Bengaluru Air Quality: ಮೈಸೂರಿನ ಏರ್ ಕ್ವಾಲಿಟಿಯಲ್ಲಿ ತೀವ್ರ ಕುಸಿತ

Bengaluru Air Quality: ಮೈಸೂರಿನ ಏರ್ ಕ್ವಾಲಿಟಿಯಲ್ಲಿ ತೀವ್ರ ಕುಸಿತ

ಬೆಂಗಳೂರು, ಮಾರ್ಚ್​ 12: ಈ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ  (Bengaluru Air Quality) ಕುಸಿತ ಕಂಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಕಳಪೆ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು, ಕಲಬುರ್ಗಿ, ಬಳ್ಳಾರಿ ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ 150 ದಾಟಿದೆ. ರಾಜ್ಯದೆಲ್ಲೆಡೆ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಈ ತಿಂಗಳು ಪೂರ್ತಿ ಇದೇ ವಾತಾವರಣ ಇರಲಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 155ಕ್ಕೆ ತಲುಪಿದೆ. ಕೆಲ ದಿನಗಳಿಂದ ಉಡುಪಿ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಏರ್ ಕ್ವಾಲಿಟಿ ತೀರಾ ಕಳಪೆ ಮಟ್ಟಕ್ಕೆ ಇಳಿದಿತ್ತು. ಆದರೆ ಇಂದು ಅದೇ ಉಡುಪಿ, ಮಂಗಳೂರು ಸೇರಿದಂತೆ ಹಲವೆಡೆಯ ವಾಯು ಗುಣಮಟ್ಟ 150ಕ್ಕಿಂತ ಹೆಚ್ಚಾಗಿದೆ. ಕಲಬುರ್ಗಿಯ AQI 90 ಇದ್ದು,ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡಂತಿದೆ. ಆದರೆ ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –155
  • ಮಂಗಳೂರು-168
  • ಮೈಸೂರು –173
  • ಬೆಳಗಾವಿ – 163
  • ಕಲಬುರ್ಗಿ-90
  • ಶಿವಮೊಗ್ಗ – 162
  • ಬಳ್ಳಾರಿ – 124
  • ಹುಬ್ಬಳ್ಳಿ- 162
  • ಉಡುಪಿ –160
  • ವಿಜಯಪುರ –151

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಇಂದೂ ಮುಂದುವರೆದ ಒಣ ಹವೆ

ಬೆಂಗಳೂರು, ಮಾರ್ಚ್​ 12: ಹಲವು ದಿನಗಳಿಂದ ರಾಜ್ಯದೆಲ್ಲೆಡೆ ಹೆಚ್ಚಾದ ತಾಪಮಾನದೊಂದಿಗೆ ಒಣ ಹವೆ (Weather Forecast) ಆವರಿಸಿದ್ದು, ಇಂದೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದಲ್ಲಿ ಹಲವು ದಿನಗಳಿಂದ ತಾಪಮಾನ ಹೆಚ್ಚಿದ್ದು, ಕೆಲ ದಿನಗಳಿಂದ ಒಣ ಹವೆಯ ವಾತಾವರಣವೇ ಕಂಡುಬಂದಿದೆ.

ಎಲ್ಲೆಲ್ಲಿ ಒಣ ಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದಿನಿಂದ ಕೆಲ ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಮಾರ್ಚ್​ ಎರಡನೇ ವಾರದಲ್ಲಿ ತಾಪಮಾನ ಹೆಚ್ಚಳ

ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.

ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಸ್ಟ್​ಫ್ರೆಂಡ್ ಪತಿಯನ್ನೇ ಮದುವೆ ಆಗಿದ್ದ ಹನ್ಸಿಕಾ; ನಟಿಯ ಸ್ಪಷ್ಟನೆ ಏನಾಗಿತ್ತು?

ಪುನೀತ್ ರಾಜ್ಕುಮಾರ್ ನಟನೆಯ ‘ಬಿಂದಾಸ್’ ಚಿತ್ರದಲ್ಲಿ ನಟಿಸಿದ್ದ ಹನ್ಸಿಕಾ ಮೋಟ್ವಾನಿ (Hansika) ಈಗ ಸುದ್ದಿಯಲ್ಲಿದ್ದಾರೆ. ಅವರು ಉದ್ಯಮಿ ಸೊಹೈಲ್ ಕತುರಿಯಾ ಜತೆ ಡಿವೋರ್ಸ್ ಪಡೆದಿದ್ದಾರೆ. ಕೋರ್ಟ್ ಅವರಿಗೆ ಡಿವೋರ್ಸ್ ನೀಡಲು ಒಪ್ಪಿಗೆ ಕೊಟ್ಟಿದೆ 2022ರಲ್ಲಿ ಸಾಕಷ್ಟು ಅದ್ದೂರಿಯಾಗಿ ಈ ಮದುವೆ ಕಾರ್ಯ ನಡೆದಿತ್ತು.

ಸೋಹೈಲ್ ಈ ಮೊದಲು ಮದುವೆ ಆಗಿದ್ದರು. ಅವರ ಮಾಜಿ ಪತ್ನಿಯ ಹೆಸರು ರಿಂಕಿ. ರಿಂಕಿ ಮತ್ತು ಹನ್ಸಿಕಾ ಫ್ರೆಂಡ್ಸ್ ಆಗಿದ್ದರು. ಸೋಹೈಲ್ ಹಾಗೂ ರಿಂಕಿ ಮದುವೆಯಲ್ಲಿ ಹನ್ಸಿಕಾ ಕೂಡ ಭಾಗಿ ಆಗಿದ್ದರು. ಸೋಹೈಲ್ ಜತೆ ಹನ್ಸಿಕಾ ಮದುವೆ ಘೋಷಣೆ ಮಾಡಿಕೊಳ್ಳುತ್ತಿದ್ದಂತೆಯೇ ಒಂದಷ್ಟು ಮಂದಿ ಹನ್ಸಿಕಾ ಟೀಕೆ ಮಾಡಿದರು. ‘ಲವ್ ಶಾದಿ ಡ್ರಾಮಾ’ದಲ್ಲಿ ಹನ್ಸಿಕಾ ಈ ಬಗ್ಗೆ ಮಾತನಾಡಿದ್ದರು.

‘ಆ ಸಮಯದಲ್ಲಿ ಈ ವ್ಯಕ್ತಿಯ ಪರಿಚಯ ನನಗಿತ್ತು ಎಂದ ಮಾತ್ರಕ್ಕೆ ತಪ್ಪು ನನ್ನದೇ ಎಂದು ಹೇಳಲು ಸಾಧ್ಯವಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ. ನಾನು ಸೆಲೆಬ್ರಿಟಿ ಆಗಿರುವುದರಿಂದ ಜನರಿಗೆ ನನ್ನ ಕಡೆ ಬೆರಳು ಮಾಡಿ, ನನ್ನನ್ನು ವಿಲನ್ ಮಾಡೋದು ಸುಲಭ. ಪಬ್ಲಿಕ್ ಫಿಗರ್ ಆಗಿರುವುದರಿಂದ ನಾನು ತೆರುತ್ತಿರುವ ಬೆಲೆ ಇದು’ ಎಂದು ಹನ್ಸಿಕಾ ಹೇಳಿದ್ದಾರೆ.

‘ನಾನು ಈ ಮೊದಲು ಮದುವೆ ಆಗಿದ್ದೆ. ಅದು ಮುರಿದು ಬಿತ್ತು. ಈ ವಿಚಾರ ಹೊರಜಗತ್ತಿಗೆ ಗೊತ್ತಾಯಿತು. ಆದರೆ, ತಪ್ಪಾದ ರೀತಿಯಲ್ಲಿ ಈ ಮಾಹಿತಿ ಹೊರಬಿತ್ತು. ಹನ್ಸಿಕಾ ಅವರಿಂದ ನನ್ನ ಹಾಗೂ ರಿಂಕಿ ಸಂಬಂಧ ಹಾಳಾಯಿತು ಎಂದು ಹೇಳಲಾಯಿತು. ಇದು ಸುಳ್ಳು. ನಾವಿಬ್ಬರೂ ಸ್ನೇಹಿತರು. ಹನ್ಸಿಕಾ ನನ್ನ ಮದುವೆಗೆ ಹಾಜರಾದ ಫೋಟೋ ನೋಡಿದ್ದರಿಂದ ಈ ಊಹಾಪೋಹ ಪ್ರಾರಂಭವಾಯಿತು’ ಎಂದು ಸೋಹೈಲ್ ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ಜೀವನಾಂಶ ಕೇಳದೇ ವಿಚ್ಛೇದನ ಪಡೆದ ‘ಬಿಂದಾಸ್’ ಚಿತ್ರದ ನಟಿ ಹನ್ಸಿಕಾ ಮೋಟ್ವಾನಿ

ಹನ್ಸಿಕಾ ಹಾಗೂ ಸೋಹೈಲ್ ಅವರು ಈ ಮೊದಲು ಅದ್ದೂರಿಯಾಗಿ ವಿವಾಹ ಆದರು. ಇವರ ಮದುವೆಯ ವಿಡಿಯೋ ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಮೊದಲು ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ವಿಡಿಯೋ ಕೂಡ ರಿಲೀಸ್ ಆಗಲಿದೆ ಎಂದು ನೆಟ್ಫ್ಲಿಕ್ಸ್ ಘೋಷಣೆ ಮಾಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಡಬಲ್ ಧಮಾಕಾ… 4 ದಿನಗಳಲ್ಲಿ 8 ಪಂದ್ಯಗಳು

Source link

ಫಾರೂಕ್ ಅಬ್ದುಲ್ಲಾರನ್ನು ಕೊಲ್ಲಲು 20 ವರ್ಷಗಳಿಂದ ನಡೆದಿತ್ತು ಪ್ಲ್ಯಾನ್, ಆರೋಪಿ ಹೇಳಿದ್ದೇನು?

ಶ್ರೀನಗರ, ಮಾರ್ಚ್​ 12: ಜಮ್ಮುವಿನಲ್ಲಿ ಮಾರ್ಚ್​ 11ರ ರಾತ್ರಿ ನಡೆದ ವಿವಾಹ ಸಮಾರಂಭದಲ್ಲಿ ಬಂದೂಕುಧಾರಿಯೊಬ್ಬ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ(Farooq Abdullah) ಅವರತ್ತ ಗುಂಡು ಹಾರಿಸಿದ್ದ. ಆದರೆ ಫಾರೂಕ್ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದರು. ಜಮ್ಮುವಿನ ಗ್ರೇಟರ್ ಕೈಲಾಶ್‌ನ ರಾಯಲ್ ಪಾರ್ಕ್‌ನಲ್ಲಿ ಅಬ್ದುಲ್ಲಾ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದಾಗ ಈ ಘಟನೆ ನಡೆದಿದೆ. ಕಮಲ್ ಸಿಂಗ್ ಎಂದು ಗುರುತಿಸಲಾದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಕಳೆದ ಎರಡು ದಶಕಗಳಿಂದ ಫಾರೂಕ್ ಅಬ್ದುಲ್ಲಾ ಅವರನ್ನು ಕೊಲ್ಲಲು ಯೋಜಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. 63 ವರ್ಷದ ಜಮ್ಮು ನಿವಾಸಿಯೊಬ್ಬ ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಎನ್‌ಸಿ ಮುಖ್ಯಸ್ಥರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.
ಕಳೆದ 20 ವರ್ಷಗಳಿಂದ ನಾನು ಫಾರೂಕ್ ಅಬ್ದುಲ್ಲಾ ಅವರನ್ನು ಕೊಲ್ಲಲು ಬಯಸಿದ್ದೆ ಎಂದಿದ್ದಾನೆ.
ಮೂಲಗಳ ಪ್ರಕಾರ, ಆರೋಪಿಯು ಜಮ್ಮುವಿನ ಹಳೆಯ ಭಾಗದಲ್ಲಿ ಕೆಲವು ಅಂಗಡಿಗಳನ್ನು ಹೊಂದಿದ್ದು, ತನ್ನ ಅಂಗಡಿಗಳಿಂದ ಬಾಡಿಗೆ ಪಡೆದು ಬದುಕು ಸಾಗಿಸುತ್ತಿದ್ದಾನೆ.
ಇಂದು ನನಗೆ ಸರಿಯಾದ ಅವಕಾಶ ಸಿಕ್ಕಿತ್ತು, ಆದರೆ ಅವರು (ಫಾರೂಕ್ ಅಬ್ದುಲ್ಲಾ) ಬದುಕುಳಿದಿರುವುದು ಅದೃಷ್ಟ ಎಂದು ಎನ್‌ಸಿ ಮುಖ್ಯಸ್ಥರ ಮೇಲಿನ ಹತ್ಯೆಯ ವಿಫಲ ಪ್ರಯತ್ನದ ನಂತರ ಅವರು ಪೊಲೀಸರಿಗೆ ತಿಳಿಸಿದ್ದಾನೆ.
ದಾಳಿಯ ಸಮಯದಲ್ಲಿ ಆರೋಪಿಯು ಮದ್ಯದ ಅಮಲಿನಲ್ಲಿದ್ದನೆಂದು ವರದಿಯಾಗಿದೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯನ್ನು ಹತ್ಯೆ ಮಾಡಲು ಪ್ರಯತ್ನಿಸಿದ ನಂತರ ಭದ್ರತಾ ಸಿಬ್ಬಂದಿ ಅವರನ್ನು ಕೂಡಲೇ ವಶಕ್ಕೆ ಪಡೆದರು. ಘಟನೆ ನಡೆದಾಗ ಫಾರೂಕ್ ಅಬ್ದುಲ್ಲಾ ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಕೂಡ ಸ್ಥಳದಲ್ಲಿದ್ದರು.
ಅಧಿಕಾರಿಗಳ ಪ್ರಕಾರ, ಫಾರೂಕ್ ಅಬ್ದುಲ್ಲಾ ಮತ್ತು ಚೌಧರಿ ಅವರು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಬಿಎಸ್ ಚೌಹಾಣ್ ಅವರ ಮಗಳ ಮದುವೆಗೆ  ಬಂದಿದ್ದರು ಮತ್ತು ಒಂದು ಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿದ್ದರು.
ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮತ್ತು ಫಾರೂಕ್ ಅಬ್ದುಲ್ಲಾ ಅವರ ಪುತ್ರ ಒಮರ್ ಅಬ್ದುಲ್ಲಾ, ತನ್ನ ತಂದೆಯ ಜೀವವನ್ನು ಉಳಿಸಿದ್ದಕ್ಕಾಗಿ  ದೇವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಲೋಡ್ ಮಾಡಿದ ಪಿಸ್ತೂಲ್ ಹಿಡಿದ ವ್ಯಕ್ತಿ ಪಾಯಿಂಟ್-ಬ್ಲಾಂಕ್ ರೇಂಜ್ ಒಳಗೆ ಹೋಗಿ ಎನ್‌ಸಿ ಮುಖ್ಯಸ್ಥರ ಮೇಲೆ ಗುಂಡು ಹಾರಿಸಲು ಹೇಗೆ ಸಾಧ್ಯವಾಯಿತು ಎಂದು ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾರಿ ಹೈಡ್ರಾಮಾ: ಶಾಸಕರ ಕಿತ್ತಾಟ, ಸಚಿವರ ನಡೆಗೆ ಅಸಮಾಧಾನ!

ಬೆಂಗಳೂರು, ಮಾರ್ಚ್​​ 12: ನಗರದ ಶಾಂಗ್ರೀಲಾ ಹೋಟೆಲ್​​ನಲ್ಲಿ ನಡೆದ ಕಾಂಗ್ರೆಸ್​​ ಶಾಸಕಾಂಗ ಪಕ್ಷದ ಸಭೆ ಭಾರಿ ಹೈಡ್ರಾಮಾಗೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರು ಮತ್ತು ಪರಿಷತ್ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಚಿವರು ಕೈಗೆ ಸಿಗುತ್ತಿಲ್ಲ ಸಿಗುತ್ತಿಲ್ಲ ಎಂದು  ಆಕ್ರೋಶ ಹೊರಹಾಕಿದ್ದಾರೆ. ಒಂದು ವೇಳೆ ಪರಿಸ್ಥಿತಿ ಹೀಗೆ ಮುಂದುವರಿದರೆ ಬಹಿರಂಗವಾಗಿ ಮಾತನಾಡುವುದಾಗಿಯೂ ಎಚ್ಚರಿಸಿದ್ದಾರೆ. ಮತ್ತೊಂದೆಡೆ ಪರಿಷತ್​​ ಸದಸ್ಯರು ಅನುದಾನಕ್ಕೆ ಬೇಡಿಕೆ ಇಟ್ಟ ಪ್ರಸಂಗವೂ ನಡೆದಿದೆ.

ಶಾಸಕರ ನಡುವೆಯೇ ಕಿತ್ತಾಟ

ಸಭೆಯಲ್ಲಿ ಶಾಸಕರಾದ ಎಸ್‌.ಎನ್.ನಾರಾಯಣಸ್ವಾಮಿ ಹಾಗೂ ರಾಜೇಗೌಡ ನಡುವೆ ಭಾರಿ ವಾಗ್ವಾದ ನಡೆದಿದೆ. IAS ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ ವಿರುದ್ಧ ಬಂಗಾರಪೇಟೆ ಶಾಸಕ ಎಸ್‌.ಎನ್.ನಾರಾಯಣಸ್ವಾಮಿ ಕಿಡಿ ಕಾರಿದ್ದು, ಪ್ರಭಾವಿಗಳ ಮಾತು ಕೇಳಿ ಕಿರುಕುಳ ಕೊಡುತ್ತಿದ್ದಾರೆ. ಪದೇಪದೆ ಟಾರ್ಗೆಟ್‌ ಮಾಡಿ ಭೂ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ನೋಟಿಸ್ ನೀಡುತ್ತಿದ್ದಾರೆ. ಇದೇ ರೀತಿ ಹತ್ತಾರು ಸಲ ನೋಟಿಸ್ ನೀಡಿದ್ದಾರೆ. ನೋಟಿಸ್‌ಗೆ ಉತ್ತರಿಸಿದರೂ ಕ್ಯಾರೆ ಅಂತಿಲ್ಲ. ನಾನು ಮೂರು ಸಲ ಶಾಸಕನಾಗಿದ್ದೇನೆ, ನನಗೆ ಹೀಗಾದರೆ ಏನು ಮಾಡಲಿ?  ಹೀಗಾಗಿ ಐಎಎಸ್‌ ಅಧಿಕಾರಿ ವಿರುದ್ಧ ಕ್ರಮ ಆಗಬೇಕು ಎಂದು ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ. ಈ ವೇಳೆನಾರಾಯಣಸ್ವಾಮಿ ಮಾತಿಗೆ ಶೃಂಗೇರಿ ಶಾಸಕ ರಾಜೇಗೌಡ ಟಾಂಗ್ ನೀಡಿದ್ದು, ರಾಜೇಂದ್ರ ಕುಮಾರ್ ಕಟಾರಿಯಾ ಒಳ್ಳೆಯ ಅಧಿಕಾರಿ ಎಂದಿದ್ದಾರೆ. ರಾಜೇಗೌಡ ಮಾತಿಗೆ ಕೆರಳಿದ ನಾರಾಯಣಸ್ವಾಮಿ ಏಯ್.. ನಿಮಗೇನ್ರಿ ಗೊತ್ತು ನೋವು? ನೋಟಿಸ್ ಕೊಟ್ಟಿರೋದು ನಿಮಗಾ? ಎಂದು ಪ್ರಶ್ನಿಸಿರೋದು ವಾಗ್ವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕುರ್ಚಿ ಕಾದಾಟದ ನಡುವೆಯೂ ಡಿಕೆಶಿ ಗುಣಗಾನ ಮಾಡಿದ ಸಿದ್ದರಾಮಯ್ಯ; ಕಾರಣ ಇಲ್ಲಿದೆ

‘ನಮ್ಮ ಮರ್ಯಾದೆ ಏನಾಗಬೇಡ?’

ಇನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿಸಿ, ಎಸ್‌ಪಿ ವಿಚಾರವೂ ಪ್ರಸ್ತಾಪವಾಗಿದೆ. ಜಿಲ್ಲೆಗಳಿಗೆ ಜಿಲ್ಲಾಧಿಕಾರಿ, ಎಸ್‌ಪಿಗಳನ್ನು ನೇಮಿಸುವ ಸಂಬಂಧ ಸೌಜನ್ಯಕ್ಕೂ ಶಾಸಕರ ಬಳಿ ಒಂದು ಮಾತು ಕೇಳಲ್ಲ. ಸಚಿವರು, ಪ್ರಭಾವಿಗಳ ಮಾತು ಕೇಳಿ ವರ್ಗಾವಣೆ ಮಾಡಲಾಗುತ್ತೆ. ಕ್ಷೇತ್ರದಲ್ಲಿ ನಾವು ಹೇಳಿದ ಕೆಲಸಗಳೇ ಆಗಲ್ಲ. ವಿಪಕ್ಷದವರ ಕೆಲಸಗಳನ್ನ ಡಿಸಿ, ಎಸ್‌ಪಿಗಳು ಮಾಡಿಕೊಡುತ್ತಾರೆ. ಹೀಗಾದರೆ ಕ್ಷೇತ್ರದಲ್ಲಿ ನಮ್ಮ ಮರ್ಯಾದೆ ಏನಾಗಬೇಡ ಎಂದು ಕೆಲ ಶಾಸಕರು ಪ್ರಶ್ನಿಸಿದ ಪ್ರಸಂಗವೂ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮತ್ತೆ ಬರ್ತಿದೆ ‘ಅಗ್ನಿ ಸಾಕ್ಷಿ’; ಧಾರಾವಾಹಿಗೆ ನಾಯಕ ಯಾರು?

ಕಲರ್ಸ್ ಕನ್ನಡದಲ್ಲಿ ‘ಅಗ್ನಿಸಾಕ್ಷಿ’ ಧಾರಾವಾಹಿ ಈ ಮೊದಲು ಪ್ರಸಾರ ಕಂಡು ಭಾರೀ ವೀಕ್ಷಣೆ ಕಂಡಿತ್ತು. ಹಲವು ವರ್ಷಗಳ ಕಾಲ ಈ ಸೀರಿಯಲ್ ಪ್ರಸಾರ ಆಯಿತು. ಈಗ ಧಾರಾವಾಹಿಯು ಮತ್ತೆ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯು ಪ್ರೋಮೋ ಹಂಚಿಕೊಂಡಿದೆ. ಇದು ವೀಕ್ಷಕರಿಗೆ ಸಾಕಷ್ಟು ಗಮನ ಸೆಳೆದಿದೆ. ಹಳೆಯ ಮ್ಯೂಸಿಕ್ ಅನ್ನು ಬಳಸಲಾಗಿದೆ.

‘ಅಗ್ನಿಸಾಕ್ಷಿ’ ಧಾರವಾಹಿಯು 2013ರ ಡಿಸೆಂಬರ್ 2ರಂದು ಪ್ರಸಾರ ಆರಂಭಿಸಿತು. ಆ ಬಳಿಕ ಧಾರಾವಾಹಿ ಬರೋಬ್ಬರಿ 6 ವರ್ಷ ಪ್ರಸಾರ ಕಂಡಿತು. ಈ ಧಾರಾವಾಹಿ 2020ರ ಜನವರಿ 3ರಂದು ಈ ಧಾರಾವಾಹಿ ಕೊನೆ ಆಯಿತು. ಬರೋಬ್ಬರಿ 1588 ಎಪಿಸೋಡ್ಗಳನ್ನು ಈ ಸೀರಿಯಲ್ ಪ್ರಸಾರ ಮಾಡಿತು. ಈ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಹಾಗೂ ವಿಜಯ್ ಸೂರ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

ಈಗ ‘ಅಗ್ನಿಸಾಕ್ಷಿ’ ಧಾರಾವಾಹಿ ಮತ್ತೆ ಬರುತ್ತಿದೆ. ಈ ಧಾರಾವಾಹಿ ಪ್ರೋಮೋ ನೋಡಿ ವೀಕ್ಷಕರು ಖುಷಿಪಟ್ಟಿದ್ದಾರೆ. ಹಾಗಾದರೆ, ಈ ಧಾರಾವಾಹಿಗೆ ನಾಯಕ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ‘ಅಗ್ನಿಸಾಕ್ಷಿ’ ಧಾರಾವಾಹಿಗೆ ಶಮಂತ್ ಬ್ರೋ ಗೌಡ ನಾಯಕ ಎಂದು ಹೇಳಲಾಗುತ್ತಿದೆ. ಈ ವಿಷಯ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಇದನ್ನೂ ಓದಿ: ‘ನನ್ನನ್ನೇಕೆ ಕುಳ್ಳಿ ಎಂದೆ’; ‘ಅಗ್ನಿಸಾಕ್ಷಿ’ ರೀಯೂನಿಯನ್​ನಲ್ಲಿ ಸುಕೃತಾ-ವೈಷ್ಣವಿ ಸಖತ್ ಫನ್

ಈ ಮೊದಲು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಬ್ರೋ ಗೌಡ ನಟಿಸಿದ್ದರು. ಈ ಧಾರಾವಾಹಿ ಗಮನ ಸೆಳೆಯಿತು. ಈ ಧಾರಾವಾಹಿ ಇತ್ತೀಚೆಗೆ ಪೂರ್ಣಗೊಂಡಿದೆ. ಆ ಬಳಿಕ ಅವರು ಹೊಸ ಜೀವನಕ್ಕೆ ಕಾಲಿಟ್ಟರು. ಅವರು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈಗ ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಮಿಂಚಲು ಅವರು ರೆಡಿ ಆಗಿದ್ದಾರೆ.

ಶಮಂತ್ ಅವರು ಈ ಮೊದಲು ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಸಿದ್ದರು. ಅಲ್ಲಿಂದ ಅವರಿಗೆ ಧಾರಾವಾಹಿ ಆಫರ್ ಬಂತು. ಈಗ ನಟನಾಗಿ ಅವರು ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬರೋಬ್ಬರಿ 209 ಎಸೆತಗಳು ಬಾಕಿ… ಹೀನಾಯ ಸೋಲುಂಡ ಪಾಕಿಸ್ತಾನ್

ಬಾಂಗ್ಲಾದೇಶ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಅತ್ಯಂತ ಹೀನಾಯ ಸೋಲನುಭವಿಸಿದೆ. ಢಾಕಾದಲ್ಲಿ ನಡೆದ ಈ ಪಂದ್ಯದಲ್ಲಿ  ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ 30.4 ಓವರ್‌ಗಳಲ್ಲಿ ಕೇವಲ 114 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ಕೇವಲ 15.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಅಂದರೆ ಬರೋಬ್ಬರಿ 209 ಎಸೆತಗಳನ್ನು ಬಾಕಿಯಿಸಿ ಬಾಂಗ್ಲಾ ಪಡೆ ಏಕದಿನ ಪಂದ್ಯ ಗೆದ್ದುಕೊಂಡಿದೆ.  ಇದು ಎಸೆತಗಳ ಆಧಾರದ ಮೇಲೆ (209 ಎಸೆತಗಳು ಬಾಕಿ) ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶ್ ತಂಡದ  ಇದುವರೆಗಿನ ಅತಿದೊಡ್ಡ ಏಕದಿನ ಗೆಲುವಾಗಿದೆ.

ಹಾಗೆಯೇ ಪಾಕಿಸ್ತಾನ ತಂಡವು ಬಾಂಗ್ಲಾದೇಶ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ದಾಖಲಿಸಿದ ಅತ್ಯಂತ ಕಡಿಮೆ ಮೊತ್ತ (114 ರನ್) ಕೂಡ ಇದಾಗಿದೆ.

ಇನ್ನು ಈ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ಬಾಂಗ್ಲಾದೇಶದ ವೇಗಿ ನಹೀದ್ ರಾಣಾ 24 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದರೆ, ಮತ್ತೊಂದೆಡೆ ತಂಝಿದ್ ಹಸನ್ ಕೇವಲ 42 ಎಸೆತಗಳಲ್ಲಿ ಅಜೇಯ 67 ರನ್ ಬಾರಿಸಿ ತಂಡಕ್ಕೆ ಸುಲಭ ಜಯ ತಂದುಕೊಡುವಲ್ಲಿ ಸಫಲರಾಗಿದ್ದಾರೆ.

ಒಟ್ಟಿನಲ್ಲಿ ಟಿ20 ವಿಶ್ವಕಪ್​ನಲ್ಲಿ ಹೀನಾಯ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಪಾಕಿಸ್ತಾನ್ ತಂಡವು ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಅತ್ಯಂತ ಹೀನಾಯ ಸೋಲುಂಡು ಭಾರೀ ಮುಖಭಂಗ ಅನುಭವಿಸಿದೆ.

 

Source link

ಹಾರರ್, ಸಸ್ಪೆನ್ಸ್ ಸಿನಿಮಾ ಮಾಡಿ ಫೇಮಸ್ ಆಗಿದ್ದ ನಿರ್ದೇಶಕ ಬೆಂಗಳೂರಲ್ಲಿ ನಿಧನ

ತಮಿಳಿನ ಹಿರಿಯ ನಿರ್ದೇಶಕ ಹಾಗೂ ಸಂಗೀತ ಸಂಯೋಜಕ ದಕ್ಕಳಿ ಶ್ರೀನಿವಾಸನ್ ಅವರು ನಿಧನ ಹೊಂದಿದ್ದಾರೆ. ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನಲ್ಲಿ ಅವರು ಕೊನೆಯುಸಿರು ಎಳೆದಿದ್ದು, ಅವರಿಗೆ 72 ವರ್ಷ ವಯಸ್ಸಾಗಿತ್ತು. ಸುಮಾರು ಎರಡೂವರೆ ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು.

1987ರಲ್ಲಿ ರಿಲೀಸ್ ಆದ ‘ಇವರ್ಗಳ್ ವರುಂಗಳಾ ತೂಂಗಲ್’ ಸಿನಿಮಾದಲ್ಲಿ ಬರಹಗಾರನಾಗಿ ಕೆಲಸ ಮಾಡಿ ಚಿತ್ರರಂಗಕ್ಕೆ ಶ್ರೀನಿವಾಸ ಕಾಲಿಟ್ಟರು. ಈ ಚಿತ್ರವನ್ನು ಅವರು ನಿರ್ಮಾಣವನ್ನೂ ಮಾಡಿದ್ದರು. ಆ ಬಳಿಕ ಕಮಲ್ ಹಾಸನ್ ನಟನೆಯ ‘ನಲಯ ಮಣಿದನ್’ ಸಿನಿಮಾದಲ್ಲಿ ಶ್ರೀನಿವಾಸ್ ನಟಿಸಿದರು. ಈ ಚಿತ್ರಕ್ಕೆ ಅವರು ನಿರ್ಮಾಪಕರೂ ಆಗಿದ್ದರು. 1991ರಲ್ಲಿ ಬಂದ ‘ಜನ್ಮ ನಕ್ಷತ್ರಮ್’ ಚಿತ್ರವನ್ನು ಡೈರೆಕ್ಟ್ ಮಾಡುವ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟರು. ಈ ಚಿತ್ರ ಸಸ್ಪೆನ್ಸ್ ಹಾರರ್ ಥೀಮ್ ಶೈಲಿಯಲ್ಲಿ ಮೂಡಿ ಬಂದಿತ್ತು. ಕಮಲ್ ಹಾಸನ್ ಅವರ ‘ಶೂರ ಸಂಹಾರ’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿ ಗಮನ ಸೆಳೆದರು.

ಶ್ರೀನಿವಾಸ್ ಅವರು ಥ್ರಿಲ್ಲರ್ ಹಾಗೂ ಹಾರರ್ ಸಿನಿಮಾಗಳನ್ನು ಮಾಡುವ ಮೂಲಕ ಫೇಮಸ್ ಆಗಿದ್ದರು. ಶ್ರೀನಿವಾಸ್ 2011ರಲ್ಲಿ ‘ಆಡುದಾದು’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದರು. ಆ ಬಳಿಕ ಅವರು ಚಿತ್ರರಂಗದ ಕಡೆ ಮುಖ ಮಾಡಿಲ್ಲ.

ಇದನ್ನೂ ಓದಿ: ಉತ್ತರದವರಾದರೂ ಮೊನಾಲಿಸಾ ಕೇರಳದಲ್ಲಿ ಮದುವೆ ಆಗಿದ್ದೇಕೆ? ಮೊಹಮ್ಮದ್ ಫರ್ಮಾನ್ ಹಿನ್ನೆಲೆ ಏನು?

ಶ್ರೀನಿವಾಸ್ ಅವರು ಸಿನಿಮಾ ಕೆಲಸ ಬಿಟ್ಟ ಬಳಿಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದರು. ಅವರು ತಮ್ಮದೇ ಆದ ಆಶ್ರಮ ಆರಂಭಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಅವರಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಅವರು ಬೆಂಗಳೂರಿನಲ್ಲಿ ವಾಸವಿದ್ದರು ಎನ್ನಲಾಗಿದೆ. ಮಗುವನ್ನು ದತ್ತು ಪಡೆದು ಅವರ ಜೊತೆ ವಾಸವಿದ್ದರು. ಅವರು ಇಲ್ಲಿಯೇ ನಿಧನ ಹೊಂದಿದ್ದು, ಅಂತಿಮ ಸಂಸ್ಕಾರ ಬೆಂಗಳೂರಿನಲ್ಲೇ ನಡೆದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಲ್‌ಪಿಜಿ ಸಿಲಿಂಡರ್​ ಸಿಗದೆ ಪರದಾಟ: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕೆ

ಬೆಂಗಳೂರು, ಮಾರ್ಚ್​​ 12: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯವು ಎಲ್‌ಪಿಜಿ ಸಿಲಿಂಡರ್ ಬಿಕ್ಕಟ್ಟನ್ನು ಎದುರಿಸುತ್ತಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಿಲಿಂಡರ್ ಸಿಗದೆ ಹೋಟೆಲ್ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಲಿಂಡರ್​ಗಳು ಬ್ಲ್ಯಾಕ್​​ ಮಾರ್ಕೆಟ್​​ನಲ್ಲಿ ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದ್ದರೂ ಅವುಗಳ ಲಭ್ಯತೆಯೂ ಕಷ್ಟಸಾಧ್ಯವಾಗಿದೆ. ಇದರಿಂದ ಹಲವು ಹೋಟೆಲ್‌ಗಳು ಮುಚ್ಚುವ ಪರಿಸ್ಥಿತಿ ತಲುಪಿವೆ ಅಥವಾ ತಮ್ಮ ಮೆನುವಿನ ಐಟಂಗಳನ್ನು ಗಣನೀಯವಾಗಿ ಕಡಿಮೆ ಮಾಡಿವೆ. ಇದರಿಂದಾಗಿ ಹೋಟೆಲ್‌ಗಳನ್ನು ಅವಲಂಬಿಸಿರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಆಹಾರದ ಕೊರತೆ ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯ ನಡುವೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ನಾಗರಿಕರಿಗೆ ಬುಕಿಂಗ್ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ. ಮುಂದಿನ ಎರಡು ದಿನಗಳಲ್ಲಿ ಸಿಲಿಂಡರ್​ಗಳನ್ನು ಮನೆಗಳಿಗೆ ವಿತರಿಸಲಾಗುವುದು. ಅಲ್ಲದೆ, ಎಲ್‌ಪಿಜಿ ಸಿಲಿಂಡರ್ ಉತ್ಪಾದನೆಯನ್ನು ಶೇಕಡಾ 25ರಷ್ಟು ಹೆಚ್ಚಿಸಲಾಗಿದೆ ಮತ್ತು ಹೊಸ ಮೂಲಗಳಿಂದ ಎಲ್‌ಎನ್‌ಜಿ ಸರಕುಗಳನ್ನು ಖರೀದಿಸಲಾಗುತ್ತಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version