Headlines

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಏಕಪಕ್ಷೀಯ ನಿರ್ಧಾರದಿಂದ ಅಪಜಯ… – Kannada News | Daily Horoscope for August 03, 2026: Dakshinayana Greeshma season, Ashada Masa Krishna Paksha Monday astrology

ಮೇಷ ರಾಶಿ: ಇಂದು ಅನುಭವಿಗಳ ಜೊತೆ ನಿಮ್ಮ ಅನನುಭವದ ಸನ್ನಿವೇಶವನ್ನು ಹಂಚಿಕೊಳ್ಳುವಿರಿ. ಅದು ಬಾಲಿಶ ಎನಿಸುವುದು. ಸ್ಪರ್ಧೆಯಲ್ಲಿ ವಾಗ್ವಾದ ಮಾಡಿ ನಿಮ್ಮ ವ್ಯಕ್ತಿತ್ವನ್ನು ತೋರಿಸುವಿರಿ. ಕುಟುಂಬದ ಕಲಹದಲ್ಲಿ ನೀವು ಮೌನವಹಿಸುವಿರಿ. ನೀವು ಪಾಲುದಾರಿಕೆಯಲ್ಲಿ ಯಾರನ್ನೋ ಜೊತೆ ಮಾಡಿಕೊಂಡು ಹೋಗಬಹುದು. ವಾಹನದ ಸಂಚಾರದಲ್ಲಿ ಉದ್ವೇಗವನ್ನು ತಂದುಕೊಳ್ಳುವುದು ಬೇಡ. ಸಂಗಾತಿಯಿಂದ ಆಗುವ ಸಣ್ಣ ತಪ್ಪನ್ನು ಕ್ಷಮಿಸುವುದು ಯೋಗ್ಯವೇ. ವೃಷಭ ರಾಶಿ: ಇತರರ ಸಲಹೆಯನ್ನು ಮಾತ್ರ ಅವಲಂಬಿಸಿದ್ದರೆ ಸಂಭಾವ್ಯ ಆರ್ಥಿಕ ನಷ್ಟಗಳ ಬಗ್ಗೆ ಜಾಗರೂಕರಾಗಿರಿ. ಗೊತ್ತಿಲ್ಲದೇ ನಿಮಗೆ ದೈವವೊಂದು ಕ್ಲಿಷ್ಟಕರವಾದ ಸನ್ನಿವೇಶದಲ್ಲಿ…

Read More

CWG 2026: 13 ಚಿನ್ನ, 39 ಪದಕ; ಭಾರತದ ಕಾಮನ್‌ವೆಲ್ತ್ ಪ್ರಯಾಣ ಅಂತ್ಯ

2026 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games 2026) ಭಾರತದ ಅಭಿಯಾನಕ್ಕೆ ಅದ್ಧೂರಿ ತೆರೆಬಿದ್ದಿದೆ. ಕ್ರೀಡಾಕೂಟದ 11ನೇ ಹಾಗೂ ಅಂತಿಮ ದಿನದಂದು ಭಾರತಕ್ಕೆ ಯಾವುದೇ ಪದಕ ಬರಲಿಲ್ಲ. ಒಟ್ಟಾರೆ ಈ ಕ್ರೀಡಾಕೂಟದಲ್ಲಿ ಭಾರತ 39 ಪದಕಗಳನ್ನು (13 ಚಿನ್ನ, 17 ಬೆಳ್ಳಿ, ಒಂಬತ್ತು ಕಂಚು) ಗೆಲ್ಲುವಲ್ಲಿ ಯಶಸ್ವಿಯಾಗಿ ಪದಕಗಳ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿತು. ಕ್ರೀಡಾಕೂಟದ ಅಂತಿಮ ದಿನದಂದು ಜೂಡೋ ಸ್ಪರ್ಧಿ ಇಶ್ರೂಪ್ ನಾರಂಗ್ ಮಹಿಳೆಯರ -78 ಕೆಜಿ ವಿಭಾಗದಲ್ಲಿ ಕಂಚಿನ ಪದಕದ ಪಂದ್ಯದಲ್ಲಿ ಸೋತರೆ, ಪ್ಯಾರಾ…

Read More

ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಹಳೆಯ ದಿನ ನೆನಪಿಸಿಕೊಂಡ ಡಿಕೆಶಿ – Kannada News | DK Shivakumar Recalls Apologising to Sri on Behalf of Congress After Party Decision

ಬೆಂಗಳೂರು, ಆಗಸ್ಟ್​​ 02: ‘ಈ ಹಿಂದೆ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ನಿರ್ಧಾರದಿಂದ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾಗ ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ತೆರಳಿ ಪಕ್ಷದ ಪರವಾಗಿ ಶ್ರೀಗಳ ಪಾದಕ್ಕೆ ಬಿದ್ದು ಕ್ಷಮೆ ಯಾಚಿಸಿದ್ದಾಗಿ’ ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದಾರೆ. ಬೆಂಗಳೂರಲ್ಲಿ ರಂಭಾಪುರಿ ಶ್ರೀಗಳಿಂದ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಆಗ ಅನೇಕ ಟೀಕೆಗಳು ವ್ಯಕ್ತವಾಗಿದ್ದರೂ, ಆ ಟೀಕೆಗಳೆಲ್ಲವೂ ಕಾಲಾನಂತರದಲ್ಲಿ ಮರೆಯಾಗಿ, ನಮ್ಮ ಕೆಲಸಗಳು ಮಾತ್ರ ಉಳಿದುಕೊಂಡಿವೆ. ಟೀಕೆಗಳು ಸಾಯುತ್ತವೆ, ನಮ್ಮ ಸಾಧನೆಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ….

Read More

47ನೇ ವಯಸ್ಸಿನಲ್ಲಿ ಹೀರೋ ಆದ ಸಂಗೀತ ನಿರ್ದೇಶಕ ಡಿಎಸ್​​ಪಿ – Kannada News | Music director Devi Sri Prasad acting as hero in Yellamma movie

ತೆಲುಗು ಚಿತ್ರರಂಗದಲ್ಲಿ (Tollywood) ಪ್ರೀತಿಯಿಂದ ‘ಡಿಎಸ್​​ಪಿ’ ಎಂದೇ ಕರೆಸಿಕೊಳ್ಳುವ ದೇವಿಶ್ರೀ ಪ್ರಸಾದ್ ಬಲು ಜನಪ್ರಿಯ ಸಂಗೀತ ನಿರ್ದೇಶ. 27 ವರ್ಷಗಳಿಂದಲೂ ತೆಲುಗು ಮಾತ್ರವೇ ಅಲ್ಲದೆ, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಿಗೆ ಸಂಗೀತ ನೀಡುತ್ತಲೇ ಬರುತ್ತಿದ್ದಾರೆ. 2023ರ ‘ಪುಷ್ಪ’ ಸಿನಿಮಾದ ವರೆಗೆ ಹಲವಾರು ಬ್ಲಾಕ್ ಬಸ್ಟರ್ ಆಲ್ಬಂಗಳನ್ನು ದೇವಿಶ್ರೀ ಪ್ರಸಾದ್ ನೀಡಿದ್ದಾರೆ. ಚಿತ್ರರಂಗಕ್ಕೆ ಬಂದು 27 ವರ್ಷಗಳ ಬಳಿಕ ಈಗ ಇದ್ದಕ್ಕಿದ್ದಂತೆ ಸಿನಿಮಾ ನಾಯಕ ಆಗಿದ್ದಾರೆ ದೇವಿಶ್ರೀ ಪ್ರಸಾದ್. ದೇವಿ ಶ್ರೀ ಪ್ರಸಾದ್ ಅವರು ‘ಯಲ್ಲಮ್ಮ’ ಹೆಸರಿನ…

Read More

‘ಯಾವುದೇ ವಿಷಾದವಿಲ್ಲ’; ಟೀಂ ಇಂಡಿಯಾದಲ್ಲಿ ಕಂಬ್ಯಾಕ್ ಬಗ್ಗೆ ಮೌನ ಮುರಿದ ಭುವನೇಶ್ವರ್

ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡು ವರ್ಷಗಳೇ ಕಳೆದಿವೆ. 2022 ರಲ್ಲಿ ಕೊನೆಯ ಬಾರಿಗೆ ತಂಡದಲ್ಲಿ ಕಾಣಿಸಿಕೊಂಡಿದ್ದ ಭುವನೇಶ್ವರ್​ಗೆ ಆ ಬಳಿಕ ಆಡಲು ಅವಕಾಶ ಸಿಕ್ಕಿಲ್ಲ. ಆದಾಗ್ಯೂ ಐಪಿಎಲ್​ನಲ್ಲಿ ಪ್ರತಿ ಆವೃತ್ತಿಯಲ್ಲೂ ಭುವನೇಶ್ವರ್ ಅತ್ಯದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ(PC-PTI). ಐಪಿಎಲ್​ನಲ್ಲಿ ಆರ್​ಸಿಬಿ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವಲ್ಲಿ ಭುವಿ ಅವರ ಪಾತ್ರ ಅಪಾರವಾಗಿದೆ. ಹೀಗಾಗಿ ಭುವಿಯನ್ನು ಮತ್ತೆ ಭಾರತ ತಂಡಕ್ಕೆ ಆಯ್ಕೆ ಮಾಡಬೇಕೆಂಬ ಕೂಗು ಜೋರಾಗಿದೆ. ಆದರೆ ಆಯ್ಕೆ…

Read More

SIR​ ಎಫೆಕ್ಟ್: ಬೆಂಗಳೂರಿನಲ್ಲಿ ಮತದಾರರ ಸಂಖ್ಯೆ ಕಡಿತ; ಪಾಲಿಕೆಗಳ ಸಂಖ್ಯೆ ಇಳಿಕೆಗೆ ಹೆಚ್ಚಿದ ಒತ್ತಡ – Kannada News | SIR Impact: Bengaluru Voter Count Declines, Pressure Mounts to Reduce Number of Municipal Corporations

ಬೆಂಗಳೂರು, ಆಗಸ್ಟ್​​ 02: ವಿಶಾಲ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಬಿಬಿಎಂಪಿ ಹೋಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ಬಂದಾಯ್ತು. ಜಿಬಿಎ ಅಡಿ 5 ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿದ್ದಾವೆ. ಆದರೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision) ಪರಿಣಾಮ ಪಾಲಿಕೆಗಳ ಸಂಖ್ಯೆ ಕಡಿಮೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. 5 ನಗರ ಪಾಲಿಕೆಗಳು ಏಕೆ? ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೋಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬಂದು ವರ್ಷವೇ…

Read More

ಎಲ್ಲಾ ಹೋಟೆಲ್​ಗಳಲ್ಲಿ ಕುಡಿಯಲು ಬಿಸಿ ನೀರು ಕಡ್ಡಾಯ: ಏನಿದರ ಹಿಂದಿನ ಉದ್ದೇಶ? – Kannada News | Hot Water mandatory to customers for drinking In all Bengaluru Hotels Says Minister UT Khader

ಬೆಂಗಳೂರು, (ಆಗಸ್ಟ್ 02): ಬೆಂಗಳೂರಿನಲ್ಲಿ ಕುಡಿಯುವ ನೀರು ಹದಗೆಡುತ್ತಿರುವ ಹಿನ್ನೆಲೆ ನಾನಾ ರೀತಿ ಆರೋಗ್ಯ ಸಮಸ್ಯೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಹೀಗಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಜನರ ಆರೋಗ್ಯ ಕಾಪಾಡಲು ಎಲ್ಲಾ ಹೋಟೆಲ್​ಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿ ನೀರನ್ನ (Hot Water) ಕೊಡೋದು ಕಡ್ಡಾಯ ಎಂಬ ನಿಯಮ ತರಲು ಆರೋಗ್ಯ ಇಲಾಖೆ ಮುಂದಾಗಿದೆ. ಸದ್ಯ ಎಲ್ಲಾ ಪ್ರೀಮಿಯಮ್ ಹಾಗೂ ಸ್ಟ್ಯಾಂಡರ್ಡ್ ಹೋಟೆಲ್​ಗಳಲ್ಲಿ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಇದೆ. ಇದನ್ನ ಎಲ್ಲಾ ರೀತಿಯ ಅಂದರೆ, ಸಣ್ಣ-ಪುಟ್ಟ ಹೋಟೆಲ್​ಗಳಲ್ಲೂ ಕಡ್ಡಾಯ ಮಾಡಬೇಕಿದೆ…

Read More

ಕಿಯಾರಾ ಅಡ್ವಾಣಿ ಬಗ್ಗೆ ‘ಟಾಕ್ಸಿಕ್’ ಟೀಕೆ, ಬೆಂಬಲಕ್ಕೆ ಬಂದ ‘ಎಲಿಜಬೆತ್’ – Kannada News | Kiara Advani brutally trolled for bold appearance in Toxic movie

ನಟಿಯರು ಕ್ಷುಲ್ಲಕ ಕಾರಣಗಳಿಗೂ ಹೀನಾಯವಾಗಿ ಟ್ರೋಲಿಂಗ್​​ಗೆ ಗುರಿ ಆಗುತ್ತಾರೆ. ಸಿನಿಮಾ ನಟಿಯರಷ್ಟು ಆನ್​​ಲೈನ್ ದೌರ್ಜನ್ಯ, ನಿಂದನೆಗೆ ಒಳಗಾಗುವವರು ಮತ್ಯಾರೂ ಇಲ್ಲ. ಭಾರತದಲ್ಲಂತೂ ಈ ಕೆಟ್ಟ ಸಂಸ್ಕೃತಿ ಬಹಳ ಇದೆ. ನಟಿಯರು ಪದೇ ಪದೇ ಸೈಬರ್ ಪೊಲೀಸರಿಗೆ ದೂರು ನೀಡುತ್ತಲೇ ಇರುತ್ತಾರೆ ಆದರೂ ಇದು ಕಡಿಮೆ ಆಗಿಲ್ಲ. ಇದೀಗ ಬಾಲಿವುಡ್​​ನ ಸ್ಟಾರ್ ನಟಿ ಕಿಯಾರಾ ವಿರುದ್ಧ ಕೆಟ್ಟ ಟ್ರೋಲಿಂಗ್ ಆರಂಭವಾಗಿದೆ. ಅದೂ ‘ಟಾಕ್ಸಿಕ್’ (Toxic) ಸಿನಿಮಾನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಕ್ಕೆ. ಇತ್ತೀಚೆಗಷ್ಟೆ ನಟಿ ಕಿಯಾರಾ ಅಡ್ವಾಣಿ ಅವರ ಹುಟ್ಟುಹಬ್ಬ…

Read More

Asia Cup 2026: ಏಷ್ಯಾಕಪ್​ಗೆ ಭಾರತ ಮಹಿಳಾ ತಂಡ ಪ್ರಕಟ; ಚೇತರಿಸಿಕೊಳ್ಳದ ಶ್ರೇಯಾಂಕ ಪಾಟೀಲ್ – Kannada News | India Women’s Asia Cup 2026 Squad: Prema Rawat Replaces Injured Shreyanka Patil

2026 ರ ಮಹಿಳಾ ಏಷ್ಯಾಕಪ್‌ (Women’s Asia Cup 2026 ) ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿದ್ದು, ಈ ಪಂದ್ಯಾವಳಿಗಾಗಿ ಬಿಸಿಸಿಐ(BCCI), ಭಾರತೀಯ ಮಹಿಳಾ ತಂಡವನ್ನು ಪ್ರಕಟಿಸಿದೆ. ಮುಂದಿನ ತಿಂಗಳು ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಆಡಲಿರುವ ತಂಡವನ್ನೇ ಆಯ್ಕೆದಾರರು ಈ ಪಂದ್ಯಾವಳಿಗೂ ಆಯ್ಕೆ ಮಾಡಿದ್ದಾರೆ. ಆದರೆ ಟಿ20 ವಿಶ್ವಕಪ್ ಸಮಯದಲ್ಲಿ ಕಾಲಿಗೆ ಗಾಯ ಮಾಡಿಕೊಂಡು ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್ ಇನ್ನು ಚೇತರಿಸಿಕೊಳ್ಳದ ಕಾರಣ ಅವರನ್ನು ಏಷ್ಯಾಕಪ್​ನಿಂದಲೂ ಹೊರಗಿಡಲಾಗಿದೆ. ಹೀಗಾಗಿ ಅವರ ಬದಲಿಗೆ ಲೆಗ್-ಸ್ಪಿನ್ ಆಲ್‌ರೌಂಡರ್…

Read More

‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ – Kannada News | JM Prahlad talks about Yash look in Ramayana movie

‘ರಾಮಾಯಣ’ (Ramayana) ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಪೌರಾಣಿಕ ಕತೆ ಆಧರಿಸಿದ ಸಿನಿಮಾ ಆಗಿರುವ ಕಾರಣ ಪ್ರೇಕ್ಷಕರು, ಸಿನಿಮಾ ವಿಮರ್ಶಕರು ಎಲ್ಲರೂ ಕುತೂಹಲ, ವಿಮರ್ಶೆಯ ಕಣ್ಣುಗಳಿಂದ ಟ್ರೈಲರ್ ಅನ್ನು ನೋಡುತ್ತಿದ್ದಾರೆ. ಕನ್ನಡದ ಜನಪ್ರಿಯ ಚಿತ್ರಸಾಹಿತಿ ಜೆಎಂ ಪ್ರಹ್ಲಾದ್ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ಕನ್ನಡದ ಹಳೆಯ ಸಿನಿಮಾಗಳು, ಅವುಗಳ ಸೆಟ್, ಪ್ರಸಾಧನ ಇನ್ನಿತರೆಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಇತ್ತೀಚೆಗೆ ಬಿಡುಗಡೆ ಆದ ‘ರಾಮಾಯಣ’ ಸಿನಿಮಾದ ಟ್ರೈಲರ್ ಮತ್ತು ಅದರಲ್ಲಿ ಯಶ್ ಅವರ ಲುಕ್ ಬಗ್ಗೆಯೂ ಮಾತನಾಡಿದ್ದಾರೆ….

Read More