ಹೈದರಾಬಾದ್ನಲ್ಲಿ ಸ್ಟುಡಿಯೋ ಪ್ರಾರಂಭಿಸಿದ ನೆಟ್ಫ್ಲಿಕ್ಸ್: ವಿಶೇಷತೆಯೇನು?
ನೆಟ್ಫ್ಲಿಕ್ಸ್ (Netflix), ವಿಶ್ವದ ಒಟಿಟಿ ದೈತ್ಯ. ನೆಟ್ಫ್ಲಿಕ್ಸ್ಗಿಂತಲೂ ಹೆಚ್ಚು ಕಂಟೆಂಟ್ ಹೊಂದಿರುವ, ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದಿರುವ ಒಟಿಟಿಗಳು ಇವೆಯಾದರೂ ನೆಟ್ಫ್ಲಿಕ್ಸ್ನಷ್ಟು ಲಾಭದಾಯಕ ಒಟಿಟಿ ಇನ್ಯಾವುದೂ ಸಹ ಇಲ್ಲ. ಇತ್ತೀಚೆಗಷ್ಟೆ ಲಕ್ಷಾಂತರ ಕೋಟಿ ಕೊಟ್ಟು ವಾರ್ನರ್ ಬ್ರದರ್ಸ್ ನಿರ್ಮಾಣ ಸಂಸ್ಥೆಯನ್ನು ಖರೀದಿಸಲು ಮುಂದಾಗಿತ್ತು ನೆಟ್ಫ್ಲಿಕ್ಸ್. ಈ ಒಟಿಟಿ ದೈತ್ಯ, ಭಾರತದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದು, ಭಾರತದ ಕಂಟೆಂಟ್ ಮೇಲೆ ಸಾವಿರಾರು ಕೋಟಿ ಹೂಡಿಕೆ ಮಾಡಿದೆ. ಅದರಲ್ಲೂ ದಕ್ಷಿಣದ ಸಿನಿಮಾ ರಂಗದ ಮೇಲೆ ಭಾರಿ ಭರವಸೆ ನೆಟ್ಫ್ಲಿಕ್ಸ್ಗೆ ಇದ್ದು,…