ಇನ್ನೇನು ಇಂಥ ದಿನ ಹಣವನ್ನು ನೀಡುತ್ತೇನೆ ಎಂಬ ಮಾತು ನೀಡಿದ್ದವರು ಸಹ ಈ ತೀರ್ಮಾನದ ಬಗ್ಗೆ ಇನ್ನಷ್ಟು ಆಲೋಚನೆ ಮಾಡಬೇಕಿದೆ ಎಂದು ಹಣ ನೀಡುವುದನ್ನೇ ಮುಂದಕ್ಕೆ ಹಾಕಲಿದ್ದೀರಿ. ಸಂಗಾತಿಯ ಜತೆಗೆ ಉತ್ತಮವಾದ ಸಮಯವನ್ನು ಕಳೆಯುವಂಥ ಯೋಗ ಇದೆ. ಅವರು ನಿಮಗೆ ಅಚ್ಚರಿ ಮೂಡಿಸುವಂತೆ ಕೆಲವು ಉಡುಗೊರೆಗಳನ್ನು ನೀಡಬಹುದು ಅಥವಾ ಪ್ರವಾಸಕ್ಕೆ ಕರೆದೊಯ್ಯುವುದಕ್ಕೆ ಪ್ಲಾನ್ ಮಾಡಬಹುದು.
ಮುಕ್ತ ಮನಸ್ಸಿನಿಂದ ವರ್ತಿಸಲಿದ್ದೀರಿ. ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಆಗಲಿವೆ. ತುಂಬ ಆಪ್ತರು ಹಾಗೂ ಬಂಧುಗಳು ನೀಡುವ ಕೆಲವು ಸಲಹೆ- ಸೂಚನೆಗಳಿಂದಾಗಿ ಬಹಳ ಬದಲಾವಣೆಗಳನ್ನು ನೀವು ಮಾಡಿಕೊಳ್ಳಲಿದ್ದೀರಿ. ನೀವು ಈಗಾಗಲೇ ತೆಗೆದುಕೊಂಡಿದ್ದ ತೀರ್ಮಾನಗಳನ್ನು ತಕ್ಷಣಕ್ಕೆ ತಿಳಿಸದೆ ಮುಂದಕ್ಕೆ ಹಾಕುವ ಸಾಧ್ಯತೆಗಳಿವೆ. ಬಹಳ ಸಮಯದಿಂದ ಮಾಡಬೇಕು ಎಂದಿದ್ದ ಕೆಲವು ಕೆಲಸ ಈ ದಿನ ಮಾಡಲಿದ್ದೀರಿ.
ಪ್ರೀತಿ- ಪ್ರೇಮದ ವಿಚಾರದಲ್ಲಿ ಗಟ್ಟಿ ತೀರ್ಮಾನವನ್ನು ಕೈಗೊಳ್ಳಲೇ ಬೇಕಾದ ಸ್ಥಿತಿ ಉದ್ಭವ ಆಗಲಿದೆ. ಇನ್ನು ಪ್ರಮುಖವಾದ ವ್ಯಕ್ತಿಯೊಬ್ಬರನ್ನು ಈ ದಿನ ಭೇಟಿ ಆಗುವ ಯೋಗ ನಿಮಗೆ ಇದೆ. ಅವರ ಜತೆಗಿನ ಒಡನಾಟದಿಂದ ನಿಮ್ಮ ಆಲೋಚನಾ ಕ್ರಮದಲ್ಲಿ ಬದಲಾವಣೆ ಆಗಲಿದೆ. ಅಷ್ಟೇ ಅಲ್ಲ, ದೀರ್ಘಾವಧಿಯಲ್ಲಿ ಆದಾಯ ತರುವಂಥ ಸಾಧ್ಯತೆಗಳು ಸಹ ಇವೆ.
ಬ್ರಾಂಡೆಡ್ ವಸ್ತುಗಳಿಗಾಗಿ ವಿಪರೀತ ಖರ್ಚು ಮಾಡುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಇದಕ್ಕಾಗಿ ನೀವೇನಾದರೂ ಕ್ರೆಡಿಟ್ ಕಾರ್ಡ್ ಬಳಸುತ್ತೀರಿ ಎಂದಾದರೆ ಅಳತೆಗೆ ಮೀರಿ ಖರ್ಚು ಬರಲಿದೆ. ನೀವೇನಾದರೂ ಕಮಿಷನ್ ಆಧಾರದಲ್ಲಿ ಕೆಲಸ ಮಾಡುವಂಥವರಾದರೆ ಅತಿ ಮುಖ್ಯವಾದ ಕೆಲಸವೊಂದು ನಿಮಗೆ ಬರಲಿದ್ದು, ಅದಕ್ಕೆ ದೊಡ್ಡ ಮೊತ್ತದ ಕಮಿಷನ್ ಆಫರ್ ಸಹ ಮಾಡಬಹುದು.
ಸಿನಿಮಾ ಕ್ಷೇತ್ರದಲ್ಲಿ ಇರುವಂಥವರಿಗೆ ಪ್ರಶಸ್ತಿಗಳು ಬರುವ ಅಥವಾ ದೊಡ್ಡ ವ್ಯಕ್ತಿಗಳಿಂದ ಉಡುಗೊರೆ ಪಡೆಯುವಂತಹ ಸಾಧ್ಯತೆ ಇದೆ. ಮನೆ ಮಾರಾಟ ಮಾಡಿಬಿಡಬೇಕು ಎಂದುಕೊಳ್ಳುತ್ತಿರುವವರಿಗೆ ಒಳ್ಳೆ ಗ್ರಾಹಕರು ದೊರೆಯಬಹುದು. ಅಥವಾ ಈಗಾಗಲೇ ನೋಡಿಕೊಂಡು ಹೋಗಿ, ಬಹಳ ಸಮಯ ಆದಂಥವರೇ ಮತ್ತೆ ನಿಮ್ಮ ಆಸ್ತಿ ಖರೀದಿ ಮಾಡುವುದಕ್ಕೆ ಬರುವ ಸಾಧ್ಯತೆಗಳು ಇವೆ.
ಹೊಸ ಉತ್ಸಾಹವೊಂದು ನಿಮ್ಮಲ್ಲಿ ಇರಲಿದೆ. ಕುಟುಂಬದಲ್ಲೋ ಅಥವಾ ಸ್ನೇಹಿತರು ಸೇರಿ ಆಯೋಜಿಸಬೇಕು ಎಂದುಕೊಂಡಿದ್ದ ಕಾರ್ಯಕ್ರಮಗಳ ಕೆಲಸ- ಕಾರ್ಯಗಳು ವೇಗ ಪಡೆದುಕೊಳ್ಳುತ್ತವೆ. ಸ್ನೇಹಿತರು ನಿಮ್ಮ ಬಳಿ ಮುಖ್ಯವಾದ ಸಲಹೆ- ಸೂಚನೆಗಳನ್ನು ಕೇಳಿಕೊಂಡು ಬರುವ ಸಾಧ್ಯತೆ ಇದೆ. ಇನ್ನು ನಿಖರವಾಗಿ ಹೇಳಬೇಕು ಅಂದರೆ, ನೀವು ನೀಡುವ ಸಲಹೆ- ಸೂಚನೆಗಳು ಅವರಿಗೆ ಮುಖ್ಯವಾಗುತ್ತದೆ.
2026 ರ ಐಪಿಎಲ್‌ಗೆ (IPL 2026) ಕ್ಷಣಗಣನೆ ಆರಂಭವಾಗಿದೆ. ಲೀಗ್‌ನ 19 ನೇ ಆವೃತ್ತಿಯು ಮಾರ್ಚ್ 28 ರಂದು ಪ್ರಾರಂಭವಾಗಲಿದೆ. ಇದಕ್ಕಾಗಿ ಎಲ್ಲಾ ತಂಡಗಳು ತಮ್ಮ ತಯಾರಿಯನ್ನು ಆರಂಭಿಸಿವೆ. ಈಗಷ್ಟೇ ಟಿ20 ವಿಶ್ವಕಪ್ ಆಡಿ ಮುಗಿಸಿರುವ ಟೀಂ ಇಂಡಿಯಾ ಆಟಗಾರರು ಇನ್ನಷೇ ತಮ್ಮ ತಮ್ಮ ತಂಡಗಳನ್ನು ಕೂಡಿಕೊಳ್ಳಬೇಕಿದೆ. ಇದೆಲ್ಲದರ ನಡುವೆ ಗುಜರಾತ್ ಟೈಟನ್ಸ್ (Gujarat Titans) ತಮ್ಮ ಕೋಚಿಂಗ್ ಸಿಬ್ಬಂದಿಯಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ. ಗುಜರಾತ್ ತಂಡವು ಹೊಸ ಬ್ಯಾಟಿಂಗ್ ಕೋಚ್ ಆಗಿ ಆಸ್ಟ್ರೇಲಿಯಾದ ಅನುಭವಿ ಆಟಗಾರ ಮ್ಯಾಥ್ಯೂ ಹೇಡನ್ (Matthew Hayden) ಅವರನ್ನು ಆಯ್ಕೆ ಮಾಡಿದೆ.
ಮ್ಯಾಥ್ಯೂ ಹೇಡನ್ ಬ್ಯಾಟಿಂಗ್ ಕೋಚ್
ಮೇಲೆ ಹೇಳಿದಂತೆ ಗುಜರಾತ್ ಟೈಟನ್ಸ್ ತಂಡ ಆಸ್ಟ್ರೇಲಿಯಾದ ಮಾಜಿ ಬ್ಯಾಟಿಂಗ್ ದಂತಕಥೆ ಮ್ಯಾಥ್ಯೂ ಹೇಡನ್ ಅವರನ್ನು ತಮ್ಮ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿಕೊಂಡಿದೆ. ಆಸೀಸ್ ಪರ ಸ್ಮರಣೀಯ ವೃತ್ತಿಜೀವನವನ್ನು ಹೊಂದಿರುವ ಹೇಡನ್ ಆಸ್ಟ್ರೇಲಿಯಾ ಪರ ಆಡಿರುವ 273 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 15,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಹಾಗೆಯೇ ಐಪಿಎಲ್‌ನಲ್ಲಿಯೂ ಆಡಿರುವ ಅನುಭವ ಹೊಂದಿರುವ ಹೇಡನ್ 32 ಪಂದ್ಯಗಳನ್ನು ಆಡಿದ್ದಾರೆ. ಇದೀಗ, ಅವರು ಕೋಚ್ ಆಗಿ ಐಪಿಎಲ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
ಮ್ಯಾಥ್ಯೂ ಹೇಡನ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡುವ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಗುಜರಾತ್ ಟೈಟಾನ್ಸ್ ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ, ‘ಮ್ಯಾಥ್ಯೂ ಹೇಡನ್ ಅವರ ನೇಮಕವು ನಮ್ಮ ಪ್ರಯಾಣಕ್ಕೆ ನಿರ್ಣಾಯಕವಾಗಿದೆ. ಫ್ರಾಂಚೈಸಿಯಾಗಿ, ನಾವು ನಮ್ಮ ಕ್ರಿಕೆಟ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವತ್ತ ನಿರಂತರವಾಗಿ ಗಮನಹರಿಸುತ್ತೇವೆ. ಅವರ ಉನ್ನತ ಮಟ್ಟದ ಅನುಭವ ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವ ಅವರ ಸಾಮರ್ಥ್ಯವು ಮುಂಬರುವ ಆವೃತ್ತಿಯಲ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಸಹಾಯ ಮಾಡುತ್ತದೆ’ ಎಂದಿದ್ದಾರೆ.
ಮ್ಯಾಥ್ಯೂ ಹೇಡನ್ ಅವರಿಗೆ ಹೆಚ್ಚಿನ ತರಬೇತಿಯ ಅನುಭವವಿಲ್ಲ. ಆದಾಗ್ಯೂ, ಅವರು ಈ ಹಿಂದೆ ಪಾಕಿಸ್ತಾನ ತಂಡಕ್ಕೆ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. 2021 ರ ಟಿ20 ವಿಶ್ವಕಪ್‌ಗೆ ಮೊದಲು, ಪಾಕಿಸ್ತಾನ ಅವರನ್ನು ತಮ್ಮ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿತು. ಆ ಪಂದ್ಯದಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಿತು. ಇದರ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 2022 ರ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾರ್ಗದರ್ಶಕರಾಗಿ ಹೇಡನ್ ಅವರನ್ನು ನೇಮಿಸಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 10: ಗಲ್ಫ್ ರಾಷ್ಟ್ರಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ವಿಮಾನಯಾನ ಟರ್ಬೈನ್ ಇಂಧನ (ATF) ಬೆಲೆಗಳಲ್ಲಿ ತೀವ್ರ ಏರಿಕೆಯಾದ ಹಿನ್ನೆಲೆಯಲ್ಲಿ ಏರ್ ಇಂಡಿಯಾ (Air India) ತನ್ನ ದೇಶೀಯ ಮತ್ತು ಅಂತಾರಾಷ್ಟ್ರೀಯ ನೆಟ್‌ವರ್ಕ್‌ನಲ್ಲಿ ಇಂಧನ ಹೆಚ್ಚುವರಿ ಶುಲ್ಕಗಳ ವಿಸ್ತರಣೆಯನ್ನು ಘೋಷಿಸಿದೆ. ATF ವಿಮಾನಯಾನ ನಿರ್ವಹಣಾ ವೆಚ್ಚದ ಸುಮಾರು ಶೇ. 40ರಷ್ಟಿದೆ. ಮಾರ್ಚ್ 12ರಿಂದ ಜಾರಿಗೆ ಬರುವ 1ನೇ ಹಂತದ ದೇಶೀಯ ಮತ್ತು ಪ್ರಾದೇಶಿಕ ಮಾರ್ಗಗಳಿಗೆ ಅನ್ವಯಿಸುತ್ತದೆ.
ಮಾರ್ಚ್ 12ರಿಂದ ದೇಶೀಯ ವಿಮಾನ ಟಿಕೆಟ್‌ಗಳಿಗೆ 399 ರೂ.ಗಳ ಇಂಧನ ಸರ್ಚಾರ್ಜ್ ಅನ್ನು ಸೇರಿಸಲಾಗುವುದು ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಅಂತಾರಾಷ್ಟ್ರೀಯ ವಿಮಾನಗಳಲ್ಲಿನ ಪ್ರಯಾಣಿಕರು ಕೂಡ ಹೆಚ್ಚಿನ ಇಂಧನ ಸರ್ಚಾರ್ಜ್‌ಗಳನ್ನು ಎದುರಿಸಬೇಕಾಗುತ್ತದೆ ಎಂದು ವಿಮಾನಯಾನ ಸಂಸ್ಥೆಯು ದೃಢಪಡಿಸಿದೆ.
ಇರಾನ್, ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಒಳಗೊಂಡ ಸಂಘರ್ಷಕ್ಕೆ ಸಂಬಂಧಿಸಿದ ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿನ ಅಡೆತಡೆಗಳ ನಡುವೆ ವಿಶ್ವಾದ್ಯಂತ ವಿಮಾನಯಾನ ಸಂಸ್ಥೆಗಳು ಹೆಚ್ಚುತ್ತಿರುವ ಇಂಧನ ವೆಚ್ಚಗಳನ್ನು ಎದುರಿಸುತ್ತಿರುವುದರಿಂದ ಸರ್‌ಚಾರ್ಜ್ ಏರಿಕೆಯಾಗಿದೆ. ವಿಮಾನಯಾನ ಇಂಧನವು ಸಾಮಾನ್ಯವಾಗಿ ವಿಮಾನಯಾನ ಸಂಸ್ಥೆಗಳಿಗೆ ಅತಿ ದೊಡ್ಡ ನಿರ್ವಹಣಾ ವೆಚ್ಚಗಳಲ್ಲಿ ಒಂದಾಗಿದೆ. ಕಚ್ಚಾ ತೈಲ ಬೆಲೆಗಳು ಏರುತ್ತಿರುವುದು ಭಾರತದ ವಾಯುಯಾನ ವಲಯದ ಮೇಲೆ ವ್ಯಾಪಕ ಪರಿಣಾಮ ಬೀರಬಹುದು ಎಂದು ಕೈಗಾರಿಕಾ ಕಾರ್ಯನಿರ್ವಾಹಕರು ಎಚ್ಚರಿಸಿದ್ದಾರೆ.
ಇರಾನ್ ಸಂಘರ್ಷವು ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ ಇಂಡಿಗೋ, ಏರ್ ಇಂಡಿಯಾ ಮತ್ತು ಸ್ಪೈಸ್‌ಜೆಟ್ ಸೇರಿದಂತೆ ಭಾರತೀಯ ವಿಮಾನಯಾನ ಸಂಸ್ಥೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಹೆಚ್ಚಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಮಾಡಿ, ಅಸಭ್ಯ ಸಂದೇಶ ಕಳಿಸುವವರಿಗೆ ತಕ್ಕ ಪಾಠ ಕಲಿಸಲು ನಟಿ ರಮ್ಯಾ ದಿವ್ಯ ಸ್ಪಂದನಾ (Ramya Divya Spandana) ಅವರು ಕಾನೂನಿನ ಹಾದಿ ಹಿಡಿದಿದ್ದಾರೆ. ಈ ಪ್ರಕರಣದ ವಿಚಾರಣೆ ಆರಂಭ ಆಗಿದ್ದು, ರಮ್ಯಾ ಅವರು ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ‘ಈ ಪ್ರಕರಣದಲ್ಲಿ ಜಡ್ಜ್ ಏನು ತೀರ್ಪು ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಒಂದು ಮಾದರಿ ನಿರ್ಮಾಣ ಆಗುತ್ತದೆ. ಆಗ ಜನರಿಗೆ ಒಂದು ಭಯ ಬರುತ್ತದೆ. ಅಂಥ ಕಮೆಂಟ್ ಮಾಡುವುದಕ್ಕೂ ಮುಂಚೆ ಯೋಚನೆ ಮಾಡುತ್ತಾರೆ. ಯಾಕೆಂದರೆ, 2 ವರ್ಷದಿಂದ 7 ವರ್ಷಗಳ ಜೈಲು ಶಿಕ್ಷೆ ಆಗಬಹುದು. ಅವರು ಸಾಮಾನ್ಯವಾಗಿ ಟ್ರೋಲ್ ಮಾಡಿಲ್ಲ. ಮಕ್ಕಳನ್ನೂ ಸೇರಿಸಿ ಟ್ರೋಲ್ ಮಾಡಿದ್ದಾರೆ. ಹೆಂಡ್ತಿ, ಮಕ್ಕಳನ್ನು ಪೊಲೀಸರ ಎದುರಲ್ಲೇ ರೇಪ್ ಮಾಡುತ್ತೇವೆ, ಕೊಲೆ ಮಾಡುತ್ತೇವೆ ಅಂತ ಹೇಳಿದ್ದಾರೆ. ಇದನ್ನು ನಾನು ಸುಮ್ಮನೆ ಬಿಟ್ಟರೆ ಸಾಮಾನ್ಯ ಹೆಣ್ಣು ಮಕ್ಕಳ ಪರಿಸ್ಥಿತಿ ಏನಾಗಹುದು’ ಎಂದು ರಮ್ಯಾ (Ramya) ಅವರು ಹೇಳಿದ್ದಾರೆ.
ತುಮಕೂರು, (ಮಾರ್ಚ್ 10): ಎರಡು ವರ್ಷದ ಮಗುವಿನ ಜೊತೆ ತಾಯಿ ಒಂದೇ ಕುಣಿಕೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತುಮಕೂರು (Tumakuru) ಜಿಲ್ಲೆ ಗುಬ್ಬಿ ತಾಲ್ಲೂಕಿನ ಹಾಗಲವಾಡಿಯಲ್ಲಿ ನಡೆದಿದೆ, ಗಂಗಾಮಣಿ(30), ಪ್ರೇಕ್ಷಾ (2) ಮೃತರು. ಗಂಗಾಮಣಿ ತನ್ನೊಟ್ಟಿಗೆ ಏನು ಅರಿಯದ 2 ವರ್ಷದ ಮಗುವಿನ ಕುತ್ತಿಗೆಗೆ ಕುಣಿಕೆ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗರ್ಭಕೋಶದ ಸಮಸ್ಯೆಯಿಂದ ಮನನೊಂದು ಮಹಿಳೆ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಇನ್ನೆರಡು ಮಕ್ಕಳು ಸಾವಿನ ಮನೆಯಿಂದ ಪಾರಾಗಿವೆ.
ಎಂಟು ವರ್ಷದ ಹಿಂದೆ ಯತೀಶ್ ಎಂಬಾತನ ಜೊತೆ ಗಂಗಾಮಣಿ ವಿವಾಹವಾಗಿದ್ದು, ದಂಪತಿಗೆ ಮೂರು ಮಕ್ಕಳು. ವೃತ್ತಿಯಲ್ಲಿ ಕ್ಯಾಂಟರ್ ಡ್ರೈವರ್ ಆಗಿರುವ ಯತೀಶ್, ಎಂದಿನಿಂತೆ ಇಂದು(ಮಾರ್ಚ್ 10) ಕೆಲಸಕ್ಕೆ ತೆರಳಿದ್ದಾರೆ. ಇನ್ನು ಇಬ್ಬರು ಮಕ್ಕಳು ವಿನಯ್ (7) ಹಾಗೂ ರಕ್ಷಿತಾ (5) ಶಾಲೆಗೆ ಹೋಗಿದ್ದಾರೆ. ಆಗ ಮನೆಯಲ್ಲಿ ಯಾರು ಇಲ್ಲದ ವೇಳೆ ಗಂಗಾಮಣಿ ತನ್ನ ಎರಡು ವರ್ಷದ ಪ್ರೇಕ್ಷಾ ಜೊತೆ ನೇಣಿಗೆ ಶರಣಾಗಿದ್ದಾಳೆ.
ಇನ್ನು ಮಕ್ಕಳು ಶಾಲೆಯಿಂದ ಮನೆಗೆ ಬಂದಿದ್ದಾರೆ. ಆದ್ರೆ, ಮನೆ ಒಳಗಿನಿಂದ ಲಾಕ್ ಆಗಿದ್ದು, ಇದನ್ನು ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾರೆ. ಬಳಿಕ ಪಕ್ಕದ ಮನೆಯವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೊರಗಿನ ಧೂಳು, ಮಾಲಿನ್ಯದ ಕಾರಣದಿಂದ ಚರ್ಮಕ್ಕೆ ಹಾನಿ ಉಂಟಾಗುತ್ತದೆ. ಅಲ್ಲದೆ ದಿನನಿತ್ಯದ ಒತ್ತಡದ ಪರಿಣಾಮಗಳೂ ಮುಖದ ಮೇಲೆ ಗೋಚರಿಸುತ್ತವೆ. ಆದ್ದರಿಂದ ಚರ್ಮದ ಆರೈಕೆಯ (skin care) ಬಗ್ಗೆ ಗಮನವಹಿಸಬೇಕು. ಅದರಲ್ಲೂ ತ್ವಚೆ ಕಾಂತಿಯುತವಾಗಿರಲು, ಆರೋಗ್ಯಕರವಾಗಿರಲು ಮಲಗುವ ಮುನ್ನ ತ್ವಚೆಯ ಆರೈಕೆಯ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಇದಕ್ಕಾಗಿ ದುಬಾರಿ ಸ್ಕಿನ್‌ಕೇರ್‌ಗಳ ಮೊರೆ ಹೋಗುವ ಅವಶ್ಯಕತೆಯಿಲ್ಲ. ಮಲಗುವ ಮುನ್ನ ಮುಖಕ್ಕೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿದರೆ ಸಾಕು. ತೆಂಗಿನ ಎಣ್ಣೆಯಲ್ಲಿರುವ ಉತ್ಕರ್ಷಣ ನಿರೋಧಕಗಳು, ಕೊಬ್ಬಿನಾಮ್ಲಗಳು ಮತ್ತು ಆರ್ಧ್ರಕ ಗುಣಲಕ್ಷಣಗಳು ಚರ್ಮವನ್ನು ಆಳವಾಗಿ ಪೋಷಿಸಲು ಸಹಾಯ ಮಾಡುತ್ತದೆ. ಇದರಿಂದ ತ್ವಚೆಯ ಹೊಳಪು ಹೆಚ್ಚುವುದು ಮಾತ್ರವಲ್ಲ ಈ ಪ್ರಯೋಜನಗಳೂ ಲಭಿಸುತ್ತವೆ.
ಮುಖಕ್ಕೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಲಭಿಸುವ ಪ್ರಯೋಜನಗಳು:
ಆಳವಾದ ಮಾಯಿಶ್ಚರೈಸರ್ : ತೆಂಗಿನ ಎಣ್ಣೆ ಅತ್ಯುತ್ತಮವಾದ ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು, ಮಲಗುವ ಮುನ್ನ ಇದನ್ನು ಮುಖಕ್ಕೆ ಹಚ್ಚುವುದರಿಂದ ರಾತ್ರಿಯಿಡೀ ನಿಮ್ಮ ಚರ್ಮವು ತೇವಾಂಶದಿಂದ ಕೂಡಿರುತ್ತದೆ ಮತ್ತು ಇದು ಶುಷ್ಕತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ನೈಸರ್ಗಿಕ ಹೊಳಪು: ತೆಂಗಿನ ಎಣ್ಣೆ ತ್ವಚೆಯ ಸತ್ತ ಚರ್ಮವನ್ನು ಹೊರಹಾಕುತ್ತದೆ, ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ತ್ವಚೆ ಕಾಂತಿಯುತವಾಗಿರಲು ಪ್ರತಿದಿನ ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆಯನ್ನು ಮುಖಕ್ಕೆ ಹಚ್ಚಿ.
ಮೊಡವೆಗಳನ್ನು ಹೋಗಲಾಡಿಸುತ್ತದೆ: ತೆಂಗಿನ ಎಣ್ಣೆಯು ಲಾರಿಕ್ ಆಮ್ಲದಂತಹ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದ್ದು, ಇದು ಮೊಡವೆ ಉಂಟುಮಾಡುವ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಮತ್ತು ಚರ್ಮವನ್ನು ತೇವಗೊಳಿಸಲು ಸಹಾಯ ಮಾಡುತ್ತದೆ. ಇದು ಸುಕ್ಕುಗಳು ಮತ್ತು ಶುಷ್ಕತೆಯನ್ನು ಸಹ ಕಡಿಮೆ ಮಾಡುತ್ತದೆ.
ಕಪ್ಪು ವರ್ತುಲಗಳನ್ನು ನಿವಾರಿಸುತ್ತದೆ: ತೆಂಗಿನ ಎಣ್ಣೆ ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳನ್ನು ತೆಗೆದುಹಾಕಲು ಅತ್ಯುತ್ತಮ ಪರಿಹಾರವಾಗಿದೆ. ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆಯಿಂದ ಕಣ್ಣುಗಳ ಸುತ್ತಲೂ ನಿಧಾನವಾಗಿ ಮಸಾಜ್ ಮಾಡುವುದರಿಂದ ಆಯಾಸ ನಿವಾರಣೆಯಾಗುತ್ತದೆ ಮತ್ತು ಕಪ್ಪು ವರ್ತುಲಗಳು ಕಡಿಮೆಯಾಗುತ್ತವೆ. ಇದಲ್ಲದೆ, ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ತರುತ್ತದೆ.
ಕಪ್ಪು ಕಲೆಗಳಿಗಳನ್ನು ನಿವಾರಿಸುತ್ತದೆ: ಮಲಗುವ ಮುನ್ನ ಮುಖವನ್ನು ಚೆನ್ನಾಗಿ ತೊಳೆಯಿರಿ. ನಿಮ್ಮ ಅಂಗೈಗಳಿಗೆ ಎಣ್ಣೆ ಹಚ್ಚಿ ಕಲೆಗಳ ಮೇಲೆ ಉಜ್ಜಿಕೊಳ್ಳಿ. ನಿಮ್ಮ ಮುಖವನ್ನು ಮಸಾಜ್ ಮಾಡಿ ರಾತ್ರಿಯಿಡೀ ಬಿಡಿ. ಇದು ಕಪ್ಪು ಕಲೆಗಳನ್ನು ತೆಗೆದುಹಾಕಲು ಮತ್ತು ನಿಮ್ಮ ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ.
ತೆಂಗಿನ ಎಣ್ಣೆಯನ್ನು ಬಳಸುವ ಸರಿಯಾದ ವಿಧಾನ:
ಮೊದಲು, ನಿಮ್ಮ ಮುಖವನ್ನು ಸೌಮ್ಯವಾದ ಫೇಸ್ ವಾಶ್ ನಿಂದ ತೊಳೆಯಿರಿ. ನಂತರ ನಿಮ್ಮ ಅಂಗೈಯಲ್ಲಿ 4-5 ಹನಿ ಶುದ್ಧ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ಮುಖವನ್ನು ವೃತ್ತಾಕಾರದ ಚಲನೆಯಲ್ಲಿ 5-10 ನಿಮಿಷಗಳ ಕಾಲ ಮಸಾಜ್ ಮಾಡಿ. ರಾತ್ರಿಯಿಡೀ ಎಣ್ಣೆಯನ್ನು ಹಾಗೆಯೇ ಬಿಡಿ ಮತ್ತು ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ಹೀಗೆ ಪ್ರತಿದಿನ ರಾತ್ರಿ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ, ಚರ್ಮದಲ್ಲಿ ರಕ್ತ ಪರಿಚಲನೆ ಸುಧಾರಿಸಲು ಪ್ರಾರಂಭಿಸುವುದರಿಂದ ಚರ್ಮ ಕಾಂತಿಯುತವಾಗಿ, ಆರೋಗ್ಯಕರವಾಗಿ ಕಾಣಿಸುತ್ತದೆ.
ಜಾತ್ರೆ ಅಂದರೆ ಅದೊಂದು ರೀತಿಯ ಸಂಭ್ರಮ ಸಡಗರ. ತಮ್ಮ ಊರಿನ ದೇವರಿಗೆ ವರ್ಷಕ್ಕೊಮ್ಮೆ ರಥೋತ್ಸವ, ಕರಗ, ಪಲ್ಲಕ್ಕಿ ನಡೆಸುವ ಮೂಲಕ ಗ್ರಾಮದ ಜನ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಆದರೆ ಇಲ್ಲೊಂದು ಕಡೆ ಮಂಗಳಮುಖಿಯರ ವಿಶೇಷ ಜಾತ್ರೆ ನಡೆಯುತ್ತದೆ. ತಮ್ಮ ಆರಾಧ್ಯ ದೇವಿಗೆ ವರ್ಷಕ್ಕೊಂದು ಬಾರಿ ಮಂಗಳಮುಖಿಯರು ಹರಕೆ ತೀರಿಸುತ್ತಾರೆ.
ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ರಥೋತ್ಸವ ಮತ್ತು ಬೇಗಿಹಳ್ಳಿಯ ಬೇಗಳಮ್ಮ ಜಾತ್ರೆಯನ್ನ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಪ್ರತಿ ವರ್ಷ ಇದೇ ಸಮಯದಲ್ಲಿ ರಥೋತ್ಸವ ನಡೆಯುತ್ತದೆ.
ಬೆಳಿಗ್ಗೆ ರಥದಲ್ಲಿ ಚಂಪಕಧಾಮ ಸ್ವಾಮಿಯನ್ನು ಕುಳ್ಳಿರಿಸಿ ಬನ್ನೇರುಘಟ್ಟದ ರಥ ಬೀದಿಯಲ್ಲಿ ಎಳೆಯುತ್ತಾರೆ. ಈ ಸಮಯದಲ್ಲಿ ಸಾವಿರಾರು ಜನ ರಥ ಎಳೆದು ಪುನೀತರಾದರು. ಈ ಜಾತ್ರೆಯ ವಿಶೇಷವೆಂದರೆ ಕರ್ನಾಟಕ, ತಮಿಳುನಾಡು ಆಂಧ್ರ ಸೇರಿದಂತೆ ಹಲವು ಕಡೆಗಳಿಂದ ಅಪಾರ ಸಂಖ್ಯೆಯ ಮಂಗಳಮುಖಿಯರು ಒಟ್ಟಾಗಿ ಸೇರಿ ಬೇಗಳಮ್ಮಗೆ ಪೂಜೆಸಲ್ಲಿಸಿದರು.
ಚಂಪಕಧಾಮ ಸ್ವಾಮಿ ದೇವಾಲಯ ಚೋಳರ ಕಾಲದಲ್ಲಿ ನಿರ್ಮಿಸಲಾಗಿದ್ದು, ಚಂಪಕ ಸ್ವಾಮಿ ಹಾಗೂ ಬೇಗಳಮ್ಮ ಅಣ್ಣ-ತಂಗಿ. ಹರಕೆ ಹೊತ್ತವರು ಮೊದಲಿಗೆ ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿಯ ದರ್ಶನ ಪಡೆದು ಹೂವನ್ನು ಕಟ್ಟಿಸಿಕೊಳ್ಳುತ್ತಾರೆ. ಹಳದಿ ಸೀರೆ, ಜಡೆ ತುಂಬಾ ಮಲ್ಲಿಗೆ ಮುಡಿದು ತಮಟೆ ವಾದ್ಯಗಳ ನಡುವೆ ಬರಿಗಾಲಿನಲ್ಲಿ ಬಿಸಿಲಿನ ನಡುವೆ ಹೆಜ್ಜೆ ಹಾಕುತ್ತ ಮಂಗಳಮುಖಿಯರು ಬನ್ನೇರುಘಟ್ಟದಿಂದ ಸುಮಾರು 4 ಕಿಮೀ ದೂರ ಬೇಗಳಮ್ಮನ ದೇವಾಲಯಕ್ಕೆ ನಡೆದುಕೊಂಡು ಸಾಗುತ್ತ ಹರಕೆ ತಿರಿಸುತ್ತಾರೆ.
ಬೇಗಳಮ್ಮಗೆ ಪೂಜೆ ಸಲ್ಲಿಸಿ ವಿಶೇಷವಾಗಿ ಎಲೆ ಅಡಿಕೆ, ಕಡ್ಡಿಪುಡಿಯನ್ನು ಹಾಗೂ ಕೋಳಿಯನ್ನು ಬೇಗಳಮ್ಮಗೆ ನೈವೇದ್ಯವಾಗಿ ನೀಡುತ್ತಾರೆ. ಒಟ್ಟಾರೆ ಚಂಪಕಧಾಮ ಸ್ವಾಮಿಯ ಗ್ರಾಮೀಣ ಸೊಬಗಿನ ಜಾತ್ರೆ ವೈಭವ ಒಂದೆಡೆಯಾದರೆ, ಮತ್ತೊಂದೆಡೆ ಮಂಗಳಮುಖಿಯರು ಆರಾಧ್ಯ ದೇವಿಗೆ ಪೂಜೆ, ಹರಕೆ ಸಲ್ಲಿಸಿ ಖುಷಿಪಟ್ಟರು.
ಬೆಂಗಳೂರು, (ಮಾರ್ಚ್ 10): ಪ್ರಯಾಣಿಕರಿಗೆ ಬಿಎಂಟಿಸಿ (BMTC) ಸಿಹಿಸುದ್ದಿ ಹೊತ್ತು ತಂದಿದೆ. ಇನ್ಮುಂದೆ ಟಿಕೆಟ್ ತೆಗೆದುಕೊಳ್ಳುವ ಟೆನ್ಷನ್ ಇರಲ್ಲ. ಆ ಕಾರ್ಡ್, ಈ ಕಾರ್ಡ್ ಅಂತ ಬ್ಯಾಗ್ ತಡಕುವ ಪ್ರಮೇಯವೇ ಬೇಡ, ಜಸ್ಟ್ ‘ನಮ್ಮ ಮೆಟ್ರೋ’ ಕಾರ್ಡ್ (Namma Metro Card) ತೋರಿಸಿ ಪ್ರಯಾಣ ಮಾಡಬಹುದು. ಹೌದು.. ಮುಂದಿನ ದಿನಗಳಲ್ಲಿ ನೀವು ಡೆಬಿಟ್ ಕಾರ್ಡ್ (Debit Card) ಮತ್ತು ಕ್ರೆಡಿಟ್ ಕಾರ್ಡ್‌ಗಳು (Credit Card) ಮಾತ್ರವಲ್ಲ, ಮೊಟ್ರೋ ಕಾರ್ಡ್ ಸಹ ಕಂಡಕ್ಟರ್‌ಗೆ (ನಿರ್ವಾಹಕ) ತೋರಿಸಿ ಬಿಎಂಟಿಸಿ (BMTC) ಬಸ್ನಲ್ಲಿ ಹೋಗಬಹುದು. ಹೌದು..ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗದು ರಹಿತ ಟಿಕೆಟ್ ವ್ಯವಸ್ಥೆಗೆ ಮಹತ್ವದ ಹೆಜ್ಜೆ ಇಟ್ಟಿದ್ದು, ಸುಮಾರು 10 ಸಾವಿರ ಅತ್ಯಾಧುನಿಕ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳನ್ನು (ETM Electronic Ticketing Machine) ಅಳವಡಿಸಲು ಮುಂದಾಗಿದೆ.
ಈ ಹೊಸ ಇಟಿಎಂ ಮೆಷಿನ್ ನಲ್ಲಿ ಎನ್ಸಿಎಂಸಿ ಕಾರ್ಡ್ ಬಳಕೆ ಮಾಡಿ ಅಂದರೆ ಬಿಎಂಟಿಸಿ ಮತ್ತು ನಮ್ಮ ಮೆಟ್ರೋ ರೈಲಿನಲ್ಲೂ ಸಂಚಾರ ಮಾಡಲು ಅವಕಾಶ ನೀಡಲಾಗಿದೆ. ಬರೋಬ್ಬರಿ 40 ಕೋಟಿ ರುಪಾಯಿ ವೆಚ್ಚದಲ್ಲಿ ಮುಂಬೈ ಮೂಲದ ಚಲೋ ಅನ್ನೋ ಕಂಪನಿಗೆ ಟೆಂಡರ್ ನೀಡಲಾಗಿದೆ. ಐದು ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ 11 ಸಾವಿರ ಇಟಿಎಂ ಮಷಿನ್ ಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಈಗಾಗಲೇ ಚಲೋ ಕಂಪನಿಗೆ 11 ಸಾವಿರ ಮಷಿನ್ ಗಳನ್ನು ಸಪ್ಲೈ ಮಾಡಲು ಟೆಂಡರ್ ನೀಡಲಾಗಿದೆ. ಇದಕ್ಕೆ ಪ್ರಯಾಣಿಕರು ಕಂಡಕ್ಟರ್ ಕಳ್ಳಾಟಕ್ಕೆ ಬ್ರೇಕ್ ಬೀಳಲಿದೆ.
ಇನ್ನು ಈ ತಿಂಗಳಲ್ಲಿ ಎಲ್ಲಾ ಬಿಎಂಟಿಸಿ ಬಸ್ಸುಗಳಲ್ಲೂ ಹೊಸ ಮೆಷಿನ್ ಗಳು ಬರುವ ಸಾಧ್ಯತೆಯಿದೆ. ಈ ಮಷಿನ್ ಗಳಲ್ಲಿ ಎಟಿಎಂ ಕಾರ್ಡ್, ಕ್ರೆಡಿಟ್ ಕಾರ್ಡ್, ಫೋನ್ ಪೇ,ಗೂಗಲ್ ಪೇ ಸೇರಿದಂತೆ ಪೇಟಿಯಂ ಯೂಸ್ ಮಾಡಿ ಪ್ರಯಾಣಿಕರು ಹಣ ಪಾವತಿ ಮಾಡಿ ಸಂಚಾರ ಮಾಡಬಹುದು. ಈ ಮಷಿನ್ ನಲ್ಲಿ ಡೈನಾಮಿಕ್ ಕ್ಯೂ ಆರ್ ಕೋಡ್ ಗಳನ್ನು ಅಳವಡಿಸಿದ್ದು, ಇದರಿಂದ ಕಂಡಕ್ಟರ್, ಪ್ರಯಾಣಿಕರಿಗೆ ಮತ್ತು ಬಿಎಂಟಿಸಿ ನಿಗಮಕ್ಕೆ ವಂಚನೆ ಮಾಡಲು ಸಾಧ್ಯವಿಲ್ಲ. ಎಲ್ಲಿಂದ ಎಲ್ಲಿಗೆ?ಎಷ್ಟು ಟಿಕೆಟ್ ದರ ಎನ್ನುವ ಸಂಪೂರ್ಣ ಮಾಹಿತಿ ಅಪ್ಲೋಡ್ ಮಾಡಲಾಗಿದೆ.
ಇಟಿಎಂ ಯಂತ್ರಗಳಲ್ಲಿ ಹೊಸ ತಂತ್ರಜ್ಞಾನ
ಬಿಎಂಟಿಸಿಯಲ್ಲಿ ಕೂಡ ಈಗಾಗಲೇ ಸ್ಟಾಟಿಕ್ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಾವತಿಸಿ ಪ್ರಯಾಣಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈ ವ್ಯವಸ್ಥೆಯಲ್ಲಿ ಯಾವುದೇ ಕೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಟಿಕೆಟ್ ನೀಡುವ ವ್ಯವಸ್ಥೆ ಇರಲಿಲ್ಲ. ಆದ್ರೆ, ಇದೀಗ ಇದೇ ಮೊದಲ ಬಾರಿಗೆ ಬಿಎಂಟಿಸಿ ಆ್ಯಂಡ್ರಾಯ್ಡ್ ಸೌಲಭ್ಯದ ವಿದ್ಯುನ್ಮಾನ ಟಿಕೆಟ್ ಯಂತ್ರ (ಇಟಿಎಂ)ಗಳನ್ನು ನೀಡಲಾಗುತ್ತಿದೆ. ಇಟಿಎಂ ಯಂತ್ರಗಳು ಹೊಸ ತಂತ್ರಜ್ಞಾನವನ್ನು ಹೊಂದಿದ್ದು, ನಗದು ರಹಿತ ಪಾವತಿಗೆ ಅನುಕೂಲವಾಗುತ್ತವೆ. ಇದರಿಂದ ಪ್ರಯಾಣಿಕರು ಡಿಜಿಟಲ್ ಪಾವತಿಗಳನ್ನು (UPI, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮುಂತಾದವು) ಬಳಸುವ ಸಾಧ್ಯತೆ ಇದೆ. ಇದರೊಂದಿಗೆ ಟಿಕೆಟ್ ನೀಡುವ ಪ್ರಕ್ರಿಯೆ ಪಾಸ್ಟ್ ಆಗುತ್ತದೆ.
ಈ ಇಟಿಎಂ ಯಂತ್ರಗಳಲ್ಲಿ ಗೂಗಲ್ ಪೇ, ಫೋನ್ ಪೇ, ಭೀಮ್ ಯುಪಿಐ ಆಧಾರಿತ ಡೈನಮಿಕ್ ಕ್ಯೂಆರ್ ಕೋಡ್‌ಗಳ ಜೊತೆಗೆ, ಮೆಟ್ರೋ ಕಾರ್ಡ್, ಡೆಬಿಟ್, ಕ್ರೆಡಿಟ್, ವೀಸಾ ಕಾರ್ಡ್‌ಗಳು ಮತ್ತು ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಬಳಸಿ ಪಾವತಿ ಮಾಡುವ ಅವಕಾಶವನ್ನು ನೀಡಲಾಗಿದೆ. ಈ ಯಂತ್ರದ ವಿಶೇಷ ವೆಂದರೆ ಟಿಕೆಟ್ ವೇಗವಾಗಿ ಮುದ್ರಣವಾಗುತ್ತದೆ. ಟಚ್ ಸ್ಟೀನ್ ಮತ್ತು ವೇಗದ ಪ್ರಕ್ರಿಯೆ ವ್ಯವಸ್ಥೆಗಳನ್ನು ಈ ಸ್ಮಾರ್ಟ್ ಇಟಿಎಂ ಹೊಂದಿರಲಿದ್ದು, ಡೈನಮಿಕ್ ಕ್ಯೂ ಆರ್ ಕೋಡ್ ಆಧಾರಿತ ಪಾವತಿ ಸುಲಭವಾಗಿ ಟಿಕೆಟ್ ನೀಡುವುದಕ್ಕೆ ಅನುಕೂಲವಾಗಲಿದೆ.
ಈಗಾಗಲೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸ್ಟಾಟಿಕ್ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಟಿಕೆಟ್ ಪಾವತಿ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ವ್ಯವಸ್ಥೆಯಲ್ಲಿ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ನಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಮೊತ್ತ ಪಾವತಿಸಬಹುದು. ಆದರೆ ಇದುವರೆಗೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಟಿಕೆಟ್ ಪಡೆಯುವ ಅವಕಾಶ ಇರಲಿಲ್ಲ. ಆದರೆ ಇದೇ ಮೊದಲ ಬಾರಿ ಬಿಎಂಟಿಸಿ ಆ್ಯಂಡ್ರಾಯ್ಡ್ ಆಧಾರಿತ ವಿದ್ಯುನ್ಮಾನ ಟಿಕೆಟ್ ಯಂತ್ರಗಳನ್ನು (ETM) ಪರಿಚಯಿಸುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಕೋಮಲ್ ಕುಮಾರ್ (Komal Kumar), ಮೇಘನಾ ರಾಜ್, ಅನುಷಾ ರೈ ಅವರು ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಇತ್ತೀಚೆಗೆ ಪೂರ್ಣಗೊಂಡಿದೆ. ಈ ಸಿನಿಮಾಗೆ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ವಿಕಾಸ್ ಶೆಟ್ಟಿ ಅವರು ಬಂಡವಾಳ ಹೂಡಿದ್ದಾರೆ. 2 ಹಂತಗಳಲ್ಲಿ 75 ದಿನಗಳ ಕಾಲ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಚಿತ್ರೀಕರಣ ಮುಗಿಸಿಕೊಂಡಿರುವ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ (Sangeetha Bar and Restaurant) ಚಿತ್ರತಂಡ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಆಗಿದೆ.
ಕುಂದಾಪುರ, ಶಿವಮೊಗ್ಗ, ತೀರ್ಥಹಳ್ಳಿ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಚಿತ್ರದ ಬಹುತೇಕ ಶೂಟಿಂಗ್ ನಡೆಸಲಾಗಿದೆ. ಕುಂದಾಪುರದ ಅಂಪಾರಿನ ವಾಲ್ತೂರು ಗ್ರಾಮದಲ್ಲಿ ಏಳು ವಿಭಿನ್ನ ವಿನ್ಯಾಸದ ಬೃಹತ್ ಸೆಟ್‌ಗಳನ್ನು ನಿರ್ಮಿಸಲಾಗಿತ್ತು. ಅದರಲ್ಲಿ ಬಹುಭಾಗದ ಚಿತ್ರೀಕರಣವನ್ನು ಮಾಡಲಾಗಿದೆ. ಸುಮಾರು ಎರಡು ಎಕರೆ ಜಾಗದಲ್ಲಿ 7 ವೈವಿಧ್ಯಮಯ ಸೆಟ್‌ಗಳನ್ನು ಹಾಕಲಾಗಿತ್ತು.
ಈ ಸಿನಿಮಾಗೆ ಎರಡು ಟೈಟಲ್ ಇದೆ ಎಂದು ಚಿತ್ರತಂಡ ಹೇಳಿದೆ. ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಎಂಬುದು ಒಂದು ಶೀರ್ಷಿಕೆ. ‘ದೇವರ ತಾಣ’ ಎಂಬುದು ಇನ್ನೊಂದು ಟೈಟಲ್. ಚಿತ್ರದ ಮೊದಲಾರ್ಧ ಬಾರ್‌ನಲ್ಲಿ ಶುರುವಾಗಿ, ದ್ವಿತೀಯಾರ್ಧ ದೇವರ ತಾಣದಲ್ಲಿ ಶುರುವಾಗುತ್ತದೆ. ಆದರೆ ಸೆನ್ಸಾರ್ ನಿಯಮದ ಪ್ರಕಾರ ಒಂದು ಸಿನಿಮಾಕ್ಕೆ ಒಂದೇ ಟೈಟಲ್ ಇರಬೇಕು. ಹಾಗಾಗಿ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಶೀರ್ಷಿಕೆಯಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಅವರು ಹೇಳಿದ್ದಾರೆ.
ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಕೋಮಲ್ ಕುಮಾರ್ ಅವರು ಡಬಲ್ ರೋಲ್ ಮಾಡಿದ್ದಾರೆ. ಒಂದು ಪಾತ್ರದಲ್ಲಿ ಆಸ್ಥಾನವೊಂದರ ವರ್ಣಚಿತ್ರ ಕಲಾವಿದನಾಗಿ ಕಾಣಿಸಿಕೊಂಡರೆ, ಮತ್ತೊಂದರಲ್ಲಿ ಸಿನಿಮಾ ನಿರ್ದೇಶಕನ ಪಾತ್ರವನ್ನು ಕೋಮಲ್ ಮಾಡಿದ್ದಾರೆ. ಮೇಘನಾ ರಾಜ್ ರಾಣಿಯಾಗಿ ಮತ್ತು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಪ್ರಮೋದ್ ಶೆಟ್ಟಿ, ವಜ್ರಧೀರ್ ಜೈನ್, ಪ್ರಕಾಶ್ ತುಮ್ಮಿನಾಡ್, ಉತ್ಸವ್, ರಾಘು ರಾಮನಕೊಪ್ಪ, ಕಾರ್ತಿಕ್ ರಾವ್, ಸಿರಿಜಾ, ವರ್ಧನ್, ರಾಧಿಕ ರಾವ್ ದಿವ್ಯಶ್ರೀ, ಕರಣ್, ಅಕ್ಷತಾ, ಅರಸು, ಮಹೇಶ್, ಚಿತ್ರಕಲಾ, ನಾಗರಾಜ್ , ಉಮೇಶ್ ಕಿನ್ನಾಳ್, ರಾಧಾಕೃಷ್ಣ, ಮನೀಶ್ ಶೆಟ್ಟಿ, ಮಹಾಬಲೇಶ್ವರ ಭಟ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಸಹ ಒಂದು ಪಾತ್ರದಲ್ಲಿ ಅಭಿನಯಿಸಿದ್ದಾರೆ.