Headlines

ಬೆಂಗಳೂರಿನಲ್ಲಿ ಹೆಚ್ಚಾಯ್ತು ಟ್ರೇಡಿಂಗ್ ಅಡಿಕ್ಷನ್: ಡ್ರಗ್ಸ್ ಅಡಿಕ್ಷನ್​ನಂತೆಯೇ ಸಿಟಿ ಜನರಿಗೆ ಈಗ ಟ್ರೇಡಿಂಗ್ ಖಯಾಲಿ – Kannada News | Trading Addiction Rising in Bengaluru Youth After Covid, Experts Compare It to Drug Dependency

ಬೆಂಗಳೂರು, ಫೆಬ್ರವರಿ 10: ಇತ್ತೀಚೆಗೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಲ್ಲೇ ಟ್ರೇಡಿಂಗ್ ಹುಚ್ಚು ಹೆಚ್ಚಾಗಿದೆ. ಮೊಬೈಲ್ ಆಧಾರಿತ ಆ್ಯಪ್​​ಗಳಿಂದ ಸಿಗುತ್ತಿರುವ ಸಾಲ ಸೌಲಭ್ಯದಿಂದ, ರಾತ್ರೋ ರಾತ್ರಿ ಹಣ ಸಂಪಾದಿಸುವ ಆಸೆಯಲ್ಲಿ ಟ್ರೇಡಿಂಗ್ ಚಟಕ್ಕೆ ಯುವ ಸಮೂಹದವರು ದಾಸರಾಗುತ್ತಿದ್ದಾರೆ. ಕುಳಿತಲ್ಲಿ ನಿಂತಲ್ಲಿ ಟ್ರೇಡಿಂಗ್ ಬಗ್ಗೆ ಆಲೋಚನೆ ಶುರು ಮಾಡಿದ್ದು, ಅದರಲ್ಲೂ ಬೆಂಗಳೂರಿನಲ್ಲಿ (Bangalore) ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಟ್ರೇಡಿಂಗ್ ಅಡಿಕ್ಷನ್ (Trading Addiction) ಕೇಸ್​​ಗಳು ಈಗ ನಿಮ್ಹಾನ್ಸ್ ಆಸ್ಪತ್ರೆಗೆ ಹೆಚ್ಚೆಚ್ಚು ಬರಲಾರಂಭಿಸಿವೆ. ಬೆಂಗಳೂರಿನಲ್ಲಿ ಟ್ರೇಡಿಂಗ್ ಪ್ರಕರಣಗಳ ಹೆಚ್ಚಳದ ಬಗ್ಗೆ ಮನಃಶಾಸ್ತ್ರಜ್ಞರು…

Read More

Horoscope Today 10 February​: ಇಂದು ಈ ರಾಶಿಯವರಿಗೆ ಜವಾಬ್ದಾರಿ ಹೆಚ್ಚಾಗಬಹುದು!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 10, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾಸುನಾಮ ಸಂವತ್ಸರದ ಉತ್ತರಾಯಣ, ಮಾಗ ಮಾಸ, ಶಿಶಿರ ಋತು, ಕೃಷ್ಣ ಪಕ್ಷ ಅಷ್ಟಮಿ, ವಿಶಾಖ ನಕ್ಷತ್ರ, ಧ್ರುವ ಯೋಗ, ಕೌಲವಕರಣ ಇರಲಿದೆ. ರಾಹು ಕಾಲವು ಮಧ್ಯಾಹ್ನ 3:29 ರಿಂದ 4:57 ರವರೆಗೆ ಇದ್ದರೆ, ಶುಭ ಕಾರ್ಯಗಳಿಗೆ ಸಂಕಲ್ಪ ಕಾಲವು ಬೆಳಗ್ಗೆ 11:06 ರಿಂದ ಮಧ್ಯಾಹ್ನ 12:34 ರವರೆಗೆ…

Read More

Daily Devotional: ತಂದೆ ತಾಯಿ ಮಾಡಿದ ಪುಣ್ಯ ಮಕ್ಕಳಿಗೆ ಅನ್ವಯಿಸುತ್ತಾ? – Kannada News | Daily Devotional: Do Parents Karma Affect Their Children?

ಬೆಂಗಳೂರು, ಫೆಬ್ರವರಿ​ 10: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ತಂದೆ ತಾಯಿಗಳು ಮಾಡಿದಂತಹ ಪುಣ್ಯ ಅಥವಾ ಪಾಪಗಳು ಮಕ್ಕಳಿಗೆ ಅನ್ವಯಿಸುತ್ತವೆಯೇ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹೇಗೆ ತಂದೆ ತಾಯಿಗಳ ಆಸ್ತಿ ಅಥವಾ ಸಾಲಗಳು ಮಕ್ಕಳಿಗೆ ವಾರಸುದಾರಿಕೆಯಿಂದ ಬರುತ್ತವೆಯೋ, ಹಾಗೆಯೇ ಅವರ ಪಾಪ ಮತ್ತು ಪುಣ್ಯದ ಫಲಗಳೂ ಸಹ ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ. ಹಿಂದಿನ ಜನ್ಮದ ಕರ್ಮಫಲಗಳ ಆಧಾರದ ಮೇಲೆ ನಾವು ನಿರ್ದಿಷ್ಟ ತಂದೆ ತಾಯಿಗಳ ಹೊಟ್ಟೆಯಲ್ಲಿ ಹುಟ್ಟುತ್ತೇವೆ. ಪೋಷಕರು ಧರ್ಮ ಮಾರ್ಗದಲ್ಲಿ ಸಂಪಾದಿಸಿದ ಆಸ್ತಿ…

Read More

ಎರಡನೇ ಕೇಸ್ ಮೂಲಕ ಬಂದ ಸೀತಾರಾಮ್; ಮತ್ತೆ ಖಾಕಿ ತೊಟ್ಟ ವಿಜಯ್ ರಾಘವೇಂದ್ರ – Kannada News | Vijay Raghavendra’s ‘Second Case of Seetharam’: Suspense Thriller Trailer and Feb 20 Release

ವಿಜಯ್ ರಾಘವೇಂದ್ರ (Vijay Raghavendra) ನಟನೆಯ ‘ಸೀತಾರಾಮ್ ಬಿಣೋಯ್ ಕೇಸ್ ನಂಬರ್ 18’ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಪೊಲೀಸ್ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ರಿಲೀಸ್ ಆಗಿದ್ದು 2021ರ ಆಗಸ್ಟ್ 15ರಂದು. ಈಗ ಐದು ವರ್ಷಗಳ ಬಳಿಕ ಈ ಚಿತ್ರಕ್ಕೆ ಸೀಕ್ವೆಲ್ ತರಲಾಗುತ್ತಿದೆ. ಆ ಚಿತ್ರದ ಹೆಸರು ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’. ಈ ಚಿತ್ರ ಕೂಡ ಸಸ್ಪೆನ್ಸ್​ ಶೈಲಿಯಲ್ಲಿ ಮೂಡಿ ಬಂದಿದೆ. ಫೆಬ್ರವರಿ 20ರಂದು ಸಿನಿಮಾ ರಿಲೀಸ್ ಆಗಲಿದೆ. ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’…

Read More

ಸೌತ್ ಆಫ್ರಿಕಾ ದಾಂಡಿಗರ ಆರ್ಭಟ: ವಿಶ್ವಕಪ್‌ನಲ್ಲಿ ವಿಶ್ವ ದಾಖಲೆ

ಟಿ20 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲೇ ಸೌತ್ ಆಫ್ರಿಕಾ ತಂಡ ಭರ್ಜರಿ ದಾಖಲೆ ಬರೆದಿದೆ. ಅದು ಸಹ 213 ರನ್ ಗಳನ್ನು ಚಚ್ಚುವ ಮೂಲಕ. ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ೨೦ ವಿಶ್ವಕಪ್‌ನ 9ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆನಡಾ ತಂಡದ ನಾಯಕ ದಿಲ್ ಪ್ರೀತ್ ಬಜ್ವಾ ಸೌತ್ ಆಫ್ರಿಕಾ ತಂಡವನ್ನು ಬ್ಯಾಟಿಂಗ್‌ ಗೆ ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ…

Read More

ರಾಮಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಅಬ್ದುಲ್​ ರೆಹಮಾನ್ ಜೈಲಿನಲ್ಲಿ ಹತ್ಯೆ – Kannada News | Abdul Rahman Dies in Custody as Fellow Prisoner Faces Murder Charge in Haryana

ಹರಿಯಾಣ, ಫೆಬ್ರವರಿ 10: ಅಯೋಧ್ಯೆಯ ರಾಮ ಮಂದಿರ(Ram Mandir)ದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿ ಜೈಲು ಪಾಲಾಗಿದ್ದ ಅಬ್ದುಲ್ ರೆಹಮಾನ್​ನನ್ನು ಜೈಲಿನಲ್ಲಿ ಸಹ ಕೈದಿಗಳು ಕೊಲೆ ಮಾಡಿರುವ ಘಟನೆ ಹರಿಯಾಣದ ಫರೀದಾಬಾದ್​ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಅಯೋಧ್ಯೆಯ ನಿವಾಸಿ ಅಬ್ದುಲ್ ರೆಹಮಾನ್(20)ನನ್ನು ಹರಿಯಾಣದ ಫರೀದಾಬಾದ್ ಜಿಲ್ಲೆಯ ಬಲ್ಲಭಗಢದಲ್ಲಿರುವ ನೀಮ್ಕಾ ಜಿಲ್ಲಾ ಜೈಲಿನಲ್ಲಿ ಬಿಗಿ ಭದ್ರತೆ ಇದ್ದರೂ ಹತ್ಯೆ ಮಾಡಲಾಗಿದೆ. ವರದಿಗಳ ಪ್ರಕಾರ, ಅಬ್ದುಲ್ ರೆಹಮಾನ್​ನನ್ನು ಮಾರ್ಚ್ 2025ರಲ್ಲಿ ಫರೀದಾಬಾದ್ನ ಪಾಲಿ ಪ್ರದೇಶದಿಂದ ಗುಜರಾತ್ ಭಯೋತ್ಪಾದಕ ನಿಗ್ರಹ…

Read More

ಸಿಎಂ ಬಜೆಟ್​ಗೆ ಸಜ್ಜಾದ ಹೊತ್ತಲ್ಲೇ ಡಿಕೆ ಶಿವಕುಮಾರ್​ಗೆ ಅಸಮಾಧಾನ? ದೆಹಲೀಲಿ ದುಃಖ, ದುಮ್ಮಾನ ಚರ್ಚಿಸ್ತೀನೆಂದ ಡಿಸಿಎಂ – Kannada News | DK Shivakumar Skips Budget Meet, Heads to Delhi; Power Sharing Buzz Intensifies in Karnataka Congress

ಕಾಂಗ್ರೆಸ್​ನಲ್ಲಿ ಮತ್ತೆ ಭುಗಿಲೆದ್ದ ಕುರ್ಚಿ ಕದನ?Image Credit source: tv9 ಬೆಂಗಳೂರು, ಫೆಬ್ರವರಿ 10: ಕೆಲ ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಕರ್ನಾಟಕ ಕಾಂಗ್ರೆಸ್ (Congress) ಅಧಿಕಾರ ಹಂಚಿಕೆ ಕದನವೀಗ ಮತ್ತೆ ತಾರಕಕ್ಕೇರಿದೆ. ಸಿಎಂ ಸಿದ್ದರಾಮಯ್ಯ ಇಂದು ಬಜೆಟ್ ಪೂರ್ವಭಾವಿ ಸಭೆ ಕರೆದಿದ್ದಾರೆ. ಆದರೆ, ಈ ಸಭೆಗೆ ಗೈರಾಗುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ದೆಹಲಿಯತ್ತ ತೆರಳುತ್ತಿದ್ದಾರೆ. ಅಸ್ಸಾಂ ಚುನಾವಣೆ ಸಂಬಂಧ ಪ್ರಿಯಾಂಕಾ ಗಾಂಧಿ ಕರೆದ ಸಭೆಯಲ್ಲಿ ಭಾಗಿಯಾಗಲು ದೆಹಲಿಗೆ ತೆರಳುವುದೇನೋ ನಿಜ. ಆದರೆ, ಡಿಕೆ…

Read More

ಕೊನೆಗೂ ಮಂಡಿಯೂರಿದ ‘ಜನ ನಾಯಗನ್’; ರಿಲೀಸ್ ಮತ್ತಷ್ಟು ವಿಳಂಬ? – Kannada News | Jana Nayagan Release Woes: Vijay’s Film Hits Censor Snag, Makers Consider Withdrawing Case

ಅಂದುಕೊಂಡಂತೆ ನಡೆದಿದ್ದರೆ ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಈಗಾಗಲೇ ರಿಲೀಸ್ ಆಗಿ ಒಂದು ತಿಂಗಳು ಕಳೆದಿರಬೇಕಿತ್ತು. ಈಗಾಗಲೇ ಸಿನಿಮಾ ಒಟಿಟಿಗೆ ರಿಲೀಸ್​ಗೆ ರೆಡಿ ಆಗಬೇಕಿತ್ತು. ಆದರೆ, ಹಾಗಾಗಿಲ್ಲ. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಪ್ರಮಾಣ ಪತ್ರ ನೀಡಿಲ್ಲ. ಇದರಿಂದ ಸಿನಿಮಾದ ಥಿಯೇಟ್ರಿಕಲ್ ರಿಲೀಸ್ ವಿಳಂಬ ಆಗುತ್ತಿದೆ. ಈಗಾಗಲೇ ತಂಡದವರು ಕೋರ್ಟ್ ಮೆಟ್ಟಿಲು ಕೂಡ ಏರಿದ್ದಾರೆ. ಆದರೆ, ತಂಡದವರು ಕೋರ್ಟ್​ನಿಂದ ಕೇಸ್​ನ ಹಿಂಪಡೆಯುವ ಬಗ್ಗೆ ಆಲೋಚನೆ ಮಾಡಿದ್ದಾರೆ. ಈ ಮೂಲಕ ಕೊನೆಗೂ ತಂಡ ಮಂಡಿಯೂರಿದೆ…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 10ರ ದಿನಭವಿಷ್ಯ – Kannada News | Numerology: Feb 10 Horoscope for Birth 7, 8, 9 – Financial & Health Insights

ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 10ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7) ಯಾರಿಗೆ ಅಂತ ಸಮಾಜಾಯಿಷಿ ಹೇಳುವುದು ಎಂಬ ಚಿಂತೆ ಅಥವಾ ಆತಂಕ ನಿಮ್ಮನ್ನು ಕಾಡುವುದಕ್ಕೆ ಆರಂಭವಾಗಲಿದೆ. ಈ ಹಿಂದೆ ನಿಮಗೆ ನಿಧಾನವಾಗಿ ನೀಡಿದರೂ ಪರವಾಗಿಲ್ಲ ಎಂದು ಹೇಳಿ ಸಾಲ ನೀಡಿದ್ದ ಕೆಲವರು ತಮಗೆ ತುರ್ತಾಗಿ ಬೇಕಿದೆ ಎಂದೂ ಹಾಗೂ…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 10ರ ದಿನಭವಿಷ್ಯ – Kannada News | Feb 10 Numerology: Birth Numbers 4,5,6 Predictions and Ganesha Remedy for Laziness

8ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 10ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4) ನೀವು ಇಷ್ಟು ಕಾಲ ಕೇಳಿದ ತಕ್ಷಣ ಇತರರಿಗೆ ಕೆಲಸ ಮಾಡಿಕೊಡುತ್ತಿದ್ದವರಿಗೆ ಕೆಲಸ ಆಗುವ ತನಕ ಒಂದು ರೀತಿ ಇದ್ದು, ಆ ನಂತರ ಜನರು ಬದಲಾಗುತ್ತಿದ್ದಾರೆ ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗುತ್ತದೆ. ಒಂದೇ ಕಡೆ ಹಾಗೂ ಒಂದೇ…

Read More