ಕನ್ನಡ ಮಾತನಾಡಿ ಕನ್ನಡಿಗರನ್ನು ಮೋಡಿ ಮಾಡಿದ ಬಿಹಾರ ಪೋರಿ – Kannada News | 10 Year Old Bihar Girl Masters Kannada in Bangalore: Inspiring Story
ಬೆಂಗಳೂರಿನಲ್ಲಿ ಕನ್ನಡಿಗರಾಗಿ ಕನ್ನಡ ಮಾತನಾಡಲು ಹಿಂಜರಿಯುವ ಜನರ ಮಧ್ಯೆ ಬಿಹಾರದ ಪುಟ್ಟ ಬಾಲಕಿಯಬ್ಬಳು (Bihar girl) ಕನ್ನಡ ಮಾತನಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದಾಳೆ. ಇದೀಗ ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಹಾರದ 10 ವರ್ಷದ ಬಾಲಕಿಯ ನಿರರ್ಗಳವಾಗಿ ಕನ್ನಡ ಮಾತನಾಡುವುದನ್ನು ಕಂಡು ಒಮ್ಮೆ ಅಚ್ಚರಿಯಾಗುವುದು ಖಂಡಿತ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇದು ಈ ಹುಡುಗಿಯ ಅಸಾಧಾರಣ ಸಾಧನೆ ಎಂದು ಹೇಳಲಾಗಿದೆ. “ಕನ್ನಡದಲ್ಲಿ ಟಾಪರ್…