ಪಾಕಿಸ್ತಾನದಲ್ಲಿ ಮಾಧ್ಯಮ ಸ್ವಾತಂತ್ರ್ಯವೇ ಇಲ್ಲ; ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಟೀಕೆ – Kannada News | Pakistan Does not Have Press Freedom; US Vice President JD Vance blames for delay in publishing Iran peace MoU

ವಾಷಿಂಗ್ಟನ್, ಜೂನ್ 20: ಅಮೆರಿಕ ಮತ್ತು ಇರಾನ್ (Iran War) ನಡುವೆ ಇತ್ತೀಚೆಗೆ ಸಹಿ ಮಾಡಲಾದ 14 ಅಂಶಗಳ ತಾತ್ಕಾಲಿಕ ಒಪ್ಪಂದದ ವಿವರಗಳನ್ನು ಆರಂಭದಲ್ಲಿ ರಹಸ್ಯವಾಗಿಟ್ಟಿದ್ದರ ಕಾರಣವನ್ನು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ (JD Vance) ಬಹಿರಂಗಪಡಿಸಿದ್ದಾರೆ. “ಪಾಕಿಸ್ತಾನದಂತಹ ದೇಶಗಳಲ್ಲಿ ಮಾಧ್ಯಮಗಳಿಗೆ ಸ್ವಾತಂತ್ರ್ಯವಿಲ್ಲ. ಅಲ್ಲಿನ ಮಾಧ್ಯಮಗಳು ಸರ್ಕಾರದ ನಿಯಂತ್ರಣದಲ್ಲಿರುತ್ತವೆ. ಹೀಗಾಗಿ, ಸೂಕ್ಷ್ಮ ರಾಜತಾಂತ್ರಿಕ ಮಾತುಕತೆಗಳ ವಿವರಗಳು ಮುಂಚಿತವಾಗಿ ಸೋರಿಕೆಯಾಗಿ ಒಪ್ಪಂದ ಮುರಿದುಬೀಳಬಾರದು ಎಂಬ ಕಾರಣಕ್ಕೆ ವಿವರಗಳನ್ನು ಮುಚ್ಚಿಡಲಾಗಿತ್ತು” ಎಂದು ಜೆಡಿ ವ್ಯಾನ್ಸ್ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ…

Read More

RR vs MI: ಯುವ ದಾಂಡಿಗರ ಆರ್ಭಟಕ್ಕೆ ತತ್ತರಿಸಿದ ಮುಂಬೈ ಇಂಡಿಯನ್ಸ್

IPL 2026: ಗುವಾಹಟಿಯ ಬರ್ಸಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಜಯಭೇರಿ ಬಾರಿಸಿದೆ. ಮಳೆಯ ಕಾರಣ 11 ಓವರ್​ಗಳಿಗೆ ನಿಗದಿತವಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯುವ ದಾಂಡಿಗರಾದ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ದೀಪಕ್ ಚಹರ್ ಎಸೆದ ಮೊದಲ…

Read More

2025ರಲ್ಲಿ ಮೋದಿ, ಟ್ರಂಪ್ 8 ಬಾರಿ ಮಾತನಾಡಿದ್ದರು; ಲುಟ್ನಿಕ್ ಹೇಳಿಕೆಗೆ ಭಾರತ ಸ್ಪಷ್ಟನೆ – Kannada News | PM Modi and Trump spoke 8 times in 2025; MEA rejects Howard Lutnicks claim on India US trade deal

ನವದೆಹಲಿ, ಜನವರಿ 9: ಭಾರತದ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕರೆ ಮಾಡದ ಕಾರಣದಿಂದಲೇ ಕಳೆದ ವರ್ಷ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಮುಂದುವರೆಸಲು ಸಾಧ್ಯವವಾಗಲಿಲ್ಲ ಎಂಬ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ, ಅವರ ಈ ಹೇಳಿಕೆಯನ್ನು ಭಾರತ ನಿರಾಕರಿಸಿದೆ. ಪರಸ್ಪರ ಪ್ರಯೋಜನಕಾರಿ ಒಪ್ಪಂದವನ್ನು ಮಾಡಿಕೊಳ್ಳಲು ಭಾರತ ಸದಾ ಆಸಕ್ತಿ ಹೊಂದಿತ್ತು ಎಂದು ಭಾರತ ಹೇಳಿದೆ. ಅಮೆರಿಕ ಮತ್ತು ಭಾರತದ…

Read More

ಬೆಂಗಳೂರಿನಲ್ಲಿ ಕಾನೂನು ಪಾಲನೆ ಕೇವಲ ಆಯ್ಕೆಯ ವಿಷಯವೇ?: ಬಸವನಗುಡಿ ಪುತ್ತಿಗೆ ಮಠಕ್ಕೆ ಬಂದಿದ್ದ ಮಹಿಳೆ ಮೇಲೆ ಹಲ್ಲೆ ಮಾಡಿದ ಯುವಕ

ಬೆಂಗಳೂರು, ಏ.1: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ನಾಗರಿಕ ಪ್ರಜ್ಞೆ ಹೇಗೆ ಕಳೆದುಕೊಳ್ಳುತ್ತಿದೆ ಎಂಬುದಕ್ಕೆ ಬಸವನಗುಡಿಯಲ್ಲಿ ನಡೆದ ಪಾರ್ಕಿಂಗ್ ವಿವಾದವೊಂದು ಸಾಕ್ಷಿಯಾಗಿದೆ. ಪುತ್ತಿಗೆ ಮಠದ ಮುಂಭಾಗ ವಾಹನ ನಿಲುಗಡೆ ಮಾಡುವ ವಿಚಾರದಲ್ಲಿ ಕಾಲೇಜು ವಿದ್ಯಾರ್ಥಿ ಮತ್ತು ಮಹಿಳಾ  ನಡುವೆ ನಡೆದ ಜಗಳ, ಕೊನೆಗೆ ಪೊಲೀಸರ ಸಮ್ಮುಖದಲ್ಲಿ ‘ರಾಜಿ’ಯೊಂದಿಗೆ ಅಂತ್ಯಗೊಂಡಿದೆ. ವರದಿಗಳ ಪ್ರಕಾರ, ಕಾಲೇಜು ವಿದ್ಯಾರ್ಥಿಯೊಬ್ಬ ಮಠದ ಮುಂಭಾಗ ನಿರ್ಬಂಧವಿದ್ದರೂ ಆತುರದಲ್ಲಿ ವಾಹನ ಪಾರ್ಕ್ ಮಾಡಿದ್ದ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಮಠದ ಭಕ್ತನೊಂದಿಗೆ ವಿದ್ಯಾರ್ಥಿ ವಾಗ್ವಾದಕ್ಕಿಳಿದಿದ್ದು, ಇದು ದೈಹಿಕ ಹಲ್ಲೆಯ…

Read More

ನಗು ಮುಖದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಬಂದ ಖಾದರ್,ಸಚಿವ ಸ್ಥಾನ ಫಿಕ್ಸಾ? – Kannada News

ಬೆಂಗಳೂರು, (ಜೂನ್ 02): ಡಿಕೆ ಶಿವಕುಮಾರ್ ಅವರು ನಾಳೆ (ಜೂನ್ 03) ಸಂಜೆ 4.05ಕ್ಕೆ ಲೋಕಭವನದ ಗಾಜಿನಮನೆಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಾಗೇ ಇವರ ಜೊತೆ 10 ರಿಂದ 12 ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸಚಿವರಾಗುವವರು ಯಾರು ಎನ್ನುವುದೇ ನಿಗೂಢವಾಗಿದೆ. ಈ ಬಗ್ಗೆ ದೆಹಲಿಯಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿ ಹೈಕಮಾಂಡ್ ನಾಯಕರೊಂದಿಗೆ ಮ್ಯಾರಥಾನ್ ಸಭೆ ನಡೆಸಿದ್ದು, ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ…

Read More

Viral: ಬೆಂಗಳೂರಿನಿಂದ ಗುರಂಗಾವ್‌ಗೆ ಸ್ಥಳಾಂತರಗೊಳ್ಳುವ ಹಿಂದಿನ ಕಾರಣ ವಿವರಿಸಿದ ವ್ಯಕ್ತಿ – Kannada News | A man leaving Bengaluru for Gurgaon after 20 years explained the reason

ಉದ್ಯೋಗಕ್ಕಾಗಿ ಅನೇಕರು ದೂರದ ಊರು, ರಾಜ್ಯದಿಂದ ಬೆಂಗಳೂರಿಗೆ ಬರುತ್ತಾರೆ. ಹೀಗೆ ಬಂದವರಲ್ಲಿ ಕೆಲವರು ಇಲ್ಲೇ ನೆಲೆಸುತ್ತಾರೆ. ಇನ್ನು ಕೆಲವರು ಅನಿವಾರ್ಯ ಕಾರಣಕ್ಕಾಗಿ ಮಾಯನಗರಿ ಬಿಟ್ಟು ತಮ್ಮ ಊರಿಗೆ ತೆರಳುವುದಿದೆ. ಇದೀಗ ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ (Bengaluru) ನೆಲೆಸಿರುವ ವ್ಯಕ್ತಿಯೊಬ್ಬರು ಗುರಗಾಂವ್‌ಗೆ (Gurgaon) ಹೋಗುವ ನಿರ್ಧಾರ ಮಾಡಿದ್ದಾರೆ. ತನ್ನ ತಂದೆ ತಾಯಿಯನ್ನು ನೋಡಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ. ಈ ರೆಡ್ಡಿಟ್ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೆಡ್ಡಿಟ್ ಪೋಸ್ಟ್‌ನಲ್ಲಿ, ಬೆಂಗಳೂರಿನಿಂದ…

Read More

ಶಿವಮೊಗ್ಗದಲ್ಲಿ ವಿಶಿಷ್ಟ ಮಾವಿನ ಖಾದ್ಯಗಳ ಸ್ಪರ್ಧೆ: ಕೈಚಳಕ ತೋರಿಸಿದ ಮಹಿಳೆಯರು; ಇಲ್ಲಿವೆ ಫೋಟೋಸ್​ – Kannada News

ಮನೆಯಿಂದಲೇ ಸಿದ್ಧಪಡಿಸಿಕೊಂಡು ತಂದಿದ್ದ ಮಾವಿನ ಲಡ್ಡು, ಮ್ಯಾಂಗೋ ಮೂಸ್, ಚೀಸ್ ಕೇಕ್ ಹಾಗೂ ಶಾಯಿ ಟುಕ್ರಾ ಅಂತಹ ಹೊಸ ಬಗೆಯ ಖಾದ್ಯಗಳು ಕಂಡುಬಂದವು. ಮ್ಯಾಂಗೋ ಹೋಳಿಗೆ ಮತ್ತು ಗೋಲ್ಡೆನ್ ಪುಡ್ಡಿಂಗ್‌ಗಳಂತಹ ತರಹೇವಾರಿ ಸಿಹಿ ಪದಾರ್ಥಗಳು ಆಹಾರ ಪ್ರಿಯರ ಬಾಯಿರುಚಿಯನ್ನು ಹೆಚ್ಚಿಸಿದವು. Source link

Read More

IPL 2026: 6 ಉದ್ಘಾಟನಾ ಪಂದ್ಯಗಳನ್ನಾಡಿರುವ ಆರ್​ಸಿಬಿ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು?

19ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಬಿಸಿಸಿಐ ನಿನ್ನೆಯಷ್ಟೆ ಈ ಮಿಲಿಯನ್ ಡಾಲರ್ ಟೂರ್ನಿಯ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. 15 ದಿನಗಳ ಕಾಲ ನಡೆಯಲಿರುವ ಈ 20 ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ಆರ್​ಸಿಬಿ 4 ಪಂದ್ಯಗಳನ್ನು ಆಡಲಿದೆ. ಅದರಲ್ಲಿ ಉದ್ಘಾಟನಾ ಪಂದ್ಯವೂ ಸೇರಿದೆ. ಹಾಗಿದ್ದರೆ, ಆರ್​ಸಿಬಿ ಇದುವರೆಗೆ ಎಷ್ಟು ಉದ್ಘಾಟನಾ ಪಂದ್ಯಗಳನ್ನಾಡಿದೆ? ಅದರಲ್ಲಿ ತಂಡದ ಪ್ರದರ್ಶನ ಹೇಗಿದೆ ಎಂಬುದನ್ನು ನೋಡುವುದಾದರೆ.. ಆರ್​ಸಿಬಿ ಹಾಲಿ ಚಾಂಪಿಯನ್ ಆಗಿರುವ ಕಾರಣ ಉದ್ಘಾಟನಾ ಪಂದ್ಯವನ್ನು…

Read More

ಮಾದಪ್ಪನ ಬೆಟ್ಟದಲ್ಲಿ ನರಭಕ್ಷಕನ ಅಟ್ಟಹಾಸ: ನಾಗಮಲೆ ಹಾದಿಯಲ್ಲಿ ಬಾಲಕನನ್ನೇ ಕೊಂದು ತಿಂದ ಚಿರತೆ! – Kannada News | Man eating Leopard Kills Boy in MM Hills: Terror at Nagamale, Chamarajanagar

ಚಾಮರಾಜನಗರ, ಮೇ 10: ಜಿಲ್ಲೆಯ ಪವಿತ್ರ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೆ ನರಭಕ್ಷಕ ಚಿರತೆಯ (Cheetah) ಅಟ್ಟಹಾಸ ಹೆಚ್ಚಾಗಿದೆ. ಇದೇ ಜನವರಿ ಮತ್ತು ಫೆಬ್ರವರಿಯಲ್ಲಿ ಚಿರತೆ ದಾಳಿಗೆ ಎರಡು ಜೀವಗಳು ಬಲಿಯಾಗಿದ್ದವು. ಈಗ ಮತ್ತೊಮ್ಮೆ ಅಂತದ್ದೇ ಭೀಕರ ಘಟನೆ ಸಂಭವಿಸಿದ್ದು, ಬೆಂಗಳೂರು ಮೂಲದ ಎಂಟು ವರ್ಷದ ಬಾಲಕ ಹರ್ಷಿತ್ ಚಿರತೆ ದಾಳಿಗೆ ಬಲಿಯಾಗಿದ್ದಾನೆ. ಈ ಘಟನೆಯು ದೇವರ ದರ್ಶನಕ್ಕೆ ತೆರಳುವವರಲ್ಲಿ ಭಯ ಹುಟ್ಟಿಸಿದೆ. ಬಾಲಕನನ್ನು ಕೊಂಡೊಯ್ದ ಚಿರತೆ! ಹರ್ಷಿತ್ ತನ್ನ ಪೋಷಕರೊಂದಿಗೆ ಮಲೆ ಮಹದೇಶ್ವರ ಬೆಟ್ಟದಿಂದ…

Read More

ಬೆಂಗಳೂರು: ಅಂಜನಾಪುರದಲ್ಲಿ ಮನೆ ಗೇಟ್ ಒಳಗೇ ಬಂತು ಚಿರತೆ!

ಬೆಂಗಳೂರು, ಫೆಬ್ರವರಿ 10: ಬೆಂಗಳೂರಿನ ಅಂಜನಾಪುರದಲ್ಲಿ ಚಿರತೆ ಬಂದಿರುವ ಸಿಸಿಟಿವಿ ವಿಡಿಯೋ ಕೆಲವು ದಿನಗಳ ಹಿಂದೆ ಜನರನ್ನು ಭಯಭೀತರನ್ನಾಗಿಸಿತ್ತು. ಇದೀಗ ಮತ್ತೆ ಅಂಜನಾಪುರದ 5ಜಿ ಬ್ಲಾಕ್​​ನಲ್ಲಿ ಚಿರತೆ ಕಾಣಿಸಿಕೊಂಡಿದೆ. ಸಂದೀಪ್ ಎಂಬುವರ ಮನೆ ಗೇಟ್​ ಬಳಿ ಚಿರತೆ ಕಾಣಿಸಿಕೊಂಡಿದೆ. ತಡರಾತ್ರಿ ಮನೆ ಗೇಟ್ ಒಳಗೇ ಬಂದ ಚಿರತೆ ನಂತರ ಹೊರ ಹೋಗುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More