ಶೇಷಾದ್ರಿಪುರಂ ರೈಲ್ವೆ ಅಂಡರ್‌ಪಾಸ್‌ನಲ್ಲಿ ಕಳಚಿ ಬಿದ್ದ ಬೃಹತ್ ತಗಡಿನ ಶೀಟ್: ತಪ್ಪಿದ ಭಾರೀ ಅನಾಹುತ
ಬೆಂಗಳೂರು, ಮಾ.11: ರಾಜಧಾನಿಯ ಹೃದಯಭಾಗದ ಶೇಷಾದ್ರಿಪುರಂನಿಂದ ಆನಂದರಾವ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್‌ನಲ್ಲಿ ಇಂದು ಬೆಳಿಗ್ಗೆ ದೊಡ್ಡ ಮಟ್ಟದ ಅಪಾಯವೊಂದು ತಪ್ಪಿದೆ. ರೈಲ್ವೆ ಬ್ರಿಡ್ಜ್ ಕೆಳಭಾಗಕ್ಕೆ ಅಳವಡಿಸಲಾಗಿದ್ದ ಬೃಹತ್ ತಗಡಿನ ಶೀಟ್ ಸಂಚರಿಸುತ್ತಿದ್ದ ಬಸ್‌ಗೆ ತಗುಲಿ ನಡುರಸ್ತೆಯಲ್ಲೇ ಕಳಚಿಬಿದ್ದಿದೆ. ಅಂಡರ್ ಪಾಸ್‌ನ ಮೇಲ್ಭಾಗದ ಶೀಟ್‌ಗಳನ್ನು ಹಿಡಿದಿಟ್ಟಿದ್ದ ಕಬ್ಬಿಣದ ಕ್ಲಿಪ್‌ಗಳು ತುಕ್ಕು ಹಿಡಿದು ಕಟ್ ಆಗಿದ್ದವು. ಈ ವೇಳೆ ಬಸ್ಸು ಹಾದುಹೋಗುವಾಗ ಶೀಟ್‌ಗೆ ತಗುಲಿದ ಪರಿಣಾಮ, ಭಾರೀ ಗಾತ್ರದ ತಗಡು ರಸ್ತೆಗೆ ಬಿದ್ದಿದೆ. ಸದಾ ವಾಹನ…