ಪೌರಕಾರ್ಮಿಕ ದಂಪತಿಯ ಪುತ್ರನಿಗೂ ಸಿಕ್ತು ಸಚಿವ ಸ್ಥಾನ! 34 ಮತಗಳಿಂದ ಗೆದ್ದಿದ್ದ ಕೆಎಸ್ ಬಸವಂತಪ್ಪ ರಾಜಕೀಯ ಪಯಣ ಹೀಗಿದೆ – Kannada News | Karnataka Cabinet Expansion: Who Is KS Basavanthappa, From Pourakarmika Family to Minister

ದಾವಣಗೆರೆ, ಆಗಸ್ಟ್ 3: ಪೌರಕಾರ್ಮಿಕ ದಂಪತಿಯ ಕುಟುಂಬದಿಂದ ಬಂದ ಕೆಎಸ್ ಬಸವಂತಪ್ಪ (KS Basavanthappa) ಇದೀಗ ಕರ್ನಾಟಕ ಸಚಿವ ಸಂಪುಟಕ್ಕೆ (Karnataka Cabinet) ಸೇರುವ ಅವಕಾಶ ಪಡೆದಿದ್ದಾರೆ. ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವಂತಪ್ಪ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಳಿಕ ಸಚಿವರಾಗುತ್ತಿರುವುದು ವಿಶೇಷ. ದೀರ್ಘ ರಾಜಕೀಯ ಹೋರಾಟದ ಬಳಿಕ ಸಚಿವ ಸ್ಥಾನದ ಅವಕಾಶ ಪಡೆದಿರುವ ಬಸವಂತಪ್ಪ ಅವರ ಹಿನ್ನೆಲೆ ಇದೀಗ ಗಮನ ಸೆಳೆದಿದೆ.

ಪೌರಕಾರ್ಮಿಕ ಕುಟುಂಬದಿಂದ ಸಚಿವ ಸ್ಥಾನದ ವರೆಗೆ

ದಾವಣಗೆರೆಯ ಗಾಂಧಿನಗರದಲ್ಲಿ ಬೆಳೆದ ಕೆಎಸ್ ಬಸವಂತಪ್ಪ ಅವರು ಪೈಲ್ವಾನ್ ಸಂಗಪ್ಪ ಹಾಗೂ ಹನಮಕ್ಕ ದಂಪತಿಯ ಐದು ಮಕ್ಕಳಲ್ಲಿ ಮೂರನೇ ಪುತ್ರ. ಬಸವಂತಪ್ಪ ಅವರ ತಂದೆ-ತಾಯಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಸ್ವತಃ ಬಸವಂತಪ್ಪ ಕೂಡ ಕೆಲಕಾಲ ಪೌರಕಾರ್ಮಿಕರಾಗಿ ಕೆಲಸ ಮಾಡಿದ್ದು, ಬಳಿಕ ಸೈಕಲ್ ಸ್ಟ್ಯಾಂಡ್ ಹಾಗೂ ಬಾತ್‌ರೂಂ ಟೆಂಡರ್‌ಗಳನ್ನು ಪಡೆದು ಜೀವನ ಸಾಗಿಸಿದ್ದರು ಎನ್ನಲಾಗಿದೆ.

ಪಿಯುಸಿ ಶಿಕ್ಷಣ ಪಡೆದಿರುವ ಬಸವಂತಪ್ಪ ಅವರು ಬಳಿಕ ಸ್ಥಳೀಯ ರಾಜಕೀಯದಲ್ಲಿ ಸಕ್ರಿಯರಾದರು. ದಾವಣಗೆರೆ ತಾಲೂಕಿನ ಅನಗೋಡು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದರು.

2018ರಲ್ಲಿ ಸೋಲು, 2023ರಲ್ಲಿ ಗೆಲುವು

ಮಾಯಕೊಂಡ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, 2018ರ ಚುನಾವಣೆಯಲ್ಲಿ ಬಸವಂತಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಅಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದರು. ಸೋಲಿನಿಂದ ಹಿಂದೆ ಸರಿಯದೆ ಮತ್ತೆ ಚುನಾವಣಾ ಕಣಕ್ಕಿಳಿದ ಅವರು 2023ರಲ್ಲಿ ಮಾಯಕೊಂಡ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ 34 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

ಮಾಜಿ ಸಚಿವ ಎಚ್. ಆಂಜನೇಯ ಅವರ ಸಂಬಂಧಿ

ಬಸವಂತಪ್ಪ ಅವರು ಮಾಜಿ ಸಚಿವ ಎಚ್. ಆಂಜನೇಯ ಅವರ ಅಳಿಯರಾಗಿದ್ದಾರೆ. ಆಂಜನೇಯ ಅವರ ಸಹೋದರಿ ಹನಮಕ್ಕ ಅವರ ಪುತ್ರ ಬಸವಂತಪ್ಪ. ಮಾಯಕೊಂಡ ಕ್ಷೇತ್ರದಲ್ಲಿ ಮಾದಿಗ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿರುವ ಅವರು, ಕ್ಷೇತ್ರದ ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ.

ಸರಳ ಜೀವನ, ರಾಜಕೀಯದಲ್ಲಿ ಹೊಸ ಜವಾಬ್ದಾರಿ

ದಾವಣಗೆರೆ ನಗರದ ಎಸ್‌ಎಸ್ ಬಡಾವಣಿಯ ಬಿ ಬ್ಲಾಕ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಬಸವಂತಪ್ಪ ಅವರ ರಾಜಕೀಯ ಪಯಣ, ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ವ್ಯಕ್ತಿಯೊಬ್ಬರು ರಾಜ್ಯದ ಸಚಿವ ಸಂಪುಟಕ್ಕೆ ಪ್ರವೇಶಿಸುವ ಹಾದಿಯನ್ನೂ ತೋರಿಸುತ್ತದೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ; ನೂತನ ಸಚಿವರು ಯಾರ್ಯಾರು ಗೊತ್ತಾ? ಇಲ್ಲಿದೆ ಪಟ್ಟಿ

ಅವರ ಸಹೋದರ ಕೆಎಸ್ ಗೋವಿಂದರಾಜ್ ಅವರು ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾಗಿದ್ದಾರೆ. ಇದೀಗ ಬಸವಂತಪ್ಪ ಅವರಿಗೆ ಸಚಿವ ಸ್ಥಾನದ ಅವಕಾಶ ಸಿಕ್ಕಿರುವುದರಿಂದ ದಾವಣಗೆರೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಡಿಕೆಶಿ ಕ್ಯಾಬಿನೆಟ್​​ನಲ್ಲಿ 11 ಮಂದಿ ಮಾತ್ರ ಹೊಸಬರು: ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಲವರಿಗೆ ಕೊಕ್​ – Kannada News | Karnataka Cabinet Expansion: 20 Ministers to Take Oath in CM DK Shivakumar’s Cabinet; Several Siddaramaiah Era Stalwarts Dropped

ಸಿಎಂ ಡಿಕೆಶಿ ಕ್ಯಾಬಿನೆಟ್​​ನಲ್ಲಿ 11 ಮಂದಿ ಮಾತ್ರ ಹೊಸಬರುImage Credit source: PTI

ಬೆಂಗಳೂರು, ಆಗಸ್ಟ್​​ 03: ಸಿಎಂ ಡಿಕೆ ಶಿವಕುಮಾರ್​​ ಸಚಿವ ಸಂಪುಟಕ್ಕೆ 20 ಮಂದಿ ನೂತನ ಸಚಿವರ ಸೇರ್ಪಡೆ ಆಗಲಿದ್ದು, ಲೋಕಭವನದ ಆವರಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಂಜೆ 4.05ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಿಂದಿನ ಸಿಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿದ್ದ ಹಲವು ಪ್ರಮುಖ ಶಾಸಕರಿಗೆ ಮಂತ್ರಿ ಸ್ಥಾನ ಕೈತಪ್ಪಿದ್ದರೆ, ಮೊದಲ ಬಾರಿಗೆ ಸಚಿವರಾಗುವ ಆಸೆ ಹೊಂದಿದ್ದ ಅನೇಕ ನಾಯಕರ ಕನಸೂ ಭಗ್ನಗೊಂಡಿದೆ. ಹೀಗಾಗಿ ನಾಯಕರ ಬೆಂಬಲಿಗರ ಆಕ್ರೋಶದ ಕಟ್ಟೆ ಒಡೆದಿದ್ದು, ಪ್ರತಿಭಟನೆಗಳು ಆರಂಭವಾಗಿವೆ.

ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಲವರಿಗೆ ಕೊಕ್​

ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿದ್ದ ಡಾ.ಹೆಚ್​.ಸಿ.ಮಹದೇವಪ್ಪ, ಡಾ.ಎಂ.ಸಿ.ಸುಧಾಕರ್, ದಿನೇಶ್ ಗುಂಡೂರಾವ್, ಹೆಚ್​.ಕೆ.ಪಾಟೀಲ್, ಕೆ.ವೆಂಕಟೇಶ್​, ಲಕ್ಷ್ಮೀ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ರಹೀಂ ಖಾನ್​, ತಿಮ್ಮಾಪುರ, S.S.ಮಲ್ಲಿಕಾರ್ಜುನ, ಎನ್​.ಎಸ್​.ಬೋಸರಾಜು, ಶರಣಬಸಪ್ಪ ದರ್ಶನಾಪುರಗೆ ಸಚಿವ ಸ್ಥಾನ ಕೈತಪ್ಪಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್​​, ಪರಿಷತ್​​ ಸಭಾಪತಿ ಹೆಸರನ್ನು ಪ್ರಕಟಿಸಿದ ಎಐಸಿಸಿ

11 ಮಂದಿ ಮಾತ್ರ ಹೊಸಬರು

ಒಟ್ಟೂ ಸಂಪುಟದಲ್ಲಿ ಕೇವಲ 11 ಮಂದಿ ಮಾತ್ರ ಹೊಸಬರಿಗೆ ಕಾಂಗ್ರೆಸ್​​ ಹೈಕಮಾಂಡ್​​ ಮಣೆ ಹಾಕಿದ್ದು, 22 ಮಂದಿಗೆ ಪುನಃ ಸಚಿವ ಸ್ಥಾನ ನೀಡಲಾಗಿದೆ. ಸಚಿವ ಸಂಪುಟದಲ್ಲಿ ಶೇಕಡಾ 60ರಷ್ಟು ಹೊಸಬರು ಮತ್ತು ಶೇಕಡಾ 40ರಷ್ಟು ಹಳಬರಿಗೆ ಅವಕಾಶ ನೀಡಲಾಗುತ್ತೆ ಎಂಬ ಮಾತುಗಳು ಕೇಳಿಬಂದಿದ್ದ ಹೊರತಾಗಿಯೂ ಒಟ್ಟಾರೆ ಸಂಪುಟದಲ್ಲಿ ಹೊಸಬರಿಗೆ ಅವಕಾಶ ಕಡಿಮೆ ಸಿಕ್ಕಿದೆ. ಮೂವರು ಮಹಿಳೆಯರಿಗೆ ಮಂತ್ರಿಗಿರಿ ನೀಡುವ ಬಗ್ಗೆ ಒತ್ತಡವಿತ್ತಾದರೂ ಕೊಟ್ಟಿರೋದು ಕೇವಲ ಒಬ್ಬರಿಗೆ ಎಂಬ ಮಾತುಗಳು ಕೇಳಿಬಂದಿವೆ.

ತನ್ವೀರ್​​ ಸೇಠ್​​ ಬೆಂಬಲಿಗರ ಪ್ರತಿಭಟನೆ

ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದ ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್​ ಸೇಠ್​​ಗೆ ಈ ಬಾರಿಯೂ ನಿರಾಸೆಯಾಗಿದ್ದು, ಹೈಕಮಾಂಡ್​​ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಹೀಗಾಗಿ ಶಾಸಕರ ಬೆಂಬಲಿಗರು ಸಿಟ್ಟಾಗಿದ್ದು, ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನ ಸಿಗದಿದ್ದಕ್ಕೆ ನಿರಾಸೆ ಆಗಿದೆ ಎಂದು ತನ್ವೀರ್ ಸೇಠ್ ಕೂಡ ತಿಳಿಸಿದ್ದು, ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಅವಕಾಶ ಸಿಕ್ಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಹಾಲು ಕರೆಯುವುದನ್ನು ಕಲಿಯುವ ಪ್ರಯತ್ನದಲ್ಲಿ ವಿದೇಶಿ ಮಹಿಳೆ, ವೈರಲ್ ಆಯ್ತು ದೃಶ್ಯ – Kannada News | A foreign lady who came to India and learned how to milk a cow.

ಹಳ್ಳಿ ಬದುಕು ನಿಜಕ್ಕೂ ಸುಂದರ. ಆದರೆ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಮಕ್ಕಳು ಓದು ಮುಗಿಯುತ್ತಿದ್ದಂತೆ ನಗರದತ್ತ ಹೊರಟು ಬಿಡುತ್ತಾರೆ. ಹೌದು, ಹಳ್ಳಿಯಲ್ಲಿ ಇರಲು ಇಷ್ಟ ಪಡುವುದೇ ಕಡಿಮೆ. ಆದರೆ ಇದೀಗ ವಿದೇಶಿ ಮಹಿಳೆಯೊಬ್ಬಳು (foreign woman) ಹಳ್ಳಿಯ ಜನರ ಕಾಯಕವನ್ನು ಮೆಚ್ಚಿಕೊಂಡಿದ್ದಾಳೆ. ಭಾರತದ ಹಳ್ಳಿಯೊಂದಕ್ಕೆ ಭೇಟಿ ನೀಡಿದ ವಿದೇಶಿ ಮಹಿಳೆ ದನದ ಹಾಲು ಕರೆಯುವ ಸಾಹಸಕ್ಕೆ ಕೈ ಹಾಕಿದ್ದಾಳೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ.

ಮೈಕ್ (Meike) ಎಂಬ ಮಹಿಳೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಹಾಲು ಕರೆಯುವುದನ್ನು ಕಲಿಯುತ್ತಿರುವುದನ್ನು ಕಾಣಬಹುದು. ವ್ಯಕ್ತಿಯೊಬ್ಬ ದನದ ಹಾಲು ಕರೆಯುತ್ತಿರುವುದನ್ನು ಅಚ್ಚರಿ ನೋಡುತ್ತಾ ನಿಂತ ಈ ವಿದೇಶಿ ಮಹಿಳೆ, ಈ ಕೆಲಸವನ್ನು ಕಲಿಯುವ ಪ್ರಯತ್ನಕ್ಕೆ ಮುಂದಾಗಿದ್ದಾಳೆ. ಅಲ್ಲೇ ನಿಂತಿದ್ದ ಮಹಿಳೆ ಈ ವಿದೇಶಿ ಮಹಿಳೆಗೆ ಹಂತ ಹಂತವಾಗಿ ಹಾಲು ಕರೆಯುವುದು ಹೇಗೆಂದು ವಿವರಿಸಿರುವುದನ್ನು ಕಾಣಬಹುದು. ಕೊನೆಗೆ ದನದ ಕೆಚ್ಚಲಿಗೆ ಕೈ ಹಾಕುತ್ತಿದ್ದಂತೆ ದನವು ಕಾಲೆತ್ತಿ ಒದೆದಿದೆ. ದನದ ರಿಯಾಕ್ಷನ್‌ ಕಂಡು ಈ ವಿದೇಶಿ ಮಹಿಳೆ ಭಯಗೊಂಡಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಭಾರತೀಯರ ಆತ್ಮೀಯ ಆತಿಥ್ಯಕ್ಕೆ ಮನಸೋತ ವಿದೇಶಿ ಮಹಿಳೆ

ಈ ವಿಡಿಯೋ 22 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕೆಲಸ ಯಾವುದಾದರೇನು ಕಲಿಯುವ ಮನಸ್ಸು ಮುಖ್ಯ ಎಂದಿದ್ದಾರೆ. ಇನ್ನೊಬ್ಬರು, ಒದೆಯುತ್ತದೆ, ಸ್ವಲ್ಪ ಹುಷಾರಾಗಿರಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಜಕ್ಕೂ ಇದು ಅದ್ಭುತವಾದ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಸ್ತೆ ಇರುವಲ್ಲೆಲ್ಲಾ ಪಾದಚಾರಿ ಮಾರ್ಗ ಕಡ್ಡಾಯ: ಸುಪ್ರೀಂ ಮಹತ್ವದ ಆದೇಶ, ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ – Kannada News | Supreme Court Mandates Pedestrian Paths: Centre Directed to Ensure Walkers Safety

ನವದೆಹಲಿ, ಆಗಸ್ಟ್​ 03: ದೇಶಾದ್ಯಂತ ರಸ್ತೆಗಳಿರುವ ಪ್ರತಿಯೊಂದು ಕಡೆಯೂ ಪಾದಚಾರಿಗಳಿಗೆ ಪ್ರತ್ಯೇಕ ಹಾಗೂ ಅತಿಕ್ರಮಣ-ಮುಕ್ತ ಸ್ಥಳಗಳನ್ನು ಖಚಿತಪಡಿಸುವಂತೆ ಸುಪ್ರೀಂ ಕೋರ್ಟ್(Supereme Court) ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠವು ಈ ಆದೇಶ ನೀಡಿದ್ದು, ಪಾದಚಾರಿಗಳು ಯಾವುದೇ ಮೋಟಾರು ವಾಹನಗಳ ಬೆದರಿಕೆಯಿಲ್ಲದೆ ಮುಕ್ತವಾಗಿ ಸಂಚರಿಸುವ ವಾತಾವರಣ ನಿರ್ಮಿಸುವುದು ಸರ್ಕಾರದ ಜವಾಬ್ದಾರಿ ಎಂದು ನೆನಪಿಸಿದೆ.

ಸರಳ ಮಾರ್ಗಗಳ ಬಳಕೆಗೆ ಸೂಚನೆ: ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರಿಗೆ ಸೂಚನೆ ನೀಡಿದ ಪೀಠವು, ಪಾದಚಾರಿ ಮಾರ್ಗ ರಚಿಸಲು ಭಾರಿ ಹೂಡಿಕೆ ಅಥವಾ ಕಾಂಕ್ರೀಟ್ ನಿರ್ಮಾಣಗಳೇ ಬೇಕಿಲ್ಲ. ಕನಿಷ್ಠ ಪಕ್ಷ ಹಗ್ಗಗಳು ಅಥವಾ ಬಣ್ಣದ ಲೈನ್‌ಗಳನ್ನು ಬಳಸಿ ರಸ್ತೆಯ ಪಕ್ಕದಲ್ಲಿ ಪಾದಚಾರಿ ಜಾಗವನ್ನು ಸ್ಪಷ್ಟವಾಗಿ ಪ್ರತ್ಯೇಕಿಸಿ ಎಂದು ಸಲಹೆ ನೀಡಿದೆ.

ಅಧಿಕಾರಿಗಳಿಗೆ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಲು ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠವು ಎರಡು ವಾರಗಳ ಕಾಲಾವಕಾಶ ನೀಡಿದ್ದು, ಮುಂದಿನ ವಿಚಾರಣೆಯನ್ನು ಎರಡು ವಾರಗಳ ನಂತರ ಮುಂದೂಡಿದೆ.

ಜೂನ್ 19 ರಂದು ನೀಡಿದ್ದ ತನ್ನ ಐತಿಹಾಸಿಕ ತೀರ್ಪನ್ನು ನೆನಪಿಸಿದ ಸುಪ್ರೀಂ ಕೋರ್ಟ್, ಗುರುತಿಸಲಾದ ಪಾದಚಾರಿ ಮಾರ್ಗಗಳಲ್ಲಿ ನಡೆಯುವ ಹಕ್ಕು ಭಾರತೀಯ ಸಂವಿಧಾನದ ಆರ್ಟಿಕಲ್ 21 ಹಾಗೂ ಆರ್ಟಿಕಲ್ 19(1)(ಡಿ) ಅಡಿಯಲ್ಲಿ ಮೂಲಭೂತ ಹಕ್ಕಾಗಿದೆ ಎಂದು ಪ್ರತಿಪಾದಿಸಿದೆ. ರಸ್ತೆಯಲ್ಲಿ ಮೋಟಾರು ವಾಹನಗಳಿಗಿಂತ ಕಾಲ್ನಡಿಗೆಯಲ್ಲಿ ಸಾಗುವ ಪಾದಚಾರಿಗಳ ಹಕ್ಕಿಗೆ ಮೊದಲ ಆದ್ಯತೆ ಇರಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಮತ್ತಷ್ಟು ಓದಿ: ಕಾವೇರಿ ನೀರು ಹಂಚಿಕೆ ವಿವಾದ; ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಡಿಎಂಕೆ

ಹೆಚ್ಚುತ್ತಿರುವ ರಸ್ತೆ ಅಪಘಾತಗಳು: ಭಾರತದಲ್ಲಿ ಪ್ರತಿ ವರ್ಷ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಮೃತಪಡುವವರ ಪೈಕಿ ಶೇ. 15 ರಿಂದ 20 ರಷ್ಟು ಜನರು ಪಾದಚಾರಿಗಳಾಗಿದ್ದಾರೆ. ನಗರ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಅಕ್ರಮ ಅಂಗಡಿಗಳ ಅತಿಕ್ರಮಣ ಮತ್ತು ವಾಹನ ಪಾರ್ಕಿಂಗ್ ಇದಕ್ಕೆ ಪ್ರಮುಖ ಕಾರಣವಾಗಿದೆ.

ಸುಪ್ರೀಂ ಕೋರ್ಟ್‌ನ ಈ ಆದೇಶವು ದೇಶದ ಪ್ರಮುಖ ಮಹಾನಗರಗಳಾದ ಬೆಂಗಳೂರು, ದೆಹಲಿ, ಮುಂಬೈ ಮುಂತಾದ ಕಡೆಗಳಲ್ಲಿ ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವುಗೊಳಿಸಲು ಸ್ಥಳೀಯ ಪಾಲಿಕೆಗಳಿಗೆ (ಬಿಬಿಎಂಪಿ, ಎಂಸಿಡಿ ) ಕಾನೂನಾತ್ಮಕ ಒತ್ತಡ ತರಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಯುಪಿಐ ಪಾವತಿಗೆ ಹೆಚ್ಚುವರಿ ಭದ್ರತೆ; ಯೆಸ್ ಎಂದರಷ್ಟೇ ಪೇಮೆಂಟ್; ವಂಚನೆ, ತಪ್ಪಾದ ಹಣ ವರ್ಗಾವಣೆ ತಡೆಯಲು ಈ ಕ್ರಮಕ್ಕೆ ಯೋಚನೆ – Kannada News | UPI payments may need extra yes authentication before money leaves, Banks proposal to RBI

ನವದೆಹಲಿ, ಆಗಸ್ಟ್ 3: ಭಾರತದಲ್ಲಿ ಅತಿಹೆಚ್ಚು ಬಳಕೆಯಾಗುವ ಡಿಜಿಟಲ್ ಪೇಮೆಂಟ್ ಸಿಸ್ಟಂ ಯುಪಿಐ (UPI). ಸುರಕ್ಷಿತ ಹಾಗೂ ಸುಲಭ ಪಾವತಿಯಲ್ಲಿ ಜನರ ವಿಶ್ವಾಸ ಹೊಂದಿರುವ ಯುಪಿಐನಲ್ಲಿ ಈಗ ಹೆಚ್ಚುವರಿ ಸುರಕ್ಷತಾ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಆನ್​ಲೈನ್ ವಂಚನೆಗಳ ಸಾಧ್ಯತೆಯನ್ನು ಕಡಿಮೆ ಮಾಡಲು ಯುಪಿಐನಲ್ಲಿ ಹೆಚ್ಚುವರಿ ಸೆಕ್ಯೂರಿಟಿ ಲೇಯರ್ ತರಬೇಕೆಂದು ಬ್ಯಾಂಕುಗಳು ಪ್ರಸ್ತಾಪಿಸಿವೆ. ಇದು ಜಾರಿಯಾದಲ್ಲಿ, ಹಣ ವರ್ಗಾವಣೆ ಆಗುವ ಮೊದಲು ಹೆಚ್ಚುವರಿ ದೃಢೀಕರಣ ಕೇಳಲಾಗುತ್ತದೆ. ಅಂದರೆ, ಹಣ ಕಳುಹಿಸಿದ ಬಳಿಕ ಅಂತಿಮವಾಗಿ ಪೇಮೆಂಟ್​ಗೆ Yes ಅಥವಾ Cancel ಆಯ್ಕೆಗಳನ್ನು ಬಳಕೆದಾರರಿಗೆ ನೀಡಬಹುದು.

ಈ ಹೊಸ ಬದಲಾವಣೆಯ ಪ್ರಮುಖ ಕಾರಣಗಳು ಏನು?

  • ವಂಚನೆ ತಡೆಗಟ್ಟಲು: ಆನ್‌ಲೈನ್ ವಂಚನೆಗಳು ಮತ್ತು ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಬಳಕೆದಾರರ ಹಣವು ಸುರಕ್ಷಿತವಾಗಿರಲು ಈ ಹೆಚ್ಚುವರಿ ಭದ್ರತಾಪದರವನ್ನು ಪರಿಚಯಿಸಲಾಗುತ್ತಿದೆ.
  • ತಪ್ಪಾದ ಪಾವತಿಗಳಿಗೆ ಕಡಿವಾಣ: ಕೆಲವೊಮ್ಮೆ ತರಾತುರಿಯಲ್ಲಿ ಅಥವಾ ಗಮನಿಸದೆ ಮಾಡುವ ಯುಪಿಐ ವರ್ಗಾವಣೆಗಳನ್ನು ತಡೆಯಲು ಇದು ಸಹಕಾರಿಯಾಗಿದೆ.
  • ಬಳಕೆದಾರರ ಸಮ್ಮತಿಗೆ ಹೆಚ್ಚಿನ ಆದ್ಯತೆ: ಹಣವು ನೇರವಾಗಿ ಖಾತೆಯಿಂದ ಖಾತೆಗೆ ವರ್ಗಾವಣೆಯಾಗುವ ಮುನ್ನ ಬಳಕೆದಾರರಿಗೆ ಮತ್ತೊಮ್ಮೆ ಯೋಚಿಸಲು ಮತ್ತು ಅಂತಿಮ ಅನುಮೋದನೆ ನೀಡಲು ಇದು ಅವಕಾಶ ಕಲ್ಪಿಸುತ್ತದೆ.

ಇದನ್ನೂ ಓದಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ 5G ಭಾರತದಲ್ಲಿ ಬಿಡುಗಡೆ: ಬೆಲೆ 25,999 ರೂನಿಂದ ಆರಂಭ; ಬಲವಾದ ಬ್ಯಾಟರಿ, ಉತ್ತಮ ಡಿಸ್​ಪ್ಲೇ ಇರುವ ಫೋನ್

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಎಂದಿನಂತೆ ನೀವು ಯುಪಿಐ ಪಿನ್ (UPI PIN) ನಮೂದಿಸಿದ ಬಳಿಕವೂ, ಹಣ ಕಡಿತಗೊಳ್ಳುವ ಅಂತಿಮ ಹಂತದಲ್ಲಿ ಒಂದು ಹೆಚ್ಚುವರಿ ಪಾಪ್-ಅಪ್ ಅಥವಾ ದೃಢೀಕರಣ ಸಂದೇಶ ಬರಬಹುದು. ಅಲ್ಲಿ ಮತ್ತೊಮ್ಮೆ ವಹಿವಾಟಿನ ವಿವರಗಳನ್ನು ಪರಿಶೀಲಿಸಿ ಅನುಮೋದನೆ (Yes) ನೀಡಿದ ನಂತರವೇ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗುತ್ತದೆ.

ಎಲ್ಲಾ ಪೇಮೆಂಟ್​ಗೂ ಈ ದೃಢೀಕರಣ ಕೇಳಲಾಗುವುದಿಲ್ಲ. ಬ್ಯಾಂಕುಗಳಿಗೆ ಅನುಮಾನಾಸ್ಪದವೆನಿಸುವ ಟ್ರಾನ್ಸಾಕ್ಷನ್ ಎಂದನಿಸಿದಾಗ ಇದನ್ನು ಕೇಳಲಾಗುತ್ತದೆ. ಇದರಿಂದ ತಪ್ಪಾಗಿ ಹಣ ಪಾವತಿ ಮಾಡುವ ಬಳಕೆದಾರರಿಗೆ ತಮ್ಮ ತಪ್ಪಿನ ಅರಿವು ಹೊಂದಲು ಸಮಯಾವಕಾಶ ಸಿಕ್ಕಂತಾಗುತ್ತದೆ. ಇದು ಈ ಹೊಸ ಸೆಕ್ಯೂರಿಟಿ ಲೇಯರ್ ಜೋಡಣೆಯ ಉದ್ದೇಶ ಎನ್ನಲಾಗಿದೆ.

ಇದನ್ನೂ ಓದಿ: ದೀರ್ಘಾವಧಿ ಹೂಡಿಕೆ ಸ್ಕೀಮ್ ಪಿಪಿಎಫ್​ನಲ್ಲಿ ಮಾಡಬಾರದ 5 ತಪ್ಪುಗಳಿವು

ಡಿಜಿಟಲ್ ವಹಿವಾಟುಗಳನ್ನು ಹೆಚ್ಚು ಸುರಕ್ಷಿತವಾಗಿಸಲು ಮತ್ತು ಗ್ರಾಹಕರ ಹಣಕ್ಕೆ ಹೆಚ್ಚಿನ ರಕ್ಷಣೆ ಒದಗಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹಾಗೂ ಸಂಬಂಧಿತ ನಿಯಂತ್ರಕ ಸಂಸ್ಥೆಗಳು ಹಾಗೂ ಬ್ಯಾಂಕುಗಳು ಇಂತಹ ಸುರಕ್ಷತಾ ಕ್ರಮಗಳ ಕುರಿತು ಚಿಂತನೆ ನಡೆಸುತ್ತಿವೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಬ್ಯಾಂಕುಗಳು ಇಂಥದ್ದೊಂದು ಪ್ರಸ್ತಾವವನ್ನು ಆರ್​ಬಿಐಗೆ ಸಲ್ಲಿಸಿದೆ. ಈ ಕುರಿತು ಅಧಿಕೃತ ಮಾರ್ಗಸೂಚಿಗಳು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಲೋಕಭವನದಲ್ಲಿ ಸಚಿವರ ಪ್ರಮಾಣವಚನ: ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗಗಳೇನು? ಇಲ್ಲಿದೆ ವಿವರ – Kannada News | Bengaluru Traffic Restrictions Today: Roads Closed Near Lok Bhavan for Karnataka Ministers’ Oath Ceremony

ಬೆಂಗಳೂರು ಸಂಚಾರ ನಿರ್ಬಂಧ (ಸಾಂದರ್ಭಿಕ ಚಿತ್ರ)Image Credit source: @blrcitytraffic

ಬೆಂಗಳೂರು, ಆಗಸ್ಟ್ 3: ಲೋಕಭವನದಲ್ಲಿ ಇಂದು ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ (Karnataka Ministers’ Oath Ceremony) ನಡೆಯಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ (Bengaluru) ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕೆಲ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಮಧ್ಯಾಹ್ನ 2ರಿಂದ ರಾತ್ರಿ 10ರವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೂ ನಿಷೇಧ ಹೇರಲಾಗಿದೆ. ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

  • ಕಾರ್ಯಕ್ರಮಕ್ಕೆ ಅನುಮತಿ ಹೊಂದಿರುವ ವಾಹನಗಳನ್ನು ಹೊರತುಪಡಿಸಿ, ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‌ನಿಂದ ಸಿ.ಟಿ.ಒ ಜಂಕ್ಷನ್ ಹಾಗೂ ಅಲ್ಲಿಂದ ಲೋಕಭವನದವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
  • ಅದೇ ರೀತಿ ಬಾಳೇಕುಂದ್ರಿ ಜಂಕ್ಷನ್‌ನಿಂದ ಅಂಬೇಡ್ಕರ್ ರಸ್ತೆ ಕಡೆಗೆ ಬರುವ ವಾಹನಗಳು, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿ ಕೆ.ಆರ್. ಸರ್ಕಲ್‌ನಿಂದ ಕಾಫಿ ಬೋರ್ಡ್ ಜಂಕ್ಷನ್‌ವರೆಗೆ ಸಂಚರಿಸುವ ವಾಹನಗಳಿಗೂ ನಿರ್ಬಂಧ ಅನ್ವಯಿಸಲಿದೆ.
  • ಕ್ವೀನ್ಸ್ ಜಂಕ್ಷನ್‌ನಿಂದ ಸಿ.ಟಿ.ಒ ಕಡೆಗೆ ಹಾಗೂ ಸೇಂಟ್ ಮಾರ್ಕ್ಸ್ ರಸ್ತೆಯಿಂದ ಸಿ.ಟಿ.ಒ ಜಂಕ್ಷನ್ ಕಡೆಗೆ ಬರುವ ವಾಹನಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ.

ಬೆಂಗಳೂರು ಟ್ರಾಫಿಕ್ ಪೊಲೀಸ್ ಎಕ್ಸ್ ಸಂದೇಶ

ಸಂಚಾರಕ್ಕೆ ಪರ್ಯಾಯ ಮಾರ್ಗಗಳು ಯಾವುವು?

  • ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‌ನಿಂದ ಸಿ.ಟಿ.ಒ ಮತ್ತು ಲೋಕಭವನದ ಕಡೆಗೆ ತೆರಳುವವರು ಶಿವಾಜಿನಗರದ ಕಡೆ ತಿರುಗಿ ಅನಿಲ್ ಕುಂಬ್ಳೆ ಜಂಕ್ಷನ್ ಮೂಲಕ ಸಂಚರಿಸಬಹುದಾಗಿದೆ.
  • ಕ್ವೀನ್ಸ್ ರಸ್ತೆ ಮತ್ತು ಶಿವಾಜಿನಗರ ಕಡೆಯಿಂದ ಬರುವ ವಾಹನಗಳು ಬಾಳೇಕುಂದ್ರಿ ಜಂಕ್ಷನ್‌ನಲ್ಲಿ ಕನ್ನಿಂಗ್‌ಹ್ಯಾಮ್ ರಸ್ತೆ ಮೂಲಕ ತೆರಳಬಹುದು.
  • ಕೆ.ಆರ್. ಸರ್ಕಲ್‌ನಿಂದ ಕಾಫಿ ಬೋರ್ಡ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ನೃಪತುಂಗ ರಸ್ತೆ ಬಳಸುವಂತೆ ಸೂಚಿಸಲಾಗಿದೆ. ಕ್ವೀನ್ಸ್ ಜಂಕ್ಷನ್‌ನಿಂದ ಲೋಕಭವನದ ಕಡೆಗೆ ತೆರಳುವ ವಾಹನಗಳು ಅನಿಲ್ ಕುಂಬ್ಳೆ ಹಾಗೂ ಬಿ.ಆರ್.ವಿ ಜಂಕ್ಷನ್ ಮಾರ್ಗವಾಗಿ ಸಂಚರಿಸಬಹುದು.

ಈ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ

ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಲೋಕಭವನ ರಸ್ತೆ, ಎಲ್.ಎಚ್. ರಸ್ತೆ, ಕ್ವೀನ್ಸ್ ರಸ್ತೆ, ಪ್ಯಾಲೇಸ್ ರಸ್ತೆ, ಕಬ್ಬನ್ ಉದ್ಯಾನವನದ ಒಳಭಾಗದ ರಸ್ತೆಗಳು, ಮಿಲ್ಲರ್ ರಸ್ತೆ, ಇನ್‌ಫ್ಯಾಂಟ್ರಿ ರಸ್ತೆ, ಕೆ.ಜಿ. ರಸ್ತೆ, ನೃಪತುಂಗ ರಸ್ತೆ, ಕಸ್ತೂರಿಬಾ ರಸ್ತೆ ಹಾಗೂ ಕಬ್ಬನ್ ರಸ್ತೆ ಸೇರಿದಂತೆ ಸೂಚಿಸಲಾದ ಹಲವು ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ಹೇರಲಾಗಿದೆ.

ಪಾಸ್ ಇರುವ ವಾಹನಗಳಿಗೆ ಪಾರ್ಕಿಂಗ್ ಎಲ್ಲಿ?

  • ಪಾಸ್ ಹೊಂದಿರುವ ವಾಹನಗಳಿಗೆ ವಿಧಾನಸೌಧ ಸಿಮೆಂಟ್ ಪಾರ್ಕಿಂಗ್, ವಿಕಾಸಸೌಧ ಸುತ್ತಮುತ್ತ, ರಾಜಭವನ ಹಿಂಭಾಗದ ಎಲ್.ಎಚ್. ಪಾರ್ಕಿಂಗ್ ಹಾಗೂ ನೆಹರು ತಾರಾಲಯ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
  • ಪಾಸ್ ಇಲ್ಲದ ವಾಹನಗಳಿಗೆ ಕೊಂಡಜ್ಜಿ ಭವನ, ಶಿವಾಜಿನಗರ ಬಸ್ ನಿಲ್ದಾಣದ ಮಲ್ಟಿ ಲೆವೆಲ್ ಪಾರ್ಕಿಂಗ್, ಕಂಠೀರವ ಕ್ರೀಡಾಂಗಣ, ಯು.ಬಿ. ಸಿಟಿ ಪಾರ್ಕಿಂಗ್, ಸರ್ಕಾರಿ ಕಲಾ ಕಾಲೇಜು ಆವರಣ, ಕಾರ್ಪೊರೇಷನ್ ಕಚೇರಿ ಸ್ಥಳ ಹಾಗೂ ಪ್ಯಾಲೇಸ್ ಮೈದಾನದ ಗೇಟ್ ಸಂಖ್ಯೆ 2, 3 ಮತ್ತು 4ರಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ: ಇಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ

ಇದರ ಜೊತೆಗೆ, ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುಪ್ರೀಂ ಕೋರ್ಟ್‌ನಲ್ಲಿ 96,000ಕ್ಕೂ ಹೆಚ್ಚು ಪ್ರಕರಣಗಳು ಬಾಕಿ: 10,000 ಕೇಸ್‌ಗಳು ಒಂದು ದಶಕದಿಂದ ಇತ್ಯರ್ಥವಾಗಿಲ್ಲ – Kannada News | SC Backlog Crisis: 96,000 plus Cases Pending, 10,000 Over Decade Old

ನವದೆಹಲಿ, ಆಗಸ್ಟ್​ 03: ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲೆ ಹೆಚ್ಚುತ್ತಿರುವ ತೀವ್ರ ಒತ್ತಡವನ್ನು ಬಿಂಬಿಸುವ ಆಘಾತಕಾರಿ ಅಂಕಿಅಂಶವೊಂದು ಹೊರಬಿದ್ದಿದೆ. ದೇಶದ ಅತ್ಯುನ್ನತ ನ್ಯಾಯಾಲಯ(Court)ವಾದ ಸುಪ್ರೀಂ ಕೋರ್ಟ್‌ನಲ್ಲಿ 96,000 ಕ್ಕೂ ಹೆಚ್ಚು ಪ್ರಕರಣಗಳು ವಿಚಾರಣೆಗೆ ಕಾಯುತ್ತಿದ್ದು, ಅವುಗಳಲ್ಲಿ 10,000 ಕ್ಕೂ ಹೆಚ್ಚು ಕೇಸ್‌ಗಳು ಕಳೆದ ಒಂದು ದಶಕದಿಂದ ಇತ್ಯರ್ಥವಾಗದೆ ಬಾಕಿ ಉಳಿದಿವೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ರಾಜ್ಯಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದು, ದೇಶಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು ಬಾಕಿ ಇರುವ ಪ್ರಕರಣಗಳ ಸಂಖ್ಯೆ 5.64 ಕೋಟಿಗೆ ತಲುಪಿದೆ ಎಂದು ಬಹಿರಂಗಪಡಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ 26 ಪ್ರಕರಣಗಳು ಕಳೆದ 30 ವರ್ಷಗಳಿಗೂ ಹೆಚ್ಚು ಕಾಲ ಹಾಗೂ 558 ಪ್ರಕರಣಗಳು 20 ವರ್ಷಗಳಿಗೂ ಹೆಚ್ಚು ಕಾಲ ಇತ್ಯರ್ಥವಾಗದೆ ಉಳಿದುಕೊಂಡಿವೆ.

ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (NJDG) ನೀಡಿರುವ ಅಂಕಿಅಂಶಗಳ ಪ್ರಕಾರ, ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ 80,660 ಕ್ಕೂ ಹೆಚ್ಚು ಪ್ರಕರಣಗಳು ಕಳೆದ 30 ವರ್ಷಗಳಿಂದ ಧೂಳು ಹಿಡಿಯುತ್ತಿವೆ.

ಮತ್ತಷ್ಟು ಓದಿ: ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; ಎಸ್‌ಐಟಿ ತನಿಖೆಗೆ ಸುಪ್ರೀಂ ಕೋರ್ಟ್ ಸೂಚನೆ

ನ್ಯಾಯಾಲಯದ ಮೂಲಸೌಕರ್ಯ ಬಲಪಡಿಸಲು, ಇ-ಕೋರ್ಟ್ (e-Courts) ಯೋಜನೆಯಡಿ ಡಿಜಿಟಲೀಕರಣಗೊಳಿಸಲು ಹಾಗೂ ತಂತ್ರಜ್ಞಾನ ಅಳವಡಿಕೆಗೆ ಕೇಂದ್ರ ಸರ್ಕಾರವು 2011 ರಿಂದ ಇದುವರೆಗೆ 9,800 ಕೋಟಿ ರೂ.ಗೂ ಹೆಚ್ಚು ಹಣ ಖರ್ಚು ಮಾಡಿದೆ. ಆದಾಗ್ಯೂ ಹಳೆಯ ಪ್ರಕರಣಗಳ ವಿಲೇವಾರಿ ಗತಿಯು ತೀವ್ರ ವಿಳಂಬದಿಂದ ಸಾಗಿದೆ.

ದೇಶದ ಹೈಕೋರ್ಟ್‌ಗಳು ಮತ್ತು ಅಧೀನ (ಕೆಳ) ನ್ಯಾಯಾಲಯಗಳಲ್ಲಿ ಸಾವಿರಾರು ನ್ಯಾಯಾಧೀಶರು, ನ್ಯಾಯಮೂರ್ತಿಗಳು ಹಾಗೂ ನ್ಯಾಯಾಂಗ ಸಿಬ್ಬಂದಿ ಹುದ್ದೆಗಳು ಭರ್ತಿಯಾಗದೆ ಖಾಲಿ ಇರುವುದು ಪ್ರಕರಣಗಳ ಬಾಕಿಗೆ ಪ್ರಮುಖ ಕಾರಣವಾಗಿದೆ. ಪ್ರಕರಣಗಳ ಶೀಘ್ರ ವಿಲೇವಾರಿಯು ನ್ಯಾಯಾಂಗದ ಪ್ರತ್ಯೇಕ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ ಸಚಿವರು, ವಿಳಂಬಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ.

ಪ್ರಕರಣಗಳ ತಾಂತ್ರಿಕ ಸಂಕೀರ್ಣತೆ ಮತ್ತು ಸಾಕ್ಷ್ಯಾಧಾರಗಳ ಕೊರತೆ

ತನಿಖಾ ಸಂಸ್ಥೆಗಳು, ವಕೀಲರು ಹಾಗೂ ಸಾಕ್ಷಿಗಳ ನಡುವೆ ಸರಿಯಾದ ಸಮನ್ವಯ ಇಲ್ಲದಿರುವುದು

ಸಿಬ್ಬಂದಿ ಹಾಗೂ ಮೂಲಸೌಕರ್ಯಗಳ ಕೊರತೆ

ಭಾರತದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ ಪ್ರಸ್ತುತ ಸುಮಾರು 21 ನ್ಯಾಯಾಧೀಶರುಗಳಿದ್ದಾರೆ. ಆದರೆ 1987 ರ ಕಾನೂನು ಆಯೋಗವು (Law Commission) ಪ್ರತಿ10 ಲಕ್ಷ ಜನರಿಗೆ ಕನಿಷ್ಠ 50 ನ್ಯಾಯಾಧೀಶರು ಇರಬೇಕು ಎಂದು ಶಿಫಾರಸು ಮಾಡಿತ್ತು. ನ್ಯಾಯಾಲಯಗಳಲ್ಲಿ ಪ್ರಕರಣಗಳು ವಿಳಂಬವಾಗುತ್ತಿರುವುದರಿಂದ ದೇಶದ ಜೈಲುಗಳಲ್ಲಿ ಸೂಕ್ತ ತೀರ್ಪು ಬಾರದೆ ಬಂಧನದಲ್ಲಿರುವ ವಿಚಾರಣಾಧೀನ ಕೈದಿಗಳ ಸಂಖ್ಯೆ ಜೈಲುಗಳ ಸಾಮರ್ಥ್ಯಕ್ಕಿಂತ ಶೇ. 130 ರಷ್ಟು ಹೆಚ್ಚಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು? – Kannada News | Priyanka Upendras Detective Teekshana Journey: She explains how Action Challenges

ನಟಿ ಪ್ರಿಯಾಂಕಾ ಉಪೇಂದ್ರ ತಮ್ಮ ಹೊಸ ಚಿತ್ರ ‘ಡಿಟೆಕ್ಟಿವ್ ತೀಕ್ಷ್ಣ’ ಚಿತ್ರದ ಆ್ಯಕ್ಷನ್ ದೃಶ್ಯಗಳ ಅನುಭವ ಹಂಚಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಸಣ್ಣಪುಟ್ಟ ಗಾಯಗಳು ಸಾಮಾನ್ಯವಾದರೂ, ಸುರಕ್ಷತಾ ಕ್ರಮಗಳಿಂದಾಗಿ ಯಾವುದೇ ದೊಡ್ಡ ಅಪಾಯಗಳು ಸಂಭವಿಸಿಲ್ಲ ಎಂದು ಅವರು ತಿಳಿಸಿದರು. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಆದ ಗಾಯದ ಬಗ್ಗೆ ಪ್ರಸ್ತಾಪಿಸಿ, ‘ಆ್ಯಕ್ಷನ್ ದೃಶ್ಯಗಳಲ್ಲಿ ನಟಿಸುವಾಗ 200% ಸುರಕ್ಷತೆ ಅತ್ಯಗತ್ಯ’ ಎಂದು ಪ್ರಿಯಾಂಕಾ ಹೇಳಿದರು.

‘ಮಹಿಳಾ ಕಲಾವಿದರಿಗೆ ಆಕ್ಷನ್ ದೃಶ್ಯಗಳು ದೈಹಿಕ ಮತ್ತು ಮಾನಸಿಕವಾಗಿ ಹೆಚ್ಚು ಸವಾಲು ಎನಿಸುತ್ತವೆ. ಡಿಟೆಕ್ಟಿವ್ ಪಾತ್ರಕ್ಕಾಗಿ ನಾನು ವಿಶೇಷ ತರಬೇತಿ ಪಡೆದಿದ್ದೇನೆ. ಪ್ರಿಯಾಂಕಾ ಚೋಪ್ರಾ ಅವರಂತಹ ನಟಿಯರು ಈಗಲೂ ಆ್ಯಕ್ಷನ್ ದೃಶ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ನಾವೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ದೀರ್ಘಕಾಲ ಸಕ್ರಿಯವಾಗಿರಬಹುದು. ವ್ಯಾಯಾಮ, ಯೋಗ, ಉತ್ತಮ ಆಹಾರ ಮತ್ತು ಒತ್ತಡ ಕಡಿಮೆ ಮಾಡಿಕೊಳ್ಳುವುದು ಪ್ರತಿಯೊಬ್ಬರ ಆರೋಗ್ಯಕ್ಕೆ ಅತಿ ಮುಖ್ಯ’ ಎಂದು ಪ್ರಿಯಾಂಕಾ ಉಪೇಂದ್ರ ಕಿವಿಮಾತು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್​​, ಪರಿಷತ್​​ ಸಭಾಪತಿ ಹೆಸರನ್ನು ಪ್ರಕಟಿಸಿದ ಎಐಸಿಸಿ – Kannada News | Karnataka Cabinet Expansion: AICC Names GS Patil as Assembly Speaker, Salim Ahmed as Council Chairman

ವಿಧಾನ ಸಭೆಯ ನೂತನ ಸ್ಪೀಕರ್​​, ಪರಿಷತ್​​ ಸಭಾಪತಿ ಹೆಸರು ಪ್ರಕಟ

ಬೆಂಗಳೂರು, ಆಗಸ್ಟ್​​ 03: ಬಹುನಿರೀಕ್ಷಿತ ಸಿಎಂ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಕೂಡಿಬಂದಿದ್ದು, ನೂತನ ಸಚಿವರು ಇಂದು (ಆಗಸ್ಟ್​​ 03) ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರ ಜೊತೆಗೆ ವಿಧಾನ ಸಭೆಯ ನೂತನ ಸ್ಪೀಕರ್​​, ಡೆಪ್ಯೂಟಿ ಸ್ಪೀಕರ್​​ ಹಾಗೂ ವಿಧಾನ ಪರಿಷತ್​​ ಸಭಾಪತಿ ಮತ್ತು ಉಪ ಸಭಾಪತಿಗಳ ಹೆಸರನ್ನೂ ಎಐಸಿಸಿ ಅಂತಿಮಗೊಳಿಸಿದೆ. ವಿಧಾನಸಭೆ ಸ್ಪೀಕರ್​ ಆಗಿ ಗದಗ ಜಿಲ್ಲೆ ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ್​​ ನೇಮಕವಾಗಿದ್ದರೆ, ಡೆಪ್ಯೂಟಿ ಸ್ಪೀಕರ್​​ ಆಗಿ ಕೊಡಗು ಜಿಲ್ಲೆ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅಧಿಕಾರ ಸ್ವೀಕರಿಸಲಿದ್ದಾರೆ. ಉಳಿದಂತೆ ವಿಧಾನಪರಿಷತ್​ ಸಭಾಪತಿಯಾಗಿ ಸಲೀಂ ಅಹ್ಮದ್ ಮತ್ತು ಉಪ ಸಭಾಪತಿಯಾಗಿ ಉಮಾಶ್ರೀ ಅವರನ್ನು ನೇಮಿಸಲಾಗಿದೆ.

ಹಿಂದಿನ ಸ್ಪೀಕರ್​​, ಡೆಪ್ಯೂಟಿ ಸ್ಪೀಕರ್​​ ಇಬ್ಬರೂ ಈಗ ಸಚಿವರು!

ಹಿಂದಿನ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸ್ಪೀಕರ್​​ ಆಗಿದ್ದ ಯು.ಟಿ. ಖಾದರ್​​ ಅದಾಗಲೇ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡೆಪ್ಯೂಟಿ ಸ್ಪೀಕರ್​ ಆಗಿದ್ದ ರುದ್ರಪ್ಪ ಲಮಾಣಿ ಕೂಡ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆ, ತಮ್ಮ ಹಾಲಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸೂಚಿಸಿರೋದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ: ಇಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ

ಹಾಲಿ ಸಭಬಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ?

ಇನ್ನು ಪರಿಷತ್​​ ಸಭಾಪತಿಯಾಗಿ ಹಾಲಿ ಬಸವರಾಜ ಹೊರಟ್ಟಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆಯಾದರೂ ಎಐಸಿಸಿಯ ಹೊಸ ನಿರ್ಧಾರದಿಂದಾಗಿ ಅವರು ಹುದ್ದೆಗೆ ರಾಜೀನಾಮೆ ನೀಡುವುದು ಬಹುತೇಕ ದಟ್ಟವಾಗಿದೆ. ಸ್ಥಾನ ತ್ಯಜಿಸುವಂತೆ ರಾಜ್ಯ ಸರ್ಕಾರ ಅವರ ಮೇಲೆ ಒತ್ತಡ ಹೇರಿರುವ ಬಗ್ಗೆ ಈ ಹಿಂದೆ ವದಂತಿಗಳು ಹರಿದಾಡಿದ್ದವಾದರೂ ಹೊರಟ್ಟಿ ಅದನ್ನು ನಿರಾಕರಿಸಿದ್ದರು. ಆದರೆ ಕಾಂಗ್ರೆಸ್​​ನ ಕೆಲ ನಾಯಕರು ಮಾತ್ರ ಬಿಜೆಪಿಯಿಂದ ಆಯ್ಕೆಯಾಗಿರುವ ಹೊರಟ್ಟಿಯವರು ಮೆಜಾರಿಟಿ ಇಲ್ಲದಿದ್ದಾಗ ರಾಜೀನಾಮೆ ಕೊಡುವುದು ಒಳ್ಳೆಯದು. ಬಿಜೆಪಿಯಿಂದ ಆಯ್ಕೆಯಾದವರನ್ನ ನಾವು ಒಪ್ಪಲು ಸಾಧ್ಯವಿಲ್ಲ ಎಂದಿದ್ದರು.

ಚುನಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಪರವಾಗಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ತಮ್ಮ ಸ್ಥಾನಕ್ಕೆ ಮೊನ್ನೆಯಷ್ಟೇ ರಾಜೀನಾಮೆ ಘೋಷಿಸಿದ್ದ ಕಾರಣ, ಖಾಲಿ ಇರುವ ಆ ಸ್ಥಾನಕ್ಕೂ ಉಮಾಶ್ರೀ ಅವರನ್ನು ನೇಮಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:23 pm, Mon, 3 August 26

Source link

ಸತತ 10 ಎಸೆತಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಅಮಿರ್! – Kannada News | Mohammad Amir’s 10 Ball Magic Seals Thrilling 5 Run Win for Trent Rockets

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ‘ದಿ ಹಂಡ್ರೆಡ್‘ ಲೀಗ್​ ಟೂರ್ನಿಯಲ್ಲಿ ಟ್ರೆಂಟ್ ರಾಕೆಟ್ಸ್ ತಂಡ ರೋಚಕ ಜಯ ಸಾಧಿಸಿದೆ. ಈ ರೋಚಕ ಗೆಲುವಿನ ರೂವಾರಿ ಮೊಹಮ್ಮದ್ ಅಮಿರ್. ನಾಟಿಂಗ್​ಹ್ಯಾಮ್​ನ ಟ್ರೆಂಟ್ ಬಿಡ್ಜ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸನ್​ರೈಸರ್ಸ್ ಲೀಡ್ಸ್ ಹಾಗೂ ಟ್ರೆಂಟ್ ರಾಕೆಟ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಟ್ರೆಂಟ್ ರಾಕೆಟ್ಸ್ ತಂಡದ ನಾಯಕ ಸ್ಯಾಮ್ ಬಿಲ್ಲಿಂಗ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟ್ರೆಂಟ್ ರಾಕೆಟ್ಸ್ ತಂಡವು 100 ಎಸೆತಗಳಲ್ಲಿ 4 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 146 ರನ್​ಗಳು ಮಾತ್ರ.

147 ರನ್​ಗಳ ಗುರಿ ಬೆನ್ನತ್ತಿದ ಸನ್​ರೈಸರ್ಸ್ ಲೀಡ್ಸ್ ತಂಡವು 80 ಎಸೆತಗಳ ಮುಕ್ತಾಯದ ವೇಳೆಗೆ 111 ರನ್​ ಕಲೆಹಾಕಿದ್ದರು. ಅದರಂತೆ ಕೊನೆಯ 20 ಎಸೆತಗಳಲ್ಲಿ ಕೇವಲ 35 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ದಾಳಿಗಿಳಿದ ಮೊಹಮ್ಮದ್ ಅಮಿರ್ ಸತತ 10 ಎಸೆತಗಳನ್ನು ಎಸೆದು ನೀಡಿದ್ದು ಕೇವಲ 10 ರನ್​ಗಳು ಮಾತ್ರ. ಇದರ ನಡುವೆ ಹ್ಯಾರಿ ಬ್ರೂಕ್ (46) ಹಾಗೂ ಮಿಚೆಲ್ ಮಾರ್ಷ್ (41) ಅವರ ವಿಕೆಟ್​ಗಳನ್ನು ಸಹ ಪಡೆದರು.

ಮೊಹಮ್ಮದ್ ಅಮಿರ್ ಅವರ ಈ ಮಾರಕ ದಾಳಿಯಿಂದ ಕಂಗೆಟ್ಟ ಟ್ರೆಂಟ್ ರಾಕೆಟ್ಸ್ ತಂಡವು ಸೋಲಿನತ್ತ ಮುಖ ಮಾಡಿತು. ಅಂತಿಮವಾಗಿ 100 ಎಸೆತಗಳಲ್ಲಿ 4 ವಿಕೆಟ್ ಕಳೆದುಕೊಂಡು 141 ರನ್​ಗಳಿಸುವ ಮೂಲಕ 5 ರನ್​ಗಳಿಂದ ಸೋಲೊಪ್ಪಿಕೊಂಡಿತು. ಈ ರೋಚಕ ಗೆಲುವಿನೊಂದಿಗೆ ಟ್ರೆಂಟ್ ರಾಕೆಟ್ಸ್ ತಂಡವು ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದೆ.

ಸತತ 10 ಎಸೆತಗಳು:

‘ದಿ ಹಂಡ್ರೆಡ್’ ನಿಯಮದ ಪ್ರಕಾರ ಬೌಲರ್ ಒಬ್ಬರಿಗೆ ಸತತವಾಗಿ 10 ಎಸೆತಗಳನ್ನು ಬೌಲ್ ಮಾಡಲು ಅವಕಾಶವಿರುತ್ತದೆ. ಪಂದ್ಯ ಕೈಜಾರುತ್ತಿರುವುದನ್ನು ಅರಿತ ಟ್ರೆಂಟ್ ರಾಕೆಟ್ಸ್ ತಂಡದ ನಾಯಕ ಸ್ಯಾಮ್ ಬಿಲ್ಲಿಂಗ್, ಚೆಂಡನ್ನು ಅನುಭವಿ ವೇಗಿ ಮೊಹಮ್ಮದ್ ಅಮಿರ್​ ಕೈಗಿಟ್ಟರು. ಅಮಿರ್ ಎಸೆದ ಆ 10 ಎಸೆತಗಳು ಪಂದ್ಯದ ಚಿತ್ರಣವನ್ನೇ ಬದಲಿಸಿದವು.

ಅಮಿರ್ ತಮ್ಮ ಮೊದಲ 4 ಎಸೆತಗಳಲ್ಲಿ ನೀಡಿದ್ದು ಕೇವಲ 5 ರನ್​ಗಳು ಮಾತ್ರ. ಮುಂದಿನ 5 ಎಸೆತಗಳಲ್ಲಿ ರನ್ ನಿಯಂತ್ರಣ ಮುಂದುವರಿಸಿದ ಅಮಿರ್, ಅಪಾಯಕಾರಿ ಮಿಚೆಲ್ ಮಾರ್ಷ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಜಮ್ಮು-ಕಾಶ್ಮೀರ ವೇಗಿ ಎಂಟ್ರಿ

ಅಲ್ಲದೆ ಸತತ 10 ಎಸೆತಗಳಲ್ಲಿ ಕೇವಲ 10 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್ ಅಮಿರ್ ಟ್ರೆಂಟ್ ರಾಕೆಟ್ಸ್ ತಂಡಕ್ಕೆ ರೋಚಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

Source link

Exit mobile version