Karnataka Weather Forecast: ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆ ಇನ್ನೂ 3 ದಿನ ಮಳೆ ಮುನ್ಸೂಚನೆ – Kannada News | Karnataka Weather Forecast: Heavy Rain Forecast for Next 3 Days, Schools Shut in Several Districts

ಚಿಕ್ಕಮಗಳೂರಿನಲ್ಲಿ ಭಾರಿ ಮಳೆಗೆ ರಸ್ತೆಗಳು ಜಲಾವೃತಗೊಂಡಿರುವುದುImage Credit source: tv9

ಬೆಂಗಳೂರು, ಆಗಸ್ಟ್ 3: ಕರ್ನಾಟಕದಲ್ಲಿ ನೈರುತ್ಯ ಮುಂಗಾರು (Monsoon Rain) ಚುರುಕುಗೊಂಡಿದ್ದು, ಮುಂದಿನ ಮೂರು ದಿನ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಮುನ್ಸೂಚನೆ (Weather Forecast) ಪ್ರಕಾರ, ಆಗಸ್ಟ್ 7ರವರೆಗೆ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಕರಾವಳಿ ಕರ್ನಾಟಕ ಹಾಗೂ ಮಲೆನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಸೇರಿದಂತೆ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಕರಾವಳಿ, ಮಲೆನಾಡಿನಲ್ಲಿ ಹೆಚ್ಚು ಮಳೆ

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯೊಂದಿಗೆ ಗಂಟೆಗೆ 30ರಿಂದ 40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆಯಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ರೆಡ್ ಅಲರ್ಟ್ ನೀಡಲಾಗಿದೆ. ಕೊಡಗು, ಹಾಸನ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲೂ ಮಳೆಯಾಗಲಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲೂ ಮಳೆಯ ಮುನ್ಸೂಚನೆ ನೀಡಲಾಗಿದೆ.

ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೊಪ್ಪ ಮತ್ತು ಶೃಂಗೇರಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಸೂಚಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಮಂಗಳೂರು ಉಪವಿಭಾಗ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಂಗಳೂರು, ಉಳ್ಳಾಲ, ಮೂಡಬಿದಿರೆ, ಬಂಟ್ವಾಳ ಹಾಗೂ ಮುಲ್ಕಿ ತಾಲೂಕುಗಳಲ್ಲಿ ಪ್ರೌಢಶಾಲೆವರೆಗೆ ರಜೆ ನೀಡಲಾಗಿದೆ. ಪುತ್ತೂರು, ಬೆಳ್ತಂಗಡಿ, ಕಡಬ ಹಾಗೂ ಸುಳ್ಯ ತಾಲೂಕುಗಳಲ್ಲಿ ಪಿಯುಸಿವರೆಗಿನ ತರಗತಿಗಳಿಗೆ ರಜೆ ಘೋಷಿಸಲಾಗಿದೆ.

ಇದನ್ನೂ ಓದಿ: ಮುಂದುವರಿದ ವರುಣನ ಅಬ್ಬರ, ಈ ಜಿಲ್ಲೆಗಳತಾಲೂಕುಗಳಲ್ಲಿ ಆ.3ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಶಿವಮೊಗ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಾಗರ ಮತ್ತು ತೀರ್ಥಹಳ್ಳಿ ತಾಲೂಕುಗಳ ಶಾಲೆಗಳಿಗೆ ಇಂದು ರಜೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ – Kannada News | Daily Horoscope Today 03 August 2026:Zodiac Pr edictions, Panchanga by Dr. Basavaraj Guruji

ಇಂದು ಆಗಸ್ಟ್ 3, 2026ರ ಸೋಮವಾರ, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷದ ಪಂಚಮಿ ತಿಥಿ ಹಾಗೂ ಉತ್ತರಾಭಾದ್ರ ನಕ್ಷತ್ರದ ಈ ಪರ್ವದಿನದಂದು ಸಾಕ್ಷಾತ್ ಶಿವನ ಅನುಗ್ರಹ ಪಡೆಯಲು ವಿಶೇಷ ದಿನವಾಗಿದೆ. ಇಂದಿನ ರಾಹುಕಾಲ ಬೆಳಿಗ್ಗೆ 7:40 ರಿಂದ 9:15 ರವರೆಗೆ ಇರಲಿದ್ದು, ಬೆಳಿಗ್ಗೆ 9:15 ರಿಂದ 10:50 ರವರೆಗೆ ಸರ್ವಸಿದ್ಧಿ ಹಾಗೂ ಸಂಕಲ್ಪದ ಶುಭಕಾಲವಾಗಿದೆ. ಇಂದಿನ ದ್ವಾದಶ ರಾಶಿಗಳ ಫಲ ಹಾಗೂ ಪರಿಹಾರ ಮಂತ್ರಗಳನ್ನು ‘ಟಿವಿ9 ಡಿಜಿಟಲ್’ ವಾಹಿನಿಯ ‘ದಿನಭವಿಷ್ಯ’ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಏಕಪಕ್ಷೀಯ ನಿರ್ಧಾರದಿಂದ ಅಪಜಯ… – Kannada News | Daily Horoscope for August 03, 2026: Dakshinayana Greeshma season, Ashada Masa Krishna Paksha Monday astrology

ಮೇಷ ರಾಶಿ:

ಇಂದು ಅನುಭವಿಗಳ ಜೊತೆ ನಿಮ್ಮ ಅನನುಭವದ ಸನ್ನಿವೇಶವನ್ನು ಹಂಚಿಕೊಳ್ಳುವಿರಿ. ಅದು ಬಾಲಿಶ ಎನಿಸುವುದು. ಸ್ಪರ್ಧೆಯಲ್ಲಿ ವಾಗ್ವಾದ ಮಾಡಿ ನಿಮ್ಮ ವ್ಯಕ್ತಿತ್ವನ್ನು ತೋರಿಸುವಿರಿ. ಕುಟುಂಬದ ಕಲಹದಲ್ಲಿ ನೀವು ಮೌನವಹಿಸುವಿರಿ. ನೀವು ಪಾಲುದಾರಿಕೆಯಲ್ಲಿ ಯಾರನ್ನೋ ಜೊತೆ ಮಾಡಿಕೊಂಡು ಹೋಗಬಹುದು. ವಾಹನದ ಸಂಚಾರದಲ್ಲಿ ಉದ್ವೇಗವನ್ನು ತಂದುಕೊಳ್ಳುವುದು ಬೇಡ. ಸಂಗಾತಿಯಿಂದ ಆಗುವ ಸಣ್ಣ ತಪ್ಪನ್ನು ಕ್ಷಮಿಸುವುದು ಯೋಗ್ಯವೇ.

ವೃಷಭ ರಾಶಿ:

ಇತರರ ಸಲಹೆಯನ್ನು ಮಾತ್ರ ಅವಲಂಬಿಸಿದ್ದರೆ ಸಂಭಾವ್ಯ ಆರ್ಥಿಕ ನಷ್ಟಗಳ ಬಗ್ಗೆ ಜಾಗರೂಕರಾಗಿರಿ. ಗೊತ್ತಿಲ್ಲದೇ ನಿಮಗೆ ದೈವವೊಂದು ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಸಹಾಯ ಮಾಡುವುದು. ಸ್ಪರ್ಧಾತ್ಮಕ ವಿಚಾರದಲ್ಲಿ ನೀವು ಅಸಕ್ತಿ ತೋರಿಸಲಾರಿರಿ. ಸ್ನೇಹಿತರು ನಿಮಗೆ ತಪ್ಪು ದಾರಿಯನ್ನು ತೋರಿಸಬಹುದು. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ನಿಮ್ಮ ಅಸಹಜ ಸ್ವಭಾವವನ್ನು ಸರಿಮಾಡಿಕೊಳ್ಳುವುದು ಮುಖ್ಯ.

ಮಿಥುನ ರಾಶಿ:

ಮನೆಯ ಹಿರಿಯರಿಂದ ಸಮಾಧಾನದ ಮಾತುಗಳು ಸಿಗಲಿವೆ. ನೀವು ಇಂದು ಸಂಸ್ಥೆಯ ಮುಖ್ಯಸ್ಥಾನವನ್ನು ಅಲಂಕರಿಸಬಹುದು. ಸಾಮಾಜಿಕ ಸೇವಾ ಕಾರ್ಯದಲ್ಲಿ ಆಸಕ್ತಿ. ವೃತ್ತಿಯಲ್ಲಿ ಗೊಂದಲ ಒತ್ತಡಗಳನ್ನು ನೀವು ನಿಭಾಯಿಸಬೇಕಾಗುವುದು. ಮನಸ್ಸಿನಲ್ಲಿ ಸಾವಧಾನತೆ ಇರುವುದು ಬಹಳ ಮುಖ್ಯ. ಕಾನೂನಾತ್ಮಕ ವಿಚಾರಕ್ಕೆ ನಿಮ್ಮ ಒತ್ತು ಹೆಚ್ಚಿರುವುದು. ನಿಮಗೆ ಸಿಕ್ಕ ಮೆಚ್ಚುಗೆಯನ್ನು ನೀವು ಸಂಕೋಚದಿಂದ ಸ್ವೀಕರಿಸುವಿರಿ. ಉನ್ನತ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಿಂದ ಬೇಸರವಾಗಲಿದೆ.

ಕರ್ಕಾಟಕ ರಾಶಿ:

ಇಂದು ನಿಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗಿ ಬರಬಹುದು. ಕುಟುಂಬ ಸದಸ್ಯರ ಬಗ್ಗೆ ನಿಮಗಿದ್ದ ನಿರೀಕ್ಷೆಗಳು ಹುಸಿಯಾಗಬಹುದು. ಬಗ್ಗೆ ನಿಮಗೆ ಕೀಳು ಯೋಚನೆಗಳು ಬರಬಹುದು.‌ ಸಂಗಾತಿಯ ನೀರಸತೆಯಿಂದ ಕೋಪ ಬರಬಹುದು. ಅಪರಿಚಿತರ ಜೊತೆಗಿನ ಗುದ್ದಾಟ ಕಷ್ಟವಾದೀತು. ಬೇಕಾದುದನ್ನು ನೀವು ಪಡೆದುಕೊಳ್ಳಲು ಪ್ರಯತ್ನಿಸುವಿರಿ. ಹೊಸ ವೃತ್ತಿಯಲ್ಲಿ ಪೂರ್ಣ ತೊಡಗಿಕೊಳ್ಳುವುದು ನಿಮಗೆ ಇಷ್ಟವಾಗುವುದು. ಹಲವಾರು ಅಭಿಪ್ರಾಯಗಳು ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಬರುವುದು.

ಸಿಂಹ ರಾಶಿ:

ಇಂದು ಸಾಮಾಜಿಕ ಕೂಟಗಳಲ್ಲಿ ಭಾಗವಹಿಸಲು ಅವಕಾಶ ಸಿಗುವುದು. ನಿಮ್ಮ ಬಹಳ ದಿನದ ಆಸೆಯು ಪೂರ್ಣಗೊಳ್ಳುವ ಸಂದರ್ಭವು ಬರಬಹುದು. ನಿಮ್ಮ ಜೊತೆ ಮಾತನಾಡಲು ಯಾರಾದರೂ ಹಿಂಜರಿಯುವರು. ವಿಮರ್ಶಕರಿಗೆ ಅನೇಕ ಕಡೆಗಳಿಂದ ಆಹ್ವಾನ. ಅನವಶ್ಯಕ ಖರ್ಚಿಗೆ ನೀವು ಕಡಿವಾಣ ಹಾಕಲಿದ್ದೀರಿ. ಸ್ವಂತ ವಾಹನದ ದುರಸ್ತಿಗೆ ಖರ್ಚಾಗಬಹುದು. ಇಂದು ಸ್ಥೈರ್ಯವನ್ನು ಕಳೆದುಕೊಳ್ಳುವಿರಿ. ನಿಷ್ಠೆಯನ್ನು ಉಳಿಸಿಕೊಳ್ಳುವುದು ಕಷ್ಟವಾದೀತು.

ಕನ್ಯಾ ರಾಶಿ:

ನಿಮ್ಮ ಯೋಜನೆಗಳು ಎಲ್ಲವೂ ಬದಲಾಗುವುದು. ಇಂದು ನಿಮ್ಮ ಕೋಪವನ್ನು ಮನೆಯವರು ನೋಡುವರು. ನಿಮ್ಮ ವರ್ತನೆಯು ಬಹಳ ಬೇಸರ ತರಿಸಬಹುದು. ಲಲಿತಕಲೆಯ ಬಗ್ಗೆ ಕಲಿಕೆಯ ಆಸಕ್ತಿ ಬರುವುದು‌ ಸಂಗಾತಿಯ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ನಿಮ್ಮ ಭಾವನೆಗಳನ್ನು ಸರಿಯಾದ ಸ್ಥಳದಲ್ಲಿ ಸರಿಯಾದ ವ್ಯಕ್ತಿಯ ಬಳಿ ಹೊರಹಾಕಿ. ಲೆಕ್ಕ ಪರಿಶೋಧಕರು ಒತ್ತಡದಲ್ಲಿ ಇರುವರು. ಸಂಗಾತಿಯ ಬೇಡಿಕೆಯನ್ನು ನೀವು ಪೂರೈಸಬೇಕಾದೀತು.

ತುಲಾ ರಾಶಿ:

ದೇವಸಾನ್ನಿಧ್ಯದ ವೃಕ್ಷದಿಂದ ಬೀಳುವ ಸಾಧ್ಯತೆ ಇದೆ. ಮಕ್ಕಳಿಗಾಗಿ ನೀವು ಪರಿವರ್ತನೆಯಾಗುವಿರಿ. ಲೆಕ್ಕಾಚಾರ ವಿಚಾರಗಳು ನಿಮ್ಮ ತಲೆಗೆ ಹೋಗದು. ವಿದ್ಯಾರ್ಥಿಗಳು ಹೆಚ್ಚಿನ ಶ್ರಮದಿಂದ ಅಭ್ಯಾಸ ಮಾಡಬೇಕಾದೀತು. ನಿಮಗೆ ಬರುವ ಸಮಸ್ಯೆಗಳು ನಗಣ್ಯವಾಗಿದ್ದರೂ ಅದನ್ನು ದೊಡ್ಡ ಮಾಡುವಿರಿ. ಕೆಲವನ್ನು ನೀವು ಬಿಟ್ಟುಕೊಡುವುದೇ ಸೂಕ್ತ. ನಿಮ್ಮದಲ್ಲ ಎಂಬ ನಿರ್ಧಾರವನ್ನು ಮಾಡಿ ಸುಮ್ಮನಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವು ರೂಢಿಯಾಗಬಹುದು.

ವೃಶ್ಚಿಕ ರಾಶಿ:

ಇಂದು ನಿಮಗೆ ಅತ್ಯಾಕರ್ಷಕ ಅವಕಾಶಗಳು ಅನಿರೀಕ್ಷಿತವಾಗಿ ಸಿಗಲಿದೆ. ನಿಮ್ಮ ಸಂಗಾತಿಯಿಂದ ನಿಮಗೆ ಸಂತೋಷವು ಬೇಕೆನಿಸುವುದು. ಆರ್ಥಿಕತೆಯನ್ನು ಖರ್ಚಿನ ಮೂಲಕ ಬಂಧುಗಳಿಗೆ ತಿಳಿಸುವಿರಿ. ದುಡುಕಿನ ಕಾರ್ಯಗಳಿಂದ ಸಂಕಟವಾದೀತು. ಮಾತಿನ ನಿಯಂತ್ರಣ ತಪ್ಪಿ‌ ಇನ್ನೊಬ್ಬರಿಂದ ಅಪಮಾನವನ್ನು ಎದುರಿಸಿಬೇಕಾದೀತು. ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು. ಮತ್ತೆ ಮತ್ತೆ ಬರುವ ಅನಾರೋಗ್ಯಕ್ಕೆ ಮದ್ದಿನ ಅವಶ್ಯಕತೆ ಇದೆ.

ಧನು ರಾಶಿ:

ಉತ್ಸಾಹವು ಇಂದು ನಿರುತ್ಸಾಹದಲ್ಲಿ ಕೊನೆಯಾಗಲಿದೆ. ಇಂದು ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಮಾತ್ರವಲ್ಲದೆ, ವೈಯಕ್ತಿಕವಾಗಿಯೂ ಒತ್ತಡ ಹೆಚ್ಚಿರುವುದು. ನಿಮ್ಮ ಪೋಷಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ವೆಚ್ಚಗಳು ಹೆಚ್ಚಾಗಬಹುದು. ನಿಮ್ಮ ಮಧ್ಯಸ್ತಿಕೆಯಲ್ಲಿ ಮುಖ್ಯ ವಿಚಾರಗಳು ತೀರ್ಮಾನವಾಗುವುದು. ಇಂದು ನೀವು ಬಹಳ ದಿನಗಳಿಂದ ವಾಸವಾಗಿದ್ದ ಮನೆಯನ್ನು ಬದಲಾಯಿಸುವ ಯೋಚನೆ ಮಾಡುವಿರಿ. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು.

ಮಕರ ರಾಶಿ:

ನಿಮಗೆ ಬೇಕಾದ ಹಣವನ್ನು ಹೊಂದಿಸಲು ಸೂಕ್ತ ವ್ಯಕ್ತಿಗಳ ಅನ್ವೇಷಣೆ ಮಾಡವಿರಿ. ಕೆಲಸ ಮೇಲೆ ನಿಮ್ಮ ಗಮನ ಕೇಂದ್ರೀಕರಿಸುವುದನ್ನು ಖಚಿತಪಡಿಸಿಕೊಳ್ಳಿ. ಅಕಾರಣವಾಗಿ ನೀವು ಉತ್ಸಾಹವನ್ನು ಕಳೆದುಕೊಳ್ಳುವುದು ಸರಿಯಲ್ಲ. ಸಾಲ ಕೊಟ್ಟವರ ಬಗ್ಗೆ ಕೃತಜ್ಞತೆ ಇರಲಿ. ಉನ್ನತ ಅಧಿಕಾರಿಗಳ ಸಹಾಯವನ್ನು ನೀವು ಅನಿವಾರ್ಯವಾಗಿ ಕೇಳಬೇಕಾದೀತು. ಧಾರ್ಮಿಕ‌ವಾದ ನಂಬಿಕೆಯನ್ನು ನೀವು ಬಿಡುವುದಿಲ್ಲ. ಸಹೋದರರ ಬಗೆಗಿನ ನಿಮ್ಮ ನಿಲುವು ಸರಿ ಇರದು.

ಕುಂಭ ರಾಶಿ:

ನಿಮ್ಮ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಬರುವುದು ಸಹಜವೇ. ಆದರೆ ಅದನ್ನು ಎದುರಿಸಬೇಕೋ ಶಾಂತಗೊಳಿಸಬೇಕೋ ಎನ್ನುವುದು ನಿಮಗೆ ಸೇರಿದ್ದು. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುವುದು. ಬದುಕಿನ ಬಂಡಿಯು ನಿಧಾನವಾಗಿ ಸಾಗುವಂತೆ ಕಾಣುತ್ತದೆ. ಯಾರೂ ತಪ್ಪನ್ನು ಒಪ್ಪಿಕೊಳ್ಳದೇ ಇನ್ನೊಬ್ಬರ ಕಡೆ ಕೈ ತೋರಿಸುವಿರಿ. ಸಂತೋಷದ ಕೊನೆಯಲ್ಲಿ ದುಃಖವಿರಲಿದೆ. ಇಬ್ಬರ ನಡುವಿನ ಶೀತಲ ಸಮರವು ತಿಳಿಯಾಗಬಹುದು. ವ್ಯಾಪಾರದ ನಿರ್ಲಕ್ಷ್ಯದಿಂದ ಅಲ್ಪ ನಷ್ಟವಾಗುವುದು.

ಮೀನ ರಾಶಿ:

ಇಂದು ಸಣ್ಣ ರೋಗ ಉಲ್ಬಣಿಸುವ ಸಾಧ್ಯತೆ ಇದೆ. ನಿಮ್ಮ ಬಹಳ ದಿನಗಳ ಚಿಂತೆಗೆ ಇಂದು ಮುಕ್ತಿ ಸಿಗುವುದು. ನೀವು ಜನರ ಆಸೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದು, ವ್ಯವಹಾರದಲ್ಲಿ ಅದನ್ನು ಪ್ರಯೋಗಿಸುವಿರಿ. ನಿಮಗೆ ಬೇಕಾದವರು ಇಂದು ನಿಮ್ಮಿಂದ ದೂರವಾಗಬಹುದು.‌ ವಿದ್ಯಾಭ್ಯಾಸದಲ್ಲಿ ಪ್ರಯತ್ನ ಸಾಲದಾಗುವುದು. ಆರ್ಥಿಕ ವಿವಾದವು ದ್ವೇಷವಾಗಿ ಪರಿವರ್ತನೆ ಆಗಬಹುದು. ನಿದ್ರೆಯ ಕಷ್ಟವನ್ನು ನೀವು ಅನುಭವಿಸುವಿರಿ.‌

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುಷ್ಯಾ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ರೇವತೀ, ಯೋಗ : ಶೂಲಿ, ಕರಣ : ಗರಜ, ಸೂರ್ಯೋದಯ – 06 – 06 am, ಸೂರ್ಯಾಸ್ತ – 06 – 44 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:41 – 09:16, ಯಮಗಂಡ ಕಾಲ 10:51 – 12:26, ಗುಳಿಕ ಕಾಲ 14:01 – 15:35

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:45 am, Mon, 3 August 26

Source link

CWG 2026: 13 ಚಿನ್ನ, 39 ಪದಕ; ಭಾರತದ ಕಾಮನ್‌ವೆಲ್ತ್ ಪ್ರಯಾಣ ಅಂತ್ಯ

2026 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games 2026) ಭಾರತದ ಅಭಿಯಾನಕ್ಕೆ ಅದ್ಧೂರಿ ತೆರೆಬಿದ್ದಿದೆ. ಕ್ರೀಡಾಕೂಟದ 11ನೇ ಹಾಗೂ ಅಂತಿಮ ದಿನದಂದು ಭಾರತಕ್ಕೆ ಯಾವುದೇ ಪದಕ ಬರಲಿಲ್ಲ. ಒಟ್ಟಾರೆ ಈ ಕ್ರೀಡಾಕೂಟದಲ್ಲಿ ಭಾರತ 39 ಪದಕಗಳನ್ನು (13 ಚಿನ್ನ, 17 ಬೆಳ್ಳಿ, ಒಂಬತ್ತು ಕಂಚು) ಗೆಲ್ಲುವಲ್ಲಿ ಯಶಸ್ವಿಯಾಗಿ ಪದಕಗಳ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿತು. ಕ್ರೀಡಾಕೂಟದ ಅಂತಿಮ ದಿನದಂದು ಜೂಡೋ ಸ್ಪರ್ಧಿ ಇಶ್ರೂಪ್ ನಾರಂಗ್ ಮಹಿಳೆಯರ -78 ಕೆಜಿ ವಿಭಾಗದಲ್ಲಿ ಕಂಚಿನ ಪದಕದ ಪಂದ್ಯದಲ್ಲಿ ಸೋತರೆ, ಪ್ಯಾರಾ ಸೈಕ್ಲಿಸ್ಟ್ ಲಿಶಾ ದಾಸ್ ಮಹಿಳೆಯರ C4-C5 ಟೈಮ್ ಟ್ರಯಲ್ ಫೈನಲ್‌ನಲ್ಲಿ ಆರನೇ ಸ್ಥಾನ ಪಡೆದರು. ಇವರಿಬ್ಬರ ಸೋಲಿನೊಂದಿಗೆ ದೇಶದ ಅಭಿಯಾನವೂ ಅಂತ್ಯವಾಯಿತು.

ಭಾರತದ ಪದಕಗಳ ಪಟ್ಟಿ

ಸಂಖ್ಯೆ

ಕ್ರೀಡಾಪಟು

ಕ್ರೀಡೆ

ವಿಭಾಗ

ಪದಕ

1

ಝಂಡು ಕುಮಾರ

ಪುರುಷರ ಹೆವಿವೇಯ್ಟ್

ಪ್ಯಾರಾ ಪವರ್‌ಲಿಫ್ಟಿಂಗ್

ಕಂಚು

2

ರಿಷಿಕಾಂತ್ ಸಿಂಗ್

ವೇಟ್ ಲಿಫ್ಟಿಂಗ್

ಪುರುಷರ 60 ಕೆಜಿ

ಬೆಳ್ಳಿ

3

ಮೀರಾಬಾಯಿ ಚಾನು

ವೇಟ್ ಲಿಫ್ಟಿಂಗ್

ಮಹಿಳೆಯರ 48 ಕೆಜಿ

ಚಿನ್ನ

4

ಮುತ್ತುಪಾಂಡಿ ರಾಜ

ವೇಟ್ ಲಿಫ್ಟಿಂಗ್

ಪುರುಷರ 65 ಕೆಜಿ

ಬೆಳ್ಳಿ

5

ಜ್ಞಾನೇಶ್ವರಿ ಯಾದವ್

ವೇಟ್ ಲಿಫ್ಟಿಂಗ್

ಮಹಿಳೆಯರ 53 ಕೆಜಿ

ಬೆಳ್ಳಿ

6

ಬಿಂದ್ಯಾರಾಣಿ ದೇವಿ

ವೇಟ್ ಲಿಫ್ಟಿಂಗ್

ಮಹಿಳೆಯರ 58 ಕೆಜಿ

ಕಂಚು

7

ಶರ್ಮಿಳಾ ಧಂಕರ್

ಪ್ಯಾರಾ ಅಥ್ಲೆಟಿಕ್ಸ್

ಮಹಿಳೆಯರ ಶಾಟ್‌ಪುಟ್ F57

ಚಿನ್ನ

8

ಸರ್ವೇಶ್ ಕುಶಾರೆ

ಅಥ್ಲೆಟಿಕ್ಸ್

ಪುರುಷರ ಹೈ ಜಂಪ್

ಬೆಳ್ಳಿ

9

ಶಿಲ್ಪಾ ಶೈಲಾ

ಪ್ಯಾರಾ ಅಥ್ಲೆಟಿಕ್ಸ್

ಮಹಿಳೆಯರ ಶಾಟ್‌ಪುಟ್ F57

ಕಂಚು

10

ವಲ್ಲೂರಿ ಅಜಯ್ ಬಾಬು

ವೇಟ್ ಲಿಫ್ಟಿಂಗ್

ಪುರುಷರ 79 ಕೆಜಿ

ಬೆಳ್ಳಿ

11

ಹರ್ಜಿಂದರ್ ಕೌರ್

ವೇಟ್ ಲಿಫ್ಟಿಂಗ್

ಮಹಿಳೆಯರ 69 ಕೆಜಿ

ಬೆಳ್ಳಿ

12

ಗುಲ್ವೀರ್ ಸಿಂಗ್

ಅಥ್ಲೆಟಿಕ್ಸ್

ಪುರುಷರ 10000 ಮೀ.

ಬೆಳ್ಳಿ

13

ಮುರಳಿ ಶ್ರೀಶಂಕರ್

ಅಥ್ಲೆಟಿಕ್ಸ್

ಪುರುಷರ ಲಾಂಗ್ ಜಂಪ್

ಬೆಳ್ಳಿ

14

ದಿಲೀಪ್ ಗವಿತ್

ಪ್ಯಾರಾ ಅಥ್ಲೆಟಿಕ್ಸ್

ಪುರುಷರ 100 ಮೀ ಟಿ 47

ಚಿನ್ನ

15

ಮೊಹಮ್ಮದ್ ಬಾಸಿಲ್

ಪ್ಯಾರಾ ಅಥ್ಲೆಟಿಕ್ಸ್

ಪುರುಷರ 100 ಮೀ ಟಿ 47

ಬೆಳ್ಳಿ

16

ಲವ್‌ಪ್ರೀತ್ ಸಿಂಗ್

ವೇಟ್ ಲಿಫ್ಟಿಂಗ್

ಪುರುಷರ 110+ ಕೆಜಿ

ಬೆಳ್ಳಿ

17

ಸೀಮಾ ಕಲಿರಮಣ

ಅಥ್ಲೆಟಿಕ್ಸ್

ಮಹಿಳೆಯರ ಡಿಸ್ಕಸ್ ಥ್ರೋ

ಕಂಚು

18

ಅಸ್ಮಿತಾ ಡೇ

ಜೂಡೋ

ಮಹಿಳೆಯರ 48 ಕೆಜಿ

ಚಿನ್ನ

19

ಹರ್ಷ್ ಸಿಂಗ್

ಜೂಡೋ

ಪುರುಷರ 60 ಕೆಜಿ

ಚಿನ್ನ

20

ಯಾಮಿನಿ ಮೌರ್ಯ

ಜೂಡೋ

ಮಹಿಳೆಯರ 57 ಕೆಜಿ

ಬೆಳ್ಳಿ

21

ತೇಜಸ್ವಿನ್ ಶಂಕರ್

ಅಥ್ಲೆಟಿಕ್ಸ್

ಪುರುಷರ ಡೆಕಾಥ್ಲಾನ್

ಕಂಚು

22

ಯಶ್ವೀರ್ ಸಿಂಗ್

ಅಥ್ಲೆಟಿಕ್ಸ್

ಪುರುಷರ ಜಾವೆಲಿನ್ ಥ್ರೋ

ಕಂಚು

23

ನೀರಜ್ ಚೋಪ್ರಾ

ಅಥ್ಲೆಟಿಕ್ಸ್

ಪುರುಷರ ಜಾವೆಲಿನ್ ಥ್ರೋ

ಬೆಳ್ಳಿ

24

ಪ್ರೀತಿ ಪವಾರ್

ಬಾಕ್ಸಿಂಗ್

ಮಹಿಳೆಯರ 54 ಕೆಜಿ

ಚಿನ್ನ

25

ಪ್ರವೀಣ್ ಚಿತ್ರಾವೆಲ್

ಅಥ್ಲೆಟಿಕ್ಸ್

ಪುರುಷರ ಟ್ರಿಪಲ್ ಜಂಪ್

ಬೆಳ್ಳಿ

26

ಸೆಲ್ವ ಪ್ರಭು

ಅಥ್ಲೆಟಿಕ್ಸ್

ಪುರುಷರ ಟ್ರಿಪಲ್ ಜಂಪ್

ಕಂಚು

27

ಜಾಸ್ಮಿನ್ ಲಂಬೋರಿಯಾ

ಬಾಕ್ಸಿಂಗ್

ಮಹಿಳೆಯರ 57 ಕೆಜಿ

ಚಿನ್ನ

28

ಜಾದುಮಣಿ ಸಿಂಗ್

ಬಾಕ್ಸಿಂಗ್

ಪುರುಷರ 55 ಕೆಜಿ

ಬೆಳ್ಳಿ

29

ಶುಭಂ ಜುಯಾಲ್

ಪ್ಯಾರಾ ಅಥ್ಲೆಟಿಕ್ಸ್

ಪುರುಷರ ಶಾಟ್‌ಪುಟ್ F57

ಚಿನ್ನ

30

ಸೋಮನ್ ರಾಣಾ

ಪ್ಯಾರಾ ಅಥ್ಲೆಟಿಕ್ಸ್

ಪುರುಷರ ಶಾಟ್‌ಪುಟ್ F57

ಬೆಳ್ಳಿ

31

ಉನ್ನತಿ ಶರ್ಮಾ

ಜೂಡೋ

ಮಹಿಳೆಯರ 63 ಕೆಜಿ

ಕಂಚು

32

ಸಾಕ್ಷಿ ಚೌಧರಿ

ಬಾಕ್ಸಿಂಗ್

ಮಹಿಳೆಯರ 51 ಕೆಜಿ

ಚಿನ್ನ

33

ಪ್ರಿಯಾ ಘಂಘಾಸ್

ಬಾಕ್ಸಿಂಗ್

ಮಹಿಳೆಯರ 60 ಕೆಜಿ

ಚಿನ್ನ

34

ಅರುಂಧತಿ ಚೌಧರಿ

ಬಾಕ್ಸಿಂಗ್

ಮಹಿಳೆಯರ 70 ಕೆಜಿ

ಚಿನ್ನ

35

ಲವ್ಲಿನಾ ಬೊರ್ಗೊಹೈನ್

ಬಾಕ್ಸಿಂಗ್

ಮಹಿಳೆಯರ 75 ಕೆಜಿ

ಬೆಳ್ಳಿ

36

ಸಚಿನ್ ಸಿವಾಚ್

ಬಾಕ್ಸಿಂಗ್

ಪುರುಷರ 60 ಕೆಜಿ

ಚಿನ್ನ

37

ಅಂಕುಶ್ ಪಂಗಲ್

ಬಾಕ್ಸಿಂಗ್

ಪುರುಷರ 80 ಕೆಜಿ

ಚಿನ್ನ

38

ನರೇಂದ್ರ ಬೆರ್ವಾಲ್

ಬಾಕ್ಸಿಂಗ್

ಪುರುಷರ 90 ಕೆಜಿ

ಬೆಳ್ಳಿ

39

ಗುಲ್ವೀರ್ ಸಿಂಗ್

ಅಥ್ಲೆಟಿಕ್ಸ್

ಪುರುಷರ 5000 ಮೀ.

ಕಂಚು

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಹಳೆಯ ದಿನ ನೆನಪಿಸಿಕೊಂಡ ಡಿಕೆಶಿ – Kannada News | DK Shivakumar Recalls Apologising to Sri on Behalf of Congress After Party Decision

ಬೆಂಗಳೂರು, ಆಗಸ್ಟ್​​ 02: ‘ಈ ಹಿಂದೆ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ನಿರ್ಧಾರದಿಂದ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾಗ ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ತೆರಳಿ ಪಕ್ಷದ ಪರವಾಗಿ ಶ್ರೀಗಳ ಪಾದಕ್ಕೆ ಬಿದ್ದು ಕ್ಷಮೆ ಯಾಚಿಸಿದ್ದಾಗಿ’ ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದಾರೆ. ಬೆಂಗಳೂರಲ್ಲಿ ರಂಭಾಪುರಿ ಶ್ರೀಗಳಿಂದ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಆಗ ಅನೇಕ ಟೀಕೆಗಳು ವ್ಯಕ್ತವಾಗಿದ್ದರೂ, ಆ ಟೀಕೆಗಳೆಲ್ಲವೂ ಕಾಲಾನಂತರದಲ್ಲಿ ಮರೆಯಾಗಿ, ನಮ್ಮ ಕೆಲಸಗಳು ಮಾತ್ರ ಉಳಿದುಕೊಂಡಿವೆ. ಟೀಕೆಗಳು ಸಾಯುತ್ತವೆ, ನಮ್ಮ ಸಾಧನೆಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ತಾವು ಅಂದು ಕ್ಷಮೆ ಕೇಳಿದ್ದು ಸತ್ಯ ಎಂಬುದನ್ನು ಇಂದು ವಿರೋಧಿಗಳು ಕೂಡ ಒಪ್ಪಿಕೊಂಡಿದ್ದಾರೆ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶವಿಲ್ಲದೆ ಬದುಕಿದರೆ ಬದುಕಿಗೇ ಅವಮಾನ ಎಂದು ಮಾರ್ಮಿಕವಾಗಿ ನುಡಿದ ಡಿ.ಕೆ. ಶಿವಕುಮಾರ್, ವಿಪಕ್ಷಗಳು ದಿನನಿತ್ಯ ಮಾಡುವ ಟೀಕೆಗಳಿಗೆ ತಾವು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

47ನೇ ವಯಸ್ಸಿನಲ್ಲಿ ಹೀರೋ ಆದ ಸಂಗೀತ ನಿರ್ದೇಶಕ ಡಿಎಸ್​​ಪಿ – Kannada News | Music director Devi Sri Prasad acting as hero in Yellamma movie

ತೆಲುಗು ಚಿತ್ರರಂಗದಲ್ಲಿ (Tollywood) ಪ್ರೀತಿಯಿಂದ ‘ಡಿಎಸ್​​ಪಿ’ ಎಂದೇ ಕರೆಸಿಕೊಳ್ಳುವ ದೇವಿಶ್ರೀ ಪ್ರಸಾದ್ ಬಲು ಜನಪ್ರಿಯ ಸಂಗೀತ ನಿರ್ದೇಶ. 27 ವರ್ಷಗಳಿಂದಲೂ ತೆಲುಗು ಮಾತ್ರವೇ ಅಲ್ಲದೆ, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಿಗೆ ಸಂಗೀತ ನೀಡುತ್ತಲೇ ಬರುತ್ತಿದ್ದಾರೆ. 2023ರ ‘ಪುಷ್ಪ’ ಸಿನಿಮಾದ ವರೆಗೆ ಹಲವಾರು ಬ್ಲಾಕ್ ಬಸ್ಟರ್ ಆಲ್ಬಂಗಳನ್ನು ದೇವಿಶ್ರೀ ಪ್ರಸಾದ್ ನೀಡಿದ್ದಾರೆ. ಚಿತ್ರರಂಗಕ್ಕೆ ಬಂದು 27 ವರ್ಷಗಳ ಬಳಿಕ ಈಗ ಇದ್ದಕ್ಕಿದ್ದಂತೆ ಸಿನಿಮಾ ನಾಯಕ ಆಗಿದ್ದಾರೆ ದೇವಿಶ್ರೀ ಪ್ರಸಾದ್.

ದೇವಿ ಶ್ರೀ ಪ್ರಸಾದ್ ಅವರು ‘ಯಲ್ಲಮ್ಮ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇಂದು ಡಿಎಸ್ಪಿ ಅವರ ಹುಟ್ಟುಹಬ್ಬದ ವಿಶೇಷವಾಗಿ ‘ಯಲ್ಲಮ್ಮ’ ಸಿನಿಮಾದ ಫಸ್ಟ್‌ ಲುಕ್‌ ಹಾಗೂ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ‘ಯಲ್ಲಮ್ಮ’ ತಂಡ ಡಿಎಸ್​​ಪಿ ಅವರ ಲುಕ್‌ ಅನ್ನು ಸಖತ್‌ ಸಿಂಪಲ್‌ ಆಗಿ ಪ್ರಸೆಂಟ್‌ ಮಾಡಿದೆ. ಸಾಮಾನ್ಯ ಉಡುಪಿನಲ್ಲಿ, ಕೈಯಲ್ಲಿ ಕಿರೀಟ ಹಿಡಿದು, ಸಖತ್‌ ಸಿಂಪಲ್‌ ಆಗಿ ಕಾಣಿಸಿಕೊಂಡಿದ್ದಾರೆ ಡಿಎಸ್​​ಪಿ. ಪರ್ಶಿ ಅನ್ನೋ ಪಾತ್ರದಲ್ಲಿ ದೇವಿ ಶ್ರೀ ಪ್ರಸಾದ್‌ ಅಭಿನಯಿಸುತ್ತಿದ್ದಾರೆ.

ಈ ಹಿಂದೆ ‘ಬಲಗಂ’ ಹೆಸರಿನ ಸಿನಿಮಾ ನಿರ್ದೇಶಿಸಿ, ತೆಲುಗು ಪ್ರೇಕ್ಷಕರನ್ನು ಸೆಳೆದಿದ್ದ ಹಾಸ್ಯ ಕಲಾವಿದ ವೇಣು ಯೆಲ್ದಾಂಡಿ ಈಗ ‘ಯಲ್ಲಮ್ಮ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಅವರು ನಿರ್ದೇಶಿಸಿದ್ದ ‘ಬಲಗಂ’ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಅತ್ಯಂತ ಕಡಿಮೆ ಬಜೆಟ್​​ನ ಸಿನಿಮಾ ಆಗಿದ್ದರೂ ಸಹ ಸಿನಿಮಾವನ್ನು ಜನ ಕೊಂಡಾಡಿದ್ದರು. ಖುದ್ದು ಮೆಗಾಸ್ಟಾರ್ ಚಿರಂಜೀವಿ, ಸಿನಿಮಾ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದರು. ಆ ಸಿನಿಮಾಕ್ಕೆ ದಿಲ್ ರಾಜು ಬಂಡವಾಳ ಹೂಡಿದ್ದರು. ಈಗ ಮತ್ತೆ ‘ಯಲ್ಲಮ್ಮ’ ಸಿನಿಮಾಕ್ಕೂ ಅವರೇ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:ಭಾರತದಲ್ಲೇ ‘ಧುರಂಧರ್’, ‘ಪಠಾಣ್’ ಸಿನಿಮಾಗಳ ಹಿಂದಿಕ್ಕಿದ ಸ್ಪೈಡರ್ ಮ್ಯಾನ್

ಯಲ್ಲಮ್ಮ ಸಿನಿಮಾದಲ್ಲಿ ಡಿಎಸ್ಪಿ ಕೇವಲ ನಾಯಕನಾಗಿ ನಟಿಸಿರುವುದಷ್ಟೇ ಅಲ್ಲ, ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಅವರ ಸಂಗೀತ ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ನಿರ್ದೇಶಕ ವೇಣು ಯೆಲ್ದಂಡಿ, ‘ಬಲಗಂ’ ಚಿತ್ರದ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ ನಂತರ, ‘ಯಲ್ಲಮ್ಮ’ ಸಿನಿಮಾ ಕೈಗೆತ್ತಿಕೊಂಡಿದ್ದು, ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿವೆ. ಮೊದಲಿಗೆ ಈ ಸಿನಿಮಾದ ನಾಯಕನಾಗಿ ನಾಯಕ ನಟ ನಿತಿನ್ ಆಯ್ಕೆ ಆಗಿದ್ದರು. ನಿತಿನ್ ಅವರೇ ‘ಯಲ್ಲಮ್ಮ’ ಸಿನಿಮಾದ ನಾಯಕ ಎಂದು ಘೋಷಣೆ ಸಹ ಆಗಿತ್ತು. ಆದರೆ ಅಚಾನಕ್ಕಾಗಿ ಅವರನ್ನು ಬದಲಾಯಿಸಿ, ನಟನೆಯನ್ನೇ ಮಾಡದ ಡಿಎಸ್​​ಪಿ ಅವರನ್ನು ನಾಯಕನನ್ನಾಗಿ ಹಾಕಿಕೊಳ್ಳಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಯಾವುದೇ ವಿಷಾದವಿಲ್ಲ’; ಟೀಂ ಇಂಡಿಯಾದಲ್ಲಿ ಕಂಬ್ಯಾಕ್ ಬಗ್ಗೆ ಮೌನ ಮುರಿದ ಭುವನೇಶ್ವರ್

Source link

SIR​ ಎಫೆಕ್ಟ್: ಬೆಂಗಳೂರಿನಲ್ಲಿ ಮತದಾರರ ಸಂಖ್ಯೆ ಕಡಿತ; ಪಾಲಿಕೆಗಳ ಸಂಖ್ಯೆ ಇಳಿಕೆಗೆ ಹೆಚ್ಚಿದ ಒತ್ತಡ – Kannada News | SIR Impact: Bengaluru Voter Count Declines, Pressure Mounts to Reduce Number of Municipal Corporations

ಬೆಂಗಳೂರು, ಆಗಸ್ಟ್​​ 02: ವಿಶಾಲ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಬಿಬಿಎಂಪಿ ಹೋಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ಬಂದಾಯ್ತು. ಜಿಬಿಎ ಅಡಿ 5 ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿದ್ದಾವೆ. ಆದರೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision) ಪರಿಣಾಮ ಪಾಲಿಕೆಗಳ ಸಂಖ್ಯೆ ಕಡಿಮೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

5 ನಗರ ಪಾಲಿಕೆಗಳು ಏಕೆ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೋಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬಂದು ವರ್ಷವೇ ಆಗುತ್ತಿದೆ. ಜಿಬಿಎ ಅಡಿಯಲ್ಲಿ 5 ನಗರ ಪಾಲಿಕೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ​ ಪರಿಣಾಮ ಬೆಂಗಳೂರಿನಲ್ಲಿರುವ 1.03 ಕೋಟಿ ಮತದಾರರ ಪೈಕಿ ಅಂದಾಜು 50 ಲಕ್ಷ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಹೀಗಾಗಿ ಉಳಿದ ಜನಸಂಖ್ಯೆಗೆ 5 ನಗರ ಪಾಲಿಕೆಗಳು ಯಾಕೆ ಎಂಬ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಟ್ರಾಫಿಕ್​​ ಸಮಸ್ಯೆ ನಿವಾರಣೆಗೆ ಕ್ರಮ: ಸಿಗ್ನಲ್​​ ಸಮೀಪವಿರುವ ಬಸ್​​ ನಿಲ್ದಾಣಗಳ ತೆರವಿಗೆ ಸಚಿವ ಕೃಷ್ಣ ಭೈರೇಗೌಡ ಸೂಚನೆ

ಅಸ್ತಿತ್ವದಲ್ಲಿರುವ 5 ನಗರ ಪಾಲಿಕೆಗಳ ಪೈಕಿ ಕೆಲವು ಪಾಲಿಕೆಗಳ ನಿರ್ವಹಣೆಯೇ ಸವಾಲಾಗಿದೆ. ಅಧಿಕಾರಿ, ನೌಕರರ ಸಂಬಳ, ಆಡಳಿತಾತ್ಮಕ ವೆಚ್ಚ ಸರಿದೂಗಿಸುವುದೂ ಪಾಲಿಕೆಗಳಿಗೆ ಕಷ್ಟವಾಗುತ್ತಿದೆ. ಹೀಗಾಗಿ 5 ನಗರ ಪಾಲಿಕೆಗಳ ಬದಲು ಎರಡು ಪಾಲಿಕೆಗಳನ್ನಷ್ಟೇ ಮಾಡಿದರೆ ಉತ್ತಮ ಎಂಬ ಅಭಿಪ್ರಾಯ ಸ್ವಪಕ್ಷೀಯ ಹಾಗೂ ವಿಪಕ್ಷಗಳಿಂದ ವ್ಯಕ್ತವಾಗಿದೆ.

ಇದನ್ನೂ ಓದಿ: ಜಿಬಿಎ ಅಸ್ತಿತ್ವಕ್ಕೆ ಬಂದು ವರ್ಷ ಕಳೆದರೂ ನಗರದಲ್ಲಿ ಇನ್ನೂ ರಾರಾಜಿಸುತ್ತಿವೆ ಹಳೆಯ ಬಿಬಿಎಂಪಿ ನಾಮಫಲಕಳು!

ಒಟ್ಟಾರೆ 5 ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಪರ ವಿರೋಧಗಳು ಜೋರಾಗಿತ್ತು. ಇದೀಗ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪರಿಣಾಮ ಪಾಲಿಕೆಗಳ ವಿಲೀನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಆರ್ಥಿಕ ವೆಚ್ಚ ಸರಿದೂಗಿಸಲು ಸರ್ಕಾರ ಏನು ಮಾಡುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಎಲ್ಲಾ ಹೋಟೆಲ್​ಗಳಲ್ಲಿ ಕುಡಿಯಲು ಬಿಸಿ ನೀರು ಕಡ್ಡಾಯ: ಏನಿದರ ಹಿಂದಿನ ಉದ್ದೇಶ? – Kannada News | Hot Water mandatory to customers for drinking In all Bengaluru Hotels Says Minister UT Khader

ಬೆಂಗಳೂರು, (ಆಗಸ್ಟ್ 02): ಬೆಂಗಳೂರಿನಲ್ಲಿ ಕುಡಿಯುವ ನೀರು ಹದಗೆಡುತ್ತಿರುವ ಹಿನ್ನೆಲೆ ನಾನಾ ರೀತಿ ಆರೋಗ್ಯ ಸಮಸ್ಯೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಹೀಗಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಜನರ ಆರೋಗ್ಯ ಕಾಪಾಡಲು ಎಲ್ಲಾ ಹೋಟೆಲ್​ಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿ ನೀರನ್ನ (Hot Water) ಕೊಡೋದು ಕಡ್ಡಾಯ ಎಂಬ ನಿಯಮ ತರಲು ಆರೋಗ್ಯ ಇಲಾಖೆ ಮುಂದಾಗಿದೆ. ಸದ್ಯ ಎಲ್ಲಾ ಪ್ರೀಮಿಯಮ್ ಹಾಗೂ ಸ್ಟ್ಯಾಂಡರ್ಡ್ ಹೋಟೆಲ್​ಗಳಲ್ಲಿ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಇದೆ. ಇದನ್ನ ಎಲ್ಲಾ ರೀತಿಯ ಅಂದರೆ, ಸಣ್ಣ-ಪುಟ್ಟ ಹೋಟೆಲ್​ಗಳಲ್ಲೂ ಕಡ್ಡಾಯ ಮಾಡಬೇಕಿದೆ ಎನ್ನುವುದು ಆರೋಗ್ಯ ಸಚಿವ ಯುಟಿ ಖಾದರ್​​ ಅವರ ಮಾತು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಹೋಟೆಲ್ ಮಾಲೀಕರು ಒಳ್ಳೆಯ ನಿರ್ಧಾರ ಎಂದಿದ್ದಾರೆ. ಇತ್ತ ಗ್ರಾಹಕರು ಕೂಡ ಈ ನಿರ್ಧಾರವನ್ನ ಸ್ವಾಗತ ಮಾಡಿದ್ದಾರೆ.

ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಶಾಲೆಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟವನ್ನು ನಿಷೇಧಿಸಿ ಆರೋಗ್ಯ ಇಲಾಖೆ ಆದೇಶಿತ್ತು. ಇದರ ಬೆನ್ನಲ್ಲೇ ಇದೀಗ ಸಚಿವ ಯುಟಿ ಖಾದರ್ ಮತ್ತೊಂದು ಮಹತ್ವದ ತಿರ್ಮಾನ ಕೈಗೊಂಡಿದ್ದಾರೆ. ಕಲುಷಿತ ನೀರಿನ ಸೇವನೆಯಿಂದಾಗಿ ನಾನಾ ರೀತಿಯ ಖಾಯಿಲೆಗಳಿಗೆ ಜನಸಾಮಾನ್ಯು ತುತ್ತಾಗುತ್ತಿದ್ದಾರೆ. ಹೀಗಾಗಿ ಇದಕ್ಕೆಲ್ಲಾ ಕಡಿವಾಣ ಹಾಕಲು ನಿರ್ಧರಿಸಿರುವ ಆರೋಗ್ಯ ಎಲ್ಲಾ ರೀತಿಯ ಹೋಟೆಲ್​ಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿ ನೀರನ್ನ ಕೊಡುವುದು ಕಡ್ಡಾಯ ಮಾಡುತ್ತಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳ ಸುತ್ತಮುತ್ತ ಜಂಕ್ ಫುಡ್ ನಿಷೇಧ: ಉದ್ದೇಶವೇನು?

ಈಗಾಗಲೇ ಕೆಲ ಹೋಟೆಗಳಲ್ಲಿ ಗ್ರಾಹಕರಿಗಾಗಿ ಬಿಸಿ ನೀರು ನೀಡಲಾಗುತ್ತಿದೆ. ಆದ್ರೆ, ಇದನ್ನು ಎಲ್ಲಾ ಹೋಟೆಗಳಲ್ಲಿ ಕಡ್ಡಾಯಗೊಳಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದ್ದು, ಜನಸಾಮನ್ಯರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ನಿರ್ಧಾರ. ಆದ್ರೆ, ಇದನ್ನು ಹೋಟೆಲ್​​​​​ನವರು ಎಷ್ಟರ ಮಟ್ಟಿಗೆ ಪಾಲನೆ ಮಾಡುತ್ತಾರೆ ಎನ್ನುವುದು ಮುಂದಿರುವ ಪ್ರಶ್ನೆ.

ಒಟ್ಟಾರೆ ಗ್ಯಾಸ್ ಕೊರತೆಯ ಹಿನ್ನೆಲೆ ಒಂದಷ್ಟು ಹೋಟೆಲ್​ಗಳಲ್ಲಿ ಇನ್ಮುಂದೆ ಕುಡಿಯಲು ಬಿಸಿ ನೀರು ಇಲ್ಲ ಎನ್ನುವಂತಿಲ್ಲ. ಅಗತ್ಯ ಇರುವ ಎಲ್ಲಾ ಗ್ರಾಹಕರಿಗೂ ಕುಡಿಯುವ ಬಿಸಿ ನೀರು ಸಿಗಲಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಿಯಾರಾ ಅಡ್ವಾಣಿ ಬಗ್ಗೆ ‘ಟಾಕ್ಸಿಕ್’ ಟೀಕೆ, ಬೆಂಬಲಕ್ಕೆ ಬಂದ ‘ಎಲಿಜಬೆತ್’ – Kannada News | Kiara Advani brutally trolled for bold appearance in Toxic movie

ನಟಿಯರು ಕ್ಷುಲ್ಲಕ ಕಾರಣಗಳಿಗೂ ಹೀನಾಯವಾಗಿ ಟ್ರೋಲಿಂಗ್​​ಗೆ ಗುರಿ ಆಗುತ್ತಾರೆ. ಸಿನಿಮಾ ನಟಿಯರಷ್ಟು ಆನ್​​ಲೈನ್ ದೌರ್ಜನ್ಯ, ನಿಂದನೆಗೆ ಒಳಗಾಗುವವರು ಮತ್ಯಾರೂ ಇಲ್ಲ. ಭಾರತದಲ್ಲಂತೂ ಈ ಕೆಟ್ಟ ಸಂಸ್ಕೃತಿ ಬಹಳ ಇದೆ. ನಟಿಯರು ಪದೇ ಪದೇ ಸೈಬರ್ ಪೊಲೀಸರಿಗೆ ದೂರು ನೀಡುತ್ತಲೇ ಇರುತ್ತಾರೆ ಆದರೂ ಇದು ಕಡಿಮೆ ಆಗಿಲ್ಲ. ಇದೀಗ ಬಾಲಿವುಡ್​​ನ ಸ್ಟಾರ್ ನಟಿ ಕಿಯಾರಾ ವಿರುದ್ಧ ಕೆಟ್ಟ ಟ್ರೋಲಿಂಗ್ ಆರಂಭವಾಗಿದೆ. ಅದೂ ‘ಟಾಕ್ಸಿಕ್’ (Toxic) ಸಿನಿಮಾನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಕ್ಕೆ.

ಇತ್ತೀಚೆಗಷ್ಟೆ ನಟಿ ಕಿಯಾರಾ ಅಡ್ವಾಣಿ ಅವರ ಹುಟ್ಟುಹಬ್ಬ ಇತ್ತು. ಹುಟ್ಟುಹಬ್ಬದಂದು, ಕಿಯಾರಾ ಅವರ ಪತಿ ನಟ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅವರ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಇದಕ್ಕೆ ನೆಟ್ಟಿಗರು ಬಹಳ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಅದರಲ್ಲೂ ಯಶ್ ಜೊತೆಗೆ ‘ಟಾಕ್ಸಿಕ್’ ಸಿನಿಮಾನಲ್ಲಿ ಹಾಟ್ ಆಗಿ, ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದನ್ನೇ ಇರಿಸಿಕೊಂಡು ಹಲವಾರು ಮಂದಿ ನೀಚವಾಗಿ ಕಮೆಂಟುಗಳನ್ನು ಮಾಡಿದ್ದರು. ಕೆಲವರು ಹುಸಿ ಸಂಸ್ಕೃತಿ, ನೈತಿಕತೆಯ ಪಾಠ ಮಾಡಿದ್ದರು.

ಕಿಯಾರಾ ಅಡ್ವಾಣಿ ಆಗಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆದರೆ ಈಗ ‘ಟಾಕ್ಸಿಕ್’ ಸಿನಿಮಾನಲ್ಲಿ ಕಿಯಾರಾ ಜೊತೆಗೆ ನಟಿಸಿರುವ ಹುಮಾ ಖುರೇಷಿ ಕಿಯಾರಾ ಪರವಾಗಿ ದನಿ ಎತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನಟಿ ಹುಮಾ ಖುರೇಷಿ, ಸಿನಿಮಾ ಬಿಡುಗಡೆಯಾದ ಬಳಿಕ ಈ ಚಿತ್ರದೊಂದಿಗೆ ಗುರುತಿಸಿಕೊಂಡಿರುವ ಮಹಿಳೆಯರೇ ಕೊನೆಗೆ ನಗಲಿದ್ದಾರೆ ಎಂದು ಹೇಳುವ ಮೂಲಕ ಈ ಸಿನಿಮಾ ಟೀಕಾಕಾರರ ಬಾಯಿ ಮುಚ್ಚಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್ ರಿಲೀಸ್; ಅಧಿಕೃತ ಘೋಷಣೆ ಮಾಡಿದ ಯಶ್

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹುಮಾ ಭಾಗಿ ಆಗಿದ್ದರು, ಈ ವೇಳೆ ‘ಕಿಯಾರಾ ಮತ್ತು ಯಶ್ ಇಬ್ಬರೂ ಮದುವೆಯಾಗಿದ್ದರೂ ಸಹ ‘ತಬಾಹಿ’ ಹಾಡಿನಲ್ಲಿ ಕಿಯಾರಾ ಮಾತ್ರ ಹೆಚ್ಚು ಟೀಕೆಗಳನ್ನು ಎದುರಿಸಿದ್ದೇಕೆ ಎಂದು ಸಂದರ್ಶಕ ಹುಮಾ ಅವರನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಹುಮಾ, ‘ಇದು ಕಲ್ಮಶ ಹಾಗೂ ಅಸಹ್ಯಕರ ಯೋಚನೆ. ಆದರೆ ಈ ಸಿನಿಮಾದಲ್ಲಿರುವ ಮಹಿಳೆಯರು, ನಟಿಯರು ಮತ್ತು ನಿರ್ದೇಶಕರು ಅಂತಿಮವಾಗಿ ಯಶಸ್ಸಿನ ನಗು ನಗಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಯಾವುದೋ ಮಾತಿನ ಮೂಲಕ ಜನರ ಕೆಟ್ಟ ಮನಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ, ಯಾವುದನ್ನೂ ಸಮರ್ಥಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಆದರೆ ನಾವು ಮಾಡಿರುವ ಸಿನಿಮಾ ಮಾತನಾಡಲಿದೆ’ ಎಂದಿದ್ದಾರೆ.

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಮೊದಲ ಹಾಡು ‘ತಬಾಹಿ’ ಬಿಡುಗಡೆ ಆದಾಗಿನಿಂದ, ಕಿಯಾರಾ ಅಡ್ವಾಣಿ ಅವರು ತೀವ್ರ ಟೀಕೆಗಳು ಮತ್ತು ಕಟು ಕಾಮೆಂಟ್‌ಗಳನ್ನು ಎದುರಿಸುತ್ತಿದ್ದಾರೆ. ಆದರೆ ಅದೇ ಹಾಡಿನಲ್ಲಿ ಅಷ್ಟೇ ಹಾಟ್ ಆಗಿ ನಟಿಸಿರುವ ಯಶ್ ಅವರ ಬಗ್ಗೆ ಯಾರೂ ಮಾತನಾಡಲಿಲ್ಲ. ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ನಯನತಾರಾ ಅವರುಗಳು ನಟಿಸಿದ್ದಾರೆ. ಸಿನಿಮಾ ಇದೇ ತಿಂಗಳು 26ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version