ಸ್ಪೀಕರ್ಗೆ ಪತ್ರ ಬರೆದ ಬಿಜೆಪಿಯ ಮಹಿಳಾ ಸಂಸದರು – Kannada News | BJP Women MPs Seek Speaker’s Intervention Over House Disruption
ನವದೆಹಲಿ, ಫೆಬ್ರವರಿ 10: ಲೋಕಸಭೆ(LokSabha)ಯಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಬಿಕ್ಕಟ್ಟು ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಪ್ರತಿಪಕ್ಷಗಳ ಮಹಿಳಾ ಸಂಸದರ ನಂತರ ಬಿಜೆಪಿ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್ಗೆ ಪತ್ರ ಬರೆದಿದ್ದಾರೆ. ಫೆಬ್ರವರಿ 4ರಂದು ಸದನದೊಳಗೆ ಪ್ರಧಾನಿ ಮೋದಿ ಕುರ್ಚಿಯನ್ನು ಸುತ್ತುವರೆದು ಅವರು ಭಾಷಣ ಮಾಡದಂತೆ ತಡೆದ ಮಹಿಳಾ ಸಂಸದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿಯ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಫೆಬ್ರವರಿ 4ರಂದು ಲೋಕಸಭೆಯಲ್ಲಿ ವಿರೋಧ…