲೊಂದು ಉದ್ಯೋಗ (employment) ಇದ್ರೆ ಮಾತ್ರ ಗೌರವ. ಆದರೆ ಕಾರ್ಪೋರೇಟ್, ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಗ್ಯಾರಂಟಿ ಇರಲ್ಲ. ಯಾವಾಗ ಬೇಕಾದ್ರೂ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬಹುದು. ಆದರೆ ಕೆನಾಡದಲ್ಲಿ (Canada) ನೆಲೆಸಿರುವ ಭಾರತೀಯ ಮಹಿಳೆಯೊಬ್ಬರು ಭಾರತ ಹಾಗೂ ಕೆನಡಾದ ಕಾರ್ಪೊರೇಟ್ ಕೆಲಸದ ಸಂಸ್ಕೃತಿಯನ್ನು ಹೋಲಿಸಿ ಮಾತನಾಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. @unfiltered.anshikaa ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅನ್ಶಿಕಾರವರು ನಂಬಿಕೆ ಆಧಾರಿತ ಕಚೇರಿ ವಾತಾವರಣ ಇಲ್ಲಿದೆ. ಆದರೆ, ತಾನು ಭಾರತದಲ್ಲಿದ್ದಾಗ ಕಾರ್ಪೊರೇಟ್ ಕೆಲಸ ಮಾಡಲು…

Read More

‘ಕೇಸ್ ಆದ್ಮೇಲೆ ರಾಜಿಗೆ ಬಂದ ವಿನಯ್ ಗೌಡ’: ಖಡಕ್ ತಿರುಗೇಟು ಕೊಟ್ಟ ಡಾಗ್ ಸತೀಶ್

ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋಗೆ ‘ಮಾರ್ಕ್’ ಸಿನಿಮಾದ ಹಾಡು ಬಳಸಿದ್ದಕ್ಕೆ ಡಾಗ್ ಸತೀಶ್ (Dog Satish) ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ವಿನಯ್ ಗೌಡ, ರಜತ್ ಮುಂತಾದವರು ಸತೀಶ್ ಮೇಲೆ ಗರಂ ಆಗಿದ್ದರು. ಈ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆ ಬಗ್ಗೆ ಸತೀಶ್ ಮಾತಾಡಿದ್ದಾರೆ. ‘ಸತ್ರೂ ನಾನು ವಿಡಿಯೋ ಡಿಲೀಟ್ ಮಾಡಲ್ಲ. ನಾನು ಇರುವುದೇ ಹೀಗೆ. ತಪ್ಪು ಮಾಡಲ್ಲ. ತಪ್ಪು ಮಾಡಿದ್ದರೆ ನಾನು ಕ್ಷಮೆ ಕೇಳೋಕೆ ರೆಡಿ. ತಪ್ಪು ಮಾಡಿಲ್ಲ ಎಂದರೆ ಅದನ್ನು ಎಲ್ಲಿಯವರೆಗೆ…

Read More

Ugadi Bhavishya 2026: ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಅಗತ್ಯ

ಯುಗಾದಿ 2026ರ ವೃಶ್ಚಿಕ ರಾಶಿ ಭವಿಷ್ಯದ ಪ್ರಕಾರ, ಈ ರಾಶಿಯವರು ದೃಢ ಸಂಕಲ್ಪದಿಂದ ಮುನ್ನಡೆಯಬೇಕಾಗುತ್ತದೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತುತಜ್ಞ ವೇದಬ್ರಹ್ಮ ಕೆ. ವೆಂಕಟೇಶ್ ಶರ್ಮಾ ಅವರು ಭವಿಷ್ಯ ನುಡಿದಿದ್ದಾರೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಹಠದಿಂದ ಯಶಸ್ಸು ಸಾಧಿಸುವ ಅವಕಾಶಗಳಿವೆ. ಆರ್ಥಿಕ ವಿಷಯದಲ್ಲಿ ಗುಪ್ತ ಆದಾಯದ ಮೂಲಗಳು ತೆರೆದುಕೊಳ್ಳಬಹುದು. ಕುಟುಂಬದಲ್ಲಿನ ಹಳೆಯ ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲಿ ವಿಶೇಷ ಜಾಗ್ರತೆ ವಹಿಸಬೇಕು, ವಿಶೇಷವಾಗಿ ರಕ್ತದೊತ್ತಡದ ಬಗ್ಗೆ ಗಮನ ಹರಿಸುವುದು ಉತ್ತಮ. ಗ್ರಹಗತಿಗಳ ಪ್ರಭಾವದಿಂದ ನಾಲ್ಕನೇ…

Read More

Patanjali: ಷೇರುಪೆಟೆಯಲ್ಲಿ ಪತಂಜಲಿ ಫುಡ್ಸ್; ಹೂಡಿಕೆದಾರರಿಗೆ 3,900 ಕೋಟಿ ರೂ ಗಳಿಕೆ – Kannada News | Patanjali Foods shares successful run this week, investors gain Rs 3,900 crore

ಮುಂಬೈ, ಡಿಸೆಂಬರ್ 22: ಪತಂಜಲಿ ಫುಡ್ಸ್ (Patanjali Foods) ಫುಡ್ಸ್ ಷೇರು ಬೆಲೆ ಇಂದು ಸೋಮವಾರ ಅಲ್ಪ ಹಿನ್ನಡೆ ಪಡೆದರೂ ಕಳೆದ ವಾರದಿಂದ ಒಟ್ಟಾರೆಯಾಗಿ ಪಾಸಿಟಿವ್ ದೆಸೆಯಲ್ಲಿದೆ. ಡಿಸೆಂಬರ್ 15 ರಿಂದ, ಕಂಪನಿಯ ಷೇರುಗಳು ಸುಮಾರು 7% ರಷ್ಟು ಗಳಿಸಿದ್ದು, ಹೂಡಿಕೆದಾರರಿಗೆ ಸುಮಾರು ₹3,900 ಕೋಟಿ ಲಾಭವನ್ನು ತಂದುಕೊಟ್ಟಿವೆ. ಇದರಿಂದ ಮತ್ತೊಮ್ಮೆ ಕಂಪನಿಯ ವ್ಯಾಲ್ಯುಯೇಶನ್ ₹61,000 ಕೋಟಿ ರೂ ದಾಟಿಸಿದೆ. ಕಳೆದ ವಾರದ ಕೊನೆಯ ಟ್ರೇಡಿಂಗ್ ದಿನವಾದ ಶುಕ್ರವಾರ (ಡಿ. 19) ಪತಂಜಲಿ ಫುಡ್ಸ್ ಷೇರುಗಳ ಬೆಲೆ…

Read More

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಕಾರಿಗೆ ಗುದ್ದಿ ಚರಂಡಿಗೆ ನುಗ್ಗಿದ ಖಾಸಗಿ ಸ್ಲೀಪರ್ ಬಸ್! – Kannada News | Mandya road accident, Private bus crash, Bangalore Mysore highway, Budanur incident, Car bus collision, Kerala to Bangalore bus accident

ಮಂಡ್ಯ, ಏ.20: ಜಿಲ್ಲೆಯ ಬೂದನೂರು ಸಮೀಪದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ, ಖಾಸಗಿ ಸ್ಲೀಪರ್ ಬಸ್ ಒಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯು ಭಾನುವಾರ ಬೆಳಿಗ್ಗೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದಂತಾಗಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ, ಕೇರಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್, ಬೂದನೂರು ಸಮೀಪದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡಿದ್ದು, ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಗೆ…

Read More

ಪ್ರಧಾನಿ ಮೋದಿಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಫೋನ್; ಮಧ್ಯ ಏಷ್ಯಾ, ಹಾರ್ಮುಜ್ ಜಲಸಂಧಿ ಬಗ್ಗೆ ಚರ್ಚೆ – Kannada News | PM Modi Spoke with French President Macron discusses West Asia crisis, Strait of Hormuz security

ನವದೆಹಲಿ, ಏಪ್ರಿಲ್ 16: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ದೂರವಾಣಿ ಕರೆ ಮಾಡಿದ್ದಾರೆ. ಈ ವೇಳೆ ಇಬ್ಬರೂ ನಾಯಕರು ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷತೆ ಮತ್ತು ಸಂಚಾರದ ಸ್ವಾತಂತ್ರ್ಯವನ್ನು ತುರ್ತಾಗಿ ಮರುಸ್ಥಾಪಿಸಲು ಕರೆ ನೀಡಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಮಧ್ಯ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಪ್ರಾದೇಶಿಕ ಬಿಕ್ಕಟ್ಟಿನ ಬಗ್ಗೆ…

Read More

‘ಜನ ನಾಯಗನ್’ ಸಿನಿಮಾಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ: ನೂರಾರು ಕೋಟಿ ನಷ್ಟದ ಭೀತಿ – Kannada News | Amazon Prime warned Jana Nayagan producer sue over release date chaos

ದಳಪತಿ ವಿಜಯ್ (Thalapathy Vijay) ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿ ಕಾರಣಕ್ಕೆ ತೀವ್ರ ಹಿನ್ನಡೆ ಆಗಿದ್ದು, ಈಗಾಗಲೇ ಬಿಡುಗಡೆ ದಿನಾಂಕ ಮುಂದೆ ಹೋಗಿ ನಿರ್ಮಾಪಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಎಂತೆಂಥ ಸಿನಿಮಾಗಳಿಗೆ ಸುಲಭವಾಗಿ ಪ್ರಮಾಣ ಪತ್ರ ನೀಡಿರುವ ಸೆನ್ಸಾರ್ ಮಂಡಳಿ, ರೀಮೇಕ್ ಸಿನಿಮಾ ಆಗಿರುವ ‘ಜನ ನಾಯಗನ್’ಗೆ ಪ್ರಮಾಣ ಪತ್ರ ನೀಡಲು ನಿರಾಕರಿಸಿದೆ. ಪ್ರಕರಣ ಇದೀಗ ಮದ್ರಾಸ್ ಹೈಕೋರ್ಟ್​​ನಲ್ಲಿದೆ. ಹೀಗಿರುವಾಗ ಸಿನಿಮಾದ ನಿರ್ಮಾಪಕರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಒಪ್ಪಂದದಂತೆ ಸಿನಿಮಾ ಬಿಡುಗಡೆ…

Read More

ಅನಿಲ್‌ನನ್ನು ‘ಅಕ್ಷತಾ’ ಮಾಡಿದ್ದ ಮಂಗಳಮುಖಿಯರು: ಮಂಗಳೂರು-ಕೇರಳದಲ್ಲಿ ಸೆಕ್ಸ್ ವರ್ಕ್​​ಗೆ ಬಳಕೆ, ಲಿಂಗ ಬದಲಾವಣೆಗೂ ಸ್ಕೆಚ್

ಮೈಸೂರು, ಏ.12: ಜಿಲ್ಲೆಯಲ್ಲಿ (Mysuru Crime) ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಇದೀಗ ಈ ಸುದ್ದಿ ಎಲ್ಲ ಕಡೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಬಸ್ಸಿಗಾಗಿ ಕಾಯುತ್ತಿದ್ದ ಯುವಕನೋರ್ವನನ್ನು ಅಪಹರಿಸಿ, ಆತನಿಗೆ ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ, ಹಣದ ದಂಧೆ ಹಾಗೂ ಸೆಕ್ಸ್ ವರ್ಕ್​​ಗೆ ಬಳಸಿಕೊಂಡಿರುವ ಆಘಾತಕಾರಿ ಆರೋಪವೊಂದು ಕೇಳಿ ಬಂದಿದೆ. ನಂಜನಗೂಡಿನ ತ್ಯಾಗರಾಜ ಕಾಲೋನಿಯ ಅನಿಲ್ ಕುಮಾರ್ ಈ ಕರಾಳ ದಂಧೆಯ ಬಲಿಪಶುವಾಗಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಪ್ರಕರಣ ಲಷ್ಕರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ನಾಲ್ಕು ತಿಂಗಳ…

Read More

ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ! ಇಡಿ ದಾಳಿ ವೇಳೆ ಸಿಕ್ಕಿತು ಮಹತ್ವದ ದಾಖಲೆ – Kannada News | Nalapad Haris Under ED Scanner:Rs.37 Lakh Seized, Bitcoin Scam Link Probed

ಬೆಂಗಳೂರು, ಏ.21: ಎನ್.ಎ. ಹ್ಯಾರಿಸ್ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ನೆನ್ನೆ (ಏ.20) 21 ಗಂಟೆಗಳ ಕಾಲ ನಿರಂತರವಾಗಿ ದಾಳಿ ನಡೆಸಿದ್ದಾರೆ. ಈ ಮಹತ್ವದ ಶೋಧ ಕಾರ್ಯಾಚರಣೆಯಲ್ಲಿ 37 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ನಗದು ಜೊತೆಗೆ, ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳು, ಆಸ್ತಿಪಾಸ್ತಿ ವಿವರಗಳು ಮತ್ತು ವಿವಿಧ ಹೂಡಿಕೆಗಳಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ದಾಖಲೆಗಳು ಹ್ಯಾರಿಸ್ ಅವರ ದೊಡ್ಡ ಸಾಮ್ರಾಜ್ಯದ ಭಾಗವಾಗಿರಬಹುದು, ಆದರೆ ಇ.ಡಿ. ದಾಳಿಯಲ್ಲಿ ಅವುಗಳ ಪತ್ತೆ…

Read More