Video: ನೆಮ್ಮದಿಯಿಂದ ಚಹಾ ಕುಡಿಯಲು ಆಗ್ತಾ ಇಲ್ಲ; ಕಂದಮ್ಮನ ಆರೈಕೆಯನ್ನು ನೆನೆದು ಭಾವುಕಳಾದ ತಾಯಿ

Video: ನೆಮ್ಮದಿಯಿಂದ ಚಹಾ ಕುಡಿಯಲು ಆಗ್ತಾ ಇಲ್ಲ; ಕಂದಮ್ಮನ ಆರೈಕೆಯನ್ನು ನೆನೆದು ಭಾವುಕಳಾದ ತಾಯಿ

ತಾಯಿ (mother) ಅಂದರೆ ತ್ಯಾಗ, ಪ್ರೀತಿಗೆ ಇನ್ನೊಂದು ಹೆಸರು. ಮಕ್ಕಳ ಆರೈಕೆ ಹಾಗೂ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಬಹುಮುಖ್ಯ. ಮಕ್ಕಳು ಬೆಳೆದು ಸ್ವಲ್ಪ ದೊಡ್ಡವರಾಗುವವರೆಗೂ ತಾಯಿ ತನ್ನ ನಿದ್ದೆ, ಊಟ, ತಿಂಡಿ ಎಲ್ಲವನ್ನೂ ತ್ಯಾಗ ಮಾಡಬೇಕು. ಇದೀಗ ಎರಡು ವರ್ಷದ ಮಗುವಿನ ಆರೈಕೆ ಮಾಡುತ್ತಿರುವ ತಾಯಿಯೊಬ್ಬಳು ತನ್ನ ಕಂದಮ್ಮ ತನ್ನನ್ನು ಬಿಟ್ಟು ಒಂದು ನಿಮಿಷ ಕೂಡ ಇರಲಾರದು. ನನಗೆ ಊಟ, ತಿಂಡಿ ಮಾಡಲು ಸಮಯವಿಲ್ಲ ಎಂದು ಕಣ್ಣೀರು ಹಾಕಿರುವ ವಿಡಿಯೋ ವೈರಲ್‌ ಆಗಿದೆ. ಈ ಕ್ಲಿಪಿಂಗ್‌ ನೋಡಿದ ನೆಟ್ಟಿಗರು ಈ ಮಹಿಳೆಗೆ ಧೈರ್ಯ ತುಂಬಿದ್ದಾರೆ.

@babymodel_jashit ಹೆಸರಿಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡ ಜಶಿತ್ ಸಿಂಗ್ ನರುಲಾ ತಾಯ್ತನದ ಅನುಭವದ ಜತೆಗೆ ತನ್ನ ಪ್ರಸ್ತುತ ಸ್ಥಿತಿಯನ್ನು ವಿವರಿಸಿರುವುದನ್ನು ಕಾಣಬಹುದು. ತನ್ನ ಕಂದಮ್ಮ ಸ್ನಾನಗೃಹಕ್ಕೆ ಹೋಗುವುದರಿಂದ ಹಿಡಿದು ಊಟ ಮಾಡುವವರೆಗೆ ಒಂದು ಕ್ಷಣವು ನನ್ನನ್ನು ಬಿಟ್ಟಿರುವುದಿಲ್ಲ. ನನಗೆ ನೆಮ್ಮದಿಯಿಂದ ಚಹಾ ಕೂಡ ಕುಡಿಯಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ತನ್ನೊಂದಿಗೆ ಹೆಚ್ಚು ಕಾಲ ಇರುತ್ತದೆ, ಈ ಪುಟಾಣಿಯೂ ತಂದೆ ಹಾಗೂ ಅಜ್ಜನ ಬಳಿ ಹೋಗಲು ನಿರಾಕರಿಸುತ್ತಾನೆ. ಅವನನ್ನು ನಾನೇ ನೋಡಿಕೊಳ್ಳಬೇಕು. ಇದು ಬೆಳವಣಿಗೆಯ ಹಂತ ಎನ್ನುವುದು ತಿಳಿದಿದ್ದರೂ, ಇದು ಸರಳವಾದ ದೈನಂದಿನ ಕೆಲಸಗಳನ್ನು ಪೂರ್ಣಗೊಳಿಸಲು ಕಷ್ಟಕರವಾಗುತ್ತಿದೆ. ನನ್ನ ಮಗು ಟಿವಿ ನೋಡುವುದಿಲ್ಲ ಅಥವಾ ಮೊಬೈಲ್ ಬಳಸುವುದಿಲ್ಲ. ಯಾವಾಗಲೂ ಆಟ ಆಡುತ್ತದೆ ಎಂದು ಈ ಮಹಿಳೆ ಹೇಳಿದ್ದಾಳೆ.

ಪ್ರತಿಯೊಬ್ಬ ತಾಯಿಯೂ ಮನುಷ್ಯಳೇ ಆಗಿರುವುದರಿಂದ ಈ ಹಂತದಲ್ಲಿ ದುಃಖದಂತಹ ಭಾವನೆಗಳು ಇರುತ್ತವೆ, ಇದು ಸಹಜ ಕೂಡ. ಅಂತಹ ಭಾವನೆಗಳನ್ನು ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆಯೇ ಎಂಬುದು ಅವರು ಎಷ್ಟು ಬೆಂಬಲ ನೀಡುತ್ತಾರೆ ಹಾಗೂ ಅರ್ಥಮಾಡಿಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ವಿವರಿಸಿದ್ದಾಳೆ.

ಇದನ್ನೂ ಓದಿ: ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ದಯವಿಟ್ಟು ಟಿವಿ ಆನ್ ಮಾಡಿ, ಅವನಿಗೆ 30 ನಿಮಿಷಗಳ ಕಾಲ ಸುರಕ್ಷಿತ ಕಾರ್ಯಕ್ರಮ ನೋಡಲು ಬಿಡಿ. ನೀವೇ ಒಂದು ಕಪ್ ಚಹಾ ಸವಿಯಿರಿ ಎಂದಿದ್ದಾರೆ. ಮತ್ತೊಬ್ಬರು, ಮಕ್ಕಳ ಆರೈಕೆಯೇ ಹಾಗೆ, ಎಲ್ಲವನ್ನು ತ್ಯಾಗ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನನಗೆ ನಿಮ್ಮ ಭಾವನೆ ಅರ್ಥವಾಗುತ್ತದೆ. ಆದರೆ ನೀವು ಈ ವಿಚಾರವನ್ನು ಇಂಟರ್ನೆಟ್‌ನಲ್ಲಿ ಹಾಕುವಷ್ಟು ಧೈರ್ಯಶಾಲಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಹೇಳಿಕೆಯಿಂದ ಕಾಂಗ್ರೆಸ್​​ಗೆ ಡ್ಯಾಮೇಜ್​​: ರಾಮಲಿಂಗಾರೆಡ್ಡಿ ಏನಂದ್ರು?

ಬೆಂಗಳೂರು, ಮಾರ್ಚ್​​ 13: ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್​​ ಬಗ್ಗೆ ಸ್ವಪಕ್ಷ ಶಾಸಕ ಇಕ್ಬಾಲ್​​ ಹುಸೇನ್​​ ನೀಡಿದ್ದ ಹೇಳಿಕೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಇಕ್ಬಾಲ್ ಹುಸೇನ್ ಮಾತ್ರವಲ್ಲ, ಯಾರೇ ಆಗಲಿ ಪಕ್ಷದ ಆಂತರಿಕ ವಿಚಾರಗಳನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಚರ್ಚಿಸಬಾರದು. ಯಾವುದೇ ಸಮಸ್ಯೆಗಳಿದ್ದರೂ, ಮುಖ್ಯಮಂತ್ರಿಗಳು ಅಥವಾ ಉಪಮುಖ್ಯಮಂತ್ರಿಗಳೊಂದಿಗೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು. ಮಾಧ್ಯಮಗಳ ಮುಂದೆ ಮಾತನಾಡುವುದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಜೆಟ್​​​ ಸಮಾಧಾನ ತಂದಿಲ್ಲ. ಆಯವ್ಯಯ ಮಂಡನೆಗೂ ಮುನ್ನವೇ ಸಿಎಂ ಭೇಟಿಯಾಗಿ ಕ್ಷೇತ್ರಗಳ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದ್ದೆ. ಹೀಗಾಗಿ ಹೆಚ್ಚಿನ ಅನುದಾನದ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ ಎಂದು ರಾಮನಗರ ಶಾಸಕ ಇಕ್ಬಾಲ್​​ ಹುಸೇನ್​ ಹೇಳಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಿಎಂ ಕಿಸಾನ್ 22ನೇ ಕಂತಿನ ಹಣ ಇಂದು ಬಿಡುಗಡೆ; ಈ ರೀತಿಯ ಫಲಾನುಭವಿಗಳಿಗಿರೋದಿಲ್ಲ ಯೋಜನೆ ಭಾಗ್ಯ

ಗುವಾಹಟಿ, ಮಾರ್ಚ್ 13: ರೈತರಿಗೆಂದು ಕೇಂದ್ರ ಸರ್ಕಾರ ರೂಪಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan scheme) 22ನೇ ಕಂತಿನ ಹಣ ಇಂದು ಶುಕ್ರವಾರ ಬಿಡುಗಡೆ ಆಗುತ್ತಿದೆ. ಅಸ್ಸಾಮ್ ರಾಜಧಾನಿಯಲ್ಲಿ ನಡೆಯುವ ಕಾರ್ಯಕ್ರಮದ ವೇಳೆ ಪ್ರಧಾನಿಗಳು ಹಣ ಬಿಡುಗಡೆ ಮಾಡಲಿದ್ದಾರೆ. 9 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂ ಹಣ ನೇರವಾಗಿ ಜಮೆಯಾಗಲಿದೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿ 2025ರ ನವೆಂಬರ್ 19ರಂದು 21ನೇ ಕಂತಿನ ಹಣ ಬಿಡುಗಡೆ ಆಗಿತ್ತು. 9 ಕೋಟಿಗೂ ಅಧಿಕ ರೈತರಿಗೆ ಒಟ್ಟು 18,000 ಕೋಟಿ ರೂ ಹಣವನ್ನು ನೇರವಾಗಿ ಕೊಡಲಾಗಿತ್ತು. ಅದಕ್ಕೂ ಹಿಂದಿನ 20ನೇ ಕಂತಿನ ಹಣವನ್ನು ಆಗಸ್ಟ್ ತಿಂಗಳಲ್ಲಿ 9.8 ಕೋಟಿ ರೈತರಿಗೆ ನೀಡಲಾಗಿತ್ತು.

ಇದನ್ನೂ ಓದಿ: ಫೆಬ್ರುವರಿ 2026ರಲ್ಲಿ ರೀಟೇಲ್ ಹಣದುಬ್ಬರ ಶೇ. 3.21ಕ್ಕೆ ಏರಿಕೆ; ಆರ್​ಬಿಐ ಮಿತಿಯಲ್ಲಿ ಬೆಲೆ ಏರಿಕೆ

ಈ ಬಾರಿ ಹಲವು ಲಕ್ಷ ಫಲಾನುಭವಿಗಳ ಸಂಖ್ಯೆ ಇಳಿಕೆ

ಕಳೆದ ಮೂರು ತಿಂಗಳಲ್ಲಿ ಸರ್ಕಾರ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಮರು-ಕೆವೈಸಿ ಮಾಡಲು ತಿಳಿಸಿತ್ತು. ಕೆವೈಸಿ ಅಪ್​ಡೇಟ್ ಮಾಡಲು ಮೂರ್ನಾಲ್ಕು ಮಾರ್ಗಗಳ ಆಫರ್ ಕೊಡಲಾಗಿತ್ತು. ಸಮೀಪದ ರೈತ ಸಂಪರ್ಕ ಕೇಂದ್ರ, ಪಿಎಂ ಕಿಸಾನ್ ಮೊಬೈಲ್ ಆ್ಯಪ್, ಪಿಎಂ ಕಿಸಾನ್ ವೆಬ್​ಸೈಟ್​ನಲ್ಲಿ ಕೆವೈಸಿ ಅಪ್​ಡೇಟ್ ಮಾಡಬಹುದು. ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದು, ಈ ಹಿಂದೆ ಎಲ್ಲಾ ಕಂತುಗಳನ್ನು ಪಡೆದಿರುವ ಫಲಾನುಭವಿಗಳು ರೀ-ಕೆವೈಸಿ ಮಾಡದೇ ಇದ್ದರೆ 22ನೇ ಕಂತಿನ ಹಣ ಸಿಗುವುದಿಲ್ಲ. ವರದಿಗಳ ಪ್ರಕಾರ, ಈ ಬಾರಿ 22ನೇ ಕಂತಿನ ಹಣದಿಂದ ವಂಚಿತರಾಗುವ ಫಲಾನುಭವಿಗಳ ಸಂಖ್ಯೆ ಹಲವು ಲಕ್ಷಗಳೆನ್ನಲಾಗಿದೆ.

ಈ ಕೆಳಗಿನ ಫಲಾನುಭವಿಗಳಿಗೆ ಸಿಗೋದಿಲ್ಲ ಹಣ

ಇಕೆವೈಸಿ ಅಪ್ಡೇಟ್ ಮಾಡದಿದ್ದವರಿಗೆ ಪಿಎಂ ಕಿಸಾನ್ ಹಣ ಸಿಕ್ಕೋದಿಲ್ಲ. ಫಲಾನುಭವಿಗಳ ಕುಟುಂಬದಲ್ಲಿ ಯಾರಾದರೂ ಕೂಡ ಸರ್ಕಾರಿ ಅಧಿಕಾರಿಯೋ, ಶಾಸಕರೋ, ಸಂಸದರೋ, ಜಿಪಂ ಸದಸ್ಯರೋ, ವೃತ್ತಿಪರರೋ, ಐಟಿ ಪಾವತಿದಾರರೋ ಇದ್ದರೆ ಅಂಥವರು ರೈತರಾಗಿದ್ದಾಗ್ಯೂ ಯೋಜನೆಗೆ ಅರ್ಹರಿರುವುದಿಲ್ಲ.

ಇದನ್ನೂ ಓದಿ: ಪೆಟ್ರೋಲ್, ಎಲ್​ಪಿಜಿ ಕೊರತೆ ಇಲ್ಲ: ಸಂಸತ್​ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

ಮತ್ತೊಂದು ಗಮನಾರ್ಹ ಸಂಗತಿ ಎಂದರೆ 2019ರ ಫೆಬ್ರುವರಿ 1ರ ನಂತರ ಜಮೀನು ಮಾಲಕತ್ವ ಪಡೆದ ರೈತರಿಗೆ ಪಿಎಂ ಕಿಸಾನ್ ಹಣ ಸಿಕ್ಕೋದಿಲ್ಲ. ಒಂದೇ ಕುಟುಂಬದ ಇಬ್ಬರು ಸದಸ್ಯರು ಪ್ರತ್ಯೇಕ ಜಮೀನು ಮಾಲಕತ್ವ ಹೊಂದಿದ್ದರೂ ಒಬ್ಬರು ಮಾತ್ರವೇ ಯೋಜನೆಗೆ ಅರ್ಹರಾಗಿರುವುದು.

ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್ ಲಿಂಕ್: pmkisan.gov.in/

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇದೆಂಥಾ ಕಾಲ ಬಂತಪ್ಪಾ… ಹೋಟೆಲ್​ಗಳ ಬಿಲ್​ನಲ್ಲಿ ಜಿಎಸ್​ಟಿ ಜತೆ ಸೇರ್ಪಡೆಯಾಯ್ತು ಗ್ಯಾಸ್ ಶುಲ್ಕ!

ಬೆಂಗಳೂರು, ಮಾರ್ಚ್ 13: ನಾವು ಯಾವುದೇ ದುಬಾರಿ ಹೋಟೆಲ್‌ಗೆ ಹೋದಾಗ ಬಿಲ್​ನ ಕೊನೆಯಲ್ಲಿ ಜಿಎಸ್‌ಟಿ (GST) ಶುಲ್ಕವನ್ನೂ ಸೇರಿಸುವುದು ಸಾಮಾನ್ಯ. ಆದರೆ ಈಗ, ಅದರ ಜೊತೆ ಮತ್ತೊಂದು ಶುಲ್ಕವನ್ನು ಸೇರಿಸುತ್ತಿದ್ದಾರೆ. ದೇಶಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ (Commercial cylinder) ಪೂರೈಕೆ ವ್ಯತ್ಯಯ, ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ವ್ಯವಸ್ಥಾಪಕರು ಗ್ರಾಹಕರ ಮೇಲೆ ಆ ಹೊರೆಯನ್ನು ಹಾಕುತ್ತಿದ್ದಾರೆ. ಗ್ಯಾಸ್ ಪೂರೈಕೆ ಸಮಸ್ಯೆ ಹೆಸರಿನಲ್ಲಿ ತಿಂಡಿಯ ಬಿಲ್‌ಗೆ ಹೆಚ್ಚುವರಿ ‘ಗ್ಯಾಸ್ ಶುಲ್ಕ (Gas Fee)’ ಸೇರಿಸುತ್ತಿದ್ದಾರೆ. ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಈ ರೀತಿಯ ಘಟನೆ ಬೆಳಕಿಗೆ ಬಂದಿದೆ.

ಚೆನ್ನೈಯಲ್ಲಿ ತಿಂಡಿ ತಿನ್ನಲು ಹೋಟೆಲ್‌ಗೆ ತೆರಳಿದ ಗ್ರಾಹಕರೊಬ್ಬರು ಇಡ್ಲಿ ಮತ್ತು ವಡಾ ತಿಂದಿದ್ದಾರೆ. ನಂತರ ಬಿಲ್ ಕೇಳಿದಾಗ, ಹೋಟೆಲ್ ಮ್ಯಾನೇಜರ್ ಬಿಲ್‌ನಲ್ಲಿ ತಿಂಡಿ ಜೊತೆಗೆ ಗ್ಯಾಸ್ ಶುಲ್ಕವನ್ನು ಜಿಎಸ್‌ಟಿ ಜತೆ ಸೇರಿಸಿದ್ದಾರೆ. ‘ಗ್ಯಾಸ್ ಶುಲ್ಕ – 9.52 ರೂ.’ ಎಂದು ನಮೂದಾಗಿದ್ದುದನ್ನು ನೋಡಿ ಗ್ರಾಹಕ ಆಘಾತಕ್ಕೊಳಗಾಗಿದ್ದಾರೆ. ನಂತರ, ಅವರು ಬಿಲ್ ಪಾವತಿಸಿ ಅದರ ಫೋಟೋ ತೆಗೆದು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ, ‘‘ಇದು ವಿಚಾರ. ಇಂಥಾ ದಿನ ಬರಬಹುದೆಂದು ನಾವು ಊಹಿಸಿದ್ದೆವಾ’’ ಎಂದು ಅವರು ಪ್ರಶ್ನಿಸಿದ್ದಾರೆ. ಈ ಫೋಟೊ ಸದ್ಯ ವೈರಲ್ ಆಗುತ್ತಿದೆ.

ಹೋಟೆಲ್​ ಬಿಲ್​ನಲ್ಲಿ ಗ್ಯಾಸ್ ಶುಲ್ಕ ನಮೂದಾಗಿರುವ ಫೋಟೊ

ಇದೀಗ ಹೋಟೆಲ್​​ಗಳ ಬಿಲ್​​​ನಲ್ಲಿ ಗ್ಯಾಸ್ ಶುಲ್ಕ ಸೇರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಇನ್ನು ಕೆಲವು ಹೋಟೆಲ್​​ಗಳ ಬಿಲ್​ಗಳಲ್ಲಿ ಗ್ಯಾಸ್ ಶುಲ್ಕ ಎಂದು ನಮೂದಿಸದಿದ್ದರೂ, ಎಲ್​​ಪಿಜಿ ಪೂರೈಕೆ ಸಮಸ್ಯೆಯ ನೆಪವೊಡ್ಡಿ ಗ್ರಾಹಕರಿಂದ ಹೆಚ್ಚು ದುಡ್ಡು ವಸೂಲಿ ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿಯೂ ಅದೇ ಕಥೆ!

ಚೆನ್ನೈಯಲ್ಲಿ ಮಾತ್ರವಲ್ಲದೆ ದೇಶದಾದ್ಯಂತದ ಅನೇಕ ಪ್ರಮುಖ ನಗರಗಳಲ್ಲಿಯೂ ಈ ಪರಿಸ್ಥಿತಿ ಇದೆ. ಬೆಂಗಳೂರಿನಲ್ಲಿ ಕೂಡ ಇದೇ ರೀತಿಯ ಘಟನೆ ಬೆಳಕಿಗೆ ಬಂದಿದೆ. ನಗರದ ಹೋಟೆಲ್‌ಗೆ ಊಟಕ್ಕೆ ಹೋದ ಗ್ರಾಹಕನಿಗೆ ಗ್ಯಾಸ್ ಚಾರ್ಜ್ ಹೆಸರಿನಲ್ಲಿ ಹೆಚ್ಚುವರಿಯಾಗಿ 30 ರೂ. ಶುಲ್ಕ ವಿಧಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಗ್ಯಾಸ್ ಕೊರತೆಯಿಂದಾಗಿ ಪಿಜಿಗಳಲ್ಲಿ ಆಹಾರವನ್ನು ನೀಡುತ್ತಿಲ್ಲ ಮತ್ತು ಇದರಿಂದಾಗಿ ಹೋಟೆಲ್​​ಗೆ ಹೋದರೆ ಅವರು ಜನರನ್ನು ಲೂಟಿ ಮಾಡುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ಎಕ್ಸ್​​​ನಲ್ಲಿ ಹೋಟೆಲ್ ಬಿಲ್ ಪೋಸ್ಟ್ ಮಾಡಿ, ನಗರ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ: ಎಲ್​ಪಿಜಿ ಸಿಲಿಂಡರ್ ಕೊರತೆ ಬೆನ್ನಲ್ಲೇ ಅರಣ್ಯ ಇಲಾಖೆ ಹೈ ಅಲರ್ಟ್​ ಆಗಿದ್ಯಾಕೆ ಗೊತ್ತಾ?

ಸದ್ಯ ಹೋಟೆಲ್​ ಬಿಲ್​ಗಳಲ್ಲಿ ಗ್ಯಾಸ್ ಶುಲ್ಕಗಳಿಗೆ ಸಂಬಂಧಿಸಿದ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಇವುಗಳನ್ನು ನೋಡಿದ ನೆಟಿಜನ್‌ಗಳು ಹೋಟೆಲ್ ಆಡಳಿತ ಮಂಡಳಿಗಳ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಕೊರತೆ ಇದ್ದರೆ, ಅವರು ಮುಂಚಿತವಾಗಿ ಸ್ಟಾಕ್ ತರಬೇಕಿತ್ತು. ಅದು ಬಿಟ್ಟು ಆ ಹೊರೆಯನ್ನು ಗ್ರಾಹಕರ ಮೇಲೆ ಏಕೆ ಹಾಕಬೇಕು ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಇರಾನ್-ಇಸ್ರೇಲ್ ಯುದ್ಧ, ಮಧ್ಯಪ್ರಾಚ್ಯ ಸಂಘರ್ಷ ಭಾರತದ ಹೋಟೆಲ್​​ಗಳ ಬಿಲ್​ಗಳಲ್ಲಿ ‘ಗ್ಯಾಸ್ ಶುಲ್ಕ’ ಸೇರ್ಪಡೆಗೆ ಕಾರಣವಾಗಿದ್ದು ಸುಳ್ಳಲ್ಲ!

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಬಾಲಕಿ ಗೇಮ್ ಆಡುತ್ತಿದ್ದಾಗ ಏಕಾಏಕಿ ಮೊಬೈಲ್ ಸ್ಫೋಟ

ಮೊಬೈಲ್ ಫೋನ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವಾಗ ಯಾವಾಗಲೂ ಜಾಗರೂಕರಾಗಿರುವುದು ಮುಖ್ಯ.ಜಾಗರೂಕತೆಯ ಹೊರತಾಗಿಯೂ, ಕೆಲವೊಮ್ಮೆ ಜನರನ್ನು ದಿಗ್ಭ್ರಮೆಗೊಳಿಸುವ ಘಟನೆಗಳು ಸಂಭವಿಸುತ್ತವೆ.ಒಬ್ಬ ಪುಟ್ಟ ಹುಡುಗಿ ತನ್ನ ಮೊಬೈಲ್ ಫೋನ್‌ನಲ್ಲಿ ಆಟವಾಡುತ್ತಿರುವುದನ್ನು ಕಾಣಬಹುದು, ಆದರೆ ಕೆಲವೇ ಸೆಕೆಂಡುಗಳ ನಂತರ ಮೊಬೈಲ್ ಸ್ಫೋಟಗೊಳ್ಳುತ್ತದೆ. ಕೂಡಲೇ ಮೊಬೈಲ್ ಕೆಳಗೆ ಹಾಕಿ ಆಕೆ ಓಡಿ ಹೋಗಿದ್ದಾಳೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ಈ 10 ಸೆಕೆಂಡುಗಳ ವೀಡಿಯೊವನ್ನು 257,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪುಸ್ತಕ ಅನುವಾದಕ್ಕೂ ಬಂತು AI: ತಂತ್ರಜ್ಞಾನದ ಮೂಲಕ ಭಾಷಾಂತರಗೊಂಡ ಮೊದಲ ಬುಕ್​​ ಮಾ.15ರಂದು ಬಿಡುಗಡೆ

ಬೆಂಗಳೂರು, ಮಾರ್ಚ್​​ 13: ಬೇರೆ ಬೇರೆ ಭಾಷೆಗಳಲ್ಲಿರುವ ಪುಸ್ತಕ ಓದುಗರಿಗೆ ಅವರದ್ದೇ ಆದ ಭಾಷೆಯಲ್ಲಿ ಸಿಕ್ಕಿದಾಗ ಅದು ಹೆಚ್ಚಿನ ಸಂತ್ರಪ್ತಿ ನೀಡಬಲ್ಲದು. ಜೊತೆಗೆ ಬಹು ಭಾಷೆಗಳ ಅರಿವಿಲ್ಲದವರಿಗೂ ಆ ವಿಷಯವನ್ನು ಸುಲಭವಾಗಿ ಮುಟ್ಟಿಸಬಹುದು ಎಂಬ ಕಾರಣಕ್ಕೆ ಅದೆಷ್ಟೋ ಪುಸ್ತಗಳು ಈ ವರೆಗೆ ಕನ್ನಡಕ್ಕೆ ಅನುವಾದಗೊಂಡಿವೆ. ಓದುಗರ ಮನಸ್ಸನ್ನೂ ಗೆದ್ದಿವೆ. ಆದರೆ ಈ ಅನುವಾದದ ಕೆಲಸ ಬಹಳ ಕಠಿಣವಾದುದ್ದು. ಮೂಲ ಬರಹಗಾರರು ಹೇಳಿರುವ ವಿಷಯವನ್ನು ಅನರ್ಥಗೊಳಿಸದೆ ಮತ್ತೊಂದು ಭಾಷೆಗೆ ಭಟ್ಟಿ ಇಳಿಸಬೇಕಾಗುತ್ತದೆ. ಹೀಗಾಗಿ ಪುಸ್ತಕವೊಂದರ ಅನುವಾದಕ್ಕೆ ಬಹಳ ಸಮಯವೂ ಹಿಡಿಯುತ್ತದೆ. ಆದರೆ ಜಗತ್ತಿನ ಎಲ್ಲ ಕ್ಷೇತ್ರಗಳಿಗೂ ಲಗ್ಗೆ ಇಟ್ಟಿರುವ ಕೃತಕ ಬುದ್ಧಿಮತ್ತೆ (Artificial Intelligence – AI) ಈ ವಿಚಾರದಲ್ಲಿಯೂ ಈಗ ಸದ್ದು ಮಾಡಿದೆ.

ಹೌದು, ಎಐ (AI) ಬಳಸಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಲಾದ ‘My Name is Gauhar Jaan’ ಪುಸ್ತಕದ ಕನ್ನಡ ಆವೃತ್ತಿ ಮಾ.15ರ ಭಾನುವಾರ ಬಿಡುಗಡೆಯಾಗಲಿದ್ದು, ಮೂಲ ಪುಸ್ತಕವನ್ನು ವಿಕ್ರಮ್ ಸಂಪತ್ ವರೆದಿದ್ದಾರೆ. ಇದು ಭಾರತದ ಮೊದಲ ಸೆಲೆಬ್ರಿಟಿ ಗಾಯಕಿ ಗೌಹರ್ ಜಾನ್ ಅವರ ಜೀವನ ಕಥೆಯನ್ನು ಒಳಗೊಂಡಿದೆ. ಈ ಪುಸ್ತಕದ ಕನ್ನಡ ಅನುವಾದದ ಕೆಲಸಕ್ಕಾಗಿ ಬೆಂಗಳೂರು ಮೂಲದ ‘ನಾವ್ AI’ (Naav AI) ಕಂಪನಿಯು ಅಭಿವೃದ್ಧಿಪಡಿಸಿರುವ ಅನುವಾದ ಸಾಧನವನ್ನು ಬಳಸಲಾಗಿದೆ. ಸಾಮಾನ್ಯವಾಗಿ ಒಂದು ಪುಸ್ತಕವನ್ನು ಅನುವಾದಿಸಲು ಮೂರುರಿಂದ ನಾಲ್ಕು ತಿಂಗಳು ಬೇಕಾಗಬಹುದು. ಆದರೆ ಎಐನಿಂದಾಗಿ ಈ ಪುಸ್ತಕದ ಮೊದಲ ಕರಡು ಕೇವಲ 30 ನಿಮಿಷಗಳಲ್ಲಿ ಸಿದ್ಧವಾಗಿದೆ. ನಂದರ ಅವುಗಳ ಪರಿಶೀಲನೆ, ತಿದ್ದುಪಡಿ ಕೆಲಸಗಳಿಗೆ ಒಂದು ತಿಂಗಳ ಸಮಯ ಬೇಕಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: NCERT ಪುಸ್ತಕ ವಿವಾದ; ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯ ಬರೆದ ಲೇಖಕರಿಗೆ ಸುಪ್ರೀಂ ಕೋರ್ಟ್ ನಿಷೇಧ

ಅನುವಾದದ ವೇಳೆ ಎದುರಾದ ಸವಾಲುಗಳೇನು?

ಇನ್ನು ಎಐ ಅನುವಾದ ಸಂದರ್ಭ, ಶೈಲಿ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳೂ ಕಂಡುಬಂದಿವೆ. ಕನ್ನಡದಲ್ಲಿ ಒಂದು ಪದಕ್ಕೆ ಸಂದರ್ಭದ ಮೇಲೆ ಅವಲಂಬಿಸಿ ಹಲವು ಅರ್ಥಗಳು ಇರಬಹುದು. ಹೀಗಿದ್ದರೂ ಎಐ ಆಯ್ಕೆ ಮಾಡಿದ ಅರ್ಥವು ಕೆಲವೊಮ್ಮೆ ಪರಿಸ್ಥಿತಿಗೆ ಸರಿಹೊಂದಿದೆ. ಪುಸ್ತಕದ ಸಂಗೀತ ಸಂಬಂಧ ವಿಚಾರಗಳನ್ನು ಹೊಂದಿರುವ ಕಾರಣ ಕೆಲ ಸವಾಲುಗಳು ಉದ್ಭವಿಸಿದ್ದು, ರಾಗಗಳ ಉಲ್ಲೇಖಗಳು, ಅವುಗಳ ಹೆಸರು ಮತ್ತು ಅಕ್ಷರ ವಿನ್ಯಾಸಗಳನ್ನು ತಿದ್ದುಪಡಿ ಮಾಡಲಾಗಿದೆ. ಒಟ್ಟಾರೆಯಾಗಿ ಎಐ ಮಾನವ ಅನುವಾದಕರನ್ನು ಬದಲಿಸುವುದಕ್ಕಿಂತ ಸಹಾಯ ಮಾಡುವ ಸಾಧನವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ಕನ್ನಡ ಓದುಗರಿಗೆ ವರದಾನ’

ಇನ್ನುಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಹಿತಿ ವಸುಧೇಂದ್ರ, ಭಾಷೆಯ ಗಡಿಯನ್ನು ದಾಟುವುದು ಇಂದಿನ ಅವಶ್ಯಕತೆಗಳಲ್ಲಿ ಒಂದು. ಇದು ಕನ್ನಡದ ಓದುಗರಿಗೆ ವರದಾನವಾಗಿಯೇ ಪರಿಣಮಿಸುತ್ತದೆ. ಹೇಗೆ ಜಗತ್ತಿನ ಎಲ್ಲಾ ಭಾಷೆಯ ಸಿನಿಮಾಗಳನ್ನೂ ನಮ್ಮ ಜನ ಕನ್ನಡದಲ್ಲಿಯೇ ನೋಡಲು ಶುರು ಮಾಡಿದ್ದಾರೋ, ಅದೇ ರೀತಿ ಜಗತ್ತಿನ ಸಾಹಿತ್ಯವೆಲ್ಲವೂ ನಮಗೆ ದಕ್ಕುವ ದಿನಗಳು ದೂರವಿಲ್ಲವೆನ್ನಿಸುತ್ತದೆ. ಓಟಿಟಿಯಲ್ಲಿ ಸಿನಿಮಾ ಆಯ್ಕೆ ಮಾಡಿಕೊಳ್ಳುವಾಗ ಭಾಷೆಯನ್ನು ನಿರ್ಧರಿಸುವ ಬಟನ್ ಒತ್ತುತ್ತೇವಲ್ಲವೆ, ಹಾಗೆಯೇ ಅಮೆಜಾನ್‌ನಲ್ಲಿ ಪುಸ್ತಕ ಆರ್ಡರ್ ಮಾಡುವಾಗ ‘ಭಾಷೆ’ಯ ಆಯ್ಕೆಯನ್ನು ಮಾಡಿಕೊಳ್ಳುವ ದಿನಗಳು ದೂರವಿಲ್ಲ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಎಲ್​ಪಿಜಿ ಸಿಲಿಂಡರ್ ಕೊರತೆ ಬೆನ್ನಲ್ಲೇ ಅರಣ್ಯ ಇಲಾಖೆ ಹೈ ಅಲರ್ಟ್​ ಆಗಿದ್ಯಾಕೆ ಗೊತ್ತಾ?

ಬೆಂಗಳೂರು, ಮಾರ್ಚ್​ 13: ಇರಾನ್, ಇಸ್ರೇಲ್ ಯುದ್ಧದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ದೇಶದೆಲ್ಲೆಡೆ ಎಲ್​ಪಿಜಿ ಸಿಲಿಂಡರ್ ಕೊರತೆ (LPG cylinder crisis) ತೀವ್ರವಾಗಿದೆ. ವಾಣಿಜ್ಯ ಸಿಲಿಂಡರ್ ಸಿಗದೆ ಅದೆಷ್ಟೋ ಹೋಟೆಲ್​ಗಳು ಸಮಸ್ಯೆಗೀಡಾಗಿವೆ. ಅಡುಗೆ ಮಾಡಲು ಇಂಧನವಿಲ್ಲದೆ ಹೋಟೆಲ್​ಗಳು ಬಾಗಿಲು ಮುಚ್ಚುವ ಹಂತಕ್ಕೆ ತಲುಪಿವೆ. ಈ ಸಮಸ್ಯೆಗೆ ಪರಿಹಾರವಾಗಿ ಕೆಲವು ಕಡೆ ಎಲ್​ಪಿಜಿ ಸಿಲಿಂಡರ್ ಬದಲಾಗಿ ಸೌದೆ ಬಳಸಿಯೂ ಅಡುಗೆ ಮಾಡಲಾಗುತ್ತಿದೆ. ಇದರಿಂದಾಗಿ ನಗರದಲ್ಲಿ ಮರದ ಇಂಧನದ ಬೇಡಿಕೆ ಹೆಚ್ಚಾಗಿದೆ. ಹೀಗೆ ಅಕ್ರಮವಾಗಿ ಮರ ಕಡಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಇಲಾಖೆ ಸಜ್ಜಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೌದೆ ಒಲೆ ಬಳಸುವವರಿಗೆ ಅರಣ್ಯ ಇಲಾಖೆ ಎಚ್ಚರಿಕೆ

ಅನೇಕ ಹೋಟೆಲ್‌ಗಳು, ಪಿಜಿಗಳು ಹಾಗೂ ಇತರ ಅಡುಗೆ ಕೇಂದ್ರಗಳು ಮತ್ತೆ ಸಾಂಪ್ರದಾಯಿಕ ಸೌದೆ ಒಲೆಯತ್ತ ಮುಖ ಮಾಡುತ್ತಿರುವುದರಿಂದ ಮರದ ಬಳಕೆ ಹೆಚ್ಚುತ್ತಿರುವುದು ಕಂಡುಬಂದಿದೆ. ಸಧ್ಯದ ಮಟ್ಟಿಗೆ ಇದು ಇಂಧನ ಸಮಸ್ಯೆಗೆ ಸಿಕ್ಕ ದೊಡ್ಡ ಪರಿಹಾರವೆನಿಸಿದರೂ ಈ ಪರಿಸ್ಥಿತಿ ಮುಂದುವರಿದರೆ ಅಕ್ರಮವಾಗಿ ಮರ ಕಡಿಯುವ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ Iran-Israel War: ಯುದ್ಧದ ಪರಿಣಾಮ ಯಾದಗಿರಿಯ 28 ರೈಸ್ ಮಿಲ್‌ಗಳಿಗೆ ಭಾರೀ ಹೊಡೆತ!

ಗುರುವಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಈ ಕುರಿತು ಆದೇಶ ಹೊರಡಿಸಿದ್ದು, ಅರಣ್ಯ ಪ್ರದೇಶಗಳಲ್ಲಷ್ಟೇ ಅಲ್ಲದೆ ಸರ್ಕಾರದ ಜಾಗಗಳು, ಉದ್ಯಾನವನಗಳು ಹಾಗೂ ಇತರ ಹಸಿರು ಪ್ರದೇಶಗಳಲ್ಲಿಯೂ ಅಕ್ರಮ ಮರ ಕಡಿಯುವ ಘಟನೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಎಲ್‌ಪಿಜಿ ಕೊರತೆಯಿಂದ ಅನೇಕ ಹೋಟೆಲ್ ಮಾಲೀಕರು ಮತ್ತು ಅಡುಗೆ ಕೇಂದ್ರಗಳು ಮರದ ಇಂಧನ ಬಳಕೆಗೆ ಮರಳುತ್ತಿರುವುದರಿಂದ ಕಟ್ಟಿಗೆಗೆ ಬೇಡಿಕೆ ಏರಿಕೆಯಾಗಿದೆ. ಹೀಗೆ ಹೆಚ್ಚು ಮರಗಳನ್ನು ಕಡಿದರೆ ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶಗಳು ಹಾಗೂ ಹಸಿರು ವಲಯಗಳಲ್ಲಿ ಹೆಚ್ಚುವರಿ ಪೆಟ್ರೋಲಿಂಗ್ ನಡೆಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಲಾವಣ್ಯ ತ್ರಿಪಾಠಿ ಬಿಟ್ಟ ಸಿನಿಮಾದಿಂದ ಸೂಪರ್ ಹಿಟ್ ಆದ ರಶ್ಮಿಕಾ ಮಂದಣ್ಣ

ಲಾವಣ್ಯ ತ್ರಿಪಾಠಿ (Lavanya Tripathi) ಮೆಗಾ ಪ್ರಿನ್ಸ್ ವರುಣ್ ತೇಜ್ ಅವರನ್ನು ಪ್ರೀತಿಸಿ ಮದುವೆಯಾದರು. ಅವರಿಗೆ ಗಂಡು ಮಗು ಜನಿಸಿತು. ಪ್ರಸ್ತುತ, ತನ್ನ ಮಗುವನ್ನು ಬೆಳೆಸುವಲ್ಲಿ ನಿರತರಾಗಿರುವ ಲಾವಣ್ಯ ಮೊದಲಿನಂತೆ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಿಲ್ಲ. ಅವರು ತಮಗೆ ಹೊಂದುವ ಸಿನಿಮಾಗಳನ್ನು ಮಾತ್ರ ಮಾಡುತ್ತಿದ್ದಾರೆ. ಮದುವೆಯ ನಂತರ ಲಾವಣ್ಯ ತ್ರಿಪಾಠಿ ಅವರ ಮೊದಲ ಚಿತ್ರ ‘ಸತಿ ಲೀಲಾವತಿ’ ಈಗ ಬಿಡುಗಡೆಗೆ ಸಿದ್ಧವಾಗಿದೆ. ಮಾರ್ಚ್ 06 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರವು ಸ್ವಲ್ಪ ಸಮಯದ ಹಿಂದೆ ಪೂರ್ಣಗೊಂಡಿತು. ಆದಾಗ್ಯೂ, ವಿವಿಧ ಕಾರಣಗಳಿಂದ ಅದು ಮುಂದೂಡಲ್ಪಟ್ಟಿತು. ಈ ಚಿತ್ರವು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬಿಡುಗಡೆಯಾಗಲಿದೆ. ಈಗ ಅವರು ಒಂದು ವಿಷಯ ರಿವೀಲ್ ಮಾಡಿದ್ದಾರೆ.

ಲಾವಣ್ಯ ಪ್ರಸ್ತುತ ‘ಸತಿ ಲೀಲಾವತಿ’ ಚಿತ್ರದ ಪ್ರಚಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಅವರು ಸತತವಾಗಿ ಚಾನೆಲ್‌ಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ, ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಂದರ್ಶನವೊಂದರಲ್ಲಿ, ನಿರೂಪಕರೊಬ್ಬರು ಲಾವಣ್ಯ ಅವರಿಗೆ ಆಸಕ್ತಿದಾಯಕ ಪ್ರಶ್ನೆಯನ್ನು ಕೇಳಿದರು. ‘ಯಾವುದೇ ಸಿನಿಮಾಗಳನ್ನು ತಿರಸ್ಕರಿಸಿದ ನಂತರ ನೀವು ಎಂದಾದರೂ ವಿಷಾದಿಸಿದ್ದೀರಾ?’ ಎಂಬ ಪ್ರಶ್ನೆಗೆ ಲಾವಣ್ಯ ಈ ಉತ್ತರವನ್ನು ನೀಡಿದರು.

‘ನಾನು ಇಲ್ಲಿಯವರೆಗೆ ಸಿನಿಮಾಗಳನ್ನು ಹೆಚ್ಚು ತಿರಸ್ಕರಿಸಿಲ್ಲ ಮತ್ತು ಸಿನಿಮಾಗಳ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ನನ್ನ ವೃತ್ತಿಜೀವನದ ಆರಂಭದಲ್ಲಿ, ನಾನು ಒಂದು ಸಿನಿಮಾಗೆ ಬೇಡ ಅಂದಿದ್ದೆ. ನಾನು ಒಪ್ಪಿಕೊಂಡ ನಂತರವೂ ಆ ಸಿನಿಮಾದ ಅವಕಾಶವನ್ನು ಕಳೆದುಕೊಂಡೆ. ರಶ್ಮಿಕಾ ಆ ಚಿತ್ರದಲ್ಲಿ ನಟಿಸಿ ಯಶಸ್ಸನ್ನು ಗಳಿಸಿದರು. ಈ ಚಿತ್ರದ ಕಥೆಯನ್ನು ಕೇಳುವ ಮೊದಲು ನಾನು ಬೇಡ ಅಂದಿದ್ದೆ. ಆದರೆ ಕಥೆಯನ್ನು ಕೇಳಿದ ನಂತರ, ನಾನು ಚಿತ್ರದಲ್ಲಿ ನಟಿಸಲು ಓಕೆ ಅಂದಿದ್ದೆ. ನಂತರ ಏನೋ ಆಗಿ ಸಿನಿಮಾ ಅಂತಿಮವಾಗಿ ರಶ್ಮಿಕಾಗೆ ಹೋಯಿತು. ಈ ಚಿತ್ರ ಸೂಪರ್ ಸಕ್ಸಸ್ ಆಗಿತ್ತು. ಈಗ ಅವರು ಮದುವೆಯಾಗಿದ್ದಾರೆ’ ಎಂದು ಲಾವಣ್ಯ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರನ್ನು ಅಭಿನಂದಿಸಿದರು.

ಇದನ್ನೂ ಓದಿ: ಮದುವೆಗೆ ಲಾವಣ್ಯ ತ್ರಿಪಾಠಿ ಧರಿಸಿದ ಸೀರೆಯ ಬೆಲೆ 10 ಲಕ್ಷ ರೂಪಾಯಿ; ಹಾರಕ್ಕೆ 12 ಲಕ್ಷ ರೂ!

ಲಾವಣ್ಯ ತ್ರಿಪಾಠಿ ಮಾಡಬೇಕಿದ್ದ ಸಿನಿಮಾ ಬೇರೆ ಯಾವುದೂ ಅಲ್ಲ ‘ಗೀತ ಗೋವಿಂದಂ’. ಪ್ರಸ್ತುತ, ಲಾವಣ್ಯ ಅವರ ಕಾಮೆಂಟ್‌ಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ. ಈ ಮೊದಲು ಐಶ್ವರ್ಯಾ ಅರ್ಜುನ್ ಕೂಡ ತಮಗೂ ‘ಗೀತ ಗೋವಿಂದಂ’ ಆಫರ್ ಬಂದಿತ್ತು ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Swapna Shastra: ಈ 5 ದೃಶ್ಯ ಕನಸಿನಲ್ಲಿ ಕಂಡರೆ, ಶೀಘ್ರದಲ್ಲೇ ಅದೃಷ್ಟ ನಿಮ್ಮ ಮನೆ ಬಾಗಿಲು ತಟ್ಟಲಿದೆ ಎಂದರ್ಥ

ಜ್ಯೋತಿಷ್ಯ ಮತ್ತು ಸ್ವಪ್ನ ಶಾಸ್ತ್ರದ ಪ್ರಕಾರ, ನಾವು ಕಾಣುವ ಪ್ರತಿಯೊಂದು ಕನಸಿಗೂ ಒಂದು ಅರ್ಥವಿರುತ್ತದೆ. ಹಳೆಯ ಕಾಲದಲ್ಲಿ ಪ್ರಕೃತಿಯ ಬದಲಾವಣೆಗಳ ಮೂಲಕ ಅದೃಷ್ಟವನ್ನು ಅಳೆಯಲಾಗುತ್ತಿತ್ತು. ಆದರೆ ಇಂದಿನ ಆಧುನಿಕ ಯುಗದಲ್ಲಿ, ನಮ್ಮ ಸುಪ್ತ ಮನಸ್ಸು ಕನಸುಗಳ ರೂಪದಲ್ಲಿ ಮುಂಬರುವ ಸಂಪತ್ತು ಮತ್ತು ಯಶಸ್ಸಿನ ಸೂಚನೆಗಳನ್ನು ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿಮ್ಮ ಕನಸಿನಲ್ಲಿ ಈ ಐದು ಅದ್ಭುತ ದೃಶ್ಯಗಳು ಕಂಡರೆ, ನೀವು ಶ್ರೀಮಂತರಾಗುವ ಕಾಲ ಹತ್ತಿರದಲ್ಲಿದೆ ಎಂದರ್ಥ.

ಬಿಳಿ ಕುದುರೆಗಳ ಓಟ; ವಿಜಯದ ಸಂಕೇತ:

ಕನಸಿನಲ್ಲಿ ಬಿಳಿ ಕುದುರೆಗಳು ಅಥವಾ ರೆಕ್ಕೆಯ ಕುದುರೆಗಳು ಕಾಣಿಸಿಕೊಳ್ಳುವುದು ಅತ್ಯಂತ ಶುಭ ಶಕುನ. ಇದು ಕೇವಲ ಬಾಲ್ಯದ ಫ್ಯಾಂಟಸಿ ಅಲ್ಲ, ಬದಲಿಗೆ ನಿಮ್ಮ ಜೀವನದಲ್ಲಿ ಬರಲಿರುವ ಅನಿರೀಕ್ಷಿತ ಆರ್ಥಿಕ ಲಾಭ ಮತ್ತು ಉನ್ನತ ಸ್ಥಾನಮಾನದ ಸೂಚನೆ. ನೀವು ಮಾಡುವ ಕೆಲಸದಲ್ಲಿ ಜಯ ಸಿಗಲಿದೆ ಎಂಬುದಕ್ಕೆ ಇದು ಸಾಕ್ಷಿ.

ಐರಾವತ ಅಥವಾ ಬಿಳಿ ಆನೆ; ರಾಜಯೋಗದ ಮುನ್ಸೂಚನೆ:

ದೇವತೆಗಳ ರಾಜ ಇಂದ್ರನ ವಾಹನವಾದ ‘ಐರಾವತ’ ಅಥವಾ ಬಿಳಿ ಆನೆ ಕನಸಿನಲ್ಲಿ ಬಂದರೆ ಅದು ಸಾಕ್ಷಾತ್ ರಾಜಯೋಗ. ಇದು ಬುದ್ಧಿವಂತಿಕೆ, ಸ್ಥಿರವಾದ ಸಂಪತ್ತು ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುವುದನ್ನು ಸೂಚಿಸುತ್ತದೆ. ಐಶ್ವರ್ಯದ ಅಧಿದೇವತೆ ನಿಮ್ಮ ಮೇಲೆ ಪ್ರಸನ್ನಳಾಗಿದ್ದಾಳೆ ಎಂಬುದರ ಸಂಕೇತವಿದು.

ಆಕಾಶದಲ್ಲಿ ಹಾರಾಟ; ಪ್ರಗತಿಯ ಪಥ:

ನೀವು ಆಕಾಶದಲ್ಲಿ ಹಾರುತ್ತಿರುವಂತೆ ಅಥವಾ ವಿಮಾನದಲ್ಲಿ ವೇಗವಾಗಿ ಪ್ರಯಾಣಿಸುತ್ತಿರುವಂತೆ ಕನಸು ಕಂಡರೆ, ನೀವು ಜೀವನದ ಸವಾಲುಗಳನ್ನು ಮೀರಿ ಉನ್ನತ ಮಟ್ಟಕ್ಕೆ ಏರುತ್ತಿದ್ದೀರಿ ಎಂದು ಅರ್ಥ. ಇದು ವೃತ್ತಿಜೀವನದಲ್ಲಿನ ಭರ್ಜರಿ ಬಡ್ತಿ ಅಥವಾ ವ್ಯಾಪಾರದಲ್ಲಿನ ಅಗಾಧ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.

ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಕ್ಷೀರ ಸಮುದ್ರ; ಶಾಂತ ಮತ್ತು ಸಮೃದ್ಧ ಜೀವನ:

ಹಾಲಿನಂತೆ ಬೆಳ್ಳಗಿರುವ ಅಂತ್ಯವಿಲ್ಲದ ಕ್ಷೀರ ಸಮುದ್ರವನ್ನು ನೋಡುವುದು ಆಧ್ಯಾತ್ಮಿಕ ಮತ್ತು ಭೌತಿಕ ಉನ್ನತಿಯ ಸಂಕೇತ. ಈ ಸಮುದ್ರವು ಶಾಂತವಾಗಿದ್ದರೆ ನಿಮ್ಮ ಜೀವನದಲ್ಲಿ ಶಾಂತಿ ನೆಲೆಸುವುದರ ಜೊತೆಗೆ ಅಪಾರ ಸಂಪತ್ತು ಹರಿದು ಬರಲಿದೆ ಎಂದರ್ಥ. ಆದರೆ, ಅದರಲ್ಲಿ ಮುಳುಗುವ ಭಯವಿರಬಾರದು ಎಂಬುದು ಇಲ್ಲಿನ ಮುಖ್ಯ ಅಂಶ.

ಹೂವಿನ ಮಳೆ: ದೈವಾನುಗ್ರಹದ ಹರಕೆ

ಆಕಾಶದಿಂದ ಹೂವುಗಳು ಮಳೆಯಂತೆ ಸುರಿಯುತ್ತಿರುವ ಕನಸು ಕಂಡರೆ ಅದು ದೈವಿಕ ಆಶೀರ್ವಾದ. ಇದು ಮುಂಬರುವ ದಿನಗಳಲ್ಲಿ ನಿಮಗೆ ಸಿಗಲಿರುವ ದೊಡ್ಡ ಯಶಸ್ಸು ಮತ್ತು ಸಂತೋಷವನ್ನು ಸೂಚಿಸುತ್ತದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಕಾಲ ಬಂದಿದೆ ಎಂದರ್ಥ.

ನೆನಪಿರಲಿ: ಕನಸುಗಳು ಸೂಚನೆ ನೀಡುತ್ತವೆ ನಿಜ, ಆದರೆ ಕಠಿಣ ಪರಿಶ್ರಮವೇ ಆ ಅದೃಷ್ಟವನ್ನು ದ್ವಿಗುಣಗೊಳಿಸುತ್ತದೆ. ಈ ಕನಸುಗಳು ಪದೇ ಪದೇ ಮರುಕಳಿಸುತ್ತಿದ್ದರೆ, ಸಕಾರಾತ್ಮಕವಾಗಿ ಪ್ರಯತ್ನ ಮುಂದುವರಿಸಿ; ಯಶಸ್ಸು ಖಂಡಿತ ನಿಮ್ಮದಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಟ್ಟಿನ ರಜೆಗಾಗಿ ಕಡ್ಡಾಯ ಕಾನೂನು ತರಬೇಕು ಎಂಬ ಬೇಡಿಕೆ ತಿರಸ್ಕರಿಸಿದ ಸುಪ್ರೀಂ, ಕೊಟ್ಟ ಕಾರಣವೇನು?

ನವದೆಹಲಿ, ಮಾರ್ಚ್​ 13: ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ(Menstrual Leave) ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಸುಪ್ರೀಂಕೋರ್ಟ್​ ಅಭಿಪ್ರಾಯಪಟ್ಟಿದೆ. ಮುಟ್ಟಿನ ರಜೆಗಾಗಿ ಕಡ್ಡಾಯ ಕಾನೂನು ತರಬೇಕು ಎನ್ನುವ ಬೇಡಿಕೆಯನ್ನು ತಿರಸ್ಕರಿಸಿದೆ.ಅಂತಹ ಕಾನೂನು ಜಾರಿಗೆ ತಂದರೆ ಕಚೇರಿಗಳನ್ನು ಹೆಣ್ಣುಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವಲ್ಲಿ ಮಾಲೀಕರು ಹಿಂದೇಟು ಹಾಕುತ್ತಾರೆ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಶುಕ್ರವಾರ ಹೇಳಿದ್ದಾರೆ.

ರಾಜ್ಯಗಳು ಮುಟ್ಟಿನ ರಜೆ ನಿಯಮಗಳನ್ನು ರೂಪಿಸಲು ನಿರ್ದೇಶನ ಕೋರಿ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿದ ಅರ್ಜಿಯನ್ನು ಇಂದು(ಮಾರ್ಚ್​13)ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳು ಇಂತಹ ಕಾನೂನು ದುಡಿಯುವ ಮಹಿಳೆಯರಲ್ಲಿ ಮಾನಸಿಕ ಭಯ ಅಥವಾ ಅನಿಸಿಕೆಯನ್ನು ಉಂಟುಮಾಡುತ್ತದೆ. ಅವರು ಪುರುಷರಿಗಿಂತ ಕಡಿಮೆ ಎಂಬ ಭಾವನೆಯನ್ನು ಹುಟ್ಟುಹಾಕುತ್ತದೆ ಎಂದು ವಾದಿಸಿದ್ದಾರೆ.

ಮತ್ತಷ್ಟು ಓದಿ: ಋತುಚಕ್ರ ರಜೆ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಗೆ ತಾತ್ಕಾಲಿಕ ಮಾರ್ಪಾಡು ಮಾಡಿದ ಹೈಕೋರ್ಟ್

ಮುಖ್ಯ ನ್ಯಾಯಮೂರ್ತಿಗಳು ಮಾತನಾಡಿ, ಈ ಕಾನೂನನ್ನು ಕಡ್ಡಾಯ ಮಾಡಿದರೆ ಹೆಣ್ಣುಮಕ್ಕಳಿಗೆ ಯಾರೂ ಕೆಲಸ ಕೊಡುವುದಿಲ್ಲ ಬದಲಾಗಿ, ಅಲ್ಲಿಗೆ ಅವರ ವೃತ್ತಿ ಜೀವನ ಕೊನೆಗೊಳ್ಳುತ್ತದೆ, ನೀವು ಮನೆಯಲ್ಲಿಯೇ ಕುಳಿತುಕೊಳ್ಳಿ ಎಂದು ಹೇಳುತ್ತಾರೆ ಎಂದರು.

ಜಾಗೃತಿ ಮೂಡಿಸುವುದು ಮತ್ತು ಸಂವೇದನೆ ಮೂಡಿಸುವುದು ಬೇರೆ, ಆದರೆ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ಕಾನೂನನ್ನು ನೀವು ತಂದ ತಕ್ಷಣ, ಯಾರೂ ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ, ನಿರ್ದಿಷ್ಟವಾಗಿ ಹೇಳುವುದಾದರೆ, ಅರ್ಜಿದಾರರು ಹೆಣ್ಣುಮಕ್ಕಳು, ಅದು ವಿದ್ಯಾರ್ಥಿನಿಯರಾಗಿರಲಿ ಅಥವಾ ಕೆಲಸ ಮಾಡುವ ವೃತ್ತಿಪರರಾಗಿರಲಿ, ಮುಟ್ಟಿನ ಸಮಯದಲ್ಲಿ ರಜೆ ನೀಡುವುದನ್ನು ಕಡ್ಡಾಯಗೊಳಿಸಬೇಕೆಂದು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು.

2013 ರಲ್ಲಿ ಕೇರಳ ಸರ್ಕಾರವು ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಮುಟ್ಟಿನ ರಜೆಯನ್ನು ಮಂಜೂರು ಮಾಡಿತ್ತು ಎಂದು ಹಿರಿಯ ವಕೀಲ ಎಂ.ಆರ್. ಶಂಶಾದ್ ಹೇಳಿದ್ದಾರೆ. ಆಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ನಿರ್ಧಾರವು ಲಿಂಗ ನ್ಯಾಯಯುತ ಸಮಾಜವನ್ನು ಸಾಕಾರಗೊಳಿಸುವ ಬದ್ಧತೆಯ ಭಾಗವಾಗಿದೆ ಎಂದು ಹೇಳಿದ್ದರು.ಖಾಸಗಿ ಕಂಪನಿಗಳು ಇದೇ ರೀತಿಯ ಸಡಿಲಿಕೆಗಳನ್ನು ಮಾಡಿವೆ ಎಂದು ಶಂಶಾದ್ ಎಂದರು.

ಜನವರಿಯಲ್ಲಿ ಸುಪ್ರೀಂ ಕೋರ್ಟ್ ಮುಟ್ಟಿನ ನೈರ್ಮಲ್ಯದ ಬಗ್ಗೆ ನಿರ್ಣಾಯಕ ತೀರ್ಪು ನೀಡಿತು, ಅದು ‘ಹೆಣ್ಣು ಮಗುವಿನ ಜೀವನ, ಘನತೆ, ಆರೋಗ್ಯ ಮತ್ತು ಶಿಕ್ಷಣದ ಹಕ್ಕಿನ ಅವಿಭಾಜ್ಯ ಅಂಗ’ ಎಂದು ಹೇಳಿತ್ತು.
ಉಚಿತ ಸ್ಯಾನಿಟರಿ ನ್ಯಾಪ್ಕಿನ್‌ಗಳು, ಕ್ರಿಯಾತ್ಮಕ ಲಿಂಗ-ಪ್ರತ್ಯೇಕ ಶೌಚಾಲಯಗಳು ಮತ್ತು ಮುಟ್ಟಿನ ಆರೋಗ್ಯ ಜಾಗೃತಿ ಅಭಿಯಾನಗಳನ್ನು ನಡೆಸಲು ನ್ಯಾಯಾಲಯವು ಎಲ್ಲಾ ಸರ್ಕಾರಗಳಿಗೆ ಕಡ್ಡಾಯ ನಿರ್ದೇಶನಗಳನ್ನು ನೀಡಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version